Posts

Showing posts from June, 2019

ನದಿ ಉಳಿಸಿ (ಹೊಸದಿಗಂತ) 26.06.19

ಮೊನ್ನೆ ಮದುವೆಗೆ ಬಂದಿದ್ದ ಶೇ 80 ಪ್ರತಿಶತ ಜನರ ಮಾತು ಶುರುವಾಗುತ್ತಿದ್ದದ್ದೆ ಹೆಂಗೆ ನಿಮ್ಮ ಬಾವಿಲಿ ನೀರು ಉಂಟಾ ಸಾಕಾಗುತ್ತಾ ಅಂತಲೇ. ಮದುವೆಗೆ ಹೊರಡುವ ಮುನ್ನ ಇದೇ ಪ್ರಶ್ನೆಯನ್ನು ನಾನೂ ಕೇಳಿಯೇ ಹೊರಟಿದ್ದೆ. ಕೇಳಿದ ಮೇಲೆ ಅಲ್ಲಿಂದ ಪರವಾಗಿಲ್ಲ ಒಂದು ರಿಂಗ್ ನೀರು ಇದೆ ಸಾಕಾಗುತ್ತೆ ಅನ್ನುವ ಉತ್ತರ ಬಂದ ಮೇಲೆ ಫೋನ್ ಕೆಳಗಿಟ್ಟಮೇಲೆ ಫೋನ್ ನಂತೆ ಮನಸ್ಸೂ ಸ್ತಬ್ಧವಾಗಿತ್ತು. ಮಳೆಗೆ, ನೀರಿಗೆ ಹೆಸರುವಾಸಿಯಾಗಿದ್ದ, ನೀರಿನ ಬರ ಅಂದರೇನು ಅಂತಲೂ ಗೊತ್ತಿಲ್ಲದ ಮಲೆನಾಡೆ೦ಬ ಮಲೆನಾಡು ಈಗ ಅಕ್ಷರಶಃ ಬರನಾಡಾಗುವತ್ತ ಸಾಗಿದೆ. ಪ್ರತಿ ಬೇಸಿಗೆಯಲ್ಲೂ ಇದು ಹೆಚ್ಚುತ್ತಾ ಕುಡಿಯೋಕೆ ನೀರು ಸಿಕ್ಕರೆ ಸಾಕು ಅನ್ನುವ ಹಾಗಾಗಿದೆ. ಕೇವಲ ಪತ್ರಿಕೆಗಳಲ್ಲಿ, ಟಿ.ವಿ ಯಲ್ಲಿ ಬಯಲುಸೀಮೆಯ ಜನರ ಪರದಾಟ ನೋಡಿದ್ದ ಮಲೆನಾಡಿಗರು ಈಗ ಸ್ವತಃ ತಾವೇ ಅನುಭವಿಸುತ್ತಿದ್ದಾರೆ. ಹಾಗೇಕಾಯ್ತು ಅನ್ನೋದಕ್ಕೆ ಸಾವಿರ ಕಾರಣಗಳು ಕಣ್ಣೆದೆರು ಇದ್ದರೂ ಎಚ್ಚೆತ್ತುಕೊಳ್ಳದ ಬುದ್ಧಿವಂತರು ನಾವು ಅದಕ್ಕೆ ಸರಿಯಾಗಿ ನಮ್ಮನ್ನು ಆಳುವವರು. ಬಾವಿ ತೆಗೆದರೆ 30 ರಿಂದ 50 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ ಬೋರ್ ನ ಕೊಳವೆಗೆ 350 ರಿಂದ ಮುಂದಕ್ಕೆ ಎಷ್ಟು ಬೇಕಾದರೂ ಹೋಗಬಹುದಾದ ಸಾಧ್ಯತೆ ಇದೆ. ಹತ್ತು ಕಿ.ಮಿ ಸುತ್ತಳತೆಯಲ್ಲಿ ಇಂದು 400 ರಿಂದ 500 ಕ್ಕೂ ಹೆಚ್ಚು ಬೋರ್ವೆಲ್ ಗಳು ಆಗಿವೆ. ನಿಮ್ಮತ್ರ ಮೊಬೈಲ್ ಇದ್ಯಾ ಎಂದು ಕೇಳುವಷ್ಟೇ ಸಹಜವಾಗಿ ಬೋರ್ವೆಲ್ ತೆಗೆಸಿದ್ರಾ ಎಂದು ಕ

