Posts

ಹಲಸಿನ ಹಣ್ಣು

ಹಲಸಿನ ಹಣ್ಣು ಮುಚ್ಚಿಟ್ರೂ ಊರಿಗೆಲ್ಲಾ ತಿಳಿಯುತ್ತೆ ಅನ್ನೋಳು ಅಜ್ಜಿ ಏನಾದರೂ ಸಂದರ್ಭ ಬಂದಾಗ. ಆ ಸಂದರ್ಭ ಸನ್ನಿವೇಶ ಅರ್ಥವಾಗದ ವಯಸ್ಸು ಅದಾದರೂ ಈ ಹಾಳಾದ್ದು ಹಲಸಿನ ಹಣ್ಣಿನ ವಾಸನೆ ಬಚ್ಚಿಡೋಕೆ ಆಗೋಲ್ಲ ಅನ್ನೋದು ಗೊತ್ತಾಗ್ತಾ ಇದ್ದಿದ್ದು ಕೆಲಸ ಮುಗಿಸಿ ಹೋಗುವವರು ಓ ಹಲಸಿನ ಹಣ್ಣು ಆದ ಹಾಗಿದೆ ಅನ್ನುವಾಗ. ಈ ಹಣ್ಣನ್ನು ಇಷ್ಟಪಡದ ಜನವೇ ವಿರಳ. ಅದರಲ್ಲೂ ಮಲೆನಾಡಿಗರಿಗೆ ಅದು ಬದುಕಿನ ಒಂದು ಅವಿಭಾಜ್ಯ ಅಂಗ. ಈ ಹಲಸು ಒಂಥರಾ ಕಾಡು ನಾಡು ಅನ್ನೋ ಭೇಧವಿಲ್ಲದೆ ಎಲ್ಲಾ ಕಡೆಯಲ್ಲೂ ಹೊಂದಿಕೊಂಡು ಹೋಗುತ್ತದೆ. ದೊಡ್ಡ ಮರ ಅಗಲವಾಗಿ ಹರಡಿಕೊಂಡು ಒಳ್ಳೇ ನೆರಳು ಕೊಡುತ್ತದೆ. ಬೇಸಿಗೆಯಲ್ಲಿ ಅದರಡಿಯ ಕಲ್ಲಿನ ಮೇಲೆ ಕುಳಿತರೆ ಆ ತಂಪಿಗೆ ಅಲ್ಲೇ ನಿದ್ರೆ ಹೋಗುವ ಹಾಗಾಗುತ್ತದೆ. ಹಬ್ಬಕ್ಕೋ ಹರಿದಿನಕ್ಕೋ ಮಾವಿನ ಎಲೆಯಜೊತೆ ಇದರ ಎಲೆಯೂ ಬೇಕಾಗಿದ್ದರಿಂದ ಜನಗಳಿಗೂ ಅದು ಹತ್ತಿರವಿದ್ದಷ್ಟೂ ಅಪ್ಯಾಯಮಾನ.  ಉಪಕಾರವಿದ್ದರೆ ಮಾತ್ರ ಹತ್ತಿರಕ್ಕೆ ಬಿಟ್ಟು ಕೊಳ್ಳುವ ಮನುಷ್ಯ ಸ್ವಭಾವ ಹೊಸದೇನಲ್ಲ ಬಿಡಿ ಆದರೂ ಈ ಹಲಸು ಒಂಥರಾ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವಾಗಿದ್ದಂತೂ ಹೌದು. ಹಲಸು ಮಾವು ಎರಡೂ ಶುಭಕಾರ್ಯಗಳಿಗೆ ಪ್ರಮುಖವಾಗಿದ್ದರಿಂದಲೋ ಏನೋ ಅವೆರೆಡು ಒಟ್ಟಿಗೆ ಇದ್ದರೆ ಒಳ್ಳೆಯದು ಅನ್ನೋ ನಂಬಿಕೆಯೂ ಇದೆ. ಆದರೆ ಹಾಗಿರೋದೂ ಕೂಡಾ ಅಪರೂಪವೆ. ಹಲಸು ಬಡವರ ಪಾಲಿನ ವರ ಅನ್ನೋದು ಹಿಂದಿನಿದಲೂ ಬಂದ ನಂಬಿಕೆ. ವಿಟಮಿನ್, ಹಾಗೂ ಖನಿಜಾಂಶಗಳ...

