Posts

Showing posts from 2018

ಚೆಸ್

ನಾನಾಗ ನಾಲ್ಕನೇ ಕ್ಲಾಸ್... ಹೊರಗಡೆಯ ಆಟಗಳಲ್ಲೇ ಮುಳುಗಿ ಹೋಗಿರುತಿದ್ದ ನಮಗೆ ಒಳಾಂಗಣದ ಆಟದ ಬಗ್ಗೆ ಆಸಕ್ತಿ ಲವಲೇಶವೂ ಇಲ್ಲದಿದ್ದರೂ ಅದಾಗಲೇ ಹಾಸಿಗೆ ಹಿಡಿದು ದಿನ ಎಣಿಸುತಿದ್ದ ಅಜ್ಜನ ಬಲವಂತಕ್ಕೆ ಪಗಡೆ ಆಡಲು ಕೂರುತಿದ್ದೆವು. ಅವರಿಗೋ ಸಮಯ ಕಳೆಯಲು ನಾವೇ ಜೊತೆಗಾರರು ಆದ್ದರಿಂದ ಪಾಪ ಬೇರೇನೂ ಮಾಡಲು ತೋಚದೆ, ಮಲಗಲೂ ಆಗದೆ ನೋವು ಮರೆಯಲು ಆಡಲು ಕರೆಯುತ್ತಿದ್ದರು. ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ವಯಸ್ಸು ನಮ್ಮದು ಆಗಿರದ ಕಾರಣ ನಾವು ಬೈದುಕೊಳ್ಳುತ್ತಲೇ ಸಿಟ್ಟು ಮಾಡಿಕೊಳ್ಳುತ್ತಲೇ ಆಟಕ್ಕೆ ಬರುತಿದ್ದೆವು. ಇಂಥ ಸಂಧಿಗ್ಧ ಸಮಯದಲ್ಲಿ ಕೇಶುವಣ್ಣ ಚೆಸ್ ತಂದಿದ್ದು, ನಮಗೆ ತಪ್ಪಿಸಿಕೊಳ್ಳಲು ಮಾರ್ಗ ಸಿಕ್ಕಿದ್ದು. ಆಚೆಮನೆಯಲ್ಲಿ ಏನೇ ತಂದರೂ ಅದನ್ನು ಬಳಸುತಿದ್ದದ್ದು ಮಾತ್ರ ನಾನು ಅಣ್ಣನೇ. ಅವರಿಗೆ ತಂದಿದ್ದ ತೃಪ್ತಿ ಅವರಿಗೆ ಬಿಟ್ಟರೆ ಸಿಗುತಿದ್ದದ್ದು ಮಾತ್ರ ಎಲ್ಲೋ ಅಪರೂಪಕ್ಕೆ. ಕಪ್ಪು ಬಿಳಿಯ ಬಣ್ಣ ಹೊಂದಿದ ಚೌಕಾಕಾರದ ಆ ಬೋರ್ಡ್, ತರೇವಾರಿ ಆಕೃತಿಗಳನ್ನು ಮುಚ್ಚಿಟ್ಟುಕೊಂಡ ಬಾಕ್ಸ್ ಅದೆಷ್ಟು ಸೆಳೆದಿತ್ತು ಎಂದರೆ ಊಟ ತಿಂಡಿ ನಿದ್ದೆಯ ಪರಿವು ಇಲ್ಲದೆ ಅದನ್ನು ಕಲಿಯುವವರೆಗೆ ಅದೇ ಉಸಿರು, ಅದೇ ಕನಸು ಮತ್ತು ಅದೇ ಬದುಕು. ಪಾಪ ಕೆಶುವಣ್ಣ ಕೂಡ ತಾಳ್ಮೆಯಿಂದಲೇ ನಮಗೆ ಆಟ ಕಲಿಸಿಕೊಟ್ಟಿದ್ದರು. ಅದೇ ಅವರು ಮಾಡಿದ ಬಹು ದೊಡ್ಡ ತಪ್ಪು ಎಂದು ಅರ್ಥವಾಗಿದ್ದು ಆ ಬೋರ್ಡ್ ಅವರ ಕೈಗೂ ಸಿಕ್ಕದೆ ನಾವು ಎತ್ತಿಕೊಂಡು ಬಂದಾಗಲೇ. ಅಲ್ಲಿಯವರೆಗೆ

KGF

ಒಂದು ವಾರದ ಬಳಿಕ ಅಂತೂ ಟಿಕೆಟ್ ಸಿಕ್ಕಿ KGF ನೋಡೋ ಹಾಗಾಯ್ತು. ಅದೂ ಒಟ್ಟಿಗೆ ಸಿಗದೇ ಇತ್ತ ಸ್ವಲ್ಪ ಜನ ಅತ್ತ ಸ್ವಲ್ಪ ಜನ ಕುಳಿತು ಅಡ್ಜಸ್ಟ್ ಮಾಡ್ಕೊಂಡು ಕುಳಿತಿದ್ದಾಯ್ತು. ಸಿನೆಮಾ ಶುರುವಾಗಿ ಒಂದು ಹತ್ತು ನಿಮಿಷಕ್ಕೆ ಕಣ್ಣು ಇನ್ನಷ್ಟು ದೊಡ್ಡಕ್ಕೆ ಬಿಟ್ಟುಕೊಂಡು ನೋಡಲು ಶುರುಮಾಡಿದಳು ಅಹಿ. ಅಬ್ಬಾ ಅಂತ ನಾನೂ ಉಸಿರುಬಿಟ್ಟು ನೆಮ್ಮದಿಯಾಗಿ ನೋಡಲು ಶುರುಮಾಡಿದೆ. ಸಿನಿಮಾವನ್ನು ಸಿನೆಮಾವಾಗಿ ನೋಡೋ ಅಭ್ಯಾಸ ನನ್ನದು. ಹಾಗಾಗಿ ಅದರಲ್ಲಿ ತರ್ಕ ಹುಡುಕುವ ಟೆನ್ಶನ್ ಇಲ್ಲದೆ ನಿರಾಳವಾಗಿ ನೋಡಬಹುದು. ಇನ್ನು ಶಾಲೆಯಲ್ಲೇ ಪಾಠ ಕಲಿತದ್ದು ಕಡಿಮೆ ಇನ್ನು ಸಿನೆಮಾದಲ್ಲೇ ಏನು ಕಲಿಯೋದು ಹಾಗಾಗಿ ಆ ತಲೆನೋವು ಇರಲಿಲ್ಲ. ನೋಡಿ ಅಸ್ವಾದಿಸುವುದಷ್ಟೇ ಇದ್ದಿದ್ದು. ಹೇಗೂ ಕಣ್ಮನ ಸೆಳೆಯುವ ಮಾಂತ್ರಿಕ ಶಕ್ತಿಯಂತೂ ಅದಕ್ಕಿತ್ತು. ಹಾಗಾಗಿ ಕಳೆದು ಹೋಗಲು ಇನ್ನೇನು ಬೇಕು. ಕಳೆದುಹೊಗುವವರನ್ನು ಬಡಿದೆಬ್ಬಿಸುವ ಡೈಲಾಗ್... ರೆಪ್ಪೆ ಮುಚ್ಚಿದರೆ ಯಾವುದು ಹೋಗಿ ಬಿಡುತ್ತೋ ಎಂದು ಭಾಸವಾಗುವ ದೃಶ್ಯಕಾವ್ಯ, ಅನಾಮತ್ತಾಗಿ ಹಿಂದಿನ ಕಾಲಕ್ಕೆ ತೆಗೆದುಕೊಂಡು ಹೋಗುವ ಹಾಗಿನ ಪರಿಸರ, ಮಾತಿನ ನಡುವಿನ ಮೌನ ಹಾಗೂ ಮೌನದ ಚಿಪ್ಪೊಡೆದು ಬರುವ ಮಾತು, ಆರ್ದತೆಯಲ್ಲೊಂದು ನಿರ್ದಯತೆ, ನಿರ್ದಯತೆಯಲ್ಲೊಂದು ಆರ್ದತೆ, ಒಂದು ಡೈಲಾಗ್ ಮಿಸ್ ಆದರೂ ಏನೋ ಆಗಿಬಿಡುತ್ತೇನೋ ಅನ್ನೋ ಕಾತುರ, ಅಂತೂ ಇಡೀ ಸಿನೆಮಾ ನೋಡುಗರನ್ನು ಹಿಡಿದಿಟ್ಟು ಕೊಳ್ಳುವುದರಲ್ಲಿ ಯಶಸ್ವಿಯಾಗುತ್ತೆ. ಅಲ

