ಎಚ್ಚರವಿದ್ದಷ್ಟು ಹೊತ್ತೂ ಕೈ, ಕಾಲು, ಬಾಯಿ ಯಾವುದೂ ಸುಮ್ಮನಿರೊಲ್ಲ ಇದಕ್ಕೆ ಅಂತ ದಿನಾಲು ಅಜ್ಜಿ ಬೈಯುವುದು ದೇವಸ್ಥಾನದಲ್ಲಿ ಬೆಳಿಗ್ಗೆ ಹಾಕುವ ಸುಪ್ರಭಾತದ ಹಾಗೆ ಅಭ್ಯಾಸವಾಗಿ ಹೋಗಿತ್ತು. ರಾತ್ರಿ ಮಲಗುವಾಗಲೂ ಹಾಗೆ ನಿದ್ದೆ ಬಂದಾಗಲೂ ಹಾಗೆ ಯಾವುದೋ ನೃತ್ಯವೋ, ಮಾಡಿದ ಜಗಳವೋ, ಆಡಿದ ಆಟವೋ ನೆನಪಾಗಿ ನಿದ್ದೆಯ ಮತ್ತಿನಲ್ಲೂ ಅದೂ ಮುಂದುವರಿಯುತ್ತಿತ್ತು. ಒಬ್ಬಳೇ ಮಲಗುವುದು ಕನಸಿನಲ್ಲೂ ಯೋಚಿಸದ ವಿಷಯವಾಗಿದ್ದರಿಂದ ರಾತ್ರಿ ಆಗುತ್ತಿದ್ದ ಹಾಗೆ ಯಾರ ಜೊತೆ ಎಂದು ಶುರುಮಾಡುತ್ತಿದ್ದರಿಂದ ಅದು ಗೊತ್ತಿದ್ದರಿಂದ ಅಜ್ಜ ಅಂಗಳದ ಆ ಮೂಲೆಯ ದೊಡ್ಡ ಅಶ್ವತ್ಥ ಮರ ತೋರಿಸಿ ರಾತ್ರಿ ಬ್ರಹ್ಮ ರಾಕ್ಷಸ ಅದರಿಂದ ಇಳಿದು ಅಂಗಳದ ಕೆಳಗಿನ ಬಾವಿಗೆ ಸ್ನಾನಕ್ಕೆ ಬರುವ ಕತೆ ಹೇಳಿ ಪಕ್ಕ ಮಲಗುವುದನ್ನು ತಪ್ಪಿಸಿಕೊಂಡರೆ ಅಜ್ಜಿ ಪುಟ್ಟ ಮಂಚ ತೋರಿಸಿ ಅಸಹಾಯಕತೆ ನಟಿಸುತ್ತಿದ್ದಳು. ಅಲ್ಲಿಗೆ ಮತ್ತೆ ಬಲಿಪಶು ಆಗುತ್ತಿದ್ದದ್ದು ಅಣ್ಣ ಹಾಗೂ ಚಿಕ್ಕಮ್ಮ. ಅವರಿಬ್ಬರ ಮಧ್ಯೆ ಮಲಗಿರುತ್ತಿದ್ದ ನಾನು ಬೆಳಿಗ್ಗೆ ಏಳುವಾಗ ತಮ್ಮದೇ ರಾಜ್ಯದಿಂದ ಗಡೀಪಾರಾದ ಮುಕುಟವಿಲ್ಲದ ರಾಜರಂತೆ ಅವರು ನೆಲದ ಮೇಲೆ ಮಲಗಿರುತ್ತಿದ್ದರು. ಅಖಂಡ ಸಾಮ್ರಾಜ್ಯಾಧಿಪತಿಯಂತೆ ನಾನು ಮೂರೂ ಹಾಸಿಗೆಯಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿರುತ್ತಿದ್ದೆ. ಆಮೇಲಾಮೇಲೆ ಆರ್ಭಟ ಕಡಿಮೆಯಾದರೂ ಎಡಕ್ಕೆ ಹೊರಳಿ, ಬಲಕ್ಕೆ ತಿರುಗಿ, ಕವುಚಿ, ಅಂಗಾತ ಹೀಗೆ ನಿದ್ದೆ ಬರುವವರೆಗ...
Posts
Showing posts from May, 2019
ಮಾದಿಪಾಡು....
