Posts

Showing posts from October, 2019

ಸಾವರ್ಕರ್ ಹೊಸದಿಂಗಂತ 24.1019

ನವರಾತ್ರಿಯ ಸಮಯ. ಅಷ್ಟು ದಿನಗಳು ಊರಿನ ಹೊರಗೆ ಇರುತ್ತಿದ್ದ ಭವಾನಿಯ ವಿಗ್ರಹ ಅಂದು ಊರಿನ ಒಳಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಬರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಆ ಊರಿನ ಪ್ರಮುಖರ ಮನೆಯ ಮುಂದೆ ನಿಲ್ಲುತ್ತಿತ್ತು. ಅಲ್ಲಿಂದ ಏನು ಮಾಡಿದರೂ ಮುಂದಕ್ಕೆ ಸರಿಯುತ್ತಿರಲಿಲ್ಲ. ಹಾಗೆ ಬಂದ ದೇವರನ್ನು ಸ್ವಾಗತಿಸಿ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಪ್ರತಿಷ್ಟಾಪನೆ ಮಾಡಿ ಅಲ್ಲಿಂದ ಹತ್ತು ದಿನಗಳ ಕಾಲ ಪೂಜೆ ವ್ರತ ಶ್ರದ್ಧೆಯಿಂದ ನಡೆಸಲಾಗುತ್ತಿತ್ತು. ಜನರೂ ಹಾಗೆಯೇ ಬರುತ್ತಿದ್ದರು. ಬಂದ ಜನಗಳೆಲ್ಲಾ ಖಾಲಿಯಾದ ಮೇಲೆ ಆ ಮನೆಯ ಹುಡುಗನೊಬ್ಬ ಒಳಗೆ ಹೋಗಿ ದೇವಿಯ ಮುಂದೆ ಕಣ್ಮುಚ್ಚಿ ಕೂರುತ್ತಿದ್ದ. ಅಷ್ಟ ಭುಜಾಕೃತಿಯ ಆ ದೇವಿಯನ್ನು ಧ್ಯಾನಿಸುತ್ತಾ ನೋಡು ನಿಂಗೆ ರಾಕ್ಷಸರ ಸಂಹಾರ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೇನೆ , ನಂಗೆ ನಿನ್ನ ಕೈಯಲ್ಲಿರುವ ಆಯುಧಗಳನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದ.   ಎಳೆಯ ವಯಸ್ಸಿನಲ್ಲಿಯೇ ದೇಶದ ಆಗುಹೋಗುಗಳ ಬಗ್ಗೆ , ರಾಜಕೀಯದ ಬಗ್ಗೆ ತಿಳಿದಿದ್ದ ಆ ಹುಡುಗನಿಗೆ ಎಷ್ಟೋ ಸಲ ಶಾಲೆಯಲ್ಲಿ ಮೇಷ್ಟರು ಸಣ್ಣ ಬಾಯಲ್ಲಿ ದೊಡ್ಡ ತುತ್ತು ನುಂಗಬೇಡ ಸುಮ್ಮನಿರು ಎಂದು ಗದರಿಸುತ್ತಿದ್ದರು. ಹುಟ್ಟಿದ ಮನೆತನವೇ ಅಂತಹುದು. ಅವರ ಪೂರ್ವಿಕರ ಸಾಧನೆಗೆ ಪೇಶ್ವೆಗಳು ಪಲ್ಲಕ್ಕಿಯನ್ನೇ ಕೊಟ್ಟಿದ್ದರಂತೆ. ಹಾಗಾಗಿ ಆ ಹುಡುಗನಿಗೆ ಶೌರ್ಯ ಹಾಗೂ ಧೈರ್ಯ ಎರಡೂ ರಕ್ತದಲ್ಲಿಯೇ ಬಂದಿತ್ತು. ರಾತ್ರಿ ಕೂರಿಸಿಕೊಂಡು ದೊಡ್ಡಪ್ಪ ಹೇಳ

ಬಾಳೆ.

