Posts

Showing posts from July, 2019

ಶ್ರಾವಣ (Vijayakarnataka 29.07.19)

ಇನ್ನೇನು ಶ್ರಾವಣ ಬಂತು ಎಂದು ಅಜ್ಜಿ ಹೇಳುವ ಹೊತ್ತಿಗೆ ಚಿಕ್ಕಿಯ ಮುಖ ಕೊಂಚ ಕೆಂಪಾಗಿದ್ದು ಯಾಕೆ ಎಂದು ಯೋಚಿಸುವ ಹೊತ್ತಿಗೆ ರೇಡಿಯೋದಲ್ಲಿ ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ ಎನ್ನುವ ಹಾಡು ಶುರುವಾಗಿತ್ತು. ಶ್ರಾವಣ ಎಂದರೆ ಸಂತಸ ಅಡಿಯಿಡುವ ಹೊತ್ತು. ಅವಳಿಗೋ ಮರಳುವ ತವಕ, ನಮಗೋ ಹಬ್ಬಗಳ ಸಾಲು ಸಾಲು ಹೊತ್ತು ತರುವ ಸಿಹಿಯ ಕನಸು, ಹೆಂಗಸರಿಗೆ ವ್ರತ, ಪೂಜೆ ನೇಮಗಳಿಗೆ ಸಿದ್ಗಧರಾಗುವ ಗಡಿಬಿಡಿ. ಗಂಡಸರಿಗೆ ವ್ಯವಸಾಯ ಕೆಲಸಗಳು ಮುಗಿದ ನಿರಾಳ ಭಾವ. ಒಟ್ಟಿನಲ್ಲಿ ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಭಕ್ತಿ, ಶ್ರಾವಣ ಎಂದರೆ ಸಿಹಿಯೂಟ. ಶ್ರಾವಣ ಎಂದರೆ ಸಮಾಧಾನ,  ಶ್ರಾವಣ ಎಂದರೆ ಧಾರ್ಮಿಕ ಆಚರಣೆಗಳ ಶುರುವಾತು. ಬಾಲ್ಯ ಕಳೆದು, ಹರೆಯದ ಹುಮ್ಮಸ್ಸು ದಾಟಿ ಬಂದು ಈಗ ದಿಟ್ಟಿಸಿದರೆ ಶ್ರಾವಣ ಎಂದರೆ ನವವಧುವಿನಂತೆ ಕಾಣಿಸುತ್ತದೆ. ಮೈ ಮನಗಳಲ್ಲಿ ಪುಳಕ ಹುಟ್ಟಿಸುತ್ತದೆ. ಮಳೆಯನಾಡು ತೊಯ್ಯುತಿರೆ, ಮಂಜಿಗಿರುಳು ಬೆದರುತಿರೆ ಸೋನೆ ತಿರೆಯು ತೊಯ್ಯುತಿರೆ ಮಿಂಚೆ ತಿಮಿರ ನಡುಗುತಿರೆ ಮುದವು ಮೊಳೆದು ನಮೆವುದು .... ಎಂಬ ಪುತಿನ ಸಾಲುಗಳಂತೆ ಮಲೆನಾಡಿನ ಮಳೆಯೇ ಹಾಗೆ, ಸುರಿದರೆ ಸುರಿಯುತ್ತಲೇ ಇರುತ್ತದೆ. ರಚ್ಚೆ ಹಿಡಿದ ಮಗುವಿನಂತೆ, ಮುನಿಸಿಕೊಂಡ ಮುಗುದೆಯಂತೆ. ಅದರಲ್ಲೂ  ಆಷಾಢದ ಭೋರುಗಾಳಿ, ಅಬ್ಬರದ ಮಳೆ ಹುಚ್ಚು ಹಿಡಿಸಿಬಿಡುತ್ತದೆ. ಶ್ರಾವಣ ಬರುವ ಹೊತ್ತಿಗೆ  ಫಾರ್ಮ್ ಕಂಡುಕೊಂಡ ಆಟಗಾರನ ಹಾಗ

