Posts

Showing posts from July, 2018

ದಹನ.

ಮೊನ್ನೆ ಪುಸ್ತಕ ಬಿಡುಗಡೆಯ ಸಮಯದಲ್ಲಿ ಮಾತಾಡ್ತಾ ಸೇತುರಾಂ ಸರ್ ಹೇಳ್ತಾ ಇದ್ರು. ಜನಕ್ಕೆ ಮಾತಾಡ್ತಾ ಏನಾದರೂ ವಿಷ್ಯ ಹೇಳಿದರೆ ಏನೋ ಕತೆ ಹೇಳ್ತಿಯಾ ಅಂತಾರೆ ನಂಬೋಲ್ಲ, ಅದೇ ಕತೆ ಬರೀರಿ ಇದು ನಿಮ್ಮದೇ ವಿಷಯವಾ ಕೇಳ್ತಾರೆ ಅಂತ. ನಗು ಉಕ್ಕಿ ಬಂದರೂ ಎಷ್ಟು ಸತ್ಯವಲ್ಲವಾ ಅನ್ನಿಸಿತು. ನಮಗೆ ಮಾತಲ್ಲಿ ಕತೆಯನ್ನ, ಕತೆಯಲ್ಲಿ ವೈಯುಕ್ತಿಕ ಬದುಕನ್ನ ಹುಡುಕುವ ಚಪಲ. ಅದ್ಯಾಕೆ ಅಂತ ಎಷ್ಟೋ ಸಲ ಯೋಚನೆ ಬಂದರೂ ಇನ್ನೂ ಉತ್ತರ ಸಿಗದೇ ಕಗ್ಗಂಟಾಗಿಯೇ ಉಳಿದಿದೆ. ವಾಸ್ತವದಲ್ಲಿ ಭ್ರಮೆಯನ್ನ, ಭ್ರಮೆಯಲ್ಲಿ ವಾಸ್ತವವನ್ನು ಹುಡುಕುವುದೇ ನಮಗೆ ಅಭ್ಯಾಸವಾಗಿದೆಯಾ... ಹಾಗಾಗಿಯೇ ನಮಗೆ ವಾಸ್ತವಕ್ಕಿಂತ ಕಲ್ಪನೆಯೇ ಪ್ರಿಯವಾಗುತ್ತದಾ... ಅಥವಾ ನಮಗೆ ವಾಸ್ತವದ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲವಾ ಹಾಗಾಗಿಯೇ ಕಲ್ಪನೆ ಪ್ರಿಯವಾಗುತ್ತದಾ... ಉಹೂ ಉತ್ತರ ಹುಡುಕಲು ಸಮಯವಿಲ್ಲ ಅನ್ನುವ ಸಮರ್ಥನೆ ಅಂತೂ ಎದುರಾಗಿ ಅಲ್ಲಿಂದ ಕರೆದೊಯ್ಯುತ್ತದೆ. ಸಮಾಜ ಸರಿಯಿಲ್ಲ, ಕಾಲ ಕೆಟ್ಟಿದೆ ಇದು ನಾವು ಸಾಮಾನ್ಯವಾಗಿ ಕೇಳುವ ಬಳಸುವ ಮಾತು. ಇದು ನಿಜವಾ ಕೆಟ್ಟಿದ್ದು ಸಮಾಜವಾ.. ಹಾಗಾದರೆ ಸಮಾಜ ಅಂದರೆ ಏನು? ಅದು ನಿರ್ಮಾಣವಾಗಿದ್ದು ಹೇಗೆ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ನಮ್ಮ ಬುಡಕ್ಕೇ ಬರುತ್ತದೆ. ನಾವು ಸಹಜವಾಗಿ  ಜವಾಬ್ದಾರಿ, ಬಾಧ್ಯತೆಗಳಿಂದ ಹೊರಗೆ ಹೋಗಲು ಕಳಚಿಕೊಳ್ಳಲು ಸದಾ ಪ್ರಯತ್ನ ಪಡುತ್ತೇವೆ. ಹಾಗಾಗಿಯೇ ನಮಗೆ ಸ್ವಂತದವರು ದೂರ ಹಾಗೂ ದೂರದವರು ಹತ್ತಿರ ಅನ

