Posts

Showing posts from June, 2017

ಚಂದ್ರವಳ್ಳಿಯ ಗುಹೆ

ಬೆಳಕಿಗೆ ಬೆನ್ನಾಗದೆ ಈ ಚಂದ್ರವಳ್ಳಿಯ ಗುಹೆ ತೆರೆದುಕೊಳ್ಳುವುದಿಲ್ಲ. ಅದರ ಬಗ್ಗೆ ಸಮಾಧಾನಕರವಾದ ಮಾಹಿತಿ ಸಿಕ್ಕದಿದ್ದರೂ ಮನಸ್ಸಿಗೆ ಸಂತೋಷ, ಬೆರಗು ತುಂಬಿದ್ದು ಮಾತ್ರ ನಿಜ. ತಲೆಬಾಗದ ಹೊರತು ಒಳಗೆ ಪ್ರವೇಶವಿಲ್ಲ. ಗುರುವಿಲ್ಲದೆ ಗುರಿದೊರಕದು ಅನ್ನುವಂತೆ ಗೈಡ್ ಇಲ್ಲದೆ ಇದರೊಳಗೆ ಸಾಗಲಾರೆವು. ಬೆಳಕಿಗೆ ಅಭ್ಯಾಸವಾದ ಕಣ್ಣು ದೇಹ ಕತ್ತಲಿಗೆ ತೆರೆದುಕೊಳ್ಳುತ್ತಿದ್ದಂತೆ ಮುಗ್ಗರಿಸುತ್ತದೆ. ಒಮ್ಮೆ ಅಭ್ಯಾಸವಾಯಿತೆಂದು ಕೊಳ್ಳಿ ಕತ್ತಲಿನಷ್ಟು ಹಿತ ಬೇರೊಂದಿಲ್ಲ. ಅಲ್ಲಿ ಬೆಳಕಿನ ಮೋಸ, ತಟವಟ, ಕ್ರೌರ್ಯ, ಪ್ರೀತಿ ಉಹೂ ಯಾವುದೂ ಕಾಣುವುದಿಲ್ಲ.ಬೆಳಕಿನಲ್ಲಿ ಮೋಸ ಹೋಗುವಷ್ಟು ಸುಲಭವಾಗಿ ಇಲ್ಲಿ ಏಮಾರಲ ಾಗುವುದಿಲ್ಲ . ಹಾಗಾಗಿ ಭಯವಿಲ್ಲ. ನಾವು ನಾವಾಗೇ ಇರಲು ಕತ್ತಲಿಗಿಂತ ಪ್ರಶಸ್ತ ಜಾಗ ಇನ್ಯಾವುದಿದೆ. ಆದರೆ ಇವೆಲ್ಲಾ ಸಾಧ್ಯವಾಗಬೇಕಾದರೆ ಕಣ್ಣಿಗೆ ಕತ್ತಲು ಅಭ್ಯಾಸವಾಗಬೇಕು. ತಡುವುತ್ತಾ, ಎಡುವುತ್ತಾ ಅಲ್ಲಲ್ಲಿ ಉಸಿರುಗಟ್ಟಿಸಿಕೊಳ್ಳುತ್ತಾ ಮುಂದೆ ಸಾಗಿದಷ್ಟೂ ಗುಹೆ ವಿಸ್ತಾರವಾಗಿ ತೆರೆದುಕೊಳ್ಳುತ್ತಲೇ ಹೋಗುತ್ತದೆ. ಕತ್ತಲಿಗೆ ಅಷ್ಟು ಸುಲಭವಾಗಿ ಹೊಂದದ ಬದುಕು ಮೊಬೈಲ್ ಬೆಳಕು ಬೇಡುತ್ತದೆ. ದಾರಿ ನಿಚ್ಚಳವಾದರೂ ಸುಲಭವಲ್ಲ. ಅಂಕು, ಡೊಂಕು ತಿರುವುಗಳು ಕಳೆದುಹೋಗುವ ಹಾಗೆ ಮಾಡುತ್ತದೆ.ಪ್ರತಿ ಹೆಜ್ಜೆಗೂ ಒಂದೊಂದು ರಹಸ್ಯವಿದೆಯೇನೋ ನಾವದನ್ನು ತುಳಿದು ಸಾಗುತ್ತಿದ್ದೆವೇನೋ ಅನ್ನೋ ಭಾವ. ಜಗತ್ತಿನ ಎಲ್ಲಾ ರಹಸ್ಯಗಳು ಹಾಗಿದ್ದಾಗಲೇ ಬದುಕು

