Posts

ಶ್ರಾವಣ (Vijayakarnataka 29.07.19)

ಇನ್ನೇನು ಶ್ರಾವಣ ಬಂತು ಎಂದು ಅಜ್ಜಿ ಹೇಳುವ ಹೊತ್ತಿಗೆ ಚಿಕ್ಕಿಯ ಮುಖ ಕೊಂಚ ಕೆಂಪಾಗಿದ್ದು ಯಾಕೆ ಎಂದು ಯೋಚಿಸುವ ಹೊತ್ತಿಗೆ ರೇಡಿಯೋದಲ್ಲಿ ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ ಎನ್ನುವ ಹಾಡು ಶುರುವಾಗಿತ್ತು. ಶ್ರಾವಣ ಎಂದರೆ ಸಂತಸ ಅಡಿಯಿಡುವ ಹೊತ್ತು. ಅವಳಿಗೋ ಮರಳುವ ತವಕ, ನಮಗೋ ಹಬ್ಬಗಳ ಸಾಲು ಸಾಲು ಹೊತ್ತು ತರುವ ಸಿಹಿಯ ಕನಸು, ಹೆಂಗಸರಿಗೆ ವ್ರತ, ಪೂಜೆ ನೇಮಗಳಿಗೆ ಸಿದ್ಗಧರಾಗುವ ಗಡಿಬಿಡಿ. ಗಂಡಸರಿಗೆ ವ್ಯವಸಾಯ ಕೆಲಸಗಳು ಮುಗಿದ ನಿರಾಳ ಭಾವ. ಒಟ್ಟಿನಲ್ಲಿ ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಭಕ್ತಿ, ಶ್ರಾವಣ ಎಂದರೆ ಸಿಹಿಯೂಟ. ಶ್ರಾವಣ ಎಂದರೆ ಸಮಾಧಾನ,  ಶ್ರಾವಣ ಎಂದರೆ ಧಾರ್ಮಿಕ ಆಚರಣೆಗಳ ಶುರುವಾತು. ಬಾಲ್ಯ ಕಳೆದು, ಹರೆಯದ ಹುಮ್ಮಸ್ಸು ದಾಟಿ ಬಂದು ಈಗ ದಿಟ್ಟಿಸಿದರೆ ಶ್ರಾವಣ ಎಂದರೆ ನವವಧುವಿನಂತೆ ಕಾಣಿಸುತ್ತದೆ. ಮೈ ಮನಗಳಲ್ಲಿ ಪುಳಕ ಹುಟ್ಟಿಸುತ್ತದೆ. ಮಳೆಯನಾಡು ತೊಯ್ಯುತಿರೆ, ಮಂಜಿಗಿರುಳು ಬೆದರುತಿರೆ ಸೋನೆ ತಿರೆಯು ತೊಯ್ಯುತಿರೆ ಮಿಂಚೆ ತಿಮಿರ ನಡುಗುತಿರೆ ಮುದವು ಮೊಳೆದು ನಮೆವುದು .... ಎಂಬ ಪುತಿನ ಸಾಲುಗಳಂತೆ ಮಲೆನಾಡಿನ ಮಳೆಯೇ ಹಾಗೆ, ಸುರಿದರೆ ಸುರಿಯುತ್ತಲೇ ಇರುತ್ತದೆ. ರಚ್ಚೆ ಹಿಡಿದ ಮಗುವಿನಂತೆ, ಮುನಿಸಿಕೊಂಡ ಮುಗುದೆಯಂತೆ. ಅದರಲ್ಲೂ  ಆಷಾಢದ ಭೋರುಗಾಳಿ, ಅಬ್ಬರದ ಮಳೆ ಹುಚ್ಚು ಹಿಡಿಸಿಬಿಡುತ್ತದೆ. ಶ್ರಾವಣ ಬರುವ ಹೊತ್ತಿಗೆ  ಫಾರ್ಮ್ ಕಂಡುಕ...

