Posts

Showing posts from June, 2020

ಬಿದಿರಿನ ಗಳ

ಎಲ್ಲ ಋಣನೂ ಹರ್ಕೋಬೇಕು ಕಣವ್ವ.... ಸುಲಭವಾ ಖಂಡಿತ ಅಲ್ಲ, ತೀರಾ ಕಷ್ಟವೂ ಅಲ್ಲ. ಒಂದು ರೀತಿಯಲ್ಲಿ ಇಲ್ಲಿ ಎಲ್ಲವೂ ಕ್ರಮಬದ್ಧ ಹಾಗೂ ನಿಯಮಬದ್ಧ. ಅದನ್ನು ಅರ್ಥಮಾಡಿಕೊಳ್ಳದೆ ದೂಷಿಸುತ್ತೇವೆ ಅಷ್ಟೇ. ಇದು ಇನ್ನಷ್ಟು ಅರ್ಥವಾಗೋದು ಬಿದಿರಿನ ಗಳ  ಓದುವಾಗ. ಮೊಮ್ಮಗನ ಮೇಲಿನ ಅಜ್ಜಿಯ ವ್ಯಾಮೋಹ, ಆ ಪ್ರೀತಿಗೆ ಓಗೊಟ್ಟು ಹೊರಡುವ ಮೊಮ್ಮಗ ದಾರಿಯಲ್ಲಿ ಅನಿರೀಕ್ಷಿತ(?) ಘಟನೆಯಲ್ಲಿ ಸಿಲುಕಿ ಮುಂದಿನ ಅಚ್ಚರಿಯ ಬೆಳವಣಿಗೆಗೆ ಕಾರಣನಾಗುತ್ತಾನೆ. ಅವನ ಆಗಮನ ಇನ್ನೊಂದು ಜೀವದ ಅಂತ್ಯಕ್ಕೆ ಕಾರಣವಾಗುವ ಸೂಚನೆ ಇಡೀ ಕಾದಂಬರಿ ಹೀಗೆ ಇಂಥ ಅನೂಹ್ಯ ತಿರುವುಗಳ ಸಂಗಮ. ಸೂಕ್ಷ್ಮವಾಗಿ ಕುರುಹು ಬಿಡುತ್ತಲೇ , ಹಾಗೆ ಬಿಡುತ್ತಲೇ ಮತ್ತೆ ಮುಚ್ಚಿಟ್ಟುಕೊಳ್ಳುತ್ತಾ ಒಂದು ಊರಿನ ಗ್ರಾಮೀಣ ಬದುಕಿನ ರೀತಿ ನೀತಿಗಳನ್ನು ತಿಳಿಸುತ್ತಾ ಹೋಗುತ್ತದೆ. ತಾಂತ್ರಿಕ ಲೋಕದ  ಮೋಹ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡಿರುತ್ತದೆ . ಕೆಲವರು ಆ ಮಾರ್ಗದಲ್ಲಿ ಚಲಿಸಿದರೂ ದಕ್ಕಿಸಿಕೊಳ್ಳುವುದು ಎಲ್ಲೋ ಕೆಲವು ಮಂದಿ ಮಾತ್ರ. ಆ ಲೋಕದ ವ್ಯವಹಾರಗಳೇ ವಿಚಿತ್ರ. ಸ್ವಾತ್ವಿಕತೆ ಉಳಿಸಿಕೊಂಡ ಜೀವಗಳು ಆ ದಾರಿಯನ್ನು ಪೂರ್ಣ ಒಪ್ಪಿಕೊಳ್ಳಲಾಗದೆ ಮೋಹ ಬಿಡಲಾಗದೆ ಚಡಪಡಿಸುತ್ತವೆ. ನರಸಪ್ಪನವರದ್ದು ಇದೆ ತೊಳಲಾಟ. ಆದರೆ ಅವರಿಗೆ ಸಿಕ್ಕ ಗುರುಗಳು ಈ ತೊಳಲಾಟ ಅರ್ಥ ಮಾಡಿಕೊಂಡು ಕೋಟೆಯೊಳಗೆ ಇದ್ದು ಯುದ್ಧ ಮಾಡು ಎಂಬ ಸೂಚನೆ ಕೊಟ್ಟು ಅದಕ್ಕಾಗಿ ತಯಾರಿ ಮಾಡುತ್ತಾರೆ. ನಮ್ಮ ನಮ್ಮ ಮಿತಿಗೆ ತಕ್ಕ ಹಾಗ
