Posts

Showing posts from September, 2019

ಭೂಮಿ ಹುಣ್ಣಿಮೆ.

ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ.  ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು.  ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು.  ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ. ಇಡೀ ಗದ್ದೆಯೆಂಬ ಗದ್ದೆಯ ಕೋಗು ಎಳೆಬಿ

ಓದಿನ ಸುಖ ವಿಜಯಕರ್ನಾಟಕ 08.09.19

ಸೂಜಿಗೆ ದಾರ ಹಾಕಿಕೊಡಲು ಹೇಳುತ್ತಿದ್ದ ಅಜ್ಜಿ ಸಂಜೆ ಶಾಲೆಯಿಂದ ಬರುವಾಗ ಇಳಿಬಿಸಿಲಿಗೆ ಎದುರಾಗಿ ಪುಸ್ತಕ ಹಿಡಿದು ಓದುವುದು ಕಂಡು ಇವಳು ನಮ್ಮತ್ರ ಕೆಲಸ ಮಾಡಿಸಲು ಕಣ್ಣು ಕಾಣಿಸೋಲ್ಲ ಅಂತಾಳ ಅನ್ನುವ ಗೊಂದಲ ಶುರುವಾಗುತ್ತಿತ್ತು. ತನ್ನ ಕೆಲಸವೆಲ್ಲಾ ಮುಗಿಸಿ ಬೆಳಕು ಇದ್ದಾಗ ಅಂಗಳದ ಚಪ್ಪರದ ಕಂಬಕ್ಕೆ ಒರಗಿ ರಾಮಾಯಣವನ್ನೋ, ಮಹಾಭಾರತವನ್ನೋ ಓದುತ್ತಿದ್ದ ಅವಳು ನಾನು ಮೂರನೆ ತರಗತಿಗೆ ಬರುವ ಹೊತ್ತಿಗೆ ಅದನ್ನು ನನ್ನ ಹೆಗಲಿಗೆ ವರ್ಗಾಯಿಸಿದ್ದಳು. ಶಾಲೆ ಮುಗಿಸಿ ಬಂದು ಚೂರು ಏನಾದರೂ ತಿಂದು ಅವಳು ಬತ್ತಿ ಮಾಡುವಾಗ ಓದಿ ಹೇಳುವ ಕೆಲಸ ಅಂತ ಇಷ್ಟದ್ದೇನು ಆಗಿರಲಿಲ್ಲ. ಸಾಕಾ ಅಂತ ರಾಗ ಎಳೆಯುತ್ತಿದ್ದರೆ ಇನ್ನೊಂದು ಕಟ್ಟು ಬತ್ತಿ ಮಾಡುವ ತನಕ ಓದು ಅಂತ ಅವಳು ಉಪಾಯದಲ್ಲಿ ಮತ್ತೆ ಮೂರೋ ನಾಲ್ಕೋ ಅಧ್ಯಾಯ ಓದಿಸಿ ಬಿಡುತ್ತಿದ್ದಳು. ಪ್ರೈಮರಿ ಶಾಲೆ ಮುಗಿಸುವ ಹೊತ್ತಿಗೆ ಈ ಓದಿ ಹೇಳುವ ಕೆಲಸದಿಂದಾಗಿ ರಾಮಾಯಣ ಹಾಗೂ ಮಹಾಭಾರತ ಎರಡೂ ಓದಿ ಮುಗಿಸಿವುದರ ಜೊತೆಗೆ ಪಟ್ಟಾಗಿ ಕುಳಿತು ಓದುವುದು ಅಭ್ಯಾಸ ಆಗಿಬಿಟ್ಟಿತ್ತು. ಆಮೇಲೆ ನಿಧಾನಕ್ಕೆ ಅವಳಿಗೆ ರಾಗಸಂಗಮದಲ್ಲಿ ಬರುತ್ತಿದ್ದ ಕಾದಂಬರಿ ಓದಿ ಹೇಳುವುದು ಶುರುವಾದ ಮೇಲೆ ಈ ಓದುವಿಕೆ ಆಸಕ್ತಿ ಅನ್ನಿಸತೊಡಗಿತ್ತು. ಅವಳು ಸಾಕು ಅಂದರೂ ಇರು ಇನ್ನೊಂದು ಚೂರು ಇದೆ ಓದಿ ಮುಗಿಸಿಬಿಡ್ತೀನಿ ಅನ್ನುತ್ತಿದ್ದೆ. ಹೀಗೆ ನನ್ನಲ್ಲಿ ಓದುವಿಕೆಯ ಬೀಜ ನೆಟ್ಟು ಅದನ್ನು ಪೋಷಿಸಿದ್ದು ಅಜ್ಜಿ. ಇವತ್ತು ಓದುವಿಕೆ ಇಲ್ಲದೆ ಹ