ತುಷಾರ ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರವಲ್ಲ

ಒಂದು ತಿಂಗಳು ಆಯ್ತು ಮಾತಾಡದೇ ಈಗ ಮಾತಾಡ್ತೀನಿ ಅಂದ್ರೂ ಅವರೇ ಇಲ್ಲ ಏನ್ಮಾಡೋದು ಅಕ್ಕ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದವನ ನೋಡುತ್ತಿದ್ದವಳ ಕಣ್ಣಲ್ಲೂ ಮಳೆ ಹನಿಯುತ್ತಿತ್ತು. ಬೆಳಿಗ್ಗೆ ಸೂರ್ಯನೂ ಏಳುವ ಮೊದಲೇ ಮೊಬೈಲ್ ಸದ್ದು ಮಾಡಿ ಸದ್ದಿಲ್ಲದೇ ಎದ್ದು ಹೊರಟ ಅಪ್ಪನ ಸುದ್ದಿ ಬಿತ್ತರಿಸಿತ್ತು. ಇಲ್ಲಿ ಕುಳಿತವನ ಕಣ್ಣಲ್ಲಿ ಒಂದೇ ಸಮನೆ ನೀರು ಹರಿಯುತಿತ್ತು. ಮಾತು ತಡವರಿಸಿ ತಡವರಿಸಿ ಬರುತಿತ್ತು. ನಿಲ್ಲದ ಕುಡಿತಕ್ಕೆ, ಯಾವುದೋ ಮಾತಿಗೆ ಮಾತು ಬೆಳೆದು ಕೋಪಗೊಂಡು ಹೊರಟಿದ್ದ ಮಗ ಮಾತಾಡದೆ ಉಳಿದಿದ್ದ. ಅಪ್ಪನ ಮೇಲೆ ಮುನಿಸಿಕೊಂಡಿದ್ದ. ಅಪ್ಪ ಬದಲಾಗಬಹುದು, ಮುಂದೊಂದು ದಿನ ಕೋಪ ಇಳಿಯಬಹುದು ಅಂದುಕೊಂಡು ಬಂದರೆ ಬರಲಾರದ ದೂರಕ್ಕೆ ಅಪ್ಪ ಹೊರಟುಹೋಗಿದ್ದ. ಆಡಬಹುದಾದ ಮಾತು ಉಳಿಸಿಕೊಂಡು ಕಾದು ಕುಳಿತಿದ್ದ. ಹೀಗೆ ಸಣ್ಣಗೆ ಹನಿಯುತ್ತಿದ್ದ, ಮಬ್ಬು ಬೆಳಕು ಹರಡಿದ್ದ, ಆಲಸ್ಯದ  ದಿನವೊಂದರಲ್ಲಿ ತುಂಬಿಕೊಳ್ಳುವ ಖಾಲಿತನ ಓಡಿಸಲು ಅಶ್ವತ್ಥರ ಹಾಡು ಕೇಳುತ್ತಾ ಸುಮ್ಮನೆ ಕುಳಿತಿದ್ದೆ. ಅವರ ದನಿಯೆಂದರೆ ಹಾಗೆ ಹೇಳಲಾಗದ ಸೆಳೆತ. ಅದರಲ್ಲೂ ಇಂಥ ವಾತವರಣದಲ್ಲಿ ಅದು ದಿವ್ಯೌಷಧ ಇದ್ದ ಹಾಗೆ. ಬೇಸರಕ್ಕೆ ಕಿವಿಯಾಗಿ, ಮಾತಿಗೆ ಜೊತೆಯಾಗಿ, ಒಂಟಿತನಕ್ಕೆ ಹೆಗಲಾಗಿ, ಮೌನಕ್ಕೆ ಶೃತಿಯಾಗಿ,ಉಸಿರಿನೊಂದಿಗೆ ಮಿಳಿತವಾಗಿ ಜೊತೆಜೊತೆಗೆ ಕೈ ಹಿಡಿದು ಸಾಗುತ್ತದೆ. ಮೋಡಕವಿದಿರುವಾಗ, ಮಳೆ ಹನಿಯುವಾಗ, ಬಿರುಬಿಸಿಲು ಕಾಯುವಾಗ, ಚಳಿ ಮರಗಟ್ಟಿಸುವಾಗ, ನೀ...