ಅಮ್ಮಯ್ಯ ಮಗಳು ಹೆರಿಗೆಗೆ ಬರ್ತಾಳೆ. ಬಾಣಂತನ ನೀವೇ ಮಾಡ್ಬೇಕು ಅಂತ ಯಾರಾದರೂ ಕೇಳಿದರೆ ಕ್ಷಣ ಮಾತ್ರವೂ ಆಲೋಚಿಸದೆ ಅದಕ್ಕೇನು ಆಯ್ತು ಯಾವಾಗ ಹೇಳಿ ಎನ್ನುತ್ತಿದ್ದಳು ಅವಳು. ನನಗೋ ಮೂಗಿನ ತುದಿಯಲ್ಲಿ ಸಿಟ್ಟು. ಮನೆ ಕೆಲಸ ಎಲ್ಲಾ ಬಿಟ್ಟು ಹೊರಡ್ತಾಳೆ ಅನ್ನೋದಕ್ಕಿಂತ ನಾನು ಬಂದಾಗ ಅವಳು ಇರೋಲ್ಲ ಅನ್ನೋದು ಹೆಚ್ಚು ಬಾಧೆಯ ವಿಷಯವಾಗಿರುತ್ತಿತ್ತು. ಅಲ್ಲಿಂದ ಅವಳ ಕೆಲಸ ಶುರುವಾಗುತ್ತಿತ್ತು. ಅದ್ಯಾವುದು ಕಾಯಿ, ನಾರು, ಬೇರು ಸಂಗ್ರಹ ಮಾಡೋದು ಖಾರ ಮಾಡೋದು ಆ ಘಮ ಒಂಥರಾ ಹಿತವಾಗಿದ್ದರೂ ಯಾರು ಕರೆದರೂ ಹೂ ಅಂತ ಹೊರಡ್ತಿಯಲ್ಲ ನಿಂಗೆ ಬುದ್ಧಿ ಇಲ್ವಾ ಎಂದು ರೇಗುತ್ತಿದ್ದೆ. ಪುಟ್ಟಿ ಹೆರಿಗೆ ಅನ್ನೋದು ಸೃಷ್ಟಿ ಕ್ರಿಯೆ ಕಣೆ.  ಅದಕ್ಕೆ ಬೇಕಾದ ಆರೈಕೆ ಮಾಡೋ ಅವಕಾಶ ಸಿಕ್ಕಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೇನಿದೆ ಹೇಳು ಅನ್ನುತ್ತಿದ್ದಳು. ಅವಳು ಮಗುವಿಗೆ ಎಣ್ಣೆ ನೀರು ಹಾಕುವುದು, ಆರೈಕೆ ಮಾಡುವುದು ಬಾಣಂತನದ ಖಾರ ಮಾಡುವುದರಲ್ಲಿ ಎತ್ತಿದ ಕೈ. ಎಷ್ಟೋ ಸಲ ಎಲ್ಲಿಯದಾರೂ ಸಿಕ್ಕವರು ತಮ್ಮ ಮಕ್ಕಳನ್ನೋ, ಮೊಮ್ಮಕ್ಕಳನ್ನೋ ಕರೆದುಕೊಂಡು ಬಂದು ನಮಸ್ಕಾರ ಮಾಡಲು ಹೇಳಿ ನಿಂಗೆ ಎಣ್ಣೆ ನೀರು ಹಾಕಿದವರು ಇವರೇ ಕಣೋ ಅನ್ನೋವಾಗ ಅವಳ ಕಣ್ಣಂಚು ತೇವವಾಗುತಿತ್ತು. ನಂಗೆ ನಗು ಬರುತಿತ್ತು. ನಿಮ್ಮ ಕೈಯಲ್ಲಿ ಬಾಣಂತನ ಮಾಡಿಸಿಕೊಂಡ ಮೇಲೆ ಕೇಳಬೇಕಾ ಆರಾಮಾಗಿ ಇದಾಳೆ ಅವಳು ಅಂತ ಯಾರಾದರೂ ಹೇಳುವಾಗ ಇವಳಿಗೆ ನೆಮ್ಮದಿ. ಹಾಗಾಗಿ ಎಷ್ಟೇ ಕೆಲಸವಿದ್ದರೂ ತೊಂದರೆಯಿ
