ಅಷ್ಟು ದೂರದಿಂದಲೇ ಭೋರ್ಗೆರೆಯುವ ಸದ್ದು ಕೇಳುತಿದ್ದ ಹಾಗೆ ಮೈ ಮನವೆಲ್ಲಾ ಪುಳಕ ಆವರಿಸಿತು. ಕಣ್ಣು ಸಾಧ್ಯವಾದಷ್ಟೂ ಅಗಲವಾಗಿ ತೆರೆದರೆ ಆಕಾಶವನ್ನು ಚುಂಬಿಸುವ ಕಡಲು ಕಾಣಿಸಿತು. ಈ ಕಡಲು ಅದೆಷ್ಟು ಕಾಡುತ್ತೆ ನನ್ನ ಅನ್ನೋದು ಮಾತಲ್ಲಿ ಹೇಳೋದಕ್ಕೆ ಆಗುವುದಿಲ್ಲ. ಅವನೆಡೆಗೆ ಮೊದಲಿಂದಲೂ ಮುಗಿಯದ ಸೆಳೆತ, ತೀರಲಾಗದ ವ್ಯಾಮೋಹ. ನೋಡಿದಷ್ಟೂ ತಣಿಯದ ದಾಹ. ಕಣ್ಣು ಬೇರೆಡೆತಿರುಗಿಸಲಾಗದಷ್ಟು ಮೋಹ.. ಅದೂ ಮೊರೆಯುತ್ತಿತ್ತು, ಕರೆಯುತಿತ್ತು. ಅಪ್ಪಳಿಸಿ ಬಂದು ಅಪ್ಪಲು ಪ್ರಯತ್ನಿಸುತ್ತಿತ್ತು. ಕಡಲು ಸದಾ ಅಚ್ಚರಿ. ಅದೇನು ಸೆಳೆತವೋ ಅವನಲ್ಲಿ, ಸಣ್ಣ ಪುಟ್ಟ, ತೊರೆ, ಹಳ್ಳ, ನದಿಗಳೆಲ್ಲವುದರ ಗುರಿ ಗಮ್ಯ ಒಂದೇ. ಕಾಣದ ಕಡಲನ್ನು ಕಾಣುವುದು, ಹಾಗೂ ಕೂಡುವುದು. ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಸರಿಯೇ ಅವನನ್ನು ಸೇರಲೇಬೇಕು ಅನ್ನುವ ತಪನೆ ಹುಟ್ಟಿಸುವ ಅವನ ಆಕರ್ಷಣೆಯಾದರೂ ಏನು ಅನ್ನುವುದಕ್ಕೆ ಆಲೋಚಿಸಿದಾಗಲೆಲ್ಲ ಹೊಳೆಯುವುದು ಪ್ರೀತಿ ಒಂದೇ. ಅವನದೋ ವಿಶಾಲ ಹೃದಯ. ಬಂದವರನ್ನೆಲ್ಲಾ ಕೈ ಚಾಚಿ ಆಹ್ವಾನಿಸುವ, ಬಾಚಿ ತಬ್ಬಿ ತನ್ನೊಳಗೆ ಒಂದಾಗಿ ಕರಗಿಸಿಕೊಳ್ಳುವ ಶಕ್ತಿ. ಬರುವವರು ಲೆಕ್ಕವಿಲ್ಲದಷ್ಟು ಅವರೆಲ್ಲರನ ಅಸ್ತಿತ್ವ ಮರೆಸಿ ತಾನೇ ಆಗಿಬಿಡುವ ಅವನ ದೈತ್ಯ ಶಕ್ತಿ ಬಗ್ಗೆ ಹೆಮ್ಮೆಯ ಜೊತೆ ಅಸೂಯೆ ಕೂಡ. ಬಂದವರಾರಿಗೂ ಪ್ರತ್ಯೇಕ ಅಸ್ತಿತ್ವವೇ ಇಲ್ಲದಂತೆ ಅದು ಅವರ್ಯಾರಿಗೂ ಕಾಡದಂತೆ ತಾನೇ ತಾನಾಗಿ ಆವರಿಸಿ ಹಬ್ಬುವ ಅವನ ಚತುರತೆಗೆ...