ಕಳಲೆ

ಮಳೆಗಾಲ ಅಡಿಯಿಡುವ ಹೊತ್ತಿಗೆ ಪ್ರಕೃತಿಯಲ್ಲೂ ನವಸಂಚಾರ. ಹೊಸ ಹುಟ್ಟು, ಹೊಸ ಚಿಗುರು, ಹೊಸತನ. ಹೀಗೆ ಇಳೆ ನೆನೆದು ಹದವಾಗಿ ಹೊಸತನ ಹೊಮ್ಮುವ ವೇಳೆಗೆ ಬಿದಿರು ಮೆಳೆಯಲ್ಲೂ ತೊಟ್ಟಿಲು ತೂಗುವ ಸಂಭ್ರಮ. ಬಿದಿರುಮೆಳೆಯ ಸಮೀಪ ಸುಳಿಯುವವರು ಕಡಿಮೆಯೇ.. ಎಷ್ಟು ಹರಡಿಕೊಂಡರೇನು, ಎಲೆ ಉದುರಿಸಿದರೇನು, ಸೊಂಪಾಗಿ ಹಸಿರು ಚಿಮ್ಮಿದರೇನು ಮುಳ್ಳುಗಳಿವೆಯಲ್ಲ. ಹಾಗಾಗಿ ಒಂದು ಅಂತರವಿದ್ದೇ ಇರುತ್ತದೆ. ಅಂತರವಿರುವ ಯಾವುದೇ ಆದರೂ ಚೆಂದವಾಗಿರುತ್ತದೆ. ತನ್ನದೇ ಎಲೆಹಾಸಿನ ಮೆತ್ತನೆಯ ಜಾಗದಲ್ಲಿ ಮೊಳಕೆಯೊಡೆಯುವ ಬಿದಿರಿನ ಚಿಗುರಿಗೆ ಕಳಲೆ ಎಂದು ಹೆಸರು. ಮೆಳೆಗಳ ನಡುವೆ ಕಂದುಬಣ್ಣದ ಬಟ್ಟೆಯುಟ್ಟು ಎದ್ದು ನಿಲ್ಲುವ ಇದನ್ನ ಕಂಡರೆ ಮನುಷ್ಯರಿಗೆ ಎಲ್ಲಿಲ್ಲದ ಪ್ರೀತಿ. ಅಲ್ಲಿಯವರೆಗೂ ದೂರದಿಂದ ನೋಡಿ ಸಾಗುತ್ತಿದ್ದ ಬಿದಿರು ಈಗ ಮಾತ್ರ ಕೈ ಬೀಸಿ ಕರೆಯುವ ಹಾಗಾಗುತ್ತದೆ. ಸುಳಿಯುವ ಗಾಳಿಗೆ ತುಯ್ಯುವ ರೆಂಬೆ ಕೊಂಬೆಗಳಲ್ಲೂ ಕೊಳಲಿನ ನಾದ ಕೇಳಿದಂತಾಗುತ್ತದೆ. ಕೊಳಲಿನ ನಾದಕ್ಕೆ ಮರುಳಾದ ಗೋಪಿಕೆಯರು ಆ ಕಾಲದಲ್ಲಿ ಮನೆಯಿಂದ ಎದ್ದು ಹೊರಟರೆ ಕಳಲೆಯ ಮೋಹಕ್ಕೆ ಬಿದ್ದ ಗಂಡಸರು ಕೈಯಲ್ಲಿ ಕತ್ತಿ ಹಿಡಿದು ಹೊರಡುತ್ತಾರೆ. ಎಲ್ಲಾ ಬಿದಿರಿಗೂ ಕೊಳಲಾಗುವ ಪುಣ್ಯ ಎಲ್ಲಿದೆ ಹೇಳಿ... ಆ ಕೃಷ್ಣನೇ ಕೊಳಲು ಕೆಳಗಿಟ್ಟ ಮೇಲೆ ಈಗಿನ ಕೃಷ್ಣರನ್ನು ನಂಬುವುದಾದರೂ ಹೇಗೆ ಹೇಳಿ. ಬಿದಿರು ಒಂದು ರೀತಿಯಲ್ಲಿ ಕಲ್ಪವೃಕ್ಷವೇ. ಚಿಗುರು ತರಕಾರಿಯಂತೆ, ಬೆಳೆದು ನಿಂತರೆ ಮನೆಯನ್ನು ಕಟ್ಟಲು

