Posts

Showing posts from October, 2017
ಮೋವಿಯ ಇನ್ಸಿಡೆಂಟ್ ಆದ ನಂತರ ನಾಯಿಗಳ ಬಗ್ಗೆ ಅಟ್ಯಾಚ್ಮೆಂಟ್ ಬೆಳಸಿಕೊಳ್ಳುವುದನ್ನೇ ಬಿಟ್ಟಿದ್ದೆ. ಅಹಿಗೋ ಅವುಗಳೆಂದರೆ ವಿಪರಿತ ಪ್ರೀತಿ. ಅದಕ್ಕೆ ಸರಿಯಾಗಿ ಮುತ್ತಜ್ಜಿ ಮನೆಯಲ್ಲಿ ನಾಯಿಮರಿ ತಂದು ಸಾಕಿದ್ದರು. ಪ್ರತಿ ಸಲ ಫೋನ್ ಮಾಡಿದಾಗಲೂ ಅವಳು ಮೊದಲು ಕೇಳೋದೇ ಪಾಂಡು ಬಗ್ಗೆ. ಊರಿಗೆ ಹೋಗುವುದೆಂದರೆ ಅವಳ ಸಂಭ್ರಮ್ಮಕ್ಕೆ ಮುಖ್ಯ ಕಾರಣ ನಾಯಿ ಹಾಗೂ ದನಗಳು. ಹೋದ ದಿವಸ ಪರಿಚಯವಿಲ್ಲದ್ದಕ್ಕೆ ಬೊಗಳುತ್ತಲೇ ಸ್ವಾಗತಿಸಿದ್ದ ಪಾಂಡುವನ್ನು ಗಂಟೆಗಳು ಕಳೆಯುವ ಮೊದಲೇ ಫ್ರೆಂಡ್ ಮಾಡಿಕೊಂಡು  ಬಿಟ್ಟಿದ್ದಳು. ಅವಳಿಗೆ ಆಟಕ್ಕೆ, ಮಾತಿಗೆ, ಸುತ್ತಾಟಕ್ಕೆ ಎಲ್ಲವಕ್ಕೂ ಜೊತೆಯಾಗಿ ಪಾಂಡುವೇ. ಮೊದಮೊದಲು ಬಿಂಕ ತೋರಿಸುತ್ತಿದ್ದ ಅದು ಬಹಳ ಬೇಗ ಅವಳಿಗೆ ಹೊಂದಿಕೊಂಡು ಬಿಟ್ಟಿತ್ತು. ಅವಳ ಬಳಿ ಬೈಸಿಕೊಳ್ಳುತ್ತಾ, ಅವಳು ಅವನನ್ನು ಮರೆತು ತಿಂದು ಕುಡಿದು ಮಾಡಿದರೆ ಅವಳಿಗೆ ಹೆದರಿಸುತ್ತಾ ಇದ್ದ ಪಾಂಡು ಕೊನೆ ಕೊನೆಗೆ ಎಷ್ಟು ಹಚ್ಚಿಕೊಂಡಿತ್ತು ಅಂದರೆ ಅವಳು ಎಲ್ಲಿ ಹೋದರೂ ಅವಳ ಜೊತೆ ಇರುತಿತ್ತು. ಹೋದ ಸ್ವಲ್ಪ ಹೊತ್ತು ಮನೆಯ ಒಳಗೆ, ಕೊಟ್ಟಿಗೆ ಓಡಾಡಿ ಎಲ್ಲವನ್ನೂ ನೋಡಿದ ಮೇಲೆ ಅವಳ ಕಾರ್ಯಕ್ಷೇತ್ರ ಮೆಲ್ಲಗೆ ಗದ್ದೆ ಅಲ್ಲಿಂದ ಆಚೆಮನೆ ಕಡೆ ವಿಸ್ತಾರ ಆಗುತ್ತಿದ್ದಂತೆ ಅಲ್ಲಿಯವರೆಗೂ ಹಿಂಬಾಲಿಸುತಿದ್ದ ಅವನು ಆಮೇಲೆ ಲೀಡ್ ಮಾಡಲು ಶುರುಮಾಡಿದ್ದ. ಯಾವತ್ತೋ ಒಂದು ಸಲ ಬರೋ ಪೇಟೆ ಹುಡುಗಿಗೆ ಏನು ಗೊತ್ತು ಹಳ್ಳಿ ಬಗ್ಗೆ ಅಂತ ಅವಳಿಗೆ ಮುಂದೆ ಹೋಗಲು ಬಿಡದೆ ತ

ದಿಂಡಿನಕಾಯಿ...

