Posts

Showing posts from July, 2017

ನಾಗರ ಪಂಚಮಿ.

ನಾಗರಪಂಚಮಿಯೆಂದರೆ ಹಬ್ಬಗಳ ಸಾಲಿನ ಹೆಬ್ಬಾಗಿಲು. ಆಚರಣೆ, ಪದ್ದತಿಯಲ್ಲಿ ಏನೇ  ವೈವಿಧ್ಯತೆ ಇದ್ದರೂ ನಾಗರ ಪಂಚಮಿ ನಾಡಿಗೆ ಹಬ್ಬ. ಕೃಷಿಪ್ರಧಾನವಾಗಿದ್ದ ದೇಶದಲ್ಲೇ ಅದೇ ಭೂಮಿಯಲ್ಲಿ ವಾಸಿಸುವ ನಾಗರಾಜನಿಗೆ ನಮಿಸುವ, ಅರಿಯದೆ ನಡೆದ ಅಪಚಾರಕ್ಕಾಗಿ ಕ್ಷಮೆ ಕೇಳುವ ಅವಕಾಶ. ಮದುವೆ ಮಾಡಿ ಕಳಿಸಿಕೊಟ್ಟ ಕರುಳಬಳ್ಳಿಯನ್ನು ಕರೆದು ತಂದು ಆರೈಕೆ ಮಾಡಿ ಬಂಧವನ್ನು ಚಿಗುರಿಸುವ, ಒಣಗದಂತೆ ಕಾಪಾಡಿಕೊಳ್ಳುವ ಸಮಯ. ಈ ನೆಲದ ವೈಶಿಷ್ಟ್ಯವೇ ಅದು. ಪ್ರತಿಯೊಂದು ಹಬ್ಬವೂ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸುವ, ಹಸಿರಿನಿಂದ ನಳನಳಿಸೋ ಹಾಗೆ ಮಾಡುವ ಪ್ರಕ್ರಿಯೆ. ಜನಮೇಜಯ ತನ್ನ ತಂದೆಯ ಸಾವಿನಿಂದ ಕ್ರುದ್ಧನಾಗಿ ಸರ್ಪಯಾಗ ಮಾಡಿ ಅವುಗಳನ್ನು ನಾಶಮಾಡುವ ಸಂಕಲ್ಪ ಮಾಡುವಾಗ ಆಸ್ತಿಕ ಅವನನ್ನು ಪ್ರಾರ್ಥಿಸಿ ಯಾಗವನ್ನು ನಿಲ್ಲಿಸಲು ಕೇಳಿದ್ದು ಇದೇ ದಿನವೆಂದು, ಯಮುನೆಯ ಮಡುವಿನಲ್ಲಿ ಕುಳಿತು ಅದನ್ನು ವಿಷಯುಕ್ತವಾಗಿಸಿ ತೊಂದರೆ ಕೊಡುತಿದ್ದ ಕಾಳಿಯನನ್ನು ಶ್ರೀ ಕೃಷ್ಣ ಮರ್ದಿಸಿದ್ದು ಇದೇ ದಿನವೆಂದು ಪುರಾಣಗಳ ಹಿನ್ನಲೆ. ಭೂಮಿಯನ್ನು ಆದಿ ಶೇಷ ತನ್ನ ತಲೆಯ ಮೇಲೆ ಹೊತ್ತಿದ್ದಾನೆ ಹಾಗಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವ ದಿನ ಇದು ಅನ್ನೋದು ಇನ್ನೊಂದು ನಂಬಿಕೆ. ಶಿವ ಕೊರಳಲ್ಲಿ, ವಿಷ್ಣು ಹಾಸಿಗೆಯಾಗಿ, ಗಣಪತಿ ಹೊಟ್ಟೆಗೆ ಕಟ್ಟಿಕೊಂಡು ಹೀಗೆ ದೇವರಿಗೂ ಶೇಷ ಅತಿ ಪ್ರಿಯ. ಇನ್ನು ತಂಗಿಯ ಮೇಲೆ ಅಸೂಯೆಗೊಂಡು ಅವಳನ್ನು ಕೊಲ್ಲಲು ಯತ್ನಿಸಿದ ಅಣ್ಣಂದಿರನ್ನು ನಾಗನನ್ನು ಪ್ರ

ಹರ ಹರ ಯೋಗಿ.....