ಅಹಿಯೂ, ಚಂದ್ರಿಯ ಮಗಳೂ

Image
ನಾನು ಭೂಮಿಗಿಳಿದ ಹೊತ್ತಲ್ಲೇ ಕೊಟ್ಟಿಗೆಯ ಚಂದ್ರಿಗೂ ಪ್ರಸವದ ಸಡಗರ. ಕೊಟ್ಟಿಗೆಯಲ್ಲಿ ಗಂಡು ಹುಟ್ಟಿದರೆ ಮನೆಯಲ್ಲಿ ಹೆಣ್ಣು ಅನ್ನೋ ನಂಬಿಕೆ ಪ್ರಚಲಿತ ಆಗ. ಆದ್ರೆ ಅಮ್ಮ ಚಂದ್ರಿ ಇಬ್ಬರೂ ಹೆತ್ತಿದ್ದು ಹೆಣ್ಣೇ... ಹುಟ್ಟಿದ ಮೇಲೆ ಈ ಭಾಂಧವ್ಯವಾ, ಹುಟ್ಟುವ ಮೊದಲೇ ಶುರುವಾಗಿತ್ತಾ ಅನ್ನೋ ಪ್ರಶ್ನೆಗೆ ನನ್ನಲ್ಲಿ ಇನ್ನೂ ಉತ್ತರವೇ ಇಲ್ಲ... ಬಾಲ್ಯದ ಆಟ ಶುರುವಾಗಿದ್ದೆ ಅವುಗಳ ಜೊತೆ. ನನ್ನಮ್ಮನ ಹಾಲಿನ ಜೊತೆ ಜೊತೆಗೆ ಚಂದ್ರಿಯೂ ಹಾಲುಡಿಸಿದ್ದಳು. ನನ್ನೊಂದಿಗೆ ಬೆಳೆದ ಕೆಂಪಿಗೂ ನಂಗೂ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು. ನನ್ನ ಬಹುಪಾಲು ಸಮಯ ಅವುಗಳ ಜೊತೆಗೆ. ಬೆಳಿಗ್ಗಿನ ಸುಪ್ರಭಾತ ಶುರುವಾಗು ತ್ತಿದ್ದದ್ದೇ ಅವುಗಳ ಅಂಬಾ ದನಿಯಿಂದ. ಅಜ್ಜಿಯ ಕೆಲಸ ಆರಂಭವಾಗುತ್ತಿದ್ದದ್ದೆ ಅವುಗಳಿಗೆ ಗಂಜಿ ಕೊಡುವುದರಿಂದ. ಕರೆದು ತಂದ ಹಾಲು ಹದವಾಗಿ ಇದ್ದಿಲ ಒಲೆಯಲ್ಲಿ ಕಾಯಿಸುವಾಗ ಬರುವ ಪರಿಮಳಕ್ಕೆ ಹಸಿವು ರುದ್ರತಾಂಡವವಾಡುತ್ತಿತ್ತು. ಅವುಗಳನ್ನು ಮೇಯಲು ಬಿಡೋದು ಒಂದು ಸಂಭ್ರಮ. ಪುಟ್ಟ ಕರುಗಳನ್ನೆಲ್ಲಾ ಕಟ್ಟಿ ಅವನ್ನು ಅಜ್ಜ ಬಿಡುತ್ತಿದ್ದರೆ ಕರುಗಳನ್ನ ಅಂಗಳಕ್ಕೆ ಕರೆದೊಯ್ಯುವ ಸಂಭ್ರಮ ನಮ್ಮದು. ಕೊಟ್ಟಿಗೆಯ ಬಾಗಿಲು ಮುಚ್ಚುತ್ತಿದ್ದಂತೆ ಅವುಗಳನ್ನ ಅಂಗಳಕ್ಕೆ ಕರೆದು ತಂದು ಅವುಗಳ ಜೊತೆ ಕುಣಿದು ಕುಪ್ಪಳಿಸಿ ಅಲ್ಲೇ ಹುಲ್ಲಿನ ಮೇಲೆ ನಿದ್ದೆಗೆ ಶರಣಾಗುತ್ತಿದ್ದದ್ದು ಎಷ್ಟೋ ಬಾರಿ. ಮಧ್ಯಾನ ನಮ್ಮ ಊಟ ಮುಗಿಯುತ್ತಿದ್ದಂತೆ ಅಜ್ಜಿ ಅನ್ನವನ್ನ

