Posts

Showing posts from May, 2018

ಶಿಕಾರಿ

ಅಲ್ಲೇ ಗೋಡೆಯ ಬದಿಗೆ ನೆಟ್ಟ ಕ್ರೋಟಾನ್ ಗಿಡದ ಎಲೆಗಳ ಮರೆಯಲ್ಲಿ ಇತ್ತದು ಎಂದು ಗೊತ್ತಾಗಿದ್ದೆ ಚೆಂಗನೆ ನೆಗೆದು ಹಾರಿದಾಗ. ತನ್ನಷ್ಟಕ್ಕೆ ತಾನು ಹಾರಾಡುತ್ತಾ ಬಂದು ಕೀಟವೊಂದು ಕ್ಷಣಕಾಲ ವಿಶ್ರಮಿಸಲೇನೋ ಎಂಬಂತೆ ಇನ್ನೂ ಕುಳಿತಿತ್ತು ಅಷ್ಟೇ, ಉಸಿರೂ ನಿರಾಳವಾಗಿ ಬಿಟ್ಟಿತ್ತು ಇಲ್ಲವೋ. ಏನಾಯ್ತು ಎಂದು ಅರಿವಾಗುವುದರೊಳಗೆ ನೆಗೆದ ಓತಿಕ್ಯಾತದ ಬಾಯಿಯ ಬಾಯೊಳಗೆ ಬಿದ್ದಿತ್ತು. ಕಣ್ಣೆದೆರು ಅತಿ ಸಹಜವೆಂಬಂತೆ ನಡೆದ ಈ ಶಿಕಾರಿ ಒಂದು ಕ್ಷಣ ತಲ್ಲಣ ಹುಟ್ಟಿಸಿದ್ದು ಸುಳ್ಳಲ್ಲ. ಇಂತಹದೊಂದು ತಲ್ಲಣ ಕೊನೆಯ ಪುಟದವರೆಗೂ ಜೊತೆಯಾಗಿದ್ದು ಚಿತ್ತಾಲರ ಶಿಕಾರಿ ಓದುವಾಗ. ಶಿಕಾರಿ ಅಥವಾ ಬೇಟೆ ಅಂದ ಕೂಡಲೇ ಕಣ್ಮುಂದೆ ಬರುವುದು ಪ್ರಾಣಿ ಪ್ರಾಣಿಗಳ ನಡುವಿನ ಬೇಟೆ ಅಥವಾ ಮನುಷ್ಯ ಆಡುವ ಪ್ರಾಣಿಗಳ ಬೇಟೆ. ಮನುಷ್ಯ ಮನುಷ್ಯನ್ನನ್ನು ಆಡುವ ಶಿಕಾರಿ ಮಾತ್ರ ಬೆಳಕಿಗೆ ಬರುವುದು ಕಡಿಮೆಯೇ. ಪ್ರಾಣಿಗಳು ಹೊಟ್ಟೆಯ ಹಸಿವಿಗಾಗಿ ಬೇಟೆ ಆಡಿದರೆ ಮನುಷ್ಯನೂ ಹಸಿವೆಯನ್ನು ತಣಿಸಲೇ ಶಿಕಾರಿಯಾಡುತ್ತಾನೆ. ಆದರೆ ಅವನ ಹಸಿವಿನ ವ್ಯಾಪ್ತಿ ಮಾತ್ರ ತುಂಬಾ ದೊಡ್ಡದು. ಹೆಸರಿನ, ಪ್ರತಿಷ್ಠೆಯ, ಅಂತಸ್ತಿನ, ಅಧಿಕಾರದ, ಹಣದ, ಮಣ್ಣಿನ, ಹೆಣ್ಣಿನ, ಯಶಸ್ಸಿನ ಹಸಿವೆಯನ್ನು ತಣಿಸಲು ಶಿಕಾರಿಯಾಡುತ್ತಾನೆ. ಹೊಂಚು ಹಾಕಿ ಕಾದು ಎರಗುತ್ತಾನೆ. ಹಾಗಾಗಿ ಪ್ರಾಣಿಗಳ ಶಿಕಾರಿಗಿಂತಲೂ ಮನುಷ್ಯನ ಶಿಕಾರಿ ಅತೀ ಬುದ್ಧಿವಂತಿಕೆಯಿಂದ ಕೂಡಿದ್ದು ಹಾಗೂ ಅಷ್ಟೇ ಅಪಾಯಕಾರಿಯಾಗಿದ್ದು. ಇಂತಹದೊಂದು ಶಿಕಾ