- Get link
- X
- Other Apps
ನಂಗೆ ಕೆಲಸ ಸಿಕ್ತು ನೀನು ಬಾ ಅಂತ ಅಣ್ಣ ಕರೆದಾಗ ಖುಷಿ ಮೇರೆ ಮೀರಿತ್ತು. ಅದರಲ್ಲೂ ಹೊರರಾಜ್ಯ ಅನ್ನೋದು ಇನ್ನೊಂದು ಚೂರು ಜಂಬ ಬರುವ ಮಾಡಿತ್ತು. ರೈಲು ಇಳಿದು, ಅಲ್ಲಿಂದ ಬಸ್ ಹತ್ತಿ ಮತ್ತೊಂದು ರಿಕ್ಷಾ ಹಿಡಿದು ಮತ್ತೆ ದೋಣಿಗಾಗಿ ಕಾದು ಅದು ಬಂದ ಮೇಲೆ ಆಚೆ ಕಡೆ ನಿಂತಿದ್ದ ಜೀಪ್ ಹತ್ತಿ ಹೊಲದ ನಡುವೆ ಬೆಟ್ಟದ ಬುಡ ಇರುವ ಅವನ ಗುರುಕುಲ ಸೇರುವ ಹೊತ್ತಿಗೆ ಬೆವರು ಸುರಿದು, ತಲೆ ಕಾಯ್ದು ಉಸ್ಸಪ್ಪಾ ಅನ್ನಿಸಿಬಿಟ್ಟಿತ್ತು. ಬೆಂಗಳೂರು ಬಿಟ್ಟು ಅದಾಗಲೇ 18 ಗಂಟೆಗಳಿಗೂ ಹೆಚ್ಚು ಕಾಲವಾಗಿತ್ತು. ಕೃಷ್ಣಾ ನದಿಯ ದಡದ ಮೇಲೆ ಒಂದು 50 ಎಕರೆ ಜಾಗದಲ್ಲಿ ಇದ್ದ ಗುರುಕುಲವದು. ಕೃಷ್ಣೆ ಮೂರು ದಿಕ್ಕಿನಲ್ಲೂ ಬಳಸಿಕೊಂಡು ಹರಿಯುತ್ತಿದ್ದಳು, ನಾಲ್ಕನೇ ಪಕ್ಕದಲ್ಲೊಂದು ಗುಡ್ಡ, ಅದರ ಕೆಳಗೆ ಒಂದು ತಾಂಡಾ.. ಅದರಾಚೆಗೆ ಶುರುವಾದ ಕಾಡು ಎಲ್ಲಿಗೆ ಮುಗಿಯುತ್ತಿತ್ತೋ ಯಾರಿಗೆ ಗೊತ್ತು. ನಕ್ಷಲ್ ಎಂದರೆ ಭಯ ಬೀಳುತ್ತಿದ್ದವಳಿಗೆ ಅದು ನಕ್ಷಲ್ ಏರಿಯ ಎಂದು ಹೋಗುವವರೆಗೂ ಹೇಳಿರಲಿಲ್ಲ ಕೇಡಿ. ನಗರದಲ್ಲಿದ್ದವಳನ್ನು ಅನಾಮತ್ತಾಗಿ ವಾನಪ್ರಸ್ಥಕ್ಕೆ ಕಾಡಿಗೆ ಕಳುಹಿಸಿದ ಹಾಗಿತ್ತು ಪರಿಸ್ಥಿತಿ. ಪರ್ಯಾಯ ದ್ವೀಪದಂತಹ ಜಾಗ. ದಿನಕ್ಕೆ ಆರು ಗಂಟೆಗಳ ಕರೆಂಟ್ ಕಡಿತ ಅನ್ನೋದು ನಿಯಮ ಆದರೆ ಕರೆಂಟ್ ಬಂದರೆ ಬಂತು ಇಲ್ಲಾಂದ್ರೆ ಇಲ್ಲಾ ಅನ್ನೋ ವಾತಾವರಣ. ಆ ಕಡೆ ಕಾಡು, ಈ ಕಡೆ ನದಿ ಮಧ್ಯೆ ಇದು. ಒಂದು ಬೆಂಕಿ ಪೊಟ್ಟಣ ಬೇಕು ಅ...