ದನಗಳನ್ನು ಮೇಯಲು ಬಿಡುತ್ತಿದ್ದ ಅಜ್ಜಿ ಅಲ್ಲೇ ಹುಲ್ಲಿನ ಹೊರೆಯ ಪಕ್ಕ ಹೊಂಬಾಳೆ ಇದೆ ನೋಡು, ಕರುವಿಗೆ ತಿನ್ನಿಸು ಎಂದಾಗ ಓಡಿ ಬಂದಿದ್ದೆ. ಹಸಿರ ಹುಲ್ಲಿನ ಪಕ್ಕದಲ್ಲಿ ಪುಟ್ಟ ಹೊಂಬಾಳೆ ಸುಮ್ಮಗೆ ಬಿದ್ದುಕೊಂಡಿತ್ತು. ಪುಟ್ಟ ಕರುವಿನ ಕೆಂಪಾದ ನಾಲಿಗೆಯ ಹಾಗಿನ ತೆಳು ನಸುಗಂಪು ಹೊಂಬಾಳೆಯನ್ನು ಇಷ್ಟಿಷ್ಟೇ ಸೀಳಿ ಅದನ್ನು ಅದರ ಬಾಯಿ ತೆರೆಸಿ ಇಟ್ಟರೆ ಅಮ್ಮ ಮೇಯುವುದಕ್ಕೆ ಹೋಗಿದ್ದನ್ನು ಮರೆತು ಕರು ತಿನ್ನುತ್ತಾ ಅಲ್ಲೇ ಮಲಗಿಕೊಂಡಿತು. ಜಾಸ್ತಿ ತಿನ್ನಿಸಬೇಡಾ ಥಂಡಿ  ಆದೀತು ಅನ್ನುತ್ತಲೇ ಒಳಬಂದವಳು ತೋಟಕ್ಕೆ ಹೋದವರು ಬರುವಾಗ ಬಾಳೆ ಎಲೆ ಕೊಯ್ದುಕೊಂಡು ಬರಲು ಹೇಳಬೇಕು ಅನ್ನುತ್ತಾ ಒಳಗೆ ಹೋದರೆ ನಿಂಗೆ ಬಾಳೆ ವಿಷ್ಯ ವಿಲ್ಲದೆ ದಿನವೇ ಹೋಗುವುದಿಲ್ಲ ನೋಡು ಎಂದು ನಕ್ಕೆ. ಈಗ ಒಮ್ಮೆ ತಿರುಗಿ ನೆನಪುಗಳ ಹರಡಿಕೊಂಡರೆ ಈ ಬಾಳೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತಲ್ಲ ಅನ್ನಿಸುತ್ತದೆ. ನಮಗೆ ಗೊತ್ತಿದ್ದ ಮಟ್ಟಿಗೆ ಬೇರೆಲ್ಲವನ್ನೂ ಬೀಜ ಹಾಕಿ ಅದು ಮೊಳಕೆ ಒಡೆದು ಗಿಡ ಮಾಡುತ್ತಿದ್ದರೆ ಈ ಬಾಳೆಗೆ ಮಾತ್ರ ಬೀಜ ಅನ್ನುವುದೇ ಇರುತ್ತಿರಲಿಲ್ಲ. ಅದು ಬೆಳೆಯುತ್ತಿದ್ದದ್ದು ಕಂದಿನಿಂದ. ಒಂದು ಕಂದು, ಒಂದು ಗಿಡ, ಒಂದು ಗೊನೆ. ಅದ್ವೈತ ತತ್ವಕ್ಕೆ ಈ ಬಾಳೆಗಿಂತ ಒಳ್ಳೆಯ ಉದಾಹರಣೆ ಬೇರೆಯಾವುದೂ ಇಲ್ಲವೇನೋ ಅನ್ನಿಸುತ್ತಿತ್ತು. ಅಡಿಕೆಯ ತೋಟ ಮಾಡುವಾಗ ಮೊದಲು ನೆಡುತ್ತಿದ್ದದ್ದೆ ಈ ಬಾಳೆಯ ಗಿಡಗಳನ್ನು. ಎಳೆಯ ಅಡಿಕೆ ಸಸಿಗಳಿಗೆ ನೆರಳು ಕೊಡುವ ಜ

ಮಲೆನಾಡಿನ ಆತಿಥ್ಯ (ವಿಕ್ರಮ ದಸರಾ ವಿಶೇಷಾಂಕ)

