ಆಟ ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ ಸಿಡಿಯುತ್ತೆ ಎಂದುಕೊಂಡು ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ.. ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ. ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕ...
Posts
Showing posts from December, 2020
- Get link
- X
- Other Apps
ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು. ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿ...