Posts

Showing posts from August, 2018

ಪೆಟ್ಲು ಕಾಯಿ

ಶ್ರಾವಣ ಅಂದ್ರೆ ಸಂಭ್ರಮ. ಒಂದೇ ಸಮನೆ ಶ್ರುತಿ ಹಿಡಿದು ಸುರಿಯುತ್ತಿದ್ದ ಮಳೆಯೂ ಸ್ವಲ್ಪ ವಿರಾಮ ತೆಗೆದುಕೊಂಡ ಹಾಗೆ ಅನ್ನಿಸೋ ಕಾಲ. ಅದಕ್ಕಿಂತ ಹೆಚ್ಚು ಸಾಲು ಸಾಲು ವ್ರತಗಳು, ಹಬ್ಬಗಳು. ವ್ಯವಸಾಯದ ಬಹಳಷ್ಟು ಕೆಲಸಗಳು ಮುಗಿದು ದೇಹಕ್ಕೆ ವಿರಾಮದ ಸಮಯ. ಮನಸ್ಸಿಗೆ ಸಂಭ್ರಮ ಸಡಗರ ತುಂಬುವ ಸಮಯ. ರಜೆಗಳ ಸಾಲು ಖುಷಿ ಕೊಟ್ಟರೂ ಆಗ ನಮಗೆ ಹೆಚ್ಚು ಸಂಭ್ರಮ ಕೊಡುತ್ತಿದ್ದ ಸಂಗತಿಯೆಂದರೆ ದಾರಿಯ ಇಕ್ಕೆಲಗಳಲ್ಲಿ, ಕಾಡಿನ ಒಡಲಲ್ಲಿ ಬಿಟ್ಟಿರುತ್ತಿದ್ದ ಪೆಟ್ಲುಕಾಯಿ ಹಾಗೂ ಅದರ  ಘಮ. ಆ ಘಮ ಗಾಳಿಗೂ ಹುಚ್ಚು. ಹಾಗಾಗಿ ಅದನ್ನು ನೇವರಿಸಿ ಅದರ ಘಮವನ್ನು ತನ್ನ ಮೈಗೆ ಪೂಸಿಕೊಳ್ಳುತಿತ್ತು. ಅದು ಸುಳಿದ ಕಡೆ ಮೂಗು ಅರಳುತಿತ್ತು. ಚಿಕ್ಕ ಚಿಕ್ಕ ಕಾಯಿಗಳನ್ನು ಒಡಲ ತುಂಬಾ ತುಂಬಿಕೊಂಡು ತುಂಬು ಗರ್ಭಿಣಿಯಂತೆ ಕಾಣುತಿದ್ದ ಅರಳುಮರಳು ಅನ್ನೋ ಹೆಸರಿನ ಗಿಡ ನಮಗೆ ಮರುಳು ಹಿಡಿಸುತ್ತಿದ್ದದಂತೂ ನಿಜ. ಹೀಗೆ ಬಿಟ್ಟ ಕಾಯಿಗಳನ್ನು ತಂದು ಪೆಟ್ಲು ಹೊಡೆಯುವ ಆಸೆ ನಮ್ಮದಾದರೆ  ಎಳೆಯ ಕಾಯಿಗಳನ್ನು ಕೊಯ್ದು ತಂದು  ಹೇರಳವಾಗಿ ಬಿಟ್ಟಿರುತ್ತಿದ್ದ ನಿಂಬೆಯ ಜೊತೆ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಿತ್ತಿಲಲ್ಲಿ ಬೆಳೆದ ಮಾವಿನ ಶುಂಟಿ ಕಿತ್ತು ತಂದು ಸಣ್ಣಗೆ ಹೆಚ್ಚಿ ಎಲ್ಲವನ್ನೂ ಸೇರಿಸಿ ಉಪ್ಪಿನಕಾಯಿ ತಯಾರಿಸುವ ಸಡಗರ. ಬಾಳೆಎಲೆಯ ಮೇಲೆ ಬಿಸಿ ಅನ್ನ ಹಾಕಿಕೊಂಡು ಕಡೆದ ಮಜ್ಜಿಗೆಯನ್ನೋ, ಗಟ್ಟಿ ಮೊಸರನ್ನೋ ಕಲೆಸಿಕೊಂಡು ಎಲೆಯ ತುದಿಗೆ ಹಾಕಿದ ಈ ಉಪ್ಪ

