Posts

ಜೀವನವದೊಂದು ಕಲೆ

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥ ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ - ಮಂಕುತಿಮ್ಮ !! ಬದುಕಿನ ಬಗ್ಗೆ ಡಿ.ವಿ.ಜಿ ಯವರು ಬರೆದ ಅಧ್ಭುತ ಸಾಲುಗಳು ಇವು. ಜೀವನ ಒಂದು ಕಲೆ. ಅದನ್ನು  ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ  ಕಲೆಯಾಗಿಸಿ ಕೊಳ್ಳುವುದು ಸಹ ಒಂದು ಕಲೆ. ಕಲೆಯೆಂದರೆ ಕೇವಲ ಲಲಿತಕಲೆಗಳು ಮಾತ್ರವಲ್ಲ, ಬದುಕನ್ನ ಕಲೆಯಾಗಿಸಿಕೊಳ್ಳುವಲ್ಲಿ ಅವುಗಳು ಮೆಟ್ಟಿಲು. ಆದರೆ ಬದುಕೇ ಕಲೆಯಾದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ? ಹಾಗಾದರೆ ಬದುಕನ್ನ ಕಲೆಯಾಗಿಸಿಕೊಳ್ಳುವುದು ಹೇಗೆ? ಅನ್ನುವುದನ್ನೇ ಜೀವನವೊಂದು ಕಲೆ ಎನ್ನುವ ಪುಸ್ತಕ ಹೇಳುತ್ತದೆ. ಕಲೆಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಪುಟ್ಟ ಹಣತೆಯಾಗುತ್ತದೆ. ದಾರಿ ತೋರುವ ಸೊಡರಾಗುತ್ತದೆ. ಕಲೆ ಎಂದರೆ ಸೌಂದರ್ಯ, ಕಲೆ ಎಂದರೆ ಪರಮಾನಂದ,  ಕಲೆ ಎಂದರೆ ಪರಿಪೂರ್ಣತೆ. ಪರಿಪೂರ್ಣತೆ ಸುಲಭಕ್ಕೆ ದಕ್ಕುವುದಿಲ್ಲ. ಹಾಗಾಗಿಯೇ ಯಾವ ನಿಜವಾದ ಕಲಾಸಾಧಕನೂ ತಾನು ಪರಿಪೂರ್ಣ ಎಂದು ಬೀಗುವುದಿಲ್ಲ. ಬದುಕು ಕಲೆ ಎರಡೂ ಸಾಗರದಂತೆ. ಅಗಾಧ. ಹಾಗಾಗಿ ಬಿಂದು ಮಾತ್ರವಾಗಿ ಅದರಲ್ಲಿ ಸೇರಿ ಹೋಗುವುದಷ್ಟೇ ನಮಗುಳಿದದ್ದು. ಹಾಗೆ ಬಿಂದುವಾಗಿ ಸೇರಿಹೊಗುವುದು ಹೇಗೆ, ಸೃಷ್ಟಿಯಲ್ಲಿ ಒಂದಾಗುವುದು ಹೇಗೆ? ಎನ್ನುವುದರತ್ತ ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾ? ಓದಿದ ಮೇಲೆ ಅದು ಅವರವರಿಗೆ ದಕ್ಕುವ ಉತ್ತರ ಹಾಗ...