ಮಾವಿನ ಹಣ್ಣು ಧಾರಾಳವಾಗಿ ಸಿಕ್ಕಿದ್ರೂ ಮಿಡಿ ಮಾವಿನಕಾಯಿಯ ಮರ ಮಾತ್ರ ವಿರಳ. ಬೆಲೆ ಬಾಳುವಂತದ್ದು ಯಾವಾಗಲೂ ವಿರಳವೇ. ಎಲ್ಲೋ ಒಂದು ಇದ್ದರೆ ಅದಕ್ಕೆ ರಾಜ ಮರ್ಯಾದೆ. ಅದಕ್ಕಾಗಿ ಎಷ್ಟೊಂದು ಜನರ ಬೇಡಿಕೆ. ಉಪ್ಪಿನಕಾಯಿಯ ರುಚಿ ನಿರ್ಧಾರ ಆಗ್ತಾ ಇದ್ದಿದ್ದೇ ಅದರ ಘಮದ ಮೇಲೆ. ಮಲೆನಾಡಿಗರ ಊಟದ ಎಲೆಯ ತುದಿಯಲ್ಲಿ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಇಲ್ಲದಿದ್ದರೆ ಎಂಥ ಮೃಷ್ಟಾನ್ನ ಭೋಜನವೂ ಸಪ್ಪೆಯೇ. ಅದರಲ್ಲೂ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಅಂದರೆ ಮುಗಿಯಿತು ಅದರ ಗತ್ತೇ ಬೇರೆಯಾಗಿರುತ್ತಿತ್ತು. ಊಟಮಾಡಿ ಕೈ ತೊಳೆದರೂ ಮಾವಿನ ಘಮ ಬೆರಳ ತುದಿಯಲ್ಲಿಯೇ ಇರುತಿತ್ತು. ಸುರಿಯುವ ಮಳೆಗೆ ತರಕಾರಿ ಬೆಳೆಯುವುದು ದೂರದ ಮಾತು. ಪೇಟೆಯಿಂದ ತರಕಾರಿ ತರಬೇಕು ಅಂದರೆ ಯಾರೋ ಅಪರೂಪದ ನೆಂಟರು ಬರಬೇಕು. ಅಲ್ಲಿಗಾದರೂ ಬೆಳೆದು ಬರುವುದು ಎಲ್ಲಿಂದ. ಮಲೆನಾಡಿನ ಮಳೆಯೆಂದರೆ ಹಾಗೆ ಶ್ರುತಿ ಹಿಡಿದ ಸಂಗೀತಗಾರನಂತೆ. ಲಹರಿ ಬಂದಹಾಗೆ ಸುರಿಯುತ್ತಿರುವುದಷ್ಟೇ ಕೆಲಸ. ಹಾಗಾಗಿ ಶ್ರಾವಣ ಮುಗಿಯುವವರೆಗೆ ತರಕಾರಿ ಬೀಜ ಹಾಕಿದರೆ ಅದು ಹರಿದು ಯಾವ ನದಿಯ ಮಡಿಲು ಸೇರುತಿತ್ತೋ ಬಲ್ಲವರು ಯಾರು. ಹಾಗಾಗಿ ಮಳೆಗಾಲಕ್ಕೆಂದೇ ಕೆಲವು ತರಕಾರಿಗಳು ನಿರ್ಧಾರಿತವಾಗಿರುತಿದ್ದವು. ಜಗಲಿಯಲ್ಲೋ ಊಟದ ಹಾಲಿನಲ್ಲೋ  ಮಾಡಿನ ಜಂತಿಗೆ  ಸಾಲಾಗಿ ಬಾಳೆಪಟ್ಟಿಯಲ್ಲಿ ಕಟ್ಟಿದ್ದ ಬಣ್ಣದ ಸೌತೆ, ಬೂದುಕುಂಬಳ, ಕೆಸುವಿನ ಸೊಪ್ಪು, ಮುರುವಿನ ಒಲೆಯನೇರಿ ಕುದಿಯುವ ಹುರಳಿ ಸಾರು, ಪಾತ್ರೆಯ ಒಳಗೆ ನೆನೆ
ತುಂಬಾ ದಿನಗಳಿಂದ ಸೇತುರಾಂ ಅವರ ನಾವಲ್ಲ ಕಥಾಸಂಕಲನ ಓದಬೇಕು ಅಂದ್ಕೊಂಡಿದ್ದೆ. ಎರಡು ಸಲ ಹೋದಾಗಲೂ ಸಪ್ನಾದಲ್ಲಿ ಇಲ್ಲಾ ಅನ್ನೋ ಮಾತು ಕೇಳಿ ಬೇಜಾರೂ ಆಗಿತ್ತು. ಅಂತೂ ನಿನ್ನೆ ಪುಸ್ತಕ ಸಿಕ್ಕಿ ಇವತ್ತು ಅದನ್ನು ಹಿಡಿದವಳು ಓದಿಯೇ ಕೆಳಗೆ ಇಟ್ಟಿದ್ದು. ಅವರ ಧಾರವಾಹಿ ಎಲ್ಲೋ ಒಂದು ಎಪಿಸೋಡ್ ನೋಡಿದ್ದು ಅಷ್ಟೇ ಅದರಲ್ಲಿ ಅವರ ಹರಿತವಾದ ಮಾತಿಗಿಂತ ಭಾಷೆ ಮತ್ತು ಪ್ರಾಕ್ಟಿಕಲ್ ಮನೋಭಾವ ಒಂಥರಾ ಇಷ್ಟವಾಗಿತ್ತು. ಮಾತು ಹೇಗೆ ಪ್ರಾಮಾಣಿಕ ಮತ್ತು ನೇರವಾಗಿರಬೇಕೋ ಅಷ್ಟೇ ಪ್ರಾಕ್ಟಿಕಲ್ ಸಹ ಆಗಿದ್ದಾಗ ಮಾತ್ರ ಅದಕ್ಕೊಂದು ಪೂರ್ಣತೆ.ನಂಗೆ ಇವರ ಮಾತಲ್ಲಿ ಆ ಪೂರ್ಣತೆ ತಟ್ಟಿದ್ದರಿಂದಲೋ ಏನೋ ಅವರನ್ನು ನೋಡದಿದ್ದರೂ, ವೈಯುಕ್ತಿಕವಾಗಿ ತಿಳಿಯದಿದ್ದರೂ ಇಷ್ಟವಾಗ್ತಾರೆ. ಆರು ಕತೆಗಳ ಪುಸ್ತಕ ಇದು, ಆ ಆರು ಕತೆಗಳು ಬಿಚ್ಚಿಡೋ ಭಾವಗಳು ಮಾತ್ರ ಹಲವಾರು. ವ್ಯಕ್ತಿತ್ವಗಳ ಸೋಗಲಾಡಿತನವನ್ನು ಬಿಚ್ಚಿಡುವಷ್ಟೇ ಸಹಜವಾಗಿ ದೃಢವ್ಯಕ್ತಿತ್ವಗಳನ್ನೂ ಕಟ್ಟಿ ಕೊಡುವ ಚಾಣಕ್ಷತೆ ಇವರಲ್ಲಿದೆ. ಅದರಲ್ಲೂ ಹೆಣ್ಣಿನ ಮೃದುತನ ಮತ್ತು ಗಟ್ಟಿತನ ಎರಡನ್ನೂ ತುಂಬಾ ಸುಂದರವಾಗಿ ಚಿತ್ರಿಸುತ್ತಾ ಭಾವನೆಗಳ ಹೊಯ್ದಾಟದ ನಡುವೆಯೇ ಬದುಕುವ ಛಲ ಹೇಗೆ ಗುರಿ ತಲುಪುವ ಹಾಗೆ ಮಾಡಬಲ್ಲದು ಅನ್ನೋದನ್ನ ತುಂಬಾ ಮನೋಜ್ಞವಾಗಿ ಹೇಳಿದ್ದಾರೆ.  ಅಧಿಕಾರ, ಪೀಠ  ಇವು ಕಣ್ಣಿಗೆ ಕಾಣುವಷ್ಟು ಸುಲಭವೂ ಅಲ್ಲಾ, ಸಹ್ಯವೂ ಅಲ್ಲಾ. ಗೊಂದಲ, ಆತ್ಮವಂಚನೆ ಹೊಯ್ದಾಟ ಅನಿವಾರ್ಯತೆ ಇವು ಆ ಸ್ಥಾನದ ನಾಲ್ಕು
ಸಿಂಗಾರಗೊಂಡ ನವ ವಧುವಿನಂತೆ ಕಂಗೊಳಿಸುವ ಹಂಡೆಯನ್ನು ನೋಡುತ್ತಲೇ ಹಾಸಿಗೆಯತ್ತ ನಡೆಯುತಿದ್ದರೆ ಮನಸ್ಸಿನಲ್ಲಿ ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಏಳುವ ಆಲೋಚನೆ ಸಿದ್ದವಾಗಿರುತಿತ್ತು. ಉಳಿದ ದಿನ ಏಳಲು ಪರಿಪಾಟಲು ಪಡುವ ನಾವುಗಳು ನರಕ ಚತುರ್ದಶಿಯ ದಿನ ಮಾತ್ರ ಮುಂಚೆ ಏಳಲು ಪಣತೊಟ್ಟಿರುತಿದ್ದೆವು. ಇವತ್ತು ನನ್ನದೇ ಮೊದಲ ಸ್ನಾನ ಗೊತ್ತಾ ಅನ್ನೋ ಹೆಮ್ಮೆಗಿಂತಲೂ ಹೆಚ್ಚು ಆಕರ್ಷಣಿಯವಾಗಿರುತಿದ್ದದ್ದು ಎಂದರೆ ಹೊಸಬಟ್ಟೆ ತೊಟ್ಟು ಹೊಡೆಯುವ ಪಟಾಕಿ. ಎಲ್ಲರಿಗಿಂತ ಮೊದಲು ಯಾರು ಪಟಾಕಿ ಹೊಡಿತಾರೆ ಅನ್ನೋ ಅಘೋಷಿತ ಪಂದ್ಯವೊಂದು ಕಾಯುತ್ತಿರುತ್ತದೆ. ನಸುಕು ಹರಿಯುವ ಮುನ್ನ ಅಭ್ಯಂಜನವಾಗಬೇಕು, ಅದಕ್ಕೂ ಮುನ್ನ ದೇವರ ಎದುರು ಕೂರಿಸಿ ಎಣ್ಣೆ ಶಾಸ್ತ್ರ. ಗರಿಕೆಯನ್ನು ಹಿಡಿದು ಎಣ್ಣೆಯ ಬಟ್ಟಲಲ್ಲಿ ಅದ್ದಿ ಅಜ್ಜಿ ಶಾಸ್ತ್ರ ಮಾಡುತ್ತಿದ್ದರೆ ಅವಸರದಲ್ಲಿ ಎದ್ದ ಕಣ್ಣುಗಳು