ರಂಗಣ್ಣನ ಕನಸಿನ ದಿನಗಳು

ಇನ್ಸ್ಪೆಕ್ಟೆರ್ ಬಂದಿದ್ದಾರೆ ಅನ್ನುವ ಸುದ್ಧಿ ಕೇಳಿದ ಕೂಡಲೇ ಇಡೀ ಶಾಲೆಗೇ ಶಾಲೆಯೇ ಶಿಸ್ತುಬದ್ಧ ಸಿಪಾಯಿಯ ಹಾಗಾಗುತಿತ್ತು. ಸದ್ದೆಲ್ಲ ಅಡಗಿ ಮೌನ ರಾಜ್ಯವಾಳುತಿತ್ತು. ಬೇರೆಯ ದಿನಗಳಲ್ಲಿ ಆರಾಮಾಗಿ ಇರುತ್ತಿದ್ದ ಟೀಚರ್ ಗಳು ಅವತ್ತು ಅದೇನೋ ವಿಚಿತ್ರ ಗಂಭೀರತೆಯನ್ನು ಆವಾಹಿಸಿಕೊಂಡಿರುತ್ತಿದ್ದರಿಂದ ಇಡೀ ವಾತಾವರಣವೇ ವಿಭಿನ್ನ ಅನ್ನಿಸುವುದರ ಜೊತೆಗೆ ಒಂದು ರೀತಿಯ ಅಸಹನೀಯ ಅನ್ನಿಸುತ್ತಿತ್ತು ಕೂಡಾ. ಎಲ್ಲೋ ಅಪರೂಪಕ್ಕೆ ಬಂದ್ದಿದ್ದ ಇನ್ಸ್ಪೆಕ್ಟೆರ್ ತಮಾಷೆಯ ಸ್ವಭಾವದವರಾದರೆ ಸ್ವಲ್ಪ ನಗು ಹುಟ್ಟುತ್ತಿತ್ತಾದರೂ ಮೇಷ್ಟ್ರರ ನೋಟಕ್ಕೆ ಅದರ ಆಯಸ್ಸು ಅಲ್ಪವೇ ಆಗಿ ಮತ್ತೆ ಬಲವಂತದ  ಮೌನವೇ ತಾಂಡವವಾಡುತಿತ್ತು. ಮತ್ತೆ ಇದು ನೆನಪಾಗಿ ಮುಖದಲ್ಲಿ ನಗು ಮೂಡಿದ್ದು ಎಂ ಆರ್ ಶ್ರೀನಿವಾಸ ಮೂರ್ತಿ ಅವರ "ರಂಗಣ್ಣನ ಕನಸಿನ ದಿನಗಳು" ಓದುವಾಗಲೇ. ಸ್ವಾತಂತ್ರ್ಯ ಕಾಲದ ದಿನಗಳ ಶಾಲೆಯ ರೀತಿ ನೀತಿ, ಆಗಿನ ಮೇಷ್ಟ್ರರ ಕಷ್ಟಗಳು, ಅವರ ಪುಟ್ಟ ಸಂಬಳ, ಹಳ್ಳಿಯ ಪರಿಸ್ಥಿತಿ ಆಗತಾನೆ ರಾಜಕೀಯ ಗರಿಗೆದರುವ ಹೊತ್ತಿನ ಮುಖಂಡರ ಪ್ರಭಾವ, ಬಡತನ, ಶಾಲೆಗೇ ಮಕ್ಕಳನ್ನು ಸೇರಿಸುವಲ್ಲಿಯ ಕಷ್ಟ, ಅವರಿಗೆ ಕಲಿಸುವಾಗಿನ ಪಡಿಪಾಟಲು, ಕಷ್ಟ ಕಾರ್ಪಣ್ಯ, ಮುಗ್ಧತೆ, ಕುಟಿಲತೆ, ಜಾತಿಯ ಪ್ರಭಾವ, ಹಳ್ಳಿಗರ ಸಂಪ್ರದಾಯ ಇವೆಲ್ಲಗಳನ್ನು ತೂಗಿಸಿಕೊಂಡು, ಹೊಂದಿಕೊಂಡು, ಇದ್ದ ಅವ್ಯವಸ್ಥೆಗಳ ನಡುವೆ ಶಾಲೆಗಳು ನಡೆಯುತ್ತಿದ ರೀತಿ ಹೀಗೂ ಇತ್ತಾ ಅನ್ನಿಸುವುದರ ಜೊತೆ ಜೊತೆಗೆ

