Posts

Showing posts from October, 2018

ಜಸ್ಟ್ ಮಾತ್ ಮಾತಲ್ಲಿ

ಈ ಆಟೋದವರು ಸರಿಯಿಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಇದು ನಿಜವಾ ಎಂದು ಆಲೋಚಿಸಿದರೆ ಈ ಡಾಕ್ಟರ್ ಗಳು, ಇಂಜಿನಿಯರ್ ಗಳು, ಸಿನಿಮಾದವರು, ಕೊನೆಗೆ ಈ ಗಂಡಸರು ಸರಿಯಿಲ್ಲ ಅನ್ನುವ ಜನರಲ್ ಸ್ಟೇಟ್ಮೆಂಟ್ ಗಳು ಸದ್ದು ಮಾಡುತ್ತಲೇ ಇರುತ್ತದೆ. ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಿಗೂ ಅವರವರದೇ ಆದ ದೌರ್ಬಲ್ಯ ಇದ್ದೆ ಇರುವ ಹಾಗೆ ಒಳ್ಳೆಯತನವೂ ಇದ್ದೆ ಇರುತ್ತದೆ. ಯಾರೂ ಸಂಪೂರ್ಣ ಕೆಟ್ಟವರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಂಪೂರ್ಣ ಒಳ್ಳೆಯವರಾಗಿರಲೂ ಸಹ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕತೆಯಿರುತ್ತದೆ. ಅದರಲ್ಲಿ ಅನೂಹ್ಯ ತಿರುವುಗಳು ಇರುತ್ತವೆ. ನೋಡುವ, ಕೇಳಿಸಿಕೊಳ್ಳುವ ತಾಳ್ಮೆ, ಮನಸ್ಸು ನಮಗಿರಬೇಕು. ಅಲ್ಲೊಂದು ವೇವ್ ಲೆಂತ್ ಹೊಂದಿಕೆಯಾಗಬೇಕು. ಹೀಗೆ ಯೋಚಿಸುವಾಗ ಪಕ್ಕನೆ ತಿರುಮಲೇಶ್ ಸರ್ ಅವರ ಕವಿತೆ ನೆನಪಾಗುತ್ತದೆ. ಓದಿರಿ, ಬರೆಯಿರಿ ಚಿತ್ರಿಸಿರಿ ಹಾಡಿರಿ ಮುಟ್ಟಬೇಕು ಜನರನ್ನು ಮುಟ್ಟದಿದ್ದರೆ ನಿಷ್ಪ್ರಯೋಜಕ ಏನು ಮಾಡಿದರೂ... ಇಲ್ಲಿ ಮುಟ್ಟುವುದು ಎಂದರೆ ದೈಹಿಕವಾಗಿ ಮುಟ್ಟುವುದಲ್ಲ, ಅವರ ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ. ಹಾಗೆ ಮುಟ್ಟಿದಾಗ ಮಾತ್ರ ಅವರು ಬಿಚ್ಚಿಕೊಳ್ಳುತ್ತಾರೆ. ಹಾಗೆ ಬಿಚ್ಚಿಕೊಂಡಾಗ ಮಾತ್ರ ಅರ್ಥವಾಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಓದುವಾಗ ಈ ಮುಟ್ಟುವಿಕೆಯು ಅರಿವಿಗೆ ಬರುತ್ತದೆ. ನೋಟದಿಂದ, ಯಾವುದೋ ಒಂದು ವರ್ತನೆಯಿಂದ ಮನುಷ್ಯರನ್ನು ಸುಲಭವಾಗಿ ಅಳೆದು ಬಿಡುತ್

ಇಪ್ಪತೆಂಟು ಹಣತೆಗಳು.

