Posts

ಅಜ್ಞಾತನೊಬ್ಬನ ಆತ್ಮಚರಿತ್ರೆ

"ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ." ಅಧಿಕಾರ ಎನ್ನುವುದು ಸರ್ಪದ ನೆರಳಲ್ಲಿ ಇದ್ದಂತೆ. ಯಾವ ಕ್ಷಣದಲ್ಲಿ ಎಲ್ಲಿಂದ ಹೇಗೆ ಅಪಾಯ ಬಂದೆರೆಗಬಹುದು ಎಂದು ಹೇಳುವುದು ಕಷ್ಟವೇ. ಅದರಲ್ಲೂ ಯಾರಿಂದ ಎನ್ನುವುದಂತೂ ಬಹಳ ಕಷ್ಟ. ಅಧಿಕಾರ ಎನ್ನುವುದು ಹಾವು ಏಣಿ ಆಟವಿದ್ದಂತೆ. ಯಾರು ಇಳಿಯುತ್ತಾರೋ, ಮತ್ಯಾರು ಮೇಲಕ್ಕೆ ಹತ್ತುತ್ತಾರೋ ಹೇಗೆ ಹೇಳುವುದು. ಅಸಲಿಗೆ ಹೈದರಾಲಿ ಅಧಿಕಾರಕ್ಕೆ ಬಂದದ್ದು ನಂಬಿಕೆ  (?) ಎನ್ನುವುದು ಉಪಯೋಗಿಸಿ ಕೊಂಡೆ ಅಲ್ಲವೇ.  ಈಗ ಬ್ರಿಟಿಷರು ಅಂಥಹ ನಂಬಿಕಸ್ತರನ್ನು ಉಪಯೋಗಿಸಿಕೊಂಡೆ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಎದುರಿಗಿದ್ದ ಸಿಪಾಯಿ ತನ್ನನ್ನು ನಂಬಿ ಸುಲ್ತಾನ್ ತನ್ನ ಮನಸ್ಸಿನ ಮಾತು ಹೇಳುತ್ತಿದ್ದಾನೆ ಎಂದು ನಂಬಿದ್ದಾನೆ. ಯಾರು ಯಾರನ್ನು ನಂಬಿದ್ದಾರೆ, ಯಾರು ಯಾರ ನಂಬಿಕೆಯನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಅನ್ನುವುದೇ ಗೊಂದಲ. ನಂಬಬಾರದ.... ನಂಬಿದಂತೆ ನಟಿಸುತ್ತಲೇ ಅಪನಂಬಿಕೆಯ ಚಾದರ ಹೊದ್ದಿರಬೇಕಾ.. ತಪ್ಪು ನಂಬುವವನದ್ದಾ ಅಥವಾ ಆ ನಮ್ಬಿಕೆಯೆಂಬ ಏಣಿಯನ್ನು ಬಳಸಿಕೊಂಡು ಮೇಲೆರಿದವನದ್ದಾ... ಇಂತಹದೊಂದು ಗೊಂದಲ ಕಾದಿದ್ದು ಅಜ್ಞಾತನೊಬ್ಬನ ಆತ್ಮಚರಿತ್ರೆ ಓದುವಾಗ. ಟಿಪ್ಪು ಸುಲ್ತಾನ್ ಆಸ್ಥಾನದ ದಳವಾಯಿಯೊಬ್ಬನ ಆತ್ಮಕತೆಯಂತಿರುವ ಇದು ಇತಿಹಾಸದ ಒಳಸುಳಿಗಳನ್ನು ಪರಿಚಯಿಸುತ್ತಲೇ ಮನಸ್ಸಿನ ಒಳಸುಳಿಗಳ ಅನಾವರಣ ಮಾ...