ಕುದಿಕುದಿದು, ಉರಿದುರಿದು ಕೋಪ ಮುಗಿಯಿತೋ ಅಥವಾ ಮನೆಗೆ ಸಮಯವಾಯಿತು ಎಂದೋ ಸೂರ್ಯ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದ.ನಡು ಆಕಾಶದಲ್ಲಿದ್ದವನು ಇಳಿಯಲು ಶುರುಮಾಡಿದ್ದ. ಇಳಿಜಾರಿನಲ್ಲಿ ವೇಗ ಹೆಚ್ಚು ಎನ್ನುವ ಹಾಗೆ ಅವನು ಚಲಿಸುವುದು ಕಾಣಿಸುತ್ತಿತ್ತು. ಒಳಗೂ ಹೊರಗೂ ಒಂದು ರೀತಿಯ ಧಗೆ.ಗಾಳಿಗೂ ತಾಕಿದ ಬಿಸಿ. ಒಳಗಿದ್ದರೆ ಸೆಕೆ ಇನ್ನೂ ಜಾಸ್ತಿ ಹೋಗಿ ಮಾವಿನಮರದ ಕೆಳಗೆ ಆದರೂ ಕುಳಿತರೆ ಜೀವ ತಣ್ಣಗೆ ಆಗಬಹುದೇನೋ ಎನ್ನಿಸಿ ಎದ್ದರೆ ಅದು ಕಾಣಿಸಿತು. ಇಳಿಯುತ್ತಿದ್ದ ಸೂರ್ಯನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಸದ್ದಿಲ್ಲದೇ ಕುಳಿತಿತ್ತು ಆ ಬೆಳ್ಳಕ್ಕಿ. ಅದೋ ವಯಸ್ಸಾದ ತೆಂಗಿನ ಮರ. ಒಂದೊಂದೇ ಗರಿಗಳನ್ನು ಕಳಚಿಕೊಂಡು ಮತ್ತೊಂದು ಹೊಸತರ ಜವಾಬ್ದಾರಿ ಹೊತ್ತು ಎತ್ತರಕ್ಕೆ ನಿಂತಿತ್ತು. ಇಳಿಯುವ ಸೂರ್ಯನನ್ನು ದಿಟ್ಟಿಸಲು ಇಳಿವಯಸ್ಸಿನ ಮರದಲ್ಲಿ ಕಾಲೂರುವ ಮುನ್ನ ಅದು ಪ್ರಶಸ್ತವಾದ ಜಾಗವನ್ನು ಆರಿಸಿಕೊಂಡಿತ್ತು.ಮೇಲಿನ ಗರಿಯ ನೆರಳಿನ ಅಡಿಯಲ್ಲಿ ಹೆಚ್ಚು ಅಲುಗಾಡದ ಗರಿಯ ಬುಡದಲ್ಲಿ ನಿಂತಿತ್ತು. ಎತ್ತರದಲ್ಲಿ ನಿಂತಿದ್ದರೂ ಗಾಳಿಯ ಚಲನೆಗೆ, ಗರಿಯ ಅಲುಗಾಟಕ್ಕೆ, ಮರದ ತೂಗುವಿಕೆಗೆ ಎಲ್ಲವಕ್ಕೂ ಹೊರತಾಗಿ ನಿಲ್ಲುವುದೇ ತನ್ನ ಧ್ಯೇಯ ಎಂದು ಅಲುಗಾಡದೆ , ಕಾಲವೇ ಸ್ತಬ್ಧವಾಗಿ ಹೋಗಿದೆಯೇನೋ, ನಿಂತಲ್ಲೇ ಕಲ್ಲಾಗು ಎಂಬ ಶಾಪಕ್ಕೆ ತುತ್ತಾಗಿದೆಯೇನೋ ಅನ್ನಿಸುವ ಹಾಗೆ, ಕಾಲುಗಳು ಪಾತಾಳಕ್ಕೆ ಇಳಿದು ಬೇರು ಬಿಟ್ಟಿದೆಯೇನೋ ಎಂಬ ಹಾಗೆ ಕಿಂಚಿತ್ತೂ ಅಲುಗಾಡದೆ

ಲಾಕ್ ಡೌನ್