ದೀಪಾವಳಿ ಬರುತ್ತಿದ್ದಂತೆ ಮನಸ್ಸಿನಲ್ಲಿ ಏನೋ ಪುಳಕ, ಸಂಭ್ರಮ. ಪಟಾಕಿ ಹೊಡೆಯಬಹುದು ಅನ್ನೋದು ಒಂದು ಕಾರಣವಾದರೂ ಅದಕ್ಕಿಂತಲೂ ಹೆಚ್ಚು ಅವ್ಯಕ್ತ ಆನಂದ ಕೊಡುತ್ತಿದ್ದದ್ದು ಬಲಿ ಪಾಡ್ಯಮಿಯಂದು ಗೋಧೂಳಿ ಸಮಯದಲ್ಲಿ ಗೋವಿಗೆ ಆರತಿ ಎತ್ತಿ ಮನೆ ತುಂಬಾ ಹಚ್ಚುತ್ತಿದ್ದ ಹಣತೆಗಳು. ಅವತ್ತು ಮಾತ್ರ ಕಣ್ಣು ಕೋರೈಸುವ ಬೆಳಕು ಇಲ್ಲದೆ ಇಡೀ ಮನೆ ಹಣತೆಯ ಬೆಳಕಲ್ಲಿ ಮಿಂದಿರುತಿತ್ತು. ಅಂಗಳದ ಕತ್ತಲ ಸೆರಗಿನಲ್ಲಿ ನಿಂತು ನೋಡುವಾಗಲಂತೂ ಮಂದ ಬೆಳಕಿನಲ್ಲಿ ಮನೆ ಅಪೂರ್ವವಾಗಿ ಕಾಣಿಸುತ್ತಿತ್ತು. ಮನಸಿಗೆ ಏನೋ ಅವ್ಯಕ್ತ ಆನಂದ. ದಿವ್ಯ ಸಂತೋಷ. ಬೆಳಕು ಅತಿಯಾದರೆ ಕಣ್ಣಿಗೆ ಚುಚ್ಚುತ್ತದೆ. ಬೇಕಾದದ್ದು ಬೇಡವಾದದ್ದು ಎಲ್ಲವೂ ಕಣ್ಣಿಗೆ ರಾಚಿ ಮನಸ್ಸಿನ ಚೀಲ ತುಂಬಿ ಭಾರವಾಗುತ್ತದೆ. ಕಡಿಮೆಯಾದರೆ ಯಾವುದೂ ಕಾಣಿಸುವುದಿಲ್ಲ, ಸ್ಪಷ್ಟವಾಗುವುದಿಲ್ಲ. ಈ ಮಂದ ಬೆಳಕು ಹಾಗಲ್ಲ ಏನು ಬೇಕೋ ಅದನ್ನ ಕಣ್ಣು ರೆಪ್ಪೆ ಹಿಗ್ಗಿಸಿ ಸ್ವಲ್ಪವೂ ಆಯಾಸವಿಲ್ಲದೆ ತುಂಬಿ ಕೊಳ್ಳುವ ಹಾಗೆ ಮಾಡುತ್ತದೆ. ಗರ್ಭಗುಡಿಯಲ್ಲಿ ನಂದಾದೀಪದ ಬೆಳಕಿನಲ್ಲಿ ಶೋಭಿಸುವ ವಿಗ್ರಹ ಮನಸ್ಸಿಗೆ ದಿವ್ಯತೆ ತುಂಬುವುದು, ಶಾಂತತೆ ಆವರಿಸುವುದು ಇದೇ ಕಾರಣಕ್ಕೆನೋ.. ಕೋರೈಸುವ ಬೆಳಕು ಕಣ್ಣು ಚುಚ್ಚಬಹುದೇ ವಿನಃ ಒಳಕ್ಕೆ ಇಳಿಯುವುದಿಲ್ಲ, ಇಳಿಯದೇ ಇದ್ದದ್ದು ಉಳಿಯುವುದಿಲ್ಲ. ತೀರ್ಥರಾಮ ವಳಲಂಬೆಯವರು ಬರೆದ ಇಪ್ಪತ್ತೆಂಟು ಹಣತೆಗಳು ಎಂಬ ಪುಸ್ತಕವೂ ಹೀಗೆ.  ಹಣತೆಯ ಬೆಳಕಿನಂತೆ ಸೌಮ್ಯ, ಶಾಂತವಾದರೂ ಓದುತ್ತ

