ಎತ್ತರಕ್ಕೆ ನಿಂತ ಕೆಂಪು ಬಣ್ಣದ ಕಟ್ಟಡಗಳ ಸಾಲು ಯಾವುದೋ ಕೋಟೆಯನ್ನು ಪ್ರವೇಶಿಸುವ ಭಾವವನ್ನು ಮೂಡಿಸುತ್ತದೆ. ಒಮ್ಮೆ ಎಂಟರ್ ಆದರೆ ಮ್ಯೂಸಿಯಂ, ಅಲ್ಲಿಂದ ಜಲಿಯನ್ ವಾಲಾಭಾಗ್ ಮುಂದೆ ಸ್ವರ್ಣಮಂದಿರ. ನೆಲಕ್ಕೆ ಹಾಕಿದ ಕೆಂಪುಕಲ್ಲುಗಳ ಮೇಲೆ ನಡೆಯುತ್ತಾ ಅಹಿಗೆ ಜಲಿಯನ್ ವಾಲಾಭಾಗ್ ಬಗ್ಗೆ ವಿವರಿಸುತ್ತಿದ್ದೆ. ಅದು ಮುಗಿಯುವುದಕ್ಕೂ ಅದರ ಗೇಟ್ ಎದುರಾಗುವುದಕ್ಕೂ ಸರಿಯಾಯಿತು. ಸಣ್ಣದಾದ ಓಣಿಯ ಜಾಗದಲ್ಲಿ ಹೋದರೆ ಎದುರಿಗೆ ವಿಶಾಲವಾದ ಜಾಗ ಈಗ ಪಾರ್ಕ್ ಆಗಿ ರೂಪಾಂತರವಾಗಿದೆ. ಪಂಜಾಬ್ ನ ಅತಿ ದೊಡ್ಡ ಹಬ್ಬವೆಂದರೆ ಬೈಸಾಖಿ. ಅದರ ಆಚರಣೆಗೆಂದು ಬಂದ ಸುಮಾರು 25000 ಸಾವಿರ ಜನ ಹೆಂಗಸರು ಮಕ್ಕಳು ಎನ್ನದೆ ಗುರುಮಂದಿರದ ಸಮೀಪದ ಪಾರ್ಕ್ ನಲ್ಲಿ ವಿಶ್ರಾಂತಿಗೆಂದು ಕುಳಿತಿದ್ದರು. ಸುತ್ತಲೂ ಮನೆಗಳ ಗೋಡೆಯೇ ಬೇಲಿಯಂತಿದ್ದ ಅದಕ್ಕೆ ಒಂದೇ ದ್ವಾರ. ಹಾಗೆ ಸೇರಿದವರನ್ನು ಸರ್ಕಾರದ ವಿರುದ್ಧ ಸಭೆ ಸೇರಿದ್ದಾರೆ ಎಂದು ತಿರ್ಮಾನಿಸಿದ ಜನರಲ್ ಡೈಯರ್ ಪ್ರವೇಶ ದ್ವಾರದ ಬಳಿಗೆ ಸಣ್ಣದೊಂದು ಸುಸಜ್ಜಿತ ಸೈನ್ಯದ ತುಕಡಿಯನ್ನು ಕಳುಹಿಸಿ ಫೈರ್ ಮಾಡಲು ಆದೇಶಿಸುತ್ತಾನೆ. ಜಡಿ ಮಳೆಯಂತೆ ಸುರಿಯುತಿದ್ದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಜಾಗವಿಲ್ಲದೆ ಸೇರಿದ್ದ ಹಲವರು ಅಲ್ಲೇ ಮೃತ ಹೊಂದಿದರೆ ಆ ಪ್ರಾಣಾಂತಿಕ ಧಾಳಿಯಿಂದ ಪಾರಾಗಲು ಒಂದಷ್ಟು ಜನ ಅಲ್ಲೇ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನಪ್ಪುತ್ತಾರೆ. ಹೀಗೆ ಬಾವಿಗೆ ಬಿದ್ದು ಸತ್ತವರ ಸಂಖ್ಯೆ ಅವರ ಪ್ರಕಾರ 120
Posts
Showing posts from March, 2018
- Get link
- X
- Other Apps
ರಿಪಬ್ಲಿಕ್ ಡೇ ಪೆರೇಡ್ ನೋಡಲು ಟಿ.ವಿ ಹಾಕಿದವಳ ಕಣ್ಣಿಗೆ ತಕ್ಷಣ ಬಿದ್ದಿದ್ದು ವಾಘಾದಲ್ಲಿನ ಆಚರಣೆಯ ಕ್ಲಿಪ್. ಈ ಸಲ ರಜೆಗೆ ಅಲ್ಲಿಗೆ ಕರ್ಕೊಂಡ್ ಹೋಗಮ್ಮಾ ಅಂದವಳ ಕೋರಿಕೆಗೆ ತಲೆ ಅಲ್ಲಾಡಿಸಿದ್ದೆ. ಒಂದು ದೇಶದ ಗಡಿಯ ಅಂಚಿನವರೆಗೆ ಹೋಗುವುದು ಅಂದರೆ ನೆನಪಿಸಿಕೊಂಡೆ ರೋಮಾಂಚನವಾಗಿತ್ತು. ನಡುರಾತ್ರಿ ಸಮೀಪಿಸುವ ವೇಳೆಗೆ ಟ್ರೈನ್ ಇಳಿದರೂ ಅಮೃತಸರ ಎಚ್ಚರವಾಗಿತ್ತು. ಥೇಟ್ ಗಡಿಯ ಹಾಗೇ. ಅಪರಿಚಿತ ಜಾಗದಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿಟ್ಟರೂ ಏನೋ ಆಪ್ತಭಾವ. ಭಯ, ದುಗುಡ ಯಾವುದೂ ಆವರಿಸಲೇ ಇಲ್ಲ. ಸಿಕ್ಕಿದ ಆಟೋ ಹಿಡಿದು ಹೊಸತಾದ ದಾರಿಯಲ್ಲಿ ಹೋಗುವಾಗಲೂ ನಿರಾಳ ಭಾವ. ಅಬ್ಬಾ ಇಲ್ಲಿಯ ಮಣ್ಣಿನ ಗುಣವೇ ಅಂದುಕೊಂಡೆ. ಗುಣ ಮನುಷ್ಯನಿಂದ ಮಣ್ಣಿಗಾ.... ಮಣ್ಣಿನಿಂದ ಮನುಷ್ಯನಿಗಾ.... ಅನ್ನೋ ಪ್ರಶ್ನೆ ದುತ್ತೆಂದು ಎದುರಾಯಿತು. ಎಲ್ಲವೂ ಮಣ್ಣಿಂದ ಮಣ್ಣಿಗೆ ಹೋಗುವುದರಿಂದ ಮಣ್ಣಿನದೇ ಅಂದುಕೊಂಡು ನಗುವೂ ಬಂತು. ಜಾಗ ಸಿಗಬೇಕಾದರೆ ಮೊದಲೇ ಹೋಗಬೇಕು ಅಂದುಕೊಂಡು ಹೊರಟಿದ್ದಾಯ್ತು. ಜಾಗ ಹೇಗಿರುತ್ತೆ ಅನ್ನುವುದರ ಮೇಲೆ ನೋಟವೂ ಅವಲಂಬಿಸಿರುತ್ತೆ.ಬದುಕಿನಲ್ಲಿ ಕೊಂಡಿಯಿಲ್ಲದೆ ಸ್ವತಂತ್ರವಾಗಿರುವ ಒಂದಾದರೂ ವಿಷಯವಿದಯೇ? ಮನುಷ್ಯನಿಗೆ ಪ್ರತಿಯೊಂದರಿಂದಲೂ ಬಿಡಿಸಿಕೊಳ್ಳುವ ಹಂಬಲ. ಯಾರೂ ಇಲ್ಲಾ ಬೇಗ ಬಂದ್ವಾ ಅಂತ ತಿರುಗಿ ನೋಡುವ ಕ್ಷಣದಲ್ಲೇ ವಾಹನಗಳ ಸಾಲು ಸಾಲು ಇಳಿದ ಜನ ಪ್ರವಾಹ ಗೇಟ್ ಓಪನ್ ಆಗುವುದನ್ನೇ ಕಾಯುತ್ತಿದ್ದರು. ತೆಗೆದೊಡನೆ ನುಗ್ಗಬೇಕು. ವ
ರೋಣಗಲ್ಲು.
