Posts

Showing posts from February, 2018

ಪೋಸ್ಟ್ ಮ್ಯಾನ್

ಗಾಡಿ ನಿಲ್ಲಿಸಿ ಹೊರಡುವಾಗ ಬಂದ ಸೆಕ್ಯೂರಿಟಿ ನಿಂಗೊಂದು ಕೊರಿಯರ್ ಇದೆ ತಗೊಮ್ಮಾ ಅಂದ್ರು. ನಂಗಾ ಎಂದು ಕೊಂಚ ಅಚ್ಚರಿಯಲ್ಲೇ ಸ್ವಲ್ಪ ಅನುಮಾನದಲ್ಲೇ ತೆಗೆದುಕೊಂಡು ನೋಡಿದೆ, ಹೌದು ನನ್ನದೇ ವಿಳಾಸ ಹೊತ್ತ ಪುಟ್ಟ ಪ್ಯಾಕ್. ಸ್ಪರ್ಶಿಸುತ್ತಿದ್ದಂತೆ ಮನಸ್ಸು ಬಾಲ್ಯಕ್ಕೆ ಓಡಿತು. ಓಲೆಯ ಹಂಚಲು ಹೊರಡುವೆ ನಾನು ತೋರಲು ಆಗಸದಲಿ ಬಿಳಿ ಬಾನು ಒಳಗಡೆ ನೀವು ಹೊರಗಡೆ ನಾನು ಕಾಗದ ಬಂತೂ ಕಾಗದವೂ.... ಹಿಂದೆಲ್ಲಾ ಸೈಕಲ್ ಬೆಲ್ ಅನ್ನೋದು ಒಲಂಪಿಕ್ ಸ್ಪರ್ದೆಯ ಸದ್ದಿದ್ದಂತೆ. ಮಾಡುವ ಕೆಲಸವನ್ನು ಬಿಟ್ಟು ಓಡುತ್ತಿದ್ದೆವು. ಬಾಗಿಲಲ್ಲಿ ಕಾಣಿಸುವ ಪೋಸ್ಟ್ಮನ್ ಥೇಟ್ ದೇವದೂತನಂತೆ ಕಾಣಿಸುತ್ತಿದ್ದ. ಅವನ ಹೆಗಲಿನ ಚೀಲವೋ ಹಲವು ಭಾವಗಳನ್ನು ತನ್ನೊಡಲಲ್ಲಿ ಅಡಗಿಸಿಟ್ಟು ಕೊಂಡ ನಿಶ್ಚಲ ಸಮುದ್ರ. ಆ ಚೀಲದೊಳಕ್ಕೆ ಕೈ ಹಾಕಿ ಅವನು ತೆಗೆಯುವುದನ್ನೇ ಕಾತುರದಿಂದ ಕಾಯುತ್ತಿದ್ದ ನಾವು ಸಿಕ್ಕಿದೊಡನೆ ಮಾಡುವ ಮೊದಲ ಕೆಲಸ ಅದು ಯಾರಿಗೆ ಎಂದು ನೋಡುವುದು. ಬರುವ ಪ್ರತಿ ಪತ್ರದ ಬರಹವೂ ಪರಿಚಿತವಾದರೂ ಅದನೊಮ್ಮೆ ಹಿಂದೆ ತಿರುಗಿಸಿ ನೋಡಿ ಮತ್ತೊಮ್ಮೆ ಬರೆದವರು ಯಾರು ಎಂದು ಕನ್ಫರ್ಮ್ ಮಾಡಿಕೊಳ್ಳುವುದರಲ್ಲೂ ಅದೇನೋ ಸಂಭ್ರಮ. ಅದೆಷ್ಟೇ ಆತುರವಿದ್ದರೂ ಒಮ್ಮೆಗೆ ಒಡಿಯುವಹಾಗಿಲ್ಲ. ಓಡಿ ಬಂದು ಒಂದು ಜಾಗದಲ್ಲಿ ಕುಳಿತುಕೊಂಡು ಅದನ್ನು ನಿಧಾನವಾಗಿ ಇಷ್ಟಿಷ್ಟೇ ಬಿಡಿಸುತ್ತಾ ಸಂಪೂರ್ಣವಾಗಿ ತೆರೆಯುವುದು ಒಂದು ಕಲೆ. ಇನ್ನು ಒಂದು ಅಕ್ಷರವನ್ನೂ ಭರಿಸಲಾರೆ ಅನ