ಜೋಗಿಮಟ್ಟಿ

ಹೋದಸಲ ಹೋದಾಗ ಜೋಗಿಮಟ್ಟಿಗೆ ಹೋಗಲು ಆಗದೇ ಇದ್ದ ಕಾರಣ ಈ ಬಾರಿ ಅದಕ್ಕೆ ಮೊದಲು ಹೋಗಿ ಬರುವುದು ಎಂದು ತೀರ್ಮಾನವಾಗಿತ್ತು. ಬೆಳ್ಬೆಳಿಗ್ಗೆ ಎದ್ದು ತಿಂಡಿ ಮುಗಿಸಿ ಹೊರಟರೆ ಅರೆ ಹತ್ತು ಕಿ.ಮಿ ಹೋಗುವುದಕ್ಕೆ ಅರ್ಧಗಂಟೆ ಯಾಕೆ ಬೇಕು ಅನ್ನಿಸಿದ್ದು ನಿಜವಾದರೂ ಹೋಗುತ್ತಾ ಹೋಗುತ್ತಾ ಅರಿವಿಗೆ ಬಂದಿತ್ತು.  ಪುಟ್ಟ ಮಗುವೊಂದು ಹಾಳೆಯಲ್ಲಿ ಗೀಚಿಬಿಟ್ಟ ಗೆರೆಯ ಹಾಗಿನ ರಸ್ತೆ, ಬಿಸಿಲಿನ ಝಳಕ್ಕೆ ಅದಾಗಲೇ ಅರ್ಧ ಒಣಗಿ ನಿಂತ ಗಿಡಗಂಟಿಗಳು. ಎಂದೋ ಕಟ್ಟಿದ ಮನೆಯೊಂದಕ್ಕೆ ಸುಣ್ಣಬಳಿದಾಗ ಸುಣ್ಣಕ್ಕಿಂತ ಮಣ್ಣೇ ಜಾಸ್ತಿಕಾಣುವ ಹಾಗಿನ ಟಾರ್... ಉಳಿದರ್ಧ ಹಸಿರಿದ್ದರೂ ವಯಸ್ಸಾದ ಅಜ್ಜನ ಮುಖದ ಸುಕ್ಕುಗಟ್ಟಿದ ಪೇಲವ ಚರ್ಮದಂತೆ ಕಾಣುವ ಎಲೆಗಳು ಬಿಸಿಲಿನ ಜೊತೆಗೆ ಏರುತ್ತಾ ಸಾಗಿದ್ದ ನಮ್ಮ ಪಯಣ. ಮಲೆನಾಡಿನ ನಮಗೆ ಈ ಗುಡ್ಡ, ಅಂಕು ಡೊಂಕು ತಿರುವು, ಮಣ್ಣ ರಸ್ತೆ ಯಾವುದೂ ಹೊಸತೆನಿಸದಿದ್ದರೂ ಪ್ರತಿ ಬಾರಿ ಪ್ರಕೃತಿ ಬೆರಗು ಅಚ್ಚರಿ ಹುಟ್ಟಿಸುವುದು ಸುಳ್ಳಲ್ಲ. ಅವಳು ನಿತ್ಯ ನೂತನೆ. ನಿಧಾನಕ್ಕೆ ವಾಹನ ಅದರಲ್ಲಿರುವ ನಮ್ಮ ಪರಿವೆಯೇ ಇಲ್ಲದಂತೆ ಅಸಲಿಗೆ ನಮ್ಮ ಅಸ್ತಿತ್ವವೇ ಗುರುತಿಸದಂತೆ ಮೆಲ್ಲಗೆ ಬಿಂಕವಾಗಿ ನಡೆದು ಹೋಗುವ ನವಿಲು, ಚಟಪಟನೆ ರೆಕ್ಕೆ ಪಟಪಟಿಸಿ ಹಾರುವ ಪುಟ್ಟಹಕ್ಕಿಯ ಮೈ ಮೇಲಿನ ಬಣ್ಣಗಳು ಗಾಳಿಗೆ ಚೆದುರಿ ಅಲ್ಲೆಲ್ಲಾ ಹರಡಿದ ಹಾಗೆ ಅನ್ನಿಸಿ ಆ ವರ್ಣ ವೈವಿಧ್ಯ ನಮ್ಮನ್ನೂ ಅವರಿಸಲಿ ಎಂಬಂತೆ ಮುಖ ಹೊರಗೆ ಹಾಕಿ ಕುಳಿತ ಮಗಳು, ಬಿಸಿಲಿನ ತಾಪಕ್ಕೆ ಅ

ಅಡಿಕೆ ಕೊಯ್ಲು. (ಹಸಿರುವಾಸಿ)

ಭಾದ್ರಪದ ಅಡಿಯಿಟ್ಟು ಬರುವಾಗ ಸೂರ್ಯನೂ ಹೊರಗೆ ಬರುವುದು ವಾಡಿಕೆ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಮಳೆರಾಯನೂ ಓಡಾಟವನ್ನು ನಿಲ್ಲಿಸಿ ಮನೆಗೆ ಮರಳುವ  ಸಮಯ. ಹಾಗಾಗಿ ಅಂಗಳ ಒಣಗಿರುತ್ತದೆ. ನೆಂದು ತೊಪ್ಪೆಯಾಗಿ ಮೈತುಂಬಾ ಪಾಚಿ ಕಟ್ಟಿಕೊಂಡ ಕಲ್ಲುಕಂಬಗಳೂ ಬಿಸಿಲಿಗೆ ಒಣಗಿ ಸುಧಾರಿಸಿಕೊಳ್ಳುವಾಗಲೇ ವಿಜಯದಶಮಿ ಬಂದಾಗಿರುತ್ತದೆ. ಅವತ್ತು ಅಡಿಕೆ ಕೊನೆ ತೆಗೆಯುವ ಮುಹೂರ್ತ ಮಾಡಿದರೆ ಮುಗಿಯಿತು. ಆಮೇಲೆ ಯಾವಾಗ ಬೇಕಾದರೂ ತೆಗೆಯಬಹುದು. ಹಾಗೆ ತೆಗೆಯುವ ಮೊದಲು ಚಪ್ಪರ ಹಾಕಬೇಕು. ನವರಾತ್ರಿಯಿಂದ ಶಿವರಾತ್ರಿಯವರೆಗೆ ಮಲೆನಾಡು ವಿಪರೀತ ಬ್ಯ್ಸುಸಿ. ಅಡಿಕೆ ಕೊಯ್ಲು ಅಂದರೆ ಮೈ ತುರಿಸಿಕೊಳ್ಳಲು ಪುರುಸೊತ್ತು ಇಲ್ಲದಷ್ಟು ಕೆಲಸ. ಚುಮುಚುಮು ಚಳಿಯಲ್ಲಿ ಮಾಡಿದಷ್ಟೂ ಮುಗಿಯದ ಕೆಲಸ ರೇಜಿಗೆ ಹುಟ್ಟಿಸಿದರೂ ಗಡಿಯಾರ ವೇಗವಾಗಿ ಚಲಿಸಿದಂತೆ ಭಾಸವಾಗುತ್ತದೆ. ಅಂಗಳವನ್ನು ಹೆರೆದು, ಚಪ್ಪರದ ಹಾಕಿ ಸಗಣಿ ಹೊಡೆದರೆ ಅಲ್ಲಿಗೆ ಕೊಯ್ಲಿಗೆ ಶುಭಾರಂಭ. ಕೊಟ್ಟಿಗೆಯ ಅಟ್ಟದ ಮೇಲೆ ಬಟ್ಟೆಯಲ್ಲಿ ಸುತ್ತಿಟ್ಟ ಅಡಿಕೆ ಕತ್ತಿಯನ್ನು ಕೆಳಗೆ ತಂದು ಅದನ್ನು ಬಿಳಚುಕಲ್ಲಿನ ಜೊತೆಗೆ ಮಸೆದು ಹರಿತ ಮಾಡಿ ಜೋಡಿಸಿಟ್ಟ ಮಣೆಗೆ ಹೊಡಿದು ಅಲುಗಾಡದಂತೆ ಹೊಡೆದು ಜೋಡಿಸಿ ಇಟ್ಟರೆ ಯುದ್ಧಕ್ಕೆ ಶಸ್ತ್ರಾಸ್ತಗಳು ತಯಾರಾದಂತೆ. ಇನ್ನು ಸೈನಿಕರು ಬರುವುದು ಒಂದು ಬಾಕಿ ಅಷ್ಟೇ. ಮೊದಲು ಕೊನೆ ತೆಗೆಯುವವನ ಪುರುಸೊತ್ತು ನೋಡಿಕೊಳ್ಳಬೇಕು. ಹಾಳೂರಿಗೆ ಉಳಿದವನೆ ಗೌಡ ಅನ್ನೋ ಹಾಗೆ ಇಡೀ ಊರಿಗೆ

