Posts

Showing posts from February, 2019

hosadiganta 01.03.19

ಯಾವುದೇ ಒಳ್ಳೆಯ ಕೆಲಸ ಮಾಡಲೂ ಸಹ ಬ್ರಾಹ್ಮಿ ಮಹೂರ್ತ ಒಳ್ಳೆಯದಂತೆ. ಹಾಗಾಗಿಯೇ ಓದಲು, ಸಾಧನೆ ಮಾಡಲು, ಧ್ಯಾನ, ಜಪ ತಪಗಳನ್ನ ಮಾಡಲು ಬ್ರಾಹ್ಮಿ ಮಹೂರ್ತದಲ್ಲಿಯೇ ಏಳುತ್ತಾರೆ. ಕಾರ್ಯತತ್ಪರರಾಗುತ್ತಾರೆ. ಅಂಥಹದೊಂದು ಬ್ರಾಹ್ಮಿ ಮಹೂರ್ತದಲ್ಲಿಯೇ ಸೇನೆಯೂ ನಭಕ್ಕೆ ಚಿಮ್ಮಿತ್ತು. ಸೂರ್ಯ ಉದಯಿಸಿ ಬಾನು ಕೆಂಪಾಗುವ ಮುನ್ನವೇ ಅಗ್ನಿ ಜ್ವಾಲೆಯ ಕಂಪು ಹರಡಿಸಿ ಬಂದಿತ್ತು. ಒಳಗೊಳಗೇ ಸಂಕಟ ಪಡುತ್ತಿದ್ದ, ಬೇಯುತ್ತಿದ್ದ ಕೋಟ್ಯಾಂತರ ಭಾರತೀಯರಿಗೆ ಸಮಾಧಾನ ಕೊಟ್ಟಿತ್ತು. ಸುಖಾ ಸುಮ್ಮನೆ ನನ್ನ ಕೆಣಕಿದರೆ ನಿಮ್ಮ ಮನೆಯೊಳಗೇ ಬಂದು ಹೊಡೆಯುವ ಸಾಮರ್ಥ್ಯ ನನ್ನಲ್ಲಿದೆ, ಇನ್ನೊಂದು ಕೆನ್ನೆ ತೋರುವ ಕಾಲ ಹೋಯ್ತು ಎಂದು ಮೌನವಾಗಿಯೇ ಹೇಳಿ ಬಂದಿತ್ತು. ಈ ನೆಲದ ಮೂಲ ಗುಣ ಕ್ಷಾತ್ರವೇ... ಹತ್ತೂ ಅವತಾರಗಳೂ ಶಾಂತಿಗಾಗಿ ಪ್ರಯತ್ನಿಸಿದರೂ ಹೇಡಿಯಾಗಿ ಕೂರಲಿಲ್ಲ. ಯಾರಿಗೆ ಹೇಗೆ ಬುದ್ಧಿ ಕಲಿಸಬೇಕಿತ್ತೋ ಹಾಗೆಯೇ ಕಲಿಸಿದ್ದು. ಸ್ವಾಭಿಮಾನ ತನ್ನತನ ಉಳಿಸಿಕೊಳ್ಳಲು ಬೇಕಾದ ಸಾಮರ್ಥ್ಯ ಹಾಗೂ ಗುಂಡಿಗೆ ಎರಡೂ ಇತ್ತು. ಪಂಚತಂತ್ರವೂ ಉಳಿದೆಲ್ಲ ಆದ ಬಳಿಕ ದಂಡ ವನ್ನೇ ಹೇಳಿತ್ತು.  ಅಂತ ನೆಲದಲ್ಲಿ ಅಹಿಂಸೆ ಅನ್ನುವುದು ಅಸಹಾಯಕತೆಯ ಮುಚ್ಚಿಕೊಳ್ಳುವ ಅಸ್ತ್ರವಾಗಿದ್ದು ಇತ್ತೀಚಿಗೆ. ಅದರ ವ್ಯಾಖ್ಯಾನವನ್ನೇ ಬದಲಾಯಿಸಿದ ಕೀರ್ತಿಯೂ ನಮ್ಮದೇ. ಯಜಮಾನ ದುರ್ಬಲನಾದಾಗ ಅಥವಾ ಅವನಿಗೆ ಅಧಿಕಾರವೋ ಆಮಿಷಕ್ಕೊ ಒಳಗಾದಾಗ ಗುಲಾಮನಾಗಿ ಪರಿವರ್ತಿತ ನಾಗುತ್ತಾನೆ. ಗುಲಾಮಗಿರಿಯನ್ನು ಮ

