Posts

Showing posts from September, 2018

ಹುಲಿಕಲ್ ಜಾತ್ರೆ

ತೊಂಬತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಅದೂ ವರಾಹಿಯ ಮಡಿಲಿನಲ್ಲಿ ಇದ್ದಂತ ಅಪ್ಪಟ ಹಳ್ಳಿಗಳಿಗೆ ಸಂಭ್ರಮ ಹಬ್ಬವೆಂದರೆ ಅದು ಜಾತ್ರೆ. ಎಲ್ಲರನ್ನೂ ಭೇಟಿಯಾಗುವ, ಸುತ್ತೆಲ್ಲಾ ಹಳ್ಳಿಗಳು ಒಂದು ಕಡೆ ಸೇರುವ, ಈಗಿನ ಮಾತಿನಲ್ಲಿ ಹೇಳುವುದೇ ಆದರೆ ಶಾಪಿಂಗ್ ಮಾಡುವ ತಾಣ. ಹಾಗಾಗಿ ಸಂಪಗೋಡಿನ ಈಚೆ ಬದಿಯ ಹುರಳಿಯಲ್ಲಿ ಜಾತ್ರೆ ನಡೆದರೂ ಅದು ನಡೆದು ಹೋಗುವಷ್ಟು ಹತ್ತಿರ ಹಾಗೂ ಬಸ್ ಇಲ್ಲದ ಕಾರಣ ಹುಲಿಕಲ್ ಜಾತ್ರೆಯೆಂದರೆ ಸ್ವಲ್ಪ ಹೆಚ್ಚೇ ಪ್ರೀತಿ. ಯಡೂರಿನ ತನಕ ನಡೆದು ಅಲ್ಲಿ ಕಾದು ಧೂಳು ಎಬ್ಬಿಸಿಕೊಂಡು ಬರುವ ಕೆಂಪು ಬಣ್ಣದ ಬಸ್ಸು ಹತ್ತಿ ತುಂಬಿರುವ ಜನಜಂಗುಳಿಯಲ್ಲಿ ಜಾಗ ಮಾಡಿ ನಿಂತು ಕೊಂಡರೆ ಯುದ್ಧ ಗೆದ್ದ ಭಾವ. ಕೂರಲು ಸೀಟ್ ಏನಾದರೂ ಅದರಲ್ಲೂ ಕಿಟಕಿಯ ಪಕ್ಕ ಸಿಕ್ಕಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ಅದರಲ್ಲೂ ಗುಂಡಯ್ಯನ ಮಗಳನ್ನು ಅಲ್ಲಿಯ ಅರ್ಚಕರ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟ ಮೇಲಂತೂ ಅದು ಮನೆಯ ಮಗಳ ಮನೆಯ ಜಾತ್ರೆ. ಹೋಗದೆ ಇರುವುದಾದರೂ ಹೇಗೆ? ಇಂಥಾ ಮಾಸದಲ್ಲಿ ಇಂಥಾ ಜಾತ್ರೆ ಅಂತ ದೊಡ್ಡವರಿಗೆ ನೆನಪಿದ್ದರೂ ಇರುತಿದ್ದ ಒಂದೇ ಒಂದು ಕ್ಯಾಲೆಂಡರ್ ನೋಡಿ ಅದ್ರಲ್ಲಿ ಮಾರ್ಕ್ ಮಾಡಿ ದಿನಾಲೂ ಇನ್ನು ಎಷ್ಟು ದಿನ ಎಂದು ಎಣಿಸುವುದೂ ಕೂಡಾ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿ ಹೋಗಿತ್ತು. ನಾಳೆ ಜಾತ್ರೆ ಎಂದರೆ ರಾತ್ರಿಯಿಂದಲೇ ಕಾತರ. ಬೆಳಗಾಗುವುದನ್ನೇ ಕಾಯುವುದರ ಭರದಲ್ಲಿ ನಿದ್ದೆ ಎಂಬುದು ಅದಾಗಲೇ ಜಾತ್ರೆಗೆ ಹೋಗಿರುತಿತ್ತು. ಎಂದೂ ಹತ್ತು ಸ

