ಶಿಕಾರಿ
ಅಲ್ಲೇ ಗೋಡೆಯ ಬದಿಗೆ ನೆಟ್ಟ ಕ್ರೋಟಾನ್ ಗಿಡದ ಎಲೆಗಳ ಮರೆಯಲ್ಲಿ ಇತ್ತದು ಎಂದು ಗೊತ್ತಾಗಿದ್ದೆ ಚೆಂಗನೆ ನೆಗೆದು ಹಾರಿದಾಗ. ತನ್ನಷ್ಟಕ್ಕೆ ತಾನು ಹಾರಾಡುತ್ತಾ ಬಂದು ಕೀಟವೊಂದು ಕ್ಷಣಕಾಲ ವಿಶ್ರಮಿಸಲೇನೋ ಎಂಬಂತೆ ಇನ್ನೂ ಕುಳಿತಿತ್ತು ಅಷ್ಟೇ, ಉಸಿರೂ ನಿರಾಳವಾಗಿ ಬಿಟ್ಟಿತ್ತು ಇಲ್ಲವೋ. ಏನಾಯ್ತು ಎಂದು ಅರಿವಾಗುವುದರೊಳಗೆ ನೆಗೆದ ಓತಿಕ್ಯಾತದ ಬಾಯಿಯ ಬಾಯೊಳಗೆ ಬಿದ್ದಿತ್ತು. ಕಣ್ಣೆದೆರು ಅತಿ ಸಹಜವೆಂಬಂತೆ ನಡೆದ ಈ ಶಿಕಾರಿ ಒಂದು ಕ್ಷಣ ತಲ್ಲಣ ಹುಟ್ಟಿಸಿದ್ದು ಸುಳ್ಳಲ್ಲ. ಇಂತಹದೊಂದು ತಲ್ಲಣ ಕೊನೆಯ ಪುಟದವರೆಗೂ ಜೊತೆಯಾಗಿದ್ದು ಚಿತ್ತಾಲರ ಶಿಕಾರಿ ಓದುವಾಗ. ಶಿಕಾರಿ ಅಥವಾ ಬೇಟೆ ಅಂದ ಕೂಡಲೇ ಕಣ್ಮುಂದೆ ಬರುವುದು ಪ್ರಾಣಿ ಪ್ರಾಣಿಗಳ ನಡುವಿನ ಬೇಟೆ ಅಥವಾ ಮನುಷ್ಯ ಆಡುವ ಪ್ರಾಣಿಗಳ ಬೇಟೆ. ಮನುಷ್ಯ ಮನುಷ್ಯನ್ನನ್ನು ಆಡುವ ಶಿಕಾರಿ ಮಾತ್ರ ಬೆಳಕಿಗೆ ಬರುವುದು ಕಡಿಮೆಯೇ. ಪ್ರಾಣಿಗಳು ಹೊಟ್ಟೆಯ ಹಸಿವಿಗಾಗಿ ಬೇಟೆ ಆಡಿದರೆ ಮನುಷ್ಯನೂ ಹಸಿವೆಯನ್ನು ತಣಿಸಲೇ ಶಿಕಾರಿಯಾಡುತ್ತಾನೆ. ಆದರೆ ಅವನ ಹಸಿವಿನ ವ್ಯಾಪ್ತಿ ಮಾತ್ರ ತುಂಬಾ ದೊಡ್ಡದು. ಹೆಸರಿನ, ಪ್ರತಿಷ್ಠೆಯ, ಅಂತಸ್ತಿನ, ಅಧಿಕಾರದ, ಹಣದ, ಮಣ್ಣಿನ, ಹೆಣ್ಣಿನ, ಯಶಸ್ಸಿನ ಹಸಿವೆಯನ್ನು ತಣಿಸಲು ಶಿಕಾರಿಯಾಡುತ್ತಾನೆ. ಹೊಂಚು ಹಾಕಿ ಕಾದು ಎರಗುತ್ತಾನೆ. ಹಾಗಾಗಿ ಪ್ರಾಣಿಗಳ ಶಿಕಾರಿಗಿಂತಲೂ ಮನುಷ್ಯನ ಶಿಕಾರಿ ಅತೀ ಬುದ್ಧಿವಂತಿಕೆಯಿಂದ ಕೂಡಿದ್ದು ಹಾಗೂ ಅಷ್ಟೇ ಅಪಾಯಕಾರಿಯಾಗಿದ್ದು. ಇಂತಹದೊಂದು ಶಿಕಾ...