ಸಿನಿಕತೆ (ಹೊಸದಿಗಂತ)

ಜೊಮೊಟೋ ದ ನೌಕರನೊಬ್ಬ ಆಹಾರವನ್ನು ಕದ್ದು ತಿನ್ನುವ ವೀಡಿಯೊ ಒಂದು ವೈರಲ್ ಆಯಿತು. ಅದಾಗುತ್ತಿದ್ದ ಹಾಗೆ ಅದಕ್ಕಷ್ಟು ಪರ ವಿರೋಧ ಚರ್ಚೆಗಳು, ಹೇಳಿಕೆಗಳು ಅದಕ್ಕಿಂತ ಜೋರಾಗಿ ನಡೆಯಿತು. ಹಸಿವನ್ನು ವೈಭವಿಕರಿಸುವ, ಹಸಿವಿಗಾಗಿ ಏನು ಮಾಡಿದರೂ ಸರಿ ಎನ್ನುವ ವಾದಗಳನ್ನು ಹರಿದವು. ಸಮರ್ಥಿಸುವ ಭರದಲ್ಲಿ, ವಿಭಿನ್ನ ದೃಷ್ಟಿಕೋನದ ಆಸೆಯಲ್ಲಿ ನೈತಿಕತೆ ಅನ್ನುವುದು ಕೆಳಕ್ಕೆ ಬಿದ್ದು ಉಸಿರುಗಟ್ಟಿತ್ತು. ಇದಕ್ಕೂ ಮೊದಲು ದಸರೆಯ ಸಮಯದಲ್ಲಿ ತಾಯಿ ಮಗು ಇಬ್ಬರೂ ಅರಮನೆಯ ದೀಪಾಲಂಕಾರ ನೋಡುವ ಫೋಟೋ ಇಷ್ಟೇ ಸದ್ದು, ಸುದ್ಧಿ, ಎರಡೂ ಮಾಡಿತ್ತು. ಅದನ್ನುಬಳಸಿಕೊಂಡು ಕತೆ, ಕವನಗಳ ಲೇಖನಗಳ ಪ್ರವಾಹವೂ ಹರಿದುಬಂದು ಅನುಕಂಪದ ಹೊಳೆಯೇ ಹರಿಯಿತು. ಬಡವರು ಮಾತ್ರ ಮನಸ್ಸು ಹೃದಯ ಉಳ್ಳವರು ಉಳಿದವರು ಮಾನವೀಯತೆ ಮರೆತ ದಾನವರೋ ಎಂದು ಫೀಲ್ ಆಗುವಷ್ಟು ಪ್ರವಾಹ ಉಕ್ಕಿ ಹರಿಯಿತು. ಪ್ರವಾಹದಲ್ಲಿ ಕೊಚ್ಚಿಹೊಗುವಂತೆ ದಸರೆ ಅದರ ಮಹತ್ವ ಎಲ್ಲವೂ ಮಂಕಾಗಿ ಆ ಫೋಟೋವೇ ಜಾಲತಾಣದಲ್ಲಿ ಮುಂಚೂಣಿಯಲ್ಲಿ ನಿಂತಿತು. ಇನ್ನು ಮೊನ್ನೆ ಮೊನ್ನೆ ಹೆಸರಾಂತ ಸಾಹಿತಿಯೊಬ್ಬರು ಅದರಲ್ಲೂ ಸೂಕ್ಷ್ಮ ಸಂವೇದಿ ಎಂದು ಗುರುತಿಸಿಕೊಂಡವರು ಫೇಸ್ಬುಕ್ ನಲ್ಲಿ ಅಡುಗೆಯ ಫೋಟೋ ಹಾಕಿದವರ ಬಗ್ಗೆ ಅಕ್ರೋಶ ಹೊರಹಾಕಿ ಹಸಿದವನ ಎದುರು ತಿಂದ ಹಾಗೆ ಇದು ಇಮ್ಮಾರಲ್ ಎಂದು ದುಃಖ ಪಡುತ್ತಿದ್ದರು. ಲಕ್ಷಾಂತರ ಜನ ಹಸಿವಿನಿಂದ ಊಟವಿಲ್ಲದೇ ಒದ್ದಾಡುವಾಗ ಬಗೆ ಬಗೆಯ ಊಟದ ಫೋಟೋ ಹಾಕುವುದು ಕ್ರೌರ್ಯ ಎನ್ನುವುದು
ಇಳಿ ಸಂಜೆಯ ಹೊತ್ತಿನಲ್ಲಿ ಮಹಡಿಯಿಂದ ಮಹಡಿಗೆ ಹಾರುತ್ತಾ ಆ ಕಡೆ ಈ ಕಡೆ ಸ್ವಲ್ಪ ಹೆದರಿಕೆಯಿಂದಲೇ ಗಮನಿಸುತ್ತಾ ಪಾಟ್ ನ ಬುಡ ಕೆದರುತ್ತಾ, ಎಲೆ ಎಲೆಯ ಮಧ್ಯದಲ್ಲೂ ಏನಾದರೂ ಸಿಗಬಹುದಾ ಎಂದು ಹುಡುಕುವ ಮಂಗ ಮತ್ತದರ ಮರಿಯನ್ನು ನೋಡಿದಾಗ ಸಂಕಟವಾಗಿತ್ತು. ಹೊಟ್ಟೆ ಎನ್ನುವುದು ಇಲ್ಲದಿದ್ದರೆ ಜಗತ್ತು ನೆಮ್ಮದಿಯಾಗಿರುತಿತ್ತಾ ಅನ್ನಿಸಿದ್ದೂ ಹೌದು. ಚೇಷ್ಟೆ ಮಾಡಿದಾಗಲೆಲ್ಲ ಕಪಿಬುದ್ಧಿ ಎಂದು ಅಜ್ಜಿ ಬೈಯುವುದು ಕೇಳಿದಾಗಲೆಲ್ಲ ನಗು, ಕುತೂಹಲ ಎರಡೂ. ನಿಧಾನಕ್ಕೆ ಶಹರದ ಬದುಕಿಗೆ ಒಗ್ಗಿದ, ಮನುಷ್ಯರಿಗೆ ಅಭ್ಯಾಸವಾದ ಮಂಗಗಳು ತಮ್ಮ ಅಸಲು ರೂಪ ತೋರಿಸಲು ಶುರುಮಾಡಿದ್ದವು. ಮೊದಮೊದಲು ಪೂರ್ಣ ಕತ್ತಲಾದ ಮೇಲೆ ಜನರು ಬಾಗಿಲು ಮುಚ್ಚಿ ಒಳಗೆ ಸೇರಿದ ಮೇಲೆ ನಿಧಾನಕ್ಕೆ ಇಳಿದು ಬಂದು ಮೊದಮೊದಲು ತಮಗೆ ಬೇಕಾದ್ದನ್ನು ಅರಸಿ ಸಿಗದೇ ಇದ್ದಾಗ ಪೆಚ್ಚು ಮುಖ ಮಾಡಿಕೊಂಡು ಹೋಗುತ್ತಿದ್ದ ಅವುಗಳು ಈಗ ಗಿಡವನ್ನು ಕಿತ್ತು ಎರಡು ಭಾಗ ಮಾಡಿ ಎಸೆಯುವುದು, ಮೊಗ್ಗು ಕಿತ್ತು ಅವುಗಳ ದಳಗಳನ್ನು ಉದುರಿಸಿ ಎಸೆಯುವುದು, ತರಕಾರಿಗಳನ್ನು ತಿಂದು ನೋಡಿ ಇಷ್ಟವಾಗದಿದ್ದರೂ ಎಲ್ಲವನ್ನೂ ಕಿತ್ತು ಬಿಸಾಡುವುದು, ಎಲೆಗಳನ್ನೆಲ್ಲಾ ಚಿಪ್ಪಳಿಸಿ ಹರಡುವುದು ಶುರುಮಾಡಿದ್ದವು. ಬೆಳಿಗ್ಗೆ ಎದ್ದು ಬಾಗಿಲು ತೆಗೆದರೆ ಕೈ ತೋಟ ಎನ್ನುವುದು ಅಕ್ಷರಶಃ ಯುದ್ಧ ಮುಗಿದ ರಣಾಂಗಣ. ಗಿಡಗಳು ಕೈ ಕಾಲು ಕಳೆದುಕೊಂಡು ಹಿಡಿ ಜೀವ ಉಳಿಸಿಕೊಂಡು ಬಿದ್ದಿರುವ ಸೈನಿಕರ ತರಹ. ಅಲ್ಲಿಗೆ

