ನದಿ ಉಳಿಸಿ (ಹೊಸದಿಗಂತ) 26.06.19
ಮೊನ್ನೆ ಮದುವೆಗೆ ಬಂದಿದ್ದ ಶೇ 80 ಪ್ರತಿಶತ ಜನರ ಮಾತು ಶುರುವಾಗುತ್ತಿದ್ದದ್ದೆ ಹೆಂಗೆ ನಿಮ್ಮ ಬಾವಿಲಿ ನೀರು ಉಂಟಾ ಸಾಕಾಗುತ್ತಾ ಅಂತಲೇ. ಮದುವೆಗೆ ಹೊರಡುವ ಮುನ್ನ ಇದೇ ಪ್ರಶ್ನೆಯನ್ನು ನಾನೂ ಕೇಳಿಯೇ ಹೊರಟಿದ್ದೆ. ಕೇಳಿದ ಮೇಲೆ ಅಲ್ಲಿಂದ ಪರವಾಗಿಲ್ಲ ಒಂದು ರಿಂಗ್ ನೀರು ಇದೆ ಸಾಕಾಗುತ್ತೆ ಅನ್ನುವ ಉತ್ತರ ಬಂದ ಮೇಲೆ ಫೋನ್ ಕೆಳಗಿಟ್ಟಮೇಲೆ ಫೋನ್ ನಂತೆ ಮನಸ್ಸೂ ಸ್ತಬ್ಧವಾಗಿತ್ತು. ಮಳೆಗೆ, ನೀರಿಗೆ ಹೆಸರುವಾಸಿಯಾಗಿದ್ದ, ನೀರಿನ ಬರ ಅಂದರೇನು ಅಂತಲೂ ಗೊತ್ತಿಲ್ಲದ ಮಲೆನಾಡೆ೦ಬ ಮಲೆನಾಡು ಈಗ ಅಕ್ಷರಶಃ ಬರನಾಡಾಗುವತ್ತ ಸಾಗಿದೆ. ಪ್ರತಿ ಬೇಸಿಗೆಯಲ್ಲೂ ಇದು ಹೆಚ್ಚುತ್ತಾ ಕುಡಿಯೋಕೆ ನೀರು ಸಿಕ್ಕರೆ ಸಾಕು ಅನ್ನುವ ಹಾಗಾಗಿದೆ. ಕೇವಲ ಪತ್ರಿಕೆಗಳಲ್ಲಿ, ಟಿ.ವಿ ಯಲ್ಲಿ ಬಯಲುಸೀಮೆಯ ಜನರ ಪರದಾಟ ನೋಡಿದ್ದ ಮಲೆನಾಡಿಗರು ಈಗ ಸ್ವತಃ ತಾವೇ ಅನುಭವಿಸುತ್ತಿದ್ದಾರೆ. ಹಾಗೇಕಾಯ್ತು ಅನ್ನೋದಕ್ಕೆ ಸಾವಿರ ಕಾರಣಗಳು ಕಣ್ಣೆದೆರು ಇದ್ದರೂ ಎಚ್ಚೆತ್ತುಕೊಳ್ಳದ ಬುದ್ಧಿವಂತರು ನಾವು ಅದಕ್ಕೆ ಸರಿಯಾಗಿ ನಮ್ಮನ್ನು ಆಳುವವರು. ಬಾವಿ ತೆಗೆದರೆ 30 ರಿಂದ 50 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ ಬೋರ್ ನ ಕೊಳವೆಗೆ 350 ರಿಂದ ಮುಂದಕ್ಕೆ ಎಷ್ಟು ಬೇಕಾದರೂ ಹೋಗಬಹುದಾದ ಸಾಧ್ಯತೆ ಇದೆ. ಹತ್ತು ಕಿ.ಮಿ ಸುತ್ತಳತೆಯಲ್ಲಿ ಇಂದು 400 ರಿಂದ 500 ಕ್ಕೂ ಹೆಚ್ಚು ಬೋರ್ವೆಲ್ ಗಳು ಆಗಿವೆ. ನಿಮ್ಮತ್ರ ಮೊಬೈಲ್ ಇದ್ಯಾ ಎಂದು ಕೇಳುವಷ್ಟೇ ಸಹಜವಾಗಿ ಬೋರ್ವೆಲ್ ತೆಗೆಸಿದ್ರಾ ಎಂದು ಕ...