ಯಾವುದೇ ದೇಶದ ಪ್ರಾಣ ಇರೋದು ಅದರ ಸಂಸ್ಕೃತಿಯಲ್ಲಿ. ಆಧ್ಯಾತ್ಮ ಅದರ ಮೂಲ ಬೇರು. ಇವೆರಡನ್ನೂ ಧಿಕ್ಕರಿಸಿ ಬದುಕಲು ಹೊರಟರೆ ಅಲ್ಲಿಯೂ ಸಲ್ಲದ, ಇಲ್ಲಿಯೂ ನಿಲ್ಲದ  ನಾವು ತ್ರಿಶಂಕು ಸ್ವರ್ಗ ವಾಸಿಗಳಾಗುತ್ತೇವೆ. ನಮ್ಮತನ ನಮಗೆ ಹೆಮ್ಮೆ ಅನ್ನಿಸಬೇಕೆ ಹೊರತು ಅವಮಾನ ಎನ್ನಿಸಬಾರದು. ಹಾಗನ್ನಿಸಿದರೆ ನಮ್ಮನ್ನು ಯಾವುದೋ ಮಾನಸಿಕ ಕಾಯಿಲೆ ಕಾಡುತ್ತಿದ್ದೆ ಎಂದರ್ಥ. ತನ್ನ ಮೇಲಾದ ಎಲ್ಲಾ ಹೊರಗಿನ ಹಾಗೂ ಒಳಗಿನ ಆಕ್ರಮಣವನ್ನು ಎದುರಿಸಿಯೂ ಇಂದಿಗೂ ಜೀವಂತವಾಗಿರೋದು ಹಿಂದೂ ಧರ್ಮ. ಅದರ ಅಂತಃಸ್ವತ್ವವೇ ಹಾಗೆ. ಇಂಥ ಸನಾತನ, ಪ್ರಖರ ಹಿಂದೂ ಧರ್ಮದ ಪ್ರಣತಿಯಾಗಿ ಮುಂಚೂಣಿಯಲ್ಲಿರುವ ಅನೇಕರಲ್ಲಿ ಎದ್ದು ಕಾಣುವ ಹೆಸರು ಯೋಗಿ ಆದಿತ್ಯನಾಥ್. ಯುಧಿಷ್ಠಿರ ಅವರು ಇವರ ಬಗ್ಗೆ ಲೇಖನ ಬರೆಯುವ ಹೊತ್ತಿನಲ್ಲಿ ನಾನು ಕಾಶಿಯ ಗಲ್ಲಿಯಲ್ಲಿ ಅಲೆಯುತ್ತಿದ್ದೆ. ಇವರ ಲೇಖನಗಳು ಒಂದು ಪುಸ್ತಕವಾಗಿ ಬಂದರೆ ಒಳ್ಳೆಯದಿತ್ತು ಅನ್ನೋ ಭಾವ ಕಾಡುತಿತ್ತು. ಅದಕ್ಕೂ ಒಂದು ಕಾರಣವಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅವರ ಹೆಸರು ಘೋಷಣೆಯಾಗುವ ಹೊತ್ತಿಗೆ ನನ್ನಲ್ಲೂ ಸಂದೇಹವಿತ್ತು. ಅನಂತರ ಅವರ ಬಗ್ಗೆ ತಿಳಿಯುತ್ತಾ ಹೋದ ಹಾಗೆ ಗೌರವ ಅಭಿಮಾನ ಬೆಳೆದಿದ್ದು. ಹಾಗಾಗಿ ಯೋಗಿಜಿ ಯ ಬಗ್ಗೆ ತಿಳಿಯಲು ಆಸಕ್ತಿ ಇರುವವರೆಗೆ ಹರ ಹರ ಯೋಗಿ ಒಂದೊಳ್ಳೆಯ ಪುಸ್ತಕ. ವಜ್ರಾದಪಿ ಕಠರಾಣಿ ಮೃದೂನೀ ಕುಸುಮಾದಪಿ" ಅನ್ನೋದು ಒಬ್ಬ ಸಮರ್ಥ ನಾಯಕನಿಗಿರಬೇಕಾದ ಲಕ್ಷಣ. ಅದನ್ನು ಗೋವಿನಂತೆ ಸಾ