ಅನಾವರಣ

ಯಾವುದೊ ಸಂಸ್ಥೆಯ ಸಹಾಯಕ್ಕಾಗಿ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಕೈಲಾದಮಟ್ಟಿಗೆ ಅದರಲ್ಲಿ ಪಾಲ್ಗೊಳ್ಳುವ ಎಂದು ಭಾಗವಹಿಸಿದ್ದೆ. ಎಲ್ಲವೂ ಚೆಂದವಾಗಿಯೇ ನಡೆದಿತ್ತು. ಬಂದವರು ತಮ್ಮ ಕೈಲಾದ ದೇಣಿಗೆ ನೀಡಿದ್ದರು. ಒಬ್ಬರಂತೂ ತಮ್ಮ ಹೆಸರು ಹೇಳುವುದಿರಲಿ ಮುಖವನ್ನೂ ಸರಿಯಾಗಿ ತೋರಿಸದೆ ಜೇಬಲ್ಲಿದ್ದ ಅಷ್ಟೂ ಹಣವನ್ನು ಟೇಬಲ್ ಮೇಲಿಟ್ಟು ಕರೆಯುತ್ತಿದ್ದರೂ ಕೇಳಿಸದಂತೆ ಹೋಗಿದ್ದರು. ಇನ್ನೂ ಯುವಕ. ಕಣ್ಣು ತುಂಬಿ ಬಂದಿತ್ತು. ವೇದಿಕೆಯಲ್ಲಿ ಕೈ ಮುಗಿದು ನಿಂತಿದ್ದ ಮಕ್ಕಳ ನೋಡಿ ಇಂಥವರೇ ಅವರ ಕಣ್ಣಿನ ಬೆಳಕಾಗುವವರು ಎಂಬ ತೃಪ್ತಿ ಮೂಡಿತ್ತು.   ಆಮೇಲೆ ಅಲ್ಲಿ ಒಟ್ಟಾದ ಹಣಕ್ಕಾಗಿ ನಡೆದ ಮೇಲಾಟ, ಹೆಸರಿಗಾಗಿ ಒಬ್ಬರ ಮೇಲೊಬ್ಬರು ನಡೆಸಿದ ಕೆಸರಾಟ, ಕೊನೆಗೂ ಯಾರಿಗೂ ಸೇರದೆ ಉಳಿದುಹೋದ ಒಂದಷ್ಟು ಹಣಕ್ಕಾಗಿ ಆದ ಕಚ್ಚಾಟ ನೋಡಿ ಮಾಡಿದರೆ ವೈಯುಕ್ತಿಕ ಸಹಾಯ ಮಾಡಬೇಕೆ ಹೊರತು ಯಾವುದೋ ಬ್ಯಾನರ್ ಅಡಿಯೋ, ಇನ್ಯಾವುದೋ ಹೆಸರಿನ ಅಡಿಯಲ್ಲೋ ಅಲ್ಲಾ ಎನ್ನುವ ಜ್ಞಾನೋದಯದ ಜೊತೆಗೆ ಸೇವೆಯ ಹೆಸರಿನ ಕರಾಳ ಮುಖದ ಪರಿಚಯವೂ ಆಗಿ ಬೆಚ್ಚಿ ಬಿದ್ದಿದ್ದೆ. ಕೊಡಗಿನ ಪ್ರಾಕೃತಿಕ ವಿಕೋಪ ಕಂಗೆಡಿಸಿದ್ದು, ಅನಾವರಣ ಗೊಳಿಸಿದ್ದು ಏನೇನು ನೋಡುತ್ತಾ ಹೋದರೆ ಹೀಗೆ ಬೆಚ್ಚಿ ಬೀಳಿಸುವ ಅನೇಕ ಸತ್ಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಿದೆ. ಜಗತ್ತಿನಲ್ಲಿ ಆಲೋಚಿಸುವ ಶಕ್ತಿ ಮನುಷ್ಯನಿಗೆ ಮಾತ್ರ ಅನ್ನೋದು ಇಷ್ಟು ದಿನ ಹೆಮ್ಮೆಯ ವಿಷಯವಾಗಿತ್ತು. ಆದರೆ ಹೇಗೆ ಆಲೋಚಿಸಬೇಕು ಅನ್ನ