ಚಕ್ರೇಶ್ವರಿ

ಸಂಜೆ ಅಹಿಯನ್ನು ಯೋಗ ಕ್ಲಾಸ್ ಗೆ ಬಿಟ್ಟ ಮೇಲೆ ಅವಳು ಬರುವ ತನಕ ಏನ್ಮಾಡೋದು ಅಂತ ಯೋಚಿಸುತ್ತಾ ಮೆಟ್ಟಿಲ ಮೇಲೆ ಕುಳಿತವಳನ್ನು ನೋಡಿದ ಸೆಕ್ಯೂರಿಟಿ ಮೇಡಂ ಇಲ್ಲಿ ತುಂಬಾ ಸೊಳ್ಳೆ ಇದೆ ಒಳಗೆ ಚೇರ್ ಹಾಕಿ ಫ್ಯಾನ್ ಹಾಕಿದಿನಿ ಅಲ್ಲೇ ಕುಳಿತುಕೊಳ್ಳಿ ಅಂದ್ರು. ಅವರಿಗೊಂದು ಕೃತಜ್ಞತೆಯ ಮುಗುಳ್ನಗೆ ಹರಿಸಿ ಒಳಗೆ ಹೋಗಿ ಕುಳಿತವಳು ಚಕ್ರೇಶ್ವರಿಯನ್ನು ಕೈಗೆತ್ತಿಕೊಂಡೆ. ಕೊನೆಯ ಪುಟ ಮಗಚಿ ತಲೆಯೆತ್ತುವ ವೇಳೆಗೆ ಅಹಿ ಬಂದು ಕೊರಳು ತಬ್ಬಿದ್ದಳು. ಶ್ರೀಚಕ್ರ ಆರಾಧನೆಯ ಮಹತ್ವವನ್ನು ಸಾರುವ ಈ ಕಾದಂಬರಿ ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತದೆ. ಚಕ್ರದ ಆವರಣದೊಳಗೆ ನಮ್ಮನ್ನೂ ಸೆಳೆದುಕೊಳ್ಳುತ್ತಾ, ಅಲ್ಲಲ್ ಲಿ ಮೈ ನವಿರೇಳುವಂತೆ ಮಾಡುತ್ತಾ, ಉಸಿರು ಬಿಗಿಹಿಡಿಯುವಂತೆ , ಕಣ್ಣಿರು ಅಭಿಷೇಕ ಮಾಡುವಂತೆ ಒಂದು ಭಾವಸಾಗರದಲ್ಲಿ ತೇಲಿಸುತ್ತಾ ದಡ ತಲುಪಿಸುತ್ತದೆ. ಒಂದು ಸುಧೀರ್ಘ ಪಯಣ ಮುಗಿಸಿಬಂದ ಆಯಾಸ, ಹೊಸ ಹುಮ್ಮಸ್ಸು, ಏನೋ ಅರಿಯದ ಭಾವತೀವ್ರತೆ ಕಾಡುತ್ತದೆ. ಶ್ರೀಚಕ್ರ ತಾನೇ ತಾನಾಗಿ ಬರಬೇಕೆ ಹೊರತು ಕೇಳಿಪಡೆಯುವಂತಿಲ್ಲ ಅನ್ನೋದನ್ನು ಚಿಕ್ಕಂದಿನಿಂದ ಕೇಳಿದ್ದೇ. ತಾಯಿ ಒಲಿದರೆ ಕರುಣಾಸಾಗರಿ, ಇಲ್ಲವಾದರೆ ಪ್ರಳಯ ಭಯನ್ಕರಿ ಅಂತ ಲಲಿತಾ ಸಹಸ್ರನಾಮ ಪುಸ್ತಕ ಕೈ ಗೆತ್ತಿಕೊಂಡಾಗ ಹಿರಿಯರೊಬ್ಬರು ಎಚ್ಚರಿಸಿದ್ದರು. ಅವತ್ತು ಕುತೂಹಲ, ಆಶ್ಚರ್ಯ ಎರಡೂ ಆಗಿತ್ತು. ಪ್ರಶ್ನಿಸಲು ಭಯವೂ. ನಂತರ ಬದುಕಿನೊಂದಿಗೆ ಸಮೀಕರಿಸಿಕೊಂಡಾಗ ಅರ್ಥವಾಗಿತ್ತು. ಯಾವ

ಒನಕೆ ಶೋಭವ್ವ

ಹದಿನೈದು ಇಪ್ಪತ್ತು ಮನೆಗಳಿದ್ದ ನಮ್ಮೂರು ಇದ್ದಿದ್ದು ವಾರಾಹಿ ನದಿಯ ಮಡಿಲಲ್ಲಿ.ಎದುರಿಗೆ ಹರಡಿದ್ದ ವಿಶಾಲ ಗದ್ದೆಯ ಅಂಚಿನಲ್ಲಿ ಸುಮ್ಮನೆ ಹರಿಯುತ್ತಿದ್ದ ಹಳ್ಳಕ್ಕೆ ಮಳೆಗಾಲ ಬರುತ್ತಿದ್ದಂತೆ ಎಲ್ಲಿಲ್ಲದ ಕೊಬ್ಬು. ಎಲ್ಲಿಲ್ಲಿಂದಲೋ ಬಂದು ಸೇರುತ್ತಿದ್ದ ತೊರೆಗಳನ್ನು ಸೇರಿಸಿಕೊಂಡ ಸಂಭ್ರಮದಲ್ಲಿ ದಡವನ್ನೂ ಮೀರಿ ಗದ್ದೆಗಳ ಅತಿಕ್ರಮಣ ಮಾಡಿ ಬೀಗುತ್ತಿತ್ತು. ದಾರಿಗಳನ್ನು ನುಂಗಿ ಕೇಕೆಹಾಕುತ್ತಿತ್ತು.ಹಾಗಾಗಿ ಮಳೆಗಾಲ ಬರುವ ಮೊದಲೇ ಎಲ್ಲರೂ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡು ಅವಳ ಕೊಬ್ಬಿಗೆ ತಣ್ಣನೆಯ ನಗುಬೀರಿ ಬಿಸಿಕಾಫಿ ಹೀರುತ್ತಿದ್ದರು. ಪೇಟೆಗೆ ಹೋಗಬೇಕಾದರೆ ಸುಮಾರು ಐದು ಮೈಲಿ ನಡೆಯಬೇಕಾಗಿದ್ದರಿಂದ ತೀರಾ ಅನಿವಾರ್ಯವಾಗದ ಹೊರತು ಯಾರೂ ಹೋಗುತ್ತಿರಲಿಲ್ಲ. ಆದಷ್ಟು ತಾವೇ ಬೆಳೆದ ಬೆಳೆ  ಉಪಯೋಗಿಸುತ್ತಾ, ಭತ್ತವನ್ನು ಕುಟ್ಟಿಕೊಂಡು ಅಕ್ಕಿ ಮಾಡಿಕೊಳ್ಳುತ್ತಾ, ತಮ್ಮ ಕೆಲಸ ತಾವೇ ಮಾಡಿಕೊಳ್ಳುವುದನ್ನು ಕಲಿತಿದ್ದರು. ಬೇಸಿಗೆ ಬರುವ ಮುನ್ನ ಸೀಗೆಕಾಯಿ, ಅಂಟುವಾಳ ಕಾಯಿ ಅರಿಸಿನ ಹೀಗೆ ಬೇಕು ಬೇಕಾದದನೆಲ್ಲ ಕುಟ್ಟಿಕೊಂಡು ನಾಲ್ಕೈದು ತಿಂಗಳ ಮಳೆಗಾಲಕ್ಕೆ ಸಿದ್ಧರಾಗುತ್ತಿದ್ದರು. ಈಗಿನ ಅರ್ಥದಲ್ಲಿ ಅದು ಅಕ್ಷರಶಃ ಕ್ವಾರನ್ಟೈನ್. ಇಂತಿರ್ಪ ಒಂದು ಮಳೆಗಾಲದ ಮುನ್ನ ಕಣದ ಅಂಚಿನಲ್ಲಿದ್ದ   ಒರಳುಕಲ್ಲಿನ ಸುತ್ತ ನಾನು ಏಳುವ ಮೊದಲೇ ಊರಿನ ಹೆಂಗಳೆಯರ ಕಲರವ ಆರಂಭವಾಗಿತ್ತು. ಕಣ್ಣುಜ್ಜುತ್ತಲೇ ಬಂದವಳಿಗೆ ಒನಕೆಯನ್ನು ಹಿಡಿದು ರಾಗವಾಗಿ ಹ

