Posts

Showing posts from January, 2021
  ನಾನಾಗ ತುಂಬಾ ಚಿಕ್ಕವಳು. ಮನೆಯಲ್ಲಿ ಊರಲ್ಲಿ ಸಂಭ್ರಮ ಅನ್ನೋದು ಗೊತ್ತಿದ್ದರೂ ಯಾಕೆ ಅನ್ನೋದು ಗೊತ್ತಿರಲಿಲ್ಲ. ಸಂಭ್ರಮ ಶುರುವಾಗಿ, ಮಾತು ಕತೆ ಚರ್ಚೆ ನಡೆಯುತ್ತಾ ಅದಾಗಲೇ ಬಹಳ ದಿನಗಳಾಗಿದ್ದವು. ಗದ್ದೆಯಲ್ಲಿ ಆಗಾಗ ಊರವರು ಸೇರಿ ಇಟ್ಟಿಗೆ ಮಾಡುವುದು ಅದನ್ನು ಜೋಡಿಸುವುದು ನಡೆಯುತಿತ್ತು. ಎಲ್ಲರೂ ಯಾವುದೋ ಕೆಲಸದಲ್ಲಿ ಮಾತಿನಲ್ಲಿ ತೊಡಗಿರುತ್ತಿದ್ದರು. ಏನೋ ಗಡಿಬಿಡಿ, ತುಸು ಟೆನ್ಶನ್. ಅವತ್ತು ಬೆಳಿಗ್ಗೆ ಏಳುವಾಗಲೇ ಮಧ್ಯಾಹ್ನ ಎರಡು ಗಂಟೆಗೆ ರಥ ಬರುತ್ತಂತೆ ಎನ್ನುವ ದನಿ ಕೇಳಿಸಿತ್ತು. ರಥ ಎಂದರೆ ಜಾತ್ರೆ ಅನ್ನೋದಷ್ಟೇ ಗೊತ್ತಿದ್ದ ನನಗೆ ಒಹ್ ಇದಾ ವಿಷಯ, ಅದಕ್ಕೇನಾ ಈ ಹಡಾವುಡಿ ಎಂದು ತಿಳಿದು ಇನ್ನಷ್ಟು ಸಂಭ್ರಮ. ಊರಿಗಿಂತ ಬೇಗ ಎದ್ದು ಇವತ್ತು ರಥ ಅಲ್ವೇನೆ ತಲೆಸ್ನಾನ ಮಾಡಿಸು ಅಂತ ಅಜ್ಜಿಗೆ ರಗಳೆ ಮಾಡಿ ಚೆಂದದ ಡ್ರೆಸ್ ಹಾಕಿಕೊಂಡು ಗಡಿಯಾರ ನೋಡುತ್ತಲೇ ಕುಳಿತುಬಿಟ್ಟಿದ್ದೆ. ಅದು ನಿಧಾನ ಹೋಗ್ತಾ ಇದೆ ಅನ್ನಿಸಿ ಕಿರಿಕಿರಿ ಆದಾಗ ಮಾತ್ರ ಹೋಗಿ ಒಂದು ಗಂಟೆಗೆ ಇಟ್ಟರೆ ಆಗೋಲ್ವೇನೇ ಬೇಗ ಎರಡು ಗಂಟೆ ಆಗುತ್ತೆ ರಥ ಬರುತ್ತೆ ಎಂದಿದ್ದೆ. ಅವಳು ಹುಚ್ಚು ಹುಡುಗಿ ಎಲ್ಲವೂ ಆಗಬೇಕಾದ ಸಮಯಕ್ಕೆ ಆಗೋದು ಎಂದು ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು. ನಾನು ಅವಳನ್ನು ಬೈಯುತ್ತಾ ಜಗುಲಿಯಲ್ಲಿ ಕುಳಿತು ಬರುವ ರಥಕ್ಕಾಗಿ ಕಾಯುತ್ತಿದ್ದೆ. ಒಂದೂ ಅಂಗಡಿ ಬಂದಿಲ್ಲವಲ್ಲ ಎನ್ನುವ ಚಿಂತೆ ತಲೆಯಲ್ಲಿ. ಒಬ್ಬೊಬ್ಬರೇ ಸೇರುವುದು, ಗದ್ದೆಯಲ್ಲಿ ಸುಟ್ಟಿದ್