Posts

Showing posts from November, 2019

ಅಜ್ಞಾತನೊಬ್ಬನ ಆತ್ಮಚರಿತ್ರೆ

"ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ." ಅಧಿಕಾರ ಎನ್ನುವುದು ಸರ್ಪದ ನೆರಳಲ್ಲಿ ಇದ್ದಂತೆ. ಯಾವ ಕ್ಷಣದಲ್ಲಿ ಎಲ್ಲಿಂದ ಹೇಗೆ ಅಪಾಯ ಬಂದೆರೆಗಬಹುದು ಎಂದು ಹೇಳುವುದು ಕಷ್ಟವೇ. ಅದರಲ್ಲೂ ಯಾರಿಂದ ಎನ್ನುವುದಂತೂ ಬಹಳ ಕಷ್ಟ. ಅಧಿಕಾರ ಎನ್ನುವುದು ಹಾವು ಏಣಿ ಆಟವಿದ್ದಂತೆ. ಯಾರು ಇಳಿಯುತ್ತಾರೋ, ಮತ್ಯಾರು ಮೇಲಕ್ಕೆ ಹತ್ತುತ್ತಾರೋ ಹೇಗೆ ಹೇಳುವುದು. ಅಸಲಿಗೆ ಹೈದರಾಲಿ ಅಧಿಕಾರಕ್ಕೆ ಬಂದದ್ದು ನಂಬಿಕೆ  (?) ಎನ್ನುವುದು ಉಪಯೋಗಿಸಿ ಕೊಂಡೆ ಅಲ್ಲವೇ.  ಈಗ ಬ್ರಿಟಿಷರು ಅಂಥಹ ನಂಬಿಕಸ್ತರನ್ನು ಉಪಯೋಗಿಸಿಕೊಂಡೆ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಎದುರಿಗಿದ್ದ ಸಿಪಾಯಿ ತನ್ನನ್ನು ನಂಬಿ ಸುಲ್ತಾನ್ ತನ್ನ ಮನಸ್ಸಿನ ಮಾತು ಹೇಳುತ್ತಿದ್ದಾನೆ ಎಂದು ನಂಬಿದ್ದಾನೆ. ಯಾರು ಯಾರನ್ನು ನಂಬಿದ್ದಾರೆ, ಯಾರು ಯಾರ ನಂಬಿಕೆಯನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಅನ್ನುವುದೇ ಗೊಂದಲ. ನಂಬಬಾರದ.... ನಂಬಿದಂತೆ ನಟಿಸುತ್ತಲೇ ಅಪನಂಬಿಕೆಯ ಚಾದರ ಹೊದ್ದಿರಬೇಕಾ.. ತಪ್ಪು ನಂಬುವವನದ್ದಾ ಅಥವಾ ಆ ನಮ್ಬಿಕೆಯೆಂಬ ಏಣಿಯನ್ನು ಬಳಸಿಕೊಂಡು ಮೇಲೆರಿದವನದ್ದಾ... ಇಂತಹದೊಂದು ಗೊಂದಲ ಕಾದಿದ್ದು ಅಜ್ಞಾತನೊಬ್ಬನ ಆತ್ಮಚರಿತ್ರೆ ಓದುವಾಗ. ಟಿಪ್ಪು ಸುಲ್ತಾನ್ ಆಸ್ಥಾನದ ದಳವಾಯಿಯೊಬ್ಬನ ಆತ್ಮಕತೆಯಂತಿರುವ ಇದು ಇತಿಹಾಸದ ಒಳಸುಳಿಗಳನ್ನು ಪರಿಚಯಿಸುತ್ತಲೇ ಮನಸ್ಸಿನ ಒಳಸುಳಿಗಳ ಅನಾವರಣ ಮಾಡುತ್ತಾ ಹೋ