ಮಂಗಗಳ ಉದ್ಯಾನ

ಇಳಿ ಸಂಜೆಯ ಹೊತ್ತಿಗೆ ಪ್ಯಾಸೇಜ್ ಬಾಗಿಲು ತೆಗೆದು ಹೊರ ಬಂದವಳಿಗೆ ಕಂಡಿದ್ದು ಕಳಿತ ಕಿತ್ತಳೆ ಹಣ್ಣಿನಂತಿದ್ದ ಆಕಾಶ. ಒಹ್ ಇವನಾಗಲೇ ಮನೆಗೆ ಹೊರಟಾಯ್ತು ಕಳುಹಿಸಿಯೇ ಹೋಗೋಣವೆಂದು ಅವನನ್ನೇ ದಿಟ್ಟಿಸುತ್ತಾ ನಿಂತೇ.. ಜಗದ ಗಂಡಂದಿರಂತಲ್ಲ ಈ ಸೂರ್ಯ. ಮನೆ ಸೇರುವ ಆತುರ ಅವನಿಗೆ. ಇನ್ನೂ ಇಲ್ಲೇ ಇದ್ದಾನಲ್ಲ ಬಿಡು ಅಂತ ಆಚೀಚೆ ಕಣ್ಣು ಹಾಯಿಸಿದರೆ ಮುಗಿದೇ ಹೋಯಿತು, ಮುನಿದ ಇನಿಯನಂತೆ ಅಷ್ಟು ದೂರಕ್ಕೆ ಹೋಗಿ ಬಿಟ್ಟಿರುತ್ತಾನೆ. ಎವೆಯಿಕ್ಕದೆ ಅವನನ್ನೇ ನೋಡುತಿದ್ದೆ, ನೋಟಕ್ಕೆ ಸಿಲುಕದಂತೆ ಜಾರುತ್ತಲೇ ಇದ್ದವನು ಕ್ಷಣ ಮಾತ್ರದಲ್ಲಿ ಕುರುಹೂ ಸಿಗದಂತೆ ಮಾಯವಾದ. ಇನ್ನೇನು ಇರುಳು ಅಡಿಯಿಡುವ ಹೊತ್ತು  ದೀಪ ಹೊತ್ತಿಸಬೇಕು ಎಂದು ಒಳಗೆ ಕಾಲಿಡಬೇಕು ಅಚಾನಕ್ಕಾಗಿ ಒಂದು ಕಡೆ ಹಾದ ದೃಷ್ಟಿ ಅಲ್ಲಿಯೇ ಸೆರೆಯಾಯಿತು. ತುಂಬು ಬಸುರಿ ಕೋತಿಯೊಂದು ಒಬ್ಬಂಟಿಯಾಗಿ ಕುಳಿತಿತ್ತು. ಮುಖದಲ್ಲೇನೋ ದುಗುಡ. ಅಕ್ಕಪಕ್ಕದ ಸಾಲು ಕಟ್ಟಡಗಳು ಒಂದರ ಮೇಲೊಂದು ಮನೆಯ  ಕಿರೀಟ ಹೊತ್ತು ಕುಳಿತಿದ್ದರೆ ಇದೊಂದು ಮನೆ ಮಾತ್ರ  ಕಿರೀಟ ಕಳಚಿಟ್ಟ ರಾಜನಂತೆ ನಿಂತಿತ್ತು. ಉದ್ದದ ಟೆರೆಸ್ ನ ಎರಡೂ ಬದಿ ಹೂವಿನ ಗಿಡಗಳು ಸಾಲುಗಟ್ಟಿ ನಿಂತಿದ್ದರೆ ಅಷ್ಟು ಎತ್ತರದಲ್ಲಿ ಗಂಭಿರವಾಗಿ ನಿಂತ ವಾಟರ್ ಟ್ಯಾಂಕ್ ಹಾಗೂ ಅದರ ಹತ್ತಿರ ಹೋಗಲು ಇಟ್ಟಿದ್ದ ಒಂದು ಕಬ್ಬಿಣದ ಏಣಿ. ಆ ಏಣಿಯ ಕೊನೆಯ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತ ಈ ಕೋತಿ. ಒಂದಷ್ಟು ಹೊತ್ತು ಆ ಏಣಿಯ ಮೇಲೆ ಅದ...