ಜಿಗಣೆ

ಮೋಡ ಗರ್ಭ ಕಟ್ಟುತಿದ್ದ ಹಾಗೆ ಖುಷಿ ಪಡೋದು ಕೇವಲ ಇಳೆ ಮಾತ್ರವಲ್ಲ ಅವಳ ಒಡಲ ಮಕ್ಕಳೂ ಕೂಡಾ. ಇನ್ನೇನು ಮಳೆ ಸುರಿಯಬಹುದು ಎನ್ನುವ ಸೂಚನೆ ಸಿಕ್ಕುತ್ತಿದ್ದಂತೆ ಅಲ್ಲಿಯವರೆಗೂ ಸದ್ದಿಲ್ಲದೇ ನಿದ್ದೆ ಹೋಗುತಿದ್ದ ಇಂಬಳಗಳು ಮೆಲ್ಲಗೆ ಮೈ ಮುರಿದು ಏಳುವ ಹೊತ್ತು. ಬೇಸಿಗೆಯಲ್ಲಿ ಉದುರಿದ ಎಲೆಗಳನ್ನೇ ಹೊದ್ದು ಮಲಗಿರುವ ಅವು ಯಾರ ಕಣ್ಣಿಗೂ ಕಾಣದಂತೆ ಅಡಗಿರುತ್ತವೆ. ಒಂದು ಮಳೆ ಬಂದ ಕೂಡಲೇ ಅಲ್ಲೇ ಸಣ್ಣಗೆ ಹೊರಳಿ, ಮೈ ಕೊಡವಿಕೊಂಡು ತಯಾರಾಗುತ್ತವೆ. ಮೈಯೆಲ್ಲಾ ಕಣ್ಣಾಗಿ ಬೇಟೆಗಾಗಿ ಕಾಯುತ್ತವೆ. ಕೆರೆ, ಕಾಡು, ತೋಟ ಹೀಗೆ ಜೌಗು ಪ್ರದೇಶದಲ್ಲೇ ಇವುಗಳ ವಾಸಸ್ಥಾನ. ಎಲೆಗಳೆಲ್ಲಾ ಉದುರಿ ಹಾಸಿಗೆಯಾಗಿ, ಮೃದುವಾದ ತುಪ್ಪಳವಾಗಿ, ಅವು ಕೊಳೆಯುವ ಪ್ರಕ್ರಿಯೆಯಲ್ಲಿ ಬೆಚ್ಚಗಾಗಿ ಒಳಗೊಂದು ತೇವ ಆವರಿಸಿಕೊಳ್ಳುವ ಜಾಗದಲ್ಲಿ ಇವು ಅಡಗಿರುತ್ತವೆ. ತೇವವಿಲ್ಲದ  ಬರಡು ಭೂಮಿ ಯಾರಿಗೆ ತಾನೇ ಪ್ರಿಯ ಹೇಳಿ?. ಹಸರು ಕಂಡ ಕಡೆಗೆ ದನ, ಹಣ್ಣು ಬಿಟ್ಟ ಮರಕ್ಕೆ ಕಲ್ಲು ಜಾಸ್ತಿ ಅನ್ನೋ ಹಾಗೆ ಸೊಂಪಾದ ಜಾಗಕ್ಕೆ ಬರುವವರು ಜಾಸ್ತಿ. ಬರುವವರು ಇದ್ದಾಗ ಮಾತ್ರ ಪಡೆಯುವವರಿಗೆ ಅವಕಾಶ. ಜಗತ್ತಿನಲ್ಲಿ ಸುಲಭವಾಗಿ ದಕ್ಕುವ ಕಡೆ ಜನಸಂದಣಿ ಅಧಿಕ. ಇದನ್ನ ಜಿಗಣೆಗಳಷ್ಟು ಚೆಂದವಾಗಿ ಅರ್ಥಮಾಡಿಕೊಂಡವರು ಬೇರೆ ಯಾರೂ ಇಲ್ಲವೇನೋ ಅನ್ನಿಸುತ್ತದೆ ಒಮ್ಮೊಮ್ಮೆ. ದೇಹದ ತೂಕ ಶೇ 90 ಭಾಗ ಇಳಿದರೂ ಬದುಕಿರುವಷ್ಟು ದೃಢತೆ ಇವಕ್ಕೆ. ಬಿಸಿಲಿಗೆ ಬಾಡಿ ಕೆಳಗೆ ಬಿದ್ದ ಕಡ್ಡಿಯ ಹಾಗೆ ಒಣಗಿ ಕೃಶ

ಕೇಪಿನ ಡಬ್ಬಿ.