ಹೊರಡುವಾಗ ಪರಿಸ್ಥಿತಿ ಇಷ್ಟು ಕ್ಲಿಷ್ಟಕರವಾಗಬಹುದು ಎನ್ನುವ ಕಿಂಚಿತ್ತೂ ಊಹೆಯೂ ಇರಲಿಲ್ಲ. ಒಂದು ಕೇಸ್ ಗೆ ಇಷ್ಟೊಂದು ಪ್ಯಾನಿಕ್ ಆಗಬೇಕಾ ಎನ್ನುವ ಯೋಚನೆಯಲ್ಲಿಯೇ ಊರಿಗೆ ಹೊರಡಲು ತಯಾರಿರಲಿಲ್ಲ. ಯಾವಾಗ ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಅನ್ನುವ ಆದೇಶ ಬಂತೋ ಆಗ ಕೊಂಚ ಯೋಚಿಸುವ ಹಾಗಾಗಿತ್ತು. ನೋಡು ಹೋಗುವುದಾದರೆ ಎಲ್ಲರೂ ಹೋಗುವ, ಅಬ್ಬಬ್ಬಾ ಅಂದರೆ ಒಂದು ಹದಿನೈದು ದಿನ ಆಗಬಹುದು. ರಜೆಗೆ ಅಪ್ಲೈ ಮಾಡಿ ಬಾ ಇಲ್ಲಾಂದ್ರೆ ಎಲ್ಲರೂ ಒಟ್ಟಿಗೆ ಇಲ್ಲೇ ಇರುವ ಅಂದಿದ್ದೆ. ಅವನಾಗಲೇ ದೇಶ ವಿದೇಶಗಳ ಪರಿಸ್ಥಿತಿ ಅವಲೋಕಿಸುತ್ತಿದ್ದ. ಅಪಾಯದ ಅರಿವು ಕೊಂಚವಿತ್ತು. ಹಾಗಾಗಿ ಊರಿಗೆ ಹೋಗುವ ಎನ್ನುವ ಯೋಚನೆ ಮಾಡಿದ್ದೆವು. ಬಹುಶ ಅವನ ತಲೆಯಲ್ಲಿ ಹೋಗಿ ಬಿಟ್ಟು ಬರುವಾ ಅನ್ನುವ ಯೋಚನೆಯೂ ಇತ್ತೇನೋ. ಹೋಗಿ ಎರಡು ದಿನಕ್ಕೆ ಮೋದಿ ಜನತಾ ಕರ್ಪ್ಯೂ ಅಂದರು. ಮತ್ತೊಂದು ದಿನಕ್ಕೆ ಲಾಕ್ ಡೌನ್. ಊರಿಗೆ ಬರುವಾಗಲೂ ಕೊಂಚ ಆತಂಕವೇ ಇತ್ತು. ದಾರಿಯಲ್ಲಿ ಎಲ್ಲೂ ನಿಲ್ಲಿಸದೆ ಬಂದು ಬಂದ ಕೂಡಲೇ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ತಲುಪಿಸಿ ನೆಮ್ಮದಿಯಾಗಿದ್ದೆವು. ಸದ್ಯ ಬಂದು ಒಳ್ಳೆಯದು ಮಾಡಿದ್ರಿ ಅಂತ ಗೆಳೆಯರು, ಆತ್ಮೀಯರು ಹೇಳುವಾಗ ಆತಂಕ ಕೊಂಚ ಕರಗಿತ್ತು. ಇನ್ನೇನು ಸಹಜಸ್ಥಿತಿಗೆ ಮರಳಬೇಕು ಅನ್ನುವಷ್ಟರ ಹೊತ್ತಿಗೆ ಯುಗಾದಿ ಬಂದು ನಮ್ಮ ಮು.ಮ ಗಳು ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರೋ ಆಗ ಊರಿಗೆ ಬಂದ ನೂರಾರು ಜನರನ್ನು ಕ್ವಾರಂ