ತುಂಬೆ

ಬೆಳಿಗ್ಗೆ ಏಳುತಿದ್ದ ಹಾಗೆ ಅವಸರದಲ್ಲೊಂದು ಸ್ನಾನ ಮುಗಿಸಿ, ಗಡಿಬಿಡಿಯಲ್ಲೊಂದು ತಿಂಡಿ ತಿಂದು ಬಟ್ಟಲನ್ನು ಹಿಡಿದು ಹೊರಟರೆ ಅಲ್ಲಿಗೆ ಪಂದ್ಯವೊಂದು ಶುರುವಾಯಿತೆಂದರ್ಥ. ಸಣ್ಣಗೆ ಬೀಳುತಿದ್ದ ಇಬ್ಬನಿಯಲ್ಲಿ ಮೈಯೆಲ್ಲಾ ಹನಿಯಾಗಿ ಗದ್ದೆಯ ಅಂಚಿನಲ್ಲಿ ನಳನಳಿಸುತ್ತ ನಿಂತಿರುತಿದ್ದ ತುಂಬೆಯ ಗಿಡ ಅಲುಗಾಡಿ ಸ್ವಾಗತಕೋರುತಿತ್ತು. ಶ್ವೇತವರ್ಣದ ಸುಂದರಿಯ ಮೈಮೇಲೆ ಮುತ್ತಿನ ಸುರಿಮಳೆ ಸುರಿದಂತೆ ಕಾಣುತಿದ್ದ ಇಬ್ಬನಿಯಲ್ಲಿ ಪ್ರತಿಫಲಿಸುವ ಸೂರ್ಯನ ಎಳೆಯ ಕಿರಣ, ಹೋಗಲೋ ಬೇಡವೋ ಎಂಬ ಗೊಂದಲದಲ್ಲಿರುತ್ತಿದ್ದ ಸಣ್ಣ ಚಳಿ, ಆಗಾಗ ಬೀಸುವ ಗಾಳಿ.. ಎಳೆಯ ಬಿಸಿಲಿಗೆ ಚರ್ಮ ಅನುಭವಿಸುವ ಬೆಚ್ಚಗಿನ ಅನುಭೂತಿ. ಇಬ್ಬನಿ, ಮಂಜು, ತುಂಬೆ, ಅಲ್ಲಲ್ಲಿ  ರಂಗೋಲಿಯ  ಹಾಗೆ ಬಿಡಿಸಿಟ್ಟ ಜೇಡನ ಬಲೆ ಎಲ್ಲವೂ ಒಂದು ಶ್ವೇತವರ್ಣದ ಲೋಕವನ್ನೇ ಸೃಷ್ಟಿಸಿರುತ್ತಿದ್ದವು. ಗದ್ದೆ ಕುಯಿಲು ಮುಗಿಯುವುದನ್ನೇ ಕಾಯುತಿತ್ತೇನೋ ಎನ್ನುವ ಹಾಗೆ, ತುಂಬೆ  ಮೊಳಕೆಯೊಡೆಯುತಿತ್ತು. ಮೃದುವಾದ ರೆಂಬೆ ತೀರಾ ಎತ್ತರವೂ ಅಲ್ಲದೆ ಪುಟ್ಟದೂ ಅಲ್ಲದೆ  ಬಿಚ್ಚಿಟ್ಟ ಕೊಡೆಯಂತೆ ಹರಡಿಕೊಂಡು, ಉದ್ದವಾದ ಹಾಗೂ ತೆಳುವಾದ ಹಸಿರು ಎಲೆಗಳು ಇರುತಿದ್ದ ಅದು ಮಾಗಿಯ ಗಾಳಿಗೆ, ಓಡಾಡುವರ ಕಾಲ್ತುಳಿತಕ್ಕೆ, ಹಸುಗಳ ಓಡಾಟದ ರಭಸಕ್ಕೆ ಎದುರಾಗಿ ಉಳಿಯುವುದಲ್ಲದೆ ಶಿವರಾತ್ರಿ ಬರುವುದನ್ನೇ ಕಾಯುತ್ತಿತ್ತೇನೋ ಅನ್ನುವ ಹಾಗೆ ಮೈ ತುಂಬಾ ಹೂವರಳಿಸಿಕೊಂಡಿರುತ್ತಿತ್ತು. ಪುಟ್ಟ ಗಿಡ ಆದರೆ ಉಪಯೋಗ ಮಾತ್ರ ಬೆಟ್ಟದಷ್