ಮಂಗಗಳ ಉದ್ಯಾನ

ಇಳಿ ಸಂಜೆಯ ಹೊತ್ತಿಗೆ ಪ್ಯಾಸೇಜ್ ಬಾಗಿಲು ತೆಗೆದು ಹೊರ ಬಂದವಳಿಗೆ ಕಂಡಿದ್ದು ಕಳಿತ ಕಿತ್ತಳೆ ಹಣ್ಣಿನಂತಿದ್ದ ಆಕಾಶ. ಒಹ್ ಇವನಾಗಲೇ ಮನೆಗೆ ಹೊರಟಾಯ್ತು ಕಳುಹಿಸಿಯೇ ಹೋಗೋಣವೆಂದು ಅವನನ್ನೇ ದಿಟ್ಟಿಸುತ್ತಾ ನಿಂತೇ.. ಜಗದ ಗಂಡಂದಿರಂತಲ್ಲ ಈ ಸೂರ್ಯ. ಮನೆ ಸೇರುವ ಆತುರ ಅವನಿಗೆ. ಇನ್ನೂ ಇಲ್ಲೇ ಇದ್ದಾನಲ್ಲ ಬಿಡು ಅಂತ ಆಚೀಚೆ ಕಣ್ಣು ಹಾಯಿಸಿದರೆ ಮುಗಿದೇ ಹೋಯಿತು, ಮುನಿದ ಇನಿಯನಂತೆ ಅಷ್ಟು ದೂರಕ್ಕೆ ಹೋಗಿ ಬಿಟ್ಟಿರುತ್ತಾನೆ. ಎವೆಯಿಕ್ಕದೆ ಅವನನ್ನೇ ನೋಡುತಿದ್ದೆ, ನೋಟಕ್ಕೆ ಸಿಲುಕದಂತೆ ಜಾರುತ್ತಲೇ ಇದ್ದವನು ಕ್ಷಣ ಮಾತ್ರದಲ್ಲಿ ಕುರುಹೂ ಸಿಗದಂತೆ ಮಾಯವಾದ. ಇನ್ನೇನು ಇರುಳು ಅಡಿಯಿಡುವ ಹೊತ್ತು  ದೀಪ ಹೊತ್ತಿಸಬೇಕು ಎಂದು ಒಳಗೆ ಕಾಲಿಡಬೇಕು ಅಚಾನಕ್ಕಾಗಿ ಒಂದು ಕಡೆ ಹಾದ ದೃಷ್ಟಿ ಅಲ್ಲಿಯೇ ಸೆರೆಯಾಯಿತು. ತುಂಬು ಬಸುರಿ ಕೋತಿಯೊಂದು ಒಬ್ಬಂಟಿಯಾಗಿ ಕುಳಿತಿತ್ತು. ಮುಖದಲ್ಲೇನೋ ದುಗುಡ. ಅಕ್ಕಪಕ್ಕದ ಸಾಲು ಕಟ್ಟಡಗಳು ಒಂದರ ಮೇಲೊಂದು ಮನೆಯ  ಕಿರೀಟ ಹೊತ್ತು ಕುಳಿತಿದ್ದರೆ ಇದೊಂದು ಮನೆ ಮಾತ್ರ  ಕಿರೀಟ ಕಳಚಿಟ್ಟ ರಾಜನಂತೆ ನಿಂತಿತ್ತು. ಉದ್ದದ ಟೆರೆಸ್ ನ ಎರಡೂ ಬದಿ ಹೂವಿನ ಗಿಡಗಳು ಸಾಲುಗಟ್ಟಿ ನಿಂತಿದ್ದರೆ ಅಷ್ಟು ಎತ್ತರದಲ್ಲಿ ಗಂಭಿರವಾಗಿ ನಿಂತ ವಾಟರ್ ಟ್ಯಾಂಕ್ ಹಾಗೂ ಅದರ ಹತ್ತಿರ ಹೋಗಲು ಇಟ್ಟಿದ್ದ ಒಂದು ಕಬ್ಬಿಣದ ಏಣಿ. ಆ ಏಣಿಯ ಕೊನೆಯ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತ ಈ ಕೋತಿ. ಒಂದಷ್ಟು ಹೊತ್ತು ಆ ಏಣಿಯ ಮೇಲೆ ಅದೇನೋ ಯೋಚಿಸುವಂತೆ