ಸ್ವಾಪಿಂಗ್

ಮೋಡ ಕೆಲವೊಮ್ಮೆ ಮನಸ್ಸಿಗೂ ಕವಿಯುತ್ತೆ. ಅದರಲ್ಲೂ ಬಾನಲ್ಲಿ ಮೋಡ ಕಟ್ಟಿದಾಗ ಇಡಿ ವಾತಾವರಣದಲ್ಲಿ ಒಂದು ಬದಲಾವಣೆ ಆಗುತ್ತೆ. ಆಲಸ್ಯತನದ ಪರದೆಯೊಂದು ನಿಧಾನವಾಗಿ ಆವರಿಸುತ್ತೆ. ಮೊನ್ನೆ ಇಂಥಹುದೇ ಸೋಮಾರಿದಿನದಲ್ಲಿ ಏನೂ ಮಾಡಲು ಮನಸ್ಸಿಲ್ಲದ ಗಳಿಗೆಯಲ್ಲಿ ಶೆಲ್ಫ್ ಬಳಿ ಕೈ ಚಾಚಿದಾಗ ಸಿಕ್ಕಿದ್ದು "ಸ್ವಾಪಿಂಗ್." ತರ್ಕ ಕೊಟ್ಟಾಗಲೇ ಸುಪ್ರೀತ್ ಇದನ್ನೂ ಕೊಟ್ಟಿದ್ದ. ಓದದೇ ಹಾಗೆ ಇಟ್ಟಿದ್ದೆ. ಯಾವ ಪುಸ್ತಕವನ್ನೂ ಓದದೆ ಕಾಯಿಸದ ನಾನು ಇದನ್ಯಾಕೆ ಹಾಗೆ ಇಟ್ಟಿದ್ದೆ ಅನ್ನೋದು ಗೊತ್ತಿಲ್ಲ. ಮೊನ್ನೆ ಅದನ್ನು ಹಿಡಿದವಳು ಕೆಳಗೆ ಇಟ್ಟಿದ್ದು ಮುಗಿದ ಮೇಲೆಯೇ. ಮೊದಲೇ ಮೋಡ ಕವಿದಿದ್ದ ಮನಸ್ಸಿಗೆ ವಿಷಾದದ ಹೊದ್ದಿಕೆಯನ್ನು ಹೊಚ್ಚಿದ್ದು ಈ ಪುಸ್ತಕವೇ... ಓದಿಕೊಂಡಿದ್ದರೂ, ಅಧುನಿಕ ಮನೋಭಾವ ಎಂದರೂ ಕೆಲವಷ್ಟು ಗೆರೆಗಳನ್ನು ಎಳೆದುಕೊಂಡೇ ಬದುಕುವ, ನನಗೆ ಈ ಪದದ ಮೊದಲು ಕೇಳಿದಾಗ ಶಾಕ್ ಆಗಿತ್ತು. ಕಲ್ಪನೆಯಲ್ಲೂ ಚಿತ್ರಿಸಿಕೊಳ್ಳಲು ಭಯವಾಗಿತ್ತು. ಅಂತಹುದು ಎಲ್ಲೋ ಸೊಫಿಸ್ಟಿಕೇಟೆಡ್ ಅನ್ನೋ ಹೆಸರಿನಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ನಡೆಯುತ್ತದೆ ಅಂತ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದರೊಳಗೆ ಹತ್ತಿರದ ಒಂದು ನಗರದ ಹೆಸರು ಹೇಳಿ ಅಲ್ಲೂ ಈಗ ಶುರುವಾಗಿದೆ ಎಂದಾಗ ಬೆಚ್ಚಿಬಿದ್ದಿದ್ದೆ. ಲೈಂಗಿಕತೆ ವೈಯುಕ್ತಿಕ ವಿಷಯವಾದರೂ ಅದಕ್ಕೂ ಒಂದು ಲಕ್ಷ್ಮಣ ರೇಖೆಯಿದೆ. ಇದರ ಬಗ್ಗೆ ಭಾರತೀಯರಿಗೆ ಒಂದು ಪವಿತ್ರ ಭಾವನೆಯಿದೆ. ಅದು ಎಗ್ಗಿಲ್ಲದ