- Get link
- X
- Other Apps
ಗದ್ದೆ ಕುಯಿಲು ಯಾವಾಗ ಅನ್ನುವುದು ನಿರ್ಧಾರವಾಗುತ್ತಿದ್ದ ಹಾಗೆ ಸಂಭ್ರಮವೂ ಒಂದೊಂದೇ ಗರಿಯನ್ನು ತಂದು ಗೂಡು ಕಟ್ಟುತಿತ್ತು. ಅಲ್ಲಿಂದ ಒಂಥರಾ ಜಾತ್ರೆಯೇ. ಉದ್ದ ತೋಳಿನ ಷರಟು ಧರಿಸಿ, ಕೈಯಲ್ಲೊಂದು ಕತ್ತಿ ಹಿಡಿದು ಹೊರಡುವ ಗುಂಪು ಯದ್ಧಕ್ಕೆ ಹೊರಟ ಸೈನಿಕರ ಹಾಗೆ ಕಾಣುತಿತ್ತು. ಒಮ್ಮೆ ಗದ್ದೆಗೆ ಇಳಿದರು ಎಂದರೆ ಅಲ್ಲೊಂದು ಶಬ್ಧಗಳ ಜಾತ್ರೆ. ಶ್ರುತಿ ಹಿಡಿದಂತೆ ಎಲ್ಲರ ಕತ್ತಿಯ ಸರಬರ ಸದ್ದು, ಅದನ್ನು ಮೀರಿಸುವ ಮಾತು, ನಗು, ಗಲಾಟೆ. ಯಾವ ಸುದ್ದಿ ಚಾನೆಲ್ ಗೂ ಕಡಿಮೆಯಿಲ್ಲದಂತೆ ಬಿತ್ತರವಾಗುವ ಸುದ್ಧಿಗಳು. ಸಂಜೆಯ ಹೊತ್ತಿಗೆ ಉರುಳಿದ ಕಳೇಬರಗಳ ಹಾಗೆ ಕಾಣುವ ಭತ್ತದ ಅರಿ. ಅಸ್ತವ್ಯಸ್ತ ರಣರಂಗದ ಹಾಗಿನ ಗದ್ದೆಗಳು ಮತ್ತು ಯುದ್ಧ ಗೆದ್ದು ಸುಸ್ತಾಗಿ ಹೈರಾಣಾಗಿ ಬರುವ ಸೈನಿಕರ ಹಾಗೆ ಕಾಣುವ ಜನಗಳು. ಸುಸ್ತಲ್ಲೂ ನಗು ಮಾತ್ರ ಚಿರಸ್ಥಾಯಿಯಾಗಿರುತಿತ್ತು. ಗದ್ದೆಯ ಅಂಚಿನಲ್ಲಿ ಕುಳಿತು ಕೊಳ್ಳಲು ಅಷ್ಟೇ ಪರ್ಮಿಷನ್ ದೊರಕಿದ ಮಕ್ಕಳದು ಇನ್ನೊಂದು ತರಹದ ಸಮಸ್ಯೆ. ನೋಡುತ್ತಾ ನೋಡುತ್ತಾ ರಣೋತ್ಸಾಹ ಉಕ್ಕಿ ಮುನ್ನುಗ್ಗುವ ಸನ್ನಿವೇಶದಲ್ಲಿ ಹೋಗಬೇಡಾ ಕೈ ಮೈಎಲ್ಲಾ ಉರಿ ತುರಿಕೆ ಶುರುವಾಗುತ್ತೆ, ಭತ್ತ ಕೊಯ್ಯುವ ಬದಲು ಕೈ ಕೊಯ್ದರೆ ಕಷ್ಟ ಅನ್ನುವ ಅಜ್ಜಿಯ ಧ್ವನಿ ಹೆದರಿ ಶಸ್ತ್ರತ್ಯಾಗ ಮಾಡುವ ಹಾಗೆ ಮಾಡಿ ಶರಣಾಗತರಾಗುವ ಹಾಗೆ ಮಾಡಿದರೂ ಗದ್ದೆಯ ಅಂಚಿನಲ್ಲಿ ಕುಳಿತು ನೋಡುವ ಉತ್ಸಾಹ ಮಾತ್ರ ಬತ್ತುತ್ತಿರಲಿಲ್ಲ. ಭತ್ತದ ಗದ್ದೆಯಲ್ಲಿ ಬತ್ತದ ಉತ್ಸಾಹ ಅಂ
ಗಾಳಿಗೆ ಮೆತ್ತಿದ ಬಣ್ಣ.