ಹಿಂದಿ ಹೇರಿಕೆ (ಹೊಸದಿಗಂತ)

ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅನ್ನೋದನ್ನ ಹೇಳಲು, ಕನ್ನಡ ಉಳಿಸಿ ಎಂದು ವಿನಂತಿ ಮಾಡಿಕೊಳ್ಳಲು ಕಂಕಣ ಎನ್ನುವ ಗುಂಪು ಶುರುವಾಗಿತ್ತು. ಅದು ಮಲೆನಾಡಿನ ಜನರೇ ಹೆಚ್ಚಿದ್ದ, ಮಲೆನಾಡಿನ ಕವಿರಾಜ್ ಶುರು ಮಾಡಿದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೆ. ಅದರ ಮೊದಲ ಅಭಿಯಾನದಲ್ಲಿ ಪಾಲ್ಗೊಳ್ಳಲು ಜಯನಗರಕ್ಕೆ ಹೋಗಿದ್ದೆ. ಕಂಕಣದ ಅಭಿಯಾನವೆಂದರೆ ಅಲ್ಲಿ ಭಾಷಣವಿಲ್ಲ, ಅನಗತ್ಯ ಮಾತಿಲ್ಲ. ಕನ್ನಡದ ಹಿರಿಮೆಯ ಬಗ್ಗೆ, ಅದನ್ನು ಮಾತಾಡುವ ಬಗ್ಗೆ ಬರೆದ ಫಲಕವನ್ನು ಹಿಡಿದುಕೊಂಡು ಜನನಿಬಿಡ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ನಿಲ್ಲುವುದು ಹಾಗೂ ಅದರ ಬಗ್ಗೆ ಕುತೂಹಲ ಇದ್ದವರಿಗೆ ಮಾಹಿತಿ ಬೇಕಾದವರಿಗೆ ಅದನ್ನು ಕೇಳಿದಾಗ ಹೇಳುವುದು ಅಷ್ಟೇ. ಯಾವ ಬಲವಂತವಾಗಲಿ, ಹೇರಿಕೆಯಾಗಲಿ ಇಲ್ಲದೆ ಕೇವಲ ನಮ್ಮ ಭಾಷೆಯ ಬಗ್ಗೆ ಮೌನವಾಗಿಯೇ ಅಭಿಮಾನ ಮೂಡಿಸುವ, ಅದನ್ನು ಉಳಿಸುವ ಅನಿವಾರ್ಯತೆ ಅರ್ಥವಾಗಲಿ ಅನ್ನೋ ಉದ್ದೇಶ ಅಷ್ಟೇ.. ಹೀಗೆ ಅಭಿಯಾನದಲ್ಲಿ ಪಾಲ್ಗೊಂಡಾಗ ಜನ ಸುಮ್ಮನೆ ನೋಡಿ ಹೋಗುವುದಿಲ್ಲ. ನಾನಾತರಹದ ಜನರಿದ್ದ ಹಾಗೆ ನಾನಾ ತರಹದ ಮಾತುಗಳೂ ಕೇಳಿ ಬರುತ್ತವೆ. ಕುಹಕದ ನಗೆ ನಕ್ಕು ಸಾಗುವವರು, ಬಸ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳಿ ಅಂತ ಕೇಳಿ ನಿಮಗೆ ಕನ್ನಡ ಬರೋಲ್ಲ ಇನ್ನು ಕನ್ನಡ ಮಾತಾಡಬೇಕಂತೆ ಎಂದು ವ್ಯಂಗ್ಯವಾಡುವವರು, ಮಾಡೋಕೆ ಕೆಲಸ ಇಲ್ಲ ಅದಕ್ಕೆ ಇಲ್ಲಿ ಬಂದು ಹೀಗೆ ನಿಲ್ತಾರೆ ಎಂದು ಕುಹಕ ಮಾಡುವವರು, ಯಾರೋ

