Posts

Showing posts from January, 2020

ನಿರಾಕರಣ

ತುಂಬು ಕುಟುಂಬ ಅದು. ಮೊದಲನೆಯ ಮಗ ನೋಡಲು ಆಜಾನುಬಾಹು, ಸುಂದರ. ಬುದ್ಧಿವಂತ ಕೂಡಾ. ಇದ್ದಕ್ಕಿದ್ದ ಹಾಗೆ ಏನಾಯಿತೋ ಏನೋ ಮನೆ ಬಿಟ್ಟು ಹೋದವನು ತಾನು ಸನ್ಯಾಸಿ ಆಗಿದ್ದೇನೆ ಎಂದು ಪತ್ರ ಬರೆದಿದ್ದ. ತಿಳಿ ಹೇಳುವುದರಲ್ಲಿ ಸೋತ ಮನೆಯವರು ಎರಡನೆಯ ಮಗನ ಮದುವೆ ನಿಶ್ಚಯಿಸಿದ್ದರು. ಮದುವೆಯಲ್ಲಿ ಮದುಮಕ್ಕಳಿಗಿಂತ ಮದುವೆಗೆ ಬಂದಿದ್ದ ಕಾವಿ ಉಟ್ಟ, ಗಡ್ದದಾರಿಯಾದ, ಉದ್ದ ಕೂದಲಿನ ವರನ ಅಣ್ಣನ ಮೇಲೆಯೇ ಕಣ್ಣು. ಸನ್ಯಾಸವೆಂದರೆ ಆಕರ್ಷಣೆಯಾ ಸನ್ಯಾಸಿ ಆಕರ್ಷಕನ ಎಂದು ಅರಿವಾಗದ ವಯಸ್ಸು, ಆದರೂ ಯಾವ ಚಿತ್ತಾರವೂ ಇಲ್ಲದ ಆ ಕೇಸರಿ ಸೆಳೆದದ್ದಂತೂ ಹೌದು. ಅದೆಂಥಾ ಸೆಳೆತವಿದ್ದಿರಬಹುದು ಎಂದು ಆಲೋಚಿಸುವಾಗಲೆಲ್ಲ ಬಾಲ ಹನುಮ ನೆನಪಾಗುತ್ತಾನೆ. ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಆಗಸಕ್ಕೆ ನೆಗೆದ ಅವನಿಗೆ ನಿಜವಾಗಲು ಆಕರ್ಷಿಸಿದ್ದು ಹಣ್ಣಾ ಅಥವಾ ಕೇಸರಿಯ ಬಣ್ಣವಾ.... ನಿರಾಕರಣ ಓದುವಾಗ ಕಾಡಿದ್ದು ಇಂಥವೇ ಪ್ರಶ್ನೆಗಳು. ನರಹರಿಯನ್ನು ಬದುಕಿನುದ್ದಕ್ಕೂ ಕಾಡಿದ್ದು ಗೊಂದಲಗಳು. ನಿರಾಕರಿಸುತ್ತಲೇ ಒಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಲೇ ನಿರಾಕರಿಸುತ್ತಾ ಸಾಗುವ ಅವನ ಯಾತ್ರೆಗೆ ಒಂದು ನಿರ್ಧಿಷ್ಟ ಗುರಿಯಿರಲೇ ಇಲ್ಲ. ಹೊಯ್ದಾಡುವ ಯಾವ ದೀಪ ತಾನೇ ಸರಿಯಾಗಿ ಬೆಳಕು ನೀಡಬಲ್ಲದು?  ಬೆಳಕು ಸಿಗಬೇಕಾದರೆ ದೀಪ ಸ್ತಬ್ಧವಾಗಬೇಕು. ಸನ್ಯಾಸ ಒಲಿಯಬೇಕಾದರೆ ಮನಸ್ಸು ಹೆಪ್ಪುಗಟ್ಟಬೇಕು. ಮನದೊಳಗೆ ಕಾವಿದ್ದರೆ ಅಲ್ಲೊಂದು ನದಿ ಹರಿಯುತ್ತಲೇ ಇರುತ್ತದೆ. ಹರಿಯುವ