ದೇವರಾಯನ ದುರ್ಗ

ಬೆಳಿಗ್ಗೆ ಎದ್ದ ಕೂಡಲೇ ದೇವರಿಗೆ ನಮಸ್ಕಾರ ಮಾಡಿದ್ಯಾ ಅನ್ನೋದರಿಂದಲೇ ಪ್ರಾರಂಭವಾಗುತ್ತಿದ್ದ ದಿನಗಳು ಅವು. ಹೊಮ್ಮುತ್ತಿದ್ದ ಕಾಫಿಯ ಪರಿಮಳ ದೇವರ ಕೋಣೆಯಲ್ಲಿ ಆಸೀನರಾಗಿರುತ್ತಿದ್ದ ಎಲ್ಲರಿಗೂ ಒಂದು ಕಾಟಾಚಾರದ ನಮಸ್ಕಾರ ಮಾಡಿ ಬರುವುದಕ್ಕೆ ಅವಸರಿಸುತ್ತಿತ್ತು. ಮೂರ್ತಿ ಹಲವಾದರೂ ನಮ್ಮ ಪಾಲಿಗೆ ದೇವರೊಬ್ಬನೇ ಅನ್ನೋ ಅದ್ವೈತವನ್ನು ಕಾಫಿ ಕಲಿಸಿತ್ತು. ಸ್ವಲ್ಪ ಬುದ್ಧಿ ಬಂದಿದೆ ಅಂತ ನನಗೆ ನಾನೇ ಘೋಷಿಸಿಕೊಳ್ಳುವ ಸಮಯದಲ್ಲಿ ಮನೆಯ ಹತ್ತಿರದಲ್ಲಿ ಗಣಪತಿ ಬಂದು ದೇವಸ್ಥಾನ ಕಟ್ಟಿಸಿಕೊಂಡು ಕೂತು ಬಿಟ್ಟಿದ್ದ. ಹಾಗಾಗಿ ಹೋಂವರ್ಕ್ ಮಾಡದೆ ಬೆಳಿಗ್ಗೆ ಸ್ಕೂಲ್ ಗೆ ಹೋಗುವ ಸಮಯದಲ್ಲಿ ಇವತ್ತು ಮೇಷ್ಟ್ರಿಗೆ ನೆನಪಾಗದಿರಲಿ ದೇವರೇ ಅನ್ನುವಲ್ಲಿಂದ ಹಿಡಿದು ಎಲ್ಲಾ ಬೇಡಿಕೆಗಳನ್ನೂ ಗಡಿಬಿಡಿಯಲ್ಲಿ ಅವನಿಗೆ ಆಜ್ಞಾಪಿಸಿ ಹೋಗುವ ಅಭ್ಯಾಸವಾಗಿತ್ತು. ಅದ್ವೈತ ಹೀಗೆ ಬಾಲ್ಯದಿಂದಲೇ ಪಾಲಿಸುತ್ತಿದ್ದ ನಮಗೆ ಮನೆದೇವರು, ಇಷ್ಟ ದೇವರು ಅನ್ನೋ ದ್ವೈತದ ಅರಿವೇ ಇರಲಿಲ್ಲ. ಕಾಲ ಕಳೆದಂತೆ ನಮಗೂ ಒಬ್ಬ ಮನೆದೇವರು ಇದ್ದಾನೆ ಅನ್ನೋದು ಗೊತ್ತಾಗಿ ಒಮ್ಮೆ ಹೋಗಿಬರುವ ಅಂತ ಯೋಚಿಸಿ ಅದೂ ಸರ್ಕಾರದ ಬಹುತೇಕ ಯೋಜನೆಗಳಂತೆ ಹಾಗೆಯೇ ಇತ್ತು. ಮೊನ್ನೆ ಬಂದ ಅಣ್ಣ ಈ ಸಲ ಹೊಗಿಬರೋದೆ ಅಂತ ಸುಗ್ರೀವಾಜ್ಞೆ ಹೊರಡಿಸಿದ ಮೇಲೆ ಅಂತೂ ಇಂತೂ ಹೊರಟು ದೇವರಾಯನ ದುರ್ಗ ತಲುಪಿದೆವು. ಮಳೆಗಾಲ ಆರಂಭವಾಗಿದ್ದರಿಂದ ಹಸಿರು ಎಲ್ಲೆಡೆ ಆವರಿಸಿ ನಗುತ್ತಿತ್ತು. ಪ್ರಕೃತಿಯು ಮನಸ್ಸ

