Posts

Showing posts from February, 2020

ಶಿವಾಜಿ

ಯಕಶ್ಚಿತ್ ಸಾಮಂತನ ಮಗ ನನ್ನನ್ನೇ ಎದುರಿಸುವ ನನ್ನ ರಾಜ್ಯವನ್ನೇ ವಶಪಡಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ಬಿಟ್ಟನಲ್ಲ, ಅಂದೇ ಬಾಲಕನಾಗಿದ್ದಾಗ ತಂದೆ ಮುಜುರೆ ಮಾಡಿದರೂ ದಿಟ್ಟಿಸಿ ನೋಡುತ್ತಾ ನಿಂತ ಬಾಗದ ಅವನನ್ನು ಅರ್ಥಮಾಡಿಕೊಳ್ಳಬೇಕಿತ್ತು. ಏನೋ ಹುಡುಗುತನ ಎಂದು ಸುಮ್ಮನಾಗಿದ್ದಕ್ಕೆ ಇಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅಂದೇ ಗೊತ್ತಿದ್ದರೆ ಅಲ್ಲೇ ಆ ಸಭೆಯಲ್ಲಿಯೇ ಹೊಸಕಿ ಹಾಕಬಹುದಿತ್ತು. ನಂತರವೂ ಒಂದೆರೆಡು ಕೊಂಡಗಳನ್ನು ವಶಪಡಿಸಿಕೊಂಡಾಗ ಏನೋ ವಯಸ್ಸಿನ ಪುಂಡಾಟ ಎಂದು ಸುಮ್ಮನಿರಬಾರದಿತ್ತು ಈ ಶಿವಾಜಿ ನನ್ನನ್ನೇ ಮೀರಿಸುವ ಹಾಗೆ ಬೆಳೆದುದಲ್ಲದೆ ಈಗ ದೆಹಲಿಯ ನವಾಬರಿಗೆ ಹತ್ತಿರವಾಗುತ್ತಿದ್ದಾನೆ ಇನ್ನು ಸುಮ್ಮನಿರುವುದು ಹೇಡಿತನ ಮಾತ್ರವಲ್ಲ ಎಲ್ಲವನ್ನೂ ಕಳೆದುಕೊಳ್ಳುವ ಮುನ್ಸೂಚನೆ ಕೂಡಾ ಬಿಜಾಪುರದ ಸುಲ್ತಾನ ತನ್ನೊಳಗೆ ಕುದಿಯುತ್ತಿದ್ದ, ದಾರಿಗಾಗಿ ಹುಡುಕುತ್ತಿದ್ದ. ಸುಲ್ತಾನ ಹೀಗೆ ಯೋಚಿಸುತ್ತಿರುವಾಗಲೇ ಅತ್ತ ಅವನ ಮಲತಾಯಿ ಉಲಿಯಾ ಬಡಿಯಾ ಬೇಗಂ ಸರ್ಪಿಣಿಯಾಗಿದ್ದಳು. ಶಿವಾಜಿಯ ಪುಂಡಾಟ ಅಡಗಿಸಲು ಕ್ರಮ ಕೈಗೊಳ್ಳುವ ಹಾದಿಯಲ್ಲಿದ್ದಳು. ಅದರ ಮೊದಲ ಸೂಚನೆ ಎಂಬಂತೆ ಶಹಾಜಿಗೆ ಪತ್ರ ಬರೆದು ಮಗನನ್ನು ಹದ್ದುಬಸ್ತಿನಲ್ಲಿಡಲು ತಪ್ಪಿದರೆ ಭೀಷಣ ಕ್ರಮದ ಬೆದರಿಕೆ ಒಡ್ಡಿದ್ದಳು. ಪತ್ರವನ್ನು ಓದಿದ ಶಹಾಜಿ ಭಯಗೊಂಡಿರಲಿಲ್ಲ. ಮಗನ ಪ್ರತಾಪದ ಬಗ್ಗೆ ಹೆಮ್ಮೆ ಪಟ್ಟಿದ್ದ. ತನ್ನ ತಲೆಗೆ ಈ ಸಾಮಂತ ಪಟ್ಟ ಕೊನೆಯಾಗಲಿ ಎಂದು ಬಯಸಿದ್ದ. ಯಾವಾಗ

ಇರುವುದೆಲ್ಲವ ಬಿಟ್ಟು..