ನನ್ನಿ

ಯಾರದ್ದೋ ಅನಾರೋಗ್ಯ ಹಣಕ್ಕಾಗಿ ಸಹೃದಯರ ಸಹಾಯ ಯಾಚಿಸಿದ್ದರು ಒಬ್ಬರು. ಒಳ್ಳೆಯ ವ್ಯಕ್ತಿ ಅನ್ನೋ ಹೆಸರಿದ್ದ ಕಾರಣ ತುಂಬಾ ಜನರೂ ತಮ್ಮ ಕೈಲಾದಷ್ಟು ನೀಡಿದ್ದರು. ಕೊನೆಯಲ್ಲಿ ನೋಡಿದಾಗ ಸಂಗ್ರಹವಾಗಿದ್ದ ಕಾಲುಭಾಗದಷ್ಟೂ ಹಣವೂ ಸೇರಬೇಕಾಗಿದ್ದವರ ಪಾಲಿಗೆ ಸೇರಿರಲಿಲ್ಲ. ವಿಚಾರಿಸಿದಾಗ ಸಹಾಯ ಮಾಡುವ ನೆಪದಲ್ಲಿ ಇವರ ಜೇಬು ತುಂಬಿಸಿಕೊಳ್ಳುವ ಪ್ರಕ್ರಿಯೆ ಸದಾ ನಡೆಯುತ್ತದೆ ಎಂದು ಗೊತ್ತಾದಾಗ ಬೆಚ್ಚಿಬಿದ್ದಿದ್ದೆ. ಸೇವೆಯ ಇನ್ನೊಂದು ಮುಖದ ಅನಾವರಣ ಆಗಿ ಶಾಕ್ ಕೂಡಾ ಆಗಿತ್ತು. ಕರಣಂ ಪ್ರಸಾದ್ ಅವರ ನನ್ನೀ ಕಾದಂಬರಿ ಓದುವಾಗ ಇವೆಲ್ಲವೂ ನೆನಪಾಗಿತ್ತು. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬ  ಹಾಡು ನೆನಪಾಗಿ ಈಗ ಸೇವೆ ಎಂಬುದು ಇಳಿದಿರುವ ಮಟ್ಟ ನೋಡಿ ಮನಸ್ಸಿಗೆ ಕಸಿವಿಸಿಯ ಜೊತೆಗೆ ವಿಷಾದ ಕೂಡ. ಇಲ್ಲಿಯೂ ನನ್ ಒಬ್ಬಳ ಬದುಕಿನ ಕತೆಯಿದೆ. ಅವಳು ಸತ್ಯಾನೇಷ್ವಣೆಗೆ ಹೊರಡುವ ಚಿತ್ರಣವಿದೆ. ಮತಾಂತರದ ವಿಶ್ವರೂಪ ದರ್ಶನವಿದೆ. ಅಸಹಾಯಕತೆ ಹೇಗೆ ಬಂಡವಾಳವಾಗುತ್ತದೆ ಎನ್ನುವುದರ ಕರಾಳ ಅನಾವರಣ ಇದೆ. ಹಾಗಾದರೆ ಅದು ಕೇವಲ ಅವರ ಕತೆಯಾ ಉಹೂ ಓದುತ್ತಾ ಓದುತ್ತಾ ಹೋದ ಹಾಗೆ ನಮ್ಮೊಳಗೂ ಅನ್ವೇಷಣೆ ನಡೆಯುತ್ತಾ ಹೋಗುವುದರ ಜೊತೆಗೆ ಭ್ರಮೆಯನ್ನು ಕಳೆದು ವಾಸ್ತವವನ್ನು ಪರಿಚಯಿಸುತ್ತಾ ಹೋಗುತ್ತದೆ. ಸತ್ಯದ ಬೆಳಕು ಗೋಚರಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖವಿದೆ ಅನ್ನೋದು ಪ್ರಸಿದ್ದ ನಾಣ್ನುಡಿ. ಕೇವಲ ನಾಣ್ಯಕ್ಕೆ ಮಾತ್ರವಲ್ಲ ಪ್ರಕೃತಿಯ ಪ್ರತಿಯೊ

ಅಭ್ಯಂಜನ.