ಫೇಸ್ಬುಕ್ ಮಾಯಾಜಾಲ

ತಿಂಡಿ ತಿಂದು ಆರಾಮಾಗಿ ಕಾಫಿ ಕುಡಿಯುತ್ತಾ ಕುಳಿತಿರುವಾಗಲೇ  ಫೋನ್ ರಿಂಗಾಯಿತು. ಎತ್ತಿ ಹಲೋ ಅನ್ನುವುದರೊಳಗೆ ಬೇಗ ಬಾ ಮಾತಾಡಬೇಕು ಅನ್ನುವ ಅಪ್ಪಣೆ. ಏನಾಯ್ತೆ ಎನ್ನುವುದರೊಳಗೆ ಫೋನ್ ಮೌನವಾಗಿತ್ತು. ಏನಾಯ್ತೋ ಅನ್ನುವ ಆತಂಕದಲ್ಲಿ ಧಾವಿಸಿದವಳ ಎದುರು ಮೊಬೈಲ್ ಪರದೆ ಹಿಡಿದಳು... ಸಮಯ ಕಳೆಯಲು ಹೊಸತೊಂದು ಮಾರ್ಗ ಸಿಕ್ಕಿತ್ತು. ಮದುವೆಯಾದ ಮೇಲೆ ಅತ್ತೆಯ ಮನೆಗೆ ಅಡಿಯಿಡುವ ನವ ವಧುವಿನಂತೆ ಕೊಂಚ ಆತಂಕ, ಸ್ವಲ್ಪ ಬೆರಗು, ತುಸು ಕುತೂಹಲ, ಅವ್ಯಕ್ತ ಪುಳಕ, ಹೊತ್ತು ಫೇಸ್ಬುಕ್ ಪ್ರವೇಶಿಸಿದ್ದಳು.  ಒಮ್ಮೆ ಆ ಮಾಯಾಜಾಲಕ್ಕೆ ಕಾಲಿಟ್ಟು ಒಳಬಂದ ಮೇಲೆ ಗಡಿಯಾರದ ಮುಳ್ಳುಗಳೂ ಓಡುತ್ತವೇನೋ ಅನ್ನಿಸುವ ಹಾಗೆ ಸಮಯ ಉರುಳಿ ಹೋಗುತಿತ್ತು. ಕೈ ಬೆರಳ ತುದಿಯಲ್ಲಿ ಅಸಂಖ್ಯಾತ ಜನರೂ, ವೈವಿಧ್ಯಮಯ ವಿಷಯಗಳು, ಹೊಸ ಸ್ನೇಹ, ಹೊಸ ಬಂಧ ಹೀಗೆ ಹೊಸತು ಎಲ್ಲೆಲ್ಲೂ ಆವರಿಸಿ ಬದುಕೂ ಹೊಸತೆನಿಸಿತ್ತು. ಹಂಚಿಕೊಳ್ಳಲು ವೇದಿಕೆಯಾಗಿ ಜೊತೆಯಾಗಿತ್ತು. ಕಾಲ ಪರಿವಿಲ್ಲದೆ ಸರಿದು ಹೋಗುತಿತ್ತು. ಅಪರಿಚಿತರಿಬ್ಬರೂ ಫೇಸ್ಬುಕ್ ನಲ್ಲಿ ಪರಿಚಿತರಾಗಲು ಬಹಳ ಸಮಯವೇನೂ ಬೇಕಾಗಿರಲಿಲ್ಲ. ಲೈಕ್ ಕಾಮೆಂಟ್ ಗಳ ಹೊಸ್ತಿಲು ದಾಟಿ  ಮೆಸ್ಸೆಂಜರ್ ಬಾಗಿಲು ತೆರೆದು ಬಂದ  ಸ್ನೇಹ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು. ಮಾತು, ನಗು, ಓಡಾಟ, ಗಾಸಿಪ್ ಎಲ್ಲವೂ ಮಳೆಗಾಲದಲ್ಲಿ  ದಬ ದಬನೆ ಧುಮ್ಮಿಕ್ಕುವ ಜಲಪಾತದಂತಿತ್ತು.  ಸುರಿಯ...