Posts
Showing posts from December, 2017
- Get link
- X
- Other Apps
ಭಾನುವಾರ ಬಂತೆಂದರೆ ಅದು ಅಭ್ಯಂಜನದ ಸಮಯ.ನಿಧಾನಕ್ಕೆ ಎದ್ದು ತಿಂಡಿ ತಿಂದು ಹೊರಗೆ ಆಡಲು ಹೋಗಬೇಕು ಅಂತ ರೆಡಿಯಾಗುವಾಗಲೇ ಹೊಂಚು ಹಾಕಿ ಹಿಡಿಯುವ ಬೇಟೆಗಾರನಂತೆ ಅಜ್ಜಿ ಪ್ರತ್ಯಕ್ಷಳಾಗುತ್ತಿದ್ದಳು. ಬಿಲ್ಲಿನ ಬದಲು ಎಣ್ಣೆಯ ಬಟ್ಟಲು ಹಿಡಿದು. ಮಂದವಾದ ಹರಳೆಣ್ಣೆಯನ್ನು ಒಂದು ಹನಿಯೂ ನೆಲಕ್ಕೆ ಜಾರದಂತೆ ಬೊಗಸೆಯಲ್ಲಿ ಸುರಿದು ಅಷ್ಟೇ ನಾಜೂಕಾಗಿ ನೆತ್ತಿಗೆ ಒತ್ತಿ ತನ್ನ ಪುಟ್ಟದಾದ ಕೈಯಿಂದ ಹದವಾಗಿ ತಿಕ್ಕುತ್ತಿದ್ದರೆ ಅದು ಮಳೆಗಾಲದ ನೀರಿನಂತೆ ಜಾಗ ಮಾಡಿಕೊಂಡು ತೊರೆಯಾಗಿ, ಜಲಪಾತವಾಗಿ ಇಳಿದು ಮುಖಕ್ಕೆ ಮುತ್ತಿಕ್ಕುತ್ತಿತ್ತು. ವಾರಕ್ಕೊಂದು ಸಾರಿ ನೆತ್ತಿಗೆ ಎಣ್ಣೆ ಬೀಳದಿದ್ದರೆ ಕಣ್ಣುರಿ ಬರುತ್ತೆ. ನೆತ್ತಿ ಕಾಯಿಸಬಾರದು. ನೋಡು ಹೇಗೆ ಸುಡ್ತಾ ಇದೆ. ಹಾಳಾದವಳು ಬಿಸಿಲಿಗೆ ಹೋಗಬೇಡಾ ಅಂದ್ರೂ ಮೂರ್ಹೊತ್ತೂ ಅಲ್ಲೇ ಸಾಯ್ತಿ ಅಂತ ಬೈಯುತ್ತಿದ್ದರೆ ಒಳಗೆ ನಿಧಾನಕ್ಕೆ ಇಳಿಯುತ್ತಿದ್ದ ಹರಳೆಣ್ಣೆಯ ತಂಪಿಗೆ ಅದು ಜೋಗುಳದಂತೆ ಭಾಸವಾಗಿ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತಿತ್ತು. ನೆತ್ತಿಗೆ ಬಡಿದು ಅಷ್ಟೂ ಎಣ್ಣೆಯನ್ನು ಇಳಿಸಿದ ಮೇಲೆ ಒಂದು ಬಟ್ಟಲಿಗೆ ಎಳ್ಳೆಣ್ಣೆಯನ್ನು ಸುರಿದು ಹೋಗು ಮೈಗೆಲ್ಲಾ ಹಚ್ಚಿಕೊಂಡು ಓಲೆ ಉರಿ ಮುಂದೆ ಮಾಡು ಎಂದು ಆ ಏಕಾಂತದಿಂದ ಎಬ್ಬಿಸಿ ಬಚ್ಚಲಿಗೆ ಅಟ್ಟುತ್ತಿದ್ದರೆ ಅವಳನ್ನು ಬೈದುಕೊಳ್ಳುತ್ತಲೇ ಬಿಡಲಾರೆ ಅನ್ನೋ ರೆಪ್ಪೆಗಳನ್ನು ಬಲವಂತವಾಗಿ ಬೇರ್ಪಡಿಸಿ ಹೆಜ್ಜೆ ಎತ್ತಿಡುತ್ತಿದ್ದೆ. ಅಭ್ಯಂಜನ ಅಂದರೆ ಅವತ್ತು ಬಚ್ಚಲ ಒ...