- Get link
- X
- Other Apps
ಪುಟ್ಟವರಿದ್ದಾಗ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅಜ್ಜಿ ಹೇಳುತಿದ್ದ ಪ್ರತಿ ಕತೆಯೂ ಆಮೇಲೆ ಅವರೆಲ್ಲರೂ ಸುಖವಾಗಿದ್ದರು ಅನ್ನೋ ಸಾಲಿನಿಂದಲೇ ಮುಕ್ತಾಯ ವಾಗುತಿತ್ತು. ಸುಖ ಅಂದ ಮೇಲೆ ಅಲ್ಲಿಗೆ ಮುಕ್ತಾಯ ಅನ್ನೋದು ಮನಸ್ಸಿನಲ್ಲಿ ಕುಳಿತು ಬಿಟ್ಟಿತ್ತು, ಸುಖವನ್ನು ವಿಸ್ತರಿಸಿ ಹೇಳಲಾಗುವುದಿಲ್ಲ, ಅದರಲ್ಲಿ ಯಾರಿಗೂ ಆಸಕ್ತಿಯೂ ಇಲ್ಲ. ಮತ್ತದು ಮುಂದುವರಿಯುವುದೂ ಇಲ್ಲ. ಸುಖ ಅನ್ನೋದು ಒಂಥರಾ ಸತ್ತ ಹಾಗೆಯಾ..... ಆದರೆ ಬದುಕಿನ ಕತೆ ಅಲ್ಲಿಗೇ ಮುಗಿಯುವುದಿಲ್ಲ ಹಾಗೂ ಸುಖ ಅನ್ನುವುದು ಕೊನೆಯ ನಿಲ್ದಾಣವೂ ಅಲ್ಲ, ಇನ್ಯಾವುದೋ ದಾರಿ ಮತ್ತೆಲ್ಲೋ ಕರೆದೊಯ್ಯುತ್ತೆ, ನಿಲ್ಲಲು ಬಿಡುವುದಿಲ್ಲ ಅನ್ನೋದು ಅರ್ಥವಾದಾಗ ಬಾಲ್ಯ ಮುಗಿದು ಮುಗ್ಧತೆ ಮಾಯವಾಗಿ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿತ್ತು. ಸುಖ ಅನ್ನೋದು ದಾರಿಯಲ್ಲಿ ಸಿಕ್ಕ ಒಂದು ನೆರಳು ಮತ್ತೆ ನಡೆಯಲೇ ಬೇಕು ಅದು ಅಂತಿಮವಲ್ಲ ಮತ್ತು ಆಗಲೂ ಬಾರದು ಅನ್ನೋ ತಿಳುವಳಿಕೆ ಮೂಡುವ ಹೊತ್ತಿಗೆ ಓದಲು ಸಿಕ್ಕಿದ ಕತೆಗಳಲ್ಲೂ ಅಂತ್ಯ ಮಾಯವಾಗಿತ್ತು. ಕತೆ ಓದಿ ಮುಗಿಸುವ ಹೊತ್ತಿಗೆ ಮೌನ ಕಾಡುತ್ತೆ ಅಂತಾದರೆ ಅಲ್ಲಿ ಹೇಳಲಿಕ್ಕೆ ಬಹಳಷ್ಟಿದೆ ಅಂತ ಅರ್ಥ. ಹಾಗಾದರೆ ಹೇಳಬೇಕಾಗಿದ್ದನ್ನು ಹೇಳ್ತಿವಾ ಆಥವಾ ಯಾರನ್ನೋ ಇಂಪ್ರೆಸ್ ಮಾಡಲು ಇನ್ನೇನೋ ಹೇಳ್ತಿವಾ ಅನ್ನೋದೂ ಕೂಡ ಬಹು ಮುಖ್ಯವಾದ ಪ್ರಶ್ನೆಯೇ. ಅದು ಯಾರ ಕತೆಯದ್ದಾದರೂ ಆಗಿರಬಹುದು ಬದುಕಿನದಾದರೂ ಆಗಬಹುದು ಎಷ್ಟೆಂದರೂ ಬದುಕು ಒಂದು ಕತೆಯೇ ತಾನೇ. ಆ