ದೀಪ

ಕಾರ್ತಿಕ ಮಾಸವೆಂದರೆ ದೀಪಗಳ ಮಾಸ, ದೀಪೋತ್ಸವದ ಮಾಸ. ತಿಂಗಳು ಬೆಳಕಿನಲ್ಲಿ ಬೆಳಗುವ ದೀಪಗಳ ಸಾಲು. ಒಟ್ಟಿನಲ್ಲಿ ಬೆಳಕಿನ ತಿಂಗಳು. ಹೊತ್ತಿಗೆ ಮುಂಚೆ ಕತ್ತಲು ಬಂದು ಇಳೆಯ ಅಪ್ಪುವ ಹೊತ್ತಿಗೆ ಅಂಗಳದ ತುಳಸಿಯ ಎದುರು ಹಚ್ಚಿಟ್ಟ ಹಣತೆಯ ತಂಪು ಬೆಳಕಿನ ಜೊತೆ ಜೊತೆಗೇ ತಣ್ಣನೆಯ ಚಳಿಯೂ ಬಂದು ಮೈ ಮನಸ್ಸು ಆವರಿಸುವ ಕಾಲ. ಈ ತಿಂಗಳ ಇನ್ನೊಂದು ವಿಶೇಷವೆಂದರೆ ಆರಂಭದಲ್ಲಿ ಹಚ್ಚಿಟ್ಟ ಹಣತೆಯು ನೂರು ಸಾವಿರ ಲಕ್ಷವಾಗಿ ದೀಪೋತ್ಸವವಾಗಿ ಬೆಳಕು ಹಬ್ಬುವ ಪರಿ. ಅದರಲ್ಲೂ ಶಿವನ ದೇವಾಲಯದಲ್ಲಿ ಜರುಗುವ ದೀಪೋತ್ಸವ ಉಳಿದ ದೇವಸ್ಥಾನಗಳಲ್ಲಿ ಮಾರ್ಗಶಿರದಲ್ಲೂ ಮುಂದುವರೆದು ಬೆಳಕು ಪಸರಿಸುವ ರೀತಿ, ಮಾಗಿಯ ಚಳಿಗೆ ಬೆಚ್ಚಗಿನ ಅನುಭೂತಿ ಕೊಡುತ್ತದೆ. ಬಾಲ್ಯದಲ್ಲಿ ಕರ್ಣಾನಂದಕರವಾಗಿ ಕೇಳುವ ಮಾತುಗಳಲ್ಲಿ ನಾಡಿದ್ದಿನಿಂದ ಗಣಪತಿ ದೇವಸ್ಥಾನದಲ್ಲಿ ದೀಪ ಶುರು ಅನ್ನುವ ಮಾತೂ ಒಂದೂ. ಕೇಳುತ್ತಿದ್ದ ಹಾಗೆ ಅಲ್ಲೊಂದು ಸಂಭ್ರಮ, ಸಡಗರ ಗುಬ್ಬಚ್ಚಿ ಗೂಡು ಕಟ್ಟುವ ಹಾಗೆ ನಿಧಾನಕ್ಕೆ ಕಟ್ಟುತಿತ್ತು. ಅದರ ಮೊದಲ ಹಂತವಾಗಿ ದೇವಸ್ಥಾನ ಅಂಗಳ ಕೆತ್ತುವ ಕೆಲಸ ಶುರುವಾಗುತ್ತಿತ್ತು. ಮಳೆಗಾಲದ ಮಳೆಗೆ ತೋಯ್ದು, ಹಸಿ ಹಸಿಯಾಗಿ ಒಡಲ ತುಂಬಾ ಹುಲ್ಲು, ಗಿಡಗಳಿಗೆ ಜನ್ಮಕೊಟ್ಟು, ಹಸಿರು ಹಾಸುಂಬೆಯ ಪತ್ತಲ ಉಟ್ಟ ಅಂಗಳವನ್ನು ಹಾರೆ ತಂದು ಹೆರಸುವುದರ ಜೊತೆಗೆ ನೀರು ಹರಿದು ಉಬ್ಬು ತಗ್ಗುಗಳಾಗಿ ಮಾರ್ಪಾಡಾದ ಜಾಗವನ್ನು ಆದಷ್ಟು ಮಟ್ಟಿಗೆ ಸಮತಟ್ಟು ಮಾಡುವ ಕೆಲಸ ಸುಲಭದ್ದೇನಾಗಿರಲಿಲ್ಲ.