ಮಳೆ ಹೊಳೆ

ಮಳೆಯಿಲ್ಲ ಅಂತ ಬೈಕೊಂಡಿದ್ದು ಕೆಳಿಸ್ತೇನೋ ಕಣೆ ಒಂದೇ ಸಮನೆ ಸುರಿದು ಸಿಟ್ಟು ತೀರಿಸಿಕೊಳ್ತಾ ಇದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಈ ಗಾಳಿ ನೋಡು, ರಾಮಮಂಟಪ ಮುಳುಗಬಹುದೇನೋ  ಬರ್ತಿಯಾ ಮನೆಗೆ ಅಂತ ಚಿಕ್ಕಿ ಬೆಳ್ಬೆಳಿಗ್ಗೆ ಫೋನ್ ಮಾಡಿದ್ರೆ ರೆಕ್ಕೆ ಇರಬಾರದಿತ್ತ ಅನ್ನಿಸಿಬಿಡ್ತು. ಮಲೆನಾಡಿನ ಮಳೆ ಅನ್ನೋದು ಮರೆಯಾಗೆ ಬಿಡ್ತಾ ಅಂತ ಬೇಸರಿಸಿಕೊಳ್ಳುವ ವೇಳೆಗೆ ಸುರಿಯುತ್ತಿದೆ ಮಳೆ ಧಾರಾಕಾರವಾಗಿ. ಎಲ್ಲವನ್ನೂ ಕೊಚ್ಚಿ ಹೊಸತನ ತುಂಬಲು. ಬಾಲ್ಯ ಅಂದ್ರೆ ಊರು, ಊರು ಅಂದ್ರೆ ಮಳೆ. ಬದುಕಿನಲ್ಲಿ ಮಳೆ ಬೆಸೆದುಕೊಂಡಷ್ಟು ಇನ್ಯಾವುದೂ ಬೆಸೆದುಕೊಂಡಿಲ್ಲ. ಎದೆಯನ್ನು ಹಸನುಗೊಳಿಸಿ ನಳನಳಿಸ ಹಾಗೆ ಮಾಡೋದು ಮಳೆ ಮಾತ್ರ. ತನ್ನೆಲ್ಲಾ ಒಲವನ್ನು ಸುರಿಸುವ ಆಕಾಶ ಸುಮ್ಮನಾಗುತ್ತಿದ್ದಂತೆ ಒಮ್ಮೆ ಇಳೆಯನ್ನು ನೋಡಿ. ಪ್ರಸವಿಸಿ ಬೀಗುತ್ತಿರುತ್ತಾಳೆ. ಮಕ್ಕಳೋ ಚಿನ್ನಾಟವಾಡುತ್ತಾ ಇಡಿ ಪ್ರಕೃತಿಗೆ ಬಣ್ಣ ತುಂಬಿ ಮನೋಹರವಾಗಿಸಿರುತ್ತಾರೆ. ಅಲ್ಲಿಯವರೆಗೂ ಹರಿದು ಹರಿದು ಬೇಜಾರಾದ ಹಳ್ಳ ತೊರೆಗಳು ಸೋಮಾರಿಯಾಗಿ ಮೆಲ್ಲಗೆ ನಡೆಯುತ್ತಲೋ, ಕೆಲವೊಮ್ಮೆ ಒಣಗಿ ನಿದ್ದೆ ಮಾಡುತ್ತಲೋ ಕಾಲ ಕಳೆಯುವ ವೇಳೆಗೆ ಬರುವ ವರ್ಷಧಾರೆ ಅವನ್ನು ಬಡಿದೆಬ್ಬಿಸುವ ಪರಿ ನೋಡುವುದೇ  ಚೆಂದ. ಮನುಷ್ಯನ ದೌರ್ಜನ್ಯಕ್ಕೆ ಬಸವಳಿದ ಸೊರಗಿದ ನದಿಗಳಂತೂ ಮಳೆಯ ಭೇಷರತ್ ಬೆಂಬಲ ಸಿಕ್ಕಿದ ಕೂಡಲೇ ಕೊಬ್ಬುವ ಸೊಗಸು, ಸಂಭ್ರಮದಿಂದ ಉಕ್ಕಿ ಹರಿಯುವ ಪರಿ, ನನಗ್ಯಾರು ಸಾಟಿ ಎಂದು ಎಲ್ಲವನ್ನೂ

ಬರಿದೆ ಆಡುವ ಮಾತಿಗರ್ಥವಿಲ್ಲ...