- Get link
- X
- Other Apps
ಜಗುಲಿಯಲ್ಲಿ ಕುಳಿತು ದೃಷ್ಟಿ ಹಾಯಿಸಿದರೆ ಹಬ್ಬಿರುವ ಗದ್ದೆಯ ಕೋಗು ಕಾಣುತಿತ್ತು. ಆಕಡೆ ಈ ಕಡೆ ಎರಡೂ ಕಡೆ ಅದು ಕಡಲಿನಂತೆ ಅಂತ್ಯ ಕಾಣದೆ ಹಬ್ಬಿರುತಿತ್ತು. ಪೈರು ಇರುವಾಗ ಹಸಿರಾಗಿ ನಿಧಾನಕ್ಕೆ ಹೊನ್ನಿನ ಬಣ್ಣಕ್ಕೆ ತಿರುಗಿ ಕುಯಿಲಿನ ನಂತರ ತುಂಡು ಬಟ್ಟೆಯ ಹೊದ್ದ ಹಾಗೆ ಕಾಣುವ ಗದ್ದೆಯ ಕೋಗು ವಿಶಾಲತೆಗೆ ಅನ್ವರ್ಥಕ ನಾಮವಾಗಿ ಹರಡಿರುತಿತ್ತು. ಒಮ್ಮೆ ಗದ್ದೆ ಕೊಯ್ಲು ಮುಗಿದ ನಂತರ ಆಕಾಶದಲ್ಲಿನ ತಾರೆಗಳಂತೆ ಅಲ್ಲಲ್ಲಿ ದನಗಳು ಮೇಯುವುದು ಕಾಣುತಿತ್ತು. ಅಲ್ಲೆಲ್ಲೋ ಅಂಚಿನಲ್ಲಿ ನಿಂತ ಮರವೊಂದು ಯಾರಿಗಾಗೋ ಕಾಯುತ್ತಿರುವಂತೆ ಒಂಟಿಯಾಗಿ ನಿಂತಿರುತ್ತಿತ್ತು. ಬೇಜಾರಾದಾಗೆಲ್ಲ ಜಗುಲಿಯಲ್ಲಿ ಕುಳಿತರೆ ಸಾಕು ಇನ್ನೊಂದು ಜಗತ್ತೇ ಕಣ್ಣೆದೆರು ಹರಡಿಕೊಂಡು ಮೈ ಮರೆತು ಕಳೆದುಹೋಗುತ್ತಿದ್ದೆವು. ಹಸಿರಾಗಿ ಬೆಳೆದ ಹುಲ್ಲು ಗರಿಕೆಗಳನ್ನು ಮೆಂದು ಬಿಸಿಲಿಗೆ ಯಾವುದೋ ಮರದ ನೆರಳಲ್ಲೋ, ನೀರಿನ ಹೊಂಡದಲ್ಲೋ ವಿಶ್ರಮಿಸುವ ದನ, ಎಮ್ಮೆಗಳು ಕಂಡು ಯಾವತ್ತೂ ಒಬ್ಬರೇ ಇದ್ದರೂ ಒಂಟಿತನ ಅನ್ನೋದು ನೆನಪಾಗದ ಪದವಾಗಿತ್ತು. ಬಿರು ಬಿಸಿಲಿನಲ್ಲೂ ಬೀಸುವ ತಂಪಾದ ಗಾಳಿ ಮೈ ಸವರಿಕೊಂಡು ಹೋಗುವಾಗ ಯಾರೋ ಪಕ್ಕ ಕೂತು ಮಾತಾಡುತ್ತಿದ್ದಾರೆನೋ ಅನ್ನುವ ಭಾವ. ಜಗತ್ತು ಚಿಕ್ಕದು ಅನ್ನಿಸುವುದಾದರೂ ಹೇಗೆ? ಅಲ್ಲಲ್ಲಿ ಮಧ್ಯದ ಕೆಲವು ಗದ್ದೆಗಳು ಮಾತ್ರ ಸುತ್ತಲೂ ಬೇಲಿಕಟ್ಟಿಕೊಂಡು ಬೇರೆಯಾಗಿ ನಿಂತರೂ ಅವು ಒಂಟಿಯಾಗಿರುತ್ತಿರಲಿಲ್ಲ. ಅವುಗಳ ಒಡಲಲ್ಲಿ ಸೌತೆಯೋ, ಕುಂಬಳವೋ, ಮೆಣ