ದೀಪಾವಳಿ

ದೀಪಾವಳಿ ಅಂದರೆ ಸಾಲು ಸಾಲು ಹಬ್ಬ. ಯಾವುದೇ ಶುಭಕಾರ್ಯ ನಡೆಯಬೇಕಾದರೆ ಸ್ವಚ್ಛವಾಗಬೇಕು. ಅದು ಅಂತರಿಕ ಹಾಗೂ ಬಾಹ್ಯ ಕರ್ತವ್ಯವಾದರೂ ಈ ಹಬ್ಬ ಮಾತ್ರ ಅದನ್ನೂ ಆಚರಣೆಯಲ್ಲೂ ತೋರಿಸುವ ಹಬ್ಬ. ಹಾಗಾಗಿ ಎಲ್ಲವನ್ನೂ ತೊಳೆಯುವ ಕೆಲಸ ಇದರ ಮೊದಲ ಘಟ್ಟ. ಹಾಗಾಗಿ ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ತುಂಬುವ ಮೊದಲು ಖಾಲಿಯಾಗಬೇಕು. ಖಾಲಿಯಾದ ಮೇಲೆ ತೊಳೆಯಬೇಕು. ತೊಳೆಯುವಿಕೆ ನಡೆಯುವುದೇ ಬಚ್ಚಲಿನಲ್ಲಿ.  ತೊಳೆಯುವ ಶಕ್ತಿ ಇರುವುದು ಗಂಗೆಗೆ. ಅವಳು ಎಲ್ಲವನ್ನೂ ತೊಳೆಯುತ್ತಾನೆ. ಪಾಪವನ್ನೂ.. ಅಂದು ಹಂಡೆಯನ್ನು ತಿಕ್ಕಿ ತೊಳೆಯುವ ಕೆಲಸ. ಬಾಹ್ಯ ಶುದ್ಧಿಗಿಂತಲೂ ಅಂತರಿಕ ಶುದ್ಧಿ ಮುಖ್ಯ ಹೌದಾದರೂ ಮೊದಲು ಸೆಳೆಯುವುದು ಬಾಹ್ಯರೂಪ. ಬಾಹ್ಯ ಆಕರ್ಷಿಸದೆ ಅಂತರ್ಯವನ್ನು ಯಾರೂ ಹಣುಕಿನೋಡುವುದಿಲ್ಲ. ಹಾಗಾಗೀ ಎರಡೂ ಶುದ್ಧವಾಗಬೇಕು. ಹುಣಸೇಹುಳಿಯನ್ನು ಹಾಕಿ ಹಂಡೆಯನ್ನು ತಿಕ್ಕಿ ತೊಳೆದು ಫಳಫಳವಾಗಿಸಿ ತಂಬಿಗೆ,ಉಳಿದ ಸಾಮಗ್ರಿಗಳನ್ನೂ ಹೊಳೆಯುವಂತೆ ತೊಳೆದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಮನುಷ್ಯ ಇವುಗಳನ್ನು ತೊಳೆಯುತ್ತಾನೆ ಆದರೆ ಮನುಷ್ಯನನ್ನು ತೊಳೆಯುವವಳು ಗಂಗೆ. ಅವಳನ್ನು ಕರೆತರಬೇಕು. ಹಾಗಾಗಿ ಬಾವಿಗೆ ಹೋಗಿ ಗಂಗೆಯನ್ನು ಪೂಜಿಸಿ ನೀರು ತಂದು ಹಂಡೆಗೆ ತುಂಬಿಸಬೇಕು. ಆಮೇಲೆ ಅದಕ್ಕೆ ಹಿಂಡಲೇಕಾಯಿಯ ಬಳ್ಳಿಯನ್ನು ಸುತ್ತಿ ಕೆಮ್ಮಣ್ಣು ಬಳಿದರೆ ಹಂಡೆ ನವವಧುವಿನಂತೆ ಕಾಣಿಸುತ್ತಿತ್ತು.  ಅದರ ಮುಂದೆ ಸಗಣಿಯ ಮುದ್ದೆಯನ್ನು ಇಟ್ಟುಅದಕ್ಕೆ ನಾಲ್ಕ