ದೇವಸ್ಥಾನ ರಾಜಕೀಯ

ಪುರಾಣ ಪ್ರಸಿದ್ಧ ದೇವಸ್ಥಾನ, ಶಾಸ್ತ್ರೋಕ್ತವಾಗಿ  ತ್ರಿಕಾಲ ಪೂಜೆ ನಡೆಯುವ ಸ್ಥಳ. ತನ್ನದೇ ಆದ ಸ್ಥಳ ಮಹಾತ್ಮೆ, ಒಂದು ಶಕ್ತಿ ಕೇಂದ್ರವಾಗಿ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡ ಬಂದ ಆ ದೇವಸ್ಥಾನ ಇರುವುದು ಪುಟ್ಟ ಹಳ್ಳಿಯಲ್ಲಿ, ಕುಗ್ರಾಮ ಎಂದರೂ ತಪ್ಪಿಲ್ಲ. ಒಂದೋ ಎರಡೋ ಬಸ್ ಗಳು ಬಿಟ್ಟರೆ ಬೇರೇನಿಲ್ಲ. ಹಾಗಾಗಿ ಯಾವುದೇ ಗಜಿಬಿಜಿ ಇಲ್ಲದೆ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದ ಕೆಲವರಿಗೆ ನೆಮ್ಮದಿ ಕೊಡುವ ತಾಣವಾಗಿ ಉಳಿದಿತ್ತು. ಪ್ರಕೃತಿಯ ಮಡಿಲಲ್ಲಿ ತಣ್ಣಗಿತ್ತು. ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆ ಅನ್ನೋ ಹಮ್ಮು ಮನುಷ್ಯನಿಗೆ. ಎಲೆಮರೆಯ ಕಾಯಿಯಂತೆ ಇದ್ದ ಅದನ್ನೂ ಅಭಿವೃದ್ಧಿ ಮಾಡಲು ಯೋಜನೆಗಳು, ಅದಕ್ಕೊಂದು ಕಮಿಟಿ ಎಲ್ಲವೂ ಆಗಿ ಮೊದಲ ಹೆಜ್ಜೆಯಾಗಿ ನಿತ್ಯ ಅನ್ನದಾನ ಮಾಡುವ ಯೋಜನೆ ಜಾರಿಗೆ ಬಂದಿತು. ದೇವಸ್ಥಾನಕ್ಕೆ ಹೆಸರಿತ್ತು ನಿಜ ಆದರೆ ಹಣವಿರಲಿಲ್ಲ. ಹಾಗಾಗಿ ನಿತ್ಯ ಅನ್ನದಾನ ಎಂದರೆ ಅದಕ್ಕೆ ಹಣ ಹೊಂದಿಸಬೇಕು. ಒಂದಷ್ಟು ಫಂಡ್ ಬೇಕು. ಒಮ್ಮೆ ಶುರುಮಾಡಿದ ಮೇಲೆ ನಿಂತರೆ ನಗೆಪಾಟಲು. ಹಾಗಾಗಿ ಫಂಡ್ ಸಂಗ್ರಹಿಸಲು ದಾನಿಗಳ ಹುಡುಕುವ ಜೊತೆಜೊತೆಗೇ ಬಂದ ಭಕ್ತರು ತಮ್ಮ ಶಕ್ತ್ಯಾನುಸಾರ ಹಣ ಕೊಟ್ಟು ರಸಿತಿ ಪಡೆಯಬಹುದು ಎಂದಾಯಿತು. ರಸೀತಿ ಕೊಡಲು ಒಬ್ಬರ ನೆಮಕವೂ ಆಯಿತು. ಹೆಸರು ಪುಗಸಟ್ಟೆ ಬಂದರೆ ಸರಿ ಆದರೆ ಕೆಲಸ ಪುಗಸಟ್ಟೆ ಮಾಡೋದು ಹೇಗೆ ಅದಕ್ಕಿಷ್ಟು ಸಂಬಳ, ಕೂರಲು ಕುರ್ಚಿ ಅದಕ್ಕೊಂದು ಹುದ್ದೆಯ ಹೆಸರು ಎಲ್ಲವೂ ಆಯಿತ...

ಮೀಸೆ.