ಉಮ್ಮಾ

ಅನಿವಾರ್ಯತೆ ಹಾಗೂ ಅಸಹಾಯಕತೆ ಎಲ್ಲವನ್ನೂ ಒಪ್ಪಿಕೊಳ್ಳುವ ಹಾಗೆ ಮಾಡುತ್ತೆ ನೋಡು. ಹಾಗಾದಾಗ ನನ್ನ ಕೈಯಲ್ಲಿ ಏನಿದೆ ಎಲ್ಲವೂ ಅವನಿಚ್ಚೆ ಅಂದುಕೊಂಡಾಗ ಅದನ್ನು ಸ್ವೀಕರಿಸಲು ಮನಸ್ಸು ಸಜ್ಜಾಗುತ್ತೆ, ಭಾರ ಕಡಿಮೆ ಆಗುತ್ತೆ ಅನ್ನೋಳು ಅಜ್ಜಿ. ಆಗಿನ್ನೂ ಹದಿ ಹರೆಯ. ರಕ್ತ ಕುದಿಯುವ ವಯಸ್ಸು. ಹೌದೌದು ಒಪ್ಪಿಕೊಂಡರೆ ಎಲ್ಲವನ್ನೂ ಒಪ್ಪಿಕೊಳ್ತಾ ಹೋಗ್ಬೇಕು, ತಪ್ಪನ್ನೂ ತಪ್ಪು ಎನ್ನದ, ವಿರೋಧಿಸದ ಬದುಕು ಹೇಡಿತನದ ಬದುಕಲ್ವಾ ಎಂದು ತಿರುಗಿ ಸ್ವಲ್ಪ ಒರಟಾಗಿ ಹೇಳಿದ್ದರೂ ಅವಳು ನಸುನಕ್ಕು ಒಳಗೆ ಹೋಗಿದ್ದಳು. ಉಮ್ಮಾ ಓದುತ್ತಿರುವಷ್ಟು ಹೊತ್ತೂ ಇದು ನೆನಪಾಗುತ್ತಲೇ ಇತ್ತು. ಪ್ರವಾದಿಯರ ಪತ್ನಿಯರ ಬಗ್ಗೆ ಬರೆದ ಕಾದಂಬರಿಯಾದರೂ  ಮುಖ್ಯ ವಾಗಿ ಆಯಿಷಾಳ ಬಗ್ಗೆ ಇದ್ದರೂ ಇಡೀ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ಗಟ್ಟಿ ಪಾತ್ರ ಅನ್ನಿಸೋದು, ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ಆಫೀರಾ. ಹೇಳಬೇಕಾಗಿದ್ದನ್ನು ಸ್ಪಷ್ಟವಾಗಿ, ನೇರವಾಗಿ ಹೇಳುವ ಅವಳ ಧೈರ್ಯ, ಸಮಸ್ಯೆಗಳನ್ನು ಎದುರಿಸುವ ರೀತಿ, ಗಟ್ಟಿತನ ಎಲ್ಲವೂ ಅದ್ಭುತ. ಆಫೀರಾ ಅರ್ಥವಾಗುತ್ತಾ ಹೋದಂತೆ ಅನಿವಾರ್ಯತೆ ಎಂದೂ ಅಂತಿಮ ಸತ್ಯವಲ್ಲ, ಕಾನೆದುರು ಕುಣಿಯುತ್ತಿರುವ ಅನಿವಾರ್ಯತೆಯನ್ನು ಸೋಲಿಸುವ ಶಕ್ತಿ ತನ್ನೊಳಗೇ ಇದೆಯೆಂಬ ಸತ್ಯ ಹೆಣ್ಣಿಗೆ ಅರಿವಾದ ದಿನ ಅವಳು ಪ್ರಶ್ನಿಸಲಾರಂಭಿಸುತ್ತಾಳೆ. ಬಹಿರ್ನಗವಾಗಿ ಪ್ರಶ್ನಿಸಲು ಅಂಜಿಕೆಯಾದರೆ ಕನಿಷ್ಠ ಸ್ವಗತದಲ್ಲಾದರೂ ಪ್ರಶ್ನಿಸಿಕೊಳ್ಳುತ್ತಿರುತ್ತಾಳೆ ಅನ್ನೋ

