Posts

Showing posts from September, 2020

ಅಟ್ಟ

 ನಾಳೆ ಅಟ್ಟ ಗುಡಿಸಬೇಕು ಅವಳ ಸ್ವಗತ  ನಮಗೆ ಸಂಭ್ರಮ. ನಡುಮನೆಯ ಮೂಲೆಯಲ್ಲಿದ್ದ ಏಣಿಯ ಕಡೆಗೆ ಗಮನ.  ನಡುಮನೆಯ ಮಾಡಿಗೂ ನೆಲಕ್ಕೂ ಮಧ್ಯದಲ್ಲಿ ಮರದ ಹಲಗೆ ಹಾಸಿ ಮಾಡಿದ ಅಟ್ಟ  ನೋಡಿದಾಗಲೆಲ್ಲ ಯಾಕೋ ತ್ರಿಶಂಕು ಸ್ವರ್ಗವೇ ನೆನಪಿಗೆ ಬರುತಿತ್ತು. ಸ್ವರ್ಗದಲ್ಲಿದ್ದು ಇಲ್ಲಿಲ್ಲ ಅನ್ನುವ  ಯಾವ ವಸ್ತುವೂ ಇರಬಾರದು ಎಂದು ಹಠದಿಂದಲೇ ಸೃಷ್ಟಿ ಮಾಡಿದ್ದನಂತೆ. ಮನೆಯಲ್ಲಿ ಯಾವ ವಸ್ತು ಕೇಳಿದರು ಅಲ್ಲಿ ಅಟ್ಟದಲ್ಲಿ ಇರಬೇಕು ನೋಡು ಎನ್ನುವ ಮಾತು ಕೇಳಿದಾಗ ಇದು ನೆನಪಾಗುತಿತ್ತು. ಹಾಗಾಗಿ ಅಟ್ಟವೆಂದರೆ ಬಹು ವರ್ಷಗಳ ತನಕ ನನ್ನ ಪಾಲಿಗೆ ತ್ರಿಶಂಕು ಸ್ವರ್ಗ. ಏಣಿ ಹತ್ತಿ ಅಟ್ಟ ಏರಿದ ಕೂಡಲೇ ಸ್ವಾಗತಿಸುತ್ತಿದ್ದದ್ದು ಕಡುಕತ್ತಲು. ಎಲ್ಲೋ ಗಾಳಿಗೆ ಸರಿದ ಹಂಚಿನ ಸಂದಿಯಿಂದಲೋ, ಕಡು ಮಾಡಿನ ಮೂಲೆಯಿಂದಲೋ ಒಂದು ಸಣ್ಣ ಬೆಳಕು ಬಂದರು ಬೆಳಕು ಕಾಣಿಸುತಿತ್ತೇ ಹೊರತು ಅಟ್ಟ ಕಾಣಿಸುತ್ತಿರಲಿಲ್ಲ. ಆ ಮಟ್ಟಿಗೆ ಅಟ್ಟ ತನ್ನಲ್ಲಿದ್ದ ರಹಸ್ಯವನ್ನು ಕಾಪಾಡಿಕೊಳ್ಳುತಿತ್ತು. ಯಾರೇ ಬಂದರೂ ತಕ್ಷಣಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಏನಾದರೂ ತೆಗೆದುಕೊಂಡು ಬರಲು ಹೋದರೆ ಪಕ್ಕನೆ ಸಿಗುತ್ತಿರಲಿಲ್ಲ. ಒಂದು ಬೆಳಕಿನ ಕಿಡಿಯೂ ಇಲ್ಲದೆ ಕಣ್ಣು ಮುಚ್ಚಿಕೊಂಡು ಹೋದರೂ ಅಜ್ಜಿಗೆ ಸಿಗುತ್ತಿದ್ದ ವಸ್ತು ಬ್ಯಾಟರಿ ಹಿಡಿದು ಹೋದರೂ ನಮಗೆ ಸಿಗದಿದ್ದಾಗ ಸಿಟ್ಟು ಬರುತಿತ್ತು. ಇಟ್ಟಿದ್ದು ನಾನಲ್ವ ಹಾಗಾಗಿ ಬೇಗ ಸಿಗುತ್ತೆ ಅನ್ನುವ ಮಾತಿನ ಅರ್ಥ ಆಗ ಆಗಿರಲೇ ಇಲ್ಲ. ಸ್ವಲ್ಪ ತಿಳುವ

ಬಿಸಿ ಬೇಳೆ ಬಾತ್

 ನಿಮ್ಮ ಕಡೆ ಬಿಸಿಬೇಳೆ ಬಾತ್ ತುಂಬಾ ಫೇಮಸ್ ಅಲ್ವ, ಮನೆಯ ಹಿಂದಿನ ಹಿತ್ತಿಲಿನ ಕಲ್ಲು ಬೆಂಚಿನ ಮೇಲೆ ಕುಳಿತು ಅವರು ಕೇಳುತ್ತಿದ್ದರು. ಅದು ಆಂಧ್ರದ ಒಂದು ಪುಟ್ಟ ಊರು. ಕೃಷ್ಣಾ ನದಿಯ ದಂಡೆಯ ಮೇಲಿದ್ದ ಕುಗ್ರಾಮ. ಆ ರಸ್ತೆಯ ಕೊನೆಗೆ ಇದ್ದ ಊರದು. ಬಾಗಿ ಹರಿಯುತ್ತಿದ್ದ ನದಿಯ ದಂಡೇ, ಈ ಕಡೆ ದಟ್ಟ ಕಾಡು. ನಕ್ಸಲರ ತಂಗುದಾಣ ಎಂದೇ ಪ್ರಸಿದ್ಧಿ ಆಗಿತ್ತು. ತೆಲುಗು ಬಿಟ್ಟು ಬೇರೆ ಯಾವ ಭಾಷೆಯೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದ್ದ ನಾವು ಆಗಷ್ಟೇ ಭಾಷೆ ಮಾತ್ರವಲ್ಲ ಆ ರಾಜ್ಯದ ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಕಲಿಯುತ್ತಿದ್ದೆವು. ಆಗ ಆಹಾರದ ವಿಷಯ ಮಾತಾಡುವಾಗ ಈ ಪ್ರಶ್ನೆ ಕೇಳಿದ್ದರು. ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟಿದ್ದೆ. ತವರು ಮನೆಯಲ್ಲಿ ಮನೆ ತುಂಬಾ ಮಕ್ಕಳು, ಸಣ್ಣ ದೇವಸ್ಥಾನದ ಪೂಜೆ, ಸ್ವಲ್ಪೇ ಸ್ವಲ್ಪ ಜಮೀನು. ಜೊತೆಗೆ ಸ್ವಾತಂತ್ರ್ಯ ಹೋರಾಟದ ದಿನಗಳು ಅವು. ಹಾಗಾಗಿ ಎಲ್ಲರ ಮನೆಯ ಹಾಗೆ ಅವರ ಮನೆಯ್ಲಲೂ ಬಡತನ. ಇದ್ದಿದ್ದರಲ್ಲೇ ಅಚ್ಚುಕಟ್ಟು ಮಾಡಿ ತಿನ್ನುವ ಅಭ್ಯಾಸ ಎಳವೆಯಲ್ಲಿ ಹಾಗಾಗಿ ಅವಳಿಗೆ ಅಭ್ಯಾಸ ಆಗಿ ಹೋಗಿತ್ತು. ಮದುವೆ  ಆಗಿ ಬಂದ ಮೇಲೆ ಗಂಡ ದುಡಿದರೂ ಇಸ್ಪೀಟು ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಮನೆಗೆ ಬರುತ್ತಿದ್ದದ್ದು. ಇದ್ದ ಸ್ವಲ್ಪ ಜಮೀನಿನ ಉತ್ಪನ್ನವೇ ಬದುಕಿಗೆ ಆಧಾರ. ಆದರೂ ಅವಳೇನು ಧೃತಿ ಗೆಟ್ಟವಳಲ್ಲ. ಬಹು ಅಚ್ಚುಕಟ್ಟು. ವಾಸ್ತವ ಅರ್ಥಮಾಡಿಕೊಂಡವಳು. ಹಾಗಾಗಿ ಯಾವುದಕ್ಕೂ ಆಸೆ ಪಡದೆ ಇದ್ದಿದ್ದರಲ್ಲಿ ಹೇಗ