ಗೋ ಪೂಜೆ

ಪುಟ್ಟ ವಾಮನ ಬಲಿ ಚಕ್ರವರ್ತಿಯ ಬಳಿಗೆ ಬಂದು ಮೂರು ಪಾದಗಳನ್ನು ಊರುವಷ್ಟು ಜಾಗ ಬೇಕೆಂದು ಕೇಳಿದಾಗ ನಕ್ಕ ಬಲಿ ಮತ್ತೇನಾದರೂ ಕೇಳು ಎಂದನಂತೆ. ಕೇಳುವವರು ಬಂದಾಗ ಕೊಡುವವರಿಗೊಂದು ಹಮ್ಮು ಇರುತ್ತದೆಯಂತೆ. ಅದರಲ್ಲೂ ಚಕ್ರವರ್ತಿ, ಮೂರು ಲೋಕಗಳೂ ಅವನ ವಶವರ್ತಿಯಾಗಿರುವಾಗ, ಕೊಡುಗೈ ದಾನಿ ಅನ್ನೋ ಬಿರುದು ಇರುವಾಗ ಆ ಹಮ್ಮು ಇನ್ನಷ್ಟು ಬೆಳೆಯುತ್ತದೆ. ಅಹಂಕಾರದ ಪೊರೆ ಕೇವಲ ನೋಡುವ ನೋಟವನ್ನು ಮಂಜಾಗಿಸುವುದು ಮಾತ್ರವಲ್ಲ ಆಲೋಚಿಸುವ ಬುದ್ಧಿಯನ್ನೂ ಮಂಕಾಗಿಸುತ್ತದೆ. ಕೇಳುವವನಿಗೆ ತಾನು ಏನು ಕೇಳುತ್ತಿದ್ದೇನೆ ಎನ್ನುವ ಅರಿವಿರುತ್ತದೆ. ತನಗಷ್ಟೇ ಸಾಕು ಎಂದ ಬಾಲಕ. ಇನ್ನೇನು ಕೇಳಿದರೂ ಅವನಿಗೆ ಕೊಡಲು ಉಳಿದ್ದದರೂ ಏನು? ಕೊಡುವವನು ನೋಯಬಾರದು ಎನ್ನುವ ಸೂಕ್ಷ್ಮ ಆ ಬಾಲಕನಿಗಿತ್ತು. ಕೊಡುಗೈ ದಾನಿ ಅನ್ನುವ ಹೆಸರು ಚಿರಸ್ಥಾಯಿಯಾಗಿರಬೇಕು ಅದು ನಾಶವಾಗಬಾರದು ಎನ್ನುವ ಎಚ್ಚರಿಕೆಯೂ ಜೊತೆಗಿತ್ತು. ಎಷ್ಟೆಂದರೂ ಕರುಣಾಮಯಿಯಲ್ಲವೇ ಅವನು. ಎರಡು ಪಾದಗಳಲ್ಲಿ ಪಾತಾಳದಿಂದ ಹಿಡಿದು ಆಕಾಶವನ್ನು ಅಳೆದುನಿಂತವನ ಮೂರನೇ ಪಾದಕ್ಕೆ ಜಾಗಬೇಕು. ಬೇಡಿದವನಿಗೆ ನಿರಾಸೆಯಗಬಾರದು, ಕೊಟ್ಟ ಮಾತು ತಪ್ಪಬಾರದು ಅನ್ನೋದು ಬಲಿಯ ಯೋಚನೆ. ಅಬ್ಬಾ ಕೊಡು ಕೊಳ್ಳುವಲ್ಲೂ ಎಂಥಾ ಸಾಮರಸ್ಯ. ಎಂಥಾ ಉದಾತ್ತತೆ. ಇನ್ನೆಲ್ಲಿ ಜಾಗ. ತಲೆ ಬಾಗಿದ. ತಲೆಯೊಂದಿಗೆ ಅಹಂಕಾರವೂ ಬಾಗಿತು. ಅಲ್ಲಿಗೆ ಎಲ್ಲವೂ ಬಾಗಿದಂತೆ. ಅವನ ಪದಕಮಲಗಳಿಗೆ ಶರಣಾದಂತೆ. ಶರಣಾಗತ ವತ್ಸಲ ಅವನು ವತ್ಸ ಇವನು. ಮಗನನ

ಹಲಸಿನ ಹಣ್ಣು

ಹಲಸಿನ ಹಣ್ಣು ಮುಚ್ಚಿಟ್ರೂ ಊರಿಗೆಲ್ಲಾ ತಿಳಿಯುತ್ತೆ ಅನ್ನೋಳು ಅಜ್ಜಿ ಏನಾದರೂ ಸಂದರ್ಭ ಬಂದಾಗ. ಆ ಸಂದರ್ಭ ಸನ್ನಿವೇಶ ಅರ್ಥವಾಗದ ವಯಸ್ಸು ಅದಾದರೂ ಈ ಹಾಳಾದ್ದು ಹಲಸಿನ ಹಣ್ಣಿನ ವಾಸನೆ ಬಚ್ಚಿಡೋಕೆ ಆಗೋಲ್ಲ ಅನ್ನೋದು ಗೊತ್ತಾಗ್ತಾ ಇದ್ದಿದ್ದು ಕೆಲಸ ಮುಗಿಸಿ ಹೋಗುವವರು ಓ ಹಲಸಿನ ಹಣ್ಣು ಆದ ಹಾಗಿದೆ ಅನ್ನುವಾಗ. ಈ ಹಣ್ಣನ್ನು ಇಷ್ಟಪಡದ ಜನವೇ ವಿರಳ. ಅದರಲ್ಲೂ ಮಲೆನಾಡಿಗರಿಗೆ ಅದು ಬದುಕಿನ ಒಂದು ಅವಿಭಾಜ್ಯ ಅಂಗ. ಈ ಹಲಸು ಒಂಥರಾ ಕಾಡು ನಾಡು ಅನ್ನೋ ಭೇಧವಿಲ್ಲದೆ ಎಲ್ಲಾ ಕಡೆಯಲ್ಲೂ ಹೊಂದಿಕೊಂಡು ಹೋಗುತ್ತದೆ. ದೊಡ್ಡ ಮರ ಅಗಲವಾಗಿ ಹರಡಿಕೊಂಡು ಒಳ್ಳೇ ನೆರಳು ಕೊಡುತ್ತದೆ. ಬೇಸಿಗೆಯಲ್ಲಿ ಅದರಡಿಯ ಕಲ್ಲಿನ ಮೇಲೆ ಕುಳಿತರೆ ಆ ತಂಪಿಗೆ ಅಲ್ಲೇ ನಿದ್ರೆ ಹೋಗುವ ಹಾಗಾಗುತ್ತದೆ. ಹಬ್ಬಕ್ಕೋ ಹರಿದಿನಕ್ಕೋ ಮಾವಿನ ಎಲೆಯಜೊತೆ ಇದರ ಎಲೆಯೂ ಬೇಕಾಗಿದ್ದರಿಂದ ಜನಗಳಿಗೂ ಅದು ಹತ್ತಿರವಿದ್ದಷ್ಟೂ ಅಪ್ಯಾಯಮಾನ.  ಉಪಕಾರವಿದ್ದರೆ ಮಾತ್ರ ಹತ್ತಿರಕ್ಕೆ ಬಿಟ್ಟು ಕೊಳ್ಳುವ ಮನುಷ್ಯ ಸ್ವಭಾವ ಹೊಸದೇನಲ್ಲ ಬಿಡಿ ಆದರೂ ಈ ಹಲಸು ಒಂಥರಾ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವಾಗಿದ್ದಂತೂ ಹೌದು. ಹಲಸು ಮಾವು ಎರಡೂ ಶುಭಕಾರ್ಯಗಳಿಗೆ ಪ್ರಮುಖವಾಗಿದ್ದರಿಂದಲೋ ಏನೋ ಅವೆರೆಡು ಒಟ್ಟಿಗೆ ಇದ್ದರೆ ಒಳ್ಳೆಯದು ಅನ್ನೋ ನಂಬಿಕೆಯೂ ಇದೆ. ಆದರೆ ಹಾಗಿರೋದೂ ಕೂಡಾ ಅಪರೂಪವೆ. ಹಲಸು ಬಡವರ ಪಾಲಿನ ವರ ಅನ್ನೋದು ಹಿಂದಿನಿದಲೂ ಬಂದ ನಂಬಿಕೆ. ವಿಟಮಿನ್, ಹಾಗೂ ಖನಿಜಾಂಶಗಳ ಗಣಿ ಇದು.

