ಮೊದಲ ಕಾರು ಕೊಂಡ ಸಂಭ್ರಮ. ಇಬ್ಬರೂ ಆಫೀಸ್ ಗೆ ಹೋಗುತ್ತಿದ್ದರಿಂದ ರಜೆ ಸಿಕ್ಕಿದ ಕೂಡಲೇ ಎಲ್ಲಾದರೂ ಹೊರಡುವ ಅಭ್ಯಾಸ. ಹೊಸ ಕಾರ್ ಸುತ್ತುವ ಹುಚ್ಚು ಎರಡು ಜೊತೆಯಾಗಿತ್ತು. ಹಾಗೆ ಮೈಸೂರಿಗೆ ಹೋಗುವ ಹುಕಿ ಬಂದು ಹೋಗಿದ್ದೆವು. ಎಲ್ಲಾ ಕಡೆ ಸುತ್ತಾಡಿ ಅರಮನೆ ನೋಡಿ ಬಂದು ಕಾರ್ ಸ್ಟಾರ್ಟ್ ಆಗಿ ಇನ್ನೇನು ಹೋರಡಬೇಕು ಅಕ್ಕಾ ಎನ್ನುವ ಸ್ವರ. ಕಿಟಕಿಯಿಂದ ಹೊರಗೆ ನೋಡಿದರೆ ಕೈಯಲ್ಲಿ ಪುಟ್ಟ ಮರದ ಆಭರಣದ ಪೆಟ್ಟಿಗೆ ಹಿಡಿದ ವ್ಯಕ್ತಿಯೊಬ್ಬ ಕಾಣಿಸಿದ. ಅದರ ಮೇಲಿನ ಕುಸುರಿ ಕೆಲಸ ಒಳಗೆ ಹಾಕಿದ ಕೆಂಪು ಮಕಮಲ್ ಬಟ್ಟೆ ಎಲ್ಲವೂ ಚೆಂದವಿದ್ದರೂ ತಗೊಂಡು ಏನು ಮಾಡೋದು ಅನ್ನಿಸಿ ಬೇಡ ಎಂದೇ. ನಾವು ಹೋಗಿ ತೆಗೆದುಕೊಳ್ಳುವುದಕ್ಕೂ ಯಾರಾದರೂ ಬಂದು ತೆಗೆದುಕೊಳ್ಳಿ ಎನ್ನುವುದಕ್ಕೂ ತುಂಬಾ ವ್ಯತ್ಯಾಸ. ಅವನು ಹೋಗುವ ತರಹ ಕಾಣಿಸಲಿಲ್ಲ. ತಗೊಳ್ಳಿ ಬಂಗಾರ ಹಾಕಿಡಲು ಚೆನ್ನಾಗಿರುತ್ತದೆ ಅವನ ದನಿಯಲ್ಲಿ ಸಣ್ಣಗೆ ಒತ್ತಾಯ ಕಾಣಿಸಿ ಕಸಿವಿಸಿ. ಬೇಡ ಅಂದೇನಲ್ಲ ದನಿ ಕೊಂಚ ಜೋರಾದ ಹಾಗೆ ಅನ್ನಿಸಿತು. ಅದೇನೋ ಇನ್ನೂ ಬಂಗಾರದ ಮೋಹವಿರಲಿ ಅಲಂಕಾರ ಮಾಡಿಕೊಳ್ಳುವ ಆಸಕ್ತಿಯು ಇರಲಿಲ್ಲ. ಬಟ್ಟೆಗಳ ಬಗ್ಗೆ ವಿಪರೀತ ಮೋಹಕ್ಕೆ ಬಿದ್ದ ಹೊತ್ತು ಅದು. ಅದೆಷ್ಟು ಬಟ್ಟೆಗೆ ದುಡ್ಡು ಸುರಿತಿ ಅದರ ಬದಲು ಬಂಗಾರ ತಗೋಬಾರದ ಆಪತ್ಕಾಲಕ್ಕೆ ಆಗುತ್ತೆ ಮನೆಯ ಓನರ್ ಆದರೂ ಅಮ್ಮನಂತಿದ್ದ ಅವರು ಬೈಯ್ದು ಬೈದು ಸಾಕಾಗಿ ತಿಂಗಳಿಗೆ ಇಂತಿಷ್ಟು ಅಂತ ನಂ...