ಭಾನುವಾರ ಬಂತೆಂದರೆ ಅದು ಅಭ್ಯಂಜನದ ಸಮಯ.ನಿಧಾನಕ್ಕೆ ಎದ್ದು ತಿಂಡಿ ತಿಂದು ಹೊರಗೆ ಆಡಲು ಹೋಗಬೇಕು ಅಂತ ರೆಡಿಯಾಗುವಾಗಲೇ ಹೊಂಚು ಹಾಕಿ ಹಿಡಿಯುವ ಬೇಟೆಗಾರನಂತೆ ಅಜ್ಜಿ ಪ್ರತ್ಯಕ್ಷಳಾಗುತ್ತಿದ್ದಳು. ತಪ್ಪಿಸಿಕೊಳ್ಳಲು ಆಗದಂತೆ ಮಾಡುತ್ತಿದ್ದಳು. ಬಿಲ್ಲಿನ ಬದಲು ಎಣ್ಣೆಯ ಬಟ್ಟಲು ಹಿಡಿದು. ಅಲ್ಲಿಗೆ ಎಲ್ಲಾ ದಾರಿಗಳೂ ಮುಚ್ಚಿ  ಇನ್ನು ಚಟ್ಟೆಮುಟ್ಟೆ ಹಾಕಿ ಕೂರುವುದೊಂದೇ ಬಾಕಿ  ಉಳಿಯುತ್ತಿತ್ತು. ಮಂದವಾದ ಹರಳೆಣ್ಣೆಯನ್ನು ಒಂದು ಹನಿಯೂ ನೆಲಕ್ಕೆ ಜಾರದಂತೆ ಬೊಗಸೆಯಲ್ಲಿ ಸುರಿದು ಅಷ್ಟೇ ನಾಜೂಕಾಗಿ ನೆತ್ತಿಗೆ ಒತ್ತಿ ತನ್ನ ಪುಟ್ಟದಾದ ಕೈಯಿಂದ ಹದವಾಗಿ ತಿಕ್ಕುತ್ತಿದ್ದರೆ ಅದು ಮಳೆಗಾಲದ ನೀರಿನಂತೆ ಜಾಗ ಮಾಡಿಕೊಂಡು ತೊರೆಯಾಗಿ, ಜಲಪಾತವಾಗಿ ಇಳಿದು ಮುಖಕ್ಕೆ ಮುತ್ತಿಕ್ಕುತ್ತಿತ್ತು. ವಾರಕ್ಕೊಂದು ಸಾರಿ ನೆತ್ತಿಗೆ ಎಣ್ಣೆ ಬೀಳದಿದ್ದರೆ ಕಣ್ಣುರಿ ಬರುತ್ತೆ. ನೆತ್ತಿ ಕಾಯಿಸಬಾರದು. ನೋಡು ಹೇಗೆ ಸುಡ್ತಾ ಇದೆ. ಹಾಳಾದವಳು ಬಿಸಿಲಿಗೆ ಹೋಗಬೇಡಾ ಅಂದ್ರೂ ಮೂರ್ಹೊತ್ತೂ ಅಲ್ಲೇ ಸಾಯ್ತಿ ಅಂತ ಬೈಯುತ್ತಿದ್ದರೆ ಒಳಗೆ ನಿಧಾನಕ್ಕೆ ಇಳಿಯುತ್ತಿದ್ದ ಹರಳೆಣ್ಣೆಯ ತಂಪಿಗೆ ಅದು ಜೋಗುಳದಂತೆ ಭಾಸವಾಗಿ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತಿತ್ತು. ನೆತ್ತಿಗೆ ಬಡಿದು ಅಷ್ಟೂ ಎಣ್ಣೆಯನ್ನು ಇಳಿಸಿದ ಮೇಲೆ ಒಂದು ಬಟ್ಟಲಿಗೆ ಎಳ್ಳೆಣ್ಣೆಯನ್ನು ಸುರಿದು ಹೋಗು ಮೈಗೆಲ್ಲಾ ಹಚ್ಚಿಕೊಂಡು ಓಲೆ ಉರಿ ಮುಂದೆ ಮಾಡು ಎಂದು ಆ ಏಕಾಂತದಿಂದ ಎಬ್ಬಿಸಿ ಬಚ್ಚಲಿಗೆ ಅಟ್ಟುತ್ತಿದ್ದ

ಡಿಜಿಟಲ್ ಇಂಡಿಯಾ (ನಿಧಾನವೇ ಪ್ರಧಾನ , ವೇಗವೇ ಪ್ರಧಾನಿ...

