ಧರ್ಮಶ್ರೀ....
ಪುಟ್ಟಿ ಯಾವತ್ತೂ ಇದ್ದಲ್ಲೇ ಎಲ್ಲವನ್ನೂ ಹುಡುಕೋಕೆ ಹೋಗಬಾರದು. ಒಂದು ಹೆಜ್ಜೆ ಹೊರಗೆ ಬಾ ಕಣ್ಣು ತೆರೆದು ನೋಡು, ಮನಸ್ಸು ಸ್ವಲ್ಪ ವಿಶಾಲವಾಗಿಸಿಕೋ. ಪ್ರೀತಿ ಅನ್ನೋದು ಬೆಳಕು ಚೆಲ್ಲಿದಂತೆ ಹರಡಿರೋದು ಕಾಣಿಸುತ್ತೆ. ಯಾಕೆ ನಮ್ಮನ್ನು ನಾವೇ ಒಂದು ಚೌಕಟ್ಟಿನೊಳಗೆ ಸೀಮಿತ ಮಾಡ್ಕೊಬೇಕು ಹೇಳು? ಯಾಕೆ ತನ್ನವರು ಅಂದುಕೊಂಡವರು ಮಾತ್ರ ಪ್ರೀತಿ ಕೊಡಬೇಕು ಅಂತ ಬಯಸಬೇಕು. ಪ್ರೀತಿ ಎಲ್ಲೆಯನ್ನು ಮೀರಿದ್ದು ಅಂತ ಓದೋ ನೀವುಗಳೇ ಅಲ್ವ ಕೊಟೇಶನ್ ಹೇಳೋದು ಯಾಕೆ ಅದನ್ನು ಅರ್ಥಮಾಡ್ಕೊಂಡು ಅಳವಡಿಸಿಕೊಳ್ಳಬಾರದು. ಅಪ್ಪನ ನೆನಸಿಕೊಂಡು ಅಳುತ್ತಿದ್ದವಳನ್ನು ತಲೆ ಸವರಿ ಎದುರಿಗೆ ಕೂರಿಸಿಕೊಂಡು ಮೆಲುವಾಗಿ ನ.ಕೃಷ್ಣಪ್ಪ ತಾತ ಮಾತನಾಡುತ್ತಿದ್ದರೆ ಅಳು ಯಾವಾಗ ನಿಂತಿತು ಅನ್ನುವ ಅರಿವೂ ಇಲ್ಲದೆ ಕಣ್ಣು ಕಿವಿ ಇಷ್ಟಗಲ ತೆರೆದು ಅವರನ್ನೇ ನೋಡುತ್ತಿದ್ದೆ. ಅದು ಅಸಾಧ್ಯ ಏನೋ ಸಮಾಧಾನಕ್ಕೆ ಹೇಳುತ್ತಿದ್ದಾರೆ ಅಂತ ಕಿಂಚಿತ್ತೂ ಅನ್ನಿಸದೆ ಮನಸ್ಸಿನ ಭಾರ ಇಳಿದು ಹೊಸ ದಾರಿ ತುಸು ತುಸುವೇ ತೆರೆದುಕೊಳ್ಳುತ್ತಿತ್ತು. ಮಾತಿನ ಹಿಂದಿನ ಅನುಭವ, ಪ್ರಾಮಾಣಿಕತೆ ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟಿ ಅನ್ನುವ ಪದದಲ್ಲಿದ್ದ ತುಂಬು ಪ್ರೀತಿ ಬದುಕಿಗೆ ಚುಕ್ಕು ತಟ್ಟಿ ಮಲಗಿಸುವ ಅಮ್ಮನ ಹಾಗಿತ್ತು. ಅಂತ ಕೃಷ್ಣಪ್ಪ ತಾತ ಒಂದು ಪಾತ್ರವಾಗಿದ್ದಾರೆ ಎಂದ ಕಾದಂಬರಿ ಓದದೆ ಇರುವುದಾದರೂ ಹೇಗೆ? ಧರ್ಮಶ್ರೀ ಓದಲು ಶುರುಮಾಡಲು ಅದೇ ಪ್ರಬಲ ಕಾರಣ. ಅಲ್ಲಿ ಸತ್ಯ ಅಮ್ಮನನ್ನು ಕಳೆದುಕೊ...