ತುಷಾರ ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರವಲ್ಲ

ಒಂದು ತಿಂಗಳು ಆಯ್ತು ಮಾತಾಡದೇ ಈಗ ಮಾತಾಡ್ತೀನಿ ಅಂದ್ರೂ ಅವರೇ ಇಲ್ಲ ಏನ್ಮಾಡೋದು ಅಕ್ಕ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದವನ ನೋಡುತ್ತಿದ್ದವಳ ಕಣ್ಣಲ್ಲೂ ಮಳೆ ಹನಿಯುತ್ತಿತ್ತು. ಬೆಳಿಗ್ಗೆ ಸೂರ್ಯನೂ ಏಳುವ ಮೊದಲೇ ಮೊಬೈಲ್ ಸದ್ದು ಮಾಡಿ ಸದ್ದಿಲ್ಲದೇ ಎದ್ದು ಹೊರಟ ಅಪ್ಪನ ಸುದ್ದಿ ಬಿತ್ತರಿಸಿತ್ತು. ಇಲ್ಲಿ ಕುಳಿತವನ ಕಣ್ಣಲ್ಲಿ ಒಂದೇ ಸಮನೆ ನೀರು ಹರಿಯುತಿತ್ತು. ಮಾತು ತಡವರಿಸಿ ತಡವರಿಸಿ ಬರುತಿತ್ತು. ನಿಲ್ಲದ ಕುಡಿತಕ್ಕೆ, ಯಾವುದೋ ಮಾತಿಗೆ ಮಾತು ಬೆಳೆದು ಕೋಪಗೊಂಡು ಹೊರಟಿದ್ದ ಮಗ ಮಾತಾಡದೆ ಉಳಿದಿದ್ದ. ಅಪ್ಪನ ಮೇಲೆ ಮುನಿಸಿಕೊಂಡಿದ್ದ. ಅಪ್ಪ ಬದಲಾಗಬಹುದು, ಮುಂದೊಂದು ದಿನ ಕೋಪ ಇಳಿಯಬಹುದು ಅಂದುಕೊಂಡು ಬಂದರೆ ಬರಲಾರದ ದೂರಕ್ಕೆ ಅಪ್ಪ ಹೊರಟುಹೋಗಿದ್ದ. ಆಡಬಹುದಾದ ಮಾತು ಉಳಿಸಿಕೊಂಡು ಕಾದು ಕುಳಿತಿದ್ದ. ಹೀಗೆ ಸಣ್ಣಗೆ ಹನಿಯುತ್ತಿದ್ದ, ಮಬ್ಬು ಬೆಳಕು ಹರಡಿದ್ದ, ಆಲಸ್ಯದ  ದಿನವೊಂದರಲ್ಲಿ ತುಂಬಿಕೊಳ್ಳುವ ಖಾಲಿತನ ಓಡಿಸಲು ಅಶ್ವತ್ಥರ ಹಾಡು ಕೇಳುತ್ತಾ ಸುಮ್ಮನೆ ಕುಳಿತಿದ್ದೆ. ಅವರ ದನಿಯೆಂದರೆ ಹಾಗೆ ಹೇಳಲಾಗದ ಸೆಳೆತ. ಅದರಲ್ಲೂ ಇಂಥ ವಾತವರಣದಲ್ಲಿ ಅದು ದಿವ್ಯೌಷಧ ಇದ್ದ ಹಾಗೆ. ಬೇಸರಕ್ಕೆ ಕಿವಿಯಾಗಿ, ಮಾತಿಗೆ ಜೊತೆಯಾಗಿ, ಒಂಟಿತನಕ್ಕೆ ಹೆಗಲಾಗಿ, ಮೌನಕ್ಕೆ ಶೃತಿಯಾಗಿ,ಉಸಿರಿನೊಂದಿಗೆ ಮಿಳಿತವಾಗಿ ಜೊತೆಜೊತೆಗೆ ಕೈ ಹಿಡಿದು ಸಾಗುತ್ತದೆ. ಮೋಡಕವಿದಿರುವಾಗ, ಮಳೆ ಹನಿಯುವಾಗ, ಬಿರುಬಿಸಿಲು ಕಾಯುವಾಗ, ಚಳಿ ಮರಗಟ್ಟಿಸುವಾಗ, ನೀರವತೆ