ಹಕ್ಕೆಮನೆ

ಸಂಕ್ರಾಂತಿ ಮುಗಿಯುತಿದ್ದ ಹಾಗೆ ಒಂದಿಬ್ಬರು ಕೈಯಲ್ಲೊಂದು ಕತ್ತಿ,ಹೆಗಲ ಮೇಲೆ ಕಂಬ ಹೊತ್ತು ನಡೆದರೂ ಎಂದರೆ ಗದ್ದೆಯಲ್ಲೊಂದು ಹಕ್ಕೆಮನೆ ಶುರುವಾಗುತ್ತೆ ಅನ್ನುವ ಮುನ್ಸೂಚನೆ ಸಿಗುತಿತ್ತು. ಗದ್ದೆ ಕೊಯ್ಲು ಮುಗಿದು ನದಿಯ ಹರಿವಿನಂತೆ ತಿರು ತಿರುಗಿ ಹಬ್ಬಿರುವ ಗದ್ದೆಯ ಕೋಡಿ ನೋಡಿದಷ್ಟೂ ದೂರಕ್ಕೆ ಕಾಣಿಸುತ್ತಾ ಬಯಲು ಸೃಷ್ಟಿಸಿಬಿಡುತಿತ್ತು. ನದಿ ಮೂಲದಂತೆ ಅದರ ಮೂಲವೂ ಕಾಣಿಸದಿದ್ದರೂ ಎರಡು ದಡಗಳ ನಡುವೆ ಶಾಂತವಾಗಿ ಹರಿಯುವ ನದಿಯಂತೆ ಅನ್ನಿಸುತಿದ್ದದ್ದು ಎಷ್ಟು ಸಲವೋ. ನಡು ಮಧ್ಯಾನದ ಏಕಾಂತದಲ್ಲೋ, ಇಳಿ ಸಂಜೆಯ ಒಂಟಿತನದಲ್ಲೋ, ಸುಡು ಸುಡುವ ಬಿಸಿಲಿನಲ್ಲಿ ಬಸವಳಿದು ಕುಳಿತಾಗಲೋ ಈ ಕೋಗನ್ನು ದೃಷ್ಟಿಸಿದರೆ ಬಿಸಿಲು ಕಾಯಿಸುತ್ತಾ ಮಲಗಿರುವ ಸಮುದ್ರಂತೆ ಕಾಣಿಸುತ್ತಿತ್ತು. ಅಲ್ಲೆಲ್ಲೋ ಒಂಟಿಯಾಗಿ ನಿಂತ ಮರ, ಅದರ ಕೊಂಬೆಯಲ್ಲಿ ಅದರಷ್ಟೇ ಏಕಾಂಗಿಯಾಗಿ ಕುಳಿತ ಅನಾಮಧೇಯ ಹಕ್ಕಿ, ಅಲ್ಲಲ್ಲಿ ಮೇಯುತ್ತಾ ನಿಂತಿರುವ ದನಗಳು, ಬಿಸಿಲು ನೆರಳಿನ ಚೆಲ್ಲಾಟ, ಸಿಕ್ಕ ನೆರಳಲ್ಲಿ ಮಲಗಿ ಮೆಲಕು ಹಾಕುವ ದನಗಳು, ಕಂಪದ ಗದ್ದೆಯ ನಡುವಿನ ಕೆಸರಿನ ಹೊಂಡದಲ್ಲಿ ಮಲಗಿರುವ ಎಮ್ಮೆಗಳು, ದನದ ಮೈ ಉಣುಗನ್ನೋ ಮತ್ಯಾವುದೋ ಹುಳ ಹಪ್ಪಟೆಯನ್ನು ತಿನ್ನುವ ಕೊಕ್ಕರೆ ಹೀಗೆ ನೋಡುವಷ್ಟು ಹೊತ್ತು ಎಲ್ಲವನ್ನೂ ಮರೆಸಿ ಬೇರ್ಯಾವುದೋ ಲೋಕಕ್ಕೆ ಕೊಂಡೊಯ್ಯಲು ಶಕ್ತವಾಗಿದ್ದವು. ಕೊಯ್ಲು ಮುಗಿದು, ಭೂಮಿಯೂ ತನ್ನ ಹಸಿತನ ಕಳೆದುಕೊಂಡು ಬಿಸಿಲು ತನ್ನ ಬೇಗೆ ಹೆಚ್ಚಿಸಿಕೊಳ್ಳುವ ಸಮಯದಲ

ಮಳೆ ಬರುವ ಮುನ್ನ...