- Get link
- X
- Other Apps
ಶ್ರಾವಣ ಮಾಸದಲ್ಲಿ ಜರುಗುವ ಪುರಾಣ ವಾಚನ ಸಂದರ್ಭದಲ್ಲಿ ಚನ್ನ ಬಸವ ಪುರಾಣ ಕೇಳಿದ ಜನಗಳು ಉಕ್ಕಿ ಬಂದ ಭಕ್ತಿಯ ಭಾವದಲ್ಲಿ ತಮಗೂ ಲಿಂಗಧಾರಣೆ ಮಾಡಬೇಕು ಎಂದು ಕೇಳಿದ ಸ್ವಾಮಿಗಳು ಒಪ್ಪಿ ಲಿಂಗಧಾರಣೆ ಮಾಡಿ ಇಂದಿನಿಂದ ಶಿವಭಕ್ತರಾದಿರಿ ಇನ್ನು ಮೇಲೆ ಒಳ್ಳೆಯ ಕೆಲಸವನ್ನೇ ಮಾಡಿ ಶಿವಕೃಪೆಗೆ ಪಾತ್ರರಾಗಿ ಎಂದು ಆಶೀರ್ವಾದ ಮಾಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತಾರೆ. ಮೊದಲೇ ದಂಡಿನ ಜನ, ಉತ್ಸಾಹ, ಆವೇಶ ಎರಡೂ ಜಾಸ್ತಿಯೇ. ಭಕ್ತಿಗೆ ಮರುಳಾದಂತೆ ವೇಶ್ಯೆಯ ಮೋಹಕ್ಕೂ ಮರುಳಾಗಿ ಅವಳ ಕೋರಿಕೆಯಂತೆ ಧರಿಸಿದ್ದ ಲಿಂಗವನ್ನು ಅವಳಿಗೆ ಒಪ್ಪಿಸಿ ಮೈ ಮರೆಯುತ್ತಾರೆ. ನೀನು ಕಟ್ಟಿಸಿಕೊಳ್ಳಲು ಲಾಯಕ್ಕಿಲ್ಲ ಅಂದ ಗುರುವಿನ ಮಾತಿನಿಂದ ಅವಮಾನಿತಳಾದ ಅವಳು ಅಷ್ಟೂ ಲಿಂಗವನ್ನು ಅವರ ಎದರು ಹಿಡಿದು ಸವಾಲು ಹಾಕಿ ಅವಮಾನಿಸುತ್ತಾಳೆ. ಸಿಡಿದ ಗುರು ಇಂಥ ಕೆಲಸ ಮಾಡಿದವರಿಗೆ ನೀರು ಬೆಂಕಿ ಕೊಡಬೇಡಿ ಅಂತ ಕಟ್ಟು ಮಾಡಿ ಅಜ್ನಾಪಿಸುತ್ತಾರೆ. ಗುರುಶಾಪ ಕೇಳಿ ಕಂಗಾಲಾದ ದಂಡಿನ ಜನ ನಾಯಕರು ಊರಿಗೆ ಬಂದಾಗ ಅವರೆದುರು ಕ್ಷಮೆಗಾಗಿ ತಮ್ಮ ಅಹವಾಲು ಸಲ್ಲಿಸುತ್ತಾರೆ. ದಂಡಿನ ಜನರ ಬಲ, ಹಾಗೂ ಬಲಹೀನತೆ ಎರಡೂ ಅರಿತಿದ್ದ ನಾಯಕ ಅವರಿಗಾಗಿ ಮರುಗಿ ಅಭಯ ನೀಡುತ್ತಾನೆ. ಅದರಂತೆ ಗುರುಮನೆಗೆ ಆ ವಿಷಯದ ಬಗ್ಗೆ ಮಾತಾಡಲು ಬರುವ ನಾಯಕ ಅವರನ್ನು ಕ್ಷಮಿಸಲು ಕೇಳಿದಾಗ ತಪ್ಪು ಯಾರೇ ಮಾಡಿದರೂ ಒಂದೇ ಸಾದ್ಯವೇ ಇಲ್ಲಾ ಎಂದು ಗಟ್ಟಿಯಾಗಿ ನಿಲ್ಲುವ ಗುರುಗಳು, ಅರಸನಾಗಿ ಪ್ರಾರ್ಥಿಸುತ್...