ಕುಗ್ರಾಮವೆನ್ನಬಹುದಾದ ಎಲ್ಲಾ ಲಕ್ಷಣಗಳೂ ಇದ್ದ ಪುಟ್ಟ ಊರದು. ಎರಡು ಕೈ ಬೆರಳುಗಳ ಸಹಾಯದಿಂದ ಎಣಿಸಬಹುದಾದಷ್ಟು ಮನೆಗಳು. ಅವುಗಳ ಎದುರಿಗೆ ಹರಡಿದ ಗದ್ದೆಯ ಕೋಗು, ಅಂಚಿನ ಬದಿಯಲ್ಲಿ ವಯ್ಯಾರವಾಗಿ ಹರಿಯುತಿದ್ದ ಹೆಸರಿಲ್ಲದ ಹಳ್ಳ. ಬೇಸಿಗೆಯ ಧಗೆಗೆ ತಣ್ಣಗಿದ್ದರೂ ಮಳೆ ಬಂದ ಕೂಡಲೇ ಅಬ್ಬರಿಸುತಿತ್ತು. ಅಲ್ಲಿಯವರೆಗೂ ಅದರ ಎದೆಯ ಮೇಲೆ ಪಾದ ತೊಯ್ಯಿಸಿಕೊಂಡು ನಡೆಯುತಿದ್ದ ಎಲ್ಲರ ಮೇಲೂ ಮುನಿಸಿಕೊಂಡಿತೇನೋ ಎಂಬಂತೆ ಉಕ್ಕಿ ಹರಿಯುತಿತ್ತು. ಯಾರಿಗೂ ಆಚೆ ದಾಟಲಾಗದಂತೆ ನಿರ್ಬಂಧ ಹಾಕುತಿತ್ತು. ಒಂದು ಬೆಂಕಿ ಪೊಟ್ಟಣ ಬೇಕಾದರೂ ಐದು ಮೈಲಿ ಆಚೆ ಇರುವ ಪೇಟೆಗೆ ಒಂದು ಹಳ್ಳ ದಾಟಿ, ಕಾಡ ನಡುವಿನ ಮಣ್ಣ ಹಾದಿಯಲ್ಲಿ ನಡೆದು ಅದರ ಸೆರಗಿನಂಚಿನ ಬಯಲು ದಾಟಬೇಕಿತ್ತು.  ಹಾಗಾಗಿ ಯಾರಾದರೂ ಊರಿಗೆ ಬಂದರೆ ಸಂಭ್ರಮ. ಬರಲಿ ಎಂದು ಕಾಯುತಿದ್ದ ದಿನಗಳವು. ಅದರಲ್ಲೂ ದೀಪಾವಳಿಯ ಸಮಯದಲ್ಲಿ ಮಾಸ್ತಿಕಟ್ಟೆಯಿಂದ ಬರುತಿದ್ದ ಕಿಟ್ಟಣ್ಣ ಮಾವ ನಮ್ಮ ಪಾಲಿಗೆ ದೇವರ ಸ್ವರೂಪ. ಅವನು ತರುತಿದ್ದ ಸುರ್ ಸುರ್ ಬತ್ತಿ, ಹನುಮಂತನ ಬಾಲ, ಸಣ್ಣ ಪಟಾಕಿ ಹಾಗೂ ಕೇಪಿನ ಡಬ್ಬಿಗಳು ನಮ್ಮ ಪಾಲಿನ ವರಗಳು. ಅವನನ್ನು ಗೇಟಿನ ಒಳಗೂ ಬರಲು ಬಿಡದಂತೆ ಅಲ್ಲೇ ಕಾದು ಅವನ ಕೈಯಿಂದ ತೆಗೆದುಕೊಂಡು ಎನ್ನುವುದಕ್ಕಿಂತ ಕಸಿದುಕೊಂಡು ಅವನಿಗಿಂತ ಮೊದಲು ಓಡಿ ಬರುತಿದ್ದೆವು. ಅಂಗಳದಲ್ಲಿ ಬಿದ್ದುಕೊಂಡಿರುತಿದ್ದ ಬಿಸಿಲಿಗೆ ಹರಡಿ ಮತ್ತೆ ಮತ್ತೆ ಲೆಕ್ಕಮಾಡಿದರೂ ದಣಿವು ಎಂಬುದು ಹತ್ತಿರ ಸುಳಿಯುತ್ತಿರಲಿಲ್

