Posts

Showing posts from December, 2019
ಈ ಹೋಗೋದು, ಬರೋದೂ ಟ್ರಾಫಿಕ್ ನಲ್ಲಿ ಅರ್ಧ ಜೀವನ ಕಳೆದುಹೋಗುತ್ತೆ, ಅಂತ ಅವನೂ, ಈ ಕೆಮಿಕಲ್, ಧೂಳು ಹೊಗೆ ಕುಡ್ಕೊಂಡ್ ಬದುಕುವುದು ಬೇಕಾ ಅಂತ ನಾನೂ ಊರಿಗೆ ಹೋಗಲು ನೆಪಗಳನ್ನು ಹುಡುಕಿಕೊಳ್ಳುತ್ತಾ ಇನ್ನೊಂದು ವರ್ಷ ಇನ್ನೊಂದು ಚೂರು ಆರ್ಥಿಕವಾಗಿ ಗಟ್ಟಿಯಾಗಿ ಹೊರಟುಬಿಡೋಣ ಎಂದು ಸಮಾಧಾನ ಮಾಡಿಕೊಳ್ಳುತ್ತಲೇ, ಮಗಳಿಗೆ ಏನೋ ಹೊಸತೊಂದು ಲೋಕವನ್ನೇ ಸೃಷ್ಟಿಸುವ ಹಮ್ಮಿನಲ್ಲಿ ಊರಿನ ಕನಸು ಕಾಣುತ್ತಿರುತ್ತೇವೆ. ಹುಟ್ಟಿದ್ದು, ಬೆಳೆದಿದ್ದು ಅಲ್ಲಿಯೇ, ಬೇರು ಅಲ್ಲಿಯೇ ಕನವರಿಕೆ ಸಹಜ. ಹೀಗೆಲ್ಲಾ ಮಾತಾಡಿಕೊಳ್ಳುವಾಗ ಮೊದಲು ಸುಮ್ಮನಿರುತ್ತಿದ್ದ, ತನ್ನ ಪಾಡಿಗೆ ತಾನು ಆಡುತ್ತಿದ್ದ ಮಗಳು ಈಗ ಗುರ್ರ್ ಅನ್ನುತ್ತಾಳೆ. ನೀವು ಬೇಕಾದರೆ ಹೋಗಿ ನಾನು ಬರೋಲ್ಲ ಅನ್ನುವಾಗ ರಜೆ ಬರುವುದಕ್ಕೆ ಮೊದಲೇ ಊರು ಎಂದು ಕನವರಿಸುವ ಅವಳ ಈ ವರ್ತನೆ ಅಚ್ಚರಿ ಹುಟ್ಟಿಸಿತ್ತು. ಅದು ನಿಮ್ಮ ಊರಾದರೆ ಇದು ನನ್ನದು ಎನ್ನುವ ಅವಳ ಮಾತು ಕೇಳಿ ಹಾರುತ್ತಿದ್ದ ಬಲೂನು ಅರ್ಧಕ್ಕೆ ಇಳಿದಿತ್ತು. ನಡುವಯಸ್ಸಿನವರಿಗೆ ಇದೊಂದು ಕಾರಣವೂ ಹೌದು ಆತಂಕವೂ ಹೌದು. ಹಳ್ಳಿಗಳಲ್ಲಿ ಒಳ್ಳೆಯ ಶಾಲೆಗಳಿಲ್ಲ, ಸ್ಪರ್ಧಾತ್ಮಕ ಯುಗದಲ್ಲಿ ಒಳ್ಳೆಯ ಶಿಕ್ಷಣವಿಲ್ಲದೆ ಬದುಕುವುದು ಹೇಗೆ? ಅಲ್ಲಲ್ಲಿ ನಿಲ್ಲುತ್ತಾ ಮಧ್ಯೆ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತಾ ಅರ್ಧ ಗಂಟೆಯಲ್ಲಿ ಆರು ಕಿ.ಮಿ ಚಲಿಸುವ ಹೊತ್ತಿನಲ್ಲಿ ಅಲ್ಲಿ 20 ಕಿ.ಮಿ ಚಲಿಸಲು ಸಾಧ್ಯವಿದೆ ಎನ್ನುವುದು ಮರೆತುಹೋಗುತ್ತದೆ. ಎಲ್ಲರಂತೆ ನಮ್ಮ