ಮೀ ಟೂ

ದಿನದಿನಕ್ಕೂ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ ಕ್ಷಣ ಕ್ಷಣಕ್ಕೂ ತೆಗೆದುಕೊಳುತ್ತಿರುವ ತಿರುವು ಮಾತ್ರ ಗೊಂದಲ ಹುಟ್ಟಿಸುತ್ತಿದೆ. ಬಳಸಿಕೊಳ್ಳುವಿಕೆ ಇವತ್ತಿಗೆ ಹೊಸದಲ್ಲ. ಘಾತುಕತನ ಅನ್ನೋದು ಅಂದಿನಿಂದಲೂ ಇದೆ. ಮುಂದುವರಿದ, ಅಭಿವ್ಯಕ್ತಿ ಸ್ವಾತಂತ್ರ್ಯ, ನನ್ನ ಬದುಕು ನನ್ನ ಇಚ್ಚೆ ಅನ್ನುವ ಈ ಕಾಲದಲ್ಲೂ ಇದೆ. ಹಾಗೆ ಹೇಳುವುದಾದರೆ ಈಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಇದೆಯಾ? ರಸ್ತೆಯಲ್ಲಿ ಹೋಗುವಾಗ, ಬಸ್ಸಿನಲ್ಲಿ ಕುಳಿತಾಗ, ಫಿಲಂ ಥಿಯೇಟರ್, ಶಾಲಾ ಕಾಲೇಜ್,  ಜನ ಜಂಗುಳಿ ಸೇರುವ ಕಡೆ ಕಾಮುಕರು ಇದ್ದೇ ಇರುತ್ತಾರೆ. ಅವರಿಗೆ ಆ ಕ್ಷಣಕ್ಕೆ ಹೆಣ್ಣು ಅನ್ನುವ ಒಂದು ಜೀವ ಸಾಕು. ಹಸಿದ ಹೆಬ್ಬುಲಿಗಳ ಹಾಗೆ ವರ್ತಿಸುತ್ತಾರೆ. ಕಾಮಾತುರಾಣಂ ನ ಭಯಂ ನ ಲಜ್ಜಾಂ ಅನ್ನೋದು ಅಕ್ಷರಶಃ ಅರಿವಿಗೆ ಬರುತ್ತದೆ. ಆದರೆ ಬಲಿಯಾದವರ ಪರಿಸ್ಥಿತಿ.. ಕೆಲವೊಮ್ಮೆ ಯಾರೂ ಎನ್ನುವುದು ಅರಿವಿಗೆ ಬರದೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಅಲ್ಲಿ ಆಗ ದನಿ ಎತ್ತಲಿಲ್ಲ ಎನ್ನುವುದು ಹಾಸ್ಪಾಸ್ಪದ ಮಾತ್ರವಲ್ಲ ಅಮಾನುವಿಯ ಕೂಡಾ. ಆದರೆ ಉದ್ಯೋಗದ ಸ್ಥಳದಲ್ಲಿ ಇಂಥ ಪರಿಸ್ಥಿತಿ ಎದುರಾದಾಗ ಅಲ್ಲಿ ವ್ಯಕ್ತಿ ಯಾರೆಂದು ಗೊತ್ತಿರುತ್ತದೆ. ಅನಿವಾರ್ಯತೆ ಹಾಗೂ ಅಸಹಾಯಕತೆ ಕೆಲವೊಮ್ಮೆ ಉಸಿರುಬಿಗಿ ಹಿಡಿದು ನೋಡಿಯೂ ನೋಡದಂತೆ ಇರುವ ಹಾಗೆ ಆಗುವ ಆಗುತ್ತದೆ ಎನ್ನುವುದು ಸತ್ಯವಾದರೂ ಉಸಿರು ಎತ್ತಬೇಕು ಎನ್ನುವುದು ಅಷ್ಟೇ ನಿಜ. ಆದರೆ ಅಲ್ಲಿ ಹಾಗೆ ಎತ್ತಿದ ಉಸಿರಿಗೆ...