ವಯಸ್ಸಾದಂತೆ ಮಕ್ಕಳ ಹಾಗೆ ಆಗ್ತಾರೆ ಅನ್ನೋದು ಕೇಳಿ ಅಪನಂಬಿಕೆಯಲ್ಲಿ ನಕ್ಕಿದ್ದ ನನ್ನನ್ನು ಕಂಡು ಹಾಗಲ್ಲ ಪುಟ್ಟಿ ಅರವತ್ತು ವರ್ಷಕ್ಕೆ ದೇಹದೊಳಗೆ ಬದಲಾವಣೆ ಆಗುತ್ತೆ, ಅದೊಂತರ ಸಂಧಿಕಾಲ, ಹಾಗಾಗಿಯೇ ಅರವತ್ತು ವರ್ಷಕ್ಕೆ ಶಾಂತಿ ಮಾಡೋದು ಅಂತ ಅಣ್ಣ ಹೇಳಿದಾಗ ತಲೆಯಾಡಿಸಿದ ನಂಗೆ ನಿನ್ನ ನೋಡಿದ ಕೂಡಲೇ ನಿಜವೆನ್ನಿಸಿತ್ತು ನೋಡು. ದೇಹವೂ ಕುಗ್ಗಿ ಪುಟ್ಟ ಮಗುವಿನ ಹಾಗೆ ಕಾಣುತಿದ್ದೆ. ಎತ್ತಿಕೊಂಡು ಹೋಗಬಹುದು ನಿನ್ನನ್ನ ಅಂದರೆ ನಗುತ್ತಾ ವಯಸ್ಸಾಯ್ತಲ್ಲೇ ಅಂತ ಬೊಚ್ಚು ಬಾಯಿ ಬಿಟ್ಟು ನಗುವಾಗಲೆಲ್ಲ ಮಗು ನಕ್ಕಂತೆ ಅನ್ನಿಸುತಿತ್ತು ನೋಡು. ಮೈಕೈ ಎಲ್ಲಾ ನೋವು ಕಣೆ ಅಂತ ನೀನು ಕಾಲು ಚಾಚಿದರೆ ಪುಟ್ಟ ಸವೆದ ಪಾದಗಳು, ಚರ್ಮದ ನೆರಿಗೆಗಳು ನೀನು ಸವೆಸಿದ ದೂರವನ್ನು ಸರಿಯಾಗಿ ಹೇಳುತ್ತಿದ್ದವೇನೋ. ನೀನು ಮರೆತರೂ ಅವು ಮರೆತಿರಲಿಲ್ಲ ನೋಡು. ನಿನ್ನ ಬದುಕಿನ ದಾರಿಯಾದರೂ  ಅಷ್ಟು ಸುಲಭವಿತ್ತೆ ಮರೆಯಲು. ಅದೇಗೆ ನಡೆದು ತಲುಪಿದೆಯೋ ಅಂತ ಯೋಚಿಸಿದರೆ ಈಗಲೂ ಕಣ್ಣಲ್ಲಿ ಅಚ್ಚರಿ ಹಾಗೂ ಅಣೆಕಟ್ಟು ಎರಡೂ ತುಂಬಿ ಹರಿಯುತ್ತೆ ನೋಡು. ಬರೆದರೆ ಮಹಾಗ್ರಂಥವಾಗುತಿತ್ತೇನೋ ಅಷ್ಟನ್ನು ಎದೆಯೊಳಗೆ ಅಡಗಿಸಿಟ್ಟು ಕೊಂಡಿದ್ದೆಯಲ್ಲ ಅದು ಹೇಗೆ ಮಾರಾಯ್ತಿ? ನೀನು ಅನುಭವಿಸಿದ ಅವಮಾನ, ಕೇಳಿದ ಮಾತು, ಹಲ್ಲು ಕಚ್ಚಿ ಸಹಿಸಿದ ಪರಿಸ್ಥಿತಿ ಅದು ಹೇಗೆ ಒಡಲೊಳಗೆ ಕಿಚ್ಹಾಗಿತ್ತು ಅನ್ನೋದು ಅರ್ಥವಾಗಿದ್ದು ಮರುದಿನ ಬೆಂಕಿದೂಡಲು ಹೋದಾಗಲೇ ನೋಡು. ಒಂದು ಚೂರು ಕಟ್ಟಿಗೆಯೂ ದೊರ

