Posts

Showing posts from December, 2020
 ಡೆಲ್ಲಿಯಲ್ಲಿ ಆರು ಡಿಗ್ರಿ ಯಾರು ಬರ್ತೀರಿ ಅಂತ ಅಣ್ಣ ಫ್ಯಾಮಿಲಿ ಗ್ರೂಪ್ ಅಲ್ಲಿ ಕೊಟ್ಟಿದ್ದ ಎಕ್ಸೈಟಿಂಗ್ ಆಫರ್ ನೋಡಿ ತಮ್ಮನಿಗೆ ಹೋಗೋಣವೇನೋ ಎಂದು ಕೇಳಿದೆ. ಮೊದ್ಲು ಮನೆಯಿಂದ ಹೊರಗೆ ಬಾ ಆಮೇಲೆ ಡೆಲ್ಲಿ ಕತೆ ಎಂದು ಹಲ್ಲು ಕಿಸಿದ ಎಮೋಜಿ ಹಾಕಿದ. ಥತ್  ಇಲ್ಲಿಗೆ ಬಂದು ಪರಿಸ್ಥಿತಿ ಎಂದು ಒಬ್ಬಳೇ ಗೊಣಗಿಕೊಂಡು ಸುಮ್ಮನಾದೆ. ಅದೇನು ಮನೆ ಮನೆ ಅಂತ ಇಲ್ಲೇ ಇರ್ತಿ ಮಾರಾಯ್ತಿ, ನಿಂಗೆ ಹೊರಗೆ ಹೋಗಬೇಕು, ಆರಾಮಾಗಿ ಇರಬೇಕು, ಓಡಾಡಬೇಕು ಅನ್ನಿಸೋದೇ ಇಲ್ವಾ, ಇನ್ನು ಹೋಗೋ ಹೊತ್ತಿಗೆ ಮನೆ ಹೊತ್ತಿಕೊಂಡು ಹೋಗುವ ಹಾಗಿದ್ರೆ ಅದೇನು ಮಾಡ್ತಿದ್ಯೋ ನನ್ನ ಕೈಯಲ್ಲಿ ಅಂತೂ ಹೀಗೆ ಇರೋಕೆ ಆಗೋಲ್ಲ ನೋಡು ಒಂದು ನಾಲ್ಕು ದಿನ ಬರಬಾರದ ಎಂದು ಬೈಯುತ್ತಿದ್ದರೆ ಬಿಸಿ ಪ್ರಾಯದ ಮೊಮ್ಮಗಳ ನೋಡಿ ನಕ್ಕು ಸುಮ್ಮನಾಗುತ್ತಿದ್ದಳು. ನಿಂಗೆ ಬುದ್ಧಿ ಬರೋಲ್ಲ ಬಿಡು ಎಂದು ಗುರುಗುಡುತ್ತಲೇ ಹೊರಡುತ್ತಿದ್ದೆ.  ಮನೆಯೇ ಮಠ ಕೆರೆಯೇ ತೀರ್ಥ ಮಗುವೇ ಎಂದು ದೂರ್ವೆ ಕೊಯ್ಯುವಾಗ ಹೇಳುತ್ತಿದ್ದ ಜಯತ್ತೆಯ ಮಾತು ನೆನಪಾಗಿ ಸಣ್ಣ ನಗು.  ಮಗಳು ಹುಟ್ಟಿದ ಮೇಲೆ ಕೊಂಚ  ಕಾಲಿಗೆ ಬ್ರೇಕ್ ಹಾಕಿದ ಹಾಗಾದರೂ ಓಡಾಟವೇನು ಕಡಿಮೆಯಾಗಿರಲಿಲ್ಲ. ಗಾಡಿ ಓಡಿಸಲು ಕಲಿತ ಮೇಲಂತೂ ಮನಸ್ಸು ಗರಿ ಬಿಚ್ಚಿದ ಹಕ್ಕಿ. ಯಾರಿಗೂ, ಯಾರನ್ನು ಕಾಯಬೇಕಾದ ಮರ್ಜಿ ಇಲ್ಲದೆ ಬೇಕೆಂದ ಕಡೆಗೆ ಹೋಗಬಹುದಾದ ಅವಕಾಶ. ಸರಾಗವಾಗಿ ಹರಿಯುತ್ತಿದ್ದ ನದಿಗೂ  ಬಂತಲ್ಲ ಲಾಕ್ ಡೌನ್ ಎಂಬ  ಒಡ್ಡು ಆಗ ಮಾತ್ರ ಅಷ್ಟು ದಿನ ಒಳಗೆ
 ಅವನು ನನಗಿಂತ ಮೂರೋ ನಾಲ್ಕು ವರ್ಷ ದೊಡ್ಡವನು. ಸಂಜೆ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಅದ್ಯಾವ ಕಾರಣವೋ  ಏನೋ ಆಟದ ಮಧ್ಯದಲ್ಲಿ  ಅಣ್ಣನಿಗೆ ಹೊಡೆದಿದ್ದ. ಇವನೋ ಮೃದು ಸ್ವಭಾವ. ತಿರುಗಿ ಬೈಯುವುದು ಇರಲಿ ನೋವಾಗುತ್ತಿದ್ದರೂ  ಅತ್ತರೆ ರೌಡಿ ತಂಗಿಗೆ ಗೊತ್ತಾಗಿ ಏನು ಅವಾಂತರ ಆಗುತ್ತದೋ ಎಂದು ಅಳು ನುಂಗಿ ಮನೆಯ ಕಡೆ ನಡೆದಿದ್ದ. ಗುಂಪಾಗಿ ಹೋಗುವಾಗ, ಶಾಲೆಯಲ್ಲಿ ಇರುವಾಗ ಎಲ್ಲವು ಓಪನ್ ಸೀಕ್ರೆಟ್ ಅಷ್ಟೇ. ಅದರಲ್ಲೂ ಇಂತಹ ವಿಷ್ಯಗಳು ಹಬ್ಬುವ ವೇಗ ಗಾಳಿಯ ವೇಗಕ್ಕೂ ಜಾಸ್ತಿಯೇ. ಅಂತೂ ವಿಷಯ ಗೊತ್ತಾಗುವಾಗ ಶಾಲೆ ಬಿಟ್ಟು ಮನೆಯ ಅರ್ಧ ದಾರಿ ತಲುಪಿಯಾಗಿತ್ತು. ಚಿಕ್ಕಂದಿನಿಂದಲೂ ತುಸು ತಾಳ್ಮೆ ಕಡಿಮೆಯೇ. ಅದರಲ್ಲೂ ತಪ್ಪಿಲ್ಲದಿದ್ದರೆ ಮುಗಿದೇ ಹೋಯಿತು. ಅದು ಯಾರಾದರೂ ಸರಿ ಸುಮ್ಮನೆ ಒಪ್ಪಿಕೊಳ್ಳುವುದು ಗೊತ್ತೇ ಇರಲಿಲ್ಲ. ಒಮ್ಮೆ ನನ್ನವರು ಅಂದುಕೊಂಡರೆ ಮುಗಿದು ಹೋಯಿತು. ಅವರಿಗೆ ಏನಾದರೂ ಅದು ನನಗೆ ಆದ ಹಾಗೆ. ಹಾಗಾಗಿ ಕುದಿಕುದಿಯುತ್ತಲೇ ಮನೆಗೆ ಹೋಗಿದ್ದೆ. ಮುಖ ನೋಡಿದ ಅಜ್ಜಿಗೆ ಏನೋ ಆಗಿದೆ ಎಂದು ಅರ್ಥವಾದರೂ ಏನಾಯಿತು ಎಂದು ತಿಳಿದಿರಲಿಲ್ಲ. ನಿನ್ನಪ್ಪನದೇ ಬುದ್ಧಿ ಇರಬೇಕು, ತಾಳ್ಮೆ ಕಲಿ, ಎಲ್ಲದಕ್ಕೂ ಮುಂದೆ ಹೋಗ್ತಿ ಆಮೇಲೆ ನಿಷ್ಠುರ ಆಗ್ತಿ ಎಂದು ಗೊಣಗುತ್ತಲೇ ಊಟ ಬಡಿಸಿದ್ದಳು. ಎಷ್ಟೇ ಉಪದೇಶ ಮಾಡಿದರು ಅದು ಗೋರ್ಕಲ್ಲ ಮೇಲೆ ಮಳೆ ಹೊಯ್ದ ಹಾಗೆ ಎಂದು ಗೊತ್ತಿದ್ದರೂ ಅವಳು ಹೇಳುವುದು ಬಿಡುತ್ತಿರಲಿಲ್ಲ ನಾನು ಮಾಡುವುದು ನಿಲ್ಲಿಸುತ್ತಿರಲಿಲ್
 ಅವರು ಬುದ್ಧಿಸಂ ಬಗ್ಗೆ ಪಾಠ ಮಾಡೋವಾಗ ಅದೇ ಒಳ್ಳೆಯದು ಅನ್ಸುತ್ತೆ, ಜೈನಿಸಂ ಬಗ್ಗೆ ಹೇಳೋವಾಗ ಇದೆ ಬೆಟರ್ ಅನ್ಸುತ್ತೆ, ಹಿಂದೂ ಧರ್ಮದ ಬಗ್ಗೆ ಕೇಳುವಾಗ ಇದಕ್ಕಿಂತ ಒಳ್ಳೆಯದು ಜಗತ್ತಿನಲ್ಲಿ ಬೇರೆ ಯಾವುದಿದೆ ಅನ್ಸುತ್ತೆ. ಯಾವುದು ಸತ್ಯ ಅಂತ ನಮ್ಮಲ್ಲಿ ಚರ್ಚೆ ನಡೆಯುತಿತ್ತು. ಅವರು ಪಾಠ ಮಾಡುತ್ತಿದ್ದದ್ದೇ ಹಾಗೆ. ಇತಿಹಾಸ ಬರೀ ಇಸವಿ, ಘಟನೆಗಳು ಆಗದೆ ಕಣ್ಣೆದೆರು ನಡೆದ ಹಾಗೆ. ಮತ್ತೆ ಅದನ್ನು ಓದಬೇಕು ಅನ್ನುವ ಪರಿಸ್ಥಿತಿಯೇ ಇಲ್ಲ. ಹಿಸ್ಟರಿ ಯಲ್ಲಿ ಫೇಲ್ ಆಗುವುದಿರಲಿ ಜಸ್ಟ್ ಪಾಸ್ ಅನ್ನುವ ಸುದ್ದಿಯೇ ಇರುತ್ತಿರಲಿಲ್ಲ. ಹೇಳುವ ಪ್ರತಿ ವಿಷಯವನ್ನು ಅಷ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿ ಹೇಳುತ್ತಿದ್ದರು. ಜಗತ್ತು ಇನ್ನೂ ಅರ್ಥವಾಗದ ವಯಸ್ಸು. ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಗೊತ್ತಾ ಅಣ್ಣನ ಬಳಿ ಕೊಚ್ಚಿ ಕೊಳ್ಳುತಿದ್ದೆ. ಕೇಳುವವನ ಮುಖದಲ್ಲಿ ಸಣ್ಣ ನಗು. ನಿಂಗೆ ಹೊಟ್ಟೆಕಿಚ್ಚು ಅಷ್ಟೇ ನಂಗೊತ್ತು ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಅಂತ ಕೋಪ ಉಕ್ಕುತಿತ್ತು. ಅಯ್ಯೋ ಅವರಿಗೆ ನಿನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಾನೆಲ್ಲಿ ಹೇಳಿದೆ ಇಷ್ಟ ಹೌದು ಆದರೆ ನೀನು ಮಾತ್ರವೇ ಇಷ್ಟ ಅಲ್ಲ. ಅವರು ನನ್ನ ಜೊತೆಯೂ ಹಾಗೆ ಇರ್ತಾರೆ, ಮತ್ತೊಬ್ಬರ ಜೊತೆಗೂ ಹಾಗೆ ಇರ್ತಾರೆ. ಅವರು ನಮ್ಮ ಜೊತೆಗೆ ಇರುವಷ್ಟು ಹೊತ್ತು ಅವರಿಗೆ ನಮ್ಮನ್ನು ಕಂಡ್ರೆ ಮಾತ್ರ ಇಷ್ಟ, ನಮ್ಮ ಜೊತೆ ಮಾತ್ರ ಇಷ್ಟು ಆತ್ಮೀಯವಾಗಿ ಇರ್ತಾರೆ ಅನ್ನೋ ಭಾವ ಮೂಡಿಸುವಹಾಗೆ ಬೇರೆಯವರ ಜೊತೆ
ಆಟ  ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ  ಸಿಡಿಯುತ್ತೆ ಎಂದುಕೊಂಡು  ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು  ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ..  ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ  ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು  ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ.  ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂ
 ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ  ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು. ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿಯೇ ಎಲ್ಲರನ