ಮೊನ್ನೆ ಸ್ನೇಹಿತೆಯೊಬ್ಬರು ಶೇರ್ ಮಾಡಿದ ತೋಳ್ಪಾಡಿಯವರ ಭಾಷಣದ ತುಣುಕೊಂದು ಕೇಳುತ್ತಿದ್ದೆ. ಮಾತಿನ ಕುರಿತಾದ ಮಾತದು. ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನುವ ಬಸವಣ್ಣನವರ ವಚನವನ್ನು ಅವರು ಬಿಡಿಸಿಟ್ಟ ಪರಿಗೆ ದಂಗಾದೆ. ಮಾತು ಮುಗಿದರೂ ನನ್ನೊಳಿಗಿನ ಮೌನ ಮಾತಾಡುತಿತ್ತು. ಒಮ್ಮೆ ನಾವು ಮಾತಾಡುವುದನ್ನ ಗಮನಿಸುತ್ತಾ ಹೋದರೆ ನಾವೇನು ಅನ್ನುವುದು ಅರ್ಥವಾಗುತ್ತಾ ಹೋಗುತ್ತೇವಾ ಅನ್ನೋದನ್ನ ಆಲೋಚಿಸುತ್ತಲೇ ಇದ್ದೆ. ಮಾತಿಗೊಂದು ಮಾತು, ಮೆಚ್ಚಿಸಲು ಮಾತು, ಕೆರಳಿಸಲು ಮಾತು, ಮನಸ್ಸಿನ ಮಾತು, ಬುದ್ಧಿಯಮಾತು, ರಂಜಿಸಲು ಮಾತು ಹೀಗೆ ಮಾತಿಗೆ ಅದೆಷ್ಟು ಭಾವಗಳು, ಅದೆಷ್ಟು ದಾರಿಗಳು. ಮಾತಾಡಲು ಬರುತ್ತೆ ಅನ್ನೋ ಸಂಭ್ರಮದಲ್ಲಿ ಏನು ಮಾತಾಡ್ತೀವಿ, ಹೇಗೆ ಮಾತಾಡ್ತೀವಿ ಅಸಲಿಗೆ ಅಲ್ಲಿ ಮಾತಾಡುವ ಅವಶ್ಯಕತೆಯಿತ್ತಾ ಅದು ನಮ್ಮ ನಿಜವಾದ ಮಾತಾ ಉಹೂ ಯಾವುದನ್ನೂ ಆಲೋಚಿಸದೆ ಗಮನಿಸದೆ ಕೇವಲ ಮಾತಾಡುತ್ತೇವೆ ಹಲವು ಸಲ. ಈ ಬಾರಿ ಊರಿಗೆ ಹೋದಾಗ ಅಹಿ ಮತ್ತು ಅನೀಶನ ನಡುವೆ ಏನೋ ಮಾತುಕತೆ ನಡೆಯುತ್ತಿತ್ತು. ಯಾವುದೋ ಒಂದು ಹಂತದಲ್ಲಿ ನಡೆದ ಮಾತುಕತೆಯನ್ನು ತಂದು ಅವಳ ಮಾವನಿಗೆ ಹೇಳುವ ಆತುರದಲ್ಲಿ ಓಡಿ ಬಂದು ಹೇಳುತ್ತಿದ್ದವಳು ಪಕ್ಕಕ್ಕೆ ತಿರುಗಿದಾಗ ಅನೀಶನ ಮುಖದಲ್ಲಿ ಕಂಡ ಬದಲಾವಣೆ ಎಲ್ಲೋ ತಪ್ಪಿತಸ್ಥ ಮನೋಭಾವ ಹುಟ್ಟಿಹಾಕಿದರೂ ಅದನ್ನು ಮುಚ್ಚಿಕೊಳ್ಳುವ ಪ್ರಯತ್ನವೋ ಇಲ್ಲಾ ಸಮರ್ಥಿಸಿಕೊಳ್ಳುವ ಯತ್ನವೋ ಮಾಡುತ್ತಾ ನಾನು ನಿಜಾನೆ ಹೇಳಿದ್ದು ಕಣೋ ಅಂದ್ಲು.