ಮೊನ್ನೆ ಮೊನ್ನೆ ಪೇಪರ್ ನಲ್ಲೊಂದು ಸುದ್ದಿ. ಇನ್ನು ಮೇಲೆ ವೀಸಾ ಕೊಡಲು ಫೇಸ್ಬುಕ್ ಸ್ಟೇಟಸ್ ಗಳನ್ನೂ ಸಹ ಗಮನಿಸಿ ವಿರೋಧವಾಗಿ ಬರೆದವರಿಗೆ ನಿರಾಕರಿಸಲಾಗುತ್ತದೆ ಎಂದು. ಈ ರೂಲ್ ಸ್ಟ್ರಿಕ್ಟ್ ಆಗಿ ಫಾಲೋ ಮಾಡೋ ಮುನ್ನ ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರಬೇಕು ಆಮೇಲೆ ನಿರ್ಬಂಧ ವಿಧಿಸಿದರೆ ಏನು ಮಾಡೋದು ಅಂತ ಯೋಚಿಸಿ ಪಾಸ್ಪೋರ್ಟ್ ಗೆ ಅಪ್ಲೈ ಮಾಡಿದ್ದಾಯ್ತು. ಈಗ ಮೊದಲಿನ ಹಾಗೆ ಏಜೆಂಟ್ ಹುಡುಕಿ ಅಪ್ಲಿಕೇಶನ್ ಬರೆದು ಅದನ್ನು ಕೊಟ್ಟು ಅವರು ಯಾವಾಗ ಕರಿತಾರೋ ಅಂತ ಕಾಯೋ ಕೆಲಸ, ಶ್ರಮ ಎರಡೂ ಇಲ್ಲ. ಆನ್ಲೈನ್ ನಲ್ಲಿ ಅಪ್ಲಿಕೇಶನ್ ತುಂಬಿದರೆ ಯಾವತ್ತು ಬರಬೇಕು ಅನ್ನೋ ಮೆಸೇಜ್ ಮೊಬೈಲ್ ಗೋ ಮೇಲ್ ಬಾಕ್ಸ್ ಗೋ ಬಂದು ಬೀಳುತ್ತದೆ. ಹಾಗೆ ನಮಗೆ ಬೆಳಿಗ್ಗೆ 9 ಗಂಟೆಗೆ appointment ಸಿಕ್ಕಿತ್ತು. ಇನ್ನು ಒಳಗೆ ಹೋದಮೇಲೆ ಎಷ್ಟು ಹೊತ್ತೋ ಎಂದು ಗೊಂದಲದಲ್ಲೇ ಹೋದರೆ ಆಗಲೇ ಹನುಮಂತನ ಬಾಲವನ್ನೂ ಮೀರಿಸುವ ಕ್ಯೂ. ಇವತ್ತು ಆದ ಹಾಗೆ ಅಂತ ಗೊಣಗುತ್ತಲೇ ಸಾಲಿನಲ್ಲಿ ನಿಂತರೆ ಗಡಿಯಾರದ ಮುಳ್ಳು ಅದಾಗಲೇ 8.50 ತೋರಿಸುತಿತ್ತು. ಮುಂದೆ ನೋಡಿದರೆ ಸುಮಾರು ಜನ. ಟೈಮ್ ಮೀರಿದರೆ ಒಳಗೆ ಹೋಗಲು ಬಿಡ್ತಾರೋ ಇಲ್ವೋ ಇವತ್ತು ಹಾಗಿದ್ರೆ ಕೆಲಸ ಆಗಲಿಕ್ಕಿಲ್ಲ ಅಂತ ಅನ್ನಿಸಿ ಯಾವುದಕ್ಕೂ ಒಮ್ಮೆ ಕೇಳಿಯೇ ಬಿಡುವ ಅಂತ ಸೆಕ್ಯೂರಿಟಿ ಹತ್ತಿರ ಹೋಗಿ ಮೇಲ್ ತೋರಿಸಿದರೆ ಈಗ ನಿಮ್ಮ ಬ್ಯಾಚ್ ಇರೋದು ಅಂತ ಒಳಗೆ ಬಿಟ್ಟರು. ಇಂತಿಷ್ಟು ಜನಗಳಿಗೆ ಒಂದು ಬ್ಯಾಚ್. ಅದು ಒಮ್ಮೆ ಒಳಗೆ