ಜಸ್ಟ್ ಮಾತ್ ಮಾತಲ್ಲಿ

ಈ ಆಟೋದವರು ಸರಿಯಿಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಇದು ನಿಜವಾ ಎಂದು ಆಲೋಚಿಸಿದರೆ ಈ ಡಾಕ್ಟರ್ ಗಳು, ಇಂಜಿನಿಯರ್ ಗಳು, ಸಿನಿಮಾದವರು, ಕೊನೆಗೆ ಈ ಗಂಡಸರು ಸರಿಯಿಲ್ಲ ಅನ್ನುವ ಜನರಲ್ ಸ್ಟೇಟ್ಮೆಂಟ್ ಗಳು ಸದ್ದು ಮಾಡುತ್ತಲೇ ಇರುತ್ತದೆ. ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಿಗೂ ಅವರವರದೇ ಆದ ದೌರ್ಬಲ್ಯ ಇದ್ದೆ ಇರುವ ಹಾಗೆ ಒಳ್ಳೆಯತನವೂ ಇದ್ದೆ ಇರುತ್ತದೆ. ಯಾರೂ ಸಂಪೂರ್ಣ ಕೆಟ್ಟವರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಂಪೂರ್ಣ ಒಳ್ಳೆಯವರಾಗಿರಲೂ ಸಹ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕತೆಯಿರುತ್ತದೆ. ಅದರಲ್ಲಿ ಅನೂಹ್ಯ ತಿರುವುಗಳು ಇರುತ್ತವೆ. ನೋಡುವ, ಕೇಳಿಸಿಕೊಳ್ಳುವ ತಾಳ್ಮೆ, ಮನಸ್ಸು ನಮಗಿರಬೇಕು. ಅಲ್ಲೊಂದು ವೇವ್ ಲೆಂತ್ ಹೊಂದಿಕೆಯಾಗಬೇಕು. ಹೀಗೆ ಯೋಚಿಸುವಾಗ ಪಕ್ಕನೆ ತಿರುಮಲೇಶ್ ಸರ್ ಅವರ ಕವಿತೆ ನೆನಪಾಗುತ್ತದೆ. ಓದಿರಿ, ಬರೆಯಿರಿ ಚಿತ್ರಿಸಿರಿ ಹಾಡಿರಿ ಮುಟ್ಟಬೇಕು ಜನರನ್ನು ಮುಟ್ಟದಿದ್ದರೆ ನಿಷ್ಪ್ರಯೋಜಕ ಏನು ಮಾಡಿದರೂ... ಇಲ್ಲಿ ಮುಟ್ಟುವುದು ಎಂದರೆ ದೈಹಿಕವಾಗಿ ಮುಟ್ಟುವುದಲ್ಲ, ಅವರ ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ. ಹಾಗೆ ಮುಟ್ಟಿದಾಗ ಮಾತ್ರ ಅವರು ಬಿಚ್ಚಿಕೊಳ್ಳುತ್ತಾರೆ. ಹಾಗೆ ಬಿಚ್ಚಿಕೊಂಡಾಗ ಮಾತ್ರ ಅರ್ಥವಾಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಓದುವಾಗ ಈ ಮುಟ್ಟುವಿಕೆಯು ಅರಿವಿಗೆ ಬರುತ್ತದೆ. ನೋಟದಿಂದ, ಯಾವುದೋ ಒಂದು ವರ್ತನೆಯಿಂದ ಮನುಷ್ಯರನ್ನು ಸುಲಭವಾಗಿ ಅಳೆದು ಬಿಡುತ್...

ಇಪ್ಪತೆಂಟು ಹಣತೆಗಳು.

