Posts

Showing posts from March, 2020

ಅಯ್ಯಪ್ಪ. (ಉಭಯಭಾರತೀಯರು)

ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದವರಿಗೆ ಚಳಿಯ ತಡುವಿಕೆಗೆ ಎಚ್ಚರವಾಗಿ ಹೊದ್ದ ಕಂಬಳಿಯನ್ನು ಇನ್ನಷ್ಟು ಬಿಗಿಯಾಗಿ ಎಳೆದು ಕಿವಿಗೆ ಗಾಳಿ ಹೋಗದಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಕೂಗು ಕೇಳಿಸುತಿತ್ತು. ಅದಾಗಲೇ ನಾಲ್ಕು ಗಂಟೆ ಆಗಿ ಹೋಯಿತಾ ಎಂದು ಇನ್ನಷ್ಟು ಮುದುರಿ ಮಲಗುವಾಗ ಅರೆ ಅವರಿಗೆ ಚಳಿ ಯಾಕಾಗಲ್ಲ ಎನ್ನುವ ಪ್ರಶ್ನೆ ಕಾಡುತಿತ್ತು. ಮಲೆನಾಡಿನ ಅದರಲ್ಲೂ ಧನುರ್ಮಾಸದ ಚಳಿಯ ಪರಿ ಕೇಳುವುದೇ ಬೇಡ. ಅಲ್ಲಿ ಚಳಿಯನ್ನು ಅಳೆಯುತ್ತಿದ್ದದ್ದೆ ಹೊದೆಯಲು ಎಷ್ಟು ಕಂಬಳಿ ಬೇಕು ಎನ್ನುವ ಆಧಾರದ ಮೇಲೆ. ಡಿಸೆಂಬರಿನ ಆ ಕರುಳು ನಡುಗಿಸುವ ಚಳಿಗೆ ಮೂರು ಕಂಬಳಿಯಾದರೂ ಬೇಕಿತ್ತು. ಇಂಥ ಚಳಿಗಾಲದಲ್ಲಿ ಬ್ರಾಹ್ಮಿ ಮಹೂರ್ತ ದಲ್ಲಿ ಎದ್ದು, ತುಂಗೆಯಲ್ಲಿ ಸ್ನಾನ ಮಾಡಿ ಒಂದು ಪಂಚೆ ಉಟ್ಟು , ಶಲ್ಯ ಹೊದ್ದು ಅಯ್ಯಪ್ಪನ ಸ್ಮರಣೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೂ ಸುಮಾರು ಒಂದು ಮೈಲಿ ಆ ಕತ್ತಲೆಯಲ್ಲಿ ನಡೆದು ಬರುತ್ತಿದ್ದ ಅವರು ಅಚ್ಚರಿ ಹುಟ್ಟಿಸುತ್ತಿದ್ದರು. ಆ ಚಳಿಯನ್ನು ಅವರು ಎದುರಿಸುತ್ತಿದ್ದದ್ದು ಹೇಗೆ? ಇನ್ನಷ್ಟು ಬೆಚ್ಚಗೆ ಮಲಗಬೇಕು ಎನ್ನುವ ಆಸೆ ಕೊಡವಿ ಏಳುವುದು ಸುಲಭವಾ ಎನ್ನುವ ಪ್ರಶ್ನೆಮೂಡುವುದರ ಜೊತೆಜೊತೆಗೆ ಅವರ ಧೀ   ಶಕ್ತಿ ಬೆರಗು ಹುಟ್ಟಿಸುತ್ತಿತ್ತು. ಒಂದು ಹೆಸರು ಅಥವಾ ವ್ರತ ಇಷ್ಟು ಗಟ್ಟಿಗರನ್ನಾಗಿ ಮಾಡಬಹುದಾ.. ಆ ದೇವಾಲಯದ ಆಕರ್ಷಣೆ ಇಷ್ಟು ಸಂಕಲ್ಪ ಶಕ್ತಿ ತುಂಬಬಹುದಾ ಎನ್ನುವ

ಸಾವರ್ಕರ್.