ಶಾಲೆಯಲ್ಲಿ ಭಾವಗೀತೆ ಸ್ಪರ್ಧೆ. ಭಾಗವಹಿಸಿದವರು ಕೆಲವರಾದರೂ ಎಲ್ಲರೂ ಕುಳಿತು ಕೇಳುವ ಅವಕಾಶ. ಒಬ್ಬೊಬ್ಬರೇ ಹಾಡುತ್ತಾ ಹಾಡುತ್ತಾ ಕುಳಿತವರು ಪಿಸುಗುಡುತ್ತಾ ತಮ್ಮ ಲೋಕದಲ್ಲಿ ವಿಹರಿಸುವಾಗಲೇ ಅವಳು ಹಾಡಲು ಶುರುಮಾಡಿದ್ದಳು. ಯಾವ ಮೋಹನ ಮುರಳಿ ಕರೆಯಿತು ಎನ್ನುವಾಗ ಸಣ್ಣಗೆ ಮೌನ ಹಬ್ಬಲು ಶುರುವಾಗಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವಾಗ ಜೀವನ ಅಂದ್ರೆ ಏನು ಅದರರ್ಥ ನಿಜವಾಗಲು ಏನು ಎಂದು ಗೊತ್ತಾಗದ ವಯಸ್ಸಿನಲ್ಲೂ ಕಣ್ಣಂಚು ಸಣ್ಣಗೆ ಒದ್ದೆಯಾಗಿತ್ತು. ನಿಗೂಢ ಮೌನ ಆವರಿಸಿತ್ತು. ಅದೆಷ್ಟು ಆಳವಾಗಿ ಮನಸ್ಸಿನಲ್ಲಿ ಕುಳಿತಿತ್ತು ಎನ್ನುವುದು ಗೊತ್ತಾಗಿದ್ದು ಪದೇ ಪದೇ ಆ ಸಾಲುಗಳನ್ನು ಗುನುಗುಣಿಸುವಾಗಲೇ.. ಬದುಕಿನ ಮೂಲ ಗುಣವೇ ಅದೇನೋ ಇರುವುದೆಲ್ಲವ ಬಿಟ್ಟು ಮತ್ತೇನನ್ನೋ ಧ್ಯಾನಿಸುವುದು ಹಾಗೂ ಮೋಹನ ಮುರುಳಿಗೆ ಕಾಯುವುದು. ಮೋಹ ಆವರಿಸುವುದಕ್ಕೆ ಏನೋ ಮೋಹನ ಮುರುಳಿ ಅಂತನೇ ಪ್ರಸಿದ್ಧಿ ನೋಡು ಗೆಳತಿ ತುಂಗೆಯ ದಡದಲ್ಲಿ ಕುಳಿತು ಪಿಸುಗುಟ್ಟಿ ನಕ್ಕಿದ್ದಳು. ಒಂದು ಕ್ಷಣ ತುಂಗೆ ಯಮುನೆಯಾಗಿ, ನಾವು ಗೋಪಿಕೆಯರಾಗಿ ಕೇಳಿಸದ ಮುರುಳಿಗೆ ಮೈಯೆಲ್ಲಾ ಕಿವಿಯಾಗಿ ಅಲ್ಲೆಲ್ಲೋ ರೇಡಿಯೋದಲ್ಲಿ ಇರುವುದೆಲ್ಲವ ಬಿಟ್ಟು ಸಾಲು ಕೇಳಿ ಮತ್ತೆ ವಾಸ್ತವಕ್ಕೆ ಮರಳಿ ನೀರಲ್ಲಿ ಇಳಿಬಿಟ್ಟ ಕಾಲು ಎತ್ತಿ ವಾಪಾಸಾಗಿದ್ದೆವು. ರವೀಂದ್ರ ನಾಯಕ್ ಅವರ ಕವನ ಸಂಕಲನ "ಇರುವುದೆಲ್ಲವ ಬಿಟ್ಟು" ಓದುವಾಗ ಮತ್ತೆ ಇದು ನೆನಪಾಯಿತು. ಇ

ಧರ್ಮಶ್ರೀ....

