Posts

Showing posts from March, 2019

ಕಶೀರ

ಮುಸ್ಸಂಜೆ ಕವಿಯುವಾಗ ಕೈಕಾಲು ತೊಳೆದು ಬಂದು ದೇವರಿಗೆ ದೀಪ ಹಚ್ಚಿ ಭಜನೆ ಮಾಡುವಾಗ ಗಣಪತಿಯ ಸ್ತುತಿಯ ನಂತರ ಹೇಳುತಿದ್ದದ್ದೆ ನಮಸ್ತೇ ಶಾರದಾ ದೇವಿ ಕಶ್ಮೀರ ಪುರವಾಸಿನಿ ಅನ್ನುವ ಶ್ಲೋಕ. ಬೆಳಿಗ್ಗೆ ಓದುವಾಗಲೂ ಅದನ್ನು ಹೇಳಿಯೇ ಪುಸ್ತಕ ತೆರೆಯುತ್ತಿದ್ದದ್ದು. ಶ್ರಿಂಗೇರಿಯಲ್ಲಿರುವ ಶಾರದೆಯನ್ನು ಕಶ್ಮೀರ ಪುರವಾಸಿನಿ ಅಂತ ಯಾಕೆ ಹೇಳ್ತಾರೆ ಅನ್ನುವ ಗೊಂದಲ ಬರುವುದಕ್ಕೆ ಆಸ್ಪದವೇ ಇರಲಿಲ್ಲ. ಯಾಕೆಂದರೆ ಶ್ರೀ ಶಂಕರರು ಅವಳನ್ನು ಅಲ್ಲಿಂದ ಕರೆತಂದ ಕತೆ ಗೊತ್ತಿತ್ತು. ಆದರೂ ಅವಳು ಅಲ್ಲಿಂದ  ಬಿಟ್ಟು ಬಂದ ಮೇಲೆಯೂ ಅವಳನ್ನು ಅಲ್ಲಿಯವಳೇ ಎನ್ನುವುದು ಯಾಕೆ ಎನ್ನುವ ಪ್ರಶ್ನೆ ಮೂಡಿದಾಗಲೆಲ್ಲ ಸಂಪಗೋಡಿನ ನೆನಪಾಗುತಿತ್ತು. ಅರಿವಾಗದೆ ಕಣ್ಣು ತುಂಬುತ್ತಿತ್ತು. ಭಾರತದ ಮುಕುಟ ಮಣಿ ಎಂದರೆ ಅದು ಕಶ್ಮೀರ. ಅದಿಲ್ಲದೆ ಹೋದರೆ ಕಿರೀಟವಿಲ್ಲದ ರಾಜನಂತೆ ಅನ್ನಿಸುತ್ತದೆ ಭೂಪಟವನ್ನು ನೋಡುವಾಗ. ಆ ಕಶ್ಮೀರದ ಹಿನ್ನಲೆ, ಪುರಾಣಗಳಲ್ಲಿ ಬರುವ ಅದರ ವರ್ಣನೆ, ಅಲ್ಲಿನ ಕ್ಷಾತ್ರತ್ವ, ಮಣ್ಣಿನ ಗುಣ, ಪಂಡಿತರ ಪಾಂಡಿತ್ಯ, ಪ್ರಕೃತಿಯ ಸೊಬಗು ಪ್ರತಿಯೊಂದು ಅದು ಪುಣ್ಯಭೂಮಿ, ಪವಿತ್ರ ನೆಲ ಅನ್ನುವ ಭಾವ ಹುಟ್ಟಿಸುತ್ತಿತ್ತು. ಅಂತ ಸ್ವರ್ಗ ನರಕವಾಗಲು ಶುರುವಾಗಿದ್ದು ಯಾವಾಗ ಎನ್ನುವುದಕ್ಕೆ ಅಷ್ಟೇ ದೊಡ್ಡ ಇತಿಹಾಸವಿದೆ. ಪ್ರತಿಬಾರಿ ಆಕ್ರಮಣಕ್ಕೆ ಒಳಗಾದರೂ ಮತ್ತೆ ಮತ್ತೆ ಚಿಗಿತು ನಿಲ್ಲುವ, ಶತ್ರುಗಳನ್ನು ಹಿಮ್ಮೆಟ್ಟಿಸುವ ಶೌರ್ಯ ಅಂತಸತ್ವ ಇದ್ದಿದ್ದರಿಂದಲೇ ಕಶ್ಮೀ

