ಜಸ್ಟ್ ಮಾತ್ ಮಾತಲ್ಲಿ
ಈ ಆಟೋದವರು ಸರಿಯಿಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಇದು ನಿಜವಾ ಎಂದು ಆಲೋಚಿಸಿದರೆ ಈ ಡಾಕ್ಟರ್ ಗಳು, ಇಂಜಿನಿಯರ್ ಗಳು, ಸಿನಿಮಾದವರು, ಕೊನೆಗೆ ಈ ಗಂಡಸರು ಸರಿಯಿಲ್ಲ ಅನ್ನುವ ಜನರಲ್ ಸ್ಟೇಟ್ಮೆಂಟ್ ಗಳು ಸದ್ದು ಮಾಡುತ್ತಲೇ ಇರುತ್ತದೆ. ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಿಗೂ ಅವರವರದೇ ಆದ ದೌರ್ಬಲ್ಯ ಇದ್ದೆ ಇರುವ ಹಾಗೆ ಒಳ್ಳೆಯತನವೂ ಇದ್ದೆ ಇರುತ್ತದೆ. ಯಾರೂ ಸಂಪೂರ್ಣ ಕೆಟ್ಟವರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಂಪೂರ್ಣ ಒಳ್ಳೆಯವರಾಗಿರಲೂ ಸಹ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕತೆಯಿರುತ್ತದೆ. ಅದರಲ್ಲಿ ಅನೂಹ್ಯ ತಿರುವುಗಳು ಇರುತ್ತವೆ. ನೋಡುವ, ಕೇಳಿಸಿಕೊಳ್ಳುವ ತಾಳ್ಮೆ, ಮನಸ್ಸು ನಮಗಿರಬೇಕು. ಅಲ್ಲೊಂದು ವೇವ್ ಲೆಂತ್ ಹೊಂದಿಕೆಯಾಗಬೇಕು. ಹೀಗೆ ಯೋಚಿಸುವಾಗ ಪಕ್ಕನೆ ತಿರುಮಲೇಶ್ ಸರ್ ಅವರ ಕವಿತೆ ನೆನಪಾಗುತ್ತದೆ. ಓದಿರಿ, ಬರೆಯಿರಿ ಚಿತ್ರಿಸಿರಿ ಹಾಡಿರಿ ಮುಟ್ಟಬೇಕು ಜನರನ್ನು ಮುಟ್ಟದಿದ್ದರೆ ನಿಷ್ಪ್ರಯೋಜಕ ಏನು ಮಾಡಿದರೂ... ಇಲ್ಲಿ ಮುಟ್ಟುವುದು ಎಂದರೆ ದೈಹಿಕವಾಗಿ ಮುಟ್ಟುವುದಲ್ಲ, ಅವರ ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ. ಹಾಗೆ ಮುಟ್ಟಿದಾಗ ಮಾತ್ರ ಅವರು ಬಿಚ್ಚಿಕೊಳ್ಳುತ್ತಾರೆ. ಹಾಗೆ ಬಿಚ್ಚಿಕೊಂಡಾಗ ಮಾತ್ರ ಅರ್ಥವಾಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಓದುವಾಗ ಈ ಮುಟ್ಟುವಿಕೆಯು ಅರಿವಿಗೆ ಬರುತ್ತದೆ. ನೋಟದಿಂದ, ಯಾವುದೋ ಒಂದು ವರ್ತನೆಯಿಂದ ಮನುಷ್ಯರನ್ನು ಸುಲಭವಾಗಿ ಅಳೆದು ಬಿಡುತ್...