ಮಾತಂಗ ಪರ್ವತ

ಬೆಳಿಗ್ಗೆ ಬೇಗ ಬನ್ನಿ ಮೇಡಂ ಮಾತಂಗ ಪರ್ವತ ಹತ್ತೋಣ. ಬಿಸಿಲು ಏರಿದರೆ ಆಮೇಲೆ ಸುಸ್ತಾಗುತ್ತೆ ಎಂದ ಗೈಡ್ ಮಾತು ಕೇಳಿ ದೃಷ್ಟಿ ಅತ್ತ ಹರಿಸಿದರೆ ಅದು ಬೆಟ್ಟವೋ ಇಲ್ಲಾ ಕಲ್ಲಿನ ಮೇಲೆ ಕಲ್ಲು ಪೇರಿಸಿಟ್ಟ ಆಕೃತಿಯೋ ಅನ್ನಿಸಿತ್ತು. ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತಬಹುದಾ ಅಂತ ಕೊಂಚ ಅನುಮಾನದಲ್ಲೇ ಪ್ರಶ್ನಿಸಿದ್ದೆ. ಅದಕ್ಕೆ ಎರಡು ದಾರಿ ಇದೆ ಒಂದು ಕಡಿದಾದ ಬೆಟ್ಟ ಹತ್ತಿಕೊಂಡು ಹೋಗುವುದು ಸ್ವಲ್ಪ ಬೇಗ ಹೋಗಬಹುದು ಆದ್ರೆ ಕಷ್ಟ, ಇನ್ನೊಂದು ಮೆಟ್ಟಿಲುಗಳಿರುವ ದಾರಿ ಅದೂ ಸಹ ಸುಲಭದ್ದೇನಲ್ಲ, ನೀವು ಯಾವುದು ಹೇಳ್ತಿರೋ ಅದರಲ್ಲಿ ಹೋಗೋಣ ಎಂದು ನಮ್ಮ ಮುಖವನ್ನೇ ದಿಟ್ಟಿಸಿ ಉತ್ತರಕ್ಕಾಗಿ ಕಾಯುತ್ತಿದ್ದರು. ಏರುವುದು ಯಾವತ್ತು ಸುಲಭವಿತ್ತು ಹೇಳಿ ಅನ್ನೋ ಮಾತು  ಗಂಟಲಲ್ಲೇ ಉಳಿಯಿತು. ಹತ್ತೋದು ಪ್ರಯಾಸವಾದರೂ ಹಾಗೂ ಹೀಗೂ ಹತ್ತಬಹ್ದು ಆದರೆ ಇಳಿಯೋದೇ ಕಷ್ಟ ಅಮ್ಮಾ ಹಾಗಾಗಿ ಮೆಟ್ಟಿಲಿಂದ ಇಳಿಯೋದು ಬೇಡಾ, ಸುಲಭವಾಗಿ ಕಾಲು ಜಾರುತ್ತೆ, ಬೀಳೋ ಚಾನ್ಸ್ ಜಾಸ್ತಿ ಅಂದ್ಲು ಮಗಳು. ಬೆಟ್ಟ ಹತ್ತುವುದು, ಬದುಕು ಸಾಗುವುದು ಎರಡಕ್ಕೂ ವ್ಯತ್ಯಾಸ ಬಹಳ ಏನಿಲ್ಲ,  ಹತ್ತುವುದು ಪ್ರಯಾಸ ಆದರೆ ಒಂದು ಕ್ಷಣ ಮೈ ಮರೆತರೂ, ಅಹಂನ ಪೊರೆ ಕವಿದರೂ ಕಣ್ಣು ಮಂಜಾಗಿ ಕಾಲು ಜಾರುತ್ತದೆ. ಪ್ರಪಾತ ತಲುಪುವುದು ಒಂದು ಗಳಿಗೆಯ ಕೆಲಸ ಅಷ್ಟೇ. ಭೇಷ್ ಮಗಳೇ ಇಷ್ಟು ತಿಳುವಳಿಕೆ ಸಾಕು ಹೆಜ್ಜೆ ಜಾರದಿರಲು ಅಂತ ಮನಸ್ಸಿನಲ್ಲೇ ಅಂದುಕೊಂಡು ಮುಂದಕ್ಕೆ ಹೋದೆ. ಮಾತಂಗ ಮುನಿ