- Get link
- X
- Other Apps
ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ, ಮಾಡುವ ಪ್ರತಿ ಕೆಲಸದಲ್ಲೂ ದೇಹದ ಜೊತೆ ಮನಸ್ಸನ್ನೂ ಸಂಯೋಗಿಸಿ ಮಾಡುವ ಕ್ರಿಯೆ. ಸೃಷ್ಟಿಯ ರಚನೆ ಎಷ್ಟು ಅದ್ಭುತ ಹಾಗೂ ಸುಂದರವಾಗಿದೆ ಎಂದರೆ ಪ್ರತಿಯೊಂದೂ ತನ್ನ ಕೆಲಸವನ್ನು ತಾನು ಶ್ರದ್ದೆಯಿಂದ ಹಾಗೂ ಶಿಸ್ತಿನಿಂದ ನಡೆಸಿಕೊಂಡು ಹೋಗುತ್ತದೆ. ನಮ್ಮ ದೇಹದ ಅಂಗಗಳ ಕಾರ್ಯ ವೈಖರಿಯನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ನಾವು ಗಮನಿಸುತ್ತಿಲ್ಲ ಎಂದು ಯಾವ ಅಂಗವೂ ಅಸಹಿಷ್ಣುತೆಯ ನೆಪವೊಡ್ಡಿ ತನ್ನ ಕಾರ್ಯ ನಿಲ್ಲಿಸಿ ಮುಷ್ಕರ ಹೂಡಿಲ್ಲ.ಯಾವುದೇ ಕೆಲಸವನ್ನಾಗಲಿ ಗಮನವಿಟ್ಟು ಮಾಡಿದಾಗ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಿಗುವ ಫಲಿತಾಂಶ ಹಾಗೂ ಕಾಟಾಚಾರಕ್ಕೆ ಮಾಡಿದಾಗ ಸಿಗುವ ಪಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ತನ್ನನ್ನು ಸರಿಯಾಗಿ ಅರಿಯದೆ ಇನ್ನೊಬ್ಬರನ್ನು ತಿಳಿಯಲು ಸಾದ್ಯವಿಲ್ಲ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಮಾರ್ಗವೇ ಯೋಗ. ಹೊರ ಪ್ರಪಂಚವನ್ನು ನಮಗೆ ಅನುಕೂಲಕರವಾಗಿ ನಿರ್ಮಿಸಿಕೊಳ್ಳುವ ನಾವು ನಮ್ಮೊಳಗಿನ ಪ್ರಪಂಚವನ್ನು ಮರೆತೇ ಬಿಟ್ಟಿರುತ್ತೇವೆ. ಉದಾಸೀನ ಮಾಡಿರುತ್ತೇವೆ. ಪ್ರತಿಯೊಂದು ಭಾವದ ಜನ್ಮವೂ ಒಳ ಪ್ರಪಂಚದಲ್ಲೇ, ಬದುಕಿನ ಆರಂಭವೂ ಅಲ್ಲೇ. ಹಾಗಾಗಿ ನಮ್ಮ ಗಮನ ಜಾಸ್ತಿ ಇರಬೇಕಾಗಿದ್ದೂ ಅಲ್ಲೇ. ಹೊರಗಿನ ಘಟನೆಗಳನ್ನು ನಾವು ನಿಯಂತ್ರಿಸಲಾರೆವು, ಆದರೂ ಪ್ರಯತ್ನಿಸುತ್ತೇವೆ, ನಿರಾಶರಾಗುತ್ತೇವೆ. ನಮ್ಮೊಳಗಿನ ಸಾಮ್ರಾಜ್ಯ ನಮ್ಮಧೀನ ಆದರೆ ಮರೆತು ಅರಾಜಕತೆ ಸೃಷ್ಟಿಸುತ...
ಕಸ್ತೂರಿ ಕಂಕಣ.
- Get link
- X
- Other Apps
ಸರಾಗವಾಗಿ ಹರಿಯುತಿದ್ದ ನದಿಯೊಂದಕ್ಕೆ ಅಡ್ಡಲಾಗಿ ಬಂದ ಮರದ ತುಂಡಿನಂತೆ ಇದ್ದಕ್ಕಿದ್ದ ಹಾಗೆ ಬರುವ ಸೀರ್ಯದ ಪತ್ರ, ಮದುವೆಯ ಬಗೆಗಿನ ಅಪೇಕ್ಷೆ ತಿಳಿನೀರ ಕೊಳದಲ್ಲಿ ಬಿದ್ದ ಕಲ್ಲಿನಂತೆ ಅಲೆಯನ್ನು ಎಬ್ಬಿಸುತ್ತದೆ. ಯಾವ ಅಲೆಯ ಭಾವ ಯಾವುದು ಎಂದು ಗುರುತಿಸುವುದು ಹೇಗೆ? ಅದರಲ್ಲೂ ಹಾವಿನ ಹೆಡೆಯ ಕೆಳಗೆ ಕುಳಿತಿರುವವ ಮೈಯೆಲ್ಲಾ ಕಣ್ಣಾಗಿರಬೇಕು, ಕಿವಿಯಾಗಿರಬೇಕು. "ಅಕಾರಣ ಮೈತ್ರಿ, ಅಕಾರಣ ಪ್ರಶಂಸೆ, ಅಕಾರಣ ಆಶ್ವಾಸನೆಗಳೆಲ್ಲವೂ ಸಂದೇಹಕ್ಕೆ ಕಾರಣವಾಗುವ ವಿಷಯಗಳೇ ಅನ್ನುವ ನಾಯಕನ ಮಾತು ಮೇಲ್ನೋಟಕ್ಕೆ ಅಕಾರಣ ಎನ್ನಿಸುವ ಎಲ್ಲದರಲ್ಲೂ ಒಂದು ಗಹನವಾದ ಕಾರಣ ಇದ್ದೆ ಇರುತ್ತದೆ ಅನ್ನುವುದುದನ್ನ ಸೂಚಿಸುತ್ತದೆ. ಪ್ರಕೃತಿಯಲ್ಲಿ ಯಾವುದೂ ಅಕಾರಣವಲ್ಲ ಅನ್ನುವ ಮತ್ತದೇ ನಂಬಿಕೆಗೆ ಬಂದು ನಿಲ್ಲುತ್ತೇನೆ ನಾನು. ಶತ್ರುವನ್ನು ಶತ್ರುವಾಗಿಯೇ ನೇರವಾಗಿ ಎದುರಿಸಲು ಅಸಾಧ್ಯವಾದಾಗ ಹೊಳೆಯುವ ಆಲೋಚನೆಯೇ ಮಿತ್ರರಂತೆ ನಟಿಸಿ ಇರಿಯುವುದು. ಬದುಕಿನ ದೊಡ್ಡ ಭೀತಿ ಎಂದರೆ ಅದು ಶತ್ರುವಲ್ಲ ಹಿತಶತ್ರು. ಬೆನ್ನಿಗೆ ಕಣ್ಣಿಲ್ಲ ಅನ್ನುವುದನ್ನ ಅರಿತು ಅದನ್ನು ಉಪಯೋಗಿಸಿಕೊಳ್ಳುವ ಇವರ ಕ್ರೌರ್ಯ ಜಗತ್ತಿನ ಅತಿ ದೊಡ್ಡ ಕ್ರೌರ್ಯ ಅನ್ನಿಸುತ್ತದೆ ಯಾವಾಗಲೂ. ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಬಹಳಷ್ಟು ಸಫಲವಾಗುವ ಸೀರ್ಯ, ಹಾಗೂ ತರಿಕೇರಿ ಕುಟಿಲತನಕ್ಕೆ ಉತ್ಕೃಷ್ಟ ಉದಾಹರಣೆಯಾಗಿ ನಿಲ್ಲುತ್ತಾರೆ. ಒಮ್ಮೆ ಬದುಕಿನತ್ತ ದೃಷ್ಟಿ ಹರಿಸಿ ಸಿಹಿಯ ಹೆಸರಿನ ಸ...