ಹೊಸದಿಗಂತ 25.12.19

ಅದು ಅಜ್ಞಾತವಾಸದ ಸಮಯ. ಹೇಗಾದರೂ ಪಾಂಡವರನ್ನು ಗುರುತು ಹಿಡಿದರೆ ನಿಯಮದ ಮತ್ತೆ ಅವರು ವನವಾಸಕ್ಕೆ ಹೋಗಬೇಕು, ಮತ್ತಷ್ಟು ವರ್ಷಗಳು ನಿರಾತಂಕ ಎನ್ನುವ ಯೋಚನೆಯಲ್ಲಿ ಅವರನ್ನು ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಕಿಚಕನ ಹತ್ಯೆಯ ಸುದ್ದಿ ತಲುಪಿ ಅದು ಭೀಮನಿಂದಲ್ಲದೆ ಮತ್ಯಾರಿಂದಲೂ ಸಾಧ್ಯವಿಲ್ಲ ಎನ್ನುವುದರ ಅರಿವಾಗಿ ಕರ್ಣ ವಿರಾಟನ ಮೇಲೆ ಧಾಳಿ ಮಾಡಲು ಧುರ್ಯೋಧನನಿಗೆ ಸಲಹೆ ಕೊಡುತ್ತಾನೆ. ಅದರ ಪ್ರಕಾರ ಅಲ್ಲಿಯ ಗೋವುಗಳನ್ನು ಹಿಡಿದು ಕೆಣಕಿದ ಕೌರವರನ್ನು ಹಿಮ್ಮೆಟ್ಟಿಸಲು ಶಿಖಂಡಿ ವೇಷದ ಅರ್ಜುನ ಬಂದಾಗ ಮೊದಲು ಓಡಿ ಬಂದು ತಪ್ಪಿಸಿಕೊಳ್ಳುವುದು ಕರ್ಣ. ಬಲಿಯಾಗಿದ್ದು ಕೌರವರ ಸೈನ್ಯ. ಮಣ್ಣು ಮುಕ್ಕಿದ್ದು ಧುರ್ಯೋಧನ ಗಳಿಸಿದ್ದ ಗೌರವ. ಮುಕ್ಕಾಗಿದ್ದು ವ್ಯಕ್ತಿತ್ವ. ಈಗ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನರನ್ನು ನೋಡಿದಾಗ ಈ ಕತೆ ನೆನಪಾಯಿತು. ಹಾಗಂದರೇನು? ಅದರ ಸಾಧಕ ಬಾಧಕಗಳು ಏನು?  ಅದು ಯಾರ ಮೇಲೆ ಪರಿಣಾಮ ಬೀರುತ್ತದೆ? ಯಾರಿಗೆ ಸುರಕ್ಷತಾ ಭಾವ ಕೊಡುತ್ತದೆ ಎನ್ನುವ ಕಿಂಚಿತ್ತು ಅರಿವೂ ಇಲ್ಲದೆ ಯಾರನ್ನೋ ಹಣಿಯುವ, ಅಧಿಕಾರ ಪಡೆಯುವ ಆಸೆಯಿಂದ ಅನೇಕ ಕರ್ಣರು ಪ್ರಚೋದಿಸುತ್ತಿದ್ದಾರೆ. ಕೆಲವು ದುರ್ಯೋಧನರು ಅದನ್ನು ಕಣ್ಮುಚ್ಚಿ ನಂಬಿ ತಮ್ಮ ಬೆಂಬಲಿಗರನ್ನು ಹುರಿದುಂಬಿಸಿ ಕಳುಹಿಸುತ್ತಿದ್ದಾರೆ. ಇದೇನಾದರೂ ಜಾರಿಗೆ ಬಂದರೆ ಇಡೀ ರಾಜ್ಯವೆ, ದೇಶವೇ ಹೊತ್ತಿ ಉರಿಯುತ್ತದೆ ಎನ್ನುವ ಮು;ಮುನ್ಸ