ಸಾವರ್ಕರ್ ಹೊಸದಿಂಗಂತ 24.1019

ನವರಾತ್ರಿಯ ಸಮಯ. ಅಷ್ಟು ದಿನಗಳು ಊರಿನ ಹೊರಗೆ ಇರುತ್ತಿದ್ದ ಭವಾನಿಯ ವಿಗ್ರಹ ಅಂದು ಊರಿನ ಒಳಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಬರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಆ ಊರಿನ ಪ್ರಮುಖರ ಮನೆಯ ಮುಂದೆ ನಿಲ್ಲುತ್ತಿತ್ತು. ಅಲ್ಲಿಂದ ಏನು ಮಾಡಿದರೂ ಮುಂದಕ್ಕೆ ಸರಿಯುತ್ತಿರಲಿಲ್ಲ. ಹಾಗೆ ಬಂದ ದೇವರನ್ನು ಸ್ವಾಗತಿಸಿ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಪ್ರತಿಷ್ಟಾಪನೆ ಮಾಡಿ ಅಲ್ಲಿಂದ ಹತ್ತು ದಿನಗಳ ಕಾಲ ಪೂಜೆ ವ್ರತ ಶ್ರದ್ಧೆಯಿಂದ ನಡೆಸಲಾಗುತ್ತಿತ್ತು. ಜನರೂ ಹಾಗೆಯೇ ಬರುತ್ತಿದ್ದರು. ಬಂದ ಜನಗಳೆಲ್ಲಾ ಖಾಲಿಯಾದ ಮೇಲೆ ಆ ಮನೆಯ ಹುಡುಗನೊಬ್ಬ ಒಳಗೆ ಹೋಗಿ ದೇವಿಯ ಮುಂದೆ ಕಣ್ಮುಚ್ಚಿ ಕೂರುತ್ತಿದ್ದ. ಅಷ್ಟ ಭುಜಾಕೃತಿಯ ಆ ದೇವಿಯನ್ನು ಧ್ಯಾನಿಸುತ್ತಾ ನೋಡು ನಿಂಗೆ ರಾಕ್ಷಸರ ಸಂಹಾರ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೇನೆ , ನಂಗೆ ನಿನ್ನ ಕೈಯಲ್ಲಿರುವ ಆಯುಧಗಳನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದ.   ಎಳೆಯ ವಯಸ್ಸಿನಲ್ಲಿಯೇ ದೇಶದ ಆಗುಹೋಗುಗಳ ಬಗ್ಗೆ , ರಾಜಕೀಯದ ಬಗ್ಗೆ ತಿಳಿದಿದ್ದ ಆ ಹುಡುಗನಿಗೆ ಎಷ್ಟೋ ಸಲ ಶಾಲೆಯಲ್ಲಿ ಮೇಷ್ಟರು ಸಣ್ಣ ಬಾಯಲ್ಲಿ ದೊಡ್ಡ ತುತ್ತು ನುಂಗಬೇಡ ಸುಮ್ಮನಿರು ಎಂದು ಗದರಿಸುತ್ತಿದ್ದರು. ಹುಟ್ಟಿದ ಮನೆತನವೇ ಅಂತಹುದು. ಅವರ ಪೂರ್ವಿಕರ ಸಾಧನೆಗೆ ಪೇಶ್ವೆಗಳು ಪಲ್ಲಕ್ಕಿಯನ್ನೇ ಕೊಟ್ಟಿದ್ದರಂತೆ. ಹಾಗಾಗಿ ಆ ಹುಡುಗನಿಗೆ ಶೌರ್ಯ ಹಾಗೂ ಧೈರ್ಯ ಎರಡೂ ರಕ್ತದಲ್ಲಿಯೇ ಬಂದಿತ್ತು. ರಾತ್ರಿ ಕೂರಿಸಿಕೊಂಡು ದೊಡ್ಡಪ್ಪ...

ಬಾಳೆ.