ವಿಜಯೋತ್ಸಾಹ
- Get link
- X
- Other Apps
ಯುದ್ಧವೂ ಬೇಡಾ, ಸಾವು ನೋವೂ ಬೇಡಾ ಅಂತ ಮನಸ್ಸಿಗೆ ಅರ್ಥಮಾಡಿಸುವ, ರಣೋತ್ಸಾಹಕ್ಕಾಗಿ ತುಡಿಯುವ ಮನಸ್ಸನ್ನು ಸಮಾಧಾನ ಪಡಿಸುವ ಕಾರ್ಯದಲ್ಲಿದ್ದಾಗಲೇ ಆಗಮಿಸುವ ಸೀರ್ಯದ ವಕೀಲರು ಆಗಮಿಸಿ ಹೊಯ್ದಾಡುವ ದೀಪಕ್ಕೆ ಇನ್ನಷ್ಟು ಗಾಳಿ ಬೀಸಿದ ಹಾಗಾಗುತ್ತದೆ. ತಮ್ಮ ಬಲವನ್ನು ಪ್ರಚುರ ಪಡಿಸುವ, ನೆಲೆಯನ್ನು ಭದ್ರಗೊಳಿಸುವ ಆಶಯದೊಂದಿಗೆ ದುರ್ಗವನ್ನು ವಶಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು ಅನ್ನುವ ನೀರಿಕ್ಷೆಯಲ್ಲಿ ತಮ್ಮ ಉಳಿವಿಗಾಗಿ ಇನ್ನೊಬ್ಬರ ಸ್ವಾಭಿಮಾನವನ್ನು ಒತ್ತೆಯಾಗಿಸಿ ಕೊಳ್ಳುವ ಪ್ರಯತ್ನಕ್ಕೆ ಮುನ್ನುಡಿಯಾಗುತ್ತದೆ. ನಮ್ಮ ಬಲ ಜಗತ್ತಿಗೆ ತಿಳಿಯಬೇಕಾದರೆ ಇನ್ಯಾರೋ ಬಲವಂತ ನಮ್ಮ ಅಡಿಯಾಗಬೇಕು. ಎಳೆಯ ಬಾಳು ವ್ಯವಸ್ಥಿತವಾಗಿ ಬೆಳೆಯುವುದಕ್ಕೆ ಶಿಸ್ತು ಎಷ್ಟು ಅಗತ್ಯವೋ, ಮುಂದೆ ಬಾಳಿನ ಹೋರಾಟಗಳನ್ನು ಎದುರಿಸಬೇಕಾದರೆ ಚಿಕ್ಕಂದಿನಿಂದಲೇ ನಿರ್ಭಯವೂ ಅಭ್ಯಾಸವಾಗಿರಬೇಕು ಅನ್ನುವ ನಾಯಕನ ಮಾತು ಮಕ್ಕಳ ಬೆಳವಣಿಗೆ ಹೇಗಿರಬೇಕು ಅನ್ನುವುದನ್ನ ವಿವರಿಸುತ್ತದೆ. ಇಂದು ತಂದೆ ತಾಯಿಗೆ ಹೆದರಿದ ಮಕ್ಕಳು ನಾಳೆ ನೆರಳಿಗೂ ಹೆದರುವ ಅಂಜುಬುರುಕರಾಗಿರುತ್ತಾರೆ ಅನ್ನುವುದು ಎಷ್ಟು ಸತ್ಯವೋ ಇಂದು ತಂದೆ ತಾಯಿಗೆ ಗೌರವ ಕೊಡದ ಮಕ್ಕಳು ನಾಳೆ ಯಾರಿಗೂ ಗೌರವ ಕೊಡಲಾರರು ಅನ್ನೋದೂ ಅಷ್ಟೇ ಸತ್ಯ. ತನ್ನದನ್ನು ತಾನು ಉಳಿಸಿಕೊಂಡು ತನ್ನ ಗೌರವವನ್ನು ರಕ್ಷಿಸಿಕೊಂಡು ಬದುಕಬೇಕೆನ್ನುವ ಮನುಷ್ಯ ಕತ್ತಿಯನ್ನು ಹಿಡಿದೇ ಬದುಕಬೇಕು ಅನ್ನುವ ಮಾತು ಈ ಕ್ಷಣಕ್ಕೂ ಪ್ರಸ್ತ...