hosadiganta.. 21.07.19

ಆಷಾಢ ಅಂದರೆ ಭೋರುಮಳೆ, ಭಾರಿ ಗಾಳಿ, ಸಣ್ಣ ಚಳಿ. ಮುನಿಸಿಕೊಂಡ ಮಗುವಿನಂತೆ ರಚ್ಚೆ ಹಿಡಿಯುವ ಮಳೆ, ಕೆಲವೊಮ್ಮೆ ಸಮಾಧಾನಗೊಂಡ ಮಡದಿಯ ಹಾಗೆ ಹಳುವಾದರೂ ಬಿಸಿಲು ನಸು ನಕ್ಕರೂ ನಂಬುವ ಹಾಗಿಲ್ಲ. ಅದರದ್ದು ಅಲ್ಪಾಯುಷ್ಯ. ಹಾಗಾಗಿ ಆಷಾಢವೆಂದರೆ ಚಂಚಲ, ಅನ್ನುವ ಆಲೋಚನೆ ಮೂಡುವ ಹೊತ್ತಿಗೆ ನಮ್ಮ ರಾಜಕಾರಣಿಗಳಷ್ಟ ಅನ್ನುವ ಪ್ರಶ್ನೆಯೊಂದು ಮೂಡಿ ಬಿಸಿಲುಕೋಲಿನಂತೆ ಕಂಡು ಮಾಯವಾಗುವಾಗಲೇ ಮನಸ್ಸು ಮತ್ತದೇ ಕಾರ್ಮೋಡ ಕವಿದ ಆಷಾಢದ ಆಕಾಶ. ಪ್ರಸ್ತುತ ಕರ್ನಾಟಕದ ರಾಜಕೀಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಇಲ್ಲೂ ಅದೇ ಕಣ್ಣುಮುಚ್ಚಾಲೆ, ಎರಡೂ ಪಕ್ಷಗಳನ್ನು ಕವಿದ ಕಾರ್ಮೋಡ, ಬಿರುಮಳೆ ಸುರಿಯಬಹುದಾ ಅನ್ನುವ ಆತಂಕ, ಕವಿದ ಮೋಡ ಕರಗಬಹುದಾ ಅನ್ನುವ ನಿರೀಕ್ಷೆಯಲ್ಲಿ ಅಧ್ಯಕ್ಷ ಪೀಠದತ್ತ ದೃಷ್ಟಿ ನೆಟ್ಟವರು, ಚರ್ಚೆ, ವಾದ, ವಿವಾದದ ಗಾಳಿಗೆ ಒಮ್ಮೆ ಅತ್ತ ಒಮ್ಮೆ ಇತ್ತ ಸುಳಿದಾಡುವ ಗೆಲುವಿನ ನಗು, ನಿಟ್ಟುಸಿರು ಬಿಡುವ ವೇಳೆಗೆ ಮತ್ತದೇ ಆತಂಕ ಏನಾಗಬಹುದು ಅನ್ನುವ ಗೊಂದಲ. ಒಟ್ಟಿನಲ್ಲಿ ಸದನದ ಒಳಗೂ ಹೊರಗೂ ಆಷಾಢ ಆವರಿಸಿಕೊಂಡಿದೆ. ಪ್ರತಿಯೊಂದಕ್ಕೂ ಕಾರಣಗಳು ಇರುವ ಹಾಗೆ ಸಮರ್ಥನೆಗಳೂ ಇರುತ್ತವೆ. ಆ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಸಮಜಾಯಿಸಿ ಕೊಡುವ ಆತುರದಲ್ಲಿ ಜ್ಞಾನ, ಬುದ್ಧಿವಂತಿಕೆ, ಭಾಷೆಯ ಜೊತೆ ಜೊತೆಗೆ ವ್ಯಕ್ತಿಯ ವ್ಯಕ್ತಿತ್ವದ ಅನಾವರಣವೂ ಆಗುತ್ತಿರುತ್ತದೆ. ಆಡುವ ಮಾತು ನಮ್ಮದಾ, ಅದು ಅನುಭವಕ್ಕೆ ದಕ್ಕಿದ್ದಾ, ಪ್ರಾಮಾಣಿಕವಾಗಿದ್