ಒಂದು ಮುಷ್ಠಿ ಆಕಾಶ

ಮಗು ಹುಟ್ಟಿದಾಗ ತಾಯಿಯೂ ಜನ್ಮಿಸುತ್ತಾಳೆ ಅನ್ನೋದು ಪ್ರಚಲಿತವಾದ ಮಾತು. ಹಾಗೆ ಹುಟ್ಟಿದ ತಾಯಿ ಹಾಗೂ ಮಗುವಿನ ಪ್ರಪಂಚ ಸೀಮಿತವಾಗಿರುತ್ತದೆ ಅನ್ನೋದು ಆ ಕ್ಷಣಕ್ಕೆ ಕಾಣದ ಕಹಿ ಸತ್ಯ ಅನ್ನೋದು ಅರಿವಿಗೆ ಬರೋದು ಒಂದಷ್ಟು ವರ್ಷಗಳು ಕಳೆದ ಮೇಲೆಯೇ. ಮಗು ಬೆಳೆಯುತ್ತಾ ಬೆಳೆಯುತ್ತಾ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾ ಜೊತೆ ಜೊತೆಗೆ ಪ್ರಪಂಚವನ್ನು ಹಿಗ್ಗಿಸಿಕೊಳ್ಳುತ್ತಾ ಹೋದರೆ ತಾಯಿ ತನ್ನ ಪ್ರಪಂಚವನ್ನು ಕುಗ್ಗಿಸಿಕೊಳ್ಳುತ್ತಾ ಮಗುವೆ ಪ್ರಪಂಚ ಅಂದುಕೊಂಡು ಬಿಡುತ್ತಾಳೆ, ವೈಯುಕ್ತಿಕ ಆಸೆ, ಕನಸು ಬದುಕು ಎಲ್ಲವೂ ಮರೆಯಾಗಿ ಮಗು ಮಾತ್ರ ಪ್ರಾಮುಖ್ಯತೆ ಅನ್ನುವ ಹಾಗೆ ಬದುಕುತ್ತಾಳೆ ಕೂಡಾ... ಒಂದು ಮುಷ್ಟಿ.... ಪ್ರತಿ ಮನುಷ್ಯನ ಮುಷ್ಠಿ ಎಷ್ಟು ಗಾತ್ರದ್ದೋ ಅವರ ಹೃದಯವೂ ಅಷ್ಟೇ ಗಾತ್ರದಲ್ಲಿ ಇರುತ್ತದಂತೆ. ಒಂದು ಮುಷ್ಟಿಗೆ ಎಷ್ಟೊಂದು ಅರ್ಥ, ಎಷ್ಟೊಂದು ಭಾವ... ಜೀವವೂ, ಭಾವವೂ, ಎಲ್ಲವೂ ಹೌದು. ಅಮೂಲ್ಯವಾದ ಎಲ್ಲವೂ ಮುಚ್ಚಿದ ಆ ಮುಷ್ಟಿಯಲ್ಲಿಯೇ ಅಡಗಿರುತ್ತದೆ. ಬಂಧನ ಬಿಡುಗಡೆ ಎರಡೂ ಮುಷ್ಟಿಯನ್ನೇ ಅವಲಂಬಿಸಿರುತ್ತದೆ. ಹೀಗಿದ್ದೂ ಮಗು ಹುಟ್ಟಿದ ಮೇಲೆ ಆ ಮುಷ್ಟಿಯನ್ನು ಸಂಪೂರ್ಣವಾಗಿ ಮುಚ್ಚಿ ಬದುಕು, ಕನಸು ಎಲ್ಲವೂ ಮಗುವೆ ಆಗಿ ಅಲ್ಲಿಯವರೆಗೆ ಇದ್ದ ಪ್ರಪಂಚ ಮರೆಯಾಗಿ, ರೆಕ್ಕೆಗಳು ಮುದುರಿ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿ ಬಿಡುತ್ತದೆ. ದಿನ ಕಳೆದಂತೆ ಈ ಚಿಕ್ಕ ಜಗತ್ತೇ ಬದುಕಾಗಿ ಬಿಡುತ್ತದೆ. ತನ್ನದು ಅನ್ನುವ ಸ್ವಂತ ಬದುಕು

ಅಜ್ಜಿ....