ದೇವಸ್ಥಾನ ರಾಜಕೀಯ

ಪುರಾಣ ಪ್ರಸಿದ್ಧ ದೇವಸ್ಥಾನ, ಶಾಸ್ತ್ರೋಕ್ತವಾಗಿ  ತ್ರಿಕಾಲ ಪೂಜೆ ನಡೆಯುವ ಸ್ಥಳ. ತನ್ನದೇ ಆದ ಸ್ಥಳ ಮಹಾತ್ಮೆ, ಒಂದು ಶಕ್ತಿ ಕೇಂದ್ರವಾಗಿ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡ ಬಂದ ಆ ದೇವಸ್ಥಾನ ಇರುವುದು ಪುಟ್ಟ ಹಳ್ಳಿಯಲ್ಲಿ, ಕುಗ್ರಾಮ ಎಂದರೂ ತಪ್ಪಿಲ್ಲ. ಒಂದೋ ಎರಡೋ ಬಸ್ ಗಳು ಬಿಟ್ಟರೆ ಬೇರೇನಿಲ್ಲ. ಹಾಗಾಗಿ ಯಾವುದೇ ಗಜಿಬಿಜಿ ಇಲ್ಲದೆ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದ ಕೆಲವರಿಗೆ ನೆಮ್ಮದಿ ಕೊಡುವ ತಾಣವಾಗಿ ಉಳಿದಿತ್ತು. ಪ್ರಕೃತಿಯ ಮಡಿಲಲ್ಲಿ ತಣ್ಣಗಿತ್ತು. ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆ ಅನ್ನೋ ಹಮ್ಮು ಮನುಷ್ಯನಿಗೆ. ಎಲೆಮರೆಯ ಕಾಯಿಯಂತೆ ಇದ್ದ ಅದನ್ನೂ ಅಭಿವೃದ್ಧಿ ಮಾಡಲು ಯೋಜನೆಗಳು, ಅದಕ್ಕೊಂದು ಕಮಿಟಿ ಎಲ್ಲವೂ ಆಗಿ ಮೊದಲ ಹೆಜ್ಜೆಯಾಗಿ ನಿತ್ಯ ಅನ್ನದಾನ ಮಾಡುವ ಯೋಜನೆ ಜಾರಿಗೆ ಬಂದಿತು. ದೇವಸ್ಥಾನಕ್ಕೆ ಹೆಸರಿತ್ತು ನಿಜ ಆದರೆ ಹಣವಿರಲಿಲ್ಲ. ಹಾಗಾಗಿ ನಿತ್ಯ ಅನ್ನದಾನ ಎಂದರೆ ಅದಕ್ಕೆ ಹಣ ಹೊಂದಿಸಬೇಕು. ಒಂದಷ್ಟು ಫಂಡ್ ಬೇಕು. ಒಮ್ಮೆ ಶುರುಮಾಡಿದ ಮೇಲೆ ನಿಂತರೆ ನಗೆಪಾಟಲು. ಹಾಗಾಗಿ ಫಂಡ್ ಸಂಗ್ರಹಿಸಲು ದಾನಿಗಳ ಹುಡುಕುವ ಜೊತೆಜೊತೆಗೇ ಬಂದ ಭಕ್ತರು ತಮ್ಮ ಶಕ್ತ್ಯಾನುಸಾರ ಹಣ ಕೊಟ್ಟು ರಸಿತಿ ಪಡೆಯಬಹುದು ಎಂದಾಯಿತು. ರಸೀತಿ ಕೊಡಲು ಒಬ್ಬರ ನೆಮಕವೂ ಆಯಿತು. ಹೆಸರು ಪುಗಸಟ್ಟೆ ಬಂದರೆ ಸರಿ ಆದರೆ ಕೆಲಸ ಪುಗಸಟ್ಟೆ ಮಾಡೋದು ಹೇಗೆ ಅದಕ್ಕಿಷ್ಟು ಸಂಬಳ, ಕೂರಲು ಕುರ್ಚಿ ಅದಕ್ಕೊಂದು ಹುದ್ದೆಯ ಹೆಸರು ಎಲ್ಲವೂ ಆಯಿತು. ಸ