ದೀಪಾವಳಿ ಬರುತ್ತಿದ್ದಂತೆ ಮನಸ್ಸಿನಲ್ಲಿ ಏನೋ ಪುಳಕ, ಸಂಭ್ರಮ. ಪಟಾಕಿ ಹೊಡೆಯಬಹುದು ಅನ್ನೋದು ಒಂದು ಕಾರಣವಾದರೂ ಅದಕ್ಕಿಂತಲೂ ಹೆಚ್ಚು ಅವ್ಯಕ್ತ ಆನಂದ ಕೊಡುತ್ತಿದ್ದದ್ದು ಬಲಿ ಪಾಡ್ಯಮಿಯಂದು ಗೋಧೂಳಿ ಸಮಯದಲ್ಲಿ ಗೋವಿಗೆ ಆರತಿ ಎತ್ತಿ ಮನೆ ತುಂಬಾ ಹಚ್ಚುತ್ತಿದ್ದ ಹಣತೆಗಳು. ಅವತ್ತು ಮಾತ್ರ ಕಣ್ಣು ಕೋರೈಸುವ ಬೆಳಕು ಇಲ್ಲದೆ ಇಡೀ ಮನೆ ಹಣತೆಯ ಬೆಳಕಲ್ಲಿ ಮಿಂದಿರುತಿತ್ತು. ಅಂಗಳದ ಕತ್ತಲ ಸೆರಗಿನಲ್ಲಿ ನಿಂತು ನೋಡುವಾಗಲಂತೂ ಮಂದ ಬೆಳಕಿನಲ್ಲಿ ಮನೆ ಅಪೂರ್ವವಾಗಿ ಕಾಣಿಸುತ್ತಿತ್ತು. ಮನಸಿಗೆ ಏನೋ ಅವ್ಯಕ್ತ ಆನಂದ. ದಿವ್ಯ ಸಂತೋಷ. ಬೆಳಕು ಅತಿಯಾದರೆ ಕಣ್ಣಿಗೆ ಚುಚ್ಚುತ್ತದೆ. ಬೇಕಾದದ್ದು ಬೇಡವಾದದ್ದು ಎಲ್ಲವೂ ಕಣ್ಣಿಗೆ ರಾಚಿ ಮನಸ್ಸಿನ ಚೀಲ ತುಂಬಿ ಭಾರವಾಗುತ್ತದೆ. ಕಡಿಮೆಯಾದರೆ ಯಾವುದೂ ಕಾಣಿಸುವುದಿಲ್ಲ, ಸ್ಪಷ್ಟವಾಗುವುದಿಲ್ಲ. ಈ ಮಂದ ಬೆಳಕು ಹಾಗಲ್ಲ ಏನು ಬೇಕೋ ಅದನ್ನ ಕಣ್ಣು ರೆಪ್ಪೆ ಹಿಗ್ಗಿಸಿ ಸ್ವಲ್ಪವೂ ಆಯಾಸವಿಲ್ಲದೆ ತುಂಬಿ ಕೊಳ್ಳುವ ಹಾಗೆ ಮಾಡುತ್ತದೆ. ಗರ್ಭಗುಡಿಯಲ್ಲಿ ನಂದಾದೀಪದ ಬೆಳಕಿನಲ್ಲಿ ಶೋಭಿಸುವ ವಿಗ್ರಹ ಮನಸ್ಸಿಗೆ ದಿವ್ಯತೆ ತುಂಬುವುದು, ಶಾಂತತೆ ಆವರಿಸುವುದು ಇದೇ ಕಾರಣಕ್ಕೆನೋ.. ಕೋರೈಸುವ ಬೆಳಕು ಕಣ್ಣು ಚುಚ್ಚಬಹುದೇ ವಿನಃ ಒಳಕ್ಕೆ ಇಳಿಯುವುದಿಲ್ಲ, ಇಳಿಯದೇ ಇದ್ದದ್ದು ಉಳಿಯುವುದಿಲ್ಲ. ತೀರ್ಥರಾಮ ವಳಲಂಬೆಯವರು ಬರೆದ ಇಪ್ಪತ್ತೆಂಟು ಹಣತೆಗಳು ಎಂಬ ಪುಸ್ತಕವೂ ಹೀಗೆ.  ಹಣತೆಯ ಬೆಳಕಿನಂತೆ ಸೌಮ್ಯ, ಶಾಂತವಾದರೂ ಓದ...