ಒಂದು ವರ್ಷವಾಯ್ತಂತೆ ನೋಡು ಎಂದು ಪುಟ ತಿರುಗಿಸಿದ ಕ್ಯಾಲೆಂಡರ್ ನೆನಪಿಸುತ್ತಿದೆ. ಒಂದೇ ವರ್ಷವಾ ಎಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದೇನೆ. ಒಂದು ವರ್ಷಕ್ಕೆ ಇಷ್ಟು ದಿನಗಳಾ ಇಷ್ಟು ಅಂತರವಾ ಎಂದರೆ ಕ್ಯಾಲೆಂಡರ್ ಉತ್ತರಿಸುವುದಿಲ್ಲ, ಉತ್ತರಿಸುವ ಮನಸ್ಸಿಗೆ ಕಿವಿಯಾಗಲು ಧೈರ್ಯ ಸಾಲುವುದಿಲ್ಲ ನೋಡು. ಒಂದು ಬದುಕಿನಷ್ಟು, ಒಂದು ತಲೆಮಾರಿನಷ್ಟು ಅಂತರವನ್ನು ಆ ಹನ್ನೆರಡು ಪುಟಗಳ ಕ್ಯಾಲೆಂಡರ್ ಹೇಳುವುದಾದರೂ ಹೇಗೆ ಹೇಳು? ಪ್ರತಿ ದಿನ ದೇವರ ದೀಪ ಹಚ್ಚುವಾಗ ಬತ್ತಿ ಸರಿಸುವಾಗ ಜಗತ್ತಿನ ಅತಿ ದೊಡ್ಡ ಜಿಪುಣಿ ನಾನೇ ಅನ್ನಿಸುತ್ತೆ ನೋಡು. ಮೊದಲೆಲ್ಲಾ ಹೊತ್ತಿಗೊಮ್ಮೆ ದೀಪ ಹಚ್ಚುವಾಗ ಹಳೆಯ ಬತ್ತಿಯನ್ನು ತೆಗೆದು ಬಿಸಾಕಿ ಹೊಸತು ಹಾಕಿ ಉರಿಸುತ್ತಿದ್ದ ನಾನೆಂಬ ನಾನು ಈಗ ಒಂದೇ ಬತ್ತಿಯನ್ನು ಎಷ್ಟು ದಿನ ಉರಿಸಬಹುದು ಎಂದು ಇಷ್ಟಿಷ್ಟೇ ಮುಂದೂಡಿ ಹಚ್ಚುತ್ತೇನೆ. ಅದನ್ನು ಮುಂದಕ್ಕೆ ಮಾಡುವಾಗ ಬತ್ತಿ ಮುಗಿದು ಹೋದರೆ ಅಂತ  ಅದೆಷ್ಟು ಸಂಕಟ ಗೊತ್ತೇನೇ. ಖಾಲಿಯಾದರೆ ಅನ್ನುವ ಭಯ. ಮತ್ತೆ ಮಾಡಿಕೊಡಲು, ಹೊರಡುವಾಗ ತಂದು ಬ್ಯಾಗ್ ಗೆ ಹಾಕಲು ನೀನು ಇಲ್ಲ ಅನ್ನುವ ಸತ್ಯ ನೆನಪಾಗಿ ಬತ್ತಿಯನ್ನು ಮುಂದಕ್ಕೆ ಮಾಡುವ ಕೈ ಹಿಂದಕ್ಕೆ ಬರುತ್ತದೆ. ಕಡ್ಡಿ ಗೀರುವಾಗ ನಡುಗುತ್ತದೆ. ಅಗ್ನಿ ಪ್ರತ್ಯಕ್ಷ ದೈವ, ನಾವು ಮಾಡುವ ಹೋಮವನ್ನು, ಪ್ರಾರ್ಥನೆಯನ್ನು ಆಯಾ ದೇವರಿಗೆ ತಲುಪಿಸುವವ ಕೂಡಾ ಅಂತ ಪುರೋಹಿತರು ಹೇಳುವಾಗಲೆಲ್ಲ ಬೆರಗು ಕಣ್ಣಿನಿಂದ ನೋಡುತ್ತಾ, ಇನ್ನಷ