ಮೀಸೆ.

ಆಗಿನ್ನೂ ಚಿಕ್ಕವರು. ಟಿ.ವಿ ಯಿನ್ನೂ ಎಲ್ಲಾ ಕಡೆಗೂ ಹೆಜ್ಜೆ ಇಟ್ಟಿರಲಿಲ್ಲ. ಆಗೆಲ್ಲಾ ರೇಡಿಯೋ ಬಲು ದೊಡ್ಡ ಮಾಧ್ಯಮ. ಮನರಂಜನೆ, ವಾರ್ತೆ, ಎಲ್ಲವಕ್ಕೂ ಅದೇ. ಆಗ ಮಧ್ಯಾನ ಚಿತ್ರಗೀತೆ ಪ್ರಸಾರವಾಗುತಿತ್ತು. ತಮ್ಮ ಮೆಚ್ಚಿನ ಗೀತೆ ಹಾಕಿ ಅಂತ ಕಾಗದ ಬರೆಯುತಿದ್ದರು. ಹಾಡು ಕೇಳಬೇಕು ಎಂದಾಗ ಹೀಗೆ ಕಾಗದ ಬರೆದು ಪ್ರತಿದಿನ ರೇಡಿಯೋ ಕಿವಿ ತಿರುಪಿ ನಮ್ಮ ಕಿವಿ ಅದಕ್ಕೆ ಕೊಟ್ಟು ಕೇಳಬೇಕಿತ್ತು. ಆಗೆಲ್ಲಾ ಒಂದಷ್ಟು ಹಾಡುಗಳು ಪದೇ ಪದೇ ಪ್ರಸಾರವಾಗುತಿತ್ತು. ಅದರಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಅನ್ನೋದೂ ಒಂದು. ಆಗ ಕೇವಲ ಆಡಿಯೋ ಇದ್ದ ಕಾರಣ ಹೇಳುವವರಿಗಾಗಲಿ, ನಟಿಸಿದವರಿಗಾಗಲಿ ಮೀಸೆ ಇತ್ತಾ, ಆ ಮೀಸೆಯ ಮೇಲೆ ಕೈಯಾಡಿಸಿಕೊಂಡೆ ಹೇಳುತ್ತಿದ್ದಾರ ಎಂದು ಕಾಣಿಸದಿದ್ದರೂ ನಾವು ಭಾವಿಸುತಿದ್ದೆವು. ಒಂದು ಹೆಣ್ಣಿಗೆ ಒಂದು ಗಂಡು ಅನ್ನೋದು ಕೇವಲ ಮಾತಿನಲ್ಲಿದ್ದ ಕಾಲವದು. ವರದಕ್ಷಿಣಿ ಅನ್ನೋ ಭೂತ ತನ್ನ ರುದ್ರನರ್ತನ ಮಾಡುತಿತ್ತು. ಗಂಡಸು ಅದರಲ್ಲೂ ಮೀಸೆ ಇದ್ದ ಗಂಡಸು ಅಂದರೆ ಮುಗಿಯಿತು. ಪಾಳೆಯಗಾರ ಇದ್ದ ಹಾಗೆ. ಅದರಲ್ಲೂ ಅಳಿಯನಾಗಿ ಬರುವವನಾದರೆ ಮುಗಿದೇ ಹೋಯಿತು. ನಡುಬಗ್ಗಿಸಿ, ಮೈ ಹಿಡಿಯಾಗಿಸಿ ನಿಂತು ಅವರ ದರ್ಪದ ಮಾತಿಗೆ ಕಿವಿಯಾಗಿ ಕೇಳಬೇಕಿತ್ತು. ಆಗೆಲ್ಲಾ ಛೆ ಗಂಡಾಗಿ ಹುಟ್ಟಬೇಕು ಅನ್ನೋ ಆಸೆ ಸುಪ್ತವಾಗಿ ಹುಟ್ಟಿ ಒಳಗೆ ಮಾಯವಾಗುತಿತ್ತು. ಹೆಣ್ಣಾಗಿ ಹುಟ್ಟಿದವೆಲ್ಲಾ ಅನ್ನೋ ಕೀಳರಿಮೆ ಕೂಡಾ. ಆದರೆ ಅವನೆದುರು ಬಾ