ನಾನು ದೊಡ್ಡವಳು ಆದ್ಮೇಲೆ ಅದಾಗ್ತಿನಿ ಇದಾಗ್ತಿನಿ ಅನ್ನೋದು  ಆಗಾಗ ಬದಲಾಗುವ ಮಗಳ ಕನಸು ಮೊದಮೊದಲಿಗೆ ಶಾಕ್, ಬೇಜಾರು, ಹೆದರಿಕೆ ಎಲ್ಲಾ ಆದ್ರೂ ಈಗೀಗ ಅಭ್ಯಾಸವಾಗಿ ಹೋಗಿದೆ. ಇದ್ದಕ್ಕಿದ್ದಂತೆ ಒಂದು ದಿನ ಶಾಲೆಯಿಂದ ಬರ್ತಾ ಇದ್ದ ಹಾಗೆ ನಾನು ಬಿಸಿನೆಸ್ವಿಮೆನ್ ಆಗ್ತೀನಿ. ಲಂಡನ್ ಗೆ ಹೋಗಿ ಅವರು ಹೇಗೆ ನಮ್ಮನ್ನು ಆಳಿದ್ರೋ ಹಾಗೆ ನಾನು ಅವರನ್ನ ಆಳ್ತಿನಿ ಅಂದಾಗ ಮೊದ್ಲು ಪಾಸ್ಪೋರ್ಟ್ ಮಾಡಿಸ್ಕೋ ಅಂತ ಸಲಹೆ ಕೊಟ್ಟು ಮರೆತೂ ಬಿಟ್ಟಿದ್ದೆ. ಮೊನ್ನೆ ನಾನು judge ಆಗ್ತೀನಿ ಅಂದವಳನ್ನೇ ನೋಡಿದೆ. ತಪ್ಪು ಮಾಡಿದವರಿಗೆಲ್ಲಾ ಪಟಾಪಟ್ ಅಂತ ಶಿಕ್ಷೆ ಕೊಡ್ತೀನಿ, ಲೇಟ್ ಮಾಡೋಲ್ಲ. ಸುಮ್ನೆ ಎಷ್ಟೊಂದು ಟೈಮ್ ವೇಸ್ಟ್ ಮಾಡ್ತಾರೆ, ಜನಕ್ಕೆ ಒಂಚೂರು ಭಯನೆ ಇಲ್ಲ ಅಂದ್ಲು. ಬೇಡಾ ಮಗಳೇ judge ಆದ್ರೆ ಪರ್ಸನಲ್ ಲೈಫ್ ಇರೋಲ್ಲ ಕಣೇ, ಹಗಲು ರಾತ್ರಿ ಅನ್ನದೆ ಎದ್ದು ಕೂತು ಕತೆ ಕೇಳಬೇಕು, ಹೇಗೆ ವಾದ ಮಾಡ್ತಾರೋ ಅದನ್ನು ನೋಡಿ ತೀರ್ಪು ಬರೀಬೇಕು, ಎಲ್ಲೂ ಆರಾಮಾಗಿ ಹೋಗೋಕೆ ಆಗೋಲ್ಲ ಬರೋಕೆ ಆಗೋಲ್ಲ ಅದಕ್ಕೆ ನಿಮ್ಮಪ್ಪನಿಗೂ ಎಕ್ಸಾಮ್ ಬರೆಯೋಕೆ ಬಿಡ್ಲಿಲ್ಲ, ಇದೊಂದು ಮಾತ್ರ ಬೇಡಾ ಕಣೆ ಅಂದೇ.. ಮುಖ ಸಣ್ಣ ಮಾಡಿಕೊಂಡು ಸುಮ್ಮನಾಗಿದ್ದ ಮಗಳ ಮುಖ ನೋಡಿ ಬೇಜಾರಾದರೂ ಆಮೇಲೆ ಮರೆತೂ ಹೋಗಿತ್ತು. ನಿನ್ನೆ ಬಂದವಳು ಅಮ್ಮಾ ನಾನು IAS ಮಾಡ್ತೀನಿ ಅಂದ್ಲು. ಅರೆ ಇದರ ಬಗ್ಗೆ ಇವಳಿಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯ ಆದರೂ ನಾಳೆ ಇನ್ನೇನಾದರೂ ಆಗಬಹುದು ಬಿಡು ಅಂತ ತೀ