ಯುಗಾದಿ (ಹಸಿರುವಾಸಿ)

ಎಲೆಯೆಲ್ಲಾ ಉದುರಿಸಿ ಬೋಳಾಗಿ ನಿಂತ ಮರಗಳು, ಕೊರೆಯುವ ಚಳಿ, ಒಡೆದ ಮೈ, ಮುರುಟಿದ ತರು ಲತೆಗಳು. ಚಳಿಗಾಲವೆಂದರೆ ಹೀಗೆ ಎಲ್ಲಾ ಇದ್ದೂ ಏನೂ ಇಲ್ಲದ ಭಾವ, ಒಂಟಿತನ, ಖಾಲಿತನ ತುಂಬುತ್ತಾ ಮೈ ಜೊತೆ ಮನಸ್ಸನ್ನೂ ಮರಗಟ್ಟಿಸುತ್ತದೆ. ಬೀಸುವ ಗಾಳಿಗೆ ಮತ್ತಷ್ಟು ಉರಿಯುವ ಚರ್ಮವನ್ನು ಬೈದುಕೊಳ್ಳುವಾಗ ಮರ ಚಿಗುರು ಒಡೆಯುವ ಕಾಲ ಅದಕ್ಕೆ ಮೈ ಹಾಗೆ ಮರಗಟ್ಟಿ ಚರ್ಮ ಸುಕ್ಕಾಗುತ್ತೆ. ಮರದ ತೊಗಲು ಹಾಗೆ ಇರುತ್ತೆ ನೋಡು, ಹೊಸತು ಬರಬೇಕಾದರೆ ಹಳೆಯ ಪೊರೆ ಕಳಚಿಕೊಳ್ಳಬೇಕು ಎನ್ನುವ ಅಜ್ಜಿಯನ್ನೇ ಗಮನಿಸುತ್ತಿದ್ದೆ. ಅವಳ್ಯಾವ ವಿಜ್ಞಾನಿಯೂ ಅಲ್ಲ, ಆದರೆ ಪ್ರಕೃತಿಯ ಪ್ರತಿ ಬದಲಾವಣೆಯನ್ನೂ ಗಮನಿಸಿ ಅದಕ್ಕೆ ಒಗ್ಗಿಕೊಂಡವಳು, ಒಪ್ಪಿಕೊಂಡವಳು. ಇದ್ದುದ್ದೆಲ್ಲವೂ ಬಿದ್ದು ಹೋದರೂ ಎದ್ದು ಬಂದಿದೆ ಸಂಭ್ರಮ. ಕಿತ್ತುಕೊಂಡರು ಕೊಟ್ಟು ಸುಖಿಸುವ ಸೋಲನರಿಯದ ಸಂಗಮ. ಹಳತನ್ನು ಕಳೆದುಕೊಂಡು ಹೊಸತಿಗೆ ಸಾಗುವ ಕ್ಷಣ ಮರುಹುಟ್ಟು. ಅದು ಆದಿ. ಯುಗದ ಆದಿಯೂ ಬದುಕಿನ ಆದಿಯೇ. ಹಾಗಾಗಿಯೇ ಅದು ಯುಗಾದಿ. ಇಡೀ ಪ್ರಕೃತಿಯೇ ಹೊಸತನ್ನು ಸ್ವಾಗತಿಸಿ ಹೊಸತಾಗಿ ಬದುಕುವ ಕ್ಷಣ. ಅದು ಹೊಸ ಋತುವಿನ ಪ್ರಾರಂಭ ಕೂಡ. ಹೊಸ ಚಿಗುರು, ಹೊಸ ಹುಟ್ಟು, ಹೊಸ ಭಾವ ಹೀಗೆ ಹೊಸತನ್ನು ಹೊತ್ತು ತರುವ ವಸಂತ ಋತುವನ್ನು ಋತುಗಳ ರಾಜ ಅನ್ನೋದು ಇದಕ್ಕೆ ಇರಬೇಕೇನೋ. ಹಳೆಯದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಾ ಅಂದರೆ ಖಂಡಿತ ಅಲ್ಲ. ಪೊರೆ ಕಳಚುವ ಹಾವಿನ ಸಂಕಟವದು. ಅದಕ್ಕಾಗಿ ಮರಗಬೇಕು, ಮುರು

ಗುಬ್ಬಚ್ಚಿ...