ದನಗಳನ್ನು ಮೇಯಲು ಬಿಡುತ್ತಿದ್ದ ಅಜ್ಜಿ ಅಲ್ಲೇ ಹುಲ್ಲಿನ ಹೊರೆಯ ಪಕ್ಕ ಹೊಂಬಾಳೆ ಇದೆ ನೋಡು, ಕರುವಿಗೆ ತಿನ್ನಿಸು ಎಂದಾಗ ಓಡಿ ಬಂದಿದ್ದೆ. ಹಸಿರ ಹುಲ್ಲಿನ ಪಕ್ಕದಲ್ಲಿ ಪುಟ್ಟ ಹೊಂಬಾಳೆ ಸುಮ್ಮಗೆ ಬಿದ್ದುಕೊಂಡಿತ್ತು. ಪುಟ್ಟ ಕರುವಿನ ಕೆಂಪಾದ ನಾಲಿಗೆಯ ಹಾಗಿನ ತೆಳು ನಸುಗಂಪು ಹೊಂಬಾಳೆಯನ್ನು ಇಷ್ಟಿಷ್ಟೇ ಸೀಳಿ ಅದನ್ನು ಅದರ ಬಾಯಿ ತೆರೆಸಿ ಇಟ್ಟರೆ ಅಮ್ಮ ಮೇಯುವುದಕ್ಕೆ ಹೋಗಿದ್ದನ್ನು ಮರೆತು ಕರು ತಿನ್ನುತ್ತಾ ಅಲ್ಲೇ ಮಲಗಿಕೊಂಡಿತು. ಜಾಸ್ತಿ ತಿನ್ನಿಸಬೇಡಾ ಥಂಡಿ  ಆದೀತು ಅನ್ನುತ್ತಲೇ ಒಳಬಂದವಳು ತೋಟಕ್ಕೆ ಹೋದವರು ಬರುವಾಗ ಬಾಳೆ ಎಲೆ ಕೊಯ್ದುಕೊಂಡು ಬರಲು ಹೇಳಬೇಕು ಅನ್ನುತ್ತಾ ಒಳಗೆ ಹೋದರೆ ನಿಂಗೆ ಬಾಳೆ ವಿಷ್ಯ ವಿಲ್ಲದೆ ದಿನವೇ ಹೋಗುವುದಿಲ್ಲ ನೋಡು ಎಂದು ನಕ್ಕೆ. ಈಗ ಒಮ್ಮೆ ತಿರುಗಿ ನೆನಪುಗಳ ಹರಡಿಕೊಂಡರೆ ಈ ಬಾಳೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತಲ್ಲ ಅನ್ನಿಸುತ್ತದೆ. ನಮಗೆ ಗೊತ್ತಿದ್ದ ಮಟ್ಟಿಗೆ ಬೇರೆಲ್ಲವನ್ನೂ ಬೀಜ ಹಾಕಿ ಅದು ಮೊಳಕೆ ಒಡೆದು ಗಿಡ ಮಾಡುತ್ತಿದ್ದರೆ ಈ ಬಾಳೆಗೆ ಮಾತ್ರ ಬೀಜ ಅನ್ನುವುದೇ ಇರುತ್ತಿರಲಿಲ್ಲ. ಅದು ಬೆಳೆಯುತ್ತಿದ್ದದ್ದು ಕಂದಿನಿಂದ. ಒಂದು ಕಂದು, ಒಂದು ಗಿಡ, ಒಂದು ಗೊನೆ. ಅದ್ವೈತ ತತ್ವಕ್ಕೆ ಈ ಬಾಳೆಗಿಂತ ಒಳ್ಳೆಯ ಉದಾಹರಣೆ ಬೇರೆಯಾವುದೂ ಇಲ್ಲವೇನೋ ಅನ್ನಿಸುತ್ತಿತ್ತು. ಅಡಿಕೆಯ ತೋಟ ಮಾಡುವಾಗ ಮೊದಲು ನೆಡುತ್ತಿದ್ದದ್ದೆ ಈ ಬಾಳೆಯ ಗಿಡಗಳನ್ನು. ಎಳೆಯ ಅಡಿಕೆ ಸಸಿಗಳಿಗೆ ನೆರಳು ಕೊಡ...

ಮಲೆನಾಡಿನ ಆತಿಥ್ಯ (ವಿಕ್ರಮ ದಸರಾ ವಿಶೇಷಾಂಕ)