ದೀಪಾವಳಿ

ದೀಪಾವಳಿ ಅಂದರೆ ಸಾಲು ಸಾಲು ಹಬ್ಬ. ಯಾವುದೇ ಶುಭಕಾರ್ಯ ನಡೆಯಬೇಕಾದರೆ ಸ್ವಚ್ಛವಾಗಬೇಕು. ಅದು ಅಂತರಿಕ ಹಾಗೂ ಬಾಹ್ಯ ಕರ್ತವ್ಯವಾದರೂ ಈ ಹಬ್ಬ ಮಾತ್ರ ಅದನ್ನೂ ಆಚರಣೆಯಲ್ಲೂ ತೋರಿಸುವ ಹಬ್ಬ. ಹಾಗಾಗಿ ಎಲ್ಲವನ್ನೂ ತೊಳೆಯುವ ಕೆಲಸ ಇದರ ಮೊದಲ ಘಟ್ಟ. ಹಾಗಾಗಿ ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ತುಂಬುವ ಮೊದಲು ಖಾಲಿಯಾಗಬೇಕು. ಖಾಲಿಯಾದ ಮೇಲೆ ತೊಳೆಯಬೇಕು. ತೊಳೆಯುವಿಕೆ ನಡೆಯುವುದೇ ಬಚ್ಚಲಿನಲ್ಲಿ.  ತೊಳೆಯುವ ಶಕ್ತಿ ಇರುವುದು ಗಂಗೆಗೆ. ಅವಳು ಎಲ್ಲವನ್ನೂ ತೊಳೆಯುತ್ತಾನೆ. ಪಾಪವನ್ನೂ.. ಅಂದು ಹಂಡೆಯನ್ನು ತಿಕ್ಕಿ ತೊಳೆಯುವ ಕೆಲಸ. ಬಾಹ್ಯ ಶುದ್ಧಿಗಿಂತಲೂ ಅಂತರಿಕ ಶುದ್ಧಿ ಮುಖ್ಯ ಹೌದಾದರೂ ಮೊದಲು ಸೆಳೆಯುವುದು ಬಾಹ್ಯರೂಪ. ಬಾಹ್ಯ ಆಕರ್ಷಿಸದೆ ಅಂತರ್ಯವನ್ನು ಯಾರೂ ಹಣುಕಿನೋಡುವುದಿಲ್ಲ. ಹಾಗಾಗೀ ಎರಡೂ ಶುದ್ಧವಾಗಬೇಕು. ಹುಣಸೇಹುಳಿಯನ್ನು ಹಾಕಿ ಹಂಡೆಯನ್ನು ತಿಕ್ಕಿ ತೊಳೆದು ಫಳಫಳವಾಗಿಸಿ ತಂಬಿಗೆ,ಉಳಿದ ಸಾಮಗ್ರಿಗಳನ್ನೂ ಹೊಳೆಯುವಂತೆ ತೊಳೆದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಮನುಷ್ಯ ಇವುಗಳನ್ನು ತೊಳೆಯುತ್ತಾನೆ ಆದರೆ ಮನುಷ್ಯನನ್ನು ತೊಳೆಯುವವಳು ಗಂಗೆ. ಅವಳನ್ನು ಕರೆತರಬೇಕು. ಹಾಗಾಗಿ ಬಾವಿಗೆ ಹೋಗಿ ಗಂಗೆಯನ್ನು ಪೂಜಿಸಿ ನೀರು ತಂದು ಹಂಡೆಗೆ ತುಂಬಿಸಬೇಕು. ಆಮೇಲೆ ಅದಕ್ಕೆ ಹಿಂಡಲೇಕಾಯಿಯ ಬಳ್ಳಿಯನ್ನು ಸುತ್ತಿ ಕೆಮ್ಮಣ್ಣು ಬಳಿದರೆ ಹಂಡೆ ನವವಧುವಿನಂತೆ ಕಾಣಿಸುತ್ತಿತ್ತು.  ಅದರ ಮುಂದೆ ಸಗಣಿಯ ಮುದ್ದೆಯನ್ನು ಇಟ್...