ಗಳಿಸಿದ್ದು ಉಳಿಸಿದ್ದು
- Get link
- X
- Other Apps
ಮಳೆಯಾಗಲಿ, ಚಳಿಯಾಗಲಿ ಯಾರಿರಲಿ, ಇಲ್ಲದಿರಲಿ ಆಂಟಿ ಏಳುವುದು ಮಾತ್ರ ಬೆಳಗಿನ ಜಾವ ಐದೂವರೆಗೆ. ಸಹಜವಾಗಿ ಹಳ್ಳಿಯ ಬದುಕು ಆರಂಭವಾಗೋದೆ ಈ ಸಮಯದಿಂದ. ಎದ್ದ ಕೂಡಲೇ ಮೊದಲು ಮಾಡೋ ಕೆಲಸ ಅಂದರೆ ಬಚ್ಚಲೊಲೆಗೆ ಉರಿ ಹಾಕುವುದು. ರಾತ್ರಿಯೇ ತುಂಬಿಟ್ಟ ಕಟ್ಟಿಗೆ, ಹಾಳೆ, ಅಡಿಕೆ ಸಿಪ್ಪೆಗಳು ಒಲೆಯ ಕಾವಿಗೆ ಬೆಚ್ಚಗೆ ಮಲಗಿರುವಾಗ ಅವುಗಳಿಗೆ ಚೂರು ಚಿಮಿಣೆ ಎಣ್ಣೆ ಚಿಮುಕಿಸಿ ಎಚ್ಚರಿಸಿ ಒಂದು ಕಡ್ಡಿಗೀರಿದರೆ ಅವು ಭಗ್ಗನೆದ್ದು ಉರಿಯುತ್ತವೆ, ಉರಿಸುವುದು ಎಷ್ಟೊಂದು ಸುಲಭಾ ಒಂದು ಕಡ್ಡಿ ಗೀರಿದರೆ ಆಯ್ತಲ್ಲಾ ಅನ್ನೋ ಅಚ್ಚರಿ ಸದಾ ನನ್ನೊಳಗೆ ಕಾಡುತ್ತಲೇ ಇರುತ್ತದೆ. ಹೊಸಿಲು ಸಾರಿಸಿ ರಂಗವಲ್ಲಿ ಹಾಕಿ ಒಳಗೆ ಬಂದು ಕಾಫಿ ಕುಡಿದು ಲೋಟ ಕೆಳಗಿಡುವ ಹೊತ್ತಿಗೆ ಬೆಳಕು ಬಂದು ಕದ ತಟ್ಟುತ್ತದೆ. ಹಕ್ಕಿ ಪಕ್ಷಿಗಳೂ ಕಲರವ ಮಾಡುತ್ತಾ ತಮ್ಮ ಕೆಲಸ ಪ್ರಾರಂಭಿಸಿರುತ್ತವೆ. ಕೊಟ್ಟಿಗೆಯಲ್ಲಿನ ದನಗಳೂ ಕರೆಯುತ್ತವೆ. ಅಲ್ಲಿಯವರೆಗೂ ದೂರವಿದ್ದ ಕರುಗಳಿಗೂ ಅಮ್ಮನ ಬಳಿ ಸಾರುವ ಆತುರ. ಅವುಗಳನ್ನು ಮಾತಾಡಿಸಿ ಕುಡಿಯಲು ಕೊಟ್ಟು, ಕೊಟ್ಟಿಗೆ ಕ್ಲೀನ್ ಮಾಡಿ ಹಾಲು ಕರೆದುಕೊಂಡು ಬರುವ ವೇಳೆಗಾಗಲೇ ಎಳೆ ಬಿಸಿಲು ಅಂಗಳದಲ್ಲಿ ಚಟ್ಟೆಮುಟ್ಟೆ ಹೊಡೆದು ಕುಳಿತು ತಿಂಡಿಗಾಗಿ ಕಾಯುತ್ತಿರುತ್ತದೆ. ಒಂದರ ಹಿಂದೆ ಒಂದು ಕೆಲಸಗಳು ಸಾಲುಗಟ್ಟಿ ದರುಶನಕ್ಕಾಗಿ ನಿಂತಿರುತ್ತದೆ. ಹಳ್ಳಿಮನೆಯಲ್ಲಿ ಓಡಾಟವೇ ದೊಡ್ಡ ಕೆಲಸ. ಕೊಟ್ಟಿಗೆ ಆ ಮೂಲೆಯಲ್ಲಾದರೆ ಬಚ್ಚಲು ಇನ್ನೊಂದು ಮೂಲೆಯಲ್ಲಿ
ಕನಕ ಮುಸುಗು.