ಉದಯವಾಣಿ.. 25.12.19

ಅಮ್ಮಾ ಎನ್ನುವ ಸ್ವರ ತೂರಿ ಬರುತ್ತಿದ್ದ ಹಾಗೆಯೇ ಬೆಚ್ಚಿಬಿದ್ದು ಮರುದಿನ ಬೆಳಿಗ್ಗೆ ಇಡ್ಲಿಗೆಂದು ನೆನಸಿಟ್ಟ ಉದ್ದನ್ನೇ ದಿಟ್ಟಿಸಿದೆ. ಮುಂದಿನ ಪ್ರಶ್ನೆ ಯಾವುದು ಎಂದು ಗೊತ್ತಿದ್ದರಿಂದ, ಉತ್ತರ ಸಿಕ್ಕ ಕೂಡಲೇ ಇನ್ನೊಂದು ಯುದ್ಧ ಶುರುವಾಗುವುದರಿಂದ ಅಪ್ರಯತ್ನವಾಗಿ ಮನಸ್ಸನ್ನು ಸಿದ್ಧಗೊಳಿಸುತ್ತಲೇ ಹೇಳು ಅಂದೇ.. ಬೇರೆ ಸಮಯದಲ್ಲಿ, ದಿನಗಳಲ್ಲಿ  ಮುದ್ದು ಉಕ್ಕುವ ಈ ಅಮ್ಮಾ ಎನ್ನುವ ಶಬ್ದ ಶಾಲೆಯಿದ್ದಾಗ ಮನೆಗೆ ಬಂದ ಕೂಡಲೇ ಕೇಳಿದರೆ ಇದೆ ಅವಸ್ಥೆ. ನಂತರದ ಪ್ರಶ್ನೆಯೇ ನಾಳೆ ಎಂತ ತಿಂಡಿ.. ಹೇಳಿದ ಕೂಡಲೇ ಯಾವಾಗಲೂ ಅದೇನಾ ಕದನಕ್ಕೆ ಕರೆ ಕೊಡುವ ಸ್ವರ... ನಂಗೆ ಬೇಡಾ ಕ್ಯಾಂಟೀನ್ ಅಲ್ಲಿ ತಿಂತೀನಿ ಧಮಕಿ.. ನನ್ನ ಪ್ರತ್ಯುತ್ತರ, ಕಾಳಗ, ಸಂಧಾನ ನಡೆಯುವ ಹೊತ್ತಿಗೆ ಮೈ ಮನವೆಲ್ಲಾ ಸುಸ್ತು.  ಆ ಭಯದಲ್ಲಿ ಅವಳತ್ತ ದಿಟ್ಟಿಸಿದರೆ ನಾಡಿದ್ದು ಕ್ರಿಸ್ಮಸ್ ಪಾರ್ಟಿ, ನಂಗೆ ಚಿಪ್ಸ್ ಹಾಗೂ ಕೇಕ್ ತಂದುಕೊಡು, ತಗೊಂಡು ಹೋಗ್ತೀನಿ ಎಂದಿನ ಕಿರಿಕಿರಿಯಿಲ್ಲದ, ಮುನಿಸಿಲ್ಲದ ಸಂಭ್ರಮದ ದನಿಯ ರಾಜಕುಮಾರಿ ಮುಖದಲ್ಲಿ ಮಂದಹಾಸ.. ನಡಿಗೆಯಲ್ಲಿ ಚಿಮ್ಮುವ ಉತ್ಸಾಹ. ಅಬ್ಬಾ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಡುತ್ತಾ ನಿರಾಳತೆಯಿಂದ ಉದ್ದಿನ ಬೇಳೆಯನ್ನು ಮಿಕ್ಷಿಗೆ ಹಾಕಿದೆ. ಇನ್ನೆರೆಡು ದಿನ ಕಳೆದರೆ ಮುಗಿಯಿತು ಆಮೇಲೆ ರಜಾ.. ಕವಿದಿದ್ದ ಕಾರ್ಮೋಡ ಕರಗಿ ಬಿಸಿಲಿನ ಕಿರಣವೊಂದು ಇಳಿದುಬಂದಂತೆ ಮನಸ್ಸು ಗರಿಗೆದರಿದ ನವಿಲು.. ಗಾಢ ನಿದ್ದೆಯಲ್ಲೂ ಬೆಳಗಾಯ
