Posts

Showing posts from April, 2019

ನೆನಪೇ ಸಂಗೀತ

ಪ್ರತಿಬಾರಿ ಸ್ಕೂಲ್ ಡೇ ಬಂದರೂ ಹೊಸ ಮಕ್ಕಳು ಬಂದರೂ ಈ ಪಿಳ್ಳಂಗೋವಿಯ ಚೆಲ್ವಕೃಷ್ಣನ ಹಾಡು ಅದಕ್ಕೆ ಡಾನ್ಸ್ ಮಾತ್ರ ಬದಲಾಗುತ್ತಲೇ ಇರಲಿಲ್ಲ. ಆ ಹಾಡು ಬಂದ ಕೂಡಲೇ ಮಾತು ನಿಲ್ಲಿಸಿ ನೋಡುವ ಪೋಷಕರೂ ಬದಲಾಗಿರಲಿಲ್ಲ. ಯಾವುದೇ ಶಾಲೆಯಲ್ಲಾಗಲಿ ಈ ಹಾಡು ಬರದೆ ಕಾರ್ಯಕ್ರಮವೂ ಸಂಪನ್ನವಾದ ಉದಾಹರಣೆಯಿರಲಿಲ್ಲ. ಹಾಡು ಅದರಲ್ಲೂ ದಾಸರ ಹಾಡು ಅಂದರೆ ವಿದ್ಯಾಭೂಷಣ ತೀರ್ಥ ಸ್ವಾಮೀಜಿಗಳು ಎಂದೇ ಪ್ರಸಿದ್ಧಿಯಾಗಿದ್ದ ಕಾಲವದು. ಬೆಳಿಗ್ಗೆ ಎದ್ದ ಕೂಡಲೇ ಟೇಪ್ ರೆಕಾರ್ಡರ್ ಗೆ ಕ್ಯಾಸೆಟ್ ತುರುಕಿ ಸುಪ್ರಭಾತ ಹಾಕುವ ಜಮಾನದಲ್ಲಿ ಕಪಾಟಿನ ಬಹುಭಾಗ ಜಾಗ ಆಕ್ರಮಿಸಿಕೊಂಡಿದ್ದು ಇವರ ಕ್ಯಾಸೆಟ್ ಗಳೇ. ಹೀಗೆ ಇವರ ಹಾಡು ಕೇಳುತ್ತಾ, ಅದನ್ನೇ ಡಾನ್ಸ್ ಮಾಡುತ್ತಾ, ಸ್ಪರ್ಧೆಗಳಲ್ಲಿ ಹಾಡಿ ಬಹುಮಾನ ಗೆಲ್ಲುತ್ತಾ ಹೈ ಸ್ಕೂಲ್ ಮೆಟ್ಟಿಲು ಹತ್ತಿದವಳಿಗೆ  ಧ್ವನಿ ಮಾತ್ರವಲ್ಲ ಇವರೂ ಚೆಂದ ಅನ್ನಿಸಿತ್ತು. ಹಾಡು ಕೇಳುವಾಗ ಅವರು ಕಣ್ಮುಚ್ಚಿ ತನ್ಮಯರಾಗಿ ಹಾಡುತ್ತಿದ್ದಾರೆನೋ ಅನ್ನಿಸುತಿತ್ತು. ಹೀಗಿರುವಾಗ ಒಂದು ದಿನ ಮನೆಯಲ್ಲಿ ಗುಸು ಗುಸು ಪಿಸು ಮಾತು ಶುರುವಾಗಿತ್ತು. ಕಳ್ಳ ಹೆಜ್ಜೆ ಇಟ್ಟು ಒಳಗೆ ಹೋದರೆ ಆಚೆ ಹೋಗಿ ಓದೋದು ಆಡೋದೋ ಏನಾದರೂ ಮಾಡಿಕೊಳ್ಳಿ ಅನ್ನೋ ಗದರುವಿಕೆ ಕೇಳಿ ಹೊರಗೆ ಬಂದರೂ ಕಿವಿಗೆ ಅವರು ಮಾತು ಕೇಳಿಸಿತ್ತು. ಸ್ವಾಮೀಜಿಗಳು ಮದುವೆ ಆದರಂತೆ ಅನ್ನೋ ಆತಂಕದ, ಮುಂದೆ ಏನಾಗುತ್ತೋ ಅನ್ನೋ ಭಯದ ಮಾತುಗಳು ಅವು. ಇನ್ನೂ ನನ್ನಿಚ್ಚೆ, ನನ್ನಿಷ್ಟ ಎನ್ನುವುದನ್