ಅಹಿಯ ಅಡುಗೆಯೂ, ಬೆಚ್ಚಿಬಿದ್ದ ಅಮ್ಮಳೂ

ಒಂದೊಂದು ಸಲ ಜಗತ್ತಿನ ಆಲಸ್ಯತನವೆಲ್ಲಾ ನನ್ನನ್ನೇ ಆವರಿಸಿಕೊಳ್ಳುವ ಹಾಗಾಗುತ್ತೆ. ಹಾಗಾದಗೆಲ್ಲ ಏನನ್ನೂ ಮಾಡಲು ಮನಸ್ಸಾಗದೇ ಸೋಮಾರಿತನವನ್ನೇ ಹೊದ್ದು ಮಲಗುತ್ತೇನೆ. ಅಂತಹದೊಂದು ಸೋಮಾರಿತನವನ್ನು ಹೊದ್ದು ಮಲಗುವ ಮುನ್ನ ಗಂಡನಿಗೆ ಫೋನ್ ಮಾಡಿ ಇವತ್ತು ಏನೂ ಮಾಡೋಲ್ಲ ಅಡುಗೆಯನ್ನೂ ಸಹ ಎಂದು ಘೋಷಿಸಿ ಕುಳಿತಿದ್ದೆ. ಇನ್ನೂ ಮೂರು ವರ್ಷದ ಮಗು ಅಹಿ. ತನ್ನ ಪಾಡಿಗೆ ಏನನ್ನೋ ಅಲ್ಲೇ ಕುಳಿತು ಆಡುತ್ತಿದ್ದ ಮಗು ನನ್ನ ಮಾತು ಮುಗಿಯುತ್ತಿದ್ದಂತೆ ಅಲ್ಲಿಂದ ಎದ್ದು ಅಮ್ಮಾ ನಾನು ಅಗ್ಗೆ ಮಾತೀನಿ ಅಂತು. ಅವಳ ಕಿಚನ್ ಸೆಟ್ ಹಿಡಿದು ಗಂಟೆಗಟ್ಟಲೆ ಆಟ ಆಡುವುದಲ್ಲದೆ ನನಗೂ ಪುಟ್ಟ ಪ್ಲೇಟ್ ಒಂದು ಚಮಚ ಹಿಡಿದು  ಬಂದು ಅಮ್ಮಾ ತಿನ್ನು ಅಂತ ಕೊಡೋದು ನಾನು ತಿನ್ನೋದು ಅಭ್ಯಾಸವಾಗಿದ್ದ ನಾನು ಅವಳ ಪಾಡಿಗೆ ಆಡಲಿ ಅಂತ ಹೂ ಅಂದೇ. ಹಾಗಂದು ಎಂಥ ತಪ್ಪು ಮಾಡಿದೆ ಅಂತ ಅರ್ಥವಾಗಿದ್ದು ಯಂಡಮೂರಿ ಅವರ ಪ್ರಕಾರ ಹೇಳುವುದಾದರೆ 30 ನಿಮಿಷ 20 ಸೆಕೆಂಡ್ ಕಳೆದ ಮೇಲೆಯೇ.... ಮಲಗಲು ಬೇಜಾರೆನಿಸಿ ಯಾವುದೋ ಬುಕ್ ಹಿಡಿದು ಕುಳಿತು ಹತ್ತೇ ನಿಮಿಷಕ್ಕೆ ಚೇರ್ ಎಳೆಯುವ ಸೌಂಡ್ ಕೇಳಿಸಿ ಕಂದಾ ಏನದು ಅಂದೇ ಅಲ್ಲೇ ಕೂತು. ಏನಿಲ್ಲ ಅಮ್ಮಾ ಅಂತು ಮುಗ್ಧವಾಗಿ. ಸರಿ ಮತ್ತೆ ಪುಸ್ತಕದಲ್ಲಿ ಮುಳುಗಿದೆ. ಸ್ವಲ್ಪ ಹೊತ್ತಿಗೆಲ್ಲಾ ಬಂದ ಕೂಸು ಅಮ್ಮಾ ಅಗ್ಗೆ ಮಾದಿದಿನಿ, ನೀನು ಆರಾಮಾಗಿರು ಅಂತು. ನಕ್ಕು ಅವಳ ಕೆನ್ನೆಗೆ ಮುತ್ತಿಟ್ಟವಳಿಗೆ ಕಾಫಿ ಕುಡಿದರೆ ಸ್ವಲ್ಪ ಸರಿಹೋಗಬಹುದು ಅಂತ

ಕೋಟೆಯೊಳಗೆ ಒಂದು ಸುತ್ತು.