ರಾತ್ರಿ ಬಸ್ಸಿಗೆ ಯಾರು ಬರ್ತಾರೋ ಹೇಳೋಕೆ ಆಗೋಲ್ಲ ಒಂದರ್ಧ ಸೇರು ಅಕ್ಕಿ ಜಾಸ್ತಿನೇ ಹಾಕು ನೀರು ಮರಳ್ತಾ ಇದೆ ಇದೊಂದು ದನದ್ದು ಹಾಲು ಕರೆದು ಬರ್ತೀನಿ ಅಂತ ಅಜ್ಜಿ ಹೇಳಿದಾಗ ಹೂ ಅಂದು ಒಳಗೆ ಬಂದಿದ್ದೆ. ಒಳಗೆ ಕಟ್ಟಿಗೆ ಒಲೆಯ ಮೇಲಿಟ್ಟ ತಪ್ಪಲೆಯಲ್ಲಿ ನೀರು ಮರಳುವ ಸದ್ದು ಕೇಳಿಸುತಿತ್ತು. ಜಗುಲಿಯಲ್ಲಿ ಅದಾಗಲೇ ಮಾತಿನ ಮಳೆ ಶುರುವಾಗಿತ್ತು. ಮರುದಿನ ಅನಂತನ ವ್ರತ. ಹಾಗಾಗಿ ಹತ್ತಿರದ ಆದರೆ ದೂರದಲ್ಲಿ ಇರುವ ನೆಂಟರು ಬರುವ ನಿರೀಕ್ಷೆ. ಅಕ್ಕಿ ಅಳೆಯಲು ಹೋಗುವಾಗ ಅರ್ಧ ಸೇರು ಎಲ್ಲಿ ಸಾಕಾಗುತ್ತೆ ಮಾವಿನಕೊಪ್ಪದವರು, ತಲ್ಲೂರು ಅಂಗಡಿ ಮಾವ ಎಲ್ಲಾ ಬಂದರೆ ಅನ್ನಿಸಿ ಇನ್ನರ್ಧ ಸೇರು ಜಾಸ್ತಿ ಹಾಕಿ ತೊಳೆದು ತಪ್ಪಲೆಗೆ ಸುರಿದು ಜಗುಲಿಯಲ್ಲಿ ಅದಾಗಲೇ ರಂಗೇರಿದ್ದ ಮಾತು ಕೇಳುತ್ತಾ ಮೈ ಮರೆತವಳಿಗೆ ಅಯ್ಯೋ ಎಲ್ಲಾ ಬಿಟ್ಟು ಇವಳಿಗೆ ಕೆಲಸ ಹೇಳಿದ್ನಲ್ಲ ಮಾಡೋದೆಲ್ಲ ಅವಾಂತರವೇ ಅನ್ನುವ ಬೈಯುವ ಸದ್ದಿಗೆ ಎಚ್ಚರವಾಯ್ತು. ಎಲ್ಲರೆದುರು ಬೈಸಿಕೊಳ್ಳುವ ರಗಳೆ ಯಾಕೆ ಅಂತ ಏನೇ ಎಂದು ಪಿಸುದನಿಯಲ್ಲೇ ಕೇಳುತ್ತಾ ಒಳಗೆ ಅಡಿಯಿಟ್ಟರೆ ಎಷ್ಟು ಅಕ್ಕಿ ಹಾಕಿದ್ಯೇ ಅನ್ನುವ ಸ್ವರದ ತೀವ್ರತೆಗೆ ಬೆಚ್ಚಿ ಹೇಳಿದರೆ ಅಯ್ಯೋ ಒಂದು ಸೇರು ಅಕ್ಕಿ ಬೇಯುವ ಪಾತ್ರೆಗೆ ಒಂದೂವರೆ ಸೇರು ಹಾಕಿದರೆ ಅನ್ನ ಆಗುತ್ತೇನೆ ಕರ್ಮ ನಂದು ಅನ್ನುತ್ತಲ್ಲೇ ಎದುರಾದ ಅತ್ತೆಗೆ ಅದ್ಯಾವ ಕುಬೇರ ವಂಶದಲ್ಲಿ ಹುಟ್ಟಿತ್ತೋ ಹೋದ ಜನ್ಮದಲ್ಲಿ ಕೈ ದೊಡ್ಡ ಒಂದು ಸೇರು ಹಾಕುವಲ್ಲಿ ಎರಡು ಸೇರು ಹಾಕುತ್ತ...

ಭೂಮಿ ಹುಣ್ಣಿಮೆ.

ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ.  ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು.  ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು.  ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ. ಇಡೀ ಗದ್ದೆಯೆಂಬ ಗದ್...

