ದಹನ.
ಮೊನ್ನೆ ಪುಸ್ತಕ ಬಿಡುಗಡೆಯ ಸಮಯದಲ್ಲಿ ಮಾತಾಡ್ತಾ ಸೇತುರಾಂ ಸರ್ ಹೇಳ್ತಾ ಇದ್ರು. ಜನಕ್ಕೆ ಮಾತಾಡ್ತಾ ಏನಾದರೂ ವಿಷ್ಯ ಹೇಳಿದರೆ ಏನೋ ಕತೆ ಹೇಳ್ತಿಯಾ ಅಂತಾರೆ ನಂಬೋಲ್ಲ, ಅದೇ ಕತೆ ಬರೀರಿ ಇದು ನಿಮ್ಮದೇ ವಿಷಯವಾ ಕೇಳ್ತಾರೆ ಅಂತ. ನಗು ಉಕ್ಕಿ ಬಂದರೂ ಎಷ್ಟು ಸತ್ಯವಲ್ಲವಾ ಅನ್ನಿಸಿತು. ನಮಗೆ ಮಾತಲ್ಲಿ ಕತೆಯನ್ನ, ಕತೆಯಲ್ಲಿ ವೈಯುಕ್ತಿಕ ಬದುಕನ್ನ ಹುಡುಕುವ ಚಪಲ. ಅದ್ಯಾಕೆ ಅಂತ ಎಷ್ಟೋ ಸಲ ಯೋಚನೆ ಬಂದರೂ ಇನ್ನೂ ಉತ್ತರ ಸಿಗದೇ ಕಗ್ಗಂಟಾಗಿಯೇ ಉಳಿದಿದೆ. ವಾಸ್ತವದಲ್ಲಿ ಭ್ರಮೆಯನ್ನ, ಭ್ರಮೆಯಲ್ಲಿ ವಾಸ್ತವವನ್ನು ಹುಡುಕುವುದೇ ನಮಗೆ ಅಭ್ಯಾಸವಾಗಿದೆಯಾ... ಹಾಗಾಗಿಯೇ ನಮಗೆ ವಾಸ್ತವಕ್ಕಿಂತ ಕಲ್ಪನೆಯೇ ಪ್ರಿಯವಾಗುತ್ತದಾ... ಅಥವಾ ನಮಗೆ ವಾಸ್ತವದ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲವಾ ಹಾಗಾಗಿಯೇ ಕಲ್ಪನೆ ಪ್ರಿಯವಾಗುತ್ತದಾ... ಉಹೂ ಉತ್ತರ ಹುಡುಕಲು ಸಮಯವಿಲ್ಲ ಅನ್ನುವ ಸಮರ್ಥನೆ ಅಂತೂ ಎದುರಾಗಿ ಅಲ್ಲಿಂದ ಕರೆದೊಯ್ಯುತ್ತದೆ. ಸಮಾಜ ಸರಿಯಿಲ್ಲ, ಕಾಲ ಕೆಟ್ಟಿದೆ ಇದು ನಾವು ಸಾಮಾನ್ಯವಾಗಿ ಕೇಳುವ ಬಳಸುವ ಮಾತು. ಇದು ನಿಜವಾ ಕೆಟ್ಟಿದ್ದು ಸಮಾಜವಾ.. ಹಾಗಾದರೆ ಸಮಾಜ ಅಂದರೆ ಏನು? ಅದು ನಿರ್ಮಾಣವಾಗಿದ್ದು ಹೇಗೆ? ಎಂಬ ಪ್ರಶ್ನೆ ಕೇಳಿಕೊಂಡರೆ ಉತ್ತರ ನಮ್ಮ ಬುಡಕ್ಕೇ ಬರುತ್ತದೆ. ನಾವು ಸಹಜವಾಗಿ ಜವಾಬ್ದಾರಿ, ಬಾಧ್ಯತೆಗಳಿಂದ ಹೊರಗೆ ಹೋಗಲು ಕಳಚಿಕೊಳ್ಳಲು ಸದಾ ಪ್ರಯತ್ನ ಪಡುತ್ತೇವೆ. ಹಾಗಾಗಿಯೇ ನಮಗೆ ಸ್ವಂತದವರು ದೂರ ಹಾಗೂ ದೂರದವರು ಹತ್ತಿ...