hosadiganta.. 21.07.19

ಆಷಾಢ ಅಂದರೆ ಭೋರುಮಳೆ, ಭಾರಿ ಗಾಳಿ, ಸಣ್ಣ ಚಳಿ. ಮುನಿಸಿಕೊಂಡ ಮಗುವಿನಂತೆ ರಚ್ಚೆ ಹಿಡಿಯುವ ಮಳೆ, ಕೆಲವೊಮ್ಮೆ ಸಮಾಧಾನಗೊಂಡ ಮಡದಿಯ ಹಾಗೆ ಹಳುವಾದರೂ ಬಿಸಿಲು ನಸು ನಕ್ಕರೂ ನಂಬುವ ಹಾಗಿಲ್ಲ. ಅದರದ್ದು ಅಲ್ಪಾಯುಷ್ಯ. ಹಾಗಾಗಿ ಆಷಾಢವೆಂದರೆ ಚಂಚಲ, ಅನ್ನುವ ಆಲೋಚನೆ ಮೂಡುವ ಹೊತ್ತಿಗೆ ನಮ್ಮ ರಾಜಕಾರಣಿಗಳಷ್ಟ ಅನ್ನುವ ಪ್ರಶ್ನೆಯೊಂದು ಮೂಡಿ ಬಿಸಿಲುಕೋಲಿನಂತೆ ಕಂಡು ಮಾಯವಾಗುವಾಗಲೇ ಮನಸ್ಸು ಮತ್ತದೇ ಕಾರ್ಮೋಡ ಕವಿದ ಆಷಾಢದ ಆಕಾಶ. ಪ್ರಸ್ತುತ ಕರ್ನಾಟಕದ ರಾಜಕೀಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಇಲ್ಲೂ ಅದೇ ಕಣ್ಣುಮುಚ್ಚಾಲೆ, ಎರಡೂ ಪಕ್ಷಗಳನ್ನು ಕವಿದ ಕಾರ್ಮೋಡ, ಬಿರುಮಳೆ ಸುರಿಯಬಹುದಾ ಅನ್ನುವ ಆತಂಕ, ಕವಿದ ಮೋಡ ಕರಗಬಹುದಾ ಅನ್ನುವ ನಿರೀಕ್ಷೆಯಲ್ಲಿ ಅಧ್ಯಕ್ಷ ಪೀಠದತ್ತ ದೃಷ್ಟಿ ನೆಟ್ಟವರು, ಚರ್ಚೆ, ವಾದ, ವಿವಾದದ ಗಾಳಿಗೆ ಒಮ್ಮೆ ಅತ್ತ ಒಮ್ಮೆ ಇತ್ತ ಸುಳಿದಾಡುವ ಗೆಲುವಿನ ನಗು, ನಿಟ್ಟುಸಿರು ಬಿಡುವ ವೇಳೆಗೆ ಮತ್ತದೇ ಆತಂಕ ಏನಾಗಬಹುದು ಅನ್ನುವ ಗೊಂದಲ. ಒಟ್ಟಿನಲ್ಲಿ ಸದನದ ಒಳಗೂ ಹೊರಗೂ ಆಷಾಢ ಆವರಿಸಿಕೊಂಡಿದೆ. ಪ್ರತಿಯೊಂದಕ್ಕೂ ಕಾರಣಗಳು ಇರುವ ಹಾಗೆ ಸಮರ್ಥನೆಗಳೂ ಇರುತ್ತವೆ. ಆ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಸಮಜಾಯಿಸಿ ಕೊಡುವ ಆತುರದಲ್ಲಿ ಜ್ಞಾನ, ಬುದ್ಧಿವಂತಿಕೆ, ಭಾಷೆಯ ಜೊತೆ ಜೊತೆಗೆ ವ್ಯಕ್ತಿಯ ವ್ಯಕ್ತಿತ್ವದ ಅನಾವರಣವೂ ಆಗುತ್ತಿರುತ್ತದೆ. ಆಡುವ ಮಾತು ನಮ್ಮದಾ, ಅದು ಅನುಭವಕ್ಕೆ ದಕ್ಕಿದ್ದಾ, ಪ್ರಾಮಾಣಿಕವಾಗಿದ್...