ಕೋಟೆಗಳನ್ನು ನೋಡುವುದೆಂದರೆ ಬದಕನ್ನ ಗಮನಿಸಿದಂತೆ ಅನ್ನಿಸಲು ಶುರುವಾಗಿದೆ. ಬದುಕಿನಂತೆಯೇ ಅವೂ ಸುಲಭಕ್ಕೆ ದಕ್ಕುವುದಿಲ್ಲ.ಕಣ್ಣೋಟಕ್ಕೆ ಸಿಲುಕುವುದಿಲ್ಲ. ತಕ್ಷಣಕ್ಕೆ ಅರ್ಥವಾಗುವುದಿಲ್ಲ.  ಸಾಗಿದಷ್ಟೂ ಸಾಗುವ ದಾರಿಯದು. ಅರ್ಥಮಾಡಿಕೊಂಡಷ್ಟೂ ನಿಗೂಢ. ಪ್ರತಿ ಕಲ್ಲೂ, ಪ್ರತಿ ತಿರುವು ಅಷ್ಟೇಕೆ ಪ್ರತಿ ಹೆಜ್ಜೆಯೂ ಒಂದೊಂದು ಕತೆ ಹೇಳಬಹುದು. ದುರ್ಗದ ಕೋಟೆಯ ಬಳಿಗೆ ಹೋಗುವವರೆಗೂ ಅದೊಂದು ಪ್ರವಾಸವಷ್ಟೇ ಅನ್ನಿಸಿತ್ತಾ ತ.ರಾ.ಸು ಓದದೇ ಹೋಗಿದ್ದರೆ ಹಾಗೆ ಅನ್ನಿಸುತ್ತಿತ್ತೇನೋ ಗೊತ್ತಿಲ್ಲ. ಓದಿದ ಮೇಲೆ ಕೋಟೆಯೆಂದರೆ ಹೊದ್ದು ಮಲಗಿರುವ ಇತಿಹಾಸವೆನ್ನಿಸುತ್ತದೆ. ಪ್ರತಿಯೊಂದು ಕಲ್ಲಿಗೂ ತನ್ನದೇ ಆದ ಕತೆಯಿದೆ, ಮಿಡಿವ ಮೂಕ ಮನಸ್ಸಿದೆ, ಹೇಳುವ ಕಾತುರವಿದೆ, ಕೇಳುವ ಕಿವಿಗಾಗಿ ಕಾಯುವ ತಾಳ್ಮೆಯಿದೆ, ಮೌನವಾಗಿಯೇ ನಿಲ್ಲುವ ಧೀ ಶಕ್ತಿಯಿದೆ. ನಿರ್ಲಿಪ್ತವಾಗಿ ನೋಡುವ ಪ್ರಬುದ್ಧತೆಯಿದೆ ಅನ್ನಿಸುತ್ತದೆ. ಹೋಗುವ ಮುನ್ನವೇ ಭಾವ ತೀವ್ರತೆಯಿತ್ತು.  ಒಳಗೆ ಕಾಲಿಡುತ್ತಿದ್ದಂತೆ ಮನಸ್ಸು ಬಾಗಿದ್ದಂತೂ ನಿಜ. ಅದರ ಭವ್ಯತೆಯೆದರು ನಾನೆಷ್ಟು ಸಣ್ಣವಳು ಅನ್ನಿಸಿದ್ದಂತೂ ಸತ್ಯ. ಕೋಟೆಯನ್ನು ಪ್ರವೇಶಿಸುವ ಮೊದಲು ಕಾಣಿಸುವುದೇ ಹಾವಿನ ಚಿತ್ರ. ದ್ವೇಷಕ್ಕೆ ಅನ್ನೋದಕ್ಕಿಂತ ಹಠಕ್ಕೆ ಹಾವು ಉತ್ತಮ ಉದಾಹರಣೆಯೇನೋ ಅನ್ನಿಸುತ್ತದೆ. ಇಡೀ ಕೋಟೆಯ ದಾರಿಯೇ ಹಾಗೆ ಹಾವಿನ ಚಲನೆಯಂತೆ ಅಂಕುಡೊಂಕಾಗಿ ಯಾವುದನ್ನೂ ಬಿಚ್ಚಿಡದೆ ಮುಂದೆ ಹೋದ ಹೊರತೂ ಅರ್ಥವಾಗದೆ ಒಂದೇ ಹಿಡಿತಕ್ಕ