ಇಡೀ ಭೂ ಮಂಡಲ ಸುತ್ತಿ, ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಸ್ನಾನ ಮಾಡಿ ಕೊಡಲಿ ತೊಳೆದರೂ ಎಳ್ಳಿನ ಮೊನೆಯಷ್ಟು ರಕ್ತದ ಕಲೆ ಹಾಗೆ ಉಳಿದಿತ್ತಂತೆ ಕೊಡಲಿಯಲ್ಲಿ. ಹಾಗೆ ಸುತ್ತುತ್ತಾ ಬಂದವನು ರಾಮಕೊಂಡದ ಹತ್ತಿರ ಬಂದಾಗ ಅಮಾವಾಸ್ಯೆಯಾಗಿತ್ತು. ಸ್ನಾನ ಮಾಡಿ ತರ್ಪಣ ಕೊಡಲು ಮುಳುಗಿದವನು ಎದ್ದಾಗ ಹೆಗಲ ಕೊಡಲಿಯಲ್ಲಿದ್ದ ಆ ರಕ್ತದ ಕಲೆ ಮಾಯವಾಗಿತ್ತಂತೆ. ಪರಶುರಾಮನಿಗೆ ಸಂತೋಷ ಆಗಿತ್ತಂತೆ. ಮಾತೃಹತ್ಯಾದೋಷ ಅಂದರೆ ಸುಮ್ಮನೇನಾ...    ಹಾಗಾಗಿ ನೋಡು ಎಳ್ಳಮವಾಸ್ಯೆ ದಿನ ರಾಮಕೊಂಡದಲ್ಲಿ ಸ್ನಾನ ಮಾಡಿದರೆ ದೋಷವೆಲ್ಲಾ ಪರಿಹಾರ ಆಗುತ್ತಂತೆ ಅಂತ ಅಜ್ಜಿ ಕತೆ ಹೇಳುತ್ತಿದ್ದರೆ ಈ ಎಳ್ಳು ಮೊನೆಯೆಂದರೆ ಹೇಗಿರುತ್ತೆ ಅಂತ ಪ್ರಶ್ನೆಮೂಡಿತ್ತು. ಉತ್ತರಕ್ಕೆ ಕಷ್ಟವೇನೂ ಪಡಬೇಕಾಗಿರಲಿಲ್ಲ. ಅಟ್ಟದ ಮೇಲಿನ ಡಬ್ಬದಲ್ಲಿ ಎಳ್ಳು ತುಂಬಿತ್ತು. ಅದು ಬೀರೋಕೆ ಅಂತ ಇಟ್ಟಿರೋದು ಚೆಲ್ಲಿ ಹಾಳುಮಾಡಬೇಡಾ ಎಂದು ಎದ್ದವಳನ್ನು ನೋಡಿ ಯಾಕೆ ಎಂದು ಉಹಿಸಿಯೇ ಅಜ್ಜಿ ಗದರಿದ್ದಳು. ತುಂಬಾ ನೀರು ಬೇಡದ, ಜಾಸ್ತಿ ಆರೈಕೆ ಬಯಸದ ಎಳ್ಳು ಬಹುಬೇಗ ಬೆಳೆಯಬಹುದಾದ ಬೆಳೆ. ತೀರಾ ಗಟ್ಟಿಯೂ ಅಲ್ಲದ ಮೃದುವೂ ಅಲ್ಲದ ಕಾಂಡ.  ದಟ್ಟ ಹಸಿರು ಬಣ್ಣದ ಎಲೆ, ಬಿಳಿ ಹೂ... ಪುಟ್ಟ ಕಾಯಿಯಾದರೂ ಒಳಗೆ ತುಂಬಿಕೊಂಡಿರುವ ಬೀಜಗಳು. ಕಂದು, ಕಪ್ಪು, ಬಿಳಿ ಹೀಗೆ ವರ್ಣವೈವಿಧ್ಯತೆ ಹೊಂದಿದ್ದರೂ ಕರಿ ಎಳ್ಳಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ರಕ್ತವನ್ನು ಹೆಚ್ಚಿಸುವ ಇದು ರಕ್ತದೊತ್ತಡ ಕಡಿಮೆ ಮಾಡುವ ಗ