ಸದ್ಗುರು

ಏನನ್ನೋ ಹುಡುಕುವಾಗ ಎಲ್ಲವೂ ಒಳಗಿನಿಂದಲೇ ಬಂದರೂ ಹೊರಗನ್ನು ಸರಿ ಮಾಡುವತ್ತಲೇ ಗಮನ ಹರಿಸುತ್ತೇವೆ, ಒಳಗನ್ನು ಮರೆತು ಬಿಡುತ್ತೇವೆ ಎನ್ನುವರ್ಥದ ಸಾಲು ಕಣ್ಣಿಗೆ ಬಿದ್ದು ಹುಡುಕಾಟಕ್ಕೆ ಪೂರ್ಣವಿರಾಮ ಬಿದ್ದು ಅದರೊಳಗೆ ಹೋಗಿದ್ದೆ. ಅಂದು ಹೋದವಳು ಆಮೇಲೆ ಅಲ್ಲಿಂದ ಬಿಡಿಸಿಕೊಳ್ಳುವ ಹೊರಬರುವ ಯಾವ ಇಚ್ಛೆಯೂ ಇಲ್ಲದೆ ಮತ್ತೆ ಮತ್ತೆ ಮುಳುಗುತ್ತಾ, ಬೇಕಾದ್ದನ್ನು ಬೇಕಾದ ಸಮಯದಲ್ಲಿ ಪಡೆಯುತ್ತಾ ಮನಸ್ಸು ಬದುಕು ಎರಡೂ ತಹಬಂದಿಗೆ ತರುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದೆ. ಆ ಶಕ್ತಿ ಮತ್ತು ವ್ಯಕ್ತಿಯೇ ಸದ್ಗುರು. ಸದ್ಯಕ್ಕೆ ಜಗತ್ತಿನ ಅತ್ಯುನ್ನತ ಸಂಗತಿ ಹಾಗೂ ಬಹು ದುಬಾರಿಯಾದ ಸಂಗತಿಯೆಂದರೆ ಶಾಂತಿ. ಹಾಗೆಂದು ಎಲ್ಲಾ ಮಠಧಿಶರು, ಸ್ವಾಮಿಗಳು, ಗುರುಗಳು ಎಂದು ಕರೆಸಿಕೊಳ್ಳುವವರು ಹೇಳುತ್ತಾರೆ. ಆದರೆ ಶಾಂತಿಯಿಲ್ಲದೆ ಯಾವ ಕೆಲಸವಾದರೂ ಮಾಡಲು ಸಾಧ್ಯವೇ. ತಿನ್ನಲೂ ಮನಸ್ಸು ಶಾಂತಿಯಿಂದರಬೇಕಲ್ಲವೇ.. ಹಾಗೆ ಶಾಂತಿ ಬದುಕಿನ ಅಂತಿಮ ಗುರಿಯಲ್ಲ ಬದುಕಿನ ಮೂಲಭೂತ ಆವಶ್ಯಕತೆ ಎಂದಾಗಲೇ ಈ ಮನುಷ್ಯ ವಾಸ್ತವದಲ್ಲಿ ಬದುಕುವವರು ಎಂದು ಅರ್ಥವಾಗಿತ್ತು. ಯಾವ ಪೂಜೆ, ದೇವರು, ಜಪ, ತಪ ಯಾವುದನ್ನೂ ಒತ್ತಾಯಿಸದ ಕೇವಲ ತನ್ನನ್ನು ತಾನು ಅರಿತುಕೊಳ್ಳುವ ಅದೂ ಎಲ್ಲರಿಗೂ ಸುಲಭಕ್ಕೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಸದ್ಗುರು ಸದ್ಯಕ್ಕೆ ಯುವಜನತೆಯ ಆಶಾಕಿರಣ. ಸಾಮಾನ್ಯವಾಗಿ ನಮ್ಮ ಭಯಕ್ಕೆ ಕಾರಣಗಳು ಏನಿರುತ್ತೆ? ಒಂದೋ ಆಗಿ ಹೋದ ಘಟನೆ ಇಲ್ಲವೋ ಹೀಗಾಗುತ್ತೇನೋ

ಕಾಕಿ ಹಣ್ಣು.

ಸಮಯ ಇದ್ದಾಗಲೋ ಇಲ್ಲಾ ರಜೆ ಬಂದಾಗಲೋ ಮರದ ಸಂಕವನ್ನು ದಾಟಿಕೊಂಡು, ಮುಳ್ಳುಗಳನ್ನು ಚುಚ್ಚಿಸಿಕೊಂಡು ಹಳು ಬೆಳೆದ ತೋಟಕ್ಕೆ ಹೋಗುವ ಆಕರ್ಷಣೆಯಿರುತಿದ್ದದ್ದು ಕೇವಲ ಪೇರಳೆಮರಕ್ಕೆ ಮಾತ್ರವಲ್ಲ, ಕಾಕಿ ಹಣ್ಣಿನ ಗಿಡಕ್ಕೂ ಕೂಡಾ. ಬೆಳೆದ ಹಳುಗಳ ನಡುವೆ ಹಸಿರು ಹುಲ್ಲಿನ ನಡುವೆ ಯಾವುದೋ ಮರದ ಬುಡದಲ್ಲೋ, ಕಪ್ಪಿನ ಕೊನೆಯಲ್ಲ್ಲೋ ಸುಮ್ಮನೆ ಬೆಳೆದು ನಿಂತಿರುತಿದ್ದ ಈ ಗಿಡ ಮೇಲ್ನೋಟಕ್ಕೆ ಕಣ್ಣಿಗೆ ಬೀಳುತ್ತಿರಲಿಲ್ಲ. ಹಸಿರಾಗಿ ರೆಂಬೆಗಳನ್ನು ಹರಡಿಕೊಂಡು ನಿಂತಿರುತಿದ್ದ ಈ ಗಿಡ ಹುಲ್ಲಿನಷ್ಟೇ ಮೃದು. ಮುಟ್ಟಿದರೆ ಮುರಿಯುವುದೇನೋ ಎನ್ನುವಷ್ಟು ನಾಜೂಕು. ಈ ಗಿಡಕ್ಕೆ ಮೂರರ ಮೇಲೆ ಮೋಹವೇನೋ ಎಂಬಂತೆ ಪ್ರತಿ ಚಿಗುರಿನಲ್ಲೂ ಮೂರು ಎಲೆಗಳನ್ನು ಬಿಟ್ಟು ಕಂಗೊಳಿಸುತ್ತಿತ್ತು. ಎರಡು ಮೂರು ಅಡಿಯಷ್ಟು ಎತ್ತರ ಬೆಳೆಯುವ, ಹರಡಿಕೊಂಡು ನಗುವ ಇದನ್ನು ಯಾರೂ ಬೆಳಸಬೇಕು ಎಂದೇನಿಲ್ಲ. ತನ್ನಷ್ಟಕ್ಕೆ ತಾನು ಹಿತ್ತಿಲಲ್ಲೋ, ತೋಟದಲ್ಲೋ ಕಳೆಯ ಮಧ್ಯೆ ಬೆಳೆಯುತ್ತಿತ್ತು. ಕೆಲವೊಮ್ಮೆ ಹಳು ಸವರುವಾಗ ಅದೂ ಹುಲ್ಲಿನ ಜೊತೆ ಸೇರಿ ದನಗಳಿಗೆ ಆಹಾರವಾಗುತಿತ್ತು. ಹೀಗೆ ತನ್ನ ಪಾಡಿಗೆ ತಾನು ಯಾರ ಆರೈಕೆಯಿಲ್ಲದೆ, ಗಮನ ಬೇಡದೆ ಬೆಳೆದರೂ ಉಳಿದವರ ಆರೈಕೆ ಮಾತ್ರ ತುಂಬಾ ಚೆನ್ನಾಗಿ ಮಾಡುತಿತ್ತು. ಹಾಗಾಗಿ ಯಾವ ನೀರಿಕ್ಷೆಯಿಲ್ಲದೆ ಬೆಳೆದು ಹಿತವನ್ನೇ ಮಾಡುವ ಈ ಗಿಡವನ್ನು ಕಂಡರೆ ಎಲ್ಲರಿಗೂ ವಿಶೇಷ ಪ್ರೀತಿ.  ಅದರಲ್ಲೂ ಮಕ್ಕಳಿಗೆ ಹಾಗೂ ಹೆಂಗಸರಿಗೆ ತುಸು ಹೆಚ್ಚೇ ಅನ್ನಿಸುವಷ್ಟು

