ಸಾವರ್ಕರ್.

ಬ್ಯಾರಿಸ್ಟರ್ ಪದವಿ ಪಡೆಯಲು ಹೊರಟ ಸಾವರ್ಕರ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ಹಡಗಿನಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮಂದಿ ಭಾರತೀಯರು ಮಾತ್ರ. ಅದರಲ್ಲಿದ್ದ ಬ್ರಿಟಿಷರು ಪಂಚೆ ಉಟ್ಟು ಕಿವಿಗೆ ಕಡಕು ಹಾಕಿಕೊಂಡು ನಿಂತಿದ್ದ ಅವರನ್ನು ನೋಡಿ ಯಾರೋ ಹಳ್ಳಿ ಗಮಾರ ಎಂದು ತಿರಸ್ಕಾರದಿಂದ ಕಾಣುತ್ತಿದ್ದರು. ಮೊತ್ತ ಮೊದಲ ಬಾರಿಗೆ ಶತ್ರುಗಳ ಎದುರಿಗೆ ಒಂಟಿಯಾಗಿ ನಿಂತ ಭಾವ ಕಾಡುವ ಹೊತ್ತಿಗೆ ಒಬ್ಬ ಸಿಖ್ ಹುಡುಗ ಹರನಾಮ ಸಿಂಹ ಎದುರಾಗಿದ್ದ. ನೀವೇನಾ ಸಾವರ್ಕರ್ ಎಂದು ಕೇಳಿದ್ದ. ಹೌದು ಎನ್ನತ್ತಲೇ ಸಧ್ಯ ನನ್ನ ನಾವಿಬ್ಬರೂ ಒಂದೇ ಕೋಣೆ, ಭಾರತೀಯರೇ ಸಿಕ್ಕರಲ್ಲ ಎಷ್ಟು ಖುಷಿಯಾಗುತ್ತಿದೆ ಗೊತ್ತೇ ಅಂದಿದ್ದ.

ಅಲ್ಲಿದ್ದ ಎಂಟು ಹತ್ತು ಜನ ಭಾರತೀಯರಲ್ಲಿ ಒಬ್ಬ ಹಿರಿಯ ಪಂಜಾಬಿ ಒಬ್ಬರಿದ್ದರು. ಅವರಾಗಲೇ ಹತ್ತು ಹಲವು ಸಲ ಲಂಡನ್ ಹೋಗಿ ಬಂದಿದ್ದರಿಂದ ಅವರನ್ನೇ ವಿದೇಶಿ ರೀತಿ ನೀತಿ, ರಿವಾಜು ಕಲಿಯುವ ಗುರುಗಳಾಗಿ ಸ್ವೀಕರಿಸಿದರು ಸಾವರ್ಕರ್.ವೇಷ ಭೂಷಣ, ತಿನ್ನುವ ರೀತಿ ಎಲ್ಲವನ್ನೂ ಹೊಸದಾಗಿ ಕಲಿಯಬೇಕಿತ್ತು. ಅಲ್ಲಿನ ಸಮಾಜದಲ್ಲಿ ಬೆರೆತಾಗ ಮಾತ್ರ ಉದ್ದೇಶ ಸಾಧನೆ ಸಾಧ್ಯ ಎಂದು ಅರಿವಿದ್ದ ಸಾವರ್ಕರ್ ಕಲಿಯಲು ತೊಡಗಿದ್ದರು. ಸಂಜೆಯ ಹೊತ್ತು ಎಲ್ಲರೂ ಹಡಗಿನ ಡೆಕ್ ಮೇಲೆ ಓಡಾಡಲು ಹೋಗುತ್ತಿದ್ದರು. ಹರನಾಮ ಸಿಂಹನ ಪೇಟವನ್ನು ನೋಡಿ ಅಲ್ಲಿದ್ದ ಬ್ರಿಟಿಶ್ ಹುಡುಗರು ನಗುತ್ತಿದ್ದರು, ಹತ್ತಿರ ಬಂದು ಇದೇನು ವಿಚಿತ್ರ ವೇಷ ಎಂದು ಅಣಕಿಸುತ್ತಿದ್ದರು. ಅವರ ಈ ತಿರಸ್ಕಾರ ಸಹಿಸಲಾಗದೆ ಹರನಾಮ ಸಿಂಹ ತನ್ನ ಕೋಣೆಗೆ ವಾಪಾಸಾಗಿದ್ದ. ಇದನ್ನು ನೋಡಿದ ಹಿರಿಯ ಪಂಜಾಬಿ ವ್ಯಕ್ತಿ ಸಾವರ್ಕರ್ ಬಳಿ ಬಂದು ಹರನಾಮನಿಗೆ ನೀವಾದರೂ ಹೇಳಿ ಪೇಟ ಧರಿಸದಿರಲು, ಅವನು ನಿಮ್ಮ ಮಾತು ಕೇಳಬಹುದು. ನಾವಾಗೇ ಯಾಕೆ ಅವರಿಗೆ ತಿರಸ್ಕಾರ, ಅವಹೇಳನ ಮಾಡಲು ಅವಕಾಶ ಕೊಡಬೇಕು ಎಂದು ಹೇಳಿದ್ದರು.

ಸಾಮಾನ್ಯ ಜನರಾದರೆ ಹೌದು ಅನ್ನಿಸುತ್ತಿತ್ತು. ತಕ್ಷಣ ಅವರ ಹಾಗೆ ದಿರಿಸು ಬದಲಾಯಿಸುವ ಪ್ರಯತ್ನ ನಡೆಯುತ್ತಿತ್ತು. ಆದರೆ ಸಾವರ್ಕರ್ ನಮ್ಮಲ್ಲಿ ಏನಾದರೂ ತಪ್ಪಿದೆ ಎಂದರೆ ಒಪ್ಪಿಕೊಳ್ಳೋಣ, ತಿದ್ದಿಕೊಳ್ಳೋಣ. ಆದರೆ ಯಾರೋ ನಗುತ್ತಾರೆ ಎಂದ ಮಾತ್ರಕ್ಕೆ ನಮ್ಮ ವೇಷ ಭೂಷಣ ಬಿಡುವುದು ನಮ್ಮ ಮನೋದೌರ್ಬಲ್ಯದ ಲಕ್ಷಣ. ಸಿಕ್ಖರಿಗಂತೂ ಅದು ಧಾರ್ಮಿಕ ಆಚರಣೆ. ಯಾವನೋ ಯುರೋಪಿಯನ್ನನ ಕಣ್ಣಿಗೆ ಅದು ಹಾಸ್ಯವಾಗಿ ಕಂಡರೆ ನಾವ್ಯಾಕೆ ಬದಲಾಯಿಸಬೇಕು. ಒಂದು ಕೆಲಸ ಮಾಡೋಣ ನಾಳೆಯಿಂದ ನಾವೆಲ್ಲರೂ ಪೇಟ ಧರಿಸೋಣ ಎಂದರಂತೆ.

ಯಾವುದು ಆತ್ಮಾಭಿಮಾನ, ಯಾವುದು ಅವಮಾನ ಎನ್ನುವುದು ಕಲಿಯದೇ ಹೋದರೆ ಕಳೆದುಕೊಳ್ಳುವುದು ನಮ್ಮತನ. ಅನುಸರಿಸುವುದು ಗುಲಾಮಿತನ. ಇಂಥ ವ್ಯಕ್ತಿತ್ವವನ್ನು ಯಾರ್ಯಾರಿಗೋ ಹೋಲಿಸುವುದು, ಹೊಲಿಸಿಕೊಳ್ಳಲು ಅವಕಾಶ ಕೊಡುವುದು ಕೇವಲ ಸಾವರ್ಕರ್ ಗೆ ಮಾಡುವ ಅವಮಾನ ಮಾತ್ರವಲ್ಲ ಇತಿಹಾಸಕ್ಕೂ ಜೊತೆಗೆ ನಮಗೆ ನಾವೂ ಮಾಡಿಕೊಳ್ಳುವ ಅವಮಾನ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...