Posts
Showing posts from November, 2020
ಓದಿನ ಮೆಟ್ಟಿಲುಗಳು (ವಿಜಯಕರ್ನಾಟಕ)
- Get link
- X
- Other Apps
ಆಟದ ನಡುವೆ ತುಸು ಸುಧಾರಿಸಿಕೊಳ್ಳಲು ಕುಳಿತಾಗ ಕೈ ಗೆ ಬರುತ್ತಿದ್ದದ್ದು ಚಂದಮಾಮ. ಅದರಲ್ಲಿ ಬರುತ್ತಿದ್ದ ಬೇತಾಳನ ಕತೆಗಳನ್ನು ಮೊದಲು ಓದಿಯೇ ಆಮೇಲೆ ಉಳಿದ ಕಥೆಗಳತ್ತ ಕಣ್ಣು ಹರಿಯುತ್ತಿದ್ದದ್ದು. ವಿಕ್ರಮಾದಿತ್ಯ ಏನು ಉತ್ತರ ಕೊಟ್ಟಿದ್ದಿರಬಹುದು ಎಂದು ಯೋಚಿಸಿ ಕೆಲವೊಮ್ಮೆ ಚರ್ಚಿಸಿ(?) ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ಚಂದಮಾಮ ಮೊದಲು ಓದುವ ಅವಕಾಶ. ಹೀಗೆ ಪುಸ್ತಕವನ್ನು ಮೊದಲು ಓದಬೇಕಾದರೆ ತಲೆಗೆ ಕೆಲಸ ಕೊಡಬೇಕು ಎಂದು ಕಲಿಸಿದ್ದು ಚಂದಮಾಮ. ಚಿಕ್ಕಂದಿನಿಂದಲೂ ರೈಲುಬೋಗಿಯ ಪಯಣದಲ್ಲಿ ಬಂದವರು ಹೋದವರು, ಬರುತ್ತಿರುವವರ ನಡುವೆ ಜೊತೆಗೆ ನಿರಂತರವಾಗಿ ಅಷ್ಟೇ ಆಪ್ತವಾಗಿ ಇವತ್ತಿಗೂ ಉಳಿದಿದ್ದು, ಪೊರೆದದ್ದು, ಸಾಂಗತ್ಯ ನೀಡಿದ್ದು ಪುಸ್ತಕಗಳು. ನಂತರ ಬಂದ ಬಾಲಮಂಗಳ, ಚಂಪಕ, ಶಾಲೆಯ ಲೈಬ್ರರಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿದ್ದ ಅಮರ ಚಿತ್ರಕಥಾ, ಭಾರತ ಭಾರತೀ ಪುಸ್ತಕಗಳು ಹಸಿವೆಯ ತಣಿಸಿದ ಆತ್ಮಬಂಧುಗಳು. ಇದೆ ಪ್ರಪಂಚದಲ್ಲಿ ಮುಳುಗಿಹೋದವರನ್ನು ಹಠಾತ್ತನೆ ಮತ್ತೊಂದು ಪ್ರಪಂಚಕ್ಕೆ ಎಳೆದೊಯ್ದಿದ್ದು ಅಜ್ಜನ ಅನಾರೋಗ್ಯ. ಅವರಿಗಾಗಿ ರಾಮಾಯಣ ಮಹಾಭಾರತ ಓದುವ ಕೆಲಸ ಅಂಟಿಕೊಂಡಿತ್ತು. ಆಟವನ್ನು ಬಿಟ್ಟು ಅದರಲ್ಲೂ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳುವ ಸುಖದಿಂದ ಜೋರಾಗಿ ಇನ್ನೊಬ್ಬರಿಗೆ ಓದಿ ಹೇಳುವ ಸಂಕಟ ಬೇರೆ. ಕತೆಗಳು ಉಪಕಥೆಗಳು, ವಾಲ್ಮೀಕಿ, ವ್ಯಾಸರ ಕತೆ ಹೇಳುವ ರೀತಿ ಆಳ...