ಮೋವಿ

ಅಲ್ಲೊಂದು ಇಲ್ಲೊಂದು, ಕಾಡಿನ ನಡುವೆ, ಗದ್ದೆಯ ಮಧ್ಯೆ ತೋಟದ ಅಂಚಿನಲ್ಲಿ ಇರುವ ಹಳ್ಳಿಯ  ಮನೆಗೊಂದು ನಾಯಿಯ ಅವಶ್ಯಕತೆ ತುಂಬಾ ಇರುತ್ತದೆ. ಬೇರೆಲ್ಲ ಕಾರಣಕ್ಕಿಂತ ಕೆಲಸದ ನಡುವೆ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರುವಾಗ ಮನೆಗೆ ಯಾರಾದರೂ ಬಂದರೆ ಅದನ್ನು ಹೇಳುವುದಕ್ಕಾದರೂ ಒಂದು ಜೀವ ಬೇಕು ಅನ್ನೋದಕ್ಕಾದರೂ. ಎಲ್ಲರೂ ಕೆಲಸಕ್ಕೆ ಹೋಗಿರುವಾಗ ಮನೆಯಲ್ಲಿ ಒಬ್ಬರೇ ಇರುವವರಿಗೆ ಒಂಟಿತನ, ಖಾಲಿತನ ಕಾಡದಿರಲು. ಧೈರ್ಯ ತುಂಬಲು. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಒಂದು ನಾಯಿ ಇದ್ದೆ ಇರುತ್ತದೆ. ಫ್ರೆಂಡ್ ಮನೆಯಲ್ಲಿ ಜರ್ಮನ್ ಶೆಫರ್ಡ್ ಮರಿ ಹಾಕಿದೆಯಂತೆ ಒಂದು ತಗೊಂಡ್ ಬರ್ತೀನಿ ಅಂದಾಗ ಅರೆಮನಸ್ಸಿನಿಂದಲೇ ಹೂ ಗುಟ್ಟಿದ್ದೆ. ಇಲ್ಲಿಂದ ಊರಿನವರೆಗೆ ಅದನ್ನು ತೆಗೆದುಕೊಂಡು ಹೋಗುವ ಕೆಲಸವೇ ದೊಡ್ಡದಾಗಿ ಕಾಣಿಸಿತ್ತು. ಅದಿನ್ನೂ ತಿಂಗಳ ಮರಿ. ಆಗತಾನೆ ಅಮ್ಮನ ಮಡಿಲನ್ನು ಬಿಟ್ಟು ಬಂದಿತ್ತು. ಮೊತ್ತ ಮೊದಲ ಬಾರಿಗೆ ಹೊಸ ಜಾಗ, ಹೊಸ ಜನ, ಎಲ್ಲಕ್ಕಿಂತ ಜಾಸ್ತಿ  ಅಮ್ಮನಿಲ್ಲದ ಖಾಲಿತನ. ಸುತ್ತ ನೋಡುತ್ತಾ, ಮುದುರಿಕೊಳ್ಳುತ್ತಾ, ಕಣ್ಣ ತುಂಬಾ ಅಂಜಿಕೆ ತುಂಬಿಕೊಂಡ ಅದನ್ನು ನೋಡಿದಾಗ ಸಂಕಟವಾಗಿತ್ತು. ಗೊತ್ತಿಲ್ಲದ ಯಾವುದೋ ಜಾಗಕ್ಕೆ ನೂರಾರು ಕಿ.ಮಿ ಪ್ರಯಾಣ ಮಾಡಬೇಕಿದ್ದ  ಅದಕ್ಕೊಂದು ಪುಟ್ಟ ಬುಟ್ಟಿಯನ್ನು ತಂದಿದ್ದೆ. ಪಾಪಚ್ಚಿ ಅಲ್ವಾ ಅಮ್ಮ ಅಂತ ಅದಕ್ಕೊಂದು ತನ್ನದೇ ಮೃದುವಾದ ಬ್ಲಾಂಕೆಟ್ ಒಂದನ್ನು ಎತ್ತಿ ಹಾಸಿ ರೆಡಿ ಮಾಡಿದ್ಲು ಅಹಿ. ಪಿಳಿ ಪಿಳಿ

ಜೀವನವದೊಂದು ಕಲೆ

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥ ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ - ಮಂಕುತಿಮ್ಮ !! ಬದುಕಿನ ಬಗ್ಗೆ ಡಿ.ವಿ.ಜಿ ಯವರು ಬರೆದ ಅಧ್ಭುತ ಸಾಲುಗಳು ಇವು. ಜೀವನ ಒಂದು ಕಲೆ. ಅದನ್ನು  ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ  ಕಲೆಯಾಗಿಸಿ ಕೊಳ್ಳುವುದು ಸಹ ಒಂದು ಕಲೆ. ಕಲೆಯೆಂದರೆ ಕೇವಲ ಲಲಿತಕಲೆಗಳು ಮಾತ್ರವಲ್ಲ, ಬದುಕನ್ನ ಕಲೆಯಾಗಿಸಿಕೊಳ್ಳುವಲ್ಲಿ ಅವುಗಳು ಮೆಟ್ಟಿಲು. ಆದರೆ ಬದುಕೇ ಕಲೆಯಾದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ? ಹಾಗಾದರೆ ಬದುಕನ್ನ ಕಲೆಯಾಗಿಸಿಕೊಳ್ಳುವುದು ಹೇಗೆ? ಅನ್ನುವುದನ್ನೇ ಜೀವನವೊಂದು ಕಲೆ ಎನ್ನುವ ಪುಸ್ತಕ ಹೇಳುತ್ತದೆ. ಕಲೆಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಪುಟ್ಟ ಹಣತೆಯಾಗುತ್ತದೆ. ದಾರಿ ತೋರುವ ಸೊಡರಾಗುತ್ತದೆ. ಕಲೆ ಎಂದರೆ ಸೌಂದರ್ಯ, ಕಲೆ ಎಂದರೆ ಪರಮಾನಂದ,  ಕಲೆ ಎಂದರೆ ಪರಿಪೂರ್ಣತೆ. ಪರಿಪೂರ್ಣತೆ ಸುಲಭಕ್ಕೆ ದಕ್ಕುವುದಿಲ್ಲ. ಹಾಗಾಗಿಯೇ ಯಾವ ನಿಜವಾದ ಕಲಾಸಾಧಕನೂ ತಾನು ಪರಿಪೂರ್ಣ ಎಂದು ಬೀಗುವುದಿಲ್ಲ. ಬದುಕು ಕಲೆ ಎರಡೂ ಸಾಗರದಂತೆ. ಅಗಾಧ. ಹಾಗಾಗಿ ಬಿಂದು ಮಾತ್ರವಾಗಿ ಅದರಲ್ಲಿ ಸೇರಿ ಹೋಗುವುದಷ್ಟೇ ನಮಗುಳಿದದ್ದು. ಹಾಗೆ ಬಿಂದುವಾಗಿ ಸೇರಿಹೊಗುವುದು ಹೇಗೆ, ಸೃಷ್ಟಿಯಲ್ಲಿ ಒಂದಾಗುವುದು ಹೇಗೆ? ಎನ್ನುವುದರತ್ತ ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾ? ಓದಿದ ಮೇಲೆ ಅದು ಅವರವರಿಗೆ ದಕ್ಕುವ ಉತ್ತರ ಹಾಗೂ ಕಂಡುಕೊಳ್ಳುವ ಬೆಳಕಿ