ರಂಗೋಲಿ

ದಿನಾಲು ಹೊಸ್ತಿಲು ಸಾರಿಸಿ ಎರಡೆಳೆ ಎಳೆದರೆ ತೃಪ್ತವಾಗುವ ರಂಗೋಲಿಗೆ ಮಂಗಳವಾರ, ಶುಕ್ರವಾರ ಬಂದರೆ ಎಲ್ಲಿಲ್ಲದ ಸಂಭ್ರಮ. ಅವತ್ತು ಅಂಗಳವನ್ನು ಸಗಣಿಯಿಂದ  ಸಾರಿಸಿ ಪುಸ್ತಕವನ್ನು ಹುಡುಕಿ ದೊಡ್ಡದೊಂದು ಚಿತ್ರಕ್ಕೆ ಜೀವ ತುಂಬುವ ಪುಳಕ. ಸಾರಿಸುವುದಾದರೂ ಹೇಗೆ ಗೊತ್ತಾ? ಸಗಣಿ ಸಾರಿಸುವುದಕ್ಕೆ ಕಣ್ಣಿರು ಹಾಕೋದು ಅನ್ನೋದು ಹಳ್ಳಿ ಕಡೆ ರೂಡಿಯಾದ ಪದ ಬಳಕೆ. ನಿಜಾರ್ಥದಲ್ಲಿ ಕಣ್ಣೀರು ಬರುತಿದ್ದದ್ದೂ ಹೌದು. ಬಾವಿಯಿಂದ ನೀರು ಸೇದಿ ಹೊತ್ತು ತಂದು ಇಡೀ ಅಂಗಳಕ್ಕೆ ಸಗಣಿ ಸಾರಿಸುವ ಹೊತ್ತಿಗೆ ಕಣ್ಣಲ್ಲಿ  ನೀರು ಹನಿಯುವ ಹಾಗೆ ಆಗುತಿತ್ತು. ಸೊಂಟ ಮಾತಾಡುತಿತ್ತು. ಕೊಟ್ಟಿಗೆಯಲ್ಲಿ ಬಿದ್ದ ಗಟ್ಟಿ ಸಗಣಿ ಮುದ್ದೆಯನ್ನು ಆರಿಸಿ ತರಬೇಕು. ಒಂದು ಬುಟ್ಟಿಯಷ್ಟಾದರೂ ಸಗಣಿ ಆರಸಿ ಅಂಟಿಕೊಂಡ ದರಗು ಕಸ ಕಡ್ಡಿ ಎಲ್ಲವನ್ನೂ ತೆಗೆದು  ತಂದು ಅಂಗಳದ ಮಧ್ಯಕ್ಕೆ ಹಾಕಿದರೆ ಅನುಭವಿ ಅಜ್ಜಿಯ ಕಣ್ಣು ಸಾಕಾ ಬೇಕಾ ಅನ್ನುವುದನ್ನು ಸೂಚಿಸುತ್ತಿತ್ತು. ಆಮೇಲೆ ಅಂಗಳದ ಬದಿಯಲ್ಲಿ ಸೂರಂಕಣದ ಮೂಲೆಯಲ್ಲಿ  ಪೇರಿಸಿ ಇಟ್ಟಿರುವ ಕರಿ ಉಂಡೆಯನ್ನು ತಂದು ಅದಕ್ಕೆ ಸೇರಿಸಬೇಕು. ಈ ಕರಿ ಉಂಡೆ ಅಂದರೆ ಗದ್ದೆ ಕೊಯ್ಲು ಆದ ಮೇಲೆ ಹುಲ್ಲು, ಕಸ ಕಡ್ಡಿ, ಧಾನ್ಯ ಕಿತ್ತ ಮೇಲೆ ಉಳಿದ ಕಸ ಎಲ್ಲವನ್ನೂ ಸುಟ್ಟು ಅದನ್ನು ಉಂಡೆ ಮಾಡಿ ಇಡುತ್ತಾರೆ. ಹೀಗೆ ಅಂಗಳ ಬಳೆಯಲು, ಚಪ್ಪರದ ಕಲ್ಲು ಕಂಬಕ್ಕೆ ಹಚ್ಚಲು ಇದು ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ಅದು ಖಾಲಿ ಆಗಿದ್ದರೆ ಅರ್ಜೆಂಟ್ ಗೆಂದೇ ಇ

ಜಾನಕಿ ಕಾಲಂ.

ಬಸ್ ಸ್ಟಾಂಡ್ ನ ಪುಟ್ಟ ಅಂಗಡಿಯಲ್ಲಿ ತೂಗು ಹಾಕಿರುತಿದ್ದ ಕೃಷ್ಣಸುಂದರಿ ಹಾಯ್ ಬೆಂಗಳೂರು ಮನಸೆಳೆದರೂ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ. ಪರಿಚಯದ ಮನೆಯವರೊಬ್ಬರ ಮನೆಯ ಟೇಬಲ್ ಮೂಲೆಯಲ್ಲಿರುತಿದ್ದ ಅದು ಕಂಡಕೂಡಲೇ ಗಬಕ್ಕನೆ ಎಳೆದುಕೊಂಡು ಪುಟ ತಿರುಗಿಸಿ ಕಣ್ಣು ಹಾಯಿಸಿ ಓದುತ್ತಿದ್ದದ್ದು ಮಾತ್ರ ಜಾನಕಿ ಕಾಲಂ. ಜಾನಕಿಯೆನ್ನುವ ಹಳೆಯ ಕಾಲದ ಹೆಸರಿನ ಹುಡುಗಿಯ ಬರೆಯುವ ಧೈರ್ಯ ಅದನ್ನು ಓದಲು ಪ್ರೇರಿಪಿಸುತಿತ್ತಾ... ಗಡಿಬಿಡಿಯಲ್ಲಿ ಓದಿ ಮುಗಿಸುವ ಆತುರದಲ್ಲಿ ಎಷ್ಟು ಅರ್ಥವಾಗುತಿತ್ತೋ, ನೆನಪಿರುತಿತ್ತೋ ಯಾರಿಗೆ ಗೊತ್ತು? ಆದರೆ ಜಾನಕಿ ಅನ್ನೋ ಹೆಸರು, ಸಣ್ಣಗೆ ಹರಿಯುತಿದ್ದ ತಣ್ಣಗಿನ ನದಿಯಂತ ಶೈಲಿ ಮಾತ್ರ ಎದೆಯ ಗೂಡಿನೊಳಗೆ ಬೆಚ್ಚಗೆ ಕುಳಿತುಬಿಟ್ಟಿತ್ತು. ತೀರಾ ಇತ್ತೀಚಿಗೆ ಅದನ್ನು ಬರೆದಿದ್ದು ಜೋಗಿ ಅಂತ ಗೊತ್ತಾಗಿ ಸಪ್ನಾದಲ್ಲಿ ಅವರ ಪುಸ್ತಕಗಳ ನಡುವೆ ಅರಸಿ ಸೋತು ಹೋಗಿ ಮರೆತೇ ಹೋಗುವ ಸಮಯದಲ್ಲಿ ನೆನಪಿಸಿದ್ದು ಮಾಲಿನಿ ಅಕ್ಕಾ... ಜಾನಕಿ ಸಿಕ್ಕಿದ್ದು ಗಾಂಧೀಬಜಾರಿನ ಅಂಕಿತದಲ್ಲಿ. ಓದಲು ಕೈಗೆತ್ತಿಕೊಂಡ ಮರುಕ್ಷಣದಲ್ಲೇ ಇದು ಸುಮ್ಮನೆ ಓದುವ ಪುಸ್ತಕವಲ್ಲ ಅನ್ನೋದು ಗೊತ್ತಾಗಿ ಬಿಟ್ಟಿತ್ತು. ಒಂದು ಪೆನ್ ಹಾಗು ಪುಸ್ತಕ ಜೊತೆಗಿಟ್ಟುಕೊಂಡೆ ಕುಳಿತೇ... ಓದಿ ಕೆಳಗಿಡುವ ವೇಳೆಗೆ ಓದ ಬೇಕಾದ ಪುಸ್ತಕಗಳ ಪಟ್ಟಿ ಪೇಜ್ ತುಂಬಿತ್ತು, ಮನದೊಳಗೆ ಸಣ್ಣ ಭಯ ಇವನ್ನೆಲ್ಲಾ ಓದಿ ಮುಗಿಸುವುದು ಯಾವಾಗ ? ಪ್ರತಿಯೊಬ್ಬನಿಗೂ ಎರಡು ತರಹದ ಓದು ಬೇ