ಆಗಿನ್ನೂ ಚಿಕ್ಕವರು. ಟಿ.ವಿ ಯಿನ್ನೂ ಎಲ್ಲಾ ಕಡೆಗೂ ಹೆಜ್ಜೆ ಇಟ್ಟಿರಲಿಲ್ಲ. ಆಗೆಲ್ಲಾ ರೇಡಿಯೋ ಬಲು ದೊಡ್ಡ ಮಾಧ್ಯಮ. ಮನರಂಜನೆ, ವಾರ್ತೆ, ಎಲ್ಲವಕ್ಕೂ ಅದೇ. ಆಗ ಮಧ್ಯಾನ ಚಿತ್ರಗೀತೆ ಪ್ರಸಾರವಾಗುತಿತ್ತು. ತಮ್ಮ ಮೆಚ್ಚಿನ ಗೀತೆ ಹಾಕಿ ಅಂತ ಕಾಗದ ಬರೆಯುತಿದ್ದರು. ಹಾಡು ಕೇಳಬೇಕು ಎಂದಾಗ ಹೀಗೆ ಕಾಗದ ಬರೆದು ಪ್ರತಿದಿನ ರೇಡಿಯೋ ಕಿವಿ ತಿರುಪಿ ನಮ್ಮ ಕಿವಿ ಅದಕ್ಕೆ ಕೊಟ್ಟು ಕೇಳಬೇಕಿತ್ತು. ಆಗೆಲ್ಲಾ ಒಂದಷ್ಟು ಹಾಡುಗಳು ಪದೇ ಪದೇ ಪ್ರಸಾರವಾಗುತಿತ್ತು. ಅದರಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಅನ್ನೋದೂ ಒಂದು. ಆಗ ಕೇವಲ ಆಡಿಯೋ ಇದ್ದ ಕಾರಣ ಹೇಳುವವರಿಗಾಗಲಿ, ನಟಿಸಿದವರಿಗಾಗಲಿ ಮೀಸೆ ಇತ್ತಾ, ಆ ಮೀಸೆಯ ಮೇಲೆ ಕೈಯಾಡಿಸಿಕೊಂಡೆ ಹೇಳುತ್ತಿದ್ದಾರ ಎಂದು ಕಾಣಿಸದಿದ್ದರೂ ನಾವು ಭಾವಿಸುತಿದ್ದೆವು. ಒಂದು ಹೆಣ್ಣಿಗೆ ಒಂದು ಗಂಡು ಅನ್ನೋದು ಕೇವಲ ಮಾತಿನಲ್ಲಿದ್ದ ಕಾಲವದು. ವರದಕ್ಷಿಣಿ ಅನ್ನೋ ಭೂತ ತನ್ನ ರುದ್ರನರ್ತನ ಮಾಡುತಿತ್ತು. ಗಂಡಸು ಅದರಲ್ಲೂ ಮೀಸೆ ಇದ್ದ ಗಂಡಸು ಅಂದರೆ ಮುಗಿಯಿತು. ಪಾಳೆಯಗಾರ ಇದ್ದ ಹಾಗೆ. ಅದರಲ್ಲೂ ಅಳಿಯನಾಗಿ ಬರುವವನಾದರೆ ಮುಗಿದೇ ಹೋಯಿತು. ನಡುಬಗ್ಗಿಸಿ, ಮೈ ಹಿಡಿಯಾಗಿಸಿ ನಿಂತು ಅವರ ದರ್ಪದ ಮಾತಿಗೆ ಕಿವಿಯಾಗಿ ಕೇಳಬೇಕಿತ್ತು. ಆಗೆಲ್ಲಾ ಛೆ ಗಂಡಾಗಿ ಹುಟ್ಟಬೇಕು ಅನ್ನೋ ಆಸೆ ಸುಪ್ತವಾಗಿ ಹುಟ್ಟಿ ಒಳಗೆ ಮಾಯವಾಗುತಿತ್ತು. ಹೆಣ್ಣಾಗಿ ಹುಟ್ಟಿದವೆಲ್ಲಾ ಅನ್ನೋ ಕೀಳರಿಮೆ ಕೂಡಾ. ಆದರೆ ಅವನೆದುರು ಬಾ...