ಸಂಪಗೋಡು (ಹನಿ ಕಡಿಯದ ಮಳೆ )
- Get link
- X
- Other Apps
ಮುಂದಿನವಾರ ಲಾರಿ ಬರುತ್ತೆ, ಅಷ್ಟರೊಳಗೆ ಸಾಮಾನೆಲ್ಲಾ ಪ್ಯಾಕ್ ಮಾಡಬೇಕು ಎಂದು ಮಾವ ಅಜ್ಜಿಯ ಬಳಿ ಹೇಳುತಿದ್ದದ್ದು ಅಂಗಳದಲ್ಲಿ ಕುಂಟಪಿಲ್ಲೆ ಆಡುತಿದ್ದ ನನ್ನ ಕಿವಿಗೆ ಬಿದ್ದಾಗ ಯಾಕೋ ಆಟ ಮುಂದುವರಿಸುವ ಮನಸ್ಸಾಗಲಿಲ್ಲ. ಏನಾಯ್ತೆ? ನಿಂದೇ ಆಟ ತಗೋ ಎಂದು ಬಚ್ಚೆ ಕೊಡಲು ಬಂದ ಜಯಂತಿಯ ಕೈ ಸರಿಸಿ ಇವತ್ತಿಗೆ ಸಾಕು ಕಣೆ ಅಂದಾಗ ಜಯಂತಿಗೆ ಜಗತ್ತಿನ ಎಂಟನೆ ಅದ್ಭುತ ಅನ್ನಿಸಿತ್ತು. ಹದಿನೈದು ಇಪ್ಪತ್ತು ಮನೆಗಳಿರುವ ಪುಟ್ಟ ಊರು ಅದು. ವಕ್ರ ರೇಖೆಯೊಂದು ಹಾದುಹೋಗುವಂತೆ ಕಟ್ಟಿದ ಮನೆಗಳು. ಎರಡೂ ಕೈ ಬೆರಳುಗಳ ಸಹಾಯದಿಂದ ಎಣಿಸುವಷ್ಟು ಜನಗಳು. ಆ ಕಡೆ ಸೋಮಯಾಜಿಗಳ ಮನೆಯಿಂದ ಶುರುವಾದರೆ ಕೆಳಗೆ ಅಪ್ಪಿನಾಯಕನ ಮನೆ, ಹೀಗೆ ನಾಲಕ್ಕೈದು ಮನೆಗಳು ಸಾಲಾಗಿರುವಾಗಲೇ ಅಲ್ಲೊಂದು ದೊಡ್ಡ ಅಶ್ವತ್ಥ ಕಟ್ಟೆಯಿತ್ತು. ಅದರ ಪಕ್ಕವೇ ನಮ್ಮ ಮನೆ. ಅಲ್ಲಿಂದ ಮೇಲಕ್ಕೆ ಸಾಗುವ ಮಣ್ಣಿನ ದಾರಿಯಲ್ಲಿ ಒಂದು ಐವತ್ತು ಹೆಜ್ಜೆ ನಡೆದರೆ ಸಿಗೋದು ಗುಂಡಯ್ಯನ ಮನೆ. ಅದರಾಚೆಗೆ ಸಣ್ಣಗೆ ಸರಿದು ಹೋಗುವ ರಸ್ತೆ ಕೊನೆಯಾಗುತ್ತಿದ್ದದ್ದು ವೆಂಕಟರಮಣನ ಗುಡಿಯ ಅಂಗಳದಲ್ಲಿ. ಅದರ ಹಿಂಬಾಗ ಮಾಸ್ತಿ ಕಾಡಿನ ಅಂಚು ಅಲ್ಲಿಂದ ಮುಂದೆ ದಾರಿಯಿಲ್ಲ ಊರೂ ಇಲ್ಲ. ದಟ್ಟ ಕಾಡು ಅಷ್ಟೇ... ಪ್ರತಿ ದಾರಿಗೂ ಒಂದು ಅಂತ್ಯವಿದೆಯೇ... ಒಂದು ಕೊನೆಯೇ ಇನ್ನೊಂದರ ಆರಂಭವೇ?. ಪ್ರತಿಯೊಬ್ಬರ ಮನೆಯ ಹಿತ್ತಲಿನ ಹಿಂಬಾಗದಿಂದಲೇ ಕಾಡಿನ ಅಂಚು ಶುರುವಾಗುತ್ತಿತ್ತು. ಎದುರಿಗೆ ಹರಡಿದ ವಿಶಾ...