Image
ನಮ್ಮನೇಲಿ ಗುಬ್ಬಚ್ಚಿ ಮೊಟ್ಟೆ ಇಟ್ಟಿದೆ ಗೊತ್ತಾ ಅಂತ ಕಾರೆಮನೆ ರಮೇಶ ಸ್ವಲ್ಪ ಜಂಭದಿಂದ ಹೇಳುವಾಗ ನಂಗೂ ಪುಟ್ಟುಗೂ ಹೊಟ್ಟೆಕಿಚ್ಚಾಗುತ್ತಿದ್ದದ್ದು ನಿಜವಾದರೂ ಅದನ್ನೂ ಮೀರಿ ಹೋಗಿ ನೋಡುವ ತವಕ ಶುರುವಾಗುತ್ತಿತ್ತು. ಈ ಶನಿವಾರ ಮಧ್ಯಾನ ಬರ್ತಿವಿ ಕಣೋ ತೋರ್ಸು ಅಂತ ಅವನನ್ನು ಕೇಳುತ್ತಿದ್ದೆವು. ಅವನೋ ಏನೋ ಮಹದುಪಕಾರ ಮಾಡಿದಂತೆ ಹೂ ಅನ್ನುತಿದ್ದ. ಶಾಲೆ ಮುಗಿಸಿ ಮನೆಗೆ ಬರುವಾಗ ಈ ಗುಬ್ಬಚ್ಚಿ ಅವರ ಮನೇಲಿ ಯಾಕೆ ಅಷ್ಟೊಂದು ಮೊಟ್ಟೆ ಇಡುತ್ತೋ ನಮ್ಮನೇಲಿ ಇಡಬಾರದ ಅಲ್ವೇನೋ ಎಂದು ಗುಬ್ಬಚ್ಚಿಗೆ ಬೈಯುತ್ತಾ ಬರುತ್ತಿದ್ದೆವು. ಮನೆಗೆ ಬಂದು ಒಂದೇ ಉಸಿರಿನಲ್ಲಿ ಊಟ ಮುಗಿಸಿ ಕಾರೆಮನೆಗೆ ಹೋಗ್ತಿವಿ ಅಂದ್ರೆ ಈ ಬಿರುಬಿಸಿಲಲ್ಲಿ ಮಾಡೋಕೆ ಕೆಲಸ ಇಲ್ವಾ ಸಂಜೆ ಹೋಗಿ ಎಂದು ಬೈದು ನಮ್ಮ ಉತ್ಸಾಹಕ್ಕೆ ನೀರೆರೆಚುತ್ತಿದ್ದರು. ಸಂಜೆಯಾಗುವುದುನ್ನೇ ಕಾದು ಅವಸರದಲ್ಲಿ ಕಾಫಿ ಕುಡಿದು ಹೊರಟರೆ ಶಾಲೆ ಬರುವವರೆಗೂ ಕಾಲಿಗೆ ವೇಗ ಹೆಚ್ಚಿದ್ದರೂ ಶಾಲೆ ದಾಟಿ ಗದ್ದೆಗೆ ಇಳಿದ ಕೂಡಲೇ ಅಲ್ಲಿಂದ ತುಸು ದೂರದಲ್ಲಿ ಪುಟ್ಟ ಗುಡ್ಡದ ಮೇಲಿದ್ದ ಮನೆಯೊಂದು ಕಾಣುತಿದ್ದ ಹಾಗೆ ನಡುಗಲು ಶುರುವಾಗುತ್ತಿತ್ತು. ಕಾರೆಮನೆಗೆ ಹೋಗಬೇಕಾದರೆ ಆ ಮನೆಯ ಅಂಗಳ ಹಾಗೂ ಉಣುಗೋಲು ದಾಟಿಯೇ ಹೋಗಬೇಕು. ಹಾಗೆ ಹೋಗಬೇಕಾದರೆ ಅವರ ಮನೆಯಲ್ಲೊಂದು ನಾಯಿ ಅದೋ ನಮ್ಮನ್ನು ಕಂಡರೆ ಯಾರೋ ಶತ್ರುಗಳ ಕಂಡ ಹಾಗೆ ಮೈಮೇಲೆ ಏರಿ ಬರುತ್ತಿತ್ತು. ಮೊದಲೇ ಹಳ್ಳಿ ಜನ ಗದ್ದೆ ತೋಟ ಅಂತ ಕೆಲಸಕ್ಕೆ ಹೋಗುವವರು ಆ