ಜೀರಿಗೆ ಮೆಣಸು

ನಾಳೆ ರಜೆ ಇದೆಯಲ್ಲ ತೋಟಕ್ಕೆ ಹೋಗಿ ಜೀರಿಗೆ ಮೆಣಸು ಕುಯ್ಕೊಂಡು ಬರಬೇಕು ಅಂತ ಅಜ್ಜಿ ಹೇಳಿದ ಕೂಡಲೇ ಕೋಪ ಸರ್ರಂತ ಮೇಲೆರುತಿತ್ತು. ಯಾಕಾದ್ರೂ ಈ ಗಿಡ ಹುಟ್ಟುತ್ತೇನೋ ಅನ್ನುವ ಕೋಪ. ಮೈತುಂಬಾ ಹಸಿರು, ಕೆಂಪಗಿನ ಕಾಯಿ ಬಿಟ್ಟು ಮುಗಿಲ ಕಡೆ ಮುಖ ಮಾಡಿ ನಿಂತಿರುತಿದ್ದ ಅದು ಶತ್ರುವಿನಂತೆ ಭಾಸವಾಗುತಿತ್ತು. ಕಳೆ ಸವರುವವರು ಇದನ್ನಾದರೂ ಸವರಬಾರದಿತ್ತಾ ಅಂತ ಗೊಣಗುಟ್ಟುತ್ತಲೇ ತೋಟದ ಕಡೆ ಸವಾರಿ ಹೊರಡುತಿದ್ದೆ. ಪುಟ್ಟ ಪುಟ್ಟ ಕಾಯಿಗಳನ್ನು ಬಿಡಿಸುವುದು ರೇಜಿಗೆಯ ಕೆಲಸವಾಗಿತ್ತು. ಅದೂ ಒಂದೆರೆಡೆ ಉಹೂ ಲೆಕ್ಕವಿಲ್ಲದಷ್ಟು ಹಗುರ ಕಾಯಿಗಳು. ತೋಟದಲ್ಲಿ ಅಡಿಕೆ ಮರದ ನೆರಳಿನಲ್ಲಿ ಹುಟ್ಟಿ ನಗುತಿದ್ದ ಈ ಸುಂದರಿ ಯಾರ ಗಮನವನ್ನೂ ಸೆಳೆಯದೆ ಬೆಳೆಯುತ್ತಿದ್ದಳು. ಯಾರ ಆರೈಕೆ ಬೇಡದೆ, ಯಾವುದೇ ವಿಶೇಷ ಗಮನವಿಲ್ಲದೆ ತನ್ನಷ್ಟಕ್ಕೆ ತಾನು ಸೊಂಪಾಗಿ ಬೆಳೆಯುತ್ತಿದ್ದಳು. ತೋಟದ ಕಳೆಗಳ ಮಧ್ಯದಲ್ಲಿ ಕೆಲವೊಮ್ಮೆ ಕಾಣಿಸದೆ ಇರುವ ಸಂದರ್ಭಗಳೂ ಇತ್ತು. ಹಾಗಾಗಿ ಕೆಲವೊಮ್ಮೆ ಕಳೆ ಸವರುವ ಭರದಲ್ಲಿ ಕತ್ತಿಯ ಆಲಿಂಗನಕ್ಕೆ ಸಿಲುಕಿ ಅಡಿಕೆಯ ಮರದ ಬುಡಕ್ಕೋ ಇಲ್ಲಾ ದನಗಳ ಹೊಟ್ಟೆಗೋ ಸೇರಿ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಳು. ಬಚಾವಾಗಿ ಬದುಕುಳಿದರೆ ಮೈತುಂಬಾ ಹೂವರಳಿಸಿ ಕೊಂಡು ಎಲೆಯೂ ಕಾಣದಂತೆ ಕಾಯಿ ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿದ್ದಳು. ಕಾಯಿ ಪುಟ್ಟದಾದರೂ ಖಾರ ಬಹಳ. ಹಾಗಾಗಿಯೇ ಮಲೆನಾಡಿನ ಕಡೆ ತುಂಬಾ ಚುರುಕಾಗಿರುವವರಿಗೆ ಅಯ್ಯೋ ಅವಳಾ/ನಾ ಜೀರಿಗೆಮೆಣಸ...