ನಿಶಬ್ಧ

"ನಿಶಬ್ದ ನಿಶಬ್ಧ ಶಬ್ದದಾಚೆಯ ಶಬ್ದ, ನಿಶಬ್ದವಿದ್ದರೂ ಮೌನವಲ್ಲ." ಮಧುರ ಚೆನ್ನರ ಸಾಲುಗಳಂತೆ ಇವು. ಇದು ಅನುಭವಕ್ಕೆ ಬರಬೇಕಾದರೆ ಒಮ್ಮೆ ಪ್ರಕೃತಿಯ ಮಡಿಲಲ್ಲಿ ಹೋಗಿ ಕುಳಿತು ಕಿವಿಯಾಗಬೇಕು. ಊರಿಗೆ ಹೋದಾಗ ಸಂಜೆಯ ಅಂಗಳದ ಮೂಲೆಯಲ್ಲಿ ಹೋಗಿ ಕೂರುವುದು ನೆಚ್ಚಿನ ಅಭ್ಯಾಸ. ಬೆಳಕು ಹೊರಡುವ, ಕತ್ತಲು ಆಗಮಿಸುವ ಆ ಹೊತ್ತು ಇದೆಯಲ್ಲ ಅದೊಂದು ತರಹ ನಿಕ್ಷಿಪ್ತ ಕಾಲ. ಸಂಧಿಕಾಲ. ಈ ಮುಸ್ಸಂಜೆ ಹೊತ್ತು ಮಲಗುವುದು ಅಶುಭ ಅನ್ನೋ ನಿಯಮವನ್ನು ಯಾಕೆ ನಮ್ಮ ಹಿರಿಯರು ಮಾಡಿದ್ರು ಅನ್ನೋದೂ ಗೊತ್ತಿಲ್ಲವಲ್ಲಾದರೂ ಇದೊಂದು ತರಹ ಸಂಧಿಗ್ದ ಕಾಲ ಅನ್ನಿಸೋದು ಅಂತೂ ಸತ್ಯ. ಗಡಿಬಿಡಿಯ ಧಾವಂತದ ಅರ್ಥವೇ ಗೊತ್ತಿಲ್ಲವೆನ್ನುವಂಥ ವಾತಾವರಣ. ಆಗಲೋ ಈಗಲೋ ಭರ್ರ್ ಎಂದು ಸರಿದು ಹೋಗುವ ಯಾವುದೋ ವಾಹನದ ಸದ್ದು ಬಿಟ್ಟರೆ ಉಳಿದಂತೆ ನಿಶಬ್ದ. ನಿಮ್ಮೂರಲ್ಲಿ ಆದರೆ ಸದ್ದೇ ಪ್ರಪಂಚ ಇಲ್ಲಿ ಬೋರ್ ಆಗುತ್ತೇನೋ ಅಲ್ವಾ ಅನ್ನುವ ಅಜ್ಜಿಯ ಮಾತು ಆ ವಾತಾವರಣದಲ್ಲಿ ತುಸು ಜೋರೆ ಅನ್ನುವ ಹಾಗೆ ಕೇಳಿತ್ತು. ಬೆಂಗಳೂರಿನ ಸದ್ದಿನ ಪ್ರಪಂಚಕ್ಕೆ ಹೋಲಿಸಿದರೆ ಅದು ತೀರಾ ನಿಶಬ್ದ ಅನ್ನುವ ವಾತಾವರಣವೇ, ಹಾಗಾದರೆ ಸದ್ದೇ ಇಲ್ಲವಾ.... ಇದು ಕೇಳಿದರೆ ಕೇಳಿಸುವ ಸದ್ದಲ್ಲ ಆಲಿಸಬೇಕು. ಆಚೀಚೆ ಒಂದರ ಪಕ್ಕ ಒಂದು ನಿಂತರೂ ಅಪಾರ್ಟ್ಮೆಂಟ್ ಮನೆಗಳ ಜನರ ಹಾಗೆ ಮಾತೇ ಇಲ್ಲವೇನೋ ಅನ್ನುವ ಹಾಗೆ ಇರುವ ಮರಗಳ ನಡುವೆ ಅಂಕು ಡೊಂಕಾಗಿ ಮಲಗಿರುವ ಹಾದಿಗೂ ಸೋಮಾರಿತನವೇನೋ ಎನ್ನುವ ಹಾಗೆ ಸು

ಬಂದಳಕ.