ಕೆಸು

ಮಳೆಗಾಲ ಅದರಲ್ಲೂ ಆಷಾಡದ ತಿಂಗಳಲ್ಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ಪತ್ರೊಡೆಯದ್ದೇ ಸುದ್ದಿ, ಅದರದ್ದೇ ಘಮ. ಒಮ್ಮೆ ಮೂಗು ಅರಳಿಸಿ ಆಘ್ರಾಣಿಸಿದರೆ ಅದರಲ್ಲಿ ಅಡಕವಾಗಿರುವ ಪತ್ರೊಡೆಯ ಘಮ ಹಾಗೆ ಒಳಕ್ಕಿಳಿದು ಜಠರಾಗ್ನಿಯನ್ನು ಪ್ರಚೋದಿಸುತ್ತದೆ. ಮಳೆಬಿದ್ದ ಒದ್ದೆ ಒದ್ದೆ  ನೆಲ, ಬೀಸುವ ಥಂಡಿಗಾಳಿ ಚಳಿಗೆ ಬಿಸಿಬಿಸಿಯಾದ ಪತ್ರೊಡೆಗಿಂತ ಬೇರೆ ಮದ್ದು ಯಾವುದಿದೆ ಹೇಳಿ.? ಕೆಸುವಿಗಿಂತ ಚೇತೋಹಾರಿ ಮಿತ್ರ ಇನ್ಯಾರು ಸಿಕ್ಕಾರು ಹೇಳಿ? ಈ ಬಹುಪಯೋಗಿ ಕೆಸು ಬೆಳೆಯೋದು ಜವುಗು ನೆಲ ಹಾಗೂ ನೆರಳಿರುವ ಜಾಗದಲ್ಲಿ. ಬಿಸಿಲು ಅದಕ್ಕೆ ಅಷ್ಟು ಹಿತವಲ್ಲ. ತಂಪು ಬೇಕೇ ಬೇಕು. ಹೀಗೆ ನೀರ ನಡುವೆ, ನೀರಿನ ಜೊತೆ ಜೊತೆಗೆ ಬೆಳೆದರೂ ಅದು ಕಮಲಪತ್ರದಂತೆ. ಜೊತೆಗಿದ್ದರೂ ಅಂಟಿಕೊಳ್ಳದ ಹಾಗಿರುತ್ತದೆ. ಜೊತೆಗಿದ್ದೂ ಬಂಧಿಯಾಗದಂತೆ, ಅಂಟಿಯೂ ಅಂಟದಂತೆ ಇರುವ ಗುಣ ಅದೆಷ್ಟು ಕಷ್ಟ ಕಷ್ಟ. ಹಾಗಿರುವುದರಿಂದಲೇ ಅದೆಷ್ಟು ಇಷ್ಟ. ಕೆಸು ಅಂದ ಕೂಡಲೇ ಇಲ್ಲೂ ಮನುಷ್ಯರಲ್ಲಿರುವಂತೆ ಅನೇಕ ಜಾತಿಗಳಿವೆ. ಕರಿ ಕೆಸು, ಬಿಳಿ ಕೆಸು, ಮರಕೆಸು, ಬಣ್ಣದ ಕೆಸು ಹೀಗೆ. ಒಂದೊಂದು ಒಂದೊಂದಕ್ಕೆ ಉಪಯೋಗ ಬರುತ್ತದೆ. ಇನ್ನೊಂದಕ್ಕೆ ಬರದು ಅಂತೇನು ಪಟ್ಟು ಹಿಡಿಯದಿದ್ದರೂ ರುಚಿ  ಆ ಸ್ವಾದ ಕೊಡುವುದಿಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕೋ ಅದಕ್ಕೆ ಮಾತ್ರ ಉಪಯೋಗಿಸಬೇಕು ನೋಡಿ. ಎಲ್ಲವನ್ನೂ ಎಲ್ಲವದಕ್ಕೂ ಬಳಸಿದರೆ ಅದರ ಘನತೆ ಕಡಿಮೆಯಾಗದಿದ್ದರೂ ರುಚಿ ಮಾತ್ರ ಕಡಿಮೆಯಾಗುತ್ತದೆ. ಮಳ