ಮನಸ್ಸಿಗೊಂದು ಕೋಣೆ ಬೇಕು

ಪ್ಯಾಸೇಜ್ ನ ಕೊನೆಯಲ್ಲಿ ಅದೊಂದು ಪುಟ್ಟ ರೂಮ್. ಪುಟ್ಟದು ಎಂದರೆ ನಾಲ್ಕು ಜನ ಹೋದರೆ ಇನ್ನೊಬ್ಬರು ಹೋಗಲು ಯೋಚಿಸುವ ಹಾಗಿದ್ದ ರೂಮ್. ಅಲ್ಲೊಂದು ಆಳೆತ್ತರದ ಕನ್ನಡಿ. ಭರತನಾಟ್ಯಮ್  ಕ್ಲಾಸ್ ಗೆ ಹೋಗುವ ಮುನ್ನ ಯುನಿಫಾರ್ಮ್ ಸೀರೆ ಉಡಲು ಆ ರೂಮ್ ಎಂದು ಬಿಡಲಾಗಿತ್ತು. ಅದಕ್ಕೊಂದು ಕಿಟಕಿ ತೆರೆದರೆ ಪಕ್ಕದ ರಸ್ತೆ ನಿಚ್ಚಳವಾಗಿ ಕಾಣಿಸುತಿತ್ತು. ಬೆಳಿಗ್ಗೆ ಕ್ಲಾಸ್ ಗೆ ಹೋಗುವ ಮುನ್ನ ಏನೂ ಗೊತ್ತಾಗದಿದ್ದರೂ ಕ್ಲಾಸ್ ಮುಗಿಸಿ ಇಳಿಯುವ ಬೆವರನ್ನು ಒರೆಸಿಕೊಳ್ಳುತ್ತಾ, ಅಲೊಸ್ಟ್ ನೆಂದಿರುತ್ತಿದ್ದ  ಡ್ರೆಸ್ ಬದಲಾಯಿಸುವಾಗ ಮಾತ್ರ ಘಮ್ಮನೆ ವಾಸನೆ. ಕಿಟಕಿ ಬಾಗಿಲು ಇದ್ದರೂ ತೆಗೆಯುವ ಹಾಗಿಲ್ಲದ ಮುಚ್ಚಿದ ಪ್ರಪಂಚ. ಹಾಗೆ ಮುಚ್ಚಿದ ಪ್ರಪಂಚದಲ್ಲಿ ಕುಳಿತು ಗೆಳತಿಯರ ಲೋಕ ಬಿಚ್ಚಿಕೊಳ್ಳುತಿತ್ತು. ಐದು ನಿಮಿಷ ಸಿಕ್ಕಿದರೂ ಇನ್ನೊಂದು ಕ್ಲಾಸ್ ಶುರುವಾಗುವ ಎರಡು ನಿಮಿಷ ಇದ್ದರೂ ನಾವೆಲ್ಲರೂ ಅಲ್ಲಿಯೇ ಸೇರುತ್ತಿದ್ದೆವು. ಅಲ್ಲಿ ಸೇರಿ ಬಾಗಿಲು ಹಾಕಿಕೊಂಡರೆ ನಮ್ಮದೇ  ಲೋಕ ತೆರೆದುಕೊಳ್ಳುತ್ತಿತ್ತು. ಯಾವ ಮಾತು, ಯಾವ ವಿಷಯ ಉಹು ಅದ್ಯಾವುದಕ್ಕೂ ಗೋಡೆ, ಬಾಗಿಲು ಇರುತ್ತಿರಲಿಲ್ಲ. ಖುಲ್ಲಂ ಖುಲ್ಲಂ ಬಯಲು. ನಮ್ಮ ನಗು ಕೇಕೆ ಹೊರಗೆ ಹೋಗಲಾರದು ಎನ್ನುವ ನಂಬಿಕೆ. ಹೊರಗೆಲ್ಲೂ  ಆಡಲಾಗದ ಮಾತುಗಳಿಗೆ ಅಲ್ಲಿ ಪ್ರಸವದ ಸುಖ. ಕಿಟಕಿಯನ್ನು ಕೊಂಚವೇ ತೆರೆದಿಟ್ಟು  ಕುಳಿತರೆ ಇಡೀ ಲೋಕಕ್ಕೆ ಬೆನ್ನಾಗಿ ನಮ್ಮದೇ ಲೋಕ ಸೃಷ್ಟಿಸಿಕೊಂಡು ಸುಖಿಸುತ್ತಿದ್ದೆವು. ಬರೀ ನಗು ಮಾ

