ಸಾವರ್ಕರ್ ಹೊಸದಿಂಗಂತ 24.1019
ನವರಾತ್ರಿಯ ಸಮಯ. ಅಷ್ಟು ದಿನಗಳು ಊರಿನ ಹೊರಗೆ ಇರುತ್ತಿದ್ದ ಭವಾನಿಯ ವಿಗ್ರಹ ಅಂದು ಊರಿನ ಒಳಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಬರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಆ ಊರಿನ ಪ್ರಮುಖರ ಮನೆಯ ಮುಂದೆ ನಿಲ್ಲುತ್ತಿತ್ತು. ಅಲ್ಲಿಂದ ಏನು ಮಾಡಿದರೂ ಮುಂದಕ್ಕೆ ಸರಿಯುತ್ತಿರಲಿಲ್ಲ. ಹಾಗೆ ಬಂದ ದೇವರನ್ನು ಸ್ವಾಗತಿಸಿ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಪ್ರತಿಷ್ಟಾಪನೆ ಮಾಡಿ ಅಲ್ಲಿಂದ ಹತ್ತು ದಿನಗಳ ಕಾಲ ಪೂಜೆ ವ್ರತ ಶ್ರದ್ಧೆಯಿಂದ ನಡೆಸಲಾಗುತ್ತಿತ್ತು. ಜನರೂ ಹಾಗೆಯೇ ಬರುತ್ತಿದ್ದರು. ಬಂದ ಜನಗಳೆಲ್ಲಾ ಖಾಲಿಯಾದ ಮೇಲೆ ಆ ಮನೆಯ ಹುಡುಗನೊಬ್ಬ ಒಳಗೆ ಹೋಗಿ ದೇವಿಯ ಮುಂದೆ ಕಣ್ಮುಚ್ಚಿ ಕೂರುತ್ತಿದ್ದ. ಅಷ್ಟ ಭುಜಾಕೃತಿಯ ಆ ದೇವಿಯನ್ನು ಧ್ಯಾನಿಸುತ್ತಾ ನೋಡು ನಿಂಗೆ ರಾಕ್ಷಸರ ಸಂಹಾರ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೇನೆ , ನಂಗೆ ನಿನ್ನ ಕೈಯಲ್ಲಿರುವ ಆಯುಧಗಳನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದ. ಎಳೆಯ ವಯಸ್ಸಿನಲ್ಲಿಯೇ ದೇಶದ ಆಗುಹೋಗುಗಳ ಬಗ್ಗೆ , ರಾಜಕೀಯದ ಬಗ್ಗೆ ತಿಳಿದಿದ್ದ ಆ ಹುಡುಗನಿಗೆ ಎಷ್ಟೋ ಸಲ ಶಾಲೆಯಲ್ಲಿ ಮೇಷ್ಟರು ಸಣ್ಣ ಬಾಯಲ್ಲಿ ದೊಡ್ಡ ತುತ್ತು ನುಂಗಬೇಡ ಸುಮ್ಮನಿರು ಎಂದು ಗದರಿಸುತ್ತಿದ್ದರು. ಹುಟ್ಟಿದ ಮನೆತನವೇ ಅಂತಹುದು. ಅವರ ಪೂರ್ವಿಕರ ಸಾಧನೆಗೆ ಪೇಶ್ವೆಗಳು ಪಲ್ಲಕ್ಕಿಯನ್ನೇ ಕೊಟ್ಟಿದ್ದರಂತೆ. ಹಾಗಾಗಿ ಆ ಹುಡುಗನಿಗೆ ಶೌರ್ಯ ಹಾಗೂ ಧೈರ್ಯ ಎರಡೂ ರಕ್ತದಲ್ಲಿಯೇ ಬಂದಿತ್ತು. ರಾತ್ರಿ ಕೂರಿಸಿಕೊಂಡು ದೊಡ್ಡಪ್ಪ...