pulwama Hosadiganta

ಇನ್ನೂ ಪುಲ್ವಾಮದ ಘಟನೆಯಲ್ಲಿ ಬಲಿದಾನವಾದ ಸೈನಿಕರ ಚಿತೆ ಆರಿಲ್ಲ, ಬಿಸಿ ಇಳಿದಿಲ್ಲ ಅದರ ಮುನ್ನವೇ ರಣಹದ್ದುಗಳ ಕೇಕೆ ಶುರುವಾಗಿದೆ. ಗಡಿರೇಖೆಯಲ್ಲಿನ ಉಗ್ರರು ನಿರ್ನಾಮವಾಗುವ ಹೊತ್ತಿಗೆ ಇಲ್ಲೇ ಗಡಿ ಒಳಗಿನ ಉಗ್ರರ ಮುಖವಾಡ ಕಳಚಿ ಬೀಳುತ್ತಿದೆ. ದೇಶಕ್ಕೆ ದೇಶವೇ ಒಂದಾಗಿ ನಿಲ್ಲುವ ಸಮಯದಲ್ಲಿ ನಿಂತವರ ಸ್ಥೈರ್ಯ ಕುಗ್ಗಿಸುವ, ಮೋದಿಯನ್ನು ಹಣಿಯಲು ಅವಕಾಶ ಸಿಕ್ಕಿತೆಂದು ದೇಶದ ಮಾನವನ್ನೇ ಹರಾಜು ಹಾಕುತ್ತಿರುವ ಪಡೆ ಅಟ್ಟಹಾಸ ಮಾಡುತ್ತಿದೆ. ಯೋಧರ ಬಲಿದಾನವನ್ನು ಅವಮಾನ ಮಾಡಿ ಉಗ್ರನ ಸಾವಿಗೆ ಸಂತಾಪ ಸೂಚಿಸುತ್ತಿದೆ. ಗಡಿ ಆಚೆಯ ಶತ್ರುಗಳನ್ನು ಎದುರಿಸಬಹುದು ಈ ಒಳಗಿನ ಶತ್ರುಗಳದ್ದೇ ಕಷ್ಟ. ಆಗೆಲ್ಲಾ ಇಸ್ರೇಲ್ ನೆನಪಾಗುತ್ತದೆ. ಪುಟ್ಟ ದೇಶದ ಸ್ವಾಭಿಮಾನ ಕಣ್ಣೆದೆರು ಕಾಣಿಸುತ್ತದೆ, ಜೊತೆ ಜೊತೆಗೆ ನಮಗ್ಯಾಕೆ ಸಾಧ್ಯವಿಲ್ಲ ಅನ್ನುವ ಪ್ರಶ್ನೆಯೂ ಕಾಡುತ್ತದೆ. ಇಡೀ ಜಗತ್ತಿನಲ್ಲಿ ಅಧಿಕ ಶಸ್ತ್ರಾಸ್ತ ಖರೀದಿಸುವ ಪಟ್ಟಿಯಲ್ಲಿ ಜಾಗ ಪಡೆದು ಭಾರತ ಯಾಕೆ ಸುಮ್ಮನಿದೆ ಎನ್ನುವ ರೋಷವೂ, ಯುದ್ಧ ನಡೆಸಿ ಪಾಕಿಸ್ತಾನವನ್ನು ಧೂಳಿಪಟ ಮಾಡಬಾರದೆ ಅನ್ನುವ ಆಕ್ರೋಶವೂ ಸಾಮಾನ್ಯರನ್ನು ಕಾಡುವ ಹೊತ್ತಿಗೆ, ರಕ್ತ ಕುದಿಯುವ, ಸಂಕಟ ಉರಿಯುವ ಸಮಯದಲ್ಲೇ ಅದಕ್ಕೆ ತುಪ್ಪ ಸುರಿಯುವಂತೆ ಮಾಡುವುದು  ಉಗ್ರರನ್ನು ಯೋಧರಿಗೆ, ಯೋಧರನ್ನು ಉಗ್ರರಿಗೆ ಹೋಲಿಸಿ ಮಾತಾಡುವವರ ದೊಡ್ಡ ಪಡೆಯೇ ಇದೆ. ಮತ್ತು ಅವರೆಲ್ಲರೂ ಉನ್ನತ ಹುದ್ದೆಗಳಲ್ಲಿ , ರಾಜಕೀಯ ಪಕ್ಷದಲ್ಲಿ, ಬೋಧಿಸುವ ಸ್ಥ

