Posts

Showing posts from June, 2022

ಚೌಡಿಯ ಹರಕೆ

ದನ ಕರು ಹಾಕಿದೆ ಎಂದರೆ ಹಾಲು ಕರೆದು ಬಳಸುವ ಮುನ್ನ ಚೌಡಿಗೆ ಕೊಡುವುದು ಮಲೆನಾಡಿನ ಹಳೆಯ ಕಾಲದಿಂದಲೂ ನಡೆದು ಬಂದ ಪದ್ದತಿ. ಮೇಯಲು ಹೋದ ದನವೊ, ಕರುವೋ ಬರಲಿಲ್ಲ ಎಂದರೂ ಚೌಡಿಗೊಂದು ಹರಕೆ ಹೊತ್ತುಕೊಂಡೆ ಹುಡುಕಲು ಹೋಗುವುದು ಸಾಮಾನ್ಯ. ಇಡೀ ಊರು ಕಾಯುವವಳು ಅವಳು ಎಂಬ ನಂಬಿಕೆ. ರಾತ್ರಿಯ ಹೊತ್ತು ಗೆಜ್ಜೆ ಸದ್ದು ಕೇಳಿದರೆ, ಕೋಲು ಕುಟ್ಟಿಕೊಂಡು ಯಾರೋ ಓಡಾಡುವ ಸದ್ದು ಕೇಳಿಸಿದರೆ ಯಾವ ಕಾರಣಕ್ಕೂ ಹೊರಗೆ ಬರಬಾರದು ಎನ್ನುವುದು ಗಾಢ ನಂಬಿಕೆ. ಸಂಪಗೋಡಿನಲ್ಲೂ ಹೀಗೊಂದು ನಂಬಿಕೆ ಇತ್ತು. ಆ ನಂಬಿಕೆ ಜೊತೆಜೊತೆಗೆ ಬೆಳೆದುಬಂದವಳು ನಾನು. ಮನೆಯಲ್ಲಿ ಒಬ್ಬರೇ ಇದ್ದರೆ ಅವತ್ತು ಹೆಜ್ಜೆಯ ಸದ್ದು ಜೋರಾಗಿ ಕೇಳಿಸುತ್ತೆ ಅನ್ನೋದು ದೊಡ್ಡವರ ಅನುಭವ. ಅವೆಲ್ಲಾ ಅರ್ಥವಾಗುವ ವಯಸ್ಸು ಅಲ್ಲದಿದ್ದರೂ ಭಯ ಕಾಡದೆ ಇರುವುದಕ್ಕೆ ಅದೊಂದು ನಂಬಿಕೆ ಸಾಕಾಗಿತ್ತು. ಉಳಿದೆಲ್ಲಾ ಹಾಗಾಗಿ ದೊಡ್ಡ ವಿಷಯವೇ ಆಗಿರಲಿಲ್ಲ.  ಆ ಊರು ಮುಳುಗಿ ಇನ್ನೆಲ್ಲೋ ಹರಡಿ, ಬೆಂಗಳೂರಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಹೊತ್ತಿಗೆ ಚೌಡಿ ಅನ್ನೋದು ನೆನಪಿನ ಆಳದಲ್ಲಿ ಹೂತು ಹೋಗಿ ಮರೆತೇ ಹೋಗಿದೆ ಅನ್ನುವ ಹಾಗಾಗಿತ್ತು. ಅಹಿಗಿನ್ನೂ ಎರಡು ವರ್ಷವೂ ತುಂಬಿರಲಿಲ್ಲ. ಹೀಗೆ ಒಮ್ಮೆ ಊರಿಗೆ ಹೋಗಿದ್ದೆವು. ರಾತ್ರಿ ಎಂದೂ ಇಲ್ಲದ ವಿಪರೀತ ಹಟ. ಏನು ಸಮಾಧಾನಿಸಿದರೂ, ಹೊತ್ತು ತಿರುಗಿದರೂ ನಿದ್ದೆ ಬಂದಂತೆ ಆಗುವ ಮಗು ಹಾಸಿಗೆಯಲಿ ಮಲಗಿಸಿದ ತಕ್ಷಣ ಮತ್ತೆ ಜೋರು ಹಠ. ಬೆಳಿಗ್ಗೆ ಪ್ರಯಾಣ ಮಾಡಿದ ಸು...