ರಾತ್ರಿ ಬಸ್ಸಿಗೆ ಯಾರು ಬರ್ತಾರೋ ಹೇಳೋಕೆ ಆಗೋಲ್ಲ ಒಂದರ್ಧ ಸೇರು ಅಕ್ಕಿ ಜಾಸ್ತಿನೇ ಹಾಕು ನೀರು ಮರಳ್ತಾ ಇದೆ ಇದೊಂದು ದನದ್ದು ಹಾಲು ಕರೆದು ಬರ್ತೀನಿ ಅಂತ ಅಜ್ಜಿ ಹೇಳಿದಾಗ ಹೂ ಅಂದು ಒಳಗೆ ಬಂದಿದ್ದೆ. ಒಳಗೆ ಕಟ್ಟಿಗೆ ಒಲೆಯ ಮೇಲಿಟ್ಟ ತಪ್ಪಲೆಯಲ್ಲಿ ನೀರು ಮರಳುವ ಸದ್ದು ಕೇಳಿಸುತಿತ್ತು. ಜಗುಲಿಯಲ್ಲಿ ಅದಾಗಲೇ ಮಾತಿನ ಮಳೆ ಶುರುವಾಗಿತ್ತು. ಮರುದಿನ ಅನಂತನ ವ್ರತ. ಹಾಗಾಗಿ ಹತ್ತಿರದ ಆದರೆ ದೂರದಲ್ಲಿ ಇರುವ ನೆಂಟರು ಬರುವ ನಿರೀಕ್ಷೆ. ಅಕ್ಕಿ ಅಳೆಯಲು ಹೋಗುವಾಗ ಅರ್ಧ ಸೇರು ಎಲ್ಲಿ ಸಾಕಾಗುತ್ತೆ ಮಾವಿನಕೊಪ್ಪದವರು, ತಲ್ಲೂರು ಅಂಗಡಿ ಮಾವ ಎಲ್ಲಾ ಬಂದರೆ ಅನ್ನಿಸಿ ಇನ್ನರ್ಧ ಸೇರು ಜಾಸ್ತಿ ಹಾಕಿ ತೊಳೆದು ತಪ್ಪಲೆಗೆ ಸುರಿದು ಜಗುಲಿಯಲ್ಲಿ ಅದಾಗಲೇ ರಂಗೇರಿದ್ದ ಮಾತು ಕೇಳುತ್ತಾ ಮೈ ಮರೆತವಳಿಗೆ ಅಯ್ಯೋ ಎಲ್ಲಾ ಬಿಟ್ಟು ಇವಳಿಗೆ ಕೆಲಸ ಹೇಳಿದ್ನಲ್ಲ ಮಾಡೋದೆಲ್ಲ ಅವಾಂತರವೇ ಅನ್ನುವ ಬೈಯುವ ಸದ್ದಿಗೆ ಎಚ್ಚರವಾಯ್ತು. ಎಲ್ಲರೆದುರು ಬೈಸಿಕೊಳ್ಳುವ ರಗಳೆ ಯಾಕೆ ಅಂತ ಏನೇ ಎಂದು ಪಿಸುದನಿಯಲ್ಲೇ ಕೇಳುತ್ತಾ ಒಳಗೆ ಅಡಿಯಿಟ್ಟರೆ ಎಷ್ಟು ಅಕ್ಕಿ ಹಾಕಿದ್ಯೇ ಅನ್ನುವ ಸ್ವರದ ತೀವ್ರತೆಗೆ ಬೆಚ್ಚಿ ಹೇಳಿದರೆ ಅಯ್ಯೋ ಒಂದು ಸೇರು ಅಕ್ಕಿ ಬೇಯುವ ಪಾತ್ರೆಗೆ ಒಂದೂವರೆ ಸೇರು ಹಾಕಿದರೆ ಅನ್ನ ಆಗುತ್ತೇನೆ ಕರ್ಮ ನಂದು ಅನ್ನುತ್ತಲ್ಲೇ ಎದುರಾದ ಅತ್ತೆಗೆ ಅದ್ಯಾವ ಕುಬೇರ ವಂಶದಲ್ಲಿ ಹುಟ್ಟಿತ್ತೋ ಹೋದ ಜನ್ಮದಲ್ಲಿ ಕೈ ದೊಡ್ಡ ಒಂದು ಸೇರು ಹಾಕುವಲ್ಲಿ ಎರಡು ಸೇರು ಹಾಕುತ್ತ