ರಂಜದ ಹೂ
- Get link
- X
- Other Apps
ಯಥಾಪ್ರಕಾರ ಕುಣಿಯುತ್ತಾ ಹೋಗುವಾಗ ಓಡುವ ಕಾಲಿಗೆ ಪಕ್ಕನೆ ಬ್ರೇಕ್ ಹಾಕಿ ಕಣ್ಣು ಮೂಗು ಎರಡೂ ಅರಳುವುದು ದಾರಿಯಲ್ಲಿ ಬಿದ್ದ ರಂಜದ ಹೂ ನೋಡಿದಾಗ. ಒಹ್ ಹೂ ಬಿಳೋಕೆ ಶುರುವಾಯ್ತು ಅನ್ನುವ ಸಂಭ್ರಮ ಉಕ್ಕಿ ಅದು ದನಿಯಲ್ಲಿ ವ್ಯಕ್ತವಾಗಿ ಬಿದ್ದ ಹೂ ಅನ್ನು ಮೃದುವಾಗಿ ಎತ್ತಿ ಆಘ್ರಾಣಿಸಿದರೆ ಆಹಾ ಅದೂ ಒಂದು ಧ್ಯಾನವೇ. ಅದೇ ಉತ್ಸಾಹದಲ್ಲಿ ಮನೆಗೆ ಬಂದು ಇನ್ನೇನು ಹೇಳಬೇಕು ಅನ್ನುವಾಗಲೇ ನಾಳೆಯಿಂದ ರಂಜದ ಹೂ ಜಾಸ್ತಿ ಹೆರಕಿಕೊಂಡು ಬಾ ಸಹಸ್ರ ಪದ್ಮ ಪೂಜೆ ಮಾಡ್ತೀನಿ ಅನ್ನೋ ಅಜ್ಜಿಯ ದನಿ ಕೇಳುತಿತ್ತು. ನಾನೇ ತರ್ತೀನಿ ಅನ್ನುವ ಸಂಭ್ರಮ ಇನ್ಯಾರೋ ತಾ ಅಂದಾಗ ಸಿಟ್ಟಾಗಿ ಬದಲಾಗುವುದು ಹೇಗೆ ಎನ್ನುವುದು ಮಾತ್ರ ಅರ್ಥವಾಗುತ್ತಿರಲಿಲ್ಲ. ಜಾಸ್ತಿ ತಲೆಕೆಡಿಸಿಕೊಳ್ಳುವ ವಯಸ್ಸೂ ಅದಾಗಿರದ ಕಾರಣ ಆ ಮುನಿಸಿಗೆ ಆಯಸ್ಸೂ ಅಲ್ಪವೇ ಆಗಿರುತಿತ್ತು. ರಾತ್ರಿ ಮಲಗುವಾಗಲೇ ಲೆಕ್ಕಾಚಾರ ಶುರು. ಆಚೆಮನೆಯ ಹತ್ತಿರ ಮರ ಸಣ್ಣದು, ಜಾಸ್ತಿ ಹೂ ಸಿಕ್ಕೊಲ್ಲ, ಅದರಲ್ಲೂ ಜಯತ್ತೆ ಬೆಳಿಗ್ಗೆಯೇ ಎದ್ದು ಗಣಪತಿಗೆ ಬೇಕು ಅಂತ ಆರಿಸಿರ್ತಾರೆ. ಇನ್ನು ಗೊಬ್ಬರದ ಗುಂಡಿಯ ಪಕ್ಕದ ಮರದ್ದು ಲೆಕ್ಕವಿಟ್ಟಂತೆ ಸ್ವಲ್ಪವೇ ಹೂ. ಇವಳ ಪೂಜೆಗೆ ಬೇಕಾದಷ್ಟು ಹೂ ಸಿಗೋದು, ಬೇಗ ಆರಿಸಲು ಆಗೋದು ಗೌಡರ ಮನೆಯ ಹಾಡ್ಯದ ಮರದ ಬುಡದಲ್ಲೇ ಎಂದು ನಿರ್ಧರಿಸುವ ವೇಳೆಗೆ ನಿದ್ರೆ ಬಂದಾಗಿರುತಿತ್ತು. ಬೆಳಿಗ್ಗೆ ಬೇಗ ಎದ್ದು ಕೈಯಲ್ಲೊಂದು ಬುಟ್ಟಿ ಹಿಡಿದು ಹೊರಟರೆ ಅಶ್ವಮೇಧಯಾಗಕ್ಕೆ ಹೊರಟಂತೆ. ಸದ್ಯಕ್ಕೆ ...
