Posts

Showing posts from July, 2022

ಕ್ಷಮಿಸುವುದು ಎಂದರೆ ಮರೆಯುವುದಲ್ಲ.

 ನುವ್ವು ನಾಗಪಾಮುಲಾಂಟಿದವಿ , ಏಮಿ ಮರ್ಚಿಪೊಲೆವು, ಸಮಯಕೋಸಂ ಚೂಸ್ತು ಉಂಟಾವು, ನನ್ನ ಅಂಗೈಯನ್ನು ಅವರ ಬೊಗಸೆಯಲ್ಲಿ ಇಟ್ಟುಕೊಂಡು ಹೇಳುವಾಗ ಮುಸ್ಸಂಜೆ. ಆಂಧ್ರದ ಕಾಡಿನ ಅಂಚಿನಲ್ಲಿ, ಕೃಷ್ಣಾ ನದಿಯ ತೀರದಲ್ಲಿ ಇದ್ದ ಆ ಪುಟ್ಟ ಗುರುಕುಲದಲ್ಲಿ ಆಗಷ್ಟೇ ಕತ್ತಲು ಹೊಸಿಲು ದಾಟಿ ಬಂದಿತ್ತು. ಕಾಣಿಸಿದರೂ ಕಾಣಿಸದ ಹಾಗಿನ ಬೆಳಕು. ಅಲ್ಲಿ  ಇದ್ದದ್ದೇ ಹತ್ತು ಮನೆಗಳು. ಒಂದಷ್ಟು ವಿದ್ಯಾರ್ಥಿಗಳು. ಸಣ್ಣಗೆ ನಕ್ಕಿದ್ದೆ. ಕತ್ತಲು ಅದಾಗಲೇ ಆವರಿಸುತ್ತಿದ್ದರಿಂದ ನನ್ನ ಮುಖಭಾವ ಅವರಿಗೆ ಕಾಣಿಸಿರಲಿಲ್ಲ. ಮೆಲ್ಲಗೆ ಕೈ ಬಿಡಿಸಿಕೊಂಡು ಕಾಯುತ್ತಿದ್ದ  ಕರುವಿನ ಹಿಂದೆ ಮನೆಗೆ ಹೊರಟೆ. ಅಣ್ಣನಿಗೆ ಮೊದಲ ಕೆಲಸ ಸಿಕ್ಕಿದಾಗ ಸಂಭ್ರಮ. ನಮ್ಮದೇ ಮನೆ, ನಮ್ಮದೇ ಬದುಕು ಅನ್ನುವುದಷ್ಟೇ ಮುಖ್ಯವಾಗಿತ್ತೇ ಹೊರತು ಯಾವ ಊರು, ಯಾವ ರಾಜ್ಯ ಅನ್ನೋದು ಅಲ್ಲವೇ ಅಲ್ಲ. ಸ್ವತಂತ್ರ ಬದುಕು ಬೇಕಾಗಿತ್ತು ಅಷ್ಟೇ.  ಕೃಷ್ಣಾ ನದಿ ದೋಣಿಯಲ್ಲಿ ದಾಟಿದರೆ ದಂಡೆಯ ಮೇಲೆ ಒಂದು ಪುಟ್ಟ ಊರು. ಕುಗ್ರಾಮ ಎನ್ನುವುದಕ್ಕೆ ಉದಾಹರಣೆ. ಬಡತನವೆನ್ನುವುದು ಅಲ್ಲಿ ಮರಳಿನ ಹಾಗೆ ಹಬ್ಬಿಕೊಂಡಿತ್ತು. ಅಲ್ಲಿಂದ ಒಂದು ಮೈಲಿ ನಡೆದರೆ ಒಂದು ಐವತ್ತು ಎಕರೆ ಜಾಗವನ್ನು ಖರೀದಿಸಿ ಅಲ್ಲೊಂದು ಪುಟ್ಟ ಗುರುಕುಲ ಕಟ್ಟಿದ್ದರು. ಹಳೆಯ ಕಾಲದ ಕಾನ್ಸೆಪ್ಟ್. ಗುರುವಿನ ಮನೆಯಲ್ಲಿ ಶಿಷ್ಯರ ವಾಸ. ಹೊಸಕಾಲದ ಗುರುಗಳು ಆಗಿದ್ದರಿಂದ  ಊಟಕ್ಕೆ ಮಾತ್ರ ವಿದ್ಯಾರ್ಥಿಗಳಿಗೆ ಬೇರೆಯ ವ್ಯವಸ...