ಚಂದ್ರಿ

ನಾನು ಈ ಭೂಮಿಗೆ ಬರುವ ಅವಸರದಲ್ಲಿದ್ದಾಗಲೇ ಕೊಟ್ಟಿಗೆಯಲ್ಲಿದ್ದ ಚಂದ್ರಿಗೂ ಪ್ರಸವ ವೇದನೆ. ಇಬ್ಬರು ತುಂಬು ಗರ್ಭಿಣಿಯರ ಹೊಣೆ ಹೊತ್ತ ಅಜ್ಜಿಗೆ ಯಾರಿಗೆ ಮೊದಲು ಪ್ರಸವವಾಗುತ್ತೋ ಅನ್ನುವುದಕ್ಕಿಂತ ಇಬ್ಬರಿಗೂ ಸಸೂತ್ರವಾಗಿ ಹೆರಿಗೆಯಾಗಲಿ ಅನ್ನೋ ಯೋಚನೆ. ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಿದರೆ ಮನೆಯಲ್ಲಿ ಗಂಡು ಅನ್ನೋ ನಂಬಿಕೆ ಪ್ರಚಲಿತವಿದ್ದ ಕಾಲ. ಹಾಗಾಗಿ ಸಣ್ಣ ಕುತೂಹಲ ಕೂಡ. ಆದರೆ ಅಮ್ಮ ಚಂದ್ರಿ ಇಬ್ಬರೂ ಹೆತ್ತಿದ್ದೂ ಹೆಣ್ಣು. ಹಾಗಾಗಿ ದನಕರುಗಳ ಜೊತೆಗೆ ಬಾಂಧವ್ಯ ಹುಟ್ಟಿದ ಮೇಲೆ ಜೊತೆಯಾಗಿದ್ದಾ, ಹುಟ್ಟುತ್ತಲೇ ಜೊತೆಯಾಗಿದ್ದಾ ಅನ್ನೋದೂ ಇವತ್ತಿಗೂ ಗೊಂದಲವೇ. ಬಾಲ್ಯದ ಆಟ ಶುರುವಾಗಿದ್ದೇ ಅವುಗಳ ಜೊತೆಗೆ. ಅಮ್ಮನ ಜೊತೆ ಜೊತೆಗೆ ಚಂದ್ರಿಯೂ ಹಾಲು ಉಣಿಸಿದ್ದಳು. ಹಾಗಾಗಿ ಬದುಕಿಗೆ ಇಬ್ಬರು ತಾಯಂದಿರು. ಕೇವಲ ಮನುಷ್ಯರಿಗೆ ಮಾತ್ರ ಈ ಪುಣ್ಯವೇನೋ. ನನ್ನೊಂದಿಗೆ ಬೆಳೆದ ಕೆಂಪಿಗೂ ನನಗೂ ಅವಿನಾಭಾವ ಸಂಬಂಧ ಬೆಳೆದಿತ್ತು. ಒಂದರ್ಥದಲ್ಲಿ ಒಂದೇ ತಾಯಿಯ ಹಾಲು ಕುಡಿದು ಬೆಳೆದ ಇಬ್ಬರೂ ಅಕ್ಕ ತಂಗಿಯರೇ. ಬೆಳಗ್ಗಿನ ಅಲಾರಂ ಅವುಗಳ ಅಂಬಾ ಅನ್ನೋ ದನಿಯೇ. ಬೆಳಿಗ್ಗೆ ಎದ್ದು ಹಸುವಿನ ಮುಖ ನೋಡಿದರೆ ಶುಭ ಅನ್ನೋ ನಂಬಿಕೆಯೂ ಇದ್ದಿದ್ದರಿಂದ ಹಾಗೂ ಕೊಟ್ಟಿಗೆ ಮತ್ತು ಬಚ್ಚಲು ಒಟ್ಟಿಗೆ ಇದ್ದಿದ್ದರಿಂದ ಅವುಗಳ ಮುಖ ದರ್ಶನವಿಲ್ಲದೆ ದಿನ ಆರಂಭವಾಗುತ್ತಲೇ ಇರಲಿಲ್ಲ. ನಾವು ಏಳುವ ವೇಳೆಗಾಗಲೇ ಅಜ್ಜಿ ಕೊಟ್ಟಿಗೆಯಲ್ಲಿ ಅವುಗಳಿಗೆ ಕುಡಿಯಲು ಕೊಡುತ್ತಲೋ ಇಲ್...