ಪುಟ್ಟಿ ಯಾವತ್ತೂ ಇದ್ದಲ್ಲೇ ಎಲ್ಲವನ್ನೂ ಹುಡುಕೋಕೆ ಹೋಗಬಾರದು. ಒಂದು ಹೆಜ್ಜೆ ಹೊರಗೆ ಬಾ ಕಣ್ಣು ತೆರೆದು ನೋಡು, ಮನಸ್ಸು ಸ್ವಲ್ಪ ವಿಶಾಲವಾಗಿಸಿಕೋ. ಪ್ರೀತಿ ಅನ್ನೋದು ಬೆಳಕು ಚೆಲ್ಲಿದಂತೆ ಹರಡಿರೋದು ಕಾಣಿಸುತ್ತೆ. ಯಾಕೆ ನಮ್ಮನ್ನು ನಾವೇ ಒಂದು ಚೌಕಟ್ಟಿನೊಳಗೆ  ಸೀಮಿತ ಮಾಡ್ಕೊಬೇಕು ಹೇಳು? ಯಾಕೆ ತನ್ನವರು ಅಂದುಕೊಂಡವರು ಮಾತ್ರ ಪ್ರೀತಿ ಕೊಡಬೇಕು ಅಂತ ಬಯಸಬೇಕು. ಪ್ರೀತಿ ಎಲ್ಲೆಯನ್ನು ಮೀರಿದ್ದು ಅಂತ ಓದೋ ನೀವುಗಳೇ ಅಲ್ವ ಕೊಟೇಶನ್ ಹೇಳೋದು ಯಾಕೆ ಅದನ್ನು ಅರ್ಥಮಾಡ್ಕೊಂಡು ಅಳವಡಿಸಿಕೊಳ್ಳಬಾರದು. ಅಪ್ಪನ ನೆನಸಿಕೊಂಡು ಅಳುತ್ತಿದ್ದವಳನ್ನು ತಲೆ ಸವರಿ ಎದುರಿಗೆ ಕೂರಿಸಿಕೊಂಡು ಮೆಲುವಾಗಿ ನ.ಕೃಷ್ಣಪ್ಪ ತಾತ ಮಾತನಾಡುತ್ತಿದ್ದರೆ ಅಳು ಯಾವಾಗ ನಿಂತಿತು ಅನ್ನುವ ಅರಿವೂ ಇಲ್ಲದೆ ಕಣ್ಣು ಕಿವಿ ಇಷ್ಟಗಲ ತೆರೆದು ಅವರನ್ನೇ ನೋಡುತ್ತಿದ್ದೆ. ಅದು ಅಸಾಧ್ಯ ಏನೋ ಸಮಾಧಾನಕ್ಕೆ ಹೇಳುತ್ತಿದ್ದಾರೆ ಅಂತ ಕಿಂಚಿತ್ತೂ ಅನ್ನಿಸದೆ ಮನಸ್ಸಿನ ಭಾರ ಇಳಿದು ಹೊಸ ದಾರಿ ತುಸು ತುಸುವೇ ತೆರೆದುಕೊಳ್ಳುತ್ತಿತ್ತು. ಮಾತಿನ ಹಿಂದಿನ ಅನುಭವ, ಪ್ರಾಮಾಣಿಕತೆ ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟಿ ಅನ್ನುವ ಪದದಲ್ಲಿದ್ದ ತುಂಬು ಪ್ರೀತಿ ಬದುಕಿಗೆ ಚುಕ್ಕು ತಟ್ಟಿ ಮಲಗಿಸುವ ಅಮ್ಮನ ಹಾಗಿತ್ತು. ಅಂತ ಕೃಷ್ಣಪ್ಪ ತಾತ ಒಂದು ಪಾತ್ರವಾಗಿದ್ದಾರೆ ಎಂದ ಕಾದಂಬರಿ ಓದದೆ ಇರುವುದಾದರೂ ಹೇಗೆ? ಧರ್ಮಶ್ರೀ ಓದಲು ಶುರುಮಾಡಲು ಅದೇ ಪ್ರಬಲ ಕಾರಣ. ಅಲ್ಲಿ ಸತ್ಯ ಅಮ್ಮನನ್ನು ಕಳೆದುಕೊಂಡಿದ