ವಿಜಯ ಕರ್ನಾಟಕ 19.01.20

ಅಪ್ಪ, ಅಮ್ಮ ಹಾಗೂ ಮೂವರು ಮಕ್ಕಳಿದ್ದ  ಕುಟುಂಬ ಅದು. ಭಾರೀ ಶ್ರೀಮಂತರಲ್ಲದಿದ್ದರೂ ಹೊಟ್ಟೆ ಬಟ್ಟೆಗೆ ಕೊರತೆಯಿರಲಿಲ್ಲ. ಸಂತೃಪ್ತ ಕುಟುಂಬ. ನೆಮ್ಮದಿಯಾಗಿ ಸಾಗುತ್ತಿದ್ದ ಹಡಗಿಗೆ ಬಿರುಗಾಳಿ ಅಪ್ಪಳಿಸಿ ಅಡಿಮೆಲಾಗುವ ಹಾಗೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ ಅಸುನೀಗಿದ್ದರು. ಕಾರ್ಯಗಳೆಲ್ಲಾ ಮುಗಿದು ಮುಂದೇನು ಎಂದು ಯೋಚಿಸಬೇಕು ಅನ್ನುವ ಹೊತ್ತಿಗೆ ಹತ್ತಿರದ ನೆಂಟರಿಷ್ಟರು ತುಸು ಗಡಿಬಿಡಿಯಲ್ಲಿಯೇ ಹೊರಟಿದ್ದರು. ಒಂದು ಕ್ಷಣ ಅಲ್ಲಿ ಉಳಿದರೆ ಯಾವ ಜವಾಬ್ದಾರಿ ಬೀಳುವುದೋ ಎಂದು ಹೊರಡಲು ಅವಸರಿಸುತ್ತಿದ್ದ ಅವರನ್ನು ನೋಡಿ ಹಿರಿಯವನು ದಂಗಾಗುವ ಹೊತ್ತಿಗೆ ತೀರಾ ಹಚ್ಚಿಕೊಳ್ಳೋಕೆ ಹೋಗಬೇಡಾ ಯಾವತ್ತಿದ್ದರೂ ಭಾರವೇ, ಅವರವರ ಪಾಡು ಅವರವರು ಏನಾದರೂ ಮಾಡಿಕೊಳ್ಳಲಿ ಎಂದು ತೀರಾ ಹತ್ತಿರದ ಕುಟುಂಬದ ಹಿರಿಯರೊಬ್ಬರು ಆಡುವ ಮಾತು ಕೇಳಿಸಿ ಮೊದಲೇ ಆಘಾತಗೊಂಡ ಮನಸ್ಸು ಇನ್ನಷ್ಟು ಕುಸಿದಿತ್ತು. ಅಸಹಾಯಕತೆಗೆ ಅಳುವೇ ಬಂದಿತ್ತು. ದುಃಖ, ಆಕ್ರೋಶಗಳ ನಡುವೆಯೇ ಮನಸ್ಸು ಉಹೂ ಎಷ್ಟೇ ಕಷ್ಟವಾದರೂ ತೊಂದರೆಯಿಲ್ಲ ನನ್ನ ಕುಟುಂಬವನ್ನು ಕಾಪಾಡಿ ಸಾಧಿಸಿ ತೋರಿಸುತ್ತೇನೆ ಎಂದು ಶಪಥ ಮಾಡಿತ್ತು. ನಂತರ ಛಲದಿಂದ ಅದೊಂದು ವ್ರತವೆಂಬಂತೆ ಎದುರಾದ ಸಂಕಷ್ಟವನ್ನೆಲ್ಲಾ ಎದುರಿಸಿ, ನೆಂಟರಿಷ್ಟರ ಎದುರು ಕಿಂಚಿತ್ತೂ ಸಹಾಯ ಬೇಡದೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಿಕ್ಕದೊಂದು ಉದ್ಯೋಗ ಹಿಡಿದು ಶ್ರಮವಹಿಸಿ ದುಡಿದು, ನಂಬಿಕೆ ಗಳಿಸಿ ಹಂತಹಂತವಾಗಿ ಮೇಲಕ್ಕೇರಿ ಮನೆಯ ನಿರ್ವ

ಶಿಶಿರ....

ಶಿವರಾತ್ರಿಗೆ ಶಿವ ಶಿವಾ ಅಂತ ಚಳಿ ಹೋಗೋದು.. ಅಲ್ಲಿಯವರೆಗೆ ಚಳಿ ಕಾಟ ತಪ್ಪಿದ್ದಲ್ಲ ಎದ್ದೇಳಿ  ಎಂದು ಮುದುರಿ ಕುಳಿತಿದ್ದ ನಮ್ಮನ್ನು ನೋಡಿ ಹೇಳಿದ್ದಳು ಅಜ್ಜಿ. ಮುದುರಿ ಕುಳಿತಿದ್ದು ಬರೀ ಚಳಿಗೆ ಮಾತ್ರವಲ್ಲ ಮೈ ಒಡೆದು ಉರಿಯುವುದಕ್ಕೆ ಎಂದು ಹೇಳಲು ಬಾಯಿತೆರೆದವಳ ಕಣ್ಣು ಕೈ ಕಾಲುಗಳ ಮೇಲೆ ಬಿದ್ದು ಮೌನವಾಗಿತ್ತು. ನಮ್ಮ ಮೈ ನಮಗೆ ನೋಡಿಕೊಳ್ಳಲು ರೇಜಿಗೆ ಅನ್ನಿಸುವ ಹಾಗಿತ್ತು. ತಿರುಗಿ ನೋಡಿದರೆ ಅವಳ ಕಾಲಿನ ಹಿಮ್ಮಡಿ ಗದ್ದೆ ಕೊಯ್ಲಿನ ಬಳಿಕ ಬಿರುಕು ಬಿಡುವ ಗದ್ದೆಯ ಹಾಗೆ ಕಾಣಿಸಿ ನಾವೇ ಪರವಾಗಿಲ್ಲ ಪಾಪ ಅನ್ನಿಸಿತು. ಪುಷ್ಯ ಮಾಸದ ಚಳಿಯೇ ಹಾಗೆ ಪತರಗುಟ್ಟಿಸಿ ಬಿಡುತ್ತದೆ. ಇದೇ ಕಾಲದಲ್ಲಿ ಬರುವ ಅಡಿಕೆ ಕೊಯ್ಲು ಅದಕ್ಕಿಷ್ಟು ಆಜ್ಯ ಸುರಿದುಬಿಡುತ್ತದೆ. ಆ ಚಳಿಗೆ ಮುದುರುವ ದೇಹದ ಚರ್ಮವನ್ನು ಅಡಿಕೆಯ ಚೊಗರು ಇನ್ನಷ್ಟು ಮುದುರುವ ಹಾಗೆ ಮಾಡಿ ಒಣಗಿಸಿ ಬಿಡುತ್ತದೆ. ಮೈಗೂ ಔಷಧಿ ಹೊಡೆದ ಕೊನೆಯ ಬಣ್ಣಕ್ಕೂ ಕಿಂಚಿತ್ತೂ ವ್ಯತ್ಯಾಸವಿಲ್ಲದ ಏಕ ಭಾವ. ಸುಲಿಯುವಾಗಿನ ಚೊಗರು ಆ ಬಿರುಕುಗಳಲ್ಲಿ ಇಂಗಿ ಕಪ್ಪಾಗಿ, ಬಿರುಕು ಇನ್ನಷ್ಟು ಅಗಲವಾಗಿ ಮೈಯೆನ್ನುವುದು ಹಾವಿನ ಪೊರೆಯಂತೆ ಕಾಣಿಸುತ್ತಾ ಚಳಿಗೆ ಹಲ್ಲು ಕಟಕಟಿಸುವ ಹಾಗೆ ಚರ್ಮ ಚುರು ಚುರು ಎನ್ನುತ್ತಿರುತ್ತದೆ. ಹಚ್ಚಿದ ಎಳ್ಳೆಣ್ಣೆ ಬೇಸಿಗೆಯ ಅಕಾಲಿಕ ಮಳೆ ಸುರಿದಂತೆ ಹಚ್ಚಿದ ಕುರುಹೂ ಇಲ್ಲದೆ ಆರಿ ಹೋಗುತ್ತದೆ.  ಮೈ ಮುರಿಯುವ ಕೆಲಸ ಉರಿ ಎರಡೂ ಚಳಿಯಷ್ಟೇ ಸಮೃದ್ಧವಾಗಿ ಆವರಿಸಿಕೊಳ್ಳುವ ಕಾಲವ