ನಿಧಾನಕ್ಕೆ ಗುಡಿಸಬೇಕು. ಜೋರಾಗಿ ಗುಡಿಸಿದರೆ ಧೂಳು ಮೇಲಕ್ಕೆ ಹಾರಿ ಮತ್ತಲ್ಲೇ ಬಂದು ಕೂರುತ್ತದೆ. ಬೇಗ ಅನ್ನೋದು ಕೆಲಸ ಶುರುಮಾಡುವ ಸಮಯಕ್ಕೆ ಹೊರತು ಮುಗಿಸುವುದಕ್ಕಲ್ಲ ನೋಡು. ಮೂಲೆ ಮೂಲೆಯ ಕಸ ಶುಭ್ರವಾಗಿ, ಅಂಟಿದ ಧೂಳು ಕೊಳೆಯಲ್ಲ ಹೊರಟು ಹೋಗಿ ಗುಡಿಸಿದರೆ ಒರೆಸಿದ ಹಾಗಿರಬೇಕು ಮಗುವೇ ಅಂತಿದ್ದಳು ಅಜ್ಜಿ.. ನಾನು ಕೇಳಿಸಿದರೂ ಕೇಳಿಸದವಳಂತೆ ಅದೊಂದು ಕೆಲಸ ಮುಗಿದರೆ ಸಾಕಂತೆ ಹಾಗಿದ್ರೆ ಒರೆಸೋದು ಬೇಡಾ ತಾನೇ ಎಂದು ಅವಳನ್ನು ಅಣಕಿಸುತ್ತಾ ಆಟಕ್ಕೋ ಮತ್ಯಾವುದಕ್ಕೋ ಹೋಗುವ ಯೋಚನೆಯಲ್ಲೇ ಇರುತ್ತಿದ್ದರಿಂದ ತಿರುಗಿ ನೋಡಲು ಹೋಗದೆ ಓಡುತಿದ್ದೆ. ಒರೆಸಲು ಹೊರಟರೆ ಗಡಿಬಿಡಿಯಲ್ಲಿ ನೀರಲ್ಲಿ ಅದ್ದಿ ಸರಬರ ಬಟ್ಟೆ ಎಳೆಯುತ್ತಿದ್ದರೆ ಬಂದು, ನೋಡು ಒಂದು ಕೆಲಸ ಮಾಡಿದ ಮೇಲೆ ಇನ್ನೊಬ್ಬರು ಬಂದು ಮತ್ತೆ ಅದನ್ನು ಮಾಡೋ ಹಾಗೆ ಮಾಡಬಾರದು, ಬಟ್ಟೆಯನ್ನು ತೀರಾ ಗಟ್ಟಿಯಾಗಿಯೂ ಹಿಂಡಬಾರದು, ಜಾಸ್ತಿ ನೀರೂ ಇರಬಾರದು ಅದು ಒರೆಸುತ್ತಾ ಒರೆಸುತ್ತಾ ನಿನಗೆ ದಕ್ಕುವ ಹದವೆ ಹೊರತು ನಾನು ಹೇಳಿ ಬರುವುದಲ್ಲ ಎಂದರೆ ಅರ್ಥವಾಗದೆ ಕಣ್ಣು ಬಿಟ್ಟು ಮತ್ತೆ ಮೊದಲಿನಂತೆ ಒರೆಸುವ ಶಾಸ್ತ್ರ ಮುಗಿಸಿದರೆ ಅವತ್ತಿನ ಕೆಲಸ ಮುಗಿದ ಭಾವ. ನಿರಾಳತೆ. ಕೆಲವೊಮ್ಮೆ ಮೈ ಮೇಲೆ ಏನೋ ಬಂದಂತೆ ಕ್ಲೀನ್ ಮಾಡುವ ಹುಚ್ಚು ಹಿಡಿದು ಬಿಡುತಿತ್ತು. ಆಗ ಗಂಟೆ ಗಟ್ಟಲೆ ಒತ್ತಿ ಒತ್ತಿ ಒರೆಸುವುದು ನೋಡುವಾಗ ಅಡುಗೆ ಮನೆಯ ಮೆಟ್ಟಿಲ ಮೇಲೆ ಕುಳಿತು ಅಷ್ಟು ಗಟ್ಟಿ ಒರೆಸದಿದ್ದರೂ ಕೊಳೆ ಹೋ