ಜೋಕಾಲಿ ಆಡುತಿದ್ದವು. ನಂತರ ಅಂಗೈಗೆ ಹರಳೆಣ್ಣೆ ಸುರಿದುಕೊಂಡು ನೆತ್ತಿಗೆ ತಟ್ಟುತ್ತಿದ್ದರೆ ಕಣ್ಣಿನ ಜೊತೆಗೆ ದೇಹವೂ ಜೋಕಾಲಿಯಾಡಿ ನಿದಿರಾದೇವಿ ಬಂದು ಬಿಗಿಯಾಗಿ ಅಪ್ಪುತ್ತಿದ್ದಳು. ಅವಳಿಂದ ಬಿಡಿಸಿಕೊಂಡು ಬಚ್ಚಲಿಗೆ ಹೋಗುವುದು ಒಂದು ಸಾಹಸವೇ. ಹಿಂದಿನ ಬಾಗಿಲು ತೆರೆಯುತ್ತಿದ್ದಂತೆ ರಾಚುತ್ತಿದ್ದ ಸುಳಿಗಾಳಿ ಮೈಯನ್ನು ನಡುಗಿಸುತಿದ್ದರೆ ಒಂದೇ ಉಸಿರಿಗೆ ಓಡಿ ಬಚ್ಚಲೊಲೆಯ ಮುಂದೆ ಪ್ರತಿಷ್ಟಾಪನೆಯಾಗಿ ಇನ್ನೆರೆಡು ಕಟ್ಟಿಗೆ ಒಟ್ಟಿ ಅಂಗೈ ಹಿಡಿದರೆ ಚಳಿ, ಬಿಸುಪು ಮಂಪರು ಎಲ್ಲಾ ಸೇರಿ
Image
ದೀಪಾವಳಿ ಅಂದರೆ ಸಾಲು ಸಾಲು ಹಬ್ಬ.ಶುರುವಾಗೋದೇ ಶುದ್ದಗೊಳಿಸುವ ಮೂಲಕ ಅಂದರೆ ಅಭ್ಯಂಜನದ ಮೂಲಕ. ಅಭ್ಯಂಜನಕ್ಕೂ ಒಂದು ಕ್ರಮವಿದೆ, ಶುದ್ದಗೊಳಿಸುವ ನೀರಿಗೂ ಗೌರವ ಸಲ್ಲಿಸುವ ಪ್ರಕ್ರಿಯೆ ಇದೆ ಅದೇ ನೀರು ತುಂಬುವ ಹಬ್ಬ. ಈ ನೀರು ತುಂಬುವ ಕೆಲಸವನ್ನು ಅದೆಷ್ಟು ಕ್ರಮಬದ್ಧವಾಗಿ ಸಾಂಪ್ರದಾಯಿಕ ಆಚರಣೆಯನ್ನಾಗಿಸಿ ಅದನ್ನೊಂದು ಪವಿತ್ರ ಕ್ರಿಯೆಯನ್ನಾಗಿಸಿದ್ದಾರೆ ನಮ್ಮ ಹಿರಿಯರು. ಸ್ನಾನ ಮಾಡಿದ ಮೇಲೆ ಹಂಡೆ ತುಂಬಾ ನೀರು ತುಂಬಿಸಲೇ ಬೇಕು ಅನ್ನೋದು ನಿಯಮ. ನೀರು ತುಂಬುವ ಹಬ್ಬದ ದಿನ ಮಾತ್ರ ಅದಕ್ಕೆ ರಿಯಾಯಿತಿ. ಕೊನೆಯಲ್ಲಿ ಸ್ನಾನಕ್ಕೆ ಹೋದವರು ಮಾತ್ರ ಅವತ್ತು ಹಂಡೆಯಲ್ಲಿ ಹನಿ ನೀರೂ ಉಳಿಸದೆ ಹೊಯ್ದುಕೊಂಡು ಬರೋ ಭಾಗ್ಯ. ಸಂಜೆ ಕಾಲಿಡುವ ಮುನ್ನ ಹುಣಸೇಹಣ್ಣು, ಉಮ್ಮಿಕರಿಯ ಬೂದಿ ಚಿಟಿಕೆ ಉಪ್ಪು ಸೇರಿಸಿ ಹಂಡೆಯನ್ನು ಉಜ್ಜಿ ತೊಳೆಯುವುದೇ ಒಂದು ದೊಡ್ಡ ಕೆಲಸ. ಅದು ಫಳಫಳಿಸುವುದು ಮುಖದಲ್ಲಿ ಪ್ರತಿಫಲಿಸಿದಾಗಲೇ ಆ ಕೆಲಸಕ್ಕೆ ವಿರಾಮ. ಅದಾದ ಮೇಲೆ ಅರಿಸಿನ, ಕುಂಕುಮ, ಅಕ್ಷತೆ, ಹೂ ಎಲ್ಲಾ ತೆಗೆದುಕೊಂಡು ಹೋಗಿ ಗಂಗೆ ಪೂಜೆಮಾಡಿದ ಮೇಲೆಯೇ ನೀರು ಸೇದಬೇಕು. ತಂದು ಹಂಡೆಯನ್ನು ತುಂಬಿಸಬೇಕು. ಒಮ್ಮೆ ತುಂಬಿಸಿದ ಮೇಲೆ ಹಂಡೆಯನ್ನು ಸಿಂಗರಿಸುವ ಸಡಗರ. ಇದ್ದ ಸ್ವಲ್ಪದರಲ್ಲೇ ಹೇಗೆ ಸಂಭ್ರಮಿಸಬೇಕು ಅನ್ನೋದು ನಮ್ಮ ಹಿರಿಯರನ್ನು ನೋಡಿ ಕಲಿಯಬೇಕು. ಕೆಮ್ಮಣ್ಣು, ಜೇಡಿಮಣ್ಣು ತಂದು ಅದನ್ನು ಸಾಣಿಸಿ ನುಣುಪಿನ ಪುಡಿಗೆ ಇಷ್ಟಿಷ್ಟೇ ನೀರು ಹಾಕಿ ಕಲೆಸಿ ಅದನ್
ಮಗುವೇ ನಿನ್ನ ಆಂಟಿಗೆ ಸುಸೂತ್ರ ಪ್ರಸವ ಆಗಿ ಗಂಡು ಮಗು ಹೆತ್ತಿದಾಳೆ ಅಂತ ಜಯತ್ತೆ ಹೇಳಿದಾಗ ತಟ್ಟನೆ ಹಾರಿ ಹೋಗುವ ಆಸೆ ಗರಿಗೆದರಿತ್ತು. ಬಹಳ ವರ್ಷಗಳ ಗ್ಯಾಪ್ ನಂತರ ಪುಟ್ಟ ಮಗುವಿನ ಆಗಮನ ಅದೊಂತರ ಸಂಭ್ರಮ. ಕಾಯುವಿಕೆಗೆ ನೂರು ಕಣ್ಣು. ಆಸೆಗಳಿಗೆ ಸಾವಿರ ರೆಕ್ಕೆ. ಬಾಣಂತನ ಮುಗಿಸಿ ಮನೆಗೆ ಬರುತಿದ್ದಂತೆ ನಾನು ಎತ್ಕೋಳ್ಳ ಅಂತ ಕೇಳಿದವಳಿಗೆ ಒಂಚೂರು ಆತಂಕ, ಭಯ ಯಾವುದೂ ಇಲ್ಲದೆ ಅದೆಷ್ಟು ಸಹಜವಾಗಿ ಮಗುವನ್ನು ಕೊಟ್ಟಿದ್ದರು ಆಂಟಿ.. ವರ್ಷಗಳು ಉರುಳಿ ಕಾಲ ಸಮುದ್ರದಲ್ಲಿ  ಅದೇನೇ ಉಬ್ಬರವಿಳಿತವಾದರೂ  ಇವತ್ತಿಗೂ ಅದೇ ಸಹಜತೆ ಅವರಲ್ಲಿ. ಐದು ತಿಂಗಳು ಮುದ್ದು ಕೂಸು ಎತ್ತಿಕೊಂಡರೆ ಪಿಳಿ ಪಿಳಿ ಕಣ್ಣು ಬಿಡುತಿತ್ತು. ಅದನ್ನೇ ದಿಟ್ಟಿಸಿದರೆ ಅದರ ತುಟಿಯಂಚಿನಲ್ಲಿ ಮುದ್ದಾದ ಹೂ ನಗು ಅರಳುತಿತ್ತು. ಅವತ್ತಿನಿಂದ ಇವತ್ತಿನವರೆಗೂ ಅಕ್ಕನನ್ನು ಕಂಡಾಗ ಅದರ ಮುಖದಲ್ಲಿ ಅದೇ ಹೂ ನಗು ಕಿಂಚಿತ್ತೂ ಮಾಸಿಲ್ಲ, ಬದಲಾಗಲೂ ಇಲ್ಲ. ಆಮೇಲೆ ಆ ಮಗು ನನ್ನ ಪಾಲಿಗೆ ಆಟಿಕೆ, ಜೊತೆಗಾರ, ಸಂಭ್ರಮ ಎಲ್ಲಾ .. ಶಾಲೆ ಮುಗಿಸಿ ಬರುತಿದ್ದಂತೆ, ರಜೆ ಇದ್ದಾಗಲೆಲ್ಲ ಅವನೇ ಪ್ರಪಂಚ. ಮಧ್ಯಾನದ ಊಟ ಮುಗಿಯುತಿದ್ದಂತೆ ಜಯತ್ತೆ ಕತೆ ಹೇಳಿ ಮಲಗಿಸ್ತಿನಿ ಬಾರೋ ಅಂತ ಅವನನ್ನ ಕರೆದು ಕೊಂಡು ಹೋದರೆ ಅವನ ಹಿಂದೆಯೇ ಹೋಗುತಿದ್ದೆ. ಕತೆ ಹೇಳುತ್ತಾ ಹೇಳುತ್ತಾ ಜಯತ್ತೆ ನಿದ್ದೆ ಹೋದರೆ ನಾವಿಬ್ಬರು ಮೆಲ್ಲಗೆ ಎದ್ದು ಹೊರಗೆ ಬಂದು ಆಡಲು ಶುರುಮಾಡುತಿದ್ದೆವು. ಎಲ್ಲರೂ ಏಳುವ ಹೊತ್ತಿಗ

ಭೂಮಿ ಹುಣ್ಣಿಮೆ.

ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ.  ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು.  ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು.  ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ. ಇಡೀ ಗದ್ದೆಯೆಂಬ ಗದ್ದೆಯ ಕೋಗು ಎಳೆಬಿ

ಮೇಲುಸುಂಕ.