ಕಣ್ಣಿದ್ದೂ ಕುರುಡು

ಟಿ.ವಿ ಯಲ್ಲಿ ಯಾವುದೋ ಶೋ ನೋಡ್ತಾ ಇದ್ವಿ ನಾನು ಮತ್ತು ಅಹಿ. ಅಮ್ಮಾ ನಿಂದು ಯಾವ ಟೀಂ ಅಂದ್ಲು. ನಂದು ರೆಡ್ ಟೀಂ ಅಂತ ನೋಡಲು ಶುರುಮಾಡಿದಳು. ಗೆದ್ದಾಗ ಕುಣಿಯುತ್ತಾ, ಸೋತಾಗ ಬೇಜಾರು ಮಾಡಿಕೊಳ್ಳುತ್ತಾ, ಮುಖ ಸಣ್ಣಗೆ ಮಾಡುತ್ತಾ , ಸಲಹೆಗಳನ್ನು ಕೊಡುತ್ತಾ ಮಗ್ನಳಾಗಿದ್ದ ಅವಳನ್ನೇ ನೋಡುತಿದ್ದೆ. ಬದುಕೇ ಹೀಗಾ... ನಾವು ಯಾವುದೋ ಒಂದರ ಜೊತೆಗೆ ಗುರುತಿಸಿಕೊಂಡು ಬಿಡುತ್ತೇವೆ. ಅವರು ಪರಿಚಯವಾ, ನಮಗೆ ಸಂಬಂದಿಸಿದ್ದಾ, ಅದರಿಂದ ಲಾಭವಾ, ನಷ್ಟವಾ, ಉಪಯೋಗವಾ ಉಹೂ ಯಾವುದನ್ನೂ ಯೋಚಿಸದೆ ನಮ್ಮನ್ನು ಹೀಗೆ ಕನೆಕ್ಟ್ ಮಾಡುವ ಆ ತಂತುವಾದರೂ ಯಾವುದು? ಮೊನ್ನೆ ಹೀಗೆ ಸದ್ಗುರು ಮಾತು ಕೇಳ್ತಾ ಇದ್ದೆ. ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಅನ್ನೋದೇ ಇಲ್ಲಾ, ಇರುವುದನ್ನ ಇದ್ದ ಹಾಗೆ ನೋಡುವುದನ್ನು ಸ್ವೀಕರಿಸುವುದನ್ನು ಕಲಿಯಬೇಕು ಅಂತಿದ್ರು. ಮತ್ತದೇ ನೆನಪಾಯಿತು. ಮನುಷ್ಯನ ದೊಡ್ಡ ಬಲಹಿನತೆಯೇ ಇದಾ.. ಎಲ್ಲವನ್ನೂ ಪೂರ್ವಾಗ್ರಹದಿಂದ, ಅಥವಾ ಯಾವುದೋ ಒಂದರ ಜೊತೆ ಸಮೀಕರಿಸಿಕೊಂಡು ನೋಡುವುದು. ನೋಡುವ ನೋಟಕ್ಕೆ ಕನ್ನಡಕಗಳನ್ನು ಸಹಜವಾಗಿ ಹಾಕಿಬಿಟ್ಟಿದ್ದೇವಾ.... ಫೇಸ್ಬುಕ್ ನಲ್ಲಿ ನಡೆಯುವ ಇಬ್ಬರ ಜಗಳವೋ, ದ್ವೇಷವೋ, ವಿರೋಧವೋ ಏನೋ ಒಂದು ಸ್ಟೇಟಸ್ ಆದ ಕೂಡಲೇ  ಅಲ್ಲಿ ಪರ ವಿರೋಧಗಳ ಪ್ರವಾಹವೇ ಹರಿಯಲು ಆರಂಭವಾಗುತ್ತದೆ. ಅಸಲಿಗೆ ಏನು ನಡೆದಿದೆ ತಿಳಿಯುವ ತಾಳ್ಮೆ, ಅದನ್ನು ವಿಶ್ಲೇಷಿಸುವ ಆಸಕ್ತಿ ಯಾರಿಗೂ ಇಲ್ಲ. ಆದರೆ ಹಾಕಿದವರೊಂದಿಗೆ ನಮ್ಮ ಸಂ