ಹೂ ಗಿಡ ಒಂದಾದರು ಇರಬೇಕು

 ಬೆಳಕು ಹರಿಯುತ್ತಿದ್ದ ಹಾಗೆಯೇ ಏಳಬೇಕಿತ್ತು. ಹಾಗಾಗಿ ಪ್ರತಿದಿನ ಸೂರ್ಯೋದಯ ನೋಡುವ ಅವಕಾಶ.  ಬಿಸಿಲು ಏರುವವರೆಗೆ ಮಲಗುವುದು ಎಂದರೆ ಗೊತ್ತಿಲ್ಲದ ಕಾಲ. ಬೆಳಕು ಮೂಡುವ ಮುನ್ನವೇ ಅಜ್ಜಿ ಏಳುತ್ತಿದ್ದಳು. ಬೆಳಕು ಮೂಡಿದ ಮೇಲೆ ನಾವುಗಳು ಅಷ್ಟೇ. ನಸು ಬೆಳಕು ತುಸು ತುಸುವಾಗಿ ಅಡಿಯಿಡುವಾಗಲೇ ನಾವು ಕಣ್ಣುಜ್ಜಿಕೊಂಡು ಅರೆಗಣ್ಣು ತೆರೆದೇ ಬಚ್ಚಲ ಮನೆಯ ಕಡೆಗೆ ನಡೆಯುತ್ತಿದ್ದೆವು. ಅದಾಗಲೇ ದನ ಕರುಗಳು ಎದ್ದು ಸರಭರ ಸದ್ದು ಮಾಡುವುದನ್ನೇ ನೋಡುತ್ತಾ, ಧಗಧಗನೆ ಉರಿಯುವ ಬೆಂಕಿಯ ಎದುರು ತುಸು ಕುಳಿತು ಮೈ ಬೆಚ್ಚಗೆ ಮಾಡಿಕೊಂಡು ಅದಾಗಲೇ ಮರಳುತಿರುತ್ತಿದ್ದ ನೀರಿನಲ್ಲಿ ಮುಖ ತೊಳೆದು ಒಳಗೆ ಬರುವ ಹೊತ್ತಿಗೆ ಲೋಟದಲ್ಲಿ ಹಬೆಯಾಡುವ ಕಾಫಿ. ಕಾಫಿ ಕುಡಿದು ಈಚೆಗೆ ಬರುವ ಹೊತ್ತಿಗೆ ಸ್ವಾಗತಿಸುವ ಬೆಳ್ಳಂ ಬೆಳಗು,  ಕೈಯಲ್ಲಿ ಹೂವಿನ ಬುಟ್ಟಿ. ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿದ ಮೇಲೆ ದೇವರ ಪೂಜೆಗೆ ಹೂವು ಬಿಡಿಸುವುದು ನಮ್ಮ ಕೆಲಸ. ಅದೊಂದೇ ಆದರೆ ಏನೂ ಅನ್ನಿಸುತ್ತಿರಲಿಲ್ಲವೇನೋ? ಹಾರುವ ಚಿಟ್ಟೆಗಳ ನೋಡುತ್ತಾ, ಎಲೆಯ ತುದಿಯಲ್ಲಿ ಗುಂಡಾಗಿ ಫಳ ಫಳ ಹೊಳೆಯುತ್ತಿದ್ದ ನೀರ ಹನಿಗಳ ಅಲುಗಿಸಿ ಬೀಳಿಸಿ ಅದನ್ನು ಬೊಗಸೆಯಲ್ಲಿ ಹಿಡಿಯುತ್ತಾ, ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ಮೃದುವಾಗಿ ತಾಕಿ ಅದು ಮುಚ್ಚಿಕೊಳ್ಳುವುದನ್ನು ಗಮನಿಸುತ್ತಾ, ಯಾವ ಗಿಡದಲ್ಲಿ ಯಾವ ಹೂ ಬಿಟ್ಟಿದೆ ನೋಡುತ್ತಾ, ಹಕ್ಕಿಗಳ ಕೂಗು ಆಲಿಸುತ್ತಾ, ಇಬ್ಬನಿಯ ಹನಿ ಅಂಗಾಲು ತಾಕಿ ಕಚಗುಳಿ ಇಡು
