Posts

Showing posts from 2023
 ಕಾಶಿ ಯೂನಿವರ್ಸಿಟಿ ಯಲ್ಲಿ ಅವರು ಹಿಂದಿ ಪ್ರಾದ್ಯಾಪಕರಾಗಿ ಕೆಲಸ ಮಾಡಿದವರು. ಅಚ್ಚ ಕನ್ನಡಿಗ. ಆದರೆ ಅಲ್ಲಿ ಇವರಿಗೆ ಕನ್ನಡ ಬರುತ್ತೆ ಅನ್ನೋದೇ ಗೊತ್ತಿರಲಿಲ್ಲವಂತೆ. ಅವರು ಹೇಳುವವರೆಗೆ ಅವರಿಗೆ ಹಿಂದಿ ಬರುತ್ತೆ ಅನ್ನೋದು ಇಲ್ಲಿಯೂ ಯಾರಿಗೂ  ಗೊತ್ತಾಗುತ್ತಿರಲಿಲ್ಲ. ಅಷ್ಟು ಶುದ್ಧವಾದ ಭಾಷೆ ಅವರದು.  ಬರೀ ಇಷ್ಟೇ ಅಲ್ಲ. ಅಪ್ರತಿಮ  ಸಾಧಕರು. ಏನೇ ಜಪ ತಪ ಅನುಷ್ಠಾನ ಇದ್ದರೂ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದವರು ಅವರು. ಮಕ್ಕಳೆಂದರೆ ಜೀವ. ಅವರೊಂದಿಗೆ ನೇರವಾಗಿ  ಮಾತಾಡಲೇ ಬೇಕು ಎಂದೇನೂ ಇರಲಿಲ್ಲ ಜೊತೆಗೆ ಒಂದಷ್ಟು ಹೊತ್ತು ಮೌನವಾಗಿ ಕುಳಿತರೂ ಸಾಕಿತ್ತು. ಏನು ಬೇಕೋ ಅದು ಸಿಗುತಿತ್ತು. ಹೇಳದೆಯೇ ಗೊಂದಲಗಳಿಗೆ ಪರಿಹಾರ, ಸಮಸ್ಯೆಗಳಿಗೆ ಉತ್ತರ, ಬೊಗಸೆ ತುಂಬಾ ಪ್ರೀತಿ... ಅವರು ಭಾರತಿ ರಮಣಾಚಾರ್ ತಾತ. ಮಗು ಮಾತಾಡುವ ಭಾಷೆ ಶುದ್ಧವಾಗಿರಬೇಕು ಅನ್ನುತ್ತಿದ್ದರು. ಆ ಮಾತು ಕೇಳಿದ ಮೇಲಿನಿಂದ ಅದು ಮನಸ್ಸಿನಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ. ಆ ಮಾತಿನ ಆಗಾಧತೆ ಇವತ್ತಿಗೂ ಪೊರೆಯುತ್ತಿದೆ.  ಬದುಕಿನ ಅಬ್ಬರದ ದಿನಗಳಲ್ಲಿ  ಸಿಕ್ಕವರು ಈ ತಾತ. ನೋಡುವಾಗಲೇ ಸೆಳೆತ ಇಬ್ಬರಿಗೂ. ಅವರೋ ಎರಡು ದಡಗಳ ನಡುವೆ ಗಂಭೀರವಾಗಿ ಹರಿಯುವ ಶಾಂತ ನದಿ. ನಾನೋ ದಡಕ್ಕಪ್ಪಳಿಸಿ ಮುನ್ನುಗ್ಗುವ ಮಳೆಗಾಲದ ನದಿ. ಭೋರ್ಗರೆಯುವ ಸಮುದ್ರ  ಅಂತ ಸಮುದ್ರಕ್ಕೂ ಶಾಂತತೆ ಒಂದೂ ಮಾತು ಆಡದೆ ಕಲಿಸಿದವರು ಅವರು. ಏನೋ ಸಮಸ್ಯೆ, ದುಗುಡ ಗೊಂದಲ ಎದುರಾದಾಗಲೆಲ್ಲ ತಾತ ನೆನ