ಪುಲ್ವಾಮ

ಮೊನ್ನೆಯ ಪುಲ್ವಾಮ ಘಟನೆಗಿಂತ ಹೆಚ್ಚು ಭೀಭತ್ಸ ಎನ್ನಿಸಿದ್ದು ಅದನ್ನು ಸಮರ್ಥಿಸುವ ಒಳಗಿನ ಉಗ್ರರು. ಇಡೀ ದೇಶವೇ ಬೆಚ್ಚಿಬೀಳುವ, ಸಂಕಟ ಪಡುವ ಹೊತ್ತಿನಲ್ಲೇ ಸಾವಿನ ಮನೆಯ ಚಿತೆಯಲ್ಲಿ ಬೇಳೆ ಬೇಯಿಸಿಕೊಳ್ಳುವ ಗುಂಪು ಮೋದಿಯನ್ನು ಹಣಿಯುವ ಅವಕಾಶ ಸಿಕ್ಕಿದ್ದಕ್ಕೆ ಅಕ್ಷರಶಃ ಹೆಣಕಂಡ ರಣಹದ್ದುಗಳಂತೆ ಕೇಕೆ ಹಾಕಿ ಸಂಭ್ರಮಿಸಿ ಒಂದಾಗಿ ನಿಂತು ದನಿ ಎತ್ತುವ ಸಮಯದಲ್ಲಿ ಅಪಸ್ವರ ಎತ್ತಿದ್ದು ಜೀರ್ಣಿಸಿಕೊಳ್ಳಲಾಗದ ವಿಷವೇ. ಮೈಯಲ್ಲಿ ರಕ್ತ ಹರಿಯುವ ಪ್ರತಿಯೊಬ್ಬರೂ ಪ್ರತಿಕಾರದ ಮಾತಾಡುತ್ತಿದ್ದರೆ ಇವರು ಮಾತ್ರ ಉಗ್ರರನ್ನು ಯೋಧರ ಸಮಕ್ಕೆ ಹೋಲಿಸಿ ಅವರಿಗೂ ಕಾರಣಗಳಿವೆ ಎಂಬಲ್ಲಿಂದ ಹಿಡಿದಿ ಅಲ್ಲಿನ ಜನಮತ ಪಡೆದು ಕಶ್ಮೀರವನ್ನು ಬಿಟ್ಟುಕೊಡಬೇಕು ಎನ್ನುವವರೆಗೂ ಹೋಗಿದ್ದಾರೆ. ಯಾವಜನಮತ ಯಾರಿಗೆ ಎಂದರೆ ಮತ್ತೆ ಇವರ ಅನುಕಂಪ ತಿರುಗುವುದು ಅಲ್ಲಿಂದ ಓಡಿಸಿದ ಕಾಶ್ಮೀರಿ ಪಂಡಿತರ ಬಗೆಗಲ್ಲ ಅಲ್ಲಿ ಅವರನ್ನು ಓಡಿಸಿ, ನಾಶಮಾಡಿದ ಮುಸ್ಲಿಂ ಗಳ ಬಗ್ಗೆ, ಉಗ್ರಗಾಮಿಗಳಾಗಿ ತಯಾರಾದವರ ಬಗ್ಗೆ. ಗೆಳತಿಯೊಬ್ಬರ ಜೊತೆ ಮಾತಾಡುವಾಗ ಅವರು ಇಂಥಹುದೇ ಒಂದು ಉದಾಹರಣೆ ಹೇಳುತ್ತಿದ್ದರು. ಬಹಳ ಹಿಂದೆ ಸೈಟ್ ತೆಗೆದುಕೊಳ್ಳುವಾಗ  ಕಸ್ತೂರಿ ನಗರದಲ್ಲಿ ತೋರಿಸಿದವರಿಗೆ ಇಲ್ಲಿ ಬೇಡಾ ಇಲ್ಲಿ ತಮಿಳರು ಜಾಸ್ತಿ ಹೊಂದಿಕೆ ಆಗುವುದಿಲ್ಲ, ಕನ್ನಡಿಗರು ಇರುವ ಏರಿಯ ತೋರಿಸಿ ಎಂದಾಗ ಅವರಂದಿದ್ದರಂತೆ. ನೀವು ಹೀಗೆ ಬಿಟ್ಟು ಕೊಟ್ಟು ಹೀಗಾಗಿರುವುದು. ನಾಳೆ ಇದು ಅವರದೇ ಜಾಗವಾಗಿ ಹೋದರೆ ಏ