ಅಜ್ಜಿಯ ಬತ್ತಿ

ಮಧ್ಯಾನದ ಊಟ ಮುಗಿಯುತ್ತಿದ್ದ ಹಾಗೆ ಅಡುಗೆಮನೆ ಸ್ವಚ್ಛ ಮಾಡಿ ಒಂದು ಚಾಪೆಯನ್ನು ಎಳೆದುಕೊಂಡು ಕೈ ಯನ್ನೇ ದಿಂಬಾಗಿಸಿ ಮಲಗೋದು ಅಜ್ಜಿಯ ಯಾವತ್ತಿನ ರೂಡಿ. ಮಂಚದ ಮೇಲೆ ಮಲಗಬಾರದೇನೆ ಅಂದ್ರೆ ಬೇಡಾ ಕಣೆ ಹಾಸಿಗೆ ಮೈಲಿಗೆ ಆಗುತ್ತೆ  ಆಮೇಲೆ ಬತ್ತಿ ಮಾಡೋಕೆ ಆಗೋಲ್ಲ ಅಂತ ಅವಳು ಅನ್ನೋದು, ಒಹ್ ಭಾರಿ ಮಡಿ ನೋಡು ನಿನ್ನದು ಅಂತ  ನಾನು ಬೈಯೋದು ಅವಳು ಅದನ್ನ ಕೇಳ್ತಾ ನಿದ್ದೆ ಮಾಡೋದು ದಿನಚರಿಯ ಅವಿಭಾಜ್ಯ ಸಂಗತಿಗಳಲ್ಲೊಂದು. ಬೆಳಿಗ್ಗೆಯಿಂದ ಒಂದೇ ಸಮನೆ ಕೆಲಸದಲ್ಲಿ ಮುಳುಗುವ ಅವಳ ಈ ಮಧ್ಯಾನದ ಒಂದು ಗಂಟೆ ವಿಶ್ರಾಂತಿಯ ಸಮಯ. ಒಂದು ಪುಟ್ಟ ಗುಬ್ಬಿ ನಿದ್ದೆ ಮುಗಿಸಿ ಏಳುವ ಅವಳು ಎಲ್ಲರಿಗೂ ಕಾಫಿ ಕೊಟ್ಟು ತಲೆಬಾಚಿಕೊಂಡು ಮೊಣಕಾಲನಿಂದಲೂ ಕೆಳಗೆ ಬರುವ ಜಡೆಯನ್ನು ಕೈಯಲ್ಲಿ ಸುರುಳಿ ಸುತ್ತಿ ಒಂದು ತುರುಬು ಹಾಕಿ ಒಮ್ಮೆ ಕುಂಕುಮವನ್ನು ಸರಿ ಮಾಡಿಕೊಂಡಳು ಎಂದರೆ ಅಲ್ಲಿಗೆ ಅಲಂಕಾರ ಮುಗಿಯಿತು ಎಂದರ್ಥ.  ತಾನೂ ಕಾಫಿ    ಕುಡಿದು ಅಲ್ಲೇ ಗೂಡಿನಲ್ಲಿರುವ ಹತ್ತಿಯ ಬುಟ್ಟಿಯನ್ನು ಎಳೆದುಕೊಂಡು ಕುಳಿತಳೆಂದರೆ ಒಂದಷ್ಟು ಹೊತ್ತು ಅವಳದೇ ಸಮಯ ಅವಳದೇ ಲೋಕ. ಅಂಗಳದ ಬದಿಯಲ್ಲೋ, ಹಿತ್ತಿಲ ಮೂಲೆಯಲ್ಲೋ ಒಂಟಿಯಾಗಿ ನಿಂತಿರುತಿದ್ದ ಹತ್ತಿ ಗಿಡ ಹೂ ಬಿಟ್ಟು ಮೈತುಂಬಾ ಹಸಿರು ಕಾಯಿ ಬಿಟ್ಟರೆ ಇವಳ ಮುಖದಲ್ಲೂ ಅದೇನೋ ಸಂತೃಪ್ತ ಭಾವ. ಕಾಯಿ ಬೆಳೆದು ಅರಳಿ  ಒಳಗಿನ ಹತ್ತಿ ಇಷ್ಟಿಷ್ಟೇ ಹಣಕಿ ನೋಡುವಾಗ ಅವಳ ಕಾಲುಗಳಿಗೆ ಸಂಭ್ರಮ. ಅದನ್ನೆಲ್ಲಾ ಬಿಡಿಸಿ ಒಣಗಿಸಿ