ಆಷಾಢ

ಆರ್ಭಟಿಸುತ್ತಾ ಗುಡುಗುತ್ತಾ, ಸಿಡಿ ಸಿಡಿ ಅನ್ನುತ್ತಲೇ ಅಡಿಯಿಡುವ ಮಳೆರಾಯ ನೆನೆಸುತ್ತಾ ಮತ್ತೆ ಮಾಯವಾಗುತ್ತಾ, ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾಗುತ್ತಾ ಬರುವಾಗ ಆರಂಭಿಕ ಪ್ರಾಯೋಗಿಕ ಪಂದ್ಯಗಳ ಆಟಗಾರನ ಹಾಗೆ ಅನ್ನಿಸಿದರೂ ತನ್ನ ಲಯ ಕಂಡುಕೊಂಡು ಸಂಪೂರ್ಣ ಸಾಮರ್ಥ್ಯ ಪ್ರಯೋಗಿಸುವಾಗ ಆಷಾಢ ಹೆಜ್ಜೆಯಿಟ್ಟು ಬಂದಿರುತ್ತದೆ. ಅಲ್ಲಿಗೆ ಮಳೆಗಾಲ ಸ್ಥಿರವಾಗಿ ನಿಂತಂತೆ. ಮುಂದಿನ ಬೇಸಾಯದ ಕಾರ್ಯಗಳಿಗೆ ನಾಂದಿ ಹಾಡಿದಂತೆ. ಹಾಗಾದರೆ ಆಷಾಢ ಹೇಗಿರುತ್ತೆ? ಭೋರೆಂದು ಬೀಸುವ ಗಾಳಿ, ಕಪ್ಪು ಟಾರ್ಪಾಲ್ ಹಾಸಿದಂತೆ ಮಲಗಿರುವ ತುಂಬು ಬಸುರಿ ಕಪ್ಪು ಮೋಡಗಳು, ಮಬ್ಬು ಬೆಳಕು, ಹೊಯ್ಯುವ ಮಳೆ, ಕಿಬ್ಬೊಟ್ಟೆಯಾಳದಲ್ಲಿ ಹುಟ್ಟಿ ಸುಳಿ ಸುತ್ತುವ ಸಣ್ಣ ಚಳಿ, ಹರಿಯುವ ಕೆಂಪು ನೀರು, ತುಂಬಿಕೊಳ್ಳಲು ಆರಂಭಿಸಿದ ಹಸಿರು, ನೆಮ್ಮದಿಯ ಉಸಿರು. ಕಾದು ಕಾದು ನೆನೆದು ಒದ್ದೆಯಾದ ನೆಲ ಹದವಾಗಿ ಬಿತ್ತನೆಗೆ ತಯಾರಾಗಿರುವ ಈ ಸಮಯದಲ್ಲಿ ಬೆಟ್ಟದಷ್ಟು ಕೆಲಸ. ಮುಂದಿನ ಒಂದು ವರ್ಷದ ಹೊಟ್ಟೆಯ ಚೀಲ ತುಂಬಿಕೊಳ್ಳುವ ಕಾರ್ಯ ಶುರುವಾಗುವುದೇ ಇಲ್ಲಿಂದ. ಕೆಲಸಕ್ಕೆ ಹೋಗಲು ವಾತಾವರಣ ಪೂರಕವೇ ಎಂದರೆ ಖಂಡಿತ ಅಲ್ಲ. ರಚ್ಚೆ ಹಿಡಿದ ಮಗುವಿನಂತೆ ಒಂದೇ ಸಮನೆ ಸುರಿಯುವ ಮಳೆ, ಗಾಳಿಯ ರಭಸಕ್ಕೆ ತೆಕ್ಕೆಗೆ ಸಿಗದೇ ತಪ್ಪಿಸಿಕೊಂಡು ಓಲಾಡುವ ಕೆಲವೊಮ್ಮೆ ಬಾಗಿ ನೆಲ ಚುಂಬಿಸುವ  ಗಿಡ, ಮರಗಳು, ಕಿಟಕಿ ಬಾಗಿಲು ಮುಚ್ಚಿದರೂ ಕಳ್ಳನಂತೆ ಒಳಗೆ ನುಸುಳಿ ಅಪ್ಪುವ ಚಳಿ, ಅದರಿಂದ ಪಾರಾಗಲು ಮು...