 ಎಲ್ಲೇ ಹೋಗಲಿ ನಮ್ಮ  ಮನೆಗೆ ಬಂದು ಎರಡು ರೊಟ್ಟಿ ತಿಂದು ಮೊಸರು ಅನ್ನ ತಿಂದರೇನೇ ಸಮಾಧಾನ ನೋಡಿ ಅವರು ನಗುತ್ತಲೇ ಹೇಳುತ್ತಿದ್ದರು. ಎಲ್ಲಿ ಹೋಗುತ್ತೆ ರಾತ್ರಿ ಆಗುತ್ತಿದ್ದ ಹಾಗೆ ಕೊಟ್ಟಿಗೆಗೆ ಬರುತ್ತೆ ಅಜ್ಜಿ ಎಲ್ಲಾ ದನಗಳ ಜೊತೆಗೆ ಬಾರದ ಕೌಲಿಯ ಬಗ್ಗೆ ಮಾತಾಡುತ್ತಿದ್ದದ್ದು ನೆನಪಾಯಿತು. ಎಂಥ ಕೆಲಸ ಇಲ್ಲದಿದ್ರೂ ನಮ್ಮ ಮನೇಲಿ ನಮಗೆ ಬೇಜಾರಾಗೊಲ್ಲ ಊರಿನಿಂದ ಬಂದ ಅತ್ತೆ ನುಡಿಯುತ್ತಿದ್ದರು. ಯಾಕೋ ಅವರ ಮಾತು ಕೇಳುತ್ತಿದ್ದ ಹಾಗೆ ಮನಸೇಂಬ ಗೂಗಲ್ ಲಿಂಕ್ ಕೊಡುತ್ತಾ ಹೋಯಿತು. ಎಷ್ಟೊಂದು ಲಿಂಕ್ ಗಳಲ್ಲಿ ನನ್ನದೇ ಲಿಂಕ್ ಎಲ್ಲಿದೆ ಎಂದರೆ ಕಾಡಿದ್ದು  ವಿಷಾದ ಮಾತ್ರ. ಹೆಸರಿನ ಹಿಂದೆ ಇದ್ದ ಕೆ ಯಾವೂರ ಹೆಸರು ಎಂಬುದು ಹೈ ಸ್ಕೂಲ್ ಗೆ ಬರುವವರೆಗೂ ಗೊತ್ತಿರಲಿಲ್ಲ. ಇವತ್ತಿನವರೆಗೂ ಆ ಊರು ಕಂಡಿಲ್ಲ. ಅಲ್ಲಿದ್ದ ಮನೆತನದ ಹಿರಿಯರ ನೋಡಿಲ್ಲ. ಹಾಗಾಗಿ  ಅದು ಹೆಸರಿಗಂಟಿಕೊಂಡಿದೆ ಬಿಟ್ಟರೆ ನನ್ನದಲ್ಲ ಎನ್ನುವ ಭಾವ .  ಅಪ್ಪನ ಕೈ ಹಿಡಿದು ಭದ್ರಾವತಿಯ ರಸ್ತೆಗಳಲ್ಲಿ ರಾಜಕುಮಾರಿಯ ಹಾಗೆ ನಡೆದದ್ದು ಕೆಲವೇ ವರ್ಷಗಳು. ಅವನು ಕೈ ಬಿಡಿಸಿಕೊಂಡ ಮೇಲೆ ಅದರ ಬಗ್ಗೆ ಮೋಹ ಉಳಿದಿಲ್ಲ. ಊರಿಗೆ ಹೋಗುವಾಗ ಆ ರಸ್ತೆಗಳಲ್ಲಿ ಅಪ್ಪ ನೆನಪಾಗುತ್ತಾನೆ ಬಿಟ್ಟರೆ ನನ್ನೂರು ಎನ್ನಿಸುವುದಿಲ್ಲ. ಆಮೇಲೆ   ಬಂದಿದ್ದು ಸಂಪಗೋಡು ಎಂಬ ವಾರಾಹಿ ಮಡಿಲಿಗೆ. ಹುಟ್ಟಿದ್ದು ಅಲ್ಲೇ ಆಗಿದ್ದರಿಂದ, ಬಾಲ್ಯ ಕಳೆದದ್ದು ಅಲ್ಲಿಯೇ ಆದರಿಂದ  ಇವತ್ತಿಗೂ ಊರು ಎಂದರೆ ಮನೆ ಎಂದರೆ ನೆನಪಾಗ