ಅಜ್ಜಿ

ಅವಳು ಹೊರಟು ದಿನವೆರೆಡು ಕಳೆದಿತ್ತು ಅಷ್ಟೇ. ಎಲ್ಲರೂ ಇದೀರಲ್ಲ ನೋಡಿಬಿಡಿ ಅಂತ ಅವಳ ಪೆಟ್ಟಿಗೆಗಳನ್ನು ಒಂದೊಂದಾಗಿ ತಂದು ಮಧ್ಯದ ಒಳಗೆ ಇಡುತ್ತಿದ್ದ ಮಾವ. ಕರಳು ಚುರುಕ್ ಎಂದರೂ ಅವಳ ಗುಟ್ಟು ನೋಡುವ ಹಂಬಲ. ಅವಳಷ್ಟೇ ವಯಸ್ಸಾಗಿರುವ(?) ಪೆಟ್ಟಿಗೆಗಳು ಕಪ್ಪು ಹಿಡಿದು ಹೋಗಿದ್ದವು.  ಅದೇ ಹಳೆಯ ಪೆಟ್ಟಿಗೆಯನ್ನು ಎಸೆಯದೆ ಅದಕ್ಕೆ ಹಳೆಯ ಪಂಚೆಯನ್ನು ಸುತ್ತಲೂ ಹಾಕಿ ಅದರ ತುಕ್ಕು ಬಟ್ಟೆಗೆ ಹಿಡಿಯದಂತೆ ಜೋಪಾನವಾಗಿ ಇಟ್ಟಿದ್ದಳು. ಅವಳಿಗೆ ಎಲ್ಲವನ್ನೂ ಜೋಪಾನವಾಗಿ ಇದುವ ಸ್ವಭಾವ ಬಂದಿದ್ದು ರಕ್ತದಿಂದಲೋ ಇಲ್ಲಾ ಬಡತನ ಅನಿವಾರ್ಯತೆಯಿಂದಲೋ ಈ ಕ್ಷಣಕ್ಕೂ ಗೊಂದಲ. ಮಹಾ ಅಚ್ಚುಕಟ್ಟು. ಒಂದಿನಿತೂ ಹಾಳು ಮಾಡದ ಸ್ವಭಾವ. ಅಷ್ಟು ಸುಧೀರ್ಘ ಬದುಕಿನ ಅವಳ ಆಸ್ತಿ ಒಂದು ಐದಾರು ಇಂತ ಪೆಟ್ಟಿಗೆಗಳೇ. ಒಂದೊಂದೇ ತೆಗೆಯುತ್ತಾ ಹೋದರೆ ಜೋಡಿಸಿಟ್ಟ ಆ ಅಚ್ಚುಕಟ್ಟು ಕೈ ಹಾಕಲೇ ಹಿಂಜರಿಯುವ ಹಾಗೆ ಮಾಡಿತ್ತು. ಪೆಟ್ಟಿಗೆಯ ತುಕ್ಕು ಸ್ವಲ್ಪವೂ ತಾಗದ ಹಾಗೆ ಇಡೀ ಪಂಚೆಯನ್ನು ಹಾಸಿ ಅದನ್ನೇ ಹೊದ್ದಿಸಿ ಆಗಷ್ಟೇ ಸ್ನಾನ ಮುಗಿಸಿ ಬಂದ ಎಳೆ ಮಗುವನ್ನು ಸುತ್ತಿ ಮಲಗಿಸಿದ ಹಾಗೆ ಇಟ್ಟ ಬಟ್ಟೆಗಳು. ಚೂರೂ ಸುಕ್ಕಾಗದಂತೆ, ಮಡಿಕೆ ಬೀಳದಂತೆ ಅಂಗಡಿಯಲ್ಲಿ ಜೋಡಿಸಿಟ್ಟ ಹಾಗೆ ಪೇರಿಸಿಟ್ಟ ಸೀರೆಗಳ ಕಂಡು ಕಿಬ್ಬೊಟ್ಟೆಯಲ್ಲಿ ಸಂಕಟ ಹುಟ್ಟಿತು. ಬಂಧು ಬಳಗದವರು, ಮಕ್ಕಳು ಕೊಟ್ಟ ಸೀರೆಗಳನ್ನೆಲ್ಲಾ ಹಾಗೆಯೇ ಮುಚ್ಚಿಟ್ಟಿದ್ದಳು. ಮನೆಯ ಗೃಹಪ್ರವೇಶದ ಸಮಯದಲ್ಲಿ ನೋಡು ನಿಂಗೆ ರೇಷ್ಮೆ ಸ