- Get link
- X
- Other Apps
ಇತಿಹಾಸ ಅನ್ನೋದು ಯಾವಾಗಲೂ ರೋಚಕ. ಆದರೆ ಆ ರೋಚಕತೆ ಹೇಗೆ ಹೇಳ್ತಿವಿ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ. ಇತಿಹಾಸ ಅಂದ್ರೆ ಇಸ್ವೀ ಅಂತಷ್ಟೇ ಭದ್ರವಾಗಿ ಕುಳಿತ ತಲೆಗೆ ಮೊಟಕಿ ಅದಷ್ಟೇ ಅಲ್ಲಾ ಅಂತ ಪರಿಚಯಿಸಿದ್ದು ಹೈ ಸ್ಕೂಲ್ ಸರ್ ಆದ ಬಿ.ಎಸ್.ಎಸ್. ಅವರು ಪಾಠ ಮಾಡ್ತಾ ಇದ್ರೋ, ಇಲ್ಲಾ ಕತೆ ಹೇಳ್ತಾ ಇದ್ರೋ, ಇಲ್ಲಾ ಸಾಕ್ಷಿಯಾಗಿ ವಿವರಿಸ್ತಾ ಇದ್ರಾ ಅನ್ನೋದು ಈಗ ಹೇಳೋದು ಕಷ್ಟ ಆದರೂ ಇತಿಹಾಸ ಅಂದ್ರೆ ಕೇವಲ ಇಸ್ವೀ ಮಾತ್ರವಲ್ಲ ಅದೊಂದು ರೋಚಕತೆ ಅನ್ನೋದು ಮಾತ್ರ ಅರ್ಥವಾಗಿ ಆಸಕ್ತಿ ಕುದುರಿತ್ತು. ಹಾಗಾಗಿ ನೆನಪಿಸಿಕೊಳ್ಳುವ, ಉರುಹೊಡೆಯುವ ಕಷ್ಟವಿಲ್ಲದೆ ಎಲ್ಲ್ಲವೂ ನೆನಪಿನಲ್ಲಿ ಇರುತಿತ್ತು. ಆಮೇಲೆ ಪಿ.ಯು.ಸಿ ಗೆ ಕಾಲಿಡುತ್ತಿದ್ದಂತೆ ಆವರಿಸಿಕೊಂಡಿದ್ದು ಇತಿಹಾಸವಾ ರಾಮ್ ಪ್ರಸಾದ್ ಸರ್ ಇವತ್ತಿಗೂ ಗೊಂದಲ. ಅವರು ಒಳಗೆ ಕಾಲಿಡುತಿದ್ದಂತೆ ಸಂತೆಯ ಮಾರ್ಕೆಟ್ ನಂತೆ ಗಜಿಬಿಜಿಗುಡುತಿದ್ದ ಕ್ಲಾಸ್ ಸಂಪೂರ್ಣ ನಿಶಬ್ದಕ್ಕೆ ಜಾರುತ್ತಿತ್ತು. ಗಲ್ಲಕ್ಕೆ ಕೈಯಿಟ್ಟು ಕುಳಿತುಕೊಂಡು ಕೇಳುತ್ತಿರುವಷ್ಟು ಹೊತ್ತು ನಾವು ಆ ಕಾಲದಲ್ಲೇ ಇರುತ್ತಿದೆವು. ಅವರು ಹೊರಹೋಗುತಿದ್ದಂತೆ ದೊಪ್ಪೆಂದು ವಾಸ್ತವಕ್ಕೆ ಮರಳುವ ಹಾಗಾಗುತಿತ್ತು. ಅವರ ಇಡೀ ಸರ್ವಿಸ್ ನಲ್ಲಿ ಅದರಲ್ಲಿ ಫೇಲ್ ಆಗೋದು ಇರಲಿ ಸೆಕೆಂಡ್ ಕ್ಲಾಸ್ ಒಳಗೆ ಪಾಸ್ ಆದವರು ಯಾರೂ ಇರಲಿಲ್ಲ. ಉಳಿದ ಸಬ್ಜೆಕ್ಟ್ ನೋಟ್ಸ್ ಕೊಟ್ಟರೆ ಇವರೂ ಅದನ್ನು ಮಾಡುತ್ತಿರಲಿಲ್ಲ. ಅರ್ಧರಾತ್ರಿ ನಿದ್ದೆಯಿಂದ ಎಬ್ಬಿಸಿ
ಕಿಮ್ಮನೆ ರತ್ತಾಕರ್.