ಹುಲಿಕಲ್ ಜಾತ್ರೆ

ತೊಂಬತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಅದೂ ವರಾಹಿಯ ಮಡಿಲಿನಲ್ಲಿ ಇದ್ದಂತ ಅಪ್ಪಟ ಹಳ್ಳಿಗಳಿಗೆ ಸಂಭ್ರಮ ಹಬ್ಬವೆಂದರೆ ಅದು ಜಾತ್ರೆ. ಎಲ್ಲರನ್ನೂ ಭೇಟಿಯಾಗುವ, ಸುತ್ತೆಲ್ಲಾ ಹಳ್ಳಿಗಳು ಒಂದು ಕಡೆ ಸೇರುವ, ಈಗಿನ ಮಾತಿನಲ್ಲಿ ಹೇಳುವುದೇ ಆದರೆ ಶಾಪಿಂಗ್ ಮಾಡುವ ತಾಣ. ಹಾಗಾಗಿ ಸಂಪಗೋಡಿನ ಈಚೆ ಬದಿಯ ಹುರಳಿಯಲ್ಲಿ ಜಾತ್ರೆ ನಡೆದರೂ ಅದು ನಡೆದು ಹೋಗುವಷ್ಟು ಹತ್ತಿರ ಹಾಗೂ ಬಸ್ ಇಲ್ಲದ ಕಾರಣ ಹುಲಿಕಲ್ ಜಾತ್ರೆಯೆಂದರೆ ಸ್ವಲ್ಪ ಹೆಚ್ಚೇ ಪ್ರೀತಿ. ಯಡೂರಿನ ತನಕ ನಡೆದು ಅಲ್ಲಿ ಕಾದು ಧೂಳು ಎಬ್ಬಿಸಿಕೊಂಡು ಬರುವ ಕೆಂಪು ಬಣ್ಣದ ಬಸ್ಸು ಹತ್ತಿ ತುಂಬಿರುವ ಜನಜಂಗುಳಿಯಲ್ಲಿ ಜಾಗ ಮಾಡಿ ನಿಂತು ಕೊಂಡರೆ ಯುದ್ಧ ಗೆದ್ದ ಭಾವ. ಕೂರಲು ಸೀಟ್ ಏನಾದರೂ ಅದರಲ್ಲೂ ಕಿಟಕಿಯ ಪಕ್ಕ ಸಿಕ್ಕಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ಅದರಲ್ಲೂ ಗುಂಡಯ್ಯನ ಮಗಳನ್ನು ಅಲ್ಲಿಯ ಅರ್ಚಕರ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟ ಮೇಲಂತೂ ಅದು ಮನೆಯ ಮಗಳ ಮನೆಯ ಜಾತ್ರೆ. ಹೋಗದೆ ಇರುವುದಾದರೂ ಹೇಗೆ? ಇಂಥಾ ಮಾಸದಲ್ಲಿ ಇಂಥಾ ಜಾತ್ರೆ ಅಂತ ದೊಡ್ಡವರಿಗೆ ನೆನಪಿದ್ದರೂ ಇರುತಿದ್ದ ಒಂದೇ ಒಂದು ಕ್ಯಾಲೆಂಡರ್ ನೋಡಿ ಅದ್ರಲ್ಲಿ ಮಾರ್ಕ್ ಮಾಡಿ ದಿನಾಲೂ ಇನ್ನು ಎಷ್ಟು ದಿನ ಎಂದು ಎಣಿಸುವುದೂ ಕೂಡಾ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿ ಹೋಗಿತ್ತು. ನಾಳೆ ಜಾತ್ರೆ ಎಂದರೆ ರಾತ್ರಿಯಿಂದಲೇ ಕಾತರ. ಬೆಳಗಾಗುವುದನ್ನೇ ಕಾಯುವುದರ ಭರದಲ್ಲಿ ನಿದ್ದೆ ಎಂಬುದು ಅದಾಗಲೇ ಜಾತ್ರೆಗೆ ಹೋಗಿರುತಿತ್ತು. ಎಂದೂ ಹತ್ತು ಸ...