ಫೇಸ್ಬುಕ್ ಮಾಯಾಜಾಲ

ತಿಂಡಿ ತಿಂದು ಆರಾಮಾಗಿ ಕಾಫಿ ಕುಡಿಯುತ್ತಾ ಕುಳಿತಿರುವಾಗಲೇ  ಫೋನ್ ರಿಂಗಾಯಿತು. ಎತ್ತಿ ಹಲೋ ಅನ್ನುವುದರೊಳಗೆ ಬೇಗ ಬಾ ಮಾತಾಡಬೇಕು ಅನ್ನುವ ಅಪ್ಪಣೆ. ಏನಾಯ್ತೆ ಎನ್ನುವುದರೊಳಗೆ ಫೋನ್ ಮೌನವಾಗಿತ್ತು. ಏನಾಯ್ತೋ ಅನ್ನುವ ಆತಂಕದಲ್ಲಿ ಧಾವಿಸಿದವಳ ಎದುರು ಮೊಬೈಲ್ ಪರದೆ ಹಿಡಿದಳು... ಸಮಯ ಕಳೆಯಲು ಹೊಸತೊಂದು ಮಾರ್ಗ ಸಿಕ್ಕಿತ್ತು. ಮದುವೆಯಾದ ಮೇಲೆ ಅತ್ತೆಯ ಮನೆಗೆ ಅಡಿಯಿಡುವ ನವ ವಧುವಿನಂತೆ ಕೊಂಚ ಆತಂಕ, ಸ್ವಲ್ಪ ಬೆರಗು, ತುಸು ಕುತೂಹಲ, ಅವ್ಯಕ್ತ ಪುಳಕ, ಹೊತ್ತು ಫೇಸ್ಬುಕ್ ಪ್ರವೇಶಿಸಿದ್ದಳು.  ಒಮ್ಮೆ ಆ ಮಾಯಾಜಾಲಕ್ಕೆ ಕಾಲಿಟ್ಟು ಒಳಬಂದ ಮೇಲೆ ಗಡಿಯಾರದ ಮುಳ್ಳುಗಳೂ ಓಡುತ್ತವೇನೋ ಅನ್ನಿಸುವ ಹಾಗೆ ಸಮಯ ಉರುಳಿ ಹೋಗುತಿತ್ತು. ಕೈ ಬೆರಳ ತುದಿಯಲ್ಲಿ ಅಸಂಖ್ಯಾತ ಜನರೂ, ವೈವಿಧ್ಯಮಯ ವಿಷಯಗಳು, ಹೊಸ ಸ್ನೇಹ, ಹೊಸ ಬಂಧ ಹೀಗೆ ಹೊಸತು ಎಲ್ಲೆಲ್ಲೂ ಆವರಿಸಿ ಬದುಕೂ ಹೊಸತೆನಿಸಿತ್ತು. ಹಂಚಿಕೊಳ್ಳಲು ವೇದಿಕೆಯಾಗಿ ಜೊತೆಯಾಗಿತ್ತು. ಕಾಲ ಪರಿವಿಲ್ಲದೆ ಸರಿದು ಹೋಗುತಿತ್ತು. ಅಪರಿಚಿತರಿಬ್ಬರೂ ಫೇಸ್ಬುಕ್ ನಲ್ಲಿ ಪರಿಚಿತರಾಗಲು ಬಹಳ ಸಮಯವೇನೂ ಬೇಕಾಗಿರಲಿಲ್ಲ. ಲೈಕ್ ಕಾಮೆಂಟ್ ಗಳ ಹೊಸ್ತಿಲು ದಾಟಿ  ಮೆಸ್ಸೆಂಜರ್ ಬಾಗಿಲು ತೆರೆದು ಬಂದ  ಸ್ನೇಹ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು. ಮಾತು, ನಗು, ಓಡಾಟ, ಗಾಸಿಪ್ ಎಲ್ಲವೂ ಮಳೆಗಾಲದಲ್ಲಿ  ದಬ ದಬನೆ ಧುಮ್ಮಿಕ್ಕುವ ಜಲಪಾತದಂತಿತ್ತು.  ಸುರಿಯುವ  ಸಂಭ್ರಮದಲ್ಲಿ  ಬೇಸಿಗೆ ಬಂತು

ಮೀ ಟೂ

ದಿನದಿನಕ್ಕೂ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ ಕ್ಷಣ ಕ್ಷಣಕ್ಕೂ ತೆಗೆದುಕೊಳುತ್ತಿರುವ ತಿರುವು ಮಾತ್ರ ಗೊಂದಲ ಹುಟ್ಟಿಸುತ್ತಿದೆ. ಬಳಸಿಕೊಳ್ಳುವಿಕೆ ಇವತ್ತಿಗೆ ಹೊಸದಲ್ಲ. ಘಾತುಕತನ ಅನ್ನೋದು ಅಂದಿನಿಂದಲೂ ಇದೆ. ಮುಂದುವರಿದ, ಅಭಿವ್ಯಕ್ತಿ ಸ್ವಾತಂತ್ರ್ಯ, ನನ್ನ ಬದುಕು ನನ್ನ ಇಚ್ಚೆ ಅನ್ನುವ ಈ ಕಾಲದಲ್ಲೂ ಇದೆ. ಹಾಗೆ ಹೇಳುವುದಾದರೆ ಈಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಇದೆಯಾ? ರಸ್ತೆಯಲ್ಲಿ ಹೋಗುವಾಗ, ಬಸ್ಸಿನಲ್ಲಿ ಕುಳಿತಾಗ, ಫಿಲಂ ಥಿಯೇಟರ್, ಶಾಲಾ ಕಾಲೇಜ್,  ಜನ ಜಂಗುಳಿ ಸೇರುವ ಕಡೆ ಕಾಮುಕರು ಇದ್ದೇ ಇರುತ್ತಾರೆ. ಅವರಿಗೆ ಆ ಕ್ಷಣಕ್ಕೆ ಹೆಣ್ಣು ಅನ್ನುವ ಒಂದು ಜೀವ ಸಾಕು. ಹಸಿದ ಹೆಬ್ಬುಲಿಗಳ ಹಾಗೆ ವರ್ತಿಸುತ್ತಾರೆ. ಕಾಮಾತುರಾಣಂ ನ ಭಯಂ ನ ಲಜ್ಜಾಂ ಅನ್ನೋದು ಅಕ್ಷರಶಃ ಅರಿವಿಗೆ ಬರುತ್ತದೆ. ಆದರೆ ಬಲಿಯಾದವರ ಪರಿಸ್ಥಿತಿ.. ಕೆಲವೊಮ್ಮೆ ಯಾರೂ ಎನ್ನುವುದು ಅರಿವಿಗೆ ಬರದೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಅಲ್ಲಿ ಆಗ ದನಿ ಎತ್ತಲಿಲ್ಲ ಎನ್ನುವುದು ಹಾಸ್ಪಾಸ್ಪದ ಮಾತ್ರವಲ್ಲ ಅಮಾನುವಿಯ ಕೂಡಾ. ಆದರೆ ಉದ್ಯೋಗದ ಸ್ಥಳದಲ್ಲಿ ಇಂಥ ಪರಿಸ್ಥಿತಿ ಎದುರಾದಾಗ ಅಲ್ಲಿ ವ್ಯಕ್ತಿ ಯಾರೆಂದು ಗೊತ್ತಿರುತ್ತದೆ. ಅನಿವಾರ್ಯತೆ ಹಾಗೂ ಅಸಹಾಯಕತೆ ಕೆಲವೊಮ್ಮೆ ಉಸಿರುಬಿಗಿ ಹಿಡಿದು ನೋಡಿಯೂ ನೋಡದಂತೆ ಇರುವ ಹಾಗೆ ಆಗುವ ಆಗುತ್ತದೆ ಎನ್ನುವುದು ಸತ್ಯವಾದರೂ ಉಸಿರು ಎತ್ತಬೇಕು ಎನ್ನುವುದು ಅಷ್ಟೇ ನಿಜ. ಆದರೆ ಅಲ್ಲಿ ಹಾಗೆ ಎತ್ತಿದ ಉಸಿರಿಗೆ ಶಕ್