ಬ್ಯಾರಿಸ್ಟರ್ ಪದವಿ ಪಡೆಯಲು ಹೊರಟ ಸಾವರ್ಕರ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ಹಡಗಿನಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮಂದಿ ಭಾರತೀಯರು ಮಾತ್ರ. ಅದರಲ್ಲಿದ್ದ ಬ್ರಿಟಿಷರು ಪಂಚೆ ಉಟ್ಟು ಕಿವಿಗೆ ಕಡಕು ಹಾಕಿಕೊಂಡು ನಿಂತಿದ್ದ ಅವರನ್ನು ನೋಡಿ ಯಾರೋ ಹಳ್ಳಿ ಗಮಾರ ಎಂದು ತಿರಸ್ಕಾರದಿಂದ ಕಾಣುತ್ತಿದ್ದರು. ಮೊತ್ತ ಮೊದಲ ಬಾರಿಗೆ ಶತ್ರುಗಳ ಎದುರಿಗೆ ಒಂಟಿಯಾಗಿ ನಿಂತ ಭಾವ ಕಾಡುವ ಹೊತ್ತಿಗೆ ಒಬ್ಬ ಸಿಖ್ ಹುಡುಗ ಹರನಾಮ ಸಿಂಹ ಎದುರಾಗಿದ್ದ. ನೀವೇನಾ ಸಾವರ್ಕರ್ ಎಂದು ಕೇಳಿದ್ದ. ಹೌದು ಎನ್ನತ್ತಲೇ ಸಧ್ಯ ನನ್ನ ನಾವಿಬ್ಬರೂ ಒಂದೇ ಕೋಣೆ, ಭಾರತೀಯರೇ ಸಿಕ್ಕರಲ್ಲ ಎಷ್ಟು ಖುಷಿಯಾಗುತ್ತಿದೆ ಗೊತ್ತೇ ಅಂದಿದ್ದ. ಅಲ್ಲಿದ್ದ ಎಂಟು ಹತ್ತು ಜನ ಭಾರತೀಯರಲ್ಲಿ ಒಬ್ಬ ಹಿರಿಯ ಪಂಜಾಬಿ ಒಬ್ಬರಿದ್ದರು. ಅವರಾಗಲೇ ಹತ್ತು ಹಲವು ಸಲ ಲಂಡನ್ ಹೋಗಿ ಬಂದಿದ್ದರಿಂದ ಅವರನ್ನೇ ವಿದೇಶಿ ರೀತಿ ನೀತಿ, ರಿವಾಜು ಕಲಿಯುವ ಗುರುಗಳಾಗಿ ಸ್ವೀಕರಿಸಿದರು ಸಾವರ್ಕರ್.ವೇಷ ಭೂಷಣ, ತಿನ್ನುವ ರೀತಿ ಎಲ್ಲವನ್ನೂ ಹೊಸದಾಗಿ ಕಲಿಯಬೇಕಿತ್ತು. ಅಲ್ಲಿನ ಸಮಾಜದಲ್ಲಿ ಬೆರೆತಾಗ ಮಾತ್ರ ಉದ್ದೇಶ ಸಾಧನೆ ಸಾಧ್ಯ ಎಂದು ಅರಿವಿದ್ದ ಸಾವರ್ಕರ್ ಕಲಿಯಲು ತೊಡಗಿದ್ದರು. ಸಂಜೆಯ ಹೊತ್ತು ಎಲ್ಲರೂ ಹಡಗಿನ ಡೆಕ್ ಮೇಲೆ ಓಡಾಡಲು ಹೋಗುತ್ತಿದ್ದರು. ಹರನಾಮ ಸಿಂಹನ ಪೇಟವನ್ನು ನೋಡಿ ಅಲ್ಲಿದ್ದ ಬ್ರಿಟಿಶ್ ಹುಡುಗರು ನಗುತ್ತಿದ್ದರು, ಹತ್ತಿರ ಬಂದು ಇದೇನು ವಿಚಿತ್ರ ವೇಷ ಎಂದು ಅಣಕಿಸುತ್ತಿದ್ದರು. ಅ