ಸೇರದ ಪತ್ರವೂ ಬಾರದ ಪೋಸ್ಟ್ ಮ್ಯಾನ್

ಗಾಡಿ ನಿಲ್ಲಿಸಿ ಹೊರಡುವಾಗ ಬಂದ ಸೆಕ್ಯೂರಿಟಿ ನಿಂಗೊಂದು ಕೊರಿಯರ್ ಇದೆ ತಗೊಮ್ಮಾ ಅಂದ್ರು. ನಂಗಾ ಎಂದು ಕೊಂಚ ಅಚ್ಚರಿಯಲ್ಲೇ ಸ್ವಲ್ಪ ಅನುಮಾನದಲ್ಲೇ ತೆಗೆದುಕೊಂಡು ನೋಡಿದೆ, ಹೌದು ನನ್ನದೇ ವಿಳಾಸ ಹೊತ್ತ ಪುಟ್ಟ ಪ್ಯಾಕ್. ಸ್ಪರ್ಶಿಸುತ್ತಿದ್ದಂತೆ ಮನಸ್ಸು ಬಾಲ್ಯಕ್ಕೆ ಓಡಿತು. ಹಿಂದೆಲ್ಲಾ ಸೈಕಲ್ ಬೆಲ್ ಅನ್ನೋದು ಒಲಂಪಿಕ್ ಸ್ಪರ್ದೆಯ ಸದ್ದಿದ್ದಂತೆ. ಮಾಡುವ ಕೆಲಸವನ್ನು ಬಿಟ್ಟು ಓಡುತ್ತಿದ್ದೆವು. ಬಾಗಿಲಲ್ಲಿ ಕಾಣಿಸುವ ಪೋಸ್ಟ್ಮನ್ ಥೇಟ್ ದೇವದೂತನಂತೆ ಕಾಣಿಸುತ್ತಿದ್ದ. ಅವನ ಹೆಗಲಿನ ಚೀಲವೋ ಹಲವು ಭಾವಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟು ಕೊಂಡ ನಿಶ್ಚಲ ಸಮುದ್ರ. ಆ ಚೀಲದೊಳಕ್ಕೆ ಕೈ ಹಾಕಿ ಅವನು ತೆಗೆಯುವುದನ್ನೇ ಕಾತುರದಿಂದ ಕಾಯುತ್ತಿದ್ದ ನಾವು ಸಿಕ್ಕಿದೊಡನೆ ಮಾಡುವ ಮೊದಲ ಕೆಲಸ ಅದು ಯಾರಿಗೆ ಎಂದು ನೋಡುವುದು. ಬರುವ ಪ್ರತಿ ಪತ್ರದ ಬರಹವೂ ಪರಿಚಿತವಾದರೂ ಅದನೊಮ್ಮೆ ಹಿಂದೆ ತಿರುಗಿಸಿ ನೋಡಿ ಮತ್ತೊಮ್ಮೆ ಬರೆದವರು ಯಾರು ಎಂದು ಕನ್ಫರ್ಮ್ ಮಾಡಿಕೊಳ್ಳುವುದರಲ್ಲೂ ಅದೇನೋ ಸಂಭ್ರಮ. ಅದೆಷ್ಟೇ ಆತುರವಿದ್ದರೂ ಒಮ್ಮೆಗೆ ಒಡಿಯುವಹಾಗಿಲ್ಲ. ಓಡಿ ಬಂದು ಒಂದು ಜಾಗದಲ್ಲಿ ಕುಳಿತುಕೊಂಡು ಅದನ್ನು ನಿಧಾನವಾಗಿ ಇಷ್ಟಿಷ್ಟೇ ಬಿಡಿಸುತ್ತಾ ಸಂಪೂರ್ಣವಾಗಿ ತೆರೆಯುವುದು ಒಂದು ಕಲೆ. ಇನ್ನು ಒಂದು ಅಕ್ಷರವನ್ನೂ ಭರಿಸಲಾರೆ ಅನ್ನೋ ತುಂಬು ಗರ್ಭಿಣಿ ಆ ಪತ್ರಗಳು. ಅಕ್ಕ ಪಕ್ಕ ಕೊನೆಗೆ ಮಡಿಸುವ ಜಾಗದಲ್ಲೂ ಅಕ್ಷರಗಳು ಅತಿಕ್ರಮಣ ಮಾಡಿ ಆಕ್ರಮಿಸಿಕೊಂಡು ಬಿಡು

ನಂಬಿಕೆಯೂ ಗರಿಕೆಯ ಮಾಲೆಯೂ

ಪ್ರತಿದಿನ ಗರಿಕೆಯನ್ನು ಕೂಯ್ದು ಮಾಲೆ ಕಟ್ಟಿ ಗಣಪತಿಗೆ ಹಾಕುವುದು ಜಯತ್ತೆಯ ದೈನಂದಿನ ಕಾಯಕಗಳಲ್ಲಿ ಒಂದು. ಸಮಯ ಬದಲಾದರೂ ಕೆಲಸ ಮಾತ್ರ ಬದಲಾಗುತ್ತಿರಲಿಲ್ಲ. ಅದನ್ನೊಂದು ವ್ರತದಂತೆ ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಎಲ್ಲೆಲ್ಲೋ ಹುಡುಕಿ ಕೊನೆಗೆ ಒಂದು ಮುಷ್ಟಿಯಷ್ಟಾದರೂ  ಗರಿಕೆ ಕುಯಿದು ಸಂತೃಪ್ತಿಯಿಂದ ಮನೆಯ ಕಡೆ ನಡೆಯುತ್ತಿದ್ದರು. ಕೆಲವೊಮ್ಮೆ ಅವರ ಜೊತೆ ನಾವೂ ಸೇರುವುದು ಉಂಟು. ತೀರಾ ಬೇಸಿಗೆಯಲ್ಲಿ ನೀರಿಲ್ಲದೆ ಗರಿಕೆಯೂ ಒರಟಾಗುತ್ತಿತ್ತು. ಒಂದು ದಿನ ಹೀಗೆ ಗರಿಕೆಯನ್ನು ಕಟ್ಟುತ್ತಿರುವಾಗ ಪಾಪ ಎಷ್ಟೊಂದು ಬಿರುಸಾಗಿದೆ ಚುಚ್ಚುತ್ತೋ ಏನೋ ಗಣಪತಿಗೆ ಒಂದು ಮಳೆಯಾದರೂ ಬರಬಾರದ ಅನ್ನುತ್ತಾ ಅವರು ಕಟ್ಟುವುದರಲ್ಲಿ ಮಗ್ನರಾಗಿದ್ದರೆ ನಾವು ಮುಸಿ ಮುಸಿ ನಗುತ್ತಾ ಹೌದೌದು ಎನ್ನುತ್ತಿದ್ದೆವು. ಅಹಂ ಬ್ರಹ್ಮಾಸ್ಮಿ ಅನ್ನುವ ಎರಡು ಪದಗಳ ಸಾಲು ಹೇಳೋದು ತುಂಬಾ ಸುಲಭ. ಅರ್ಥವೂ ಸರಳ. ಬದುಕಿನ ರೀತಿಯೇ ವಿಚಿತ್ರ, ಇಲ್ಲಿ ಅರ್ಥವಾಗಿರುವುದೆಲ್ಲಾ ಅನುಭವಕ್ಕೆ ದಕ್ಕಿರುವುದಿಲ್ಲ. ಅನುಭವಕ್ಕೆ ದಕ್ಕಿದಷ್ಟೇ ಸತ್ಯ. ಹಾಗಂತ ಉಳಿದೆದ್ದೆಲ್ಲಾ ಮಿಥ್ಯವಲ್ಲ.  ಇಲ್ಲಿ ಪ್ರತಿಯೊಂದು ಜೀವಿಯ ಅನುಭವವೂ ವಿಭಿನ್ನ. ಒಬ್ಬರ ಅನುಭವ ಇನ್ನೊಬ್ಬರದು ಆಗಿರಲೇ ಬೇಕೆಂದಿಲ್ಲ ಆಗಿರುವುದೂ ಇಲ್ಲ. ಸೂಕ್ಷ್ಮವಾದ ವ್ಯತ್ಯಾಸವನ್ನು ಅರಿಯುವ ಶಕ್ತಿ ನಮಗಿದ್ದಾಗ ಮಾತ್ರ ಇದು ಅರಿವಾಗಲು ಸಾದ್ಯ. ಪ್ರತಿ ನಂಬಿಕೆಗೂ ಒಂದು ಕಾರಣವಿರುತ್ತದೆ. ಅಸಲಿಗೆ ಕಾರಣವಿಲ್ಲದೆ ಇಲ್ಲಿ