ಮಂಗಗಳ ಉದ್ಯಾನ

ಇಳಿ ಸಂಜೆಯ ಹೊತ್ತಿಗೆ ಪ್ಯಾಸೇಜ್ ಬಾಗಿಲು ತೆಗೆದು ಹೊರ ಬಂದವಳಿಗೆ ಕಂಡಿದ್ದು ಕಳಿತ ಕಿತ್ತಳೆ ಹಣ್ಣಿನಂತಿದ್ದ ಆಕಾಶ. ಒಹ್ ಇವನಾಗಲೇ ಮನೆಗೆ ಹೊರಟಾಯ್ತು ಕಳುಹಿಸಿಯೇ ಹೋಗೋಣವೆಂದು ಅವನನ್ನೇ ದಿಟ್ಟಿಸುತ್ತಾ ನಿಂತೇ.. ಜಗದ ಗಂಡಂದಿರಂತಲ್ಲ ಈ ಸೂರ್ಯ. ಮನೆ ಸೇರುವ ಆತುರ ಅವನಿಗೆ. ಇನ್ನೂ ಇಲ್ಲೇ ಇದ್ದಾನಲ್ಲ ಬಿಡು ಅಂತ ಆಚೀಚೆ ಕಣ್ಣು ಹಾಯಿಸಿದರೆ ಮುಗಿದೇ ಹೋಯಿತು, ಮುನಿದ ಇನಿಯನಂತೆ ಅಷ್ಟು ದೂರಕ್ಕೆ ಹೋಗಿ ಬಿಟ್ಟಿರುತ್ತಾನೆ. ಎವೆಯಿಕ್ಕದೆ ಅವನನ್ನೇ ನೋಡುತಿದ್ದೆ, ನೋಟಕ್ಕೆ ಸಿಲುಕದಂತೆ ಜಾರುತ್ತಲೇ ಇದ್ದವನು ಕ್ಷಣ ಮಾತ್ರದಲ್ಲಿ ಕುರುಹೂ ಸಿಗದಂತೆ ಮಾಯವಾದ. ಇನ್ನೇನು ಇರುಳು ಅಡಿಯಿಡುವ ಹೊತ್ತು  ದೀಪ ಹೊತ್ತಿಸಬೇಕು ಎಂದು ಒಳಗೆ ಕಾಲಿಡಬೇಕು ಅಚಾನಕ್ಕಾಗಿ ಒಂದು ಕಡೆ ಹಾದ ದೃಷ್ಟಿ ಅಲ್ಲಿಯೇ ಸೆರೆಯಾಯಿತು. ತುಂಬು ಬಸುರಿ ಕೋತಿಯೊಂದು ಒಬ್ಬಂಟಿಯಾಗಿ ಕುಳಿತಿತ್ತು. ಮುಖದಲ್ಲೇನೋ ದುಗುಡ. ಅಕ್ಕಪಕ್ಕದ ಸಾಲು ಕಟ್ಟಡಗಳು ಒಂದರ ಮೇಲೊಂದು ಮನೆಯ  ಕಿರೀಟ ಹೊತ್ತು ಕುಳಿತಿದ್ದರೆ ಇದೊಂದು ಮನೆ ಮಾತ್ರ  ಕಿರೀಟ ಕಳಚಿಟ್ಟ ರಾಜನಂತೆ ನಿಂತಿತ್ತು. ಉದ್ದದ ಟೆರೆಸ್ ನ ಎರಡೂ ಬದಿ ಹೂವಿನ ಗಿಡಗಳು ಸಾಲುಗಟ್ಟಿ ನಿಂತಿದ್ದರೆ ಅಷ್ಟು ಎತ್ತರದಲ್ಲಿ ಗಂಭಿರವಾಗಿ ನಿಂತ ವಾಟರ್ ಟ್ಯಾಂಕ್ ಹಾಗೂ ಅದರ ಹತ್ತಿರ ಹೋಗಲು ಇಟ್ಟಿದ್ದ ಒಂದು ಕಬ್ಬಿಣದ ಏಣಿ. ಆ ಏಣಿಯ ಕೊನೆಯ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತ ಈ ಕೋತಿ. ಒಂದಷ್ಟು ಹೊತ್ತು ಆ ಏಣಿಯ ಮೇಲೆ ಅದೇನೋ ಯೋಚಿಸುವಂತೆ

ಹಸಿದವರಿಗಷ್ಟೇ ಮತ್ತೊಬ್ಬರ ಹಸಿವು ಅರ್ಥವಾಗುತ್ತಾ ?