ಮಳೆಗಾಲದ ಮಳೆಯದ್ದೆ ಒಂದು ಹದವಾದರೆ ಈ ಬೇಸಿಗೆಯ ಮಳೆಯದ್ದೇ ಇನ್ನೊಂದು ವಿಧ. ರುದ್ರ ರಮಣೀಯ ಅನ್ನೋದಕ್ಕೆ ಅನ್ವರ್ಥಕ ಈ ಬೇಸಿಗೆಯ ಮಳೆ. ಮಳೆಗಾಲದ ಮಳೆಗೆ ಒಂದು ಶ್ರುತಿಯಿದೆ, ರೀತಿಯಿದೆ, ನೀತಿಯಿದೆ. ಅವೆಲ್ಲವನ್ನೂ ಮೀರಿದ್ದು ಮಾತ್ರ ಬೇಸಿಗೆಯ ಮಳೆ. ಮಳೆಗಾಲದ ಶುರುವಿನ ಹಂತವೂ ಹಾಗೆ. ಬಿರುಬೇಸಿಗೆಗೆ ಕಾದು, ಕುದ್ದು, ಒಡಲೆಲ್ಲಾ ಬಿರುಕುಬಿಟ್ಟು ಒಂದು ಹನಿ ನೀರಿಗಾಗಿ ಕಾಯುವ ಕಾತುರ, ನಿರೀಕ್ಷೆ, ಹಪಾಹಪಿ ಇದೆಯಲ್ಲ ಅದು ವಿವರಿಸಲಾಗದ್ದು. ಸುರಿಯುವ ರಭಸ ಆಕಾಶದ್ದು, ಸೆಳೆಯುವ ಹುಮ್ಮಸ್ಸು ಇಳೆಯದ್ದು. ಮನಸ್ಸಿಗೆ ಬಂದ ಹಾಗೆ ಅಂತಾರಲ್ಲ ಅದು ಬೇಸಿಗೆಯ ಮಳೆಗೆ ಹೇಳಿ ಮಾಡಿಸಿದ ಸಾಲು. ಯಾವಾಗ ಬೇಕಾದರೂ ಸುರಿಯಬಹುದು. ಆದರೂ ಈ ಮಳೆಗೆ ಮಧ್ಯಾಹ್ನದ ಮೇಲೆ ಮೋಹ. ಉಂಡು ವಿಶ್ರಾಂತಿ ಪಡೆದು ಕಾಫಿ ಕುಡಿಯುವ ವೇಳೆಗೆ ಹೊರಗೆ ಕಣ್ಣು ಹಾಯಿಸಿದರೆ ಒಮ್ಮೆಗೆ ತಬ್ಬಿಬ್ಬಾಗಬೇಕು ಹಾಗೆ ಕತ್ತಲು ಆವರಿಸಿ ಮತ್ತೆ ಮತ್ತೆ ಗಡಿಯಾರದ ಕಡೆಗೆ ನೋಡಿ ಸಮಯ ಖಾತರಿಮಾಡಿಕೊಳ್ಳುವ ಹಾಗಿರುತ್ತದೆ. ಉರಿಯುವ ಸೂರ್ಯನಿಗೆ ಗದರುವ ಕಪ್ಪು ಮೋಡಗಳ ಜೊತೆ ಕಣ್ಣಾ ಮುಚ್ಚಾಲೆ ಆಡುವ ಅವನು ಕದ್ದು ಕುಳಿತಾಗ ಇಡೀ ಭೂಮಿಗೆ ಮುಸುಕು ಪರದೆ ಬಿದ್ದ ಹಾಗೆ. ಅತ್ತ ಕತ್ತಲೂ ಅಲ್ಲದ ಇತ್ತ ಪೂರಾ ಬೆಳಕು ಅಲ್ಲದ ಮಧ್ಯಂತರ ಸ್ಥಿತಿಯದು. ಕೆಲವು ಸಲ ಮಧ್ಯ ವಯಸ್ಸಿನ ತಲ್ಲಣದ ಹಾಗೆ ಅನ್ನಿಸಿಬಿಡುತ್ತದೆ. ಬೆಳಕು ಮೂಡುವ ಸಮಯದ ಹಾಗಿನ ಅಹ್ಲಾದವೂ ಕೆಲವೊಮ್ಮೆ. ತಣ್ಣಗೆ ಬೀಸುವ ಗಾಳಿ, ಮಬ್ಬು ಬೆಳಕು, ಕ