ನದಿ ಉಳಿಸಿ (ಹೊಸದಿಗಂತ) 26.06.19

ಮೊನ್ನೆ ಮದುವೆಗೆ ಬಂದಿದ್ದ ಶೇ 80 ಪ್ರತಿಶತ ಜನರ ಮಾತು ಶುರುವಾಗುತ್ತಿದ್ದದ್ದೆ ಹೆಂಗೆ ನಿಮ್ಮ ಬಾವಿಲಿ ನೀರು ಉಂಟಾ ಸಾಕಾಗುತ್ತಾ ಅಂತಲೇ. ಮದುವೆಗೆ ಹೊರಡುವ ಮುನ್ನ ಇದೇ ಪ್ರಶ್ನೆಯನ್ನು ನಾನೂ ಕೇಳಿಯೇ ಹೊರಟಿದ್ದೆ. ಕೇಳಿದ ಮೇಲೆ ಅಲ್ಲಿಂದ ಪರವಾಗಿಲ್ಲ ಒಂದು ರಿಂಗ್ ನೀರು ಇದೆ ಸಾಕಾಗುತ್ತೆ ಅನ್ನುವ ಉತ್ತರ ಬಂದ ಮೇಲೆ ಫೋನ್ ಕೆಳಗಿಟ್ಟಮೇಲೆ ಫೋನ್ ನಂತೆ ಮನಸ್ಸೂ ಸ್ತಬ್ಧವಾಗಿತ್ತು. ಮಳೆಗೆ, ನೀರಿಗೆ ಹೆಸರುವಾಸಿಯಾಗಿದ್ದ, ನೀರಿನ ಬರ ಅಂದರೇನು ಅಂತಲೂ ಗೊತ್ತಿಲ್ಲದ ಮಲೆನಾಡೆ೦ಬ ಮಲೆನಾಡು ಈಗ ಅಕ್ಷರಶಃ ಬರನಾಡಾಗುವತ್ತ ಸಾಗಿದೆ. ಪ್ರತಿ ಬೇಸಿಗೆಯಲ್ಲೂ ಇದು ಹೆಚ್ಚುತ್ತಾ ಕುಡಿಯೋಕೆ ನೀರು ಸಿಕ್ಕರೆ ಸಾಕು ಅನ್ನುವ ಹಾಗಾಗಿದೆ. ಕೇವಲ ಪತ್ರಿಕೆಗಳಲ್ಲಿ, ಟಿ.ವಿ ಯಲ್ಲಿ ಬಯಲುಸೀಮೆಯ ಜನರ ಪರದಾಟ ನೋಡಿದ್ದ ಮಲೆನಾಡಿಗರು ಈಗ ಸ್ವತಃ ತಾವೇ ಅನುಭವಿಸುತ್ತಿದ್ದಾರೆ. ಹಾಗೇಕಾಯ್ತು ಅನ್ನೋದಕ್ಕೆ ಸಾವಿರ ಕಾರಣಗಳು ಕಣ್ಣೆದೆರು ಇದ್ದರೂ ಎಚ್ಚೆತ್ತುಕೊಳ್ಳದ ಬುದ್ಧಿವಂತರು ನಾವು ಅದಕ್ಕೆ ಸರಿಯಾಗಿ ನಮ್ಮನ್ನು ಆಳುವವರು. ಬಾವಿ ತೆಗೆದರೆ 30 ರಿಂದ 50 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು ಈಗ ಬೋರ್ ನ ಕೊಳವೆಗೆ 350 ರಿಂದ ಮುಂದಕ್ಕೆ ಎಷ್ಟು ಬೇಕಾದರೂ ಹೋಗಬಹುದಾದ ಸಾಧ್ಯತೆ ಇದೆ. ಹತ್ತು ಕಿ.ಮಿ ಸುತ್ತಳತೆಯಲ್ಲಿ ಇಂದು 400 ರಿಂದ 500 ಕ್ಕೂ ಹೆಚ್ಚು ಬೋರ್ವೆಲ್ ಗಳು ಆಗಿವೆ. ನಿಮ್ಮತ್ರ ಮೊಬೈಲ್ ಇದ್ಯಾ ಎಂದು ಕೇಳುವಷ್ಟೇ ಸಹಜವಾಗಿ ಬೋರ್ವೆಲ್ ತೆಗೆಸಿದ್ರಾ ಎಂದು ಕ...