ಜಾನಕಿ ಕಾಲಂ ಓದು ಅಂತ ಹೇಳಿ ತಂದ ಕೂಡಲೇ ಅದನ್ನೇ ಮೊದಲು ಓದು ಅಂತ ಮಾಲಿನಿ ಅಕ್ಕಾ ಯಾಕೆ ಹೇಳಿದ್ರು ಅನ್ನೋದು ಓದಲು ಶುರುಮಾಡಿದಾಗಲೇ ಅರ್ಥವಾಗಿದ್ದು. ಮೊದಲ ಲೇಖನವೇ ಪುಣ್ಯಕೋಟಿಯ ಕತೆಯದು. ಒಂದು ಬಿನ್ನಹ ಹುಲಿಯೇ ಕೇಳು ಅಂತ ಶುರುವಾಗುವ ಸಾಲು ಹುಲಿ ಮಾತ್ರವಲ್ಲ ನಾವೂ ಕೇಳಲೇಬೇಕಾದ ಸಾಲು.  ಬದುಕಿನಲ್ಲಿ ನಾವೂ ಯಾವತ್ತೋ ಹೀಗೆ ಭಿನ್ನವಿಸಿದ್ದು ನೆನಪಾಗುವ ಸಾಲು. ಪ್ರತಿಯೊಬ್ಬರಿಗೂ ಭಿನ್ನಹ ಇದ್ದೇ ಇರುತ್ತದೆ, ಅದನ್ನು ಕೇಳುವವರಿಗಾಗಿ ಜೀವ ಕಾಯುತ್ತದೆ, ಮೈಯೆಲ್ಲಾ ಹಿಡಿಯಾಗಿ ಅದು ತಲುಪಲಿ ಎಂದು ಕಾಯುವ ಹಾಗೆ ಮಾಡುತ್ತದೆ. ಭಿನ್ನಹ ಹೇಳಿಕೊಳ್ಳದ, ಕೇಳದ ಜೀವಿಯಾದರೂ ಇದೆಯೇ ಜಗತ್ತಿನಲ್ಲಿ. ಧರಣಿ ಮಂಡಲ ಮಧ್ಯೆ ಮೆರೆಯುತಿಹ ಕರ್ನಾಟ ದೇಶದೊಳ್  ಸಂಪಗೋಡು ಎಂಬ ಹಳ್ಳಿಯಲ್ಲಿ ನನ್ನ ಬದುಕು ಥೇಟ್ ಹೀಗೆ ಶುರುವಾಗಿತ್ತು. ಕಾಡು, ನೀರು, ಹಳ್ಳಿ, ಬೆರಳೆಣಿಕೆಯಷ್ಟು ಮನೆ, ಗುರುತಿಟ್ಟುಕೊಳ್ಳುವಷ್ಟು  ಜನಗಳು. ಬೆಳಿಗ್ಗೆ ದನಗಳು ಕಾಡಿಗೆ ಹೋಗುವ ಸಮಯದಲ್ಲಿ ನಾವು ಶಾಲೆಯೆಂಬ ಕಟ್ಟಡಕ್ಕೆ ಹೋಗಿ ಅವುಗಳ ಹಾಗೆ ಅಲ್ಲಿ ಇಲ್ಲಿ ತಿರುಗಿ ಗೋಧೂಳಿಯ ಸಮಯಕ್ಕೆ ಕೆಂಪಾಗಿ ಮನೆಗೆ ಬರುತಿದ್ದೆವು. ಇಡೀ ದನದ ಮಂದೆಗೆ ಇರುವ ಒಬ್ಬನೇ ಗೋಪಾಲಕನಂತೆ ನಾಲ್ಕು ತರಗತಿಗಳಿಗೆ ಒಬ್ಬರೇ ಮೇಷ್ಟ್ರು. ಅವರೂ ಈ ಗೋಪಾಲಕನಂತೆ ನಮ್ಮನ್ನು ಕಾಡದೆ ನಮ್ಮ ಪಾಡಿಗೆ ನಾವು ಕಲಿಯಲು ಬಿಡುವಷ್ಟು ಒಳ್ಳೆಯವರು, ಮಂದೆ ತಪ್ಪಿದರೆ ಬೆತ್ತ ಝಳಪಿಸುವಷ್ಟು ಕೆಟ್ಟವರು. ಹೀಗೆ ಸೊಂಪಾಗಿ ಇರುವ

