Posts

Showing posts from 2024
 ಅಮೃತಕ್ಕಾಗಿ ಹಾಲ್ಗಡಲು ಕಡೆಯುವ ನಿರ್ಧಾರವಾಯಿತಂತೆ. ದೇವತೆಗಳು ಒಂದು ಕಡೆ ದೈತ್ಯರು ಒಂದು ಕಡೆ. ಎರಡು ವಿರುದ್ಧಗಳು ಒಂದಾಗಿ ಕಡೆಯುವ ಘಟನೆ.    ಜೀವನ ವೈರುಧ್ಯಗಳ ಸಂಗಮ ಅಂತಾರೆ. ಪರಸ್ಪರ ವಿರುದ್ಧ ಬಿಂದುಗಳು ಇದ್ದಾಗ ಮಾತ್ರ ಸರಳ ರೇಖೆ ನಿರ್ಮಾಣ ಆಗುತ್ತದೆ.  ಅಂದರೆ ಪರಸ್ಪರ ವಿರುದ್ಧ ಇರುವವರು ಒಟ್ಟಾಗಿ ಮಥಿಸಿದರೆ ಅಮೃತ ಸಿಗುತ್ತದೆ ಎನ್ನುವುದು ಇದರಿಂದ ಸಾಬೀತಾಯಿತು. ಒಂದು ಹೊಸ ನೋಟ ಸಿಕ್ಕ ಹಾಗಾಯಿತು.  ಒಬ್ಬನೇ ತಂದೆಯ ಇಬ್ಬರು ಮಕ್ಕಳು ದೈತ್ಯರು ಹಾಗೂ ದೇವತೆಗಳು. ಇಬ್ಬಣ. ಎರಡು ವಿರೋಧ ಸ್ವಭಾವ. ಇಬ್ಬರೂ ಕೈ ಜೋಡಿಸಿದರೆ ಮಾತ್ರ ಮಥನ ಸಾಧ್ಯ. ಎದುರುಬದುರು ನಿಂತು ಮಥಿಸಬೇಕು. ಅಂತ ವಿಶಾಲ ಹಾಲ್ಗಡಲು ಮಥಿಸಲು ಕಡಗೋಲು ಮಂದಾರ ಪರ್ವತ. ಮಥಿಸುವ ಅಬ್ಬರಕ್ಕೆ ಗಟ್ಟಿಯಾಗಿ ನಿಂತಲ್ಲೇ ನಿಲ್ಲಬಲ್ಲ ಸ್ಥೈರ್ಯದ ಪರ್ವತ. ಕಡೆಯುವುದಕ್ಕೆ ಮೌನವಾಗಿಯೇ  ಆಸರೆ.  ಹಗ್ಗವಾಗಿ ವಾಸುಕಿ. ಕಡೆಯುವ ರಭಸಕ್ಕೆ ಅಂತ ಗಟ್ಟಿ ಪರ್ವತವೂ ಮುಳುಗ ತೊಡಗಿತಂತೆ. ಆಗ ಆಧಾರವಾಗಿ ವಿಷ್ಣು ಕೂರ್ಮವತಾರತಾಳಿ ಗಟ್ಟಿ ಬೆನ್ನಿನ ಆಮೆಯಾಗಿ  ಆ ಭಾರವನ್ನು ಬೆನ್ನ ಮೇಲೆ ಹೊತ್ತನಂತೆ.  ಎಂಥಾ ರೂಪಕ. ಅಂದಿನಿಂದ ಇಂದಿನವರೆಗೂ ಬೆನ್ನು ಎಷ್ಟು ಗಟ್ಟಿ ಎನ್ನುವುದರ ಮೇಲೆಯೇ ಎಷ್ಟು ಭಾರ ಹೊರಬಹುದು ಎನ್ನುವುದು ನಿರ್ಧಾರವಾಗುತ್ತದೆ. ಕುಸಿಯದ ಹಾಗೆ ಸಂಭಾಳಿಸಿಕೊಳ್ಳಲು ಕಲಿಯುತ್ತೇವೆ.  ಮಥನ ಶುರುವಾಯಿತು. ಕಡೆಯುವ ಎರಡು ಬಣದಲ್ಲೂ ಉತ್ಸಾಹವಿತ್ತು. ತಾವೇ ಗೆಲ್ಲಬೇಕು ಎನ್ನುವುದೂ