Posts

Showing posts from September, 2017

ರೇಡಿಯೋ

ರಾತ್ರಿಯಿಡಿ ತಬ್ಬಿ ಮಲಗಿದ್ದರೂ ಬೆಳಿಗ್ಗೆ ಅವಳು ಏಳದೇ ನಾನೂ ಏಳುವ ಹಾಗಿಲ್ಲ ಅನ್ನೋ ಅಹಿಯ ರೂಲ್ ಅವಳು ಸ್ಕೂಲ್ ಗೆ ಹೋಗುವವರೆಗೂ ನಡೆದಿತ್ತು. ಈಗ ಅಮ್ಮ ಅವಳ ಟಿಫನ್ ಬಾಕ್ಸ್ ರೆಡಿ ಮಾಡ ಬೇಕಿರುವುದರಿಂದ ಏಳಲು ವಿನಾಯತಿ ದೊರಕಿದರೂ ಎಬ್ಬಿಸುವ ಮುನ್ನ ಹತ್ತು ನಿಮಿಷವಾದರೂ ಮತ್ತೆ ಅವಳ ಜೊತೆ ಮಲಗಿ ಮುದ್ದು ಮಾಡಿ, ಮೈಮೇಲೆ ಹತ್ತಿ ಕರಡಿಯಂತೆ ಅವಚಿಕೊಂಡು ಎದ್ದ ಮೇಲೆ ಒಂದು ಬಿಗಿ ಅಪ್ಪುಗೆ ಸಿಕ್ಕಿದರೆ ಮಾತ್ರ  ಅವಳಿಗೆ ನೆಮ್ಮದಿ. ಇಲ್ಲವಾದಲ್ಲಿ ಇಡಿ ದಿನ ಕಿರಿಕಿರಿ ತಪ್ಪಿದ್ದಲ್ಲ. ರಜೆ ಇದ್ದ ದಿನ ಅದೆಷ್ಟೇ ಕಷ್ಟವಾದರೂ ಅವಳು ಏಳೋಣ ಆಯ್ತು ಅನ್ನುವವರೆಗೂ ಹಾಸಿಗೆ ಬಿಡುವ ಹಾಗಿಲ್ಲ. ಅಪ್ಪಿ ತಪ್ಪಿ ರೂಲ್ ಮುರಿದರೆ ಆದರೆ ಅವತ್ತು ಮನೆಯಲ್ಲಿ ಮೂರನೇ ಮಹಾಯುದ್ಧ. ಆಗೆಲ್ಲಾ ನನ್ನ ಬಾಲ್ಯ ನೆನಪಾಗುತ್ತೆ. ಬೆಳಿಗ್ಗೆ ರೇಡಿಯೋ ಆನ್ ಆದರೆ ಅಲಾರಂ ಅನ್ನೋದಕ್ಕಿಂತ ಸೈರನ್ ಇದ್ದಂತೆ. ಹಾಸಿಗೆಯನ್ನು ಮಡಚಿ ಎದ್ದು ಹೊರಡಲೇ ಬೇಕು. ಬೈಯೋದು ಇರಲಿ ಇನ್ನೂ ಎದ್ದಿಲ್ವಾ ಅನ್ನೋ ಗಡಸು ದನಿಯ ಭಯಕ್ಕೆ ಮಳೆಯಾಗಲಿ, ಚಳಿಯಾಗಲಿ ಎದ್ದು ಬಚ್ಚಲಿನತ್ತ ನಡೆಯುತ್ತಿದ್ದೆವು. ಸೂರ್ಯ ಉದಯಿಸಿದ ಮೇಲೆ ಹಾಸಿಗೆಯ ಮೇಲೆ ಬಿದ್ದಿರುವುದು ಅನಿಷ್ಟ ಅನ್ನೋ ನಂಬಿಕೆ ಅದೆಷ್ಟು ಕೋಪ ಉಕ್ಕಿಸುತ್ತಿತ್ತೆಂದರೆ ಸೂರ್ಯನಿಗೆ ಸಹಸ್ರನಾಮ ಮಾಡುತ್ತಲೇ ಸ್ವಾಗತಿಸುತ್ತಿದ್ದೆವು. ಯಾರಿಗೂ ಇಲ್ಲದ ಸಮಯಪಾಲನೆ ಇವನಿಗೆ, ಒಂಚೂರು ಲೇಟ್ ಆಗಿ ಬಂದಿದ್ರೆ ಏನಾಗ್ತಾ ಇತ್ತು ಅಂತ ಬೈದು ಮುಗಿಸುವ ವೇ
ಒಂದಷ್ಟು ವರ್ಷಗಳಾದ ಮೇಲೆ ನೆನಪು ಆಪ್ತವೆನಿಸುತ್ತಾ ಹೋಗುತ್ತೇನೋ ಅಂತ ಅನ್ಸಿದ್ದು ವಸುಧೇಂದ್ರ ಅವರ ನಮ್ಮಮ್ಮ ಅಂದ್ರೆ ನಂಗಿಷ್ಟ ಅನ್ನೋ ಪುಸ್ತಕ ಓದಿ ಕೆಳಗಿಟ್ಟಾಗಲೇ. ವಯಸ್ಸಾಗುತ್ತಾ ಹೋದಂತೆ ಬಾಲ್ಯದ ಕಾಡುವಿಕೆಯೂ ಜಾಸ್ತಿ ಆಗುತ್ತೆ. ಹೀಗ್ಯಾಕೆ ಅನ್ನೋ ಪ್ರಶ್ನೆ ಕಾಡಿದರೂ ಉತ್ತರ ಹುಡುಕುವ ತಾಳ್ಮೆ ಧೈರ್ಯ ಎರಡೂ ಇಲ್ಲವಾದ್ದರಿಂದ ಆ ಪ್ರಶ್ನೆ ಎದುರಾದ ಕೂಡಲೇ ಬಾಗಿಲಲ್ಲಿ ಎದುರಾದ ಸೇಲ್ಸ್ಮ್ಯಾನ್ ಗೆ ಬೇಡಾ ಎಂದು ಹೇಳಿ ಬಾಗಿಲು ಮುಚ್ಚುವಷ್ಟು ವೇಗದಲ್ಲೇ ಮನದ ಬಾಗಿಲು ಮುಚ್ಚಿ ಬಿಡುತ್ತೇನೆ. ಸಾಮಾನ್ಯ ಅನ್ನಿಸುವ ವಿಷಯವನ್ನೂ ಮನಮುಟ್ಟುವಷ್ಟು ಆಪ್ತವಾಗಿ ಬರೆಯುವ ಅವರ ಶೈಲಿ ಮನಸ್ಸಿನೊಳಗೆ ಇಳಿದು ನೆನಪಿನ ಬೇರನ್ನು ಕೆದಕುವ ಹಾಗೇ ಮಾಡುತ್ತೆ. ಅರಿವಿಲ್ಲದಂತೆ  ನಮ್ಮ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಿಕೊಳ್ಳುವ ಹಾಗೆ ಆಗುತ್ತೆ. ಬದುಕು ಸುಲಭವಾಗುತ್ತಾ ಹೋದಂತೆ ಬಾಲ್ಯವೂ ಬಡವಾಗುತ್ತಾ, ನೆನಪಿನ ಬುತ್ತಿ ಖಾಲಿಯಾಗುತ್ತಾ ಹೋಗುತ್ತಿದೆಯಾ ಅನ್ನೋ ಆಲೋಚನೆ ಒಮ್ಮೆ ಮೈ ನಡುಗುವ ಹಾಗೆ ಮಾಡಿದ್ದಂತೂ ಸತ್ಯ. ಯಾವುದನ್ನೇ ಪಡೆದುಕೊಳ್ಳಬೇಕಾದರೂ ಕಾದು, ಕಷ್ಟಪಟ್ಟು ಕನವರಿಸಿ ಅದಕ್ಕಾಗಿ ಒಂದಷ್ಟು ತ್ಯಾಗ ಮಾಡಿ ಅದು ದಕ್ಕಿದಾಗ ಸಿಗುವ ಸಂತಸ, ಅದನ್ನು ಕಾಪಿಟ್ಟುಕೊಳ್ಳುವಲ್ಲಿಯಲ್ಲಿ ಜೋಪಾನ, ಮತ್ತದನ್ನು ನೋಡಿದಾಗಲೆಲ್ಲಾ ಚೆಲ್ಲಾಡುವ ನೆನಪುಗಳು ಅದರೊಂದಿಗೆ ಸದಾ ಒಂದು ಮಧುರ ಭಾಂಧವ್ಯವನ್ನು ಏರ್ಪಡಿಸಿರುತ್ತದೆ. ಪ್ರೀತಿ ಮತ್ತು ಹೆಮ್ಮೆ ಸದಾ ಅದರ ಜೊತ