ಪುಟ್ಟ  ಪುಟ್ಟ ಕಡು ಹಸಿರು ಬಣ್ಣವನ್ನು ಹೊತ್ತ ಮುದ್ದಾದ ತುಂಬು ಎಲೆಗಳು. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕಿನಿಸುವ ಸೌಂದರ್ಯ. ಗೊಂಚಲು ಗೊಂಚಲಾಗಿ ತೂಗಾಡುವ ಅದರೊಡಲೊಳಗೆ ನಸುಕೆಂಪು ಬಣ್ಣದ ತುತ್ತೂರಿಯಂತಹ ಹೂ ಸಿಗರೇಟಿನ ಕೊನೆಯಲ್ಲಿನ ಬೆಂಕಿಯ ಕಿಡಿಯಂತೆ ಕಾಣುತ್ತದೆ. ದೀಪಾವಳಿಯ ದಿನ ತಾರಸಿಗೆ ತೂಗುಹಾಕಿದ ದೀಪದಂತೆ ಮಾವಿನ ಮರದಲ್ಲಿ ಜೋತಾಡುವ ಈ ಬಳ್ಳಿ ಕೊಂಬೆಯನ್ನು ಅದೆಷ್ಟು ಬಲವಾಗಿ ಆದರೆ ಅಷ್ಟೇ ನಾಜೂಕಾಗಿ ಅಪ್ಪಿರುತ್ತದೆಯೆಂದರೆ ನೋಡಲು ಥೇಟ್ ನವಜೋಡಿಯಂತೆ ಭಾಸವಾಗುತ್ತದೆ. ಬಂದಳಕ ಎಂದು ನಾಮಕರಣಗೊಂಡ ಈ ಬಳ್ಳಿಯಾದರೂ ಅಷ್ಟೇ ನಾಚುತ್ತಾ, ಮೃದುವಾಗಿ ಕೊಂಬೆಯನ್ನು ಬಳಸಿ ನಸುನಗುತ್ತಾ ತೂಗಾಡುತ್ತಿರುತ್ತದೆ.ಹಾದುಹೋಗುವವರ ಗಮನವನ್ನು ಕ್ಷಣಮಾತ್ರವಾದರೂ ಸೆರೆಹಿಡಿಯುವ ಚುಂಬಕಶಕ್ತಿ ಇದರ ಸೌಂದರ್ಯಕ್ಕೆ, ಸಣ್ಣ ಗಾಳಿಗೂ ತುಯ್ಯುವ ವಯ್ಯಾರಕ್ಕಿದೆ. ತೋರಣ ಕಟ್ಟಿದಂತೆ, ತೂಗುದೀಪ ಇಳಿಬಿಟ್ಟಂತೆ, ಉಯ್ಯಾಲೆಯೊಂದು ತೂಗುವಂತೆ, ಹಸಿರು ಹಾಸಿಗೆ ಹಾಸಿದಂತೆ ಹೀಗೆ ಬಗೆಬಗೆಯಾಗಿ ಒನಪು, ಒಯ್ಯಾರಗಳಿಂದ ಕಂಗೊಳಿಸುವ ಇದು ಅಪರಿಚಿತರಿಗೆ ಸೌಂದರ್ಯದ ಖನಿ, ಪರಿಚಿತರಿಗೆ ಮಾತ್ರ ಬೆಚ್ಚಿಬೀಳಿಸುವ ದುಸ್ವಪ್ನ. ಅದರ ಹೂಗಳು ಕೇವಲ ನೋಡುವುದಕ್ಕೆ ಮಾತ್ರ ಕೆಂಡದಂತಲ್ಲ ಅಕ್ಷರಶಃ ಇದು ಒಡಲೊಳಗಿನ ಬೆಂಕಿ. ಇದು ಸರಿಯಾಗಿ ಅರ್ಥವಾಗಬೇಕಾದರೆ ಘಟನೆಯೊಂದನ್ನು ಹೇಳಬೇಕು. ಅವರದು ಸ್ಥಿತಿವಂತ ಕುಟುಂಬ. ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಿಲ್ಲ ಅನ್ನುವುದೊಂದು ಬಿಟ