ಪ್ರೇಮಿಗಳ ದಿನ

ಬಾಯಿಂದ ಬಾಯಿಗೆ, ಮನೆಯಿಂದ ಮನೆಗೆ, ಊರಿನಿಂದ ಊರಿಗೆ ಹಬ್ಬುತ್ತಾ ಬಂದ ಕೃಷ್ಣನ ಪರಾಕ್ರಮ ಮಥುರೆಯ ಅರಮನೆಯನ್ನು ಸೇರಿ ಕಂಸನ ಕಿವಿಗೆ ಬೀಳಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ತನ್ನ ಬಲ ಕ್ಷೀಣಿಸುವಷ್ಟೇ ವೇಗವಾಗಿ ಬೆಳೆಯುತ್ತಿರುವ ಅವನ ಪ್ರಸಿದ್ಧಿ ಕಂಡು ಅವ್ಯಕ್ತ ಭಯವೊಂದು ಮೈಯೆಲ್ಲಾ ಆವರಿಸಿ ಕಂಸ ಇಂಚಿಚೇ ಸಾಯುತ್ತಿರುವ ಹೊತ್ತಿಗೆ ಇನ್ನು ನೇರವಾಗಿ ಎದುರಿಸುವುದೊಂದೇ ದಾರಿ ಎಂಬ ಅರಿವು ಮೂಡಿತ್ತು. ಅದರ ಫಲವಾಗೇ ಅಕ್ರೂರ ಕೃಷ್ಣ ಬಲರಾಮರನ್ನು ಮಥುರೆಗೆ ಕರೆದು ತರಲು ದ್ಯೂತ ವಹಿಸಿ ಹೊರಟಿದ್ದ. ಅತ್ತ ಅಕ್ರೂರ ಕ್ರೂರಿಯೇ ಆಗಿಬಿಟ್ಟಿದ್ದ ಅವರ ಪಾಲಿಗೆ. ತಮ್ಮ ಜೊತೆಗಾರ, ಗೆಳೆಯ, ಪ್ರೇಮಿ, ಮಗು, ಕನಸು,  ಹೀಗೆ ಪ್ರತಿಯೊಬ್ಬರ ಪಾಲಿಗೂ ಒಬ್ಬೊಬ್ಬನಾಗಿ ಅವರ ಬದುಕಿನ ಭಾಗವಾಗಿಯೇ ಹೋಗಿದ್ದ ಕೃಷ್ಣನನ್ನು ಕಳಿಸುವುದು, ಉಸಿರು ನಿಲ್ಲಿಸುವುದು ಎರಡೂ ಒಂದೇ ಆಗಿದ್ದ ಅವರಿಗೆ ಅಕ್ರೂರನ ಹಿತವಚನ ಕೇಳಿಸುವುದಾದರೂ ಹೇಗೆ? ನೋವಿಗೆ ಕಿವಿ ಮಂದವಂತೆ... ನಿಧಾನಕ್ಕೆ, ಜೋರಾಗಿ, ಅರ್ಥವಾಗುವ ಹಾಗೆ ಎಲ್ಲವನ್ನೂ ಹೇಳಿ ಅವರನ್ನು ಒಪ್ಪಿಸಲು ಸೋತ ಅಕ್ರೂರ ಕೊನೆಗೆ ರಾಜಾಜ್ಞೆಯ ಭಯ ಹೇರುತ್ತಾನೆ. ಹೊರಟ ಕೃಷ್ಣನನ್ನು ತಡೆಯಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿ ವಿಫಲರಾದ  ಗೋಪಿಕೆಯರಿಗೆ ಕೊನೆಯ ಅಸ್ತ್ರವಾಗಿ ಕಂಡಿದ್ದು ರಾಧೇ. ರಾಧೆಯ ಪ್ರೀತಿಗೆ ಕೃಷ್ಣ ಕಟ್ಟು ಬೀಳದೆ ಇರುವನೇ ಅನ್ನುವ ಆಸೆಯೊಂದು ಹೆಡೆಯಾಡುವ ಹೊತ್ತಿಗೆ ಅವರೆಲ್ಲರೂ ರಾಧೆಯ ಮುಂದೆ ಬೊಗಸೆಯೊಡ್ಡಿ ನ