ಹೊಸದಿಗಂತ 12.07.19

ಜೊಮೊಟೋ ದ ಹುಡುಗನೊಬ್ಬ ಡೆಲಿವರಿ ಕೊಡುವ ಮುನ್ನ ಪ್ಯಾಕ್ ಓಪನ್ ಮಾಡಿ ಸ್ವಲ್ಪ ತಿಂದ ವೀಡಿಯೊ ಒಂದು ವೈರಲ್ ಆಗಿತ್ತು. ಸಹಜವಾಗಿಯೇ ಅದರ ಬಗ್ಗೆ ಆಕ್ರೋಶಗಳು ಹೊಮ್ಮಿದಷ್ಟೇ ಟ್ರೋಲ್ ಗಳು ಹಬ್ಬಿದ್ದವು. ಜನ ಅದು ತಪ್ಪು ಎಂದು ಖಂಡಿಸಿ ಬರೆಯಲು ಶುರುಮಾಡಿದ್ದರು. ಮೊದಲ ದಿನ ಎಲ್ಲಾ ಪ್ರತಿಕ್ರಿಯೆಗಳು ಹೀಗೆ ಇದ್ದವು. ಮರುದಿನ ಇದ್ದಕ್ಕಿದ್ದ ಹಾಗೆ ಯಾರಿಗೋ ಅದು ಹಸಿವಿನ ಪರಾಕಾಷ್ಟೆ ಅನ್ನಿಸಿತು ನೋಡಿ ಅಲ್ಲಿಂದ ಅವನ ಬಗ್ಗೆ ಅನುಕಂಪದ ಮಾತುಗಳು, ಹಸಿದವನ ಬಗ್ಗೆ ಕರುಣೆ, ಬಡತನದ ಬಗ್ಗೆ ಭಾಷಣಗಳು ಶುರುವಾಗಿ ಹೋಯಿತು. ನಂತರ ಯಾರು ಅದರ ವಿರೋಧವಾಗಿದ್ದಾರೆ ಎನ್ನುವುದು ನೋಡುವುದರ ಮೂಲಕ ಪರವಾಗಿ ವಾದವೂ, ಯಾರು ಪರವಾಗಿದ್ದಾರೆ ಎಂದು ನೋಡಿ ವಿರೋಧವೂ ಶುರುವಾಗಿ ಅಲ್ಲಿಗೆ ಅದು ಎರಡು ಬಣಗಳ ಜಗಳಕ್ಕೆ ತಿರುಗಿ ನಿಜವಾದ ಘಟನೆ ಅರ್ಥಕಳೆದುಕೊಂಡಿತು. ತಿಂದಿದ್ದು ತಪ್ಪು ಎನ್ನುವುದು ಗೊತ್ತಿದ್ದರೂ ಅದನ್ನು ಬಲವಾಗಿ ಸಮರ್ಥಿಸುವ ಅದರ ಮೂಲಕ ನೈತಿಕತೆಯ ಅಧಃಪತನವನ್ನು ಎತ್ತಿ ಹಿಡಿಯುವ ಕೆಲಸ ಆರಂಭವಾಯಿತು. ಎಲ್ಲರೂ ಸೇರಿ ತಪ್ಪನ್ನು ತಪ್ಪು ಎಂದು ಖಂಡಿಸಿ ಅವನ ಹಸಿವೋ ಚಪಲವೋ ಅಥವಾ  ಮತ್ಯಾವ ಕಾರಣವೋ ಎಂದು ವಿಶ್ಲೇಷಿಸಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮರೆಯಾಗಿ, ಘಟನೆ ಅಪ್ರಸ್ತುತ ಅನ್ನಿಸುವ ಹಾಗಾಯಿತು. ಇವನ್ನೆಲ್ಲಾ ನೋಡಿ ಹಾಗೆ ತಿಂದವನಿಗೆ ಅದು ತಪ್ಪು ಅನ್ನಿಸಿದ್ದೂ ಮರೆತು ಹೋಗಿ ತಾನು ಮಾಡಿದ್ದೆ ಸರಿಯೇನೋ ಅನ್ನಿಸಿತ್ತೇನೋ .. ಒಂದು ಸಮಾಜದ ಏಳ್ಗೆಗೆ ಯ