ತಿರುಗುಬಾಣ
- Get link
- X
- Other Apps
ರಕ್ತರಾತ್ರಿ ಓದಿ ಕೆಳಗಿಡುವ ಹೊತ್ತಿಗೆ ಮೈಯ ರಕ್ತವೂ ಕುದಿದು ನೆತ್ತರಿನ ದಾಹ ಉಂಟಾಗುತ್ತದೆ. ಅಷ್ಟರಮಟ್ಟಿಗೆ ತ.ರಾ.ಸು ನಮ್ಮನ್ನು ಕತೆಯೊಳಗೆ ಎಳೆದುಕೊಂಡು ಅರಿವಿಲ್ಲದಂತೆ ನಾವೂ ಪಾತ್ರವಾಗುವ ಹಾಗೆ ಮಾಡುತ್ತಾರೆ. ಮನುಷ್ಯನ ಮೂಲಭೂತ ಗುಣವೇ ಈ ಗುರುತಿಸಿಕೊಳ್ಳುವಿಕೆ ಅನ್ನಿಸುತ್ತದೆ. ನಾವು ಗೊತ್ತಿಲ್ಲದೇ ಯಾವುದಾದರೂ ಒಂದರ ಜೊತೆ ಗುರುತಿಸಿಕೊಂಡು ಬಿಡುತ್ತೇವೆ. ಹಾಗೆ ಗುರುತಿಸಿ ಕೊಂಡ ಕ್ಷಣದಿಂದ ಅದರ ಸಂಬಂಧಿ ರಾಗ ದ್ವೇಷಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅಸಲಿಗೆ ಹಾಗೆ ಗುರುತಿಸಿಕೊಳ್ಳುವುದು ಅನಿವಾರ್ಯಾವಾ? ಇನ್ನೊಬ್ಬರನ್ನು ಪ್ರಶ್ನಿಸಿದಷ್ಟು ಸರಳವಲ್ಲ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವುದು. ದುಃಖದ ಕಣ್ಣೀರು ಪ್ರತಿಕಾರದ ಬೆಂಕಿಯನ್ನು ಹೊತ್ತಿಸುವುದೇ ಸೋಜಿಗ. ಈ ವಿಷಯದಲ್ಲಿ ಮಾತ್ರ ನೀರು ಬೆಂಕಿ ಅಪ್ಪಟ ಸ್ನೇಹಿತರಂತೆ ವರ್ತಿಸುತ್ತದೆ. ಹೀಗೆ ಪ್ರತೀಕಾರದ ಬೆಂಕಿಯಲ್ಲಿ ಬೇಯುವ ಮೊದಲ ವ್ಯಕ್ತಿ ಗಿರಿಜೆ. ಬೆಂಕಿಯದು ಹಬ್ಬುವ ಗುಣ. ನಿಯಂತ್ರಣವಿಲ್ಲದೇ ಹೋದರೆ ಅದು ಹಬ್ಬುತ್ತಾ ಸಿಕ್ಕಿದ್ದನ್ನು ತನ್ನೊಡಲಿಗೆ ಎಳೆದು ಕೊಳ್ಳುತ್ತಾ ಹೋಗುತ್ತದೆ. ಹೀಗೆ ಸಿಲುಕುತ್ತಾ ಹೋಗುವವರು ಪರಶುರಾಮಪ್ಪ, ಭರಮಣ್ಣ, ಊರ ಗೌಡರು ಸಾಲಿಗೆ ಸೇರುವುದು ಕಲ್ಲುಮಠದ ಸ್ವಾಮಿಗಳು ಸಹ. ದುಷ್ಟರಿಗಿಂತ ಅಪಾಯಕಾರಿ ಆ ದುಷ್ಟತನವನ್ನು ವಿರೋಧಿಸದೆ ಮೌನವಾಗಿ ಇರುವವರು ಅನ್ನೋದನ್ನ ಇಡೀ ಪುಸ್ತಕ ಬಿಡಿಸಿಡುತ್ತಾ ಹೋಗುತ್ತದೆ. ನಮ್ಮ ನಮ್ಮ ನೆಲೆಯಲ...
ಹೊಸ ಹಗಲು.