ದೇವರಾಯನ ದುರ್ಗ

ಬೆಳಿಗ್ಗೆ ಎದ್ದ ಕೂಡಲೇ ದೇವರಿಗೆ ನಮಸ್ಕಾರ ಮಾಡಿದ್ಯಾ ಅನ್ನೋದರಿಂದಲೇ ಪ್ರಾರಂಭವಾಗುತ್ತಿದ್ದ ದಿನಗಳು ಅವು. ಹೊಮ್ಮುತ್ತಿದ್ದ ಕಾಫಿಯ ಪರಿಮಳ ದೇವರ ಕೋಣೆಯಲ್ಲಿ ಆಸೀನರಾಗಿರುತ್ತಿದ್ದ ಎಲ್ಲರಿಗೂ ಒಂದು ಕಾಟಾಚಾರದ ನಮಸ್ಕಾರ ಮಾಡಿ ಬರುವುದಕ್ಕೆ ಅವಸರಿಸುತ್ತಿತ್ತು. ಮೂರ್ತಿ ಹಲವಾದರೂ ನಮ್ಮ ಪಾಲಿಗೆ ದೇವರೊಬ್ಬನೇ ಅನ್ನೋ ಅದ್ವೈತವನ್ನು ಕಾಫಿ ಕಲಿಸಿತ್ತು. ಸ್ವಲ್ಪ ಬುದ್ಧಿ ಬಂದಿದೆ ಅಂತ ನನಗೆ ನಾನೇ ಘೋಷಿಸಿಕೊಳ್ಳುವ ಸಮಯದಲ್ಲಿ ಮನೆಯ ಹತ್ತಿರದಲ್ಲಿ ಗಣಪತಿ ಬಂದು ದೇವಸ್ಥಾನ ಕಟ್ಟಿಸಿಕೊಂಡು ಕೂತು ಬಿಟ್ಟಿದ್ದ. ಹಾಗಾಗಿ ಹೋಂವರ್ಕ್ ಮಾಡದೆ ಬೆಳಿಗ್ಗೆ ಸ್ಕೂಲ್ ಗೆ ಹೋಗುವ ಸಮಯದಲ್ಲಿ ಇವತ್ತು ಮೇಷ್ಟ್ರಿಗೆ ನೆನಪಾಗದಿರಲಿ ದೇವರೇ ಅನ್ನುವಲ್ಲಿಂದ ಹಿಡಿದು ಎಲ್ಲಾ ಬೇಡಿಕೆಗಳನ್ನೂ ಗಡಿಬಿಡಿಯಲ್ಲಿ ಅವನಿಗೆ ಆಜ್ಞಾಪಿಸಿ ಹೋಗುವ ಅಭ್ಯಾಸವಾಗಿತ್ತು. ಅದ್ವೈತ ಹೀಗೆ ಬಾಲ್ಯದಿಂದಲೇ ಪಾಲಿಸುತ್ತಿದ್ದ ನಮಗೆ ಮನೆದೇವರು, ಇಷ್ಟ ದೇವರು ಅನ್ನೋ ದ್ವೈತದ ಅರಿವೇ ಇರಲಿಲ್ಲ. ಕಾಲ ಕಳೆದಂತೆ ನಮಗೂ ಒಬ್ಬ ಮನೆದೇವರು ಇದ್ದಾನೆ ಅನ್ನೋದು ಗೊತ್ತಾಗಿ ಒಮ್ಮೆ ಹೋಗಿಬರುವ ಅಂತ ಯೋಚಿಸಿ ಅದೂ ಸರ್ಕಾರದ ಬಹುತೇಕ ಯೋಜನೆಗಳಂತೆ ಹಾಗೆಯೇ ಇತ್ತು. ಮೊನ್ನೆ ಬಂದ ಅಣ್ಣ ಈ ಸಲ ಹೊಗಿಬರೋದೆ ಅಂತ ಸುಗ್ರೀವಾಜ್ಞೆ ಹೊರಡಿಸಿದ ಮೇಲೆ ಅಂತೂ ಇಂತೂ ಹೊರಟು ದೇವರಾಯನ ದುರ್ಗ ತಲುಪಿದೆವು. ಮಳೆಗಾಲ ಆರಂಭವಾಗಿದ್ದರಿಂದ ಹಸಿರು ಎಲ್ಲೆಡೆ ಆವರಿಸಿ ನಗುತ್ತಿತ್ತು. ಪ್ರಕೃತಿಯು ಮನಸ್ಸ...