hosadiganta 01.03.19
ಯಾವುದೇ ಒಳ್ಳೆಯ ಕೆಲಸ ಮಾಡಲೂ ಸಹ ಬ್ರಾಹ್ಮಿ ಮಹೂರ್ತ ಒಳ್ಳೆಯದಂತೆ. ಹಾಗಾಗಿಯೇ ಓದಲು, ಸಾಧನೆ ಮಾಡಲು, ಧ್ಯಾನ, ಜಪ ತಪಗಳನ್ನ ಮಾಡಲು ಬ್ರಾಹ್ಮಿ ಮಹೂರ್ತದಲ್ಲಿಯೇ ಏಳುತ್ತಾರೆ. ಕಾರ್ಯತತ್ಪರರಾಗುತ್ತಾರೆ. ಅಂಥಹದೊಂದು ಬ್ರಾಹ್ಮಿ ಮಹೂರ್ತದಲ್ಲಿಯೇ ಸೇನೆಯೂ ನಭಕ್ಕೆ ಚಿಮ್ಮಿತ್ತು. ಸೂರ್ಯ ಉದಯಿಸಿ ಬಾನು ಕೆಂಪಾಗುವ ಮುನ್ನವೇ ಅಗ್ನಿ ಜ್ವಾಲೆಯ ಕಂಪು ಹರಡಿಸಿ ಬಂದಿತ್ತು. ಒಳಗೊಳಗೇ ಸಂಕಟ ಪಡುತ್ತಿದ್ದ, ಬೇಯುತ್ತಿದ್ದ ಕೋಟ್ಯಾಂತರ ಭಾರತೀಯರಿಗೆ ಸಮಾಧಾನ ಕೊಟ್ಟಿತ್ತು. ಸುಖಾ ಸುಮ್ಮನೆ ನನ್ನ ಕೆಣಕಿದರೆ ನಿಮ್ಮ ಮನೆಯೊಳಗೇ ಬಂದು ಹೊಡೆಯುವ ಸಾಮರ್ಥ್ಯ ನನ್ನಲ್ಲಿದೆ, ಇನ್ನೊಂದು ಕೆನ್ನೆ ತೋರುವ ಕಾಲ ಹೋಯ್ತು ಎಂದು ಮೌನವಾಗಿಯೇ ಹೇಳಿ ಬಂದಿತ್ತು. ಈ ನೆಲದ ಮೂಲ ಗುಣ ಕ್ಷಾತ್ರವೇ... ಹತ್ತೂ ಅವತಾರಗಳೂ ಶಾಂತಿಗಾಗಿ ಪ್ರಯತ್ನಿಸಿದರೂ ಹೇಡಿಯಾಗಿ ಕೂರಲಿಲ್ಲ. ಯಾರಿಗೆ ಹೇಗೆ ಬುದ್ಧಿ ಕಲಿಸಬೇಕಿತ್ತೋ ಹಾಗೆಯೇ ಕಲಿಸಿದ್ದು. ಸ್ವಾಭಿಮಾನ ತನ್ನತನ ಉಳಿಸಿಕೊಳ್ಳಲು ಬೇಕಾದ ಸಾಮರ್ಥ್ಯ ಹಾಗೂ ಗುಂಡಿಗೆ ಎರಡೂ ಇತ್ತು. ಪಂಚತಂತ್ರವೂ ಉಳಿದೆಲ್ಲ ಆದ ಬಳಿಕ ದಂಡ ವನ್ನೇ ಹೇಳಿತ್ತು. ಅಂತ ನೆಲದಲ್ಲಿ ಅಹಿಂಸೆ ಅನ್ನುವುದು ಅಸಹಾಯಕತೆಯ ಮುಚ್ಚಿಕೊಳ್ಳುವ ಅಸ್ತ್ರವಾಗಿದ್ದು ಇತ್ತೀಚಿಗೆ. ಅದರ ವ್ಯಾಖ್ಯಾನವನ್ನೇ ಬದಲಾಯಿಸಿದ ಕೀರ್ತಿಯೂ ನಮ್ಮದೇ. ಯಜಮಾನ ದುರ್ಬಲನಾದಾಗ ಅಥವಾ ಅವನಿಗೆ ಅಧಿಕಾರವೋ ಆಮಿಷಕ್ಕೊ ಒಳಗಾದಾಗ ಗುಲಾಮನಾಗಿ ಪರಿವರ್ತಿತ ನಾಗುತ್ತಾನೆ. ಗುಲಾಮಗಿರಿಯನ್...