ಆಷಾಡದ ಮಳೆಯೂ ಹುರಳಿ ಸಾರೂ

Image
ಆಷಾಡವೆಂದರೆ ಜಡಿಮಳೆ ಮಾತ್ರವಲ್ಲ, ಮೈ ಕೊರೆಯುವ ಗಾಳಿ ಚಳಿ ಕೂಡ. ನಿಧಾನಕ್ಕೆ ತನ್ನ ಅಬ್ಬರ ಹೆಚ್ಚಿಸಿಕೊಂಡ ಮಳೆ ಇಳೆಯೂಡಲನ್ನು ತುಂಬಿ ಸಂಭ್ರಮದಿಂದ ಉಕ್ಕಿ ಹರಿಯುವ ಕಾಲ. ಎಲ್ಲೆಲ್ಲೂ ಜಲವೊಡೆದ ಇಳೆ ಹರಿಯುತ್ತಾ ನಗುತ್ತಾ ಹಸಿರುಕ್ಕಿಸುತ್ತಾ ತನ್ನೊಡಲಲ್ಲಿ ಮೊಳಕೆಯೊಡೆಯುವ ಕಾಲ. ಹೊರುವುದು, ಹೇರುವುದು ಎಷ್ಟು ಸಂಭ್ರಮ, ಎಷ್ಟು ಸುಂದರ, ಭಾವದಲ್ಲಷ್ಟೇ ಅಲ್ಲಾ ನೋಟದಲ್ಲೂ ಅನ್ನೋದು ಇಳೆ ಹೆಜ್ಜೆ ಹೆಜ್ಜೆಗೂ ನಿರೂಪಿಸುವ ಕಾಲವದು. ಈ ಮಳೆಯಲ್ಲಿ ಶಾಲೆಗೆ ಹೋಗುವುದೂ ಒಂದು ಆಟವೇ. ಹರಿವ ತೊರೆಗಳಲ್ಲಿ ನೀರಾಟವಾಡುತ್ತಾ, ಕಾಲ್ಬೆರಳುಗಳಲ್ಲಿ ನೀರು ಚಿಮ್ಮಿ ಒದ್ದೆಯಾಗುವುದಲ್ಲದೆ ಜೊತೆಯವರನ್ನೂ ಒದ್ದೆಯಾಗಿಸುತ್ತಾ ಅದೆಷ್ಟು ಭಾವಗಳು ಸದ್ದಿಲ್ಲದೇ ಗರ್ಭ ಕಟ್ಟುತ್ತಿದ್ದವೋ ಅನ್ನೋದು ಈಗ ನೆನಪಿನ ತೆರೆ ಸರಿಸಿದಾಗ ಮೂಡುವ ಭಾವದ ಮರಿಗಳನ್ನು ಗಮನಿಸಿದಾಗಲೇ ಅರ್ಥವಾಗೋದು. ಗೊರಬನ್ನು ತಲೆಗೆ ಹಾಕಿಕೊಂಡು ಸಾಗುವ ಗುಂಪು, ಗದ್ದೆಯಲ್ಲಿ ಬೆನ್ನು ಬಾಗಿ ಮಳೆಯ ಸದ್ದನ್ನೂ ಮೀರಿ ಮಾತಾಡುತ್ತಾ, ಎಲೆಅಡಿಕೆ ಜಗೆಯುತ್ತಾ ನಾಟಿ ಮಾಡುವ ಗುಂಪು ಯಾವ ಬಿ ಬಿ ಸಿ ಗೆ ಕಡಿಮೆಯಿತ್ತು. ಸುತ್ತೆಲ್ಲಾ ಊರು ಮನೆಗಳ ಜನರೆಲ್ಲಾ ಬಂದು ಹೋಗುವ ಮಾತಿನಲ್ಲಿ ಕಾಳಜಿಯೂ ಮಳೆಯ ತುಂತುರಿನಂತೆ ಕೆಲವೊಮ್ಮೆ ಕಚಗುಳಿ, ಆಪ್ತ.. ಕಂಬಳಿ ಹೊದ್ದು ಎತ್ತುಗಳಿಗೆ ನೊಗ ಕಟ್ಟಿ ಹೂಟಿ ಮಾಡುವ ಅವುಗಳನ್ನು ಗದರುವ ಸದ್ದುಗಳ ನಡುವೆ, ಹೆಂಗಳೆಯರ ಕಲರವಗಳ ಕೇಳಲು ಮಳೆಯೂ ಕೆಲವೊಮ್ಮೆ ಮೌನವಾಗಿ ಬಿಡ