ಓದಿನ ಸುಖ ವಿಜಯಕರ್ನಾಟಕ 08.09.19

ಸೂಜಿಗೆ ದಾರ ಹಾಕಿಕೊಡಲು ಹೇಳುತ್ತಿದ್ದ ಅಜ್ಜಿ ಸಂಜೆ ಶಾಲೆಯಿಂದ ಬರುವಾಗ ಇಳಿಬಿಸಿಲಿಗೆ ಎದುರಾಗಿ ಪುಸ್ತಕ ಹಿಡಿದು ಓದುವುದು ಕಂಡು ಇವಳು ನಮ್ಮತ್ರ ಕೆಲಸ ಮಾಡಿಸಲು ಕಣ್ಣು ಕಾಣಿಸೋಲ್ಲ ಅಂತಾಳ ಅನ್ನುವ ಗೊಂದಲ ಶುರುವಾಗುತ್ತಿತ್ತು. ತನ್ನ ಕೆಲಸವೆಲ್ಲಾ ಮುಗಿಸಿ ಬೆಳಕು ಇದ್ದಾಗ ಅಂಗಳದ ಚಪ್ಪರದ ಕಂಬಕ್ಕೆ ಒರಗಿ ರಾಮಾಯಣವನ್ನೋ, ಮಹಾಭಾರತವನ್ನೋ ಓದುತ್ತಿದ್ದ ಅವಳು ನಾನು ಮೂರನೆ ತರಗತಿಗೆ ಬರುವ ಹೊತ್ತಿಗೆ ಅದನ್ನು ನನ್ನ ಹೆಗಲಿಗೆ ವರ್ಗಾಯಿಸಿದ್ದಳು. ಶಾಲೆ ಮುಗಿಸಿ ಬಂದು ಚೂರು ಏನಾದರೂ ತಿಂದು ಅವಳು ಬತ್ತಿ ಮಾಡುವಾಗ ಓದಿ ಹೇಳುವ ಕೆಲಸ ಅಂತ ಇಷ್ಟದ್ದೇನು ಆಗಿರಲಿಲ್ಲ. ಸಾಕಾ ಅಂತ ರಾಗ ಎಳೆಯುತ್ತಿದ್ದರೆ ಇನ್ನೊಂದು ಕಟ್ಟು ಬತ್ತಿ ಮಾಡುವ ತನಕ ಓದು ಅಂತ ಅವಳು ಉಪಾಯದಲ್ಲಿ ಮತ್ತೆ ಮೂರೋ ನಾಲ್ಕೋ ಅಧ್ಯಾಯ ಓದಿಸಿ ಬಿಡುತ್ತಿದ್ದಳು. ಪ್ರೈಮರಿ ಶಾಲೆ ಮುಗಿಸುವ ಹೊತ್ತಿಗೆ ಈ ಓದಿ ಹೇಳುವ ಕೆಲಸದಿಂದಾಗಿ ರಾಮಾಯಣ ಹಾಗೂ ಮಹಾಭಾರತ ಎರಡೂ ಓದಿ ಮುಗಿಸಿವುದರ ಜೊತೆಗೆ ಪಟ್ಟಾಗಿ ಕುಳಿತು ಓದುವುದು ಅಭ್ಯಾಸ ಆಗಿಬಿಟ್ಟಿತ್ತು. ಆಮೇಲೆ ನಿಧಾನಕ್ಕೆ ಅವಳಿಗೆ ರಾಗಸಂಗಮದಲ್ಲಿ ಬರುತ್ತಿದ್ದ ಕಾದಂಬರಿ ಓದಿ ಹೇಳುವುದು ಶುರುವಾದ ಮೇಲೆ ಈ ಓದುವಿಕೆ ಆಸಕ್ತಿ ಅನ್ನಿಸತೊಡಗಿತ್ತು. ಅವಳು ಸಾಕು ಅಂದರೂ ಇರು ಇನ್ನೊಂದು ಚೂರು ಇದೆ ಓದಿ ಮುಗಿಸಿಬಿಡ್ತೀನಿ ಅನ್ನುತ್ತಿದ್ದೆ. ಹೀಗೆ ನನ್ನಲ್ಲಿ ಓದುವಿಕೆಯ ಬೀಜ ನೆಟ್ಟು ಅದನ್ನು ಪೋಷಿಸಿದ್ದು ಅಜ್ಜಿ. ಇವತ್ತು ಓದುವಿಕೆ ಇಲ್ಲದೆ ಹ...