ಮೆಟ್ರೋ

R.V ರೋಡ್ ನಿಂದ ಸೌತ್ ಎಂಡ್ ವರೆಗೂ ಸಾಗುವ ಮೆಟ್ರೋ ಪ್ರತಿ ಸಲವೂ ಹೊಸತೆನಿಸುತ್ತದೆ. ಎರಡೂ ಕಡೆಯಲ್ಲೂ ಹಬ್ಬಿರುವ ಹಸಿರು ಹುಲ್ಲು ಹಾಸಿಗೆಯನ್ನು ನೆನಪಿಸುತ್ತದೆ. ಮೆಟ್ರೋ ಮುಂದಕ್ಕೆ ಹೋಗುತ್ತಿದ್ದರೆ ರೆಕ್ಕೆ ಬಿಚ್ಚಿ ಹಾರುವ ಭಾವ. ಹಸುಗೂಸಿನ ಪಾದದ ಮೃದು ನೆನಪಿಸುವ  ಅರಳಿದ ಪಲಾಶ ಪುಷ್ಪ, ಮುಗಿಲೆತ್ತರಕ್ಕೆ ಬೆಳೆಯುವ ಹುಮ್ಮಸ್ಸಿನಲ್ಲಿ ನಿಂತಿದ್ದರೂ ನೆಲಕ್ಕೆ ಬೇರುಕೊಟ್ಟ ಮರಗಳು, ಅಲ್ಲೆಲ್ಲೋ ಕುಳಿತು ಕೂಗುವ ಪಕ್ಷಿ, ಹಸಿರ ನಡುವೆಯಲ್ಲಿ ಕಾಣಿಸುವ ಹಳದಿ ಎಲೆಗಳು, ಮರಗಳ ಸಂದಿಯಲ್ಲಿ ಕಣ್ಣು ಮುಚ್ಚಾಲೆ ಆಡುವ ಬಿಸಿಲು, ನೆರಳಿನ ಕೆಳಗೆ ವಿಶ್ರಮಿಸುವ ಮನೆಗಳು. ಸದ್ದಿಲ್ಲದೇ ಉದುರುವ ಎಲೆ, ಒಡಲು ಬಿರಿದು ಬರುವ ಹೊಸ ಜೀವಕ್ಕಾಗಿ ಸಂಭ್ರಮಿಸುವುದೋ ಅಥವಾ ಅಷ್ಟರವರೆಗೂ ಜೊತೆಗಿದ್ದು ಈಗ ವಿದಾಯ ಹೇಳುವ ಜೀವಕ್ಕಾಗಿ ಮರಗುವುದೋ ಎನ್ನುವ ಗೊಂದಲವಿಲ್ಲದೇ ನಿರ್ಲಿಪ್ತವಾಗಿ ನಿಂತಿರುವ ಸಾಲು ಮರಗಳು, ಕೆಳಗೆ ಭರ್ರ್ ಎಂದು ಕಾಲನನ್ನೂ ಮೀರಿಸುವ ವೇಗದಲ್ಲಿ ಸಾಗುವ ವಾಹನಗಳು. ಆಗೊಮ್ಮೆ ಈಗೊಮ್ಮೆ ವೇಗಕ್ಕೆ brake ಹಾಕುವ ಸಿಗ್ನಲ್ ದೀಪಗಳು. ಬದುಕಿನ ರಸ್ತೆಯಲ್ಲೂ ಎಷ್ಟೊಂದು ಸಿಗ್ನಲ್ ..... ಜೀವನ ನಿರಂತರ ಚಲನೆ. ಲಯಬದ್ಧ ಗತಿಯಲ್ಲಿ ಸಾಗುವ ಪ್ರಯಾಣ, ಜೊತೆಗೆ ಹತ್ತಿದವರೆಲ್ಲಾ ಇರ್ತಾರೆ ಅನ್ನೋ ನಂಬಿಕೆ ಸಲ್ಲ, ಅವರವರ ನಿಲ್ದಾಣ ಬಂದ ಹಾಗೆ ಸದ್ದಿಲ್ಲದೇ ಸರಿದು ಹೋಗುವ ಜನ, ಅಪರಿಚಿತರೂ ಪರಿಚಿತರಾಗುವ, ಪರಿಚಿತರೂ ಅಪರಿಚಿತರೆನಿಸುವ, ಜನಸಾಗರದಲ್ಲೂ ಒಂಟಿ