ಹಲಸಿನ ಹಣ್ಣು

ಹಲಸಿನ ಹಣ್ಣು ಮುಚ್ಚಿಟ್ರೂ ಊರಿಗೆಲ್ಲಾ ತಿಳಿಯುತ್ತೆ ಅನ್ನೋಳು ಅಜ್ಜಿ ಏನಾದರೂ ಸಂದರ್ಭ ಬಂದಾಗ. ಆ ಸಂದರ್ಭ ಸನ್ನಿವೇಶ ಅರ್ಥವಾಗದ ವಯಸ್ಸು ಅದಾದರೂ ಈ ಹಾಳಾದ್ದು ಹಲಸಿನ ಹಣ್ಣಿನ ವಾಸನೆ ಬಚ್ಚಿಡೋಕೆ ಆಗೋಲ್ಲ ಅನ್ನೋದು ಗೊತ್ತಾಗ್ತಾ ಇದ್ದಿದ್ದು ಕೆಲಸ ಮುಗಿಸಿ ಹೋಗುವವರು ಓ ಹಲಸಿನ ಹಣ್ಣು ಆದ ಹಾಗಿದೆ ಅನ್ನುವಾಗ. ಈ ಹಣ್ಣನ್ನು ಇಷ್ಟಪಡದ ಜನವೇ ವಿರಳ. ಅದರಲ್ಲೂ ಮಲೆನಾಡಿಗರಿಗೆ ಅದು ಬದುಕಿನ ಒಂದು ಅವಿಭಾಜ್ಯ ಅಂಗ. ಈ ಹಲಸು ಒಂಥರಾ ಕಾಡು ನಾಡು ಅನ್ನೋ ಭೇಧವಿಲ್ಲದೆ ಎಲ್ಲಾ ಕಡೆಯಲ್ಲೂ ಹೊಂದಿಕೊಂಡು ಹೋಗುತ್ತದೆ. ದೊಡ್ಡ ಮರ ಅಗಲವಾಗಿ ಹರಡಿಕೊಂಡು ಒಳ್ಳೇ ನೆರಳು ಕೊಡುತ್ತದೆ. ಬೇಸಿಗೆಯಲ್ಲಿ ಅದರಡಿಯ ಕಲ್ಲಿನ ಮೇಲೆ ಕುಳಿತರೆ ಆ ತಂಪಿಗೆ ಅಲ್ಲೇ ನಿದ್ರೆ ಹೋಗುವ ಹಾಗಾಗುತ್ತದೆ. ಹಬ್ಬಕ್ಕೋ ಹರಿದಿನಕ್ಕೋ ಮಾವಿನ ಎಲೆಯಜೊತೆ ಇದರ ಎಲೆಯೂ ಬೇಕಾಗಿದ್ದರಿಂದ ಜನಗಳಿಗೂ ಅದು ಹತ್ತಿರವಿದ್ದಷ್ಟೂ ಅಪ್ಯಾಯಮಾನ.  ಉಪಕಾರವಿದ್ದರೆ ಮಾತ್ರ ಹತ್ತಿರಕ್ಕೆ ಬಿಟ್ಟು ಕೊಳ್ಳುವ ಮನುಷ್ಯ ಸ್ವಭಾವ ಹೊಸದೇನಲ್ಲ ಬಿಡಿ ಆದರೂ ಈ ಹಲಸು ಒಂಥರಾ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವಾಗಿದ್ದಂತೂ ಹೌದು. ಹಲಸು ಮಾವು ಎರಡೂ ಶುಭಕಾರ್ಯಗಳಿಗೆ ಪ್ರಮುಖವಾಗಿದ್ದರಿಂದಲೋ ಏನೋ ಅವೆರೆಡು ಒಟ್ಟಿಗೆ ಇದ್ದರೆ ಒಳ್ಳೆಯದು ಅನ್ನೋ ನಂಬಿಕೆಯೂ ಇದೆ. ಆದರೆ ಹಾಗಿರೋದೂ ಕೂಡಾ ಅಪರೂಪವೆ. ಹಲಸು ಬಡವರ ಪಾಲಿನ ವರ ಅನ್ನೋದು ಹಿಂದಿನಿದಲೂ ಬಂದ ನಂಬಿಕೆ. ವಿಟಮಿನ್, ಹಾಗೂ ಖನಿಜಾಂಶಗಳ...