ರಂಗಣ್ಣನ ಕನಸಿನ ದಿನಗಳು

ಇನ್ಸ್ಪೆಕ್ಟೆರ್ ಬಂದಿದ್ದಾರೆ ಅನ್ನುವ ಸುದ್ಧಿ ಕೇಳಿದ ಕೂಡಲೇ ಇಡೀ ಶಾಲೆಗೇ ಶಾಲೆಯೇ ಶಿಸ್ತುಬದ್ಧ ಸಿಪಾಯಿಯ ಹಾಗಾಗುತಿತ್ತು. ಸದ್ದೆಲ್ಲ ಅಡಗಿ ಮೌನ ರಾಜ್ಯವಾಳುತಿತ್ತು. ಬೇರೆಯ ದಿನಗಳಲ್ಲಿ ಆರಾಮಾಗಿ ಇರುತ್ತಿದ್ದ ಟೀಚರ್ ಗಳು ಅವತ್ತು ಅದೇನೋ ವಿಚಿತ್ರ ಗಂಭೀರತೆಯನ್ನು ಆವಾಹಿಸಿಕೊಂಡಿರುತ್ತಿದ್ದರಿಂದ ಇಡೀ ವಾತಾವರಣವೇ ವಿಭಿನ್ನ ಅನ್ನಿಸುವುದರ ಜೊತೆಗೆ ಒಂದು ರೀತಿಯ ಅಸಹನೀಯ ಅನ್ನಿಸುತ್ತಿತ್ತು ಕೂಡಾ. ಎಲ್ಲೋ ಅಪರೂಪಕ್ಕೆ ಬಂದ್ದಿದ್ದ ಇನ್ಸ್ಪೆಕ್ಟೆರ್ ತಮಾಷೆಯ ಸ್ವಭಾವದವರಾದರೆ ಸ್ವಲ್ಪ ನಗು ಹುಟ್ಟುತ್ತಿತ್ತಾದರೂ ಮೇಷ್ಟ್ರರ ನೋಟಕ್ಕೆ ಅದರ ಆಯಸ್ಸು ಅಲ್ಪವೇ ಆಗಿ ಮತ್ತೆ ಬಲವಂತದ  ಮೌನವೇ ತಾಂಡವವಾಡುತಿತ್ತು. ಮತ್ತೆ ಇದು ನೆನಪಾಗಿ ಮುಖದಲ್ಲಿ ನಗು ಮೂಡಿದ್ದು ಎಂ ಆರ್ ಶ್ರೀನಿವಾಸ ಮೂರ್ತಿ ಅವರ "ರಂಗಣ್ಣನ ಕನಸಿನ ದಿನಗಳು" ಓದುವಾಗಲೇ. ಸ್ವಾತಂತ್ರ್ಯ ಕಾಲದ ದಿನಗಳ ಶಾಲೆಯ ರೀತಿ ನೀತಿ, ಆಗಿನ ಮೇಷ್ಟ್ರರ ಕಷ್ಟಗಳು, ಅವರ ಪುಟ್ಟ ಸಂಬಳ, ಹಳ್ಳಿಯ ಪರಿಸ್ಥಿತಿ ಆಗತಾನೆ ರಾಜಕೀಯ ಗರಿಗೆದರುವ ಹೊತ್ತಿನ ಮುಖಂಡರ ಪ್ರಭಾವ, ಬಡತನ, ಶಾಲೆಗೇ ಮಕ್ಕಳನ್ನು ಸೇರಿಸುವಲ್ಲಿಯ ಕಷ್ಟ, ಅವರಿಗೆ ಕಲಿಸುವಾಗಿನ ಪಡಿಪಾಟಲು, ಕಷ್ಟ ಕಾರ್ಪಣ್ಯ, ಮುಗ್ಧತೆ, ಕುಟಿಲತೆ, ಜಾತಿಯ ಪ್ರಭಾವ, ಹಳ್ಳಿಗರ ಸಂಪ್ರದಾಯ ಇವೆಲ್ಲಗಳನ್ನು ತೂಗಿಸಿಕೊಂಡು, ಹೊಂದಿಕೊಂಡು, ಇದ್ದ ಅವ್ಯವಸ್ಥೆಗಳ ನಡುವೆ ಶಾಲೆಗಳು ನಡೆಯುತ್ತಿದ ರೀತಿ ಹೀಗೂ ಇತ್ತಾ ಅನ್ನಿಸುವುದರ ಜೊತೆ ಜೊತೆಗೆ ...