ಯುದ್ಧ ತಡೆಯುವ ಕೊನೆಯ ಪ್ರಯತ್ನಕ್ಕಾಗಿ ಕೃಷ್ಣ ಸಂಧಾನಕ್ಕೆ ಹೊರಟಿದ್ದ. ಸಂಧಾನ ಸಭೆ ವಿಫಲವಾದ ನಂತರ ಆತಿಥ್ಯ ಸ್ವೀಕರಿಸಲು ಕಾಯುತ್ತಿದ್ದ ಭೀಷ್ಮನ ಕಡೆ ಕಣ್ಣೆತ್ತಿಯೂ ನೋಡದೆ ವಿದುರನ ಮನೆಗೆ ತೆರಳಿದ್ದ. ಭೀಷ್ಮನಿಗೆ ಸಂಕಟವಾಗಿತ್ತು. ಕೃಷ್ಣನ ಈ ನಡೆಯ ಅರ್ಥ ತಿಳಿಯಲು ಅವನನ್ನೇ ಮನದಲ್ಲೇ ಧ್ಯಾನಿಸಿದಾಗ ಅವನು ಪ್ರತ್ಯಕ್ಷನಾದಾಗ ಭೀಷ್ಮ ತನ್ನ ಪ್ರಶ್ನೆ ಕೇಳುತ್ತಾನೆ. ಆಗ ಕೃಷ್ಣ ತಾತ ರಾಜನೀತಿಯ ನಿಯಮಗಳಂತೆ ನಡೆಯುವುದು ಅರಸರಿಗೆ, ಅರಸು ಬಾಂಧವರಿಗೆ ಎಷ್ಟು ಭಾಧ್ಯವೋ ಜಗದೀಶ್ವರನೇ ಅವತರಿಸಿ ಬಂದರೂ ಅವನಿಗೆ ಅಷ್ಟೇ ಭಾಧ್ಯ ಅನ್ನುತ್ತಾನೆ. ದ್ವೇಷಿಗಳ ಮನೆಯಲ್ಲಿ ಉಣ್ಣಬಾರದು ಎನ್ನುವ ರಾಜನೀತಿಯ ಅರ್ಥ ಭೀಷ್ಮನಿಗೆ ಅರಿವಾದರೂ ತನ್ನನ್ನು ಆ ಸಾಲಿಗೆ ಸೇರಿಸಿದ ಕೃಷ್ಣನ ಮೇಲೆ ಕೋಪವೂ ದುಃಖವೂ ಎರಡೂ ಉಂಟಾಗಿ ಇಬ್ಬರಿಗೂ ಸಮನಾದ ನನ್ನನ್ನು ಒಂದು ಗುಂಪಿಗೆ ಸೀಮಿತ ಗೊಳಿಸುವುದು ತರವೇ ಎಂದು ಮತ್ತೆ ಪ್ರಶ್ನಿಸುತ್ತಾನೆ. ಅವನಿಗೆ ತನ್ನನ್ನು ತಾನು ಶೋಧಿಸಿಕೊಳ್ಳಲು ಹೇಳುತ್ತಲೇ ಕೃಷ್ಣ ಉತ್ತರಿಸುತ್ತಾನೆ. ನಾನು ನಿನ್ನ ಪಾಂಡವ ಪ್ರೀತಿಯನ್ನು ಪ್ರಶ್ನಿಸುತ್ತಿಲ್ಲ, ಪ್ರಶ್ನಿಸುತ್ತಿರುವುದು ನಿನ್ನ ಮಿತಿಮೀರಿದ ಕೌರವ ಪ್ರೀತಿಯನ್ನು ಎನ್ನುತ್ತಲೇ ದುಷ್ಟರನ್ನು ತುಷ್ಟಿಗೊಳಿಸಲು ಯತ್ನಿಸುವ ಎಲ್ಲರೂ ನಿನ್ನಂತೆ ಕರ್ಮಬಂಧನಕ್ಕೆ, ಬುದ್ಧಿಮಾಂದ್ಯಕ್ಕೆ, ಮಾನಸಿಕ ಅಸ್ವಸ್ಥತೆಗೆ ಒಳಗಾದಾರೂ ಎನ್ನುತ್ತಾನೆ... ದೀಪಿಕಾ ಪಡುಕೋಣೆ JNU ಗೆ ಭೇಟಿಕೊಟ್ಟ ಬಗ್ಗೆ ಅದನ್ನೊಂ