ಸೇಡು ತೀರಿಸಿಕೊಂಡ ಎಕ್ಷಾಮ್

ಏನೇ ಮಾಡಿದರೂ ಈ ಲೇಟ್ ಆಗೋದು ಮಾತ್ರ ತಪ್ಪೊಲ್ಲ ಅಂತ ಗೊಣಗಾಡುತ್ತಲೇ ರೆಡಿ ಆಗಿ ಒಂದೇ ಉಸಿರಿಗೆ ಎಕ್ಷಾಮ್ ಹಾಲಿಗೆ ಓಡಿಹೋಗಿ ಗಡಿಬಿಡಿಯಲ್ಲಿ ಸೀಟ್ ಹುಡುಕಿ ಕೂತಾಗ ಏನೋ ಸಾಧಿಸಿದ ನೆಮ್ಮದಿಯೆನಿಸಿತ್ತು. ಉಫ್ ಎಂದು ಉಸಿರು ಬಿಟ್ಟು ನಿರಾಳವಾಗುವಾಗಲೇ ಕ್ವೆಶ್ಚನ್ ಪೇಪರ್ ಹಂಚಲು ಶುರುವಾಗಿತ್ತು. ಒಂದು ರೀತಿಯ ನಿರ್ಲಕ್ಷದಲ್ಲೇ ಪೇಪರ್ ತೆಗೆದುಕೊಂಡು ನೋಡಿದವಳಿಗೆ ಜೋರು ನಗು.... ಹಂಚುತ್ತಿದ್ದ ಸರ್ ಅನ್ನು ಕರೆದು ಇದೆನ್ಸಾರ್ ಕನ್ಫ್ಯೂಷನ್ ಮಾಡ್ಕೊಂಡ್ರಾ, ಸೈನ್ಸ್ ಎಕ್ಷಾಮ್ ನಾಳೆ ನೀವು ಇವತ್ತೇ ಕೊಡ್ತಾ ಇದಿರಲ್ಲ ಅಂದೇ. ಒಮ್ಮೆ ಮೇಲಿನಿಂದ ಕೆಳಗಿನವರೆಗೆ ಗುರುಗುಡುತ್ತಾ ನೋಡಿದ ಅವರು ಒಂದ್ಸಲ ಟೈಮ್ ಟೇಬಲ್ ಚೆಕ್ ಮಾಡ್ಕೋ ಕನ್ಫ್ಯೂಷನ್ ಆಗಿದ್ದು ಯಾರು ಅಂತ ಗೊತ್ತಾಗುತ್ತೆ ಅಂತ ಮತ್ತೊಮ್ಮೆ ಕೆಂಗಣ್ಣು ಬಿಟ್ಟು ಮುಂದೆ ಹೋದರು. ಮಾಥ್ಸ್ ಅಂತ ಅಂದ್ಕೊಂಡ್ ಬಂದಿದ್ದ ನನ್ನ ಪರಿಸ್ಥಿತಿ ಇಂಗುತಿಂದ ಮಂಗನಂತಾಗಿತ್ತು. ಮತ್ತದೇ ಕೇರ್ಲೆಸ್ ಭಾವದಲ್ಲಿ ಏನೋ ಒಂದು ಬರೆದರಾಯ್ತು ಅಂತ ನೋಡಿದ್ರೆ ಯಾವತ್ತೂ ಕೇಳದ, ಕಾಣದ ಪ್ರಶ್ನೆಗಳು ಮುದ್ದಾಗಿ ಸಾಲಾಗಿ ಕೂತಿದ್ದವು. ಓ ದೇವ್ರೇ ಇದೆಂತ ಸಂಕಷ್ಟ ಪರಿಸ್ಥಿತಿ ತಂದಿಟ್ಟೆ ಕೊನೆಪಕ್ಷ ಒಂದು ಪ್ರಶ್ನೆಗಾದರೂ ಉತ್ತರ ಗೊತ್ತಿರುವುದು ಬೇಡವಾ.. ಜೀವನದಲ್ಲಿ ಇಂದಿನವರೆಗೆ ಕೈಯಲ್ಲೂ ಮುಟ್ಟದ ಕೋಳಿಮೊಟ್ಟೆ ಪಡೆದುಕೊಳ್ಳುವ ಹಾಗೆ ಮಾಡಿದೆಯಲ್ಲ ಎಂದು ಅವನನ್ನು ಬೈದುಕೊಳ್ಳುತ್ತಾ ಗಾಬರಿ, ಆತಂಕದಲ್ಲಿ ದಡಕ್ಕನೆ ಮೇಲ