ಅಜ್ಞಾತನೊಬ್ಬನ ಆತ್ಮಚರಿತ್ರೆ
"ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ." ಅಧಿಕಾರ ಎನ್ನುವುದು ಸರ್ಪದ ನೆರಳಲ್ಲಿ ಇದ್ದಂತೆ. ಯಾವ ಕ್ಷಣದಲ್ಲಿ ಎಲ್ಲಿಂದ ಹೇಗೆ ಅಪಾಯ ಬಂದೆರೆಗಬಹುದು ಎಂದು ಹೇಳುವುದು ಕಷ್ಟವೇ. ಅದರಲ್ಲೂ ಯಾರಿಂದ ಎನ್ನುವುದಂತೂ ಬಹಳ ಕಷ್ಟ. ಅಧಿಕಾರ ಎನ್ನುವುದು ಹಾವು ಏಣಿ ಆಟವಿದ್ದಂತೆ. ಯಾರು ಇಳಿಯುತ್ತಾರೋ, ಮತ್ಯಾರು ಮೇಲಕ್ಕೆ ಹತ್ತುತ್ತಾರೋ ಹೇಗೆ ಹೇಳುವುದು. ಅಸಲಿಗೆ ಹೈದರಾಲಿ ಅಧಿಕಾರಕ್ಕೆ ಬಂದದ್ದು ನಂಬಿಕೆ (?) ಎನ್ನುವುದು ಉಪಯೋಗಿಸಿ ಕೊಂಡೆ ಅಲ್ಲವೇ. ಈಗ ಬ್ರಿಟಿಷರು ಅಂಥಹ ನಂಬಿಕಸ್ತರನ್ನು ಉಪಯೋಗಿಸಿಕೊಂಡೆ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಎದುರಿಗಿದ್ದ ಸಿಪಾಯಿ ತನ್ನನ್ನು ನಂಬಿ ಸುಲ್ತಾನ್ ತನ್ನ ಮನಸ್ಸಿನ ಮಾತು ಹೇಳುತ್ತಿದ್ದಾನೆ ಎಂದು ನಂಬಿದ್ದಾನೆ. ಯಾರು ಯಾರನ್ನು ನಂಬಿದ್ದಾರೆ, ಯಾರು ಯಾರ ನಂಬಿಕೆಯನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಅನ್ನುವುದೇ ಗೊಂದಲ. ನಂಬಬಾರದ.... ನಂಬಿದಂತೆ ನಟಿಸುತ್ತಲೇ ಅಪನಂಬಿಕೆಯ ಚಾದರ ಹೊದ್ದಿರಬೇಕಾ.. ತಪ್ಪು ನಂಬುವವನದ್ದಾ ಅಥವಾ ಆ ನಮ್ಬಿಕೆಯೆಂಬ ಏಣಿಯನ್ನು ಬಳಸಿಕೊಂಡು ಮೇಲೆರಿದವನದ್ದಾ... ಇಂತಹದೊಂದು ಗೊಂದಲ ಕಾದಿದ್ದು ಅಜ್ಞಾತನೊಬ್ಬನ ಆತ್ಮಚರಿತ್ರೆ ಓದುವಾಗ. ಟಿಪ್ಪು ಸುಲ್ತಾನ್ ಆಸ್ಥಾನದ ದಳವಾಯಿಯೊಬ್ಬನ ಆತ್ಮಕತೆಯಂತಿರುವ ಇದು ಇತಿಹಾಸದ ಒಳಸುಳಿಗಳನ್ನು ಪರಿಚಯಿಸುತ್ತಲೇ ಮನಸ್ಸಿನ ಒಳಸುಳಿಗಳ ಅನಾವರಣ ಮಾ...