ಮನೆಯ ಹತ್ತಿರ ಬರುವಾಗಲೇ ಅವನ ಕಣ್ಣುಗಳು ಮಗಳನ್ನು ಅರಸುತ್ತಿದ್ದವು. ಅವನೂ ಮನೆಯಲ್ಲಿರುವಷ್ಟು ಹೊತ್ತು ಮಗಳು ಅವನ ಕಣ್ಣಂಚಿನ ಪರಿಧಿಯಲ್ಲೇ ಇರಲು ಬಯಸುತಿದ್ದ. ರಾತ್ರಿ ಮಲಗುವಾಗಲೂ ಎದೆಯ ಮೇಲೆಯೇ ಮಲಗಿಸಿಕೊಂಡು ನಿದ್ರೆ ಹೋಗುತಿದ್ದ. ನಡೆಯುವಾಗ ಅವಳ ಪುಟ್ಟ ಕೈ ಅವನ ಅಂಗೈಯಲ್ಲಿ ಇರಲೇಬೇಕಿತ್ತು. ಅಂತ ಅಪ್ಪ ತನ್ನೆಲ್ಲಾ ಧೈರ್ಯ, ದಿಟ್ಟತನವನ್ನು ಆ ಬೆರಳುಗಳ ಮೂಲಕವೇ ಅವಳ ಮೈಯಲ್ಲಿ ಸೇರಿಸಿದ್ದನಾ..... ಆಗಿನ್ನೂ ನಾಲ್ಕು ಬೆಂಚ್ಗಳಿದ್ದ ಒಂದೊಂದು ಬೆಂಚ್ ಒಂದೊಂದು ತರಗತಿಯನ್ನು ಪ್ರತಿನಿಧಿಸುತಿದ್ದ ಒಂದೇ ರೂಂ ನ ಏಕೋಪಾಧ್ಯಾಯ ಶಾಲೆಯಿಂದ ಬಂದು ಹೊಸ ಊರಿನ ಹೊಸ ಶಾಲೆಗೇ ಸೇರಿ ಅಲ್ಲಿಗೆ ಒಗ್ಗಿಕೊಳ್ಳಲು ಪ್ರಯತ್ನಿಸಿದ್ದ ಸಮಯ. ಯಾವುದಕ್ಕೇ ಭಂಗವಾದರೂ ಶಾಲೆ ಮುಗಿದ ಒಂದು ಗಂಟೆಯ ಸಮಯ ಮಾತ್ರ ಸಂಪೂರ್ಣವಾಗಿ ಆಟಕ್ಕೆ ಮೀಸಲಾಗಿತ್ತು. ಯಾವ ಮಗುವೂ ಆಡದೆ ಸುಮ್ಮನೆ ಕುಳಿತಿರುವ ಹಾಗಿಲ್ಲ. ಶಿಕ್ಷಕರ ಎಚ್ಚರದ ಕಣ್ಣು ಗಮನಿಸಿ ಆಡಲು ಕಳಿಸುತಿದ್ದರು. ಇಂತಿರ್ಪ ಕಾಲದಲ್ಲಿ ಪಿ.ಟಿ ಸರ್ ಖೋ ಖೋ ಆಟ ಆಡಿಸುತ್ತಿರುವಾಗ ನಮ್ಮ ಗ್ಯಾಂಗ್ ಅಯ್ಯೋ ಇದೇನು ಮಹಾ ಅಂತ ಕುಂಟೆಪಿಲ್ಲೆ ಆಡುವುದರಲ್ಲಿ ವ್ಯಸ್ತವಾಗಿತ್ತು. ಅದರಲ್ಲೂ ಆ ಆಟದಲ್ಲಿ ನಾನು ಇಡೀ ಸ್ಕೂಲ್ ಗೆ ವರ್ಲ್ಡ್ ಫೇಮಸ್ ಆಗಿದ್ದವಳು. ಒಂದೇ ಉಸಿರಿಗೆ ಅಷ್ಟನ್ನೂ ಮುಗಿಸುವ ಭರದಲ್ಲಿ ಏಕಾಗ್ರವಾಗಿ ಆಡುವ ಹೊತ್ತಿಗೆ ಬ್ರೆಕಿಂಗ್ ನ್ಯೂಸ್ ಬಂದಿತ್ತು. ಆಗಿನ್ನೂ ಕ್ಯಾಮೆರಾಮೆನ್ ಗಳು, ವೀಡಿಯೊಗಳು ಬಂದಿರ