ನವರಾತ್ರಿ ಶುರುವಾಯ್ತು ಅಂದ್ರೆ ಒಂದಿನ ಮೇಲುಸುಂಕ ಕ್ಕೆ ಹೋಗಿ ಬರಬೇಕು ಅನ್ನೋದು ಊರಲ್ಲಿ ಬಹುತೇಕರ ವಾಡಿಕೆ. ಕಾಡಿನ ನಡುವಿನ ದಾರಿಯಲ್ಲಿ ಹೊಳೆ ದಾಟಿ ಇಂಬಳಗಳಿಂದ ಕಚ್ಚಿಸಿಕೊಂಡು ಹೋಗುವುದರಲ್ಲೂ ಒಂದು ಸಂಭ್ರಮ ಇರುತಿತ್ತು.  ಅದೂ ಏನು ಸುಲಭದ ದಾರಿಯಾಗಿರಲಿಲ್ಲ. ಬಸ್ ಎನ್ನುವುದು ಅಲ್ಲಿಯ ಕೆಂಪು ಮಣ್ಣಿನ ರಸ್ತೆ ಕಂಡೂ ಇರಲಿಲ್ಲ. ಅಂಕು ಡೊಂಕಾದ ದಾರಿಯೊಂದು ಗದ್ದೆಯ ಅಂಚಿನಲ್ಲಿ ಸಾಗಿ, ಹಳ್ಳದ ಸೆರಗನ್ನು ದಾಟಿ ಕಾಡಿನ ಮಧ್ಯೆ ಬೈತಲೆ ತೆಗೆದಂತೆ ಸಾಗಿ ಕಲ್ಲು ಮಣ್ಣುಗಳ ನಡುವೆ ರಸ್ತೆಯನ್ನು ಸೃಷ್ಟಿಸಿಕೊಂಡು ಹೋಗಬೇಕಿತ್ತು. ಎತ್ತುಕೊಂಡು ಹೋಗುವಷ್ಟು ಚಿಕ್ಕವಳಲ್ಲ, ನಡೆಯುವಷ್ಟು ದೊಡ್ದವಳಲ್ಲ ಅನ್ನೋ ಗುಂಪಿಗೆ ಸೇರಿದವಳು ನಾನು. ಹಾಗಾಗಿ ನಿನ್ನ ಕೈಯಲ್ಲಿ ಅಷ್ಟು ದೂರ ನಡೆಯೋಕೆ ಆಗೋಲ್ಲ ಮುಂದಿನವರ್ಷ ಕರ್ಕೊಂಡು ಹೋಗ್ತೀನಿ ಅಂತ ಪ್ರತಿ ಸಾರಿಯೂ ಬಿಟ್ಟು ಹೋಗುತಿದ್ದ ಮಾವ.  ನಾನು ನಡೆಯಬಲ್ಲೆ ಅನ್ನುವುದರ ಒಳಗೆ ತನ್ನಷ್ಟಕ್ಕೆ ತಾನು ಹರಿಯುತಿದ್ದ ವಾರಾಹಿಗೆ ಒಂದು ಡ್ಯಾಮ್ ಕಟ್ಟಿ ಅವಳನ್ನು ನಿಲ್ಲಿಸುವುದರ ಜೊತೆಗೆ ನಮ್ಮ ಊರಿನ ಉಸಿರು ನಿಂತಾಗಿತ್ತು. ಆಮೇಲೆ ಮೇಲುಸುಂಕ ಅನ್ನೋದು ವರಾಹಿಯ ಮಡಿಲಲ್ಲಿ ಮುಳುಗಿದ ಊರುಗಳಂತೆ ಮನದಲ್ಲೂ ಮುಳುಗಿ ಹೋಗಿತ್ತು, ಗುರುತೇ ಇಲ್ಲದಂತೆ. ಮೊನ್ನೆ ಊರಿಗೆ ಹೋದಾಗ ಫ್ರೀ ಇದ್ಯಾ ಮೇಲುಸುಂಕಕ್ಕೆ ಹೋಗಿ ಬರೋಣ ಅಂತ ಮಾವ  ಅಂದಾಗ ಮತ್ತೆ ಮನಸ್ಸಿನ ಅಂಗಳದಲ್ಲಿ ಅಸೆ ಎದ್ದು ಬಂದಿತ್ತು. ಅದನ್ನು ನೋಡುವ ಆಸೆಗಿಂತಲೂ ಮ