ಆಷಾಢ

ಆರ್ಭಟಿಸುತ್ತಾ ಗುಡುಗುತ್ತಾ, ಸಿಡಿ ಸಿಡಿ ಅನ್ನುತ್ತಲೇ ಅಡಿಯಿಡುವ ಮಳೆರಾಯ ನೆನೆಸುತ್ತಾ ಮತ್ತೆ ಮಾಯವಾಗುತ್ತಾ, ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾಗುತ್ತಾ ಬರುವಾಗ ಆರಂಭಿಕ ಪ್ರಾಯೋಗಿಕ ಪಂದ್ಯಗಳ ಆಟಗಾರನ ಹಾಗೆ ಅನ್ನಿಸಿದರೂ ತನ್ನ ಲಯ ಕಂಡುಕೊಂಡು ಸಂಪೂರ್ಣ ಸಾಮರ್ಥ್ಯ ಪ್ರಯೋಗಿಸುವಾಗ ಆಷಾಢ ಹೆಜ್ಜೆಯಿಟ್ಟು ಬಂದಿರುತ್ತದೆ. ಅಲ್ಲಿಗೆ ಮಳೆಗಾಲ ಸ್ಥಿರವಾಗಿ ನಿಂತಂತೆ. ಮುಂದಿನ ಬೇಸಾಯದ ಕಾರ್ಯಗಳಿಗೆ ನಾಂದಿ ಹಾಡಿದಂತೆ. ಹಾಗಾದರೆ ಆಷಾಢ ಹೇಗಿರುತ್ತೆ? ಭೋರೆಂದು ಬೀಸುವ ಗಾಳಿ, ಕಪ್ಪು ಟಾರ್ಪಾಲ್ ಹಾಸಿದಂತೆ ಮಲಗಿರುವ ತುಂಬು ಬಸುರಿ ಕಪ್ಪು ಮೋಡಗಳು, ಮಬ್ಬು ಬೆಳಕು, ಹೊಯ್ಯುವ ಮಳೆ, ಕಿಬ್ಬೊಟ್ಟೆಯಾಳದಲ್ಲಿ ಹುಟ್ಟಿ ಸುಳಿ ಸುತ್ತುವ ಸಣ್ಣ ಚಳಿ, ಹರಿಯುವ ಕೆಂಪು ನೀರು, ತುಂಬಿಕೊಳ್ಳಲು ಆರಂಭಿಸಿದ ಹಸಿರು, ನೆಮ್ಮದಿಯ ಉಸಿರು. ಕಾದು ಕಾದು ನೆನೆದು ಒದ್ದೆಯಾದ ನೆಲ ಹದವಾಗಿ ಬಿತ್ತನೆಗೆ ತಯಾರಾಗಿರುವ ಈ ಸಮಯದಲ್ಲಿ ಬೆಟ್ಟದಷ್ಟು ಕೆಲಸ. ಮುಂದಿನ ಒಂದು ವರ್ಷದ ಹೊಟ್ಟೆಯ ಚೀಲ ತುಂಬಿಕೊಳ್ಳುವ ಕಾರ್ಯ ಶುರುವಾಗುವುದೇ ಇಲ್ಲಿಂದ. ಕೆಲಸಕ್ಕೆ ಹೋಗಲು ವಾತಾವರಣ ಪೂರಕವೇ ಎಂದರೆ ಖಂಡಿತ ಅಲ್ಲ. ರಚ್ಚೆ ಹಿಡಿದ ಮಗುವಿನಂತೆ ಒಂದೇ ಸಮನೆ ಸುರಿಯುವ ಮಳೆ, ಗಾಳಿಯ ರಭಸಕ್ಕೆ ತೆಕ್ಕೆಗೆ ಸಿಗದೇ ತಪ್ಪಿಸಿಕೊಂಡು ಓಲಾಡುವ ಕೆಲವೊಮ್ಮೆ ಬಾಗಿ ನೆಲ ಚುಂಬಿಸುವ  ಗಿಡ, ಮರಗಳು, ಕಿಟಕಿ ಬಾಗಿಲು ಮುಚ್ಚಿದರೂ ಕಳ್ಳನಂತೆ ಒಳಗೆ ನುಸುಳಿ ಅಪ್ಪುವ ಚಳಿ, ಅದರಿಂದ ಪಾರಾಗಲು ಮುದುಡಿ