ಜೀರಿಗೆ ಮೆಣಸು

ನಾಳೆ ರಜೆ ಇದೆಯಲ್ಲ ತೋಟಕ್ಕೆ ಹೋಗಿ ಜೀರಿಗೆ ಮೆಣಸು ಕುಯ್ಕೊಂಡು ಬರಬೇಕು ಅಂತ ಅಜ್ಜಿ ಹೇಳಿದ ಕೂಡಲೇ ಕೋಪ ಸರ್ರಂತ ಮೇಲೆರುತಿತ್ತು. ಯಾಕಾದ್ರೂ ಈ ಗಿಡ ಹುಟ್ಟುತ್ತೇನೋ ಅನ್ನುವ ಕೋಪ. ಮೈತುಂಬಾ ಹಸಿರು, ಕೆಂಪಗಿನ ಕಾಯಿ ಬಿಟ್ಟು ಮುಗಿಲ ಕಡೆ ಮುಖ ಮಾಡಿ ನಿಂತಿರುತಿದ್ದ ಅದು ಶತ್ರುವಿನಂತೆ ಭಾಸವಾಗುತಿತ್ತು. ಕಳೆ ಸವರುವವರು ಇದನ್ನಾದರೂ ಸವರಬಾರದಿತ್ತಾ ಅಂತ ಗೊಣಗುಟ್ಟುತ್ತಲೇ ತೋಟದ ಕಡೆ ಸವಾರಿ ಹೊರಡುತಿದ್ದೆ. ಪುಟ್ಟ ಪುಟ್ಟ ಕಾಯಿಗಳನ್ನು ಬಿಡಿಸುವುದು ರೇಜಿಗೆಯ ಕೆಲಸವಾಗಿತ್ತು. ಅದೂ ಒಂದೆರೆಡೆ ಉಹೂ ಲೆಕ್ಕವಿಲ್ಲದಷ್ಟು ಹಗುರ ಕಾಯಿಗಳು. ತೋಟದಲ್ಲಿ ಅಡಿಕೆ ಮರದ ನೆರಳಿನಲ್ಲಿ ಹುಟ್ಟಿ ನಗುತಿದ್ದ ಈ ಸುಂದರಿ ಯಾರ ಗಮನವನ್ನೂ ಸೆಳೆಯದೆ ಬೆಳೆಯುತ್ತಿದ್ದಳು. ಯಾರ ಆರೈಕೆ ಬೇಡದೆ, ಯಾವುದೇ ವಿಶೇಷ ಗಮನವಿಲ್ಲದೆ ತನ್ನಷ್ಟಕ್ಕೆ ತಾನು ಸೊಂಪಾಗಿ ಬೆಳೆಯುತ್ತಿದ್ದಳು. ತೋಟದ ಕಳೆಗಳ ಮಧ್ಯದಲ್ಲಿ ಕೆಲವೊಮ್ಮೆ ಕಾಣಿಸದೆ ಇರುವ ಸಂದರ್ಭಗಳೂ ಇತ್ತು. ಹಾಗಾಗಿ ಕೆಲವೊಮ್ಮೆ ಕಳೆ ಸವರುವ ಭರದಲ್ಲಿ ಕತ್ತಿಯ ಆಲಿಂಗನಕ್ಕೆ ಸಿಲುಕಿ ಅಡಿಕೆಯ ಮರದ ಬುಡಕ್ಕೋ ಇಲ್ಲಾ ದನಗಳ ಹೊಟ್ಟೆಗೋ ಸೇರಿ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಳು. ಬಚಾವಾಗಿ ಬದುಕುಳಿದರೆ ಮೈತುಂಬಾ ಹೂವರಳಿಸಿ ಕೊಂಡು ಎಲೆಯೂ ಕಾಣದಂತೆ ಕಾಯಿ ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿದ್ದಳು. ಕಾಯಿ ಪುಟ್ಟದಾದರೂ ಖಾರ ಬಹಳ. ಹಾಗಾಗಿಯೇ ಮಲೆನಾಡಿನ ಕಡೆ ತುಂಬಾ ಚುರುಕಾಗಿರುವವರಿಗೆ ಅಯ್ಯೋ ಅವಳಾ/ನಾ ಜೀರಿಗೆಮೆಣಸ