ಹಿಂದಿ ಹೇರಿಕೆ (ಹೊಸದಿಗಂತ)

ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅನ್ನೋದನ್ನ ಹೇಳಲು, ಕನ್ನಡ ಉಳಿಸಿ ಎಂದು ವಿನಂತಿ ಮಾಡಿಕೊಳ್ಳಲು ಕಂಕಣ ಎನ್ನುವ ಗುಂಪು ಶುರುವಾಗಿತ್ತು. ಅದು ಮಲೆನಾಡಿನ ಜನರೇ ಹೆಚ್ಚಿದ್ದ, ಮಲೆನಾಡಿನ ಕವಿರಾಜ್ ಶುರು ಮಾಡಿದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೆ. ಅದರ ಮೊದಲ ಅಭಿಯಾನದಲ್ಲಿ ಪಾಲ್ಗೊಳ್ಳಲು ಜಯನಗರಕ್ಕೆ ಹೋಗಿದ್ದೆ. ಕಂಕಣದ ಅಭಿಯಾನವೆಂದರೆ ಅಲ್ಲಿ ಭಾಷಣವಿಲ್ಲ, ಅನಗತ್ಯ ಮಾತಿಲ್ಲ. ಕನ್ನಡದ ಹಿರಿಮೆಯ ಬಗ್ಗೆ, ಅದನ್ನು ಮಾತಾಡುವ ಬಗ್ಗೆ ಬರೆದ ಫಲಕವನ್ನು ಹಿಡಿದುಕೊಂಡು ಜನನಿಬಿಡ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ನಿಲ್ಲುವುದು ಹಾಗೂ ಅದರ ಬಗ್ಗೆ ಕುತೂಹಲ ಇದ್ದವರಿಗೆ ಮಾಹಿತಿ ಬೇಕಾದವರಿಗೆ ಅದನ್ನು ಕೇಳಿದಾಗ ಹೇಳುವುದು ಅಷ್ಟೇ. ಯಾವ ಬಲವಂತವಾಗಲಿ, ಹೇರಿಕೆಯಾಗಲಿ ಇಲ್ಲದೆ ಕೇವಲ ನಮ್ಮ ಭಾಷೆಯ ಬಗ್ಗೆ ಮೌನವಾಗಿಯೇ ಅಭಿಮಾನ ಮೂಡಿಸುವ, ಅದನ್ನು ಉಳಿಸುವ ಅನಿವಾರ್ಯತೆ ಅರ್ಥವಾಗಲಿ ಅನ್ನೋ ಉದ್ದೇಶ ಅಷ್ಟೇ.. ಹೀಗೆ ಅಭಿಯಾನದಲ್ಲಿ ಪಾಲ್ಗೊಂಡಾಗ ಜನ ಸುಮ್ಮನೆ ನೋಡಿ ಹೋಗುವುದಿಲ್ಲ. ನಾನಾತರಹದ ಜನರಿದ್ದ ಹಾಗೆ ನಾನಾ ತರಹದ ಮಾತುಗಳೂ ಕೇಳಿ ಬರುತ್ತವೆ. ಕುಹಕದ ನಗೆ ನಕ್ಕು ಸಾಗುವವರು, ಬಸ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳಿ ಅಂತ ಕೇಳಿ ನಿಮಗೆ ಕನ್ನಡ ಬರೋಲ್ಲ ಇನ್ನು ಕನ್ನಡ ಮಾತಾಡಬೇಕಂತೆ ಎಂದು ವ್ಯಂಗ್ಯವಾಡುವವರು, ಮಾಡೋಕೆ ಕೆಲಸ ಇಲ್ಲ ಅದಕ್ಕೆ ಇಲ್ಲಿ ಬಂದು ಹೀಗೆ ನಿಲ್ತಾರೆ ಎಂದು ಕುಹಕ ಮಾಡುವವರು, ಯಾರೋ ...