ಯೋಳ್ತೀನಿ ಕೇಳಿ

ನೆಟ್ವರ್ಕ್ ಇಲ್ಲದ ಜಾಗಕ್ಕೆ ಹೋಗಬೇಕು ಎಲ್ಲಿದೆ ಹೇಳಿ ಅಂತ ಜಾಗ ? ಕುಸುಮ್  ಗೆ  ಹಾ.ಮಾ.ನಾ ಪ್ರಶಸ್ತಿ ಬಂದ ಸಂಭ್ರಮಕ್ಕೆ ತಕ್ಷಣ ತೋಚಿದ್ದು ಯೋಳ್ತೀನಿ ಕೇಳಿ ಅನ್ನೋ ಮಾತಿಗೆ ಕಣ್ಣಾಗುವ, ಕಿವಿಯಾಗುವ ಆಸೆ. ಮೊದಲಿಂದಲೂ ಅವರ ಬರಹದ ಕಡೆಗೆ ನನ್ನದು ಸಣ್ಣ ಹೊಟ್ಟೆಕಿಚ್ಚೇ.  ಅವರ ನೋಟ ಸೂಕ್ಷ್ಮ ಮಾತ್ರವಲ್ಲ ಹಾಗೆ ಕಂಡಿದ್ದನ್ನ ದಾಟಿಸುವ ಕಲೆಯಿದೆಯಲ್ಲ ಅದು ಸೀದಾ ಎದೆಯೊಳಕ್ಕೆ ಇಳಿಯುತ್ತದೆ. ಇಳಿಯುತ್ತಾ ಇಳಿಯುತ್ತಾ ಅಗೆಯುತ್ತದೆ. ಬೀಜ ಬಿತ್ತುವ ಮುನ್ನ ಹೊಲವನ್ನು ಅಗೆದು ಸಿದ್ದಗೊಳಿಸುವ ಹಾಗೇ. ಅವರು ಮತ್ತಷ್ಟು ಆಪ್ತ ಅನ್ನಿಸೋದು ಬಹುಶಃ ಅವರು ಊರಿನ ಬಗ್ಗೆ ಮಾತಾಡುವುದಕ್ಕೆನೋ.. ಊರು ಸೆಳೆದಷ್ಟು, ಇಳಿದಷ್ಟು, ಒದ್ದೆಯಾಗಿಸುವಷ್ಟು ಇನ್ಯಾವುದು ಮಾಡಬಲ್ಲದು. ಆಗೆಲ್ಲಾ ಈ ಸಾಲು ನೆನಪಾಗುತ್ತೆ. " ಮೇಲೆ ಹಾರಿ ನಿನ್ನ ಸೆಳೆತ ಮೀರಿ" ಉಹೂ ಎಷ್ಟು ಮೇಲಕ್ಕೆ ಏರಿದರೂ, ದೂರ ಹೋದರೂ ಊರಿನ ಸೆಳೆತ ಜಗ್ಗುತ್ತಿರುತ್ತದೆ. ಹಾಗೆ ಜಗ್ಗುವುದು ನಿಂತ ಕ್ಷಣ ಉಸಿರೂ ನಿಂತಿರುತ್ತದೆ. ಇಲ್ಲಿ ಕೇವಲ ಊರಿನ ಬಗ್ಗೆ ಕೇವಲ  ಭಾವುಕತೆಯಿಲ್ಲ,  ಸಣ್ಣ ಸಣ್ಣ ಘಟನೆಗಳನ್ನ ಬಿಡಿಸಿಡುತ್ತಾ, ಆ ಸಣ್ಣ ಘಟನೆಯೂ ಮತ್ಯಾವುದೋ ದೊಡ್ಡ ಘಟನೆಗೆ ಕೊಂಡಿಯಾಗಬಹುದು ಅನ್ನೋದನ್ನ ಬಿಡಿಸಿಡುತ್ತಾರೆ. ಬೆಂಗಳೂರಿನ ಮೋಹ, ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹ, ಸುಲಭವಾದ್ದು ಬೇಕು ಎಂದು ಹೊಸತನಕ್ಕೆ ಮಾರು ಹೋಗಿ ಕಳೆದುಕೊಳ್ಳುತ್ತಿರುವ ಸಂಗತಿಗಳು,  ಉದಾಸೀನ ಹಾಗೂ ನಿರ್
ವಾಹ್ ಈ ಹಿನ್ನೀರು, ಜಾಗ ಎಷ್ಟು ಅದ್ಭುತವಾಗಿದೆ ಅಂತ ಉದ್ಘರಿಸುವ ಜನಗಳಿಗೆ ಅಲ್ಲಿ ತುಂಬಿರುವುದು ನದಿಯ ನೀರಲ್ಲ, ಸಂಕಟದ ಕಣ್ಣೀರು ಅಂತ ಗೊತ್ತಾಗುವುದೇ ಇಲ್ಲಾ... ಗೊತ್ತಾಗುವುದಾದರೂ ಹೇಗೆ? ಸ್ವಲ್ಪವಾದರೂ ಗೊತ್ತಾಗಬೇಕಾ ಪ್ರಶಾಂತ್ ನಿರ್ದೇಶನ ಮಾಡಿದ ಶರಾವತಿ ನೋಡಿ. ಮಲೆನಾಡು, ಅಲ್ಲಿನ ಕಾಡು, ನದಿ, ಪ್ರಕೃತಿ ಸೌಂದರ್ಯಕ್ಕೆ ಎಷ್ಟು ಪ್ರಸಿದ್ದಿ ಅನ್ನೋದು ಹೊರನೋಟಕ್ಕೆ ನಿಜವಾದರೂ ಅಲ್ಲಿನ ಕಾಡಿನ ಮೌನ, ಕಣಿವೆಯ ನೀರವತೆ, ನೀರಿನ ಒಡಲು ಮತ್ತೇನೋ ಕತೆ ಹೇಳುತ್ತದೆ. ಸೌಂದರ್ಯದಲ್ಲಿ ಕಳೆದುಹೋಗದೇ, ಕೇಳಿಸಿಕೊಳ್ಳುವ ತಾಳ್ಮೆ, ಸೂಕ್ಷ್ಮತೆ ಇದ್ದರೆ ಕೇಳುತ್ತದೆ. ಕಾಡಿನ ನಡುವೆ ಕಷ್ಟಪಟ್ಟು ಬೆವರು ಸುರಿಸಿ ತಮ್ಮದೇ ಅಷ್ಟು ಅಂತ ಜಾಗ ಮಾಡಿಕೊಂಡು ಕಾಡಿನ ಜೊತೆ, ಕಾಡು ಪ್ರಾಣಿಗಳ ಜೊತೆ ಬಾಳುವ ಮನುಷ್ಯನ ಉಸಿರು ಅದರೊಂದಿಗೆ ಮಿಳಿತವಾಗಿರುತ್ತದೆ. ಅವರೆಲ್ಲರ ನಡುವೆ ಒಂದು ಭಾಂದವ್ಯ ಬೆಳೆದಿರುತ್ತದೆ. ಅವರ ಕನಸು, ಭಾವ, ಬದುಕು ಎಲ್ಲವೂ ಅಲ್ಲೇ ಹುಟ್ಟಿ ಅಲ್ಲೇ ಬೇರು ಬಿಟ್ಟು, ಅಲ್ಲೇ ಬೆಳೆದು ವಿಸ್ತರಿಸಿರುತ್ತದೆ. ಹೀಗಿರುವಾಗ ಅಭಿವ್ರುಧ್ಹಿಯ ಹೆಸರಿನಲ್ಲಿ ಅವನನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದರೆ ಬೇರನ್ನೇ ಮುಳುಗಿಸಿದರೆ ಏನಾಗಬಹುದು? ಬೇರುಬಿಟ್ಟ ಮರವನ್ನು ಇನ್ನೆಲ್ಲೋ ನೆಟ್ಟರೆ ಅದು ಚಿಗುರುವುದಾದರೂ ಹೇಗೆ? ಅಲ್ಲೆಲ್ಲೋ ಬೆಳಕು ಮೂಡಬೇಕಾದ್ರೆ ಇಲ್ಲಿ ಕತ್ತಲಾಗಲೇ ಬೇಕು ನಿಜ. ಆದರೆ ಅಲ್ಲಿಗೆ ಬೆಳಕು ಬೇಕಾ, ಎಷ್ಟು ಬೇಕು ಅನ್ನೋದರ ಲೆಕ್ಕಾಚ