ರಾಜಕಾರಣವೆಂಬ ಅಮಲು (ಹೊಸದಿಗಂತ)
- Get link
- X
- Other Apps
ಅದೊಂದು ಚಿಕ್ಕ ಊರು. ತನ್ನ ಪಾಡಿಗೆ ತಾನಿದ್ದ ಆ ಊರಲ್ಲಿ ಇದ್ದಿದ್ದು ಪುರಾಣ ಪ್ರಸಿದ್ಧ ದೇವಸ್ಥಾನ. ಅದಕ್ಕೊಂದು ಸಮಿತಿ ಅದರಲ್ಲಿ ಆ ಊರಿನವರೇ ಒಂದಷ್ಟು ಉತ್ಸಾಹಿಗಳು. ಕಿರಿಯರ ಉತ್ಸಾಹ, ಹಿರಿಯರ ಪ್ರೋತ್ಸಾಹ ಎರಡೂ ಸೇರಿ ನಿಧಾನಕ್ಕೆ ದೇವಸ್ಥಾನ ಅಭಿವೃದ್ಧಿಯಾದಂತೆ ಜನರ ಹರಿವು ಹೆಚ್ಚಿ ಮನೆಮಾತಾಗತೊಡಗಿತು. ಅಲ್ಲಿಯವರೆಗೂ ಸಹಜವಾಗಿ ನದಿಯ ಹರಿವಿನಂತೆ ಸಾಗಿ ಹೋಗುತ್ತಿದ್ದ ಕೆಲಸಕ್ಕೂ ಆಕಸ್ಮಿಕ ತಿರುವು ಸಿಗತೊಡಗಿತು. ಹೆಸರು ಬರುತ್ತಿದ್ದ ಹಾಗೆ ಅಧಿಕಾರದ ಆಸೆಗೆ ಸಮಿತಿಯ ಒಳಗೆ ಸಣ್ಣದಾಗಿ ಮನಸ್ತಾಪವಾಗಿ ಆ ಮನಸ್ತಾಪ ಹೊಡೆದಾಟದ ಹಂತಕ್ಕೆ ತಿರುಗಿ ಕೊನೆಯಲ್ಲಿ ಆ ಆಸೆಗೆ ರಾಜಕೀಯ ಬೆನ್ನಲುಬಾಗಿ ದಲಿತ ಮೇಲ್ವರ್ಗದ ಹೆಸರಲ್ಲಿ ಕೇಸ್ ಆಗಿ ಯಾರ್ಯಾರ ಮೇಲೆ ದ್ವೇಷವಿತ್ತೋ ಅವರ ಹೆಸರು ಸೇರ್ಪಡೆಯಾಯಿತು. ಒಂದು ಸಲ ಕಂಪ್ಲೇಂಟ್ ರಿಜಿಸ್ಟರ್ ಆಗುತ್ತಿದ್ದ ಹಾಗೆ ಅದು ಸತ್ಯವೋ ಸುಳ್ಳೋ ಎಂದು ತಿಳಿಯುವ ಮೊದಲೇ ಅರೆಸ್ಟ್ ಮಾಡುವ ಅವಕಾಶ ನಮ್ಮಲ್ಲಿ ಇರುವುದರಿಂದ ಅದಕ್ಕೆ ಬಲಿಯಾದ ಹನ್ನೊಂದು ಜನರ ಮೇಲೆ ಕಾನೂನಿನ ಕುಣಿಕೆ ಬಿಗಿಯತೊಡಗಿತು. ಹಾಗಾಗಲು ನೆರವಾಗಿದ್ದು, ಬೇಕಾದ ಎಲ್ಲಾ ಅಧಿಕಾರವನ್ನು ಆಢಳಿತ ಯಂತ್ರವನ್ನು ಬಳಸಿಕೊಂಡಿದ್ದು ಒಂದು ಪಕ್ಷ.. ಬಲಿಯಾದ ಹನ್ನೊಂದು ಜನ ಅದರ ವಿರೋಧ ಪಕ್ಷದವರು. ಸುದ್ದಿ ಪ್ರತಿಯೊಬ್ಬರಿಗೂ ಬೆರಳ ತುದಿಯಲ್ಲಿ ತಲುಪುವ ಹಾಗೆ ಮಾಡಿದ್ದು ಮಾಧ್ಯಮಗಳು. ಅದರಲ್ಲೂ ಈಗಂತೂ ಕ್ಷಣಮಾತ್ರದಲ್ಲಿ ಬ್ರೇಕಿಂಗ್ ನ್ಯೂಸ್ ಕೊಡುವಲ್ಲಿ ಸುದ್ಧ...