ಜಸ್ಟ್ ಮಾತ್ ಮಾತಲ್ಲಿ

ಈ ಆಟೋದವರು ಸರಿಯಿಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಇದು ನಿಜವಾ ಎಂದು ಆಲೋಚಿಸಿದರೆ ಈ ಡಾಕ್ಟರ್ ಗಳು, ಇಂಜಿನಿಯರ್ ಗಳು, ಸಿನಿಮಾದವರು, ಕೊನೆಗೆ ಈ ಗಂಡಸರು ಸರಿಯಿಲ್ಲ ಅನ್ನುವ ಜನರಲ್ ಸ್ಟೇಟ್ಮೆಂಟ್ ಗಳು ಸದ್ದು ಮಾಡುತ್ತಲೇ ಇರುತ್ತದೆ. ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಿಗೂ ಅವರವರದೇ ಆದ ದೌರ್ಬಲ್ಯ ಇದ್ದೆ ಇರುವ ಹಾಗೆ ಒಳ್ಳೆಯತನವೂ ಇದ್ದೆ ಇರುತ್ತದೆ. ಯಾರೂ ಸಂಪೂರ್ಣ ಕೆಟ್ಟವರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಂಪೂರ್ಣ ಒಳ್ಳೆಯವರಾಗಿರಲೂ ಸಹ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕತೆಯಿರುತ್ತದೆ. ಅದರಲ್ಲಿ ಅನೂಹ್ಯ ತಿರುವುಗಳು ಇರುತ್ತವೆ. ನೋಡುವ, ಕೇಳಿಸಿಕೊಳ್ಳುವ ತಾಳ್ಮೆ, ಮನಸ್ಸು ನಮಗಿರಬೇಕು. ಅಲ್ಲೊಂದು ವೇವ್ ಲೆಂತ್ ಹೊಂದಿಕೆಯಾಗಬೇಕು. ಹೀಗೆ ಯೋಚಿಸುವಾಗ ಪಕ್ಕನೆ ತಿರುಮಲೇಶ್ ಸರ್ ಅವರ ಕವಿತೆ ನೆನಪಾಗುತ್ತದೆ. ಓದಿರಿ, ಬರೆಯಿರಿ ಚಿತ್ರಿಸಿರಿ ಹಾಡಿರಿ ಮುಟ್ಟಬೇಕು ಜನರನ್ನು ಮುಟ್ಟದಿದ್ದರೆ ನಿಷ್ಪ್ರಯೋಜಕ ಏನು ಮಾಡಿದರೂ... ಇಲ್ಲಿ ಮುಟ್ಟುವುದು ಎಂದರೆ ದೈಹಿಕವಾಗಿ ಮುಟ್ಟುವುದಲ್ಲ, ಅವರ ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ. ಹಾಗೆ ಮುಟ್ಟಿದಾಗ ಮಾತ್ರ ಅವರು ಬಿಚ್ಚಿಕೊಳ್ಳುತ್ತಾರೆ. ಹಾಗೆ ಬಿಚ್ಚಿಕೊಂಡಾಗ ಮಾತ್ರ ಅರ್ಥವಾಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಓದುವಾಗ ಈ ಮುಟ್ಟುವಿಕೆಯು ಅರಿವಿಗೆ ಬರುತ್ತದೆ. ನೋಟದಿಂದ, ಯಾವುದೋ ಒಂದು ವರ್ತನೆಯಿಂದ ಮನುಷ್ಯರನ್ನು ಸುಲಭವಾಗಿ ಅಳೆದು ಬಿಡುತ್

ಇಪ್ಪತೆಂಟು ಹಣತೆಗಳು.

ದೀಪಾವಳಿ ಬರುತ್ತಿದ್ದಂತೆ ಮನಸ್ಸಿನಲ್ಲಿ ಏನೋ ಪುಳಕ, ಸಂಭ್ರಮ. ಪಟಾಕಿ ಹೊಡೆಯಬಹುದು ಅನ್ನೋದು ಒಂದು ಕಾರಣವಾದರೂ ಅದಕ್ಕಿಂತಲೂ ಹೆಚ್ಚು ಅವ್ಯಕ್ತ ಆನಂದ ಕೊಡುತ್ತಿದ್ದದ್ದು ಬಲಿ ಪಾಡ್ಯಮಿಯಂದು ಗೋಧೂಳಿ ಸಮಯದಲ್ಲಿ ಗೋವಿಗೆ ಆರತಿ ಎತ್ತಿ ಮನೆ ತುಂಬಾ ಹಚ್ಚುತ್ತಿದ್ದ ಹಣತೆಗಳು. ಅವತ್ತು ಮಾತ್ರ ಕಣ್ಣು ಕೋರೈಸುವ ಬೆಳಕು ಇಲ್ಲದೆ ಇಡೀ ಮನೆ ಹಣತೆಯ ಬೆಳಕಲ್ಲಿ ಮಿಂದಿರುತಿತ್ತು. ಅಂಗಳದ ಕತ್ತಲ ಸೆರಗಿನಲ್ಲಿ ನಿಂತು ನೋಡುವಾಗಲಂತೂ ಮಂದ ಬೆಳಕಿನಲ್ಲಿ ಮನೆ ಅಪೂರ್ವವಾಗಿ ಕಾಣಿಸುತ್ತಿತ್ತು. ಮನಸಿಗೆ ಏನೋ ಅವ್ಯಕ್ತ ಆನಂದ. ದಿವ್ಯ ಸಂತೋಷ. ಬೆಳಕು ಅತಿಯಾದರೆ ಕಣ್ಣಿಗೆ ಚುಚ್ಚುತ್ತದೆ. ಬೇಕಾದದ್ದು ಬೇಡವಾದದ್ದು ಎಲ್ಲವೂ ಕಣ್ಣಿಗೆ ರಾಚಿ ಮನಸ್ಸಿನ ಚೀಲ ತುಂಬಿ ಭಾರವಾಗುತ್ತದೆ. ಕಡಿಮೆಯಾದರೆ ಯಾವುದೂ ಕಾಣಿಸುವುದಿಲ್ಲ, ಸ್ಪಷ್ಟವಾಗುವುದಿಲ್ಲ. ಈ ಮಂದ ಬೆಳಕು ಹಾಗಲ್ಲ ಏನು ಬೇಕೋ ಅದನ್ನ ಕಣ್ಣು ರೆಪ್ಪೆ ಹಿಗ್ಗಿಸಿ ಸ್ವಲ್ಪವೂ ಆಯಾಸವಿಲ್ಲದೆ ತುಂಬಿ ಕೊಳ್ಳುವ ಹಾಗೆ ಮಾಡುತ್ತದೆ. ಗರ್ಭಗುಡಿಯಲ್ಲಿ ನಂದಾದೀಪದ ಬೆಳಕಿನಲ್ಲಿ ಶೋಭಿಸುವ ವಿಗ್ರಹ ಮನಸ್ಸಿಗೆ ದಿವ್ಯತೆ ತುಂಬುವುದು, ಶಾಂತತೆ ಆವರಿಸುವುದು ಇದೇ ಕಾರಣಕ್ಕೆನೋ.. ಕೋರೈಸುವ ಬೆಳಕು ಕಣ್ಣು ಚುಚ್ಚಬಹುದೇ ವಿನಃ ಒಳಕ್ಕೆ ಇಳಿಯುವುದಿಲ್ಲ, ಇಳಿಯದೇ ಇದ್ದದ್ದು ಉಳಿಯುವುದಿಲ್ಲ. ತೀರ್ಥರಾಮ ವಳಲಂಬೆಯವರು ಬರೆದ ಇಪ್ಪತ್ತೆಂಟು ಹಣತೆಗಳು ಎಂಬ ಪುಸ್ತಕವೂ ಹೀಗೆ.  ಹಣತೆಯ ಬೆಳಕಿನಂತೆ ಸೌಮ್ಯ, ಶಾಂತವಾದರೂ ಓದುತ್ತ