ಯಾದ್ ವಶೇಮ್

ಗೆದ್ದವರು ಇತಿಹಾಸ ಬರೆಯುತ್ತಾರೆ, ಅವರು ಬರೆದದ್ದೇ ಇತಿಹಾಸವಾಗುತ್ತದೆ. ವಾರಾಹಿ ಮುಳುಗಿಸಿದ ಊರು ಬಿಟ್ಟ ಬಂದ ಮೇಲಿನಿಂದ ಇಂದಿನವರೆಗೂ ನಿಮ್ಮೂರು ಯಾವುದು ಎಂದರೆ ಒಂದು ಕ್ಷಣ ತಡಬಡಿಸುವ ಹಾಗಾಗುತ್ತದೆ. ಮನಸಿಗೆ ಅನಾಥ ಭಾವ ಕಾಡುತ್ತದೆ.ಯಾವುದು ಹೇಳಲಿ ಎಂದು ಮನಸ್ಸು ಗೊಂದಲಕ್ಕೆ ಬೀಳುತ್ತದೆ. ಅಲ್ಲಿ ಹೋಗಲಾರೆ, ಇದನ್ನು ಒಪ್ಪಿಕೊಳ್ಳಲಾರೆ,  ಇಲ್ಲಿರುವುದು ನನ್ನೂರು ಅಲ್ಲ ಅನ್ನುವ ಅಪರಿಚಿತೆಯಲ್ಲಿ ಬದುಕು ಕೊನೆಯ ತನಕ ಸಾಗುತ್ತದೆ. ಹಾಗಾದರೆ ದೇಶ, ಹೆತ್ತವರು, ಬಂಧು ಬಳಗ ಎಲ್ಲವನ್ನೂ ಬಿಟ್ಟು ಕೊನೆಗೆ ತನ್ನದೇ ಆದ ಗುರುತು ಬಿಟ್ಟು ಬದುಕುವುದು ಇದೆಯಲ್ಲ ಅದು ಹೇಗಿರುತ್ತದೆ ಅನ್ನುವುದಕ್ಕೆ ಯಾದ್ ವಶೇಮ್ ಓದಬೇಕು. ನಾಜಿಗಳ ಕ್ರೌರ್ಯ, ಯಹೂದಿಗಳ ಪರದಾಟ, ಅವರು ಅನುಭವಿಸುವ ಅನಾಥ ಭಾವ, ಜೀವ ಉಳಿಸಿಕೊಳ್ಳಲು ಪಡುವ ಹೆಣಗಾಟ, ಅನುಭವಿಸುವ ಹಿಂಸೆ, ಪಟ್ಟ ಸಂಕಟ  ಮೈ ಮರಗಟ್ಟುವ ಹಾಗೆ ಮಾಡುತ್ತಲೇ ಮುಂದೆ ಓದಲಾಗದೆ, ಹಾಗೆ ಇಡಲೂ ಆಗದೆ ಹುಟ್ಟಿಸುವ ತಲ್ಲಣ, ಇದು ನಿಜವಲ್ಲ ಕೇವಲ ಕತೆ  ಎಂದು ಮನಸ್ಸಿಗೆ ಸುಳ್ಳು ಸಮಾಧಾನ ಮಾಡುತ್ತಲೇ ಮುಂದೆ ಓದಲು ಹೋದರೆ ಕಣ್ಣೂ ಮಂಜಾಗಿ ಮುಷ್ಕರ ಹೂಡುತ್ತದೆ. ಪುಟ ತಿರುಗಿಸುವುದು ಕಷ್ಟವಾಗುತ್ತದೆ. ಗುರುತು ಬದಿಗಿಟ್ಟು ಬದುಕುವುದು ಸುಲಭವಾ.... ಉಹೂ ಅದು ಅನಿವಾರ್ಯ. ಅಂತ ಬದುಕು ಶಿವನಲ್ಲ, ಶವ. ಉಸಿರು ಮಾತ್ರ ಆಡುತ್ತದೆಯೇ ಹೊರತು ಒಳಗಿನ ಅಂತಸತ್ವ ಎಂದೋ ಉಸಿರುಗಟ್ಟಿರುತ್ತದೆ. ಬಿಟ್ಟು ಬಂದ ಬದುಕಿಗಾಗಿ, ಹಂ