ಆತ್ಮೀಯರ ಜೊತೆಗೆ ಎಲ್ಲೋ ಹೋಗುತಿದ್ದೆವು. ಹರಟೆಯ  ನಡುವೆ  ಅದೆನಕ್ಕೋ ತಿರುಗಿದಾಗ ಕೈಯಲ್ಲಿ ಬ್ಯಾಗ್ ಹಿಡಿದು ನಿಧಾನಕ್ಕೆ ನಡೆಯುತ್ತಿದ್ದ ಅವರು ಕಂಡಕೂಡಲೇ ಆಲ್ಮೋಸ್ಟ್ ಕಿರುಚಿದ್ದೆ ಕಾರ್ ನಿಲ್ಲಿಸಿ ಒಂಚೂರು ಅಂತ. ಮಾತಿನ ಮಳೆಯಲ್ಲಿ ಮುಳುಗಿದ್ದವಳಿಗೆ ಕಾರ್ ನ ವೇಗ ಹೆಚ್ಚಾಗಿತ್ತು ಅಂತ ಅರ್ಥವಾಗಿದ್ದು ಕಾರ್ ನಿಂತು ಕೆಳಗಿಳಿದು ದಿಟ್ಟಿಸಿದಾಗ ಆವ್ಯಕ್ತಿಯಿಂದ  100 ಮಿ, ಗೂ ಹೆಚ್ಚು ದೂರ ಬಂದಾಗಿದೆ ಅಂತ ಗೊತ್ತಾದಾಗಲೇ. ಒಂದೇ ಉಸಿರಿಗೆ ಓಡಿ ಅವರ ಎದುರು ನಿಂತು ಸಾರ್ ನೀವಿಲ್ಲಿ ಎಂದಾಗ ಅವರ ಕಣ್ಣಲ್ಲೂ ಅಚ್ಚರಿಯ ಮಿಂಚು, ಹಿಂದೆಯೇ ಸಣ್ಣ ಮಳೆ. ಒಂದು ಕ್ಷಣ ಇಬ್ಬರೂ ಮಾತಾಡದೇ ಒಬ್ಬರನೊಬ್ಬರು ದಿಟ್ಟಿಸುತ್ತಾ ಮೌನವಾಗಿ ನಿಂತಿದ್ದೆವು. ಸಂತಸವಾ, ಬೆರಗಾ, ಆಶ್ಚರ್ಯವಾ ಉಹೂ ಅದು ಭಾವಗಳ ಸಮ್ಮಿಲನ. ಸುಧಾರಿಸಿಕೊಂಡ ಅವರು ಹತ್ತಿರಕ್ಕೆ ಬಂದು ತಲೆನೇವರಿಸಿ ಪುಟ್ಟಾ ನೀನು ಅಂದಾಗಲೇ ವಾಸ್ತವಕ್ಕೆ ಮರಳಿದ್ದು. ಮಾತಾಡಿ ವಿಳಾಸ ತೆಗೆದುಕೊಂಡು ಬಂದು ಕಾರ್ ಹತ್ತಿದ ಕೂಡಲೇ ಪ್ರಶ್ನೆ ಎದುರಾಗಿತ್ತು ಯಾರ್ರಿ ಅವರು ಹಾಗೆ ಓಡಿದ್ರಿ ಅಂತ. ಅವರು ನನ್ನ ಹೈಸ್ಕೂಲ್ ಟೀಚರ್ ಅಂದ ಕೂಡಲೇ ಆ ಹಳೆ ಟೀಚರ್ ಗಾಗಿ ದಾರಿ ಮಧ್ಯೆ ಕಾರ್ ನಿಲ್ಲಿಸಿ ಓಡಿದ್ರಾ ಅಂದ್ರು. ಹೇಗೆ ಹೇಳೋದು? ನಾವು ಶಾಲೆಗೇ ಹೋಗುತಿದ್ದ ದಿನಗಳಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೆ ಕೇವಲ ನಮ್ಮ ಪರಿಚಯ ಮಾತ್ರ ಇರ್ತಾ ಇರ್ಲಿಲ್ಲ, ನಮ್ಮ ಮನೆ, ಮನೆಯವರು, ಅರ್ಥಿಕ ಪರಿಸ್ಥಿತಿ, ಮನಸ್ಥಿತಿ ಎಲ್ಲದರ ಅ