ಚಂದ್ರಿ

ನಾನು ಈ ಭೂಮಿಗೆ ಬರುವ ಅವಸರದಲ್ಲಿದ್ದಾಗಲೇ ಕೊಟ್ಟಿಗೆಯಲ್ಲಿದ್ದ ಚಂದ್ರಿಗೂ ಪ್ರಸವ ವೇದನೆ. ಇಬ್ಬರು ತುಂಬು ಗರ್ಭಿಣಿಯರ ಹೊಣೆ ಹೊತ್ತ ಅಜ್ಜಿಗೆ ಯಾರಿಗೆ ಮೊದಲು ಪ್ರಸವವಾಗುತ್ತೋ ಅನ್ನುವುದಕ್ಕಿಂತ ಇಬ್ಬರಿಗೂ ಸಸೂತ್ರವಾಗಿ ಹೆರಿಗೆಯಾಗಲಿ ಅನ್ನೋ ಯೋಚನೆ. ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಿದರೆ ಮನೆಯಲ್ಲಿ ಗಂಡು ಅನ್ನೋ ನಂಬಿಕೆ ಪ್ರಚಲಿತವಿದ್ದ ಕಾಲ. ಹಾಗಾಗಿ ಸಣ್ಣ ಕುತೂಹಲ ಕೂಡ. ಆದರೆ ಅಮ್ಮ ಚಂದ್ರಿ ಇಬ್ಬರೂ ಹೆತ್ತಿದ್ದೂ ಹೆಣ್ಣು. ಹಾಗಾಗಿ ದನಕರುಗಳ ಜೊತೆಗೆ ಬಾಂಧವ್ಯ ಹುಟ್ಟಿದ ಮೇಲೆ ಜೊತೆಯಾಗಿದ್ದಾ, ಹುಟ್ಟುತ್ತಲೇ ಜೊತೆಯಾಗಿದ್ದಾ ಅನ್ನೋದೂ ಇವತ್ತಿಗೂ ಗೊಂದಲವೇ. ಬಾಲ್ಯದ ಆಟ ಶುರುವಾಗಿದ್ದೇ ಅವುಗಳ ಜೊತೆಗೆ. ಅಮ್ಮನ ಜೊತೆ ಜೊತೆಗೆ ಚಂದ್ರಿಯೂ ಹಾಲು ಉಣಿಸಿದ್ದಳು. ಹಾಗಾಗಿ ಬದುಕಿಗೆ ಇಬ್ಬರು ತಾಯಂದಿರು. ಕೇವಲ ಮನುಷ್ಯರಿಗೆ ಮಾತ್ರ ಈ ಪುಣ್ಯವೇನೋ. ನನ್ನೊಂದಿಗೆ ಬೆಳೆದ ಕೆಂಪಿಗೂ ನನಗೂ ಅವಿನಾಭಾವ ಸಂಬಂಧ ಬೆಳೆದಿತ್ತು. ಒಂದರ್ಥದಲ್ಲಿ ಒಂದೇ ತಾಯಿಯ ಹಾಲು ಕುಡಿದು ಬೆಳೆದ ಇಬ್ಬರೂ ಅಕ್ಕ ತಂಗಿಯರೇ. ಬೆಳಗ್ಗಿನ ಅಲಾರಂ ಅವುಗಳ ಅಂಬಾ ಅನ್ನೋ ದನಿಯೇ. ಬೆಳಿಗ್ಗೆ ಎದ್ದು ಹಸುವಿನ ಮುಖ ನೋಡಿದರೆ ಶುಭ ಅನ್ನೋ ನಂಬಿಕೆಯೂ ಇದ್ದಿದ್ದರಿಂದ ಹಾಗೂ ಕೊಟ್ಟಿಗೆ ಮತ್ತು ಬಚ್ಚಲು ಒಟ್ಟಿಗೆ ಇದ್ದಿದ್ದರಿಂದ ಅವುಗಳ ಮುಖ ದರ್ಶನವಿಲ್ಲದೆ ದಿನ ಆರಂಭವಾಗುತ್ತಲೇ ಇರಲಿಲ್ಲ. ನಾವು ಏಳುವ ವೇಳೆಗಾಗಲೇ ಅಜ್ಜಿ ಕೊಟ್ಟಿಗೆಯಲ್ಲಿ ಅವುಗಳಿಗೆ ಕುಡಿಯಲು ಕೊಡುತ್ತಲೋ ಇಲ್