- Get link
- X
- Other Apps
ಕಿಮ್ಮನೆ ರತ್ನಾಕರ್ ಅವರಿಗೊಂದು ಬಹಿರಂಗ ಪತ್ರ. ನಿಮ್ಮ ವೃತ್ತಿಯನ್ನೇ ನಾನೂ ಆಯ್ದುಕೊಂಡು ನಿಮ್ಮನ್ನು ಗಮನಿಸಿದ್ದಕ್ಕೆ ಏನೋ ನಿಮ್ಮ ಬಗ್ಗೆ ಮೊದಲಿಂದಲೂ ಒಂದು ಗೌರವ, ಪ್ರೀತಿ ಸದಾ ಇದೆ. ನನ್ನ ಸೀನಿಯರ್ ಮೀಗಾ ಚಂದ್ರಶೇಖರ್ ಅವರನ್ನು ಎಷ್ಟು ಗೌರವಿಸುತ್ತಿದ್ದೇನೋ ಅಷ್ಟೇ ನಿಮ್ಮನ್ನೂ ಗೌರವಿಸುತಿದ್ದೆ. ನಿಮ್ಮ ಸ್ವಭಾವ, ಗುಣಗಳು ನನ್ನನ್ನೂ ಪ್ರಭಾವಿಸಿದ್ದವು. ನಿಮ್ಮೊಳಗಿನ ಮನಸ್ಸು ಅರ್ಥವಾಗಿತ್ತು. ಹಾಗಾಗಿಯೇ ನಿಮ್ಮೆಡೆಗೆ ನನ್ನ ಪ್ರೀತಿ ಸದಾ ಇತ್ತು. ಪ್ರತಿ ವ್ಯಕ್ತಿಗೂ ತನ್ನ ಊರು, ಬಾಲ್ಯ ಹಾಗೂ ಆ ಬಾಲ್ಯವನ್ನು ಶ್ರೀಮಂತಗೊಳಿಸಿದ ಊರಿನ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಸದಾ ಹೆಮ್ಮೆ ಇದ್ದೇ ಇರುತ್ತದೆ. ಅಲ್ಲಿನ ದಿನಚರಿ ಬದುಕಿನ ಭಾಗವಾಗಿರುತ್ತದೆ. ಅಲ್ಲಿಯ ಪ್ರತಿ ಘಟನೆಗಳೂ ಉಸಿರಿನೊಂದಿಗೆ ಮಿಳಿತವಾಗಿರುತ್ತದೆ. ಅಲ್ಲಿ ಏನೇ ವ್ಯತ್ಯಾಸವಾದರೂ ಬದುಕು ಚಡಪಡಿಸುತ್ತದೆ. ಎಲ್ಲಿಯೇ ಹೋಗಿ ಬದುಕು ಕಟ್ಟಿಕೊಂಡರೂ ಹಾಗೆ ಗಟ್ಟಿಯಾಗಿ ನಿಲ್ಲಲು, ಹಬ್ಬಲು ಸಹಾಯ ಮಾಡೋದು ಅಧಾರ ಕೊಡೋದು ಬೇರು, ಆ ಬೇರು ಊರಲ್ಲಿ ಇರುತ್ತೆ ಅನ್ನೋ ಸತ್ಯ ಪ್ರತಿಯೊಬ್ಬರಲ್ಲೂ ಅಂತರ್ಗತ. ನಾನೂ ಬೆಳೆದಿದ್ದು ಹೀಗೆ. ಇವತ್ತಿಗೂ ಮೃಗವಧೆ ನನ್ನ ಉಸಿರು. ಬದುಕಿನ ಬೇರು. ಕಷ್ಟ, ನಷ್ಟ, ಸಂತೋಷ, ತಲ್ಲಣ ಏನೇ ಇದ್ದರೂ ನಾವು ಹೋಗುವುದು ಮಲ್ಲಿಕಾರ್ಜುನನ ಬಳಿಯೇ. ಅಪ್ಪ, ಅಮ್ಮ ಇದ್ದ ಹಾಗೆ ಮಲ್ಲಿಕಾರ್ಜುನ ಕೂಡ ಬದುಕಿನ ಒಂದು ಅವಿಭಾಜ್ಯ ಭಾಗ. ಇಡೀ ಊರಿಗೆ ಊರೇ ಅವನನ್ನು