bhimakaaya

ಉದಯೋನ್ಮುಖ ಭೈರಪ್ಪ ಅನ್ನೋ ಹೆಸರು ಕಂಡಕೂಡಲೇ ಕುತೂಹಲ ಕಾಡಿತ್ತು. ಯಾಕಿರಬಹುದು ಅನ್ನೋ ಪ್ರಶ್ನೆ ಮೂಡಿ ಮರೆಯಾಗುವ ಮೊದಲೇ ಪುಸ್ತಕ ಕೈಯೊಳಗೆ ಬಂದು ಸೇರಿತ್ತು. ಕುಸ್ತಿ ಪಟುಗಳ ಜೀವನ, ಅವರ ಸಾಧನಾ ವೈಖರಿ, ಜೊತೆ ಜೊತೆಗೆ ಅವರ ಭಾವಸಂಘರ್ಷಗಳನ್ನ ಬಿಡಿಸಿಡುವ ಭೀಮಕಾಯ. ಶುರುವಾಗೋದೇ ಜಿದ್ದಿನ ಕುಸ್ತಿಯಿಂದ. ಬದುಕು ಹೀಗೆ ಅಲ್ಲವಾ.. ಹೊರಬರುವ ಸಂಘರ್ಷವೇನು ಸಣ್ಣದಾ... ಬಂದ ಮೇಲೂ ಬದುಕಿನ ಕುಸ್ತಿಗಳು ನಿಲ್ಲುವುದೇ ಇಲ್ಲ. ಒಮ್ಮೆ ಗೆಲುವು ಕೈ ಹಿಡಿಯುತ್ತಾ ಹೋದಂತೆ ಹೆಸರಿನ ಜೊತೆಗೆ ಅದ್ಯಾವ ಮಾಯದಲ್ಲೋ ಹಮ್ಮು ಬಂದು ಕುಳಿತಿರುತ್ತದೆ. ಹೆಸರನ್ನು ಗುರುತಿಸಿದಷ್ಟು ಸುಲಭವಾಗಿ ಹಮ್ಮೂ ಗುರುತಿಸುವ ಹಾಗಿದ್ದರೆ ಎಷ್ಟು ಚೆಂದವಿತ್ತು ಅಲ್ಲವಾ .. ಕುಸ್ತಿಯ ನೆಲದ ಹದ, ಬಳಸುವ ಭಾಷೆ, ಹಾಕುವ ಪಟ್ಟು ಎಲ್ಲವನ್ನೂ ಸೊಗಸಾಗಿ ವಿವರಿಸುತ್ತಾ ಪರಿಚಯಿಸುತ್ತಾ ಹೋಗುತ್ತಿರುವಾಗಲೇ ಮೊತ್ತ ಮೊದಲ ಗೆಲವು ಪಡೆದ ಸುಬ್ಬುವಿನ ವಿಜಯಯಾತ್ರೆ ಹೊರಟಿರುತ್ತದೆ. ವಿಜಯಕ್ಕೆ ಎಷ್ಟೊಂದು ಬಳಗ ಅಂತ ಅಚ್ಚರಿ ಪಡುವಾಗಲೇ ಸೋಲಿನ ನೆರಳಿನ ಅಸೂಯೆ ಹೆಡೆಯಾಡುತ್ತದೆ. ಬೆಳಕಿನ ಮೇಲೆ ಕಣ್ಣಿದ್ದವರಿಗೆ ನೆರಳು ತಕ್ಷಣಕ್ಕೆ ಕಾಣುವುದಾದರೂ ಹೇಗೆ? ಹೆಡೆಯೆತ್ತಿದ ಹಾವು ಕಚ್ಚದೆ ಸುಮ್ಮನಿರುವುದಾದರೂ ಹೇಗೆ? ಒಂದು ಗೆಲುವಿನ ಯಾತ್ರೆಯಲ್ಲಿಯೇ ಪತನದ ಸಂಚು ಹಿಂಬಾಲಿಸುತ್ತದೆ. ಪ್ರತಿ ಸಾಧನೆಯೂ ಬೆವರಿನ ಪಸೆಯಲ್ಲಿ ಬೆಳೆಯಬೇಕು. ಉಸ್ತಾದರ ಉಸ್ತುವಾರಿಯಲ್ಲಿ, ತಂದೆಯ ಆರೈಕೆಯಲ್ಲಿ, ಜೊತೆ