- Get link
- X
- Other Apps
ರಾತ್ರಿ ನಿದ್ದೆಯೆಂಬ ಮರಣವನ್ನು ಕಳೆದು ಮುಂಜಾವಿನ ಪ್ರತಿ ಉದಯವೂ ಒಂದು ಹೊಸ ಹಗಲೇ. ದಳವಾಯಿಯ ಅಂತ್ಯದೊಂದಿಗೆ ಕರಾಳ ರಾತ್ರಿ ಮುಗಿದು ಹಾಗೆಯೇ ದುರ್ಗಕ್ಕೂ ಹಗಲಾಗಿತ್ತು. ಹೊಸನಾಯಕನ ಬರುವನ್ನು ಕಾಯ್ದ, ದುರ್ಗದ ಅಭಿವೃದ್ಧಿಯ, ಕನಸಿನ ಹೊಸ ಹಗಲು. ಅತ್ತ ಬಿಸಿಲಿನ ಧಗೆಯಲ್ಲಿ ಕಣ್ಣಲ್ಲಿ ಕತ್ತಲೆಯನ್ನು ತುಂಬುವ ಬೆಳಕಿನಲ್ಲಿದ್ದ ಭರಮಣ್ಣನಿಗೂ ಅದು ಹೊಸಹಗಲಿಗೆ ನಾಂದಿಯಾಗಿತ್ತು. ಕತ್ತಲೆಯಲ್ಲೂ ಕಣ್ಣು ಕಾಣದು, ಅತಿ ಬೆಳಕಲ್ಲೂ ಕಣ್ಣು ತೋರದು. ಎರಡೂ ದೃಷ್ಟಿಯನ್ನು ಮಂಕಾಗಿಸುತ್ತದೆ. ದುರ್ಗದ ಬೆಟ್ಟದಷ್ಟೇ ದುರ್ಗಮ ಕನಸು ಅವನದು. ಅದನ್ನು ನನಸಾಗಿಸಿ ಕೊಳ್ಳುವಲ್ಲೇ ಅವನ ಪ್ರಯತ್ನ. ಯಾವುದೇ ಕನಸನ್ನು ಪೂರ್ಣ ಪ್ರಮಾಣದ ಶಕ್ತಿಯನ್ನು ವ್ಯಯಿಸಿ ಕಿಂಚಿತ್ತೂ ಸಂದೇಹವಿಲ್ಲದೆ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಭರಮಣ್ಣ ಸಾಕ್ಷಿಯಾಗಿ ನಿಲ್ಲುತ್ತಾನೆ. ನನ್ನಿಂದ ಆಗುತ್ತಾ ಅನ್ನೋ ಸಣ್ಣ ಸಂದೇಹ ಹಡಗಿನ ಸಣ್ಣ ಕಿಂಡಿಯಂತೆ ಮುಳುಗಿಸಿ ಬಿಡುತ್ತದೆ. ನಿದ್ದೆಯಲ್ಲಿ ನಾಯಕನಾಗುವ ಕನಸು, ಎದ್ದಾಗ ಎದುರಿನಲ್ಲಿ ಸ್ವಾಮಿಗಳು, ಗೊಂದಲದ ಮನಸ್ಥಿತಿಯಲ್ಲಿ ಭರಮಣ್ಣ, ಕನಸುಗಳು ವಿಚಿತ್ರವಾಗಿ, ಅದ್ಭುತವಾಗಿ, ಅಲೌಕಿಕವಾಗಿ ಇದ್ದ ಮಾತ್ರಕ್ಕೆ ಅದು ಸುಳ್ಳಾಗಲಾರದು, ಇಂದು ಕಂದ ಕನಸು ಎಚ್ಚತ್ತಾಗಿನ ಮನದ ಬಯಕೆಯ ಪ್ರತಿಬಿಂಬವೋ, ನಾಳೆ ಬರಲಿರುವ ಘಟನೆಯ ಮುಂಗುರುಹೂ ಆಗಿರಬಹುದು ಅನ್ನುವ ಸ್ವಾಮಿಗಳು ಕನಸು ಸುಳ್ಳಲ್ಲ, ಒಳಗಿರುವುದೇ ಹೊರಬರುವುದು ಅನ್ನು...