ನಡು ರಾತ್ರಿಯಲ್ಲಿ ದಿಗ್ಗನೆ ಎಚ್ಚರಾದಾಗ ನೋಡಿದರೆ ಮಳೆ ಸುರಿಯುತಿತ್ತು. ಅದು ಸುರಿಯವ ರಭಸಕ್ಕೆ, ಹೊಮ್ಮುವ ಶಬ್ದಕ್ಕೆ ಒಂದ್ಸಲ ನಾನು ಊರಲ್ಲಿ ಇದಿನಾ ಅನ್ನೋ ಸಂದೆಹವಾಗಿ ಕಣ್ಣುಜ್ಜಿ ನೋಡಿದರೆ ಉಹೂ ಇದು ಬೆಂಗಳೂರೇ.. ಕಿಟಕಿಗೆ ಮುಖ ಒಡ್ಡಿದರೆ ತಣ್ಣಗೆ ಸುಳಿಯುವ ಗಾಳಿಯ ಜೊತೆಗೆ ಚಿಮ್ಮುವ ಹನಿಗಳು ಮುತ್ತಿಕ್ಕಿದವು. ನೆನಪು ಹನಿಯ ಜೊತೆ ಸರ್ರನೆ ಬಾಲ್ಯಕ್ಕೆ ಜಾರಿತು. ಮಲೆನಾಡಿನ ಮಳೆಯೆಂದರೆ ಅದು ಮಂದ್ರದಿಂದ ಶುರುವಾಗಿ ತಾರಕ್ಕಕ್ಕೆ ಏರುವಲ್ಲೂ ಶ್ರುತಿ ತಪ್ಪುವುದಿಲ್ಲ. ಬದುಕಿನ ಶ್ರುತಿ ಮಾತ್ರ ಆಗಾಗ ದಾರಿ ತಪ್ಪುತ್ತದೆ ಅಷ್ಟೇ. ಅದರಲ್ಲೂ ಬೆಳಗ್ಗಿನ ಜಾವದ ಮಳೆಯ ಹದವೆ ಬೇರೆ. ಮಳೆ ಜೋರಾದಷ್ಟೂ ಕಿವಿಗೆ ಹಿತ. ಹೊದ್ದ ಕಂಬಳಿಯನ್ನು ಇನ್ನಷ್ಟು ಸುತ್ತಿಕೊಂಡು ಮುದುರಿ ಮಲಗಿದರೆ ಆಹಾ ಸ್ವರ್ಗವೇ ಮಳೆಯೊಂದಿಗೆ ಇಳೆಗೆ ಇಳಿದಂತೆ. ಇನ್ನಿವತ್ತು ಸ್ಕೂಲ್ ಹೋಗುವ ಕೆಲಸವಿಲ್ಲ ಅನ್ನುವುದು ನೆನಪಾದರಂತೂ ಮಳೆಗಿಂತಲೂ ಮನಸ್ಸಿನ ಕುಣಿತವೇ ಜಾಸ್ತಿ. ಇಳಿವ ಮಳೆಯ ಜೊತೆ ಸೋಮಾರಿತನವೂ ಸೇರಿ ಇಡಿ ವಾತಾವರಣದಲ್ಲಿ ಆವರಿಸುವ ಮಂಜು ಬಚ್ಚಲೊಲೆಯ ಹೊಗೆಯೊಂದಿಗೆ ಸ್ಪರ್ದಿಸುತ್ತದೆ. ಉರಿ ತಾಕುವಷ್ಟು ಹತ್ತಿರಕ್ಕೆ ಸರಿವ ನಾಯಿಯೂ ಉರಿಯುತ್ತಿದೆಯೇನೋ ಎಂದು ಒಂದು ಕ್ಷಣ ಸಂದೇಹಹುಟ್ಟಿಸುವಷ್ಟು ಹತ್ತಿರಕ್ಕೆ ಸರಿದು ಅರೆತೆರೆದ ಕಣ್ಣಿನಿಂದ ಆಕಳಿಸುತ್ತಿರುತ್ತದೆ. ಕೊಟ್ಟಿಗೆಯಲ್ಲಿ ಮುದುರಿ ಮಲಗಿದ ದನಗಳಿಗೂ ಆಲಸ್ಯ. ಅಂತ ಮಳೆಗೂ ಶ್ರುತಿ ಹಿಡಿಯುವುದು ಅಡುಗೆ ಮನೆಯಲ್ಲಿ