ಕನ್ನಡಕ

ಇತ್ತೀಚಿಗೆ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ಎಂದು ಹೋಗಿದ್ದೆ. ಒಳಹೋದವರು ಸಮಯದ ಅರಿವಿಲ್ಲದೆ ಗಂಟೆಗಟ್ಟಲೆ ಅದೇನು ಕೇಳ್ತಾರೋ, ಕೇಳೋಕಾದರೂ ಏನಿರುತ್ತೋ ಎಂದು ಆಲೋಚಿಸುತ್ತಿರುವಾಗಲೇ ಅಪ್ಪ, ಅಮ್ಮನ ಕೈ ಹಿಡಿದೋ, ಅವರ ಹಿಂದೋ ಅಥವಾ ಎಲ್ಲವನ್ನೂ ತೋರಿಸಿ ವಿವರಿಸುತ್ತಾ ಅವರ ಮುಂದೋ ಹೋಗುತ್ತಿದ್ದ ಮಕ್ಕಳನ್ನೇ ಕಣ್ಣು ಗಮನಿಸುತ್ತಿತ್ತು.ಬಣ್ಣ ಬಣ್ಣದ ಬಟ್ಟೆ ತೊಟ್ಟ ಸಾಗುವ ಅವರು ಚಿಟ್ಟೆಯನ್ನು ನೆನಪಿಸುತಿದ್ದರು.ಅದೇನು ವರ್ಣವೈವಿಧ್ಯ, ಅದೇನು ನವಿರುತನ, ಅದ್ಯಾವ ಪರಿ ಮೋಹಕತೆ ಅಂತ ಮೈ ಮರೆಯುವಾಗಲೇ ಯಾವುದೋ ಅಂದದ ಚಿಟ್ಟೆಗೆ ದಾರಕಟ್ಟಿ ಬಿಟ್ಟಂತೆ ಕನ್ನಡಕ ಹೊತ್ತ ಮುಖಗಳು ನಡುವೆ ಕಂಡವು. ಒಬ್ಬಿಬ್ಬರಲ್ಲ ಅದೆಷ್ಟು ಪುಟಾಣಿಗಳು ಮೂಗಿನ ಮೇಲೊಂದು ಬಣ್ಣದ ಫ್ರೇಮ್ ಹೊತ್ತಿವೆ ಎಂದು ಗಮನಿಸಿದಾಗ ಎದೆಯಲ್ಲಿ ಸಣ್ಣ ಸಂಕಟ. ಇಷ್ಟು ಚಿಕ್ಕ ವಯಸ್ಸಿಗೆ ದೃಷ್ಟಿ ಮಂದವಾಗುವುದು ಹೇಗೆ ಅನ್ನೋ ಭೂತಾಕಾರದ ಪ್ರಶ್ನೆ. ಎಷ್ಟೆಷ್ಟು ಸೌಲಭ್ಯಗಳು, ವೈದ್ಯಕೀಯ ಆವಿಷ್ಕಾರಗಳು, ವೈಜ್ಞಾನಿಕ ಪ್ರಗತಿಯ ಜೊತೆಜೊತೆಗೇ ಈ ಸಮಸ್ಯೆಯೂ ಬೆಳೆದಿದ್ದು ಹೇಗೆ? ಚಿಕ್ಕವರಿದ್ದಾಗ ಇದೊಂದು ಚೂರು ಸೂಜಿಗೆ ದಾರ ಪೋಣಿಸಿ ಕೊಡು ಅನ್ನುತ್ತಿದ್ದ ಅಜ್ಜಿ ಎಳೆಬಿಸಿಲಲ್ಲಿ ಕಣ್ಣಿನಿಂದ ಮಾರು ದೂರ ಹಿಡಿದು ರಾಮಾಯಣವನ್ನೋ ಮಹಾಭಾರತವನ್ನೋ ಓದುತ್ತಿದ್ದಳು. ಸುಮ್ನೆ ನನ್ನತ್ರ ಕೆಲಸ ಮಾಡಿಸೋಕೆ ಕಣ್ಣು ಕಾಣಿಸೋಲ್ಲ ಅಂತ ನಾಟಕ ಮಾಡ್ತಿಯಾ ಅಂತ ಜಗಳವಾಡುತಿದ್ದೆ. ಬಹುತೇಕ ವಯಸ್ಸಾದವರು ಸೂ