ಲಕ್ಷ್ಮಣ ರೇಖೆ

ಮಾಯಾಮೃಗದ ಮೋಹಕ್ಕೆ ಬೀಳುವ ಸೀತೆ , ಅದಕ್ಕಾಗಿ ಹೊರಡುವ ರಾಮನ ಕತೆ ಎಲ್ಲರಿಗೂ ಗೊತ್ತಿರುವುದೇ. ಯಾವತ್ತೂ ಯಾವುದಕ್ಕೂ ಆಸೆ ಪಡದ ಸೀತೆ ಅಂದು ಯಾಕೆ ಹಠ ಹಿಡಿದಳು, ರಾಕ್ಷಸರ ಕುತಂತ್ರ ಆವೇಳೆಗಾಗಲೇ ಅರಿತಿದ್ದ ರಾಮ ಯಾಕೆ ಒಂದು ಕ್ಷಣ ಅದನ್ನು ದಿಟ್ಟಿಸಿ ನೋಡಲಿಲ್ಲ,   ಮಾರೀಚನ ಕುತಂತ್ರವನ್ನು ಅರಿಯುವಲ್ಲಿ ಮತ್ತೆ ಸೋಲುವ ಸೀತೆ ಲಕ್ಷ್ಮಣನನ್ನು ರಾಮನ ರಕ್ಷಣೆಗೆ ಹೋಗಲು ಹೇಳುತ್ತಾಳೆ. ಮೋಹ ವಿವೇಚನಾ ಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಅದರ ಜೊತೆಗೆ ದುಃಖ, ಆವೇಶ ಸೇರಿದರಂತೂ ಮುಗಿದೇಹೋಯಿತು. ಮದವೇರಿದ ಕಪಿಗೆ ಚೇಳು ಕಚ್ಚಿದಂತೆ ಆಗುತ್ತದೆ. ನಿಮ್ಮನ್ನು ಬಿಟ್ಟು ಹೋಗಲಾರೆ, ರಾಮನ ಶಕ್ತಿ ಅನುಮಾನಿಸಬೇಡಿ  ಅನ್ನುವ ಲಕ್ಷ್ಮಣನನ್ನೇ ಹೀನಾಯವಾಗಿ ನಿಂದಿಸುತ್ತಾಳೆ. ತಲೆ ಎತ್ತಿಯೂ ನೋಡದ ಮಗನಂತಹ ಮೈದುನನನ್ನು ಮಾತಿನಿಂದ ಘಾಸಿಗೊಳಿಸುತ್ತಾಳೆ.   ಬೇರೆ ದಾರಿ ಕಾಣದೆ ಆಶ್ರಮದ ಸುತ್ತಲೂ ಒಂದು ಗೆರೆಯನ್ನಳೆದು ಯಾವುದೇ ಕಾರಣಕ್ಕೂ ಅದನ್ನು ದಾಟಿ ಬರದಂತೆ ವಿನಂತಿಸಿ ಲಕ್ಷ್ಮಣ ರಾಮನನ್ನು ಅರಸುತ್ತಾ ಹೊರಡುತ್ತಾನೆ.  ಒಂದು ಕ್ಷಣ ಮೈ ಮರೆತರೆ, ವಿವೇಚನೆ ಕಳೆದುಕೊಂಡರೆ ಎಂಥಹಾ ಅನಾಹುತ ಆಗಬಹುದು, ಒಂದು ತಪ್ಪಿಗೆ ಹೇಗೆ ಇನ್ನೊಂದು ಮತ್ತೊಂದು ಜೊತೆಯಾಗುತ್ತಾ ಹೋಗುತ್ತದೆ ಎನ್ನುವುದನ್ನ, ಯಾಕೆ ಸದಾ ಎಚ್ಚರವಾಗಿರಬೇಕು ಎಂಬುದನ್ನು  ಹೇಗೆ ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಲಕ್ಷ್ಮಣ ರೇಖೆ ಅದೃಶ್ಯವಾಗಿ ಇರುತ್ತದೆ ಅನ್ನುವುದನ್ನ  ನ. ಕೃಷ್ಣಪ್ಪ ತಾತ ವಿವರಿ

ಗಣಪತಿ ಹಬ್ಬ.

ಗೌರಿವ್ರತ ಮುಗಿದು ಊಟ ಮಾಡಿ ಸ್ವಲ್ಪ ಸುಧಾರಿಸಿಕೊಂಡು ಕಾಫಿ ಕುಡಿಯುವ ಹೊತ್ತಿಗೆ ಜಯತ್ತೆಯ ಅವಸರ ಶುರುವಾಗುತ್ತಿತ್ತು. ಯಾವ ಗದ್ದೆಯ ಅಂಚಿನಲ್ಲಿ ಹೆಚ್ಚು ಗರಿಕೆ ಸಿಗಬಹುದು ಅನ್ನುವ ಲೆಕ್ಕಾಚಾರ. ಮರುದಿನ ಗಣಪತಿಗೆ ಯಾರು ಜಾಸ್ತಿ ದೂರ್ವೆ ಕೊಯ್ದು ತರ್ತಾರೆ ಅನ್ನೋ ಅಘೋಷಿತ ಸ್ಪರ್ಧೆಯಂತೂ ಇದ್ದೇ ಇರುತ್ತಿತ್ತು. ತುಂಬಿದ ಹೊಟ್ಟೆಯಲ್ಲಿ, ಸಣ್ಣನೆಯ ಮಳೆಯಲ್ಲಿ,  ಜಾರುವ ಗದ್ದೆಯ ಅಂಚಿನಲ್ಲಿ ಜಿಟಿ ಪಿಟಿ ಮಳೆಯಲ್ಲಿ ದೂರ್ವೆ ಹುಡುಕುವುದು ಸುಲಭವೇನಲ್ಲ. ಹಾಗಾಗಿ ಮೊದಲೇ ಗುರುತಿಸಿಟ್ಟು ಕೊಂಡು ಅವತ್ತು ಅಲ್ಲಿಗೆ ಧಾಳಿಮಾಡುವ ಆಲೋಚನೆ ಹದಿನೈದು ದಿನಗಳ ಮುಂಚೆಯೇ ತಯಾರಾಗಿರುತಿತ್ತು. ಆಗ ತಾನೇ ಬೇರು ಕೊಟ್ಟು ಹಸಿರು ಒಡೆದು ತಲೆತೂಗುವ ಭತ್ತದ ಪೈರು, ಪಾದ ಮುಳುಗುವ ನೀರಿನಲ್ಲಿ ಹರಿದಾಡುವ ಏಡಿಗಳು ಕೊಯ್ಯುವ ತನ್ಮಯತೆಯಲ್ಲಿರುವ  ನಮ್ಮ ಕೈ ಕಾಲಿನ ಮೇಲೆ ಹರಿದು ಅಲ್ಲೇ ಡಾನ್ಸ್ ಮಾಡುವ ಹಾಗೆ ಮಾಡಿ ಕೈಯಲ್ಲಿರುವ ಗರಿಕೆ ಚೆಲ್ಲಪಿಲ್ಲಿಯಾಗುವುದು ತೀರಾ ಸಹಜವಾಗಿತ್ತು. ದಿನಾ ಕೊಯ್ಯುವ ಗರಿಕೆಯದು ಒಂದು ಹದವಾದರೆ ಹಬ್ಬಕ್ಕೆ ಕೊಯ್ಯುವುದೇ ಬೇರೆ ಹದ. ಮೃದುವಾದ ಚಿಗುರು ಗರಿಕೆ ಅದೂ ಐದು ಎಸಳು ಇರಬೇಕು, ಮಾಲೆ ಕಟ್ಟಲು ಬರಬೇಕು. ಅರ್ಚನೆ ಮಾಡಿದರೆ ನೋಡಲು ಕಣ್ಮನ ತುಂಬುವಂತಿರಬೇಕು. ಹಾಗಾಗಿ ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ಅರಸುತ್ತಾ ಕೆಲವೊಮ್ಮೆ ಎಷ್ಟು ದೂರ ಹೋಗಿದ್ದೇವೆ ಅನ್ನೋದು ಮುಗಿದ ಮೇಲೆಯೇ ಅರಿವಿಗೆ ಬರುತ್ತಿದ್ದದ್ದು. ಶ್ರೇಷ್ಠವಾದದ್ದು ಸು

ಗೌರಿ ಹಬ್ಬ

ಶ್ರಾವಣ ಮುಗಿದು ಭಾದ್ರಪದ ಬರುವ ಹೊತ್ತಿಗೆ ಬೇಸಾಯದ ಬಹುತೇಕ ಕೆಲಸಗಳು ಮುಗಿದಿರುತ್ತದೆ. ಒಂದೇ ಸಮನೆ ಶ್ರುತಿ ಹಿಡಿದು ಹಾಡುತ್ತಿದ್ದ ಮಳೆಗೂ ಬೇಸರ ಬಂದು ಆಗಾಗ ನಿಲ್ಲಿಸಿ ಸುಮ್ಮನಾಗುತ್ತಿರುತ್ತದೆ. ಸೂರ್ಯನೂ ಸಣ್ಣಗೆ ನಗೆ ಬೀರುವ ಹೊತ್ತಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೂ ನಾಚಿಸುವ ವರ್ಣಗಳ ಬಳೆಗಳನ್ನು ಹೊತ್ತು ಬಳೆಗಾರರು ಹೊರಡುವ ಸಮಯವದು. ಭಾಗ್ಯಾದ ಬಳೆಗಾರ ಹೋಗಿ ಬಾ ನನ್ನ ತವರಿಗೆ ಅಂತ ಮಗಳು ಆಸೆಯ ಕಂಗಳಿಂದ ಪಿಸುಗುಡುವ ಹೊತ್ತಿದು. ನಿನ್ನ ತವರು ಎಲ್ಲಿದೆ ಅಂತ ಕೆಣಕಿ ಅವಳ ನೆನಪನ್ನು ಇನ್ನಷ್ಟು ಕೆದಕಿ ಅವುಗಳ ಚಿತ್ತಾರ ಮೂಡಿಸುವ ಗಳಿಗೆಯಿದು. ಸಸಿ, ನೆಟ್ಟಿ, ಕಳೆ ಅಂತ ಗದ್ದೆ ಕೆಲಸದಲ್ಲಿ ವ್ಯಸ್ತರಾಗಿದ್ದ ಜನಗಳಿಗೆ, ಮಳೆಗೆ, ಗಾಳಿಗೆ ಎಲ್ಲರಿಗೂ ಕೊಂಚ ವಿಶ್ರಾಂತಿ ಸಮಯ. ಸ್ವಲ್ಪ ನಿರಾಳವಾಗುತ್ತಿದ್ದಂತೆ,  ಹೆಣ್ಮಕ್ಕಳಿಗೆ ತವರಿನ ನೆನಪು ಬಿಟ್ಟು ಬಿಟ್ಟು ಸುರಿಯೋ ಮಳೆಯಂತೆ. ಮಳೆ ಬಿಸಿಲ ಚೆಲ್ಲಾಟದ ಕುರುಹೋ ಎಂಬಂತೆ ಮೂಡುವ ಕಾಮನಬಿಲ್ಲು ನೆನಪಿನ ಬತ್ತಳಿಕೆಯನ್ನು ತೆರೆದು ಹೂಡಲು ಪ್ರೇರೇಪಿಸುವ ಹೊತ್ತಿಗೆ ಬಳೆಗಳ ಸದ್ದು. ಶ್ರಾವಣದ ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಅಮ್ಮಂದಿರಿಗೆ, ಅಜ್ಜಿಯರಿಗೆ ಗೆಜ್ಜೆವಸ್ತ್ರ ಮಾಡುವ ಕೆಲಸ. ಮನೆಯಂಗಳದಲ್ಲಿ ಬೆಳೆದ ಹತ್ತಿಯನ್ನು ಬಿಡಿಸಿ ಬೆಚ್ಚಗೆ ಡಬ್ಬಿಯಲ್ಲಿ ತುಂಬಿ ತಂಡಿಯಾಗದಂತೆ ಅಟ್ಟದಲ್ಲಿಟ್ಟದ್ದನ್ನು ಕೆಳಗಿಸಿ ಅದಕ್ಕೆ ಮುಕ್ತಿ ಕೊಡುವ ಭರಾಟೆ. ಮಧ್ಯಾನದ ಹೊತ್ತಿನಲ್ಲಿ ಅದನ್ನು ಮೆದುವಾಗ