ಬಿದಿರಿನ ಗಳ
ಎಲ್ಲ ಋಣನೂ ಹರ್ಕೋಬೇಕು ಕಣವ್ವ.... ಸುಲಭವಾ ಖಂಡಿತ ಅಲ್ಲ, ತೀರಾ ಕಷ್ಟವೂ ಅಲ್ಲ. ಒಂದು ರೀತಿಯಲ್ಲಿ ಇಲ್ಲಿ ಎಲ್ಲವೂ ಕ್ರಮಬದ್ಧ ಹಾಗೂ ನಿಯಮಬದ್ಧ. ಅದನ್ನು ಅರ್ಥಮಾಡಿಕೊಳ್ಳದೆ ದೂಷಿಸುತ್ತೇವೆ ಅಷ್ಟೇ. ಇದು ಇನ್ನಷ್ಟು ಅರ್ಥವಾಗೋದು ಬಿದಿರಿನ ಗಳ ಓದುವಾಗ. ಮೊಮ್ಮಗನ ಮೇಲಿನ ಅಜ್ಜಿಯ ವ್ಯಾಮೋಹ, ಆ ಪ್ರೀತಿಗೆ ಓಗೊಟ್ಟು ಹೊರಡುವ ಮೊಮ್ಮಗ ದಾರಿಯಲ್ಲಿ ಅನಿರೀಕ್ಷಿತ(?) ಘಟನೆಯಲ್ಲಿ ಸಿಲುಕಿ ಮುಂದಿನ ಅಚ್ಚರಿಯ ಬೆಳವಣಿಗೆಗೆ ಕಾರಣನಾಗುತ್ತಾನೆ. ಅವನ ಆಗಮನ ಇನ್ನೊಂದು ಜೀವದ ಅಂತ್ಯಕ್ಕೆ ಕಾರಣವಾಗುವ ಸೂಚನೆ ಇಡೀ ಕಾದಂಬರಿ ಹೀಗೆ ಇಂಥ ಅನೂಹ್ಯ ತಿರುವುಗಳ ಸಂಗಮ. ಸೂಕ್ಷ್ಮವಾಗಿ ಕುರುಹು ಬಿಡುತ್ತಲೇ , ಹಾಗೆ ಬಿಡುತ್ತಲೇ ಮತ್ತೆ ಮುಚ್ಚಿಟ್ಟುಕೊಳ್ಳುತ್ತಾ ಒಂದು ಊರಿನ ಗ್ರಾಮೀಣ ಬದುಕಿನ ರೀತಿ ನೀತಿಗಳನ್ನು ತಿಳಿಸುತ್ತಾ ಹೋಗುತ್ತದೆ. ತಾಂತ್ರಿಕ ಲೋಕದ ಮೋಹ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡಿರುತ್ತದೆ . ಕೆಲವರು ಆ ಮಾರ್ಗದಲ್ಲಿ ಚಲಿಸಿದರೂ ದಕ್ಕಿಸಿಕೊಳ್ಳುವುದು ಎಲ್ಲೋ ಕೆಲವು ಮಂದಿ ಮಾತ್ರ. ಆ ಲೋಕದ ವ್ಯವಹಾರಗಳೇ ವಿಚಿತ್ರ. ಸ್ವಾತ್ವಿಕತೆ ಉಳಿಸಿಕೊಂಡ ಜೀವಗಳು ಆ ದಾರಿಯನ್ನು ಪೂರ್ಣ ಒಪ್ಪಿಕೊಳ್ಳಲಾಗದೆ ಮೋಹ ಬಿಡಲಾಗದೆ ಚಡಪಡಿಸುತ್ತವೆ. ನರಸಪ್ಪನವರದ್ದು ಇದೆ ತೊಳಲಾಟ. ಆದರೆ ಅವರಿಗೆ ಸಿಕ್ಕ ಗುರುಗಳು ಈ ತೊಳಲಾಟ ಅರ್ಥ ಮಾಡಿಕೊಂಡು ಕೋಟೆಯೊಳಗೆ ಇದ್ದು ಯುದ್ಧ ಮಾಡು ಎಂಬ ಸೂಚನೆ ಕೊಟ್ಟು ಅದಕ್ಕಾಗಿ ತಯಾರಿ ಮಾಡುತ